ಸೇಲಂ, ತಮಿಳುನಾಡು
ಸೇಲಂ, ತಮಿಳುನಾಡು
Salem(சேலம்) | |
---|---|
city | |
Government | |
• Mayor | J. Rekha Priyadharshini |
Population (2008) | |
• Total | ೧೫,೫೧,೪೩೮ |
Website | www.salemcorporation.gov.in |
ಸೇಲಂ ತಮಿಳು:சேலம்) ಒಂದು ನಗರ ಮತ್ತು ನಗರಸಭೆ ಇದು ಭಾರತದ ತಮಿಳುನಾಡು ರಾಜ್ಯದಲ್ಲಿನ ಸೇಲಂ ಜಿಲ್ಲೆಯಲ್ಲಿದೆ , ಭಾರತದ ದಕ್ಷಿಣಭಾಗದ ಕೊನೆಯಲ್ಲಿರುವ ರಾಜ್ಯದ ಉತ್ತರ ಮಧ್ಯಭಾಗದಲ್ಲಿ ಸ್ಥಿತವಾಗಿದೆ.ಸೇಲಂ ಕೊಂಗು ರಾಜ್ಯ ದ ಒಂದು ಭಾಗವಾಗಿದೆ, ಇದು ಪಶ್ಚಿಮತಮಿಳುನಾಡು ಒಳಗೊಂಡ ತಮಿಳಕಮ್‌ನ ಒಂದು ಪ್ರಾಚೀನ ವಿಭಾಗವಾಗಿದೆ. ಎಲ್ಲಾ ಕಡೆಯೂ ಸಂಪೂರ್ಣ ಬೆಟ್ಟಗಳಿಂದ ಆವರಿಸಲ್ಪಟ್ಟ ಸೇಲಂ ಯೆರ್ಕಾಡ್ ಗಿರಿಗಳ ಹೆಸರಾಂತ ಪ್ರವಾಸಿ ಗಮ್ಯಸ್ಥಾನದ ತಳಭಾಗದಲ್ಲಿದ್ದು, ಇದು ಉಸಿರು ಬಿಗಿ ಹಿಡಿಯುವಂಥ ಸಂತೋಷದ ದೃಶ್ಯಗಳನ್ನು ತುತ್ತತುದಿಯಿಂದಲೂ ಮತ್ತು ಬೆಟ್ಟ ಹತ್ತುವಾಗಲೂ ಒಟ್ಟಿಗೆ ನೀಡುತ್ತದೆ. ಅಲ್ಲಿ ಕಿಳಿಯೂರ್ ಫಾಲ್ಸ್ ನಂತಹ ಸೌಂದರ್ಯದ ತಾಣಗಳು ಸಹ ಬದಿಯಲ್ಲಿವೆ.[೧] ಯೆರ್ಕಾಡ್ ಪ್ರದೇಶವು ಸಮುದ್ರ ಮಟ್ಟದಿಂದ 1600 ಮೀಟರ್ ಎತ್ತರದಲ್ಲಿದೆ.ಈ ನಗರವು ಉತ್ತರಕ್ಕೆ ನಾಗರಮಲೈ, ದಕ್ಷಿಣಕ್ಕೆ ಜರಗುಮಲೈ, ಪೂರ್ವಕ್ಕೆ ಗೋಡುಮಲೈ ಮತ್ತು ಪಶ್ಚಿಮಕ್ಕೆ ಕಂಜಾಮಲೈ ಎಂಬ ಬೆಟ್ಟಗಳಿಂದ ಆಗಿರುವ ಒಂದು ನೈಸರ್ಗಿಕ ಗಿರಿಗಳ ವರ್ತುಲರಂಗದಿಂದ ಆವರಿಸಲ್ಪಟ್ಟಿದೆ. ಇದು ಮುಖ್ಯ ವಿಭಾಗದಲ್ಲಿ ತಿರುಮಣಿಮುತರ್ ನದಿಯಿಂದ ವಿಭಜಿಸಲ್ಪಟ್ಟಿದೆ. ನಗರದ ಅತ್ಯಂತ ಹಳೇಯ ಜಾಗವೇ ದುರ್ಗದ ಪ್ರದೇಶ.[೨] ಸೇಲಂ - ಸ್ಟೀಲ್ ಅಲ್ಯುಮಿನಿಯಂ ಲೈಮ್‌ಸ್ಟೋನ್ ಎಲೆಕ್ಟ್ರಿಸಿಟಿ ಮ್ಯಾಂಗೊ
(ಪೂರ್ವ ಇತಿಹಾಸ
[ಬದಲಾಯಿಸಿ]ದೊರೆತ ಶಾಸನಗಳಲ್ಲಿ ಸೂಚಿಸುವಂತೆ ಇದು ಬೆಟ್ಟ ಗಿರಿಗಳ ಸುತ್ತುವರಿದ ದೇಶವಾಗಿದ್ದು, ಹೈ ಅಥವಾ ಶಲ್ಯ ಅಥವಾ ಸಾಯಿಲಂ ಗಳಿಂದ ಈ ಪ್ರದೇಶ ಸೇಲಂ ಎಂಬ ಹೆಸರನ್ನು ಪಡೆದುಕೊಂಡಿದೆ ಎಂದು ಕಾಣುತ್ತದೆ. ಪುರಾತನ ಕಾಲದಲ್ಲಿ ಸೇಲಂ ಮತ್ತು ಸುತ್ತುವರಿದ ಗುಡ್ಡಗಳಿಂದ ತುಂಬಿದ ಪ್ರದೇಶಗಳು ಚೆರಾ ಮತ್ತು ಕೊಂಗು ದೇಶಗಳ ಭಾಗವಾಗಿದ್ದವು. ಅವು ಅವರದೇ ಐತಿಹಾಸಿಕ ತಮಿಳುನಾಡಿನ ಕುರುನಿಲ ಮನ್ನಾರ್ಗಲ್ ಎಂಬ ಕೊಂಗು ರಾಜರುಗಳಿಂದ ಆಳ್ವಿಕೆಗೊಳಪಟ್ಟಿದ್ದವು. ಸ್ಥಳಿಯ ಜಾನಪದ ಅಧ್ಯಯನದಲ್ಲಿ ಸೇಲಂನ ಸುತ್ತಲಿನ ಪ್ರದೇಶವು ತಮಿಳು ಕವಯತ್ರಿ ಅವ್ವಯ್ಯರ್‌ನ ಜನ್ಮಸ್ಥಳವಾಗಿತ್ತೆಂದು ನಂಬಲಾಗಿದೆ. ಗಂಗ ಸಾಮ್ರಾಜ್ಯದ ಶಾಸನಗಳನ್ನು ಜಿಲ್ಲೆಯ ಕೆಲ ಭಾಗಗಳಿಂದ ಪುನರ್ವಶ ಮಾಡಲಾಗಿದೆ. ನಗರವು ಕೊಂಗು ನಾಡುವಿನ ಮಧ್ಯದಲ್ಲಿದೆ.
ಆಮೇಲೆ ಮುಂದೆ ಸೇಲಂ ಪಾಶ್ಚಾತ್ಯ ಗಂಗ ರಾಜವಂಶದ ಭಾಗವಾಗಿ, ಗಂಗಕುಲಂ ಆಡಳಿತಗಾರರಿಂದ ಧೀರ್ಘಾವಧಿಯವರೆಗೆ ಆಳಲ್ಪಟ್ಟಿತು. ತಮಿಳುನಾಡಿನ ದಕ್ಷಿಣಾಭಿಮುಖ ಆಕ್ರಮಣವು ವಿಜಯನಗರ ಸಾಮ್ರಾಜ್ಯದಿಂದ ನಡೆದು ಸೇಲಂ ಮಧುರೈ ನಾಯಕರುಗಳ ಕೈ ಕೆಳಗೆ ಬಂದಿತ್ತು. ಆನಂತರ ಅದು ಸೇಲಂನ ಗಟ್ಟಿ ಮೂದಲೀಸ್ ಪೋಲಿಗಾರ್ಸ್‌ರಿಂದ ಆಳಲ್ಪಟ್ಟಿತ್ತು. ಅವರು ನಗರದ ಒಳಗೆ ಮತ್ತು ಸುತ್ತಲೂ ಕೆಲವು ಪ್ರಸಿದ್ಧ ದೇವಾಲಯಗಳು ಮತ್ತು ಕೋಟೆಗಳನ್ನು ನಿರ್ಮಿಸಿದ್ದರು. 18ನೇ ಶತಮಾನದ ಮೊದಲಭಾಗದಲ್ಲಿ ಅದು ಮೈಸೂರು-ಮಧುರೈ ನಡುವಿನ ಧೀರ್ಘಾವಧಿಯ ಯುದ್ಧದ ನಂತರ ಹೈದರ್ಅಲಿಯ ವಶಕ್ಕೆ ಬಂದಿತ್ತು. 1768ರ ಪ್ರಾರಂಭದಲ್ಲಿ ಸೇಲಂ ಅನ್ನು ಕರ್ನಲ್ ವುಡ್ ಅವರು ಹೈದರಾಲಿಯಿಂದ ತಮ್ಮ ವಶಕ್ಕೆ ಪಡೆದುಕೊಂಡರು. 1772ರ ವರ್ಷಾಂತ್ಯದಲ್ಲಿ ಹೈದರಾಲಿಯು ಪುನಃ ಸ್ವಾಧೀನ ಪಡಿಸಿಕೊಂಡರು. 1799ರಲ್ಲಿ ಲಾರ್ಡ್ ಕ್ಲೈವ್‌ನ ಸಾರಥ್ಯದಲ್ಲಿ ಸಂಕಗಿರಿ ದುರ್ಗ ಸೇನೆಯ ದೊಡ್ಡ ಭಾಗದ ತಾಣದಿಂದ ಪುನಃ ಆಕ್ರಮಿಸಲ್ಪಟ್ಟಿತು ಮತ್ತು ತಂಡವು ವಾಪಸ್ಸು ಪಡೆಯುವವರೆಗೂ ಉಳಿದ ಸೇನೆ ತಾಣವು 1861 ವರೆಗೆ ಅಲ್ಲಿಯೇ ಇತ್ತು. ಮ್ಯಾಗನಮ್ ಚೌಲ್ಟ್ರಿಯನ್ನು ಮಗುದಂಚವಾಡಿ ಎಂದು ಮರುಹೆಸರಿಸಲಾಗಿದೆ ಇಂತಹ ಪುನರ್ ನಾಮಕರಣಗೊಂಡಂಥ ಸ್ಥಳಗಳನ್ನು ನಾವು ಕಾಣಬಹುದು. ಧೀರನ್ ಚಿನ್ನಾಮಲೈನ ಕಾಲದಲ್ಲಿ ಸೇಲಂ ಮತ್ತು ಸಂಕಗಿರಿಯಂತಹ ಸ್ಥಳಗಳು ಕೊಂಗು ಸೇನಾಬಲ ಮತ್ತು ಬ್ರಿಟೀಷರ ಸುಸಜ್ಜಿತ ಪಡೆಗಳ ನಡುವಿನ ಯುದ್ದದ ತಾಣವಾಗಿದ್ದವು. ಪುರಾಣ ಪ್ರಸಿದ್ದ ಕೊಂಗು ಸೇನಾನಿ ಥೀರನ್ ಚಿನ್ನಾಮಲೈ ಯನ್ನು ಸಂಕಗಿರಿಯ ಕೋಟೆಯಲ್ಲಿ ಆದಿ ಪೆರುಕ್ಕು ದಿನ ದಂದು ಹೀನಾಯವಾಗಿ ಗಲ್ಲಿಗೇರಿಸಿದ್ದರು, ನಂತರ ಅದೇ ಬ್ರಿಟೀಷರ ಸೇನಾ ಪ್ರಧಾನ ಕಛೇರಿಯಾಗಿತ್ತು.
ಭೂಗೋಳ ಮತ್ತು ಹವಾಗುಣ
[ಬದಲಾಯಿಸಿ]ಸೇಲಂ ಇರುವುದು11°40′10″N 78°08′27″E / 11.669437°N 78.140865°E.[೩] ಇದು ಸರಾಸರಿ 278 ಮೀಟರ್ (912 ft)ಗಳಷ್ಟು ಎತ್ತರದ ಮಟ್ಟ ಹೊಂದಿದೆ. ಸೇಲಂ ಗುಡ್ಡಬೆಟ್ಟಗಳು ಮತ್ತು ದಿಣ್ಣೆಗಳಿಂದ ಕೂಡಿದ ಮೈದಾನಗಳಿಂದ ಸುತ್ತುವರೆದಿದೆ.
Mettur | Dharmapuri | Shevaroy Hills | ||
Thramangalam | Attur | |||
Salem City | ||||
Sankari | Namakkal | Rasipuram |
ರಾಜಕೀಯ
[ಬದಲಾಯಿಸಿ]ಸೇಲಂ ಮೂರು ಚುನಾವಣಾ ಕ್ಷೇತ್ರಗಳನ್ನು ಹೊಂದಿದೆ : ಸೇಲಂ ಉತ್ತರ, ಸೇಲಂ ದಕ್ಷಿಣ, ಹಾಗೂ ಸೇಲಂ ಪಶ್ಚಿಮ, ಇವೆಲ್ಲಾ ಸೇಲಂ (ಲೋಕಸಭಾ ಕ್ಷೇತ್ರ)ನ ಭಾಗಗಳು.[೪] . ಹೆಸರಾಂತ ಗಣ್ಯವ್ಯಕ್ತಿಗಳಾದ ರಾಮಸ್ವಾಮಿ ಮುದಲಿಯಾರ್ ಅವರನ್ನೊಳಗೊಂಡು ಸಿ. ವಿಜಯರಾಘವಾಚಾರಿಯರ್, ಪಗದಲ ನರಸಿಂಹಲು ನಾಯ್ಡು, ಸಿ. ರಾಜಗೋಪಾಲಾಚಾರಿ (ರಾಜಾಜಿ), ಡಾ.ಪಿ.ಸುಬ್ಬರಾಯನ್ ಮತ್ತು ಎಸ್.ವಿ.ರಾಮಸ್ವಾಮಿ ಮುಂತಾದವರು ಸೇಲಂನಲ್ಲಿದ್ದ ಕೆಲವು ಜನಪ್ರಿಯ ನಾಯಕರಾಗಿದ್ದರು.ಇಂದಿರಾಗಾಂಧಿಯವರ ಸಚಿವ ಸಂಪುಟದಲ್ಲಿ ಮೋಹನ್ ಕುಮಾರಮಂಗಲಂ ಅವರು ಕಬ್ಬಿಣ ಮತ್ತು ಉಕ್ಕಿನ ಮಂತ್ರಿಯಾಗಿದ್ದರು. ತಮಿಳುನಾಡಿನ ಒಬ್ಬ ಜವಾಬ್ದಾರಿಯುತ ಕೃಷಿ ಮಂತ್ರಿಯಾದ ಶ್ರೀಯುತ ವೀರಪಾಂಡೆ ಆರ್ಮುಗಮ್ (DMK ಪಾರ್ಟಿ) ರವರು ಸಹ ಇದೇ ನಗರದವರು.
ಜನಸಾಂದ್ರತೆ
[ಬದಲಾಯಿಸಿ]2001ರ ಭಾರತಿಯ ಜನಗಣತಿ[೫] ಯ ಪ್ರಕಾರ ಸೇಲಂ ನಗರವು ಒಟ್ಟು ಜನಸಂಖ್ಯೆ 751,438 ಹೊಂದಿತ್ತು, ಇದರಲ್ಲಿ ಸೇಲಂ ಮುನ್ಸಿಪಲ್ ನಗರಸಭೆ (696,760), ಕೊಂಡಲಂಪಟ್ಟಿ (16,808), ಕನ್ನನ್ ಕುರಿಚಿ (14,994), ನೆಕ್ಕಾರಪಟ್ಟಿ (9,869), ಮಲ್ಲಮುಪ್ಪಂಪಟ್ಟಿ (6,783) ಮತ್ತು ದಳವಾಯಿಪಟ್ಟಿ (6,224)ಗಳು ಸೇರಿವೆ.ಜನಸಂಖ್ಯೆಯಲ್ಲಿ ಪುರುಷರು 51% ಮತ್ತು ಮಹಿಳೆಯರು 49% ಚುನಾವಣೆಗೆ ಭಾಗಿದಾರರು. ನಮ್ಮ ದೇಶದ ಸರಾಸರಿ 64.5% ಕ್ಕಿಂತ ಹೆಚ್ಚಾಗಿ ಸೇಲಂ ಸಾಕ್ಷರತಾ ದರದ ಸರಾಸರಿ 77% ಹೊಂದಿದ್ದು ಅದರಲ್ಲಿ ಪುರಷರ ಸಾಕ್ಷರತೆ 82% ಮತ್ತು ಮಹಿಳೆಯರ ಸಾಕ್ಷರತೆ 72% ಇದೆ. ಸೇಲಂನಲ್ಲಿ 6 ವರ್ಷಕ್ಕಿಂತ ಕೆಳಗಿನವರೇ 10% ಜನಸಂಖ್ಯೆಯವರಾಗಿದ್ದಾರೆ.ಸೇಲಂನಲ್ಲಿ ಪ್ರಧಾನವಾಗಿ ಕೊಂಗು ತಮಿಳ್ ಭಾಷೆಯನ್ನು ಮಾತನಾಡಲಾಗುತ್ತದೆ. ಸೇಲಂನಲ್ಲಿ ಪ್ರಮುಖವಾಗಿ ಉತ್ತರ ಭಾರತೀಯರಾದ ಜೈನರು ಮತ್ತು ಮಾರ್ವಾಡಿಗಳು ಮುಖ್ಯವಾಗಿ ವ್ಯಾಪಾರ ಮತ್ತು ವಾಣಿಜ್ಯದಲ್ಲಿ ತೊಡಗಿದ್ದು, ಅವರೂ ಸಹ ತಮಿಳು ಮಾತನಾಡಲು ಕಲಿತಿದ್ದಾರೆ.ಕಳೆದ ಎರಡು ದಶಕಗಳಲ್ಲಿ ಜನಗಣತಿ ವರದಿ ಅಧಿಕಾರಿಗಳು ಕಂಡುಕೊಂಡಂತೆ ಈ ನಗರ ಅತ್ಯಂತ ಶೀಘ್ರಗತಿಯಲ್ಲಿ ಅಭಿವೃದ್ಧಿ ಹೊಂದಿದೆ. 1991ರಲ್ಲಿ ಜನಸಂಖ್ಯೆ : 499,024 ಮತ್ತು 2001ರಲ್ಲಿ ಜನಸಂಖ್ಯೆ: 696,760
ಮನರಂಜನೆ
[ಬದಲಾಯಿಸಿ]ಚಲನಚಿತ್ರ ಮಂದಿರಗಳು
[ಬದಲಾಯಿಸಿ]ಸೇಲಂ ಸುಧೀರ್ಘವಾಗಿ ಒಂದು ಚಿತ್ರಮಂದಿರಗಳ ನಗರವಾಗಿ ಪ್ರತಿಷ್ಠಾಪಿಸಲ್ಪಟ್ಟಿದೆ. ಕಿಚ್ಚಿಪಾಲಯಂ ಎಂದು ಕರೆಯಲ್ಪಡುವ ಒಂದು ಸ್ಥಳದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಚಿತ್ರಮಂದಿರಗಳು ಇರುವುದು ಒಂದು ವೈಶಿಷ್ಟ್ಯವಾಗಿದೆ. 80ರ ತುತ್ತತುದಿಯಲ್ಲಿ ಸುಮಾರು 28 ಚಿತ್ರಮಂದಿರಗಳಲ್ಲಿ ಹಾಲಿವುಡ್ ಚಲನಚಿತ್ರಗಳು, ಭಾಷಾಂತರಗೊಂಡ ಚಲನಚಿತ್ರಗಳು ಮತ್ತು ಹಳೆಯ ಚಲನಚಿತ್ರಗಳಂತಹ ಎಲ್ಲಾ ರೀತಿಯ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿದ್ದವು. ಆದರೆ ಪ್ರಸ್ತುತವಾಗಿ ಅಲ್ಲಿ 15 ಚಿತ್ರಮಂದಿರಗಳಿವೆ, ಹಳೆಯ ಕೆಲವು ಚಿತ್ರಮಂದಿರಗಳು ಮುಚ್ಚಲ್ಪಟ್ಟಿದ್ದು ಮತ್ತು ಈಗಲೂ 15 ಚಿತ್ರಮಂದಿರಗಳು ಚಾಲನೆಯಲ್ಲಿವೆ. ಅದರಲ್ಲಿ ಕೆಲವು ಪ್ರಸಿದ್ಧ ಚಿತ್ರಮಂದಿರಗಳೆಂದರೆ ARRS ಮಲ್ಟಿಪ್ಲೆಕ್ಸ್, BIG CINEMAS, ಮಂತಾದವುಗಳು.
ವ್ಯಾಪಾರ ಮಳಿಗೆಗಳು
[ಬದಲಾಯಿಸಿ]ಸೇಲಂ ಕೂಡ ಇತ್ತೀಚಿನ ದಿನಗಳಲ್ಲಿ ಒಂದು ಬಹು ದೊಡ್ಡ ವ್ಯಾಪಾರ ಕೇಂದ್ರವಾಗಿ ಬೆಳಕಿಗೆ ಬರುತ್ತಾ ಇದೆ. ಶಾರದಾ ಕಾಲೇಜ್ ರಸ್ತೆ ಮತ್ತು ಒಮಲೂರ್ ರಸ್ತೆಗಳು ವ್ಯಾಪಾರ ಮತ್ತು ಚಿಲ್ಲರೆ ಮಾರಾಟದ ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಗತಿಯ ಪ್ರತ್ಯಕ್ಷ ಸಾಕ್ಷಿಯಾಗಿದೆ.ಸ್ವರ್ಣಾಂಬಿಗೈ ಪ್ಲಾಜಃ, ಕಂದಸ್ವರ್ಣ ಶಾಪಿಂಗ್ ಮಾಲ್, ವಿ.ವಿ. ಶಾಪಿಂಗ್ ಪ್ಲಾಜಃ, ತುಲಸಿ ರಿಟೇಲ್, ಕಂದಸ್ವರ್ಣ ಮೆಗಾ ಮಾಲ್, ಸ್ಪೆನ್ಸರ್ಸ್, ಮೋರ್ ಫಾರ್ ಯು,ನೀಲ್ಗಿರೀಸ್, ವಿಮಾನನಿಲ್ದಾಣ ಮತ್ತು ಹಲವು.ಹಾಗೆ ನಗರದಲ್ಲಿ ಹೊಟೇಲ್‌ಗಳು ಮತ್ತು ರೆಸ್ಟೋರೆಂಟುಗಳು ಈಗ ಒಳ್ಳೆಯ ಸಂಖ್ಯೆಯಲ್ಲಿವೆ.
ಆರ್ಥಿಕತೆ
[ಬದಲಾಯಿಸಿ]ಸೇಲಂನಲ್ಲಿ ಮಹಿಳೆಯರಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ಬೆಳ್ಳಿ ಕಾಲ್ಕಡಗಗಳು ಹೆಚ್ಚಾಗಿ ಉತ್ಪಾದನೆಯಾಗುತ್ತವೆ.[೬] ಹೆಚ್ಚಾಗಿ ಉಡುಪು, ಉಕ್ಕು, ಸ್ವಚಾಲಿತ ಉತ್ಪನ್ನ, ಕೊಳಿ ಸಾಕಾಣೆ ಮತ್ತು ಸಗೊ ಕೈಗಾರಿಕೆಗಳಿಂದ ಇದು ಹೆಚ್ಚು ಪ್ರಸಿದ್ಧವಾಗಿದೆ.[೭] ಭಾರತದಲ್ಲಿ ಬೃಹತ್ ಮ್ಯಾಗ್ನಸೈಟ್ ನಿಕ್ಷೇಪಗಳನ್ನು ಸಹ ಸೇಲಂ ಹೊಂದಿದೆ. ಇಲ್ಲಿ ದಾಲ್ಮಿಯ ಮತ್ತು TANMAG ಕಂಪನಿಗಳು ಗಣಿಗಾರಿಕೆಗಳನ್ನು ಹೊಂದಿವೆ.[೮] ಲೀಘ್ ಬಜಾರ್ ಎನ್ನುವುದು ಆಗ್ರೋ ಉತ್ಪನ್ನಗಳ ಅತಿ ದೊಡ್ಡ ಪ್ರಾದೇಶಿಕ ಮಾರುಕಟ್ಟೆಗಳಲ್ಲಿ ಒಂದಾಗಿದೆ.[ಸೂಕ್ತ ಉಲ್ಲೇಖನ ಬೇಕು] ರತ್ನ ಸ್ಟುಡಿಯೋ ಮತ್ತು ಮುಂಚಿನ ಮಾರ್ಡನ್ ಸ್ಟುಡಿಯೋಗಳು ಚಲನಚಿತ್ರ ನಿರ್ಮಾಣದಲ್ಲಿ ಹೆಚ್ಚು ಕ್ರಿಯಾಶೀಲವಾಗಿದ್ದು ಇದರಿಂದ ಸೇಲಂ ತಮಿಳು ಚಿತ್ರ ನಿರ್ಮಾಣದ ಪ್ರಧಾನ ಕೇಂದ್ರವಾಗಿದೆ[ಸೂಕ್ತ ಉಲ್ಲೇಖನ ಬೇಕು]. ಈಗ ಗತಿಸಿದ, ಮಾರ್ಡನ್ ಥಿಯೇಟರ್‌ಗಳು ಕೆಲವು ಅತಿ ಯಶಸ್ವಿ ತಮಿಳು ಸಿನಿಮಾಗಳ ನಿರ್ಮಾಣಕ್ಕೆ ಕಾರಣವಾಗಿದ್ದವು. ಮಾಜಿ ಮುಖ್ಯ ಮಂತ್ರಿ ಎಮ್.ಜಿ.ರಾಮಚಂದ್ರನ್ ಅವರೂ ಸೇರಿದಂತೆ ಹಲವಾರು ಪ್ರಖ್ಯಾತ ನಟರು ನಟಿಸಿದ್ದಾರೆ. ಆದಾಗ್ಯೂ, ಈಗ ಸೇಲಂನಲ್ಲಿ ಯಾವ ಸ್ಟುಡಿಯೋಗಳು ಇಲ್ಲ.
ರಫ್ತು ಸರಕುಗಳು
[ಬದಲಾಯಿಸಿ]1930 ಕ್ಕೂ ಹಿಂದಿನಿಂದಲೂ ಸೇಲಂ ವಸ್ತ್ರ ಉತ್ಪನ್ನಗಳ ರಫ್ತಿಗೆ ಹೆಸರುವಾಸಿಯಾಗಿದೆ ಇತ್ತೀಚೆಗೆ ತಿರುಪುರ್ ನೇಯ್ದ ಉಡುಪುಗಳ ರಫ್ತಿನ ಕೇಂದ್ರವಾಗಿ ಅಭಿವೃದ್ಧಿಗೊಳ್ಳುವ ತನದ ಸೇಲಂ ದೊಡ್ಡ ಪ್ರಮಾಣದ ಉಡುಪು ಬಟ್ಟೆ/ವಸ್ತ ಸರಕಿನ ರಫ್ತುಕೇಂದ್ರವಾಗಿತ್ತು. ಸೇಲಂ, ಮಾವಿನ ಹಣ್ಣುಗಳಿಗೂ ಸಹ ಜನಪ್ರಿಯ ಮತ್ತು ಅವನ್ನು ಪ್ರಪಂಚದ ವಿವಿಧ ಭಾಗಗಳಿಗೆ ರಫ್ತು ಮಾಡಲಾಗುತ್ತಿದೆ. ಸೇಲಂ ಮಾವಿನ ತಿರುಳಿನ ರಫ್ತು ಮಾಡುವ ಉದ್ದೇಶದಿಂದ ಒಂದು ಮಾವಿನ ತಿರುಳಿನ ಕಾರ್ಖಾನೆಯನ್ನು ಕಟ್ಟಲು ಯೋಜನೆಗಳನ್ನು ಕೈಗೊಳ್ಳಲಾಗಿದೆ.
ವಿಶೇಷ ಆರ್ಥಿಕ ವಲಯಗಳು (SEZ)
[ಬದಲಾಯಿಸಿ]ಶೀಘ್ರಗತಿಯಲ್ಲಿ ಅಭಿವೃದ್ಧಿಯಾಗುತ್ತಿರುವ ಶ್ರೇಣಿ II ನಗರಗಳಲ್ಲಿ ಒಂದಾದ ಸೇಲಂನಲ್ಲಿ ತಮಿಳುನಾಡು ಸರ್ಕಾರ ಮತ್ತು ELCOT ಗಳು ಸೇರಿ ಒಂದು IT ಪಾರ್ಕಿನ ಸ್ಥಾಪನೆಯ ಯೋಜನೆ ಹಾಕುತ್ತಿವೆ.160 acres (0.65 km2).[೯] [೧೦] ಸೇಲಂ ಉಕ್ಕು ಕಾರ್ಖಾನೆಯ ಜೊತೆಯಲ್ಲಿಯೇ ಒಂದು ಉಕ್ಕು SEZ ನ್ನು ಸ್ಥಾಪಿಸಲು SAIL ಯೋಜನೆ ರೂಪಿಸಿದೆ250 acres (1.0 km2)[೧೧].
ಸೇಲಂ ನಗರದ ಸುರಮಂಗಲಂ ಪ್ರದೇಶವು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಕಾರ್ಖಾನಾ ಘಟಕಗಳಿಗೆ ಮೀಸಲಾಗಿದೆ. [೧೨]
ಧಾರ್ಮಿಕ ತಾಣಗಳು
[ಬದಲಾಯಿಸಿ]ಅನೇಕ ಮಾರಿಯಮ್ಮನ್ದೇವಾಲಯಗಳು ಸೇಲಂನಲ್ಲಿವೆ. ಪ್ರತಿ ವರ್ಷ ಜುಲೈ ಸಮಯದಲ್ಲಿ ಈ ನಗರವು ಎರಡುವಾರಗಳ ಕಾಲ ಮಾರಿಯಮ್ಮನ್ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದಲ್ಲಿ, ದೇವತೆ ಮಾರಿಯಮ್ಮನ್ ಮೂರ್ತಿಯನ್ನು ಆಭರಣಗಳು ಮತ್ತು ಹೂಗಳಿಂದ ಅಲಂಕರಿಸಿದ ತೇರಿನಲ್ಲಿರಿಸಿ ಅದನ್ನು ಮಧ್ಯರಾತ್ರಿಯವರೆಗೆ ನಗರದ ಸುತ್ತ ಮುತ್ತ ತೆಗೆದುಕೊಂಡು ಹೊಗಲಾಗುತ್ತದೆ. ಹಬ್ಬದ ಪ್ರಥಮ ದಿನದಂದು ಭಕ್ತಾದಿಗಳು ತಮ್ಮ ಪ್ರಾರ್ಥನೆ ಹಾಗೂ ಹರಕೆಗಳೊಂದಿಗೆ ಬೆಂಕಿಯ ಮೇಲೆ ನಡೆಯುತ್ತಾರೆ. (ಸೂಚನೆ : ಭಕ್ತರು ಬೆಂಕಿಯನ್ನು ಹೂವೆಂದು ಕರೆಯುತ್ತಾರೆ) ಹಬ್ಬದ ಎರಡನೇ ದಿನದಂದು ವಿಚಿತ್ರ ವೇಷಗಳ ಉಡುಪನ್ನು ಧರಿಸಿ ಕವಾಯಿತು ನಡೆಸುವುದು ವರ್ಣರಂಜಿತವಾಗಿರುತ್ತದೆ. ರಾಜ್ಯದಲ್ಲೆಲ್ಲಾ ಅಮ್ಮನ್ ದೇವಾಲಯದ ಬಂಡಿಗಳಲ್ಲಿ ಶೇವಾಪೆಟ್ ಮಾರಿಯಮ್ಮನ್ ದೇವಾಸ್ಥಾನದ ಬಂಡಿ ಅತ್ಯಂತ ದೊಡ್ದದಾದ ಬಂಡಿಯಾಗಿದೆ. ಈ ಹಬ್ಬವನ್ನು ಒಂದು ವಾರದ ವರೆಗೆ ಆಚರಿಸಲಾಗುತ್ತದೆ. ಸೇಲಂನಲ್ಲಿ ಅಲ್ಲದೆ ಇಡೀ ತಮಿಳುನಾಡಿನಲ್ಲೇ ಕೊಟ್ಟಾಯ್ ಮಾರಿಯಮ್ಮನ್ ದೇವಾಲಯವು ತುಂಬಾ ಪ್ರಸಿದ್ಧಿಯಾಗಿದೆ.
ಅಲ್ಲಿರುವ ಅಲಗಿರನಾಥರ್ ತಿರುಕೊಯಿಲ್, "ಕೊಟ್ಟಾಯ್ ಪೆರುಮಾಲ್ ಕೊಯಿಲ್" ಎಂದು ಜನಪ್ರಿಯವಾಗಿದೆ, ಇದು ನಗರದ ಹೃದಯ ಭಾಗದಲ್ಲಿದೆ.. ಈ ದೇವಾಲಯವು ಹಲವು ಶತಮಾನಗಳ ಹಿಂದೆ ಕಟ್ಟಲ್ಪಟ್ಟಿದೆ ಹಾಗೂ ಸುಂದರವಾದ ಕೆಲವು ಶಿಲ್ಪಕಲೆಗಳನ್ನು ಒಳಗೊಂಡಿದೆ. "ಈ ದೇವಾಲಯದ ಅತ್ಯಂತ ಪ್ರಸಿದ್ಧವಾದ ಹಬ್ಬ "ವೈಕುಂಠ ಏಕಾದಶಿ" ಮತ್ತು ಆ ದಿನದಂದು ಲಕ್ಷೋಪಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ.ಈ ದೇವಾಲಯದಲ್ಲಿ, ಬೇರೆ ಹಬ್ಬಗಳಾದ ಬ್ರಹ್ಮೋತ್ಸವಮ್, ಪವಿತ್ರೋತ್ಸವಮ್, ನವರಾತ್ರಿ, ಮತ್ತು ಪುರತಸಿಗಳನ್ನು ಅತ್ಯಂತ ಸ್ಫೂರ್ತಿ ಉತ್ಸಾಹಗಳಿಂದ ಆಚರಿಸಲಾಗುತ್ತದೆ. ಈ ದಿನಗಳಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ದೇವಾಲಯದಲ್ಲಿ ಕಿಕ್ಕಿರಿದು ಸೇರುತ್ತಾರೆ. ಈ ದೇವಾಲಯದಲ್ಲಿ "ಆಂಡಾಲ್ ತಿರುಕಲ್ಯಾಣಂ" ಒಂದು ಪ್ರಸಿದ್ಧ ಉತ್ಸವ, ಅದಕ್ಕಾಗಿ ವಿಶೇಷವಾದ ಹೂವಿನ ಹಾರವನ್ನು ಶ್ರೀ ವಿಲ್ಲಿ ಪುತ್ತುರ್ ("ಸೂಡಿ ಕೊಡುಥಾ ಸುಡರ್ ಮಲೈ") ನಿಂದ ತರಲಾಗುತ್ತದೆ.
ಸುಗವನೇಶ್ವರರ್ ದೇವಾಲಯವು ಕೂಡ ಸೇಲಂನ ಒಂದು ಅತಿಮುಖ್ಯ ಪುಣ್ಯಕ್ಷೇತ್ರ ಪುರಾಣ ಕಥೆಯ ದಾಖಲೆಗಳ ಪ್ರಕಾರ ಸುಘ ಬ್ರಹ್ಮರ್ಷಿಯು ಇಲ್ಲಿ ದೇವರನ್ನು ಪೂಜಿಸುತ್ತಿದ್ದನು. ಅರುಣಗಿರಿನಧಾರನು ಮುರುಗ ದೇವನ ಮೇಲೆ ಒಂದು ಭಕ್ತಿ ಗೀತೆಯನ್ನು ಸುಗವನೇಶ್ವರರ್ ದೇವಾಲಯದಲ್ಲಿ ಹಾಡಿದ್ದನು. ಅಲ್ಲಿರುವ ಶ್ರೀ ಹನುಮಾನ್, ಆಶ್ರಮ Archived 2012-03-03 ವೇಬ್ಯಾಕ್ ಮೆಷಿನ್ ನಲ್ಲಿ. ವು ಶ್ರಿ ಭಕ್ತ ವರಪ್ರಸಾದ ಆಂಜನೇಯರ್, ಆಶ್ರಮ Archived 2012-03-03 ವೇಬ್ಯಾಕ್ ಮೆಷಿನ್ ನಲ್ಲಿ. ಎಂದು ಜನಪ್ರಿಯವಾಗಿದೆ, ಇದು ನಗರದ ಹೃದಯ ಭಾಗದಲ್ಲಿದೆ. ಈ ಆಶ್ರಮದಲ್ಲಿ ಶ್ರೀ ಹನುಮಾನ್‌ನನ್ನು ಶ್ರೀ ಆಂಜನೇಯರ್ ಎಂಬ ಹೆಸರಿನಿಂದಲೂ ಪೂಜಿಸುತ್ತಾರೆ. ಶ್ರೀ ಹನುಮಾನ್ ಜಯಂತಿ ; ಶ್ರೀ ರಾಮನವಮಿ ಮತ್ತು ಹೊಸ ವರ್ಷದ ಆಚರಣೆಗಳು ಈ ಆಶ್ರಮದ ಬಹು ಪ್ರಸಿದ್ಧವಾದ ಆಚರಣೆಗಳಾಗಿವೆ ಅತ್ಯಂತ ಪವಿತ್ರವಾದ ಮಹತ್ವದ ಗ್ರಂಥವಾದ ರಾಮಾಯಣದ ಸುಂದರ ಕಾಂಡಂ ವಾಚನ ಮಾಡುವುದು ಈ ಆಶ್ರಮದಲ್ಲಿನ ಅತ್ಯಂತ ಪ್ರಮುಖ ಅಭ್ಯಾಸ. ಒಂದು ಜನಪ್ರಿಯ ನಂಬಿಕೆ ಏನೆಂದರೆ, ಎಲ್ಲಾ ಭಕ್ತಾದಿಗಳು ಸುಂದರ ಕಾಂಡಂ ಅನ್ನು ವಾಚನ ಮಾಡುತ್ತಿರುವಾಗ ಶ್ರೀ ಹನುಮಾನ್ ನು ಅತ್ಯುತ್ಸಾಹದಿಂದ ಅದನ್ನು ಕೇಳುತ್ತಾನೆ ಜೊತೆಗೆ ಎಲ್ಲಾ ಭಕ್ತರಿಗೂ ಆಶೀರ್ವದಿಸುತ್ತಾನೆ. ದೇವ ಮುರುಗನ್‌ಗಾಗಿ ಮತ್ತೊಂದು ಬೆಟ್ಟ ಸೀಲನಾಯ್ಕೆನ್‌ಪಟ್ಟಿಯಲ್ಲಿದೆ, ಅದನ್ನು ಊತುಮಲೈ ಎನ್ನಲಾಗುತ್ತದೆ. ಕುಮಾರಗಿರಿಯು ಸ್ವಾಮಿ ಮುರುಗನ ಒಂದು ಪುಟ್ಟ ದೇವಸ್ಥಾನ ಸೇಲಂ ನಗರದಿಂದ ಇದು 5 ಕಿ.ಮೀ. ದೂರದಲ್ಲಿದೆ. ಸೇಲಂನಲ್ಲಿ ಒಂದು ರಾಮಕೃಷ್ಣ ಮಿಷನ್ ಆಶ್ರಮವು ಸ್ಥಾಪಿತವಾಗಿದೆ. ಇದು 1928 ರಲ್ಲಿ ಪ್ರಾರಂಭವಾಯಿತು, ಮತ್ತು 1941ರಲ್ಲಿ ಈ ಮಿಷನ್‌ನ ಉಪಶಾಖೆಯನ್ನು ಪ್ರಾರಂಭಿಸಲಾಯಿತು. ಸೇಲಂನಲ್ಲಿ ಒಂದು ಹೊಸ ಸುಸಜ್ಜಿತವಾದ ISKCON ಆಶ್ರಮವು ಇದೆ. ವೈಕಲ್ಪಟ್ಟರೈನಲ್ಲಿ ಒಂದು ನರಸಿಂಹ ದೇವಾಲಯವು ಮತ್ತು ಕಣ್ಣನ್ ಕುರುಚಿಯಲ್ಲಿ ರಾಘವೇಂದ್ರ ಮಠವು ಇದೆ. ಸೇಲಂನ ಎಲ್ಲಾ ಭಾಗಗಳೂ ಮಸೀದಿಗಳಿಂದ ಆವರಿಸಲ್ಪಟ್ಟಿದೆ. ಬಜಾರ್ ರಸ್ತೆಯಲ್ಲಿನ ಜಾಮಿಯಾ ಮಸೀದಿ, ಕೋಟೆಯಲ್ಲಿ ಮೆಲ್ಥೇರು ಮತ್ತು ಕೀಲ್ಥೇರು ಮಸೀದಿಗಳು, ರೈಲ್ವೆ ಜಂಕ್ಷನ್ ಬಳಿ ಮತ್ತು ಹೊಸ ಸಂಘಟಿತ ಬಸ್ ಟರ್ಮಿನಲ್ ಬಳಿಯ ಮಸೀದಿಗಳು ಮತ್ತು ಅಮ್ಮಪೇಟೆಯಲ್ಲಿನ ಮಸೀದಿಗಳು, 5ರಸ್ತೆಗಳು ಹಾಗೂ ಗುಗೈಗಳು ಪ್ರಸಿದ್ಧಿಯಾದವುಗಳು. ಅದಲ್ಲದೆ, ವಿದ್ಯಾರ್ಥಿಗಳಿಗಾಗಿ ಅರಾಬಿಕ್ಅಧ್ಯಯನಗಳು ಸೇಲಂ ನಲ್ಲಿದೆ, ಮ್ಯಾಗ್ನೆಸೈಟ್ ಬಳಿಯಲ್ಲಿ ಒಂದು ಹೆಸರಾದ ಅರೇಬಿಕ್ ಕಾಲೇಜು ಸ್ಥಾಪಿತವಾಗಿದೆ.ವಯಿಕಾಲಪಟ್ಟರೈನಲ್ಲಿ ನರಶಿಮ್ಮಾರ್ ದೇವಾಲಯವು ಮತ್ತು ಕಣ್ಣನ್ ಕುರುಚಿಯಲ್ಲಿ ರಾಘವೇಂದ್ರ ಮಠವು ಇದೆ.
ಸೇಲಂನ, ಫೋರ್ ರೋಡ್ಸ್‌ನಲ್ಲಿ ಇನ್ಫ್ಯಾಂಟ್ ಜೀಸಸ್ ಚರ್ಚ್ ಇದೆ. 1930 ರಲ್ಲಿ, ಸೇಲಂ ನಗರವು ರೋಮನ್ ಕ್ಯಾಥೋಲಿಕ್ ಡಿಯೋಸಿಸ್‌ನ ಪೀಠವನ್ನು ಸ್ಥಾಪಿಸಿತು. ಅಂದಿನ ಬಿಷಪ್ ಸೆಬಾಸ್ಟಿಯನಪ್ಪನ್ ಸಿಂಗರೋಯನ್ ಆಗಿದ್ದರು ಮತ್ತು ಕ್ರೈಸ್ತರ ಮುಖ್ಯ ಆರಾಧನಾ ಮಂದಿರವು ಇನ್ಫ್ಯಾಂಟ್ ಜೀಸಸ್ ಆರಾಧನಾ ಮಂದಿರವಾಗಿತ್ತು. ಹಾಗೂ ಗಾಂಧಿ ರಸ್ತೆಯ ಬಳಿ ಇರುವ ಈಡನ್ ಗಾರ್ಡನ್ಸ್ ಶಾಲೆಗೆ ಹೊಂದಿಕೊಂಡಂತಿರುವ ಪ್ರಾರ್ಥನಾ ಮಂದಿರವು LEF ಕಾರ್ಯ ನಿರ್ವಹಿಸುತ್ತದೆ.
ಕುಲದೇವಿಯಂ ಎಂದು ಕರೆಯಲ್ಪಡುವ ಒಂದು ಕುಟುಂಬ ಅವರದೇ ವಿವಿಧ ದೇವಾಲಯಗಳನ್ನು ಹೊಂದಿದೆ ಉದಾ : ಒಮಲೂರ್‌ನ ಮಲಕೌಂದನೂರ್‍ನಲ್ಲಿರುವ ನಮ್ಮ ಕುಟುಂಬದ ದೇವಸ್ಥಾನ ಅಯ್ಯನರಪ್ಪನ್ ದೇವಸ್ಥಾನ ಮತ್ತು ಬೇರೊಂದು ಕುಟುಂಬದ ಅಯ್ಯನರಪ್ಪನ್ ದೇವಾಲಯ ಆತ್ಯಂಪಟ್ಟಿಯ ಸರೋವರದ ಪಾಪರಪಟ್ಟಿಯಲ್ಲಿ ಇದೆ. ಇಲ್ಲಿನ ವರ್ಷದ ಥೇವಮ್(ಹಬ್ಬ) ತುಂಬ ಪ್ರಸಿದ್ಧಿ ಪಡೆದಿದೆ, ಇದಕ್ಕೆ ತಮಿಳುನಾಡಿನ ಸುತ್ತಮುತ್ತಲಿಂದ ಲಕ್ಷಗಟ್ಟಲೆ ಸೋದರಸಂಬಂಧಿಗಳು ಆಗಮಿಸುತ್ತಾರೆ....
ಸೇಲಂನಿಂದ ಎಲ್ಲಂಪಿಲೈ ಕಡೆಗೆ ಸುಮಾರು 10ಕಿ.ಮೀ. ದೂರದಲ್ಲಿ ಒಂದು ಹಳೆಯ ಮತ್ತು ಪ್ರಸಿದ್ಧ ದೇವಸ್ಥಾನವೆನ್ನಲಾದ ಸಿಧಾರ್ ಕೊಯಿಲ್ ಇದೆ. ( ಸಿಧಾರ್ ಗಳು ಸಾಧುಸಂತರು ಇವರು ಚಮತ್ಕಾರಗಳನ್ನು ತೋರುವಂಥವರು- ಈ ದಿನಗಳಲ್ಲೂ ಅವರಿಂದ ಬೆಳವಣಿಗೆಯಾದ ಔಷಧಿಯನ್ನು ಪಾಲಿಸುತ್ತಿರುವ ಒಂದು ನಿಯಮವಿದೆ). ಕಂಜಮಲೈ ಬಳಿ ವಾಸವಾಗಿದ್ದ ಒಬ್ಬ ಸಂತರು ತುಂಬ ಪ್ರಸಿದ್ದಿ ಪಡೆದಿದ್ದರು ಮತ್ತು ಸಮಾಧಿಯನ್ನು ಇಲ್ಲೇ ಪಡೆದರು ಎಂಬ ನಂಬಿಕೆ ಇದೆ. ಸ್ಥಳಿಯರೆಲ್ಲಾ ಈ ದೇವಾಲಯಕ್ಕೆ ಗುಂಪು ಗುಂಪಾಗಿ ಪ್ರತಿ ಪೌರ್ಣಿಮೆ ದಿನದಂದು ತಮ್ಮ ಪ್ರಾರ್ಥನೆಗಳನ್ನು ಅರ್ಪಿಸಲು ಬರುತ್ತಾರೆ ಮತ್ತು ಅಲ್ಲಿಯೇ ಹತ್ತಿರದ ಔಷದೀಯ ಗುಣಗಳನ್ನು ಹೊಂದಿದ ಸರೋವರದಲ್ಲಿ ಸ್ನಾನ ಮಾಡಿದರೆ ಆರೋಗ್ಯ ಹೊಂದುವರೆಂಬ ನಂಬಿಕೆ ಇದೆ.
ಯೆರ್ಕಾಡ್
[ಬದಲಾಯಿಸಿ]ಭಾರತದ ತಮಿಳುನಾಡಿನ ಪೂರ್ವ ಘಟ್ಟ ಪ್ರದೇಶಗಳಿಗೆ ಸೇರಿರುವ ಸೆರ್ವರಾಯನ್ ಎಂಬ ಸಾಲು ಸಾಲಾಗಿ ಹಬ್ಬಿದ ಬೆಟ್ಟಗುಡ್ಡಗಳಲ್ಲಿ ಯೆರ್ಕಾಡ್ಎಂಬ ಗಿರಿಧಾಮವು ಸೇಲಂನ ಬಳಿಯಿದೆ. ಇದು ಸಮುದ್ರ ಮಟ್ಟದಿಂದ 1515 ಮೀಟರ್‌ಗಳು (4969 ಅಡಿ) ನಷ್ಟು ಎತ್ತರದಲ್ಲಿದೆ. ಇದರ ಮಧ್ಯಭಾಗದಲ್ಲಿ ಸರೋವರ ಇರುವದರಿಂದ ಈ ನಗರ ಈ ಹೆಸರನ್ನು ಪಡೆದಿದೆ - ತಮಿಳಿನಲ್ಲಿ "ಯೆರಿ" ಎಂದರೆ "ಸರೋವರ" ಮತ್ತು "ಕಾಡು" ಎಂದರೆ "ಫಾರೆಸ್ಟ್". ಯೆರ್ಕಾಡ್ ಕಾಫಿ ತೋಟಗಾರಿಕೆ ಮತ್ತು ಕಿತ್ತಳೆ ಮರಗಳ ತೋಪುಗಳಿಗೆ ಪ್ರಸಿದ್ಧಿಯಾಗಿದೆ. ಇದು ಬೊಟಾನಿಕಲ್ ಸರ್ವೇ ಆಫ್ ಇಂಡಿಯಾ ವತಿಯಿಂದ ನಡೆಯುವ ಆರ್ಖಿಡೇರಿಯಮ್ ಕೂಡಾ ಹೊಂದಿದೆ. ಸೆರ್ವರಾಯನ್ ದೇವಾಲಯವು ಯೆರ್ಕಾಡ್‍೬ನ ಅತಿ ಎತ್ತರದ ಪ್ರದೇಶವಾಗಿದೆ. ಹಾಗಾಗಿ, ಯೆರ್ಕಾಡ್ ಗಿರಿಪ್ರದೇಶವನ್ನು ಶೆವರಾಯ್ ಗಿರಿಗಳು ಎಂದು ಕರೆಯಲಾಗಿದೆ. ಯೆರ್ಕಾಡ್ ಅನ್ನು ಬಡವರ ಊಟಿ ಎಂದು ಕೂಡಾ ಕರೆಯಲಾಗುತ್ತದೆ.
11°46′46″N 78°12′12″E / 11.7794°N 78.2034°E / 11.7794; 78.2034 ಇದಕ್ಕೆ ಸಮಾನವಾಗಿದೆ
ಚಿತ್ರಸಂಪುಟ
[ಬದಲಾಯಿಸಿ]-
ಯೆರ್ಕಾಡ್ ಹತ್ತಿರದ ಕಿಲಿಯೂರ್ ಜಲಪಾತ
-
ಪಗೋಡಾ ಪಾಯಿಟ್ ಹತ್ತಿರದ ಕಾಮನಬಿಲ್ಲು
-
ರಾತ್ರಿಯಲ್ಲಿ ಸೇಲಂ ನಗರದ ನೋಟ
-
ಯೆರ್ಕಾಡ್ನ ಒಂದು ನಿಶ್ಯಬ್ಧ ರಸ್ತೆ
-
ಬೋಟಿಂಗ್ ಲೇಕ್
-
ಒಣ ಕಾಲದಲ್ಲಿ ಜಲಪಾತಗಳು
-
ಬೆಟ್ಟದ ಹತ್ತಿರದಲ್ಲಿರುವ ಜಲಪಾತಗಳು
-
ಯೆರ್ಕಾಡ್ ನಲ್ಲಿರುವ ಲೇಕ್ವ್ಯೂ
ಸಾರಿಗೆ
[ಬದಲಾಯಿಸಿ]ಚೆನ್ನೈ, ಬೆಂಗಳೂರು, ತಿರುವನಂತಪುರಂ, ಕೊಯಂಬತ್ತೂರ್, ಮಧುರೈ, ಎರ್ನಾಕುಲಮ್/ಕೊಚಿನ್, ಪಾಂಡಿಚೆರಿ, ತ್ರಿಚಿ, ಕನ್ಯಾಕುಮಾರಿ ಮತ್ತು ಇತರೆ ಪ್ರದೇಶಗಳ ನಡುವೆ ಪ್ರಯಾಣಿಸುವಾಗ ಸೇಲಂ ಒಂದು ಕೇಂದ್ರ ಸ್ಥಾನವಾಗಿದೆ.
ರಸ್ತೆ ಸಾರಿಗೆ
[ಬದಲಾಯಿಸಿ]ರಾಷ್ಟ್ರೀಯ ಹೆದ್ದಾರಿಗಳು
[ಬದಲಾಯಿಸಿ]ಮೂರು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಸೇಲಂ ಮುಖಾಂತರ ಹಾದು ಹೋಗುತ್ತವೆ:
ಬಸ್ ನಿಲ್ಡಾಣಗಳು
[ಬದಲಾಯಿಸಿ]ಸಲೇಮ್ ಕೆಳಕಂಡ 2 ಪ್ರಮುಖ ಬಸ್ ನಿಲ್ದಾಣಗಳನ್ನು ಹೊಂದಿದೆ:
- MGR ಇಂಟಿಗ್ರೇಟೆಡ್ ಬಸ್ ಟರ್ಮಿನಸ್ ಇದನ್ನು ಇಂಟಿಗ್ರೇಟೆಡ್ ಬಸ್ ಟರ್ಮಿನಸ್ ಎಂತಲೂ ಕರೆಯುತ್ತಾರೆ (ಹೊಸ ಬಸ್ ನಿಲ್ದಾಣ)- ಮೊಫುಸ್ಸಿಲ್ ದಾರಿಗಳು
- ಟೌನ್ ಬಸ್ ಸ್ಟೇಷನ್ (ಹಳೆಯ ಬಸ್ ನಿಲ್ದಾಣ)- ನಗರದ ಇಕ್ಕಟ್ಟಾದ ಭಾಗಗಳಲ್ಲಿರುವ ಸ್ಥಳೀಯ ರಸ್ತೆಗಳು.
ರೈಲು ಸಾರಿಗೆ
[ಬದಲಾಯಿಸಿ]ಗ್ರೇಟ್ ಸೇಲಂ ವಿಭಾಗ ಮಾಡಿದ ಮೇಲೆ ಅಲಂಕಾರದ ಕೆಲಸ ನಡೆಯಿತು. ಸೇಲಂ ರೈಲ್ವೆ ವಿಭಾಗದ ಒಟ್ಟು ಉದ್ದ 842 ಕಿಮೀ. ಸೇಲಂ ಜಂಕ್ಷನ್ ಆರು ಮಾರ್ಗಗಳನ್ನು ಸೇರಿಸುವ ಜಂಕ್ಷನ್ ಆಗಿದೆ, ಇದು ದಕ್ಷಿಣ ಭಾರತದಲ್ಲಿಯೇ ಬಹಳ ಮಹತ್ವದ ಪಾತ್ರವಹಿಸುವ ಸಾರಿಗೆ ಕೇಂದ್ರವಾಗಿದೆ. ಬಹಳಷ್ಟು ರೈಲುಗಳು ಸೇಲಂ ಮಾರ್ಗವಾಗಿ ಸಾಗುತ್ತವೆ ಹಾಗೂ ಇಲ್ಲಿಂದಲೇ ನೇರವಾಗಿ ಕೆಳಕಂಡ ಸ್ಥಳಗಳಿಗೆ ಹೊರಡುವ ಹಲವಾರು ರೈಲುಗಳು ಲಭ್ಯವಿವೆ (ಜೊತೆಗೆ ಮಾರ್ಗಗಳೂ ಇವೆ):
1ಜೋಲರ್ಪೆಟ್ಟಾಯಿ ಕಡೆಗೆ (via) ಮ್ಯಾಗ್ನೆಸೈಟ್ ಜಂಕ್ಷನ್ 2.ಬೆಂಗಳೂರು ಕಡೆಗೆ (ವಯಾ) ಒಮಲೂರು ಜಂಕ್ಷನ್ 3.ಮೆಟ್ಟೂರ್ ಡ್ಯಾಮ್ ಕಡೆಗೆ (via) ಒಮಲೂರ್ ಜಂಕ್ಷನ್) [4];ಈರೋಡ್ ಕಡೆಗೆ (via) ಸಂಕಗಿರಿ 5ವ್ರಿಧಾಚಲಂ ಕಡೆಗೆ (via) ಸೇಲಂ ನಗರ } ಈ ಆರು ಮಾರ್ಗಗಳಲ್ಲದೆ, ಸೇಲಂನಿಂದ ಸ್ಟೀಲ್ ಪ್ಲ್ಯಾಂಟ್ ಕಡೆಗೆ ಒಂದು ಸರಕು ಸಾಗಿಸುವ ಮಾರ್ಗ ಕೂಡಾ ಇದೆ.ಚೈನ್ನೈನಿಂದ ಕೊಯಂಬತ್ತೂರು/ಕೇರಳ (ಪೂರ್ವ-ಪಶ್ಚಿಮ)ದ ಕಡೆಗಿನ ರೈಲುಗಳು ಮತ್ತು ಬೆಂಗಳೂರಿನಿಂದ ದಕ್ಷಿಣದ ಜಿಲ್ಲೆಗಳಿಗೆ [ಉತ್ತರ-ದಕ್ಷಿಣ] ಹೋಗುವ ರೈಲುಗಳು ಈ ನಗರದ ಮಾರ್ಗವಾಗಿ ಸಗುತ್ತವೆ, ಇದರಿಂದಾಗಿ ಇದು ಅತಿ ಪ್ರಮುಖ ಸಾರಿಗೆ ಕೇಂದ್ರವಾಗಿದೆ. 2007ರಲ್ಲಿ, ಸೇಲಂ ರೈಲ್ವೆ-ವಿಭಾಗವಾಗಿ ಮಾರ್ಪಾಡಾಯಿತು ಹಾಗೂ ಇದು 1 ನವೆಂಬರ್ 2007ರಂದು ತಮಿಳು ನಾಡಿನ ಮುಖ್ಯಮಂತ್ರಿಎಮ್. ಕರುಣಾನಿಧಿ ಹಾಗೂ ಮಾಜಿ ರೈಲ್ವೆಖಾತೆ ಸಚಿವ ಲಾಲು ಪ್ರಸಾದ್ ಯಾದವ್‌ರಿಂದ ಉದ್ಘಾಟಿಸಲ್ಪಟ್ಟಿತು.[೧೩] ಸೇಲಂ ರೈಲ್ವೆ-ವಿಭಾಗವು ಕೇರಳದ ಪಾಲಕ್ಕಾಡ್ ರೈಲ್ವೆ-ವಿಭಾಗದ ತರಹವೇ ರೂಪುಗೊಂಡಿದೆ, ಇದು ಎರಡೂ ರಾಜ್ಯಗಳ ನಡುವೆ ಒಡಕು ಉಂಟುಮಾಡಿತು. ಸೇಲಂನಿಂದ ಪ್ರಾರಂಭವಾಗುವ ಮುಖ್ಯ ರೈಲುಗಳು- ಚೆನ್ನೈ - ಸೇಲಂ ಎಕ್ಸ್ಪ್ರೆಸ್. ಈ ರೈಲು ಅಲ್ಲದೆ
- ಯೆರ್ಕಾಡ್ ಎಕ್ಸ್ಪ್ರೆಸ್ ಕೂಡಾ ಸೇಲಂ ಮಾರ್ಗದ ಪ್ರಮುಖ ರೈಲು, ಇದು ಮೊದಲಿಗೆ ಸೇಲಂನಿಂದಲೇ ಹೊರಡುತ್ತಿತ್ತು.
- ಸೇಲಂ ರೈಲ್ವೆ ಜಂಕ್ಷನ್
- ಸೇಲಂ ಮಾರ್ಕೆಟ್ ಸ್ಟೇಷನ್
- ಸೇಲಂ ಟೌನ್ ಸ್ಟೇಷನ್
- ಸೇಲಂ ಪೂರ್ವ (ಈಗ ಮುಚ್ಚಲಾಗಿದೆ)
- ಮಾಗ್ನೆಸೈಟ್ ಜಂಕ್ಷನ್ (ಇದು ಸ್ಟೇಷನ್ ಅಲ್ಲ, ಇಲ್ಲಿ ರೈಲುಗಳ ಕಾರ್ಯಾಚರಣೆ ನಡೆಯುವ ಸ್ಥಳ)
- ನೆಯ್ಕಾರಪಟ್ಟಿ
- ಕೊಂಡಲಂಪಟ್ಟಿ (ಉದ್ದೇಶಿತ ಸೇಲಂ-ಕರೂರು ಮಾರ್ಗ)
- ಅಯೋಧ್ಯಾಪಟ್ಟಿಣಂ
- ಕರುಪ್ಪುರ್
- ವೀರಾಪಂಡಿ
- ಮೊರಾಪ್ಪುರ್
- ದನಿಶ್‌ಪೇಟ್
- ದಾಸಂಪಟ್ಟಿ
- ನಾಲು ರಸ್ತೆ(ಉದ್ದೇಶಿತ ಮೆಟ್ರೋ ಮಾರ್ಗ)
- ಐದು ರಸ್ತೆಗಳು (ಉದ್ಡೇಶಿದ ಮೆಟ್ರೋದಲ್ಲಿ)
- ಚೆರ್ರಿ ರಸ್ತೆ(ಉದ್ಡೇಶಿದ ಮೆಟ್ರೋದಲ್ಲಿ)
- ಹಸ್ಥಂಪಟ್ಟಿ ರೌಂಡಣ(ಉದ್ಡೇಶಿದ ಮೆಟ್ರೋದಲ್ಲಿ)
- ಗುಹಾಯಿ(ಉದ್ಡೇಶಿದ ಮೆಟ್ರೋದಲ್ಲಿ)
- ಸೆವ್ವಾಯಿಪೇಟ್ಟಾಯ್ (ಉದ್ಡೇಶಿದ ಮೆಟ್ರೋದಲ್ಲಿ)
- ಅಮ್ಮಪೆಟ್ಟಾಯ್(ಉದ್ಡೇಶಿದ ಮೆಟ್ರೋದಲ್ಲಿ)
- ತಾರಾಮಂಗಲಂ(ಉದ್ಡೇಶಿದ ಮೆಟ್ರೋದಲ್ಲಿ)
ವಾಯುಯಾನ/ಸಾರಿಗೆ
[ಬದಲಾಯಿಸಿ]ಸೇಲಂ ವಿಮಾನ ನಿಲ್ದಾಣ- ಧರ್ಮಪುರಿ, ಬೆಂಗಳೂರಿನ ಕಡೆಗೆ NH7ನಲ್ಲಿ ಒಮಲೂರ್ ಸಮೀಪ ಕಮಲಾಪುರದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ದೇಶೀಯ ವಿಮಾನ ನಿಲ್ದಾಣವನ್ನು ಸೇಲಂ ಹೊಂದಿದೆ (ಕೋಡ್ FR3241). 15 ನವೆಂಬರ್ 2009ರ ನಂತರದಲ್ಲಿ, ಕಿಂಗ್‌ಫಿಷರ್ ಏರ್ಲೈನ್‍ನ ವಿಮಾನಗಳು ಸೇಲಂ ಏರ್ಪೋರ್ಟ್‌ನಿಂದ ಚೆನ್ನೈಗೆ ನಿಯತವಾಗಿ ಕಾರ್ಯನಿರ್ವಹಿಸುತ್ತಿವೆ, ಇವು ಹೈದರಾಬಾದ್, ಮುಂಬಯಿ, ದೆಹಲಿ ಮತ್ತು ಕಲ್ಕತ್ತಾಗಳ ವಿಮಾನುಗಳಿಗೆ ಸಂಪರ್ಕ ಕಲ್ಪಿಸುತ್ತವೆ. [೧೪]
ಸೇಲಂ ಏರ್‌ಪೋರ್ಟ್
[ಬದಲಾಯಿಸಿ]- ಮಾರ್ಗಗಳು : 1
- ವಿಮಾನ ನಿಲ್ದಾಣದ ಸಾಮರ್ಥ್ಯ : 50
- ಮಾರ್ಗದ ದಿಶೆ : 04/22
- ಮಾರ್ಗದ ಉದ್ದ :6000 ft (ಸುಗಮವಾದ)
- ಟ್ಯಾಕ್ಸಿಮಾರ್ಗಗಳು : ಬ್ಯಾಕ್‌ಟ್ರ್ಯಾಕಿಂಗ್‌ನಿಂದ ಅರ್ಧದಾರಿ ಮತ್ತು ಮುಂದುವರಿದ ಟ್ಯಾಕ್ಸಿಮಾರ್ಗ A
ಮಾಧ್ಯಮ
[ಬದಲಾಯಿಸಿ]ಮುದ್ರಣ ಮಾಧ್ಯಮ
[ಬದಲಾಯಿಸಿ]ಸೇಲಂ ಆವೃತ್ತಿಯಲ್ಲಿ ದಿನಪತ್ರಿಕೆಗಳು
- ದಿನ ತಂತಿ
- ದಿನಮಲರ್
- ದಿನಕರನ್,
- ದಿನಮಣಿ
- ಕಾಲಾಯ್ ಕಾಥಿರ್ (ಈ ವಾರ್ತಾಪತ್ರಿಕೆಯ ಪ್ರಧಾನ ಕಛೇರಿ ಸೇಲಂನಲ್ಲಿದೆ)
- ಮಾಲಾಯ್ ಮಲರ್
- ತಮಿಳು ಮುರಸು
- ದ ಹಿಂದು (ತ್ರಿಚಿ ಘಟಕದಿಂದ ವಿಶೇಷ ಸೇಲಂ ಆವೃತ್ತಿ)
- ದ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ (ಕೊಯಂಬತ್ತೂರಿನಿಂದ ವಿಶೇಷ ಸೇಲಂ ಆವೃತ್ತಿ)
ದೂರದರ್ಶನ ಚಾನಲ್‌ಗಳು
[ಬದಲಾಯಿಸಿ]ಸೇಲಂ 4 ಸ್ಥಳೀಯ ತಮಿಳು ಚಾನಲ್‌ಗಳನ್ನು ಹೊಂದಿದೆ,
- ಪೋಲಿಮರ್ ಚಾನಲ್
- CTN
- ಪೋಲಿಮರ್ ಮ್ಯೂಸಿಕ್
- CTN ಮ್ಯೂಸಿಕ್
ರೇಡಿಯೋ
[ಬದಲಾಯಿಸಿ]ಸೇಲಂ ಆಲ್ ಇಂಡಿಯಾ ರೇಡಿಯೋವನ್ನು ಹೊಂದಿದೆ, ಅದೆಂದರೆ FM ರೈನ್‌ಬೋ-103.70.. ಕೊಡೈಕೆನಾಲ್ ಕೇಂದ್ರದಿಂದ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಇಲ್ಲಿಂದ ಮರುಪ್ರಸಾರ ಮಾಡಲಾಗುತ್ತದೆ
ಶಿಕ್ಷಣ
[ಬದಲಾಯಿಸಿ]ಪ್ರಮುಖ ನಗರಗಳಿಗೆ [b]ನೇರ ರೈಲುಗಳು[/b] |
---|
|
|
ಮೆಟ್ಟೂರ್ ಡ್ಯಾಮ್ |
|
|
ಈ sectionಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (January 2007) |
ಈ ಹಿಂದೆ ತಮಿಳುನಾಡಿನಲ್ಲಿ ಸೇಲಂ ಜಿಲ್ಲೆಯನ್ನು ಶಿಕ್ಷಣದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಯೆಂದು ಪರಿಗಣಿಸಲಾಗಿತ್ತು ಆದರೆ ಈಗ ಇಲ್ಲಿ ಶಿಕ್ಷಣ ಸಂಸ್ಥೆಗಳು ಬಹಳ ಒಳ್ಳೆಯ ಸಂಖ್ಯೆಯಲ್ಲಿವೆ. 1986ರಲ್ಲಿ ಸ್ಥಾಪಿತವಾದ ಗವರ್ನ್‌ಮೆಂಟ್ ಮೋಹನ್ ಕುಮಾರಲಿಂಗಂ ಮೆಡಿಕಲ್ ಕಾಲೇಜು ಎಂದು ಹೆಸರಾದ ಸರ್ಕಾರಿ ವೈದ್ಯಕೀಯ ಕಾಲೇಜು ಸೇಲಂನಲ್ಲಿದೆ. ಇದನ್ನು MCI ಎಂದು ಗುರುತಿಸಲಾಗುತ್ತದೆ[೧೫], ಒಂದು ವರ್ಷಕ್ಕೆ 75 MBBS ಸೀಟುಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಕಾಲೇಜು ಸೇಲಂನ ಗವರ್ನ್‌ಮೆಂಟ್ ಹೆಡ್ ಕ್ವಾರ್ಟರ್ಸ್ ಹಾಸ್ಪಿಟಲ್‌ಗೆ ಸಂಪರ್ಕಿತವಾಗಿದೆ ಹಾಗೂ ತರಗತಿಗಳು ಆಸ್ಪತ್ರೆಯಿಂದ 10 km ದೂರದಲ್ಲಿರುವ ಕಾಲೇಜಿನಲ್ಲಿ ನಡೆಯುತ್ತವೆ. ಈಗ ಈ ಆಸ್ಪತ್ರೆಯು ಉನ್ನತ ದರ್ಜೆಗೆ ಏರಲಿದೆ [೧೬] ಸುಮಾರು Rs.120 ಕೋಟಿಯ ವೆಚ್ಛದಲ್ಲಿ ಕೇಂದ್ರ ಸರ್ಕಾರದ ಸಹಾಯದಿಂದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಗುಣಮಟ್ಟಕ್ಕೆ ಬದಲಾಗಲಿದೆ. ಹೊಸ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.
ವಿಶ್ವವಿದ್ಯಾಲಯಗಳು
[ಬದಲಾಯಿಸಿ]- ಪೆರಿಯಾರ್ ಯೂನಿವರ್ಸಿಟಿ ಯು ಸೇಲಂನ ಕರುಪ್ಪೂರ್ ಸಮೀಪದ ಒಮಲೂರ್ನಲ್ಲಿದೆ.
- ವಿನಾಯಕ ಮಿಷನ್ಸ್ ಡೀಮ್ಡ್ ಯೂನಿವರ್ಸಿಟಿ , ಸೇಲಂ. 2001ರಲ್ಲಿ ಸ್ಥಾಪನೆಯಾದ ವಿನಾಯಕ ಮಿಷನ್ಸ್ ಯೂನಿವರ್ಸಿಟಿಯು ಭಾರತ ದೇಶದ 48ನೆಯ ವಿಶ್ವವಿದ್ಯಾಲಯವಾಗಿದೆ.
ಕಲೆ ಮತ್ತು ವಿಜ್ಞಾನ
[ಬದಲಾಯಿಸಿ]ಸೇಲಂ ನಗರವು ಅತಿ ಹಳೆಯ ಕಾಲೇಜ್ ಒಂದನ್ನು ಹೊಂದಿದೆ ಅಂದರೆ , 170ವರ್ಷಗಳಷ್ಟು ಹಳೆಯದಾದ ಸೇಲಂ-7ನ ಗವರ್ನ್‌ಮೆಂಟ್ ಆರ್ಟ್ಸ್ ಕಾಲೇಜ್ . ಮೂಲತಃ ಈ ಕಾಲೇಜ್ ಸೇಲಂನ ಮುನಿಸಿಪಲ್ ಕಾರ್ಪೊರೇಶನ್‌ಗೆ ಸೇರಿತ್ತು, 1963-6ರಲ್ಲಿ ಇದು ಮದ್ರಾಸ್ ಸರ್ಕಾರಕ್ಕೆ ವರ್ಗಾವಣೆಯಾಯಿತು ಆಗ ಎಮ್.ಗೋಪಾನ್ ಎಂಬುವವರು ಸೇಲಂ ಮುನಿಸಿಪಾಲಿಟಿಯ ಅಧ್ಯಕ್ಷರಾಗಿದ್ದರು. ಹಾಗಾಗದಿದ್ದರೆ ಸೇಲಂ ಮುನಿಸಿಪಾಲಿಟಿಯು ಕಾಲೇಜನ್ನು ಹೊಂದಿರುವ ಏಕೈಕ ಸ್ಥಳವಾಗುತ್ತಿತ್ತು.
ಶಿಕ್ಷಣ
[ಬದಲಾಯಿಸಿ]1. A.V.S. ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸ್.
2. ಗವರ್ನ್‌ಮೆಂಟ್ ಆರ್ಟ್ಸ್ ಕಾಲೇಜ್ (ಆಟೊನೊಮಸ್), ಸೇಲಂ - 7.
3. ಗವರ್ನ್‌ಮೆಂಟ್ ಆರ್ಟ್ಸ್ ಕಾಲೇಜ್ ಫಾರ್ ವುಮೆನ್, ಸೇಲಂ - 8.
4. ಜಯರಾಂ ಆರ್ಟ್ಸ್ & ಸೈನ್ಸ್ ಕಾಲೇಜ್.
5 ಪದ್ಮವಾಣಿ ಕಾಲೇಜ್ ಆಫ್ ಆರ್ಟ್ಸ್ ಮತ್ತು ಸೈನ್ಸ್.
6. ಶ್ರೀ ಶಕ್ತಿ ಕೈಲಾಶ್ ವುಮೆನ್ಸ್ ಕಾಲೇಜ್.
7. ಸೇಲಂ ಸೌದೇಶ್ವರಿ ಕಾಲೇಜ್ Archived 2010-03-12 ವೇಬ್ಯಾಕ್ ಮೆಷಿನ್ ನಲ್ಲಿ.
8. ಶ್ರೀ ಶಾರದಾ ಕಾಲೇಜ್ ಫಾರ್ ವುಮೆನ್(ಆಟೊನೊಮಸ್)
9 ಶ್ರೀ ಗಣೇಶ್ ಕಾಲೇಜ್.
10 ವೈಶ್ಯ ಕಾಲೇಜ್
==
[ಬದಲಾಯಿಸಿ]- ಗವರ್ನ್‌ಮೆಂಟ್ ಮೆಡಿಕಲ್ ಕಾಲೇಜ್ ಮತ್ತು ಗವರ್ನ್‌ಮೆಂಟ್ ನರ್ಸಿಂಗ್ ಕಾಲೇಜ್
- ಶ್ರೀ ಭರಣಿ ಸ್ಕೂಲ್ ಆಫ್ ನರ್ಸಿಂಗ್
- ಶ್ರೀ ಭರಣಿ ಸ್ಕೂಲ್ ಆಫ್ ನರ್ಸಿಂಗ್
- ವಿನಾಯಕ ಮಿಷನ್ಸ್ ಶಂಕರಾಚಾರಿಯರ್ ಡೆಂಟಲ್ ಕಾಲೇಜ್
- ವಿನಾಯಕ ಮಿಷನ್ಸ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜ್ ಮತ್ತು ಹಾಸ್ಪಿಟಲ್ಸ್
- ವಿನಾಯ ಮಿಷನ್ಸ್ ಅನ್ನಪೂರ್ಣ ಕಾಲೇಜ್ ಆಫ್ ನರ್ಸಿಂಗ್
- ವಿನಾಯಕ ಮಿಷನ್ಸ್ ಕಾಲೇಜ್ ಆಫ್ ಫಾರ್ಮಸಿ
- ವಿನಾಯಕ ಮಿಷನ್ಸ್ ಕಾಲೇಜ್ ಆಫ್ ಫಿಸಿಯೋಥೆರಪಿ
- ATAMA ಆಕ್ಯುಪಂಕ್ಚರ್ ಟ್ರೈನಿಂಗ್ ಸೆಂಟರ್
ಇಂಜಿನಿಯರಿಂಗ್ ಕಾಲೇಜ್‌ಗಳು
[ಬದಲಾಯಿಸಿ]- ಗವರ್ನ್‌ಮೆಂಟ್ ಕಾಲೇಜ್ ಆಫ್ ಇಂಜಿನಿಯರಿಂಗ್ [೧] Archived 2021-05-08 ವೇಬ್ಯಾಕ್ ಮೆಷಿನ್ ನಲ್ಲಿ..
- ನಾಲೆಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ Archived 2010-04-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿನಾಯಕ ಮಿಷನ್ಸ್ ಕಿರುಪಾನಂದ ವಾರಿಯರ್ ಇಂಜಿನಿಯರಿಂಗ್ ಕಾಲೇಜ್
- ಸೋನಾ ಕಾಲೇಜ್ ಆಫ್ ಟೆಕ್ನಾಲಜಿ [೨], 1997ರಲ್ಲಿ ಸ್ಥಾಪನೆಯಾದದ್ದು , ನಗರದ ಹೃದಯ ಭಾಗದಲ್ಲಿದೆ.
- AVS ಇಂಜಿನಿಯರಿಂಗ್ ಕಾಲೇಜ್, ಅಮ್ಮಾಪೇಟ್, ಸೇಲಂ, 2008ರಲ್ಲಿ ಸ್ಥಾಪನೆಯಾಯಿತು.
- ಮಹಾ ಕಾಲೇಜ್ ಆಫ್ ಇಂಜಿನಿಯರಿಂಗ್, 2004ರಲ್ಲಿ ಸ್ಥಾಪನೆಯಾಯಿತು, ನಗರದಿಂದ ಸುಮಾರು 12 ಕಿಮೀ ದೂರದಲ್ಲಿ ಅಯೋದಿಯಾಪಟ್ಟಣಂ ಹತ್ತಿರ ಮಿನ್ನಾಂಪಲ್ಲಿಯಲ್ಲಿದೆ.
- ದ ಕಾವೇರಿ ಇಂಜಿನಿಯರಿಂಗ್ ಕಾಲೇಜ್, ಮೆಚೆರಿ, ಮೆಟ್ಟೂರ್.
- ಗ್ರೀನ್‌ಟೆಕ್ ಕಾಲೇಜ್ ಆಫ್ ಇಂಜಿನಿಯರಿಂಗ್ ಫಾರ್ ವುಮೆನ್, 2008ರಲ್ಲಿ ಸ್ಥಾಪನೆಯಾಗಿದೆ, ಅಟ್ಟೂರು.
- ರವೀಂದ್ರನಾಥ್ ಟ್ಯಾಗೋರ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, 2008ರಲ್ಲಿ ಸ್ಥಾಪನೆಯಾಗಿದೆ, ಅಟ್ಟೂರು.
- ಭಾರತಿಯಾರ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಫಾರ್ ವುಮೆನ್, 2008ರಲ್ಲಿ ಸ್ಥಾಪನೆಯಾಗಿದೆ, ಅಟ್ಟೂರು.
- ನರಸುಸ್ ಸಾರಥಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, 2008ರಲ್ಲಿ ಸ್ಥಾಪನೆಯಾಗಿದೆ, ಒಮಲೂರ್.
- VSA ಸ್ಕೂಲ್ ಆಫ್ ಇಂಜಿನಿಯರಿಂಗ್, ಉಥಮಚೋಳಪುರಂ, ಸೇಲಂ -10.
- SRS ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಸೇಲಂ-636122.
ಪಾಲಿಟೆಕ್ನಿಕ್ ಸಂಸ್ಥೆಗಳು
[ಬದಲಾಯಿಸಿ]- CSI ಪಾಲಿಟೆಕ್ನಿಕ್ ಕಾಲೇಜ್, ಯೆರ್ಕಾಡ್ ಮುಖ್ಯ ರಸ್ತೆ, ಸೇಲಂ.
- MIT ಪಾಲಿಟೆಕ್ನಿಕ್ ಕಾಲೇಜ್, ಕಾವೇರಿ ಕ್ರಾಸ್, ಮೆಟ್ಟೂರ್.
- ಮುರುಗೇಸನ್ ಪಾಲಿಟೆಕ್ನಿಕ್ ಕಾಲೇಜ್, ಕರುಮಪುರಂ, ಸೇಲಂ.
- ದ ಸೇಲಂ ಪಾಲಿಟೆಕ್ನಿಕ್ ಕಾಲೇಜ್, ಪನಾಮರತುಪಟ್ಟಿ ಪಿರಿವು ರಸ್ತೆ, ಸೇಲಂ.
- ತ್ಯಾಗರಾಜರ್ ಪಾಲಿಟೆಕ್ನಿಕ್ ಕಾಲೇಜ್, ಸುರಮಂಗಲಂ, ಸೇಲಂ.
- ಕಾವೇರಿ ಪಾಲಿಟೆಕ್ನಿಕ್ ಕಾಲೇಜ್ ,ಎಮ್.ಕಾಲಿಪಟ್ಟಿ,ಸೇಲಂ.
- ರಾಜಾಜಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ,ಪೆರಿಯಾ ಸೀರಾಗಪಡಿ. ಸೇಲಂ.
ಶಾಲೆಗಳು
[ಬದಲಾಯಿಸಿ]- ಗೋಲ್ಡನ್ ಸ್ಪಾರ್ಕ್ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆ, ಬೆಂಗಳೂರು ಮುಖ್ಯ ರಸ್ತೆ, ಸೇಲಂ-636012.(ಹುಡುಗರ ಹಾಗೂ ಹುಡುಗಿಯರ ಹಾಸ್ಟೆಲ್ ಕಟ್ಟಡಗಳೂ ಜೊತೆಯಲ್ಲಿವೆ)
- ಗವರ್ನ್‌ಮೆಂಟ್ ಹೈಯರ್ ಸೆಕೆಂಡರಿ ಶಾಲೆ, ವಲಸಾಯೂರ್, ಸೇಲಂ-122
- ಜಯ್ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆ, ಪೊನ್ನಂಪೇಟ್, ಸೇಲಂ-636003.
- ವಯ್ಗಾಯ್ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆ, ವಝಾಪಡಿ, ಸೇಲಂ- 636111.
- MAM ಹೈಯರ್ ಸೆಕೆಂಡರಿ and ಮೆಟ್ರಿಕ್ಯುಲೇಷನ್ ಶಾಲೆ, ಮೆಟ್ಟೂರ್ ಡ್ಯಾಮ್.
- ಮಾಂಟ್‌ಫೋರ್ಟ್ ಹೈಯರ್ ಸೆಕೆಂಡರಿ ಶಾಲೆ, ಯೆರ್ಕಾಡ್.
- ಮುನಿಸಿಪಲ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆ, ಅಮ್ಮಾಪೇಟ್, ಸೇಲಂ - 636003.
- SHY ಹೈಯರ್ ಸೆಕೆಂಡರಿ ಶಾಲೆ, ಯೆರ್ಕಾಡ್.
- ಭಾರತಿ ವಿದ್ಯಾಲಯ ಹೈಯರ್ ಸೆಕೆಂಡರಿ ಶಾಲೆ, ಮಾರವನೇರಿ, ಸೇಲಂ.(ಬಾಲಕರಿಗಾಗಿ ಮಾತ್ರ)
- ಗವರ್ನ್‌ಮೆಂಟ್ ಹೈಯರ್ ಸೆಕೆಂಡರಿ ಶಾಲೆ, ಕೊಂಡಲಂಪಟ್ಟಿ, ಸೇಲಂ.
- ಗ್ಲೇಝ್ ಬ್ರೂಕ್ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆ, ರೆಡ್ಡಿಯೂರ್, ಸೇಲಂ.
- ಲಿಟಲ್ ಫ್ಲವರ್ ಹೈಯರ್ ಸೆಕೆಂಡರಿ ಶಾಲೆ, 4 ರಸ್ತೆಗಳು, ಸೇಲಂ.
- ಲಿಟಲ್ ಫ್ಲವರ್ ಮೆಟ್ರಿಕ್ಯುಲೇಷನ್ ಶಾಲೆ, 4 ರಸ್ತೆಗಳು, ಸೇಲಂ.
- ಕ್ರಿಸ್ಟೋಫೆರ್ ಮೆಟ್ರಿಕ್ಯುಲೇಷನ್ ಶಾಲೆ, ಸೇಲಂ
- C.S.I. ಹೈಯರ್ ಸೆಕೆಂಡರಿ ಶಾಲೆ, ಶೇವಾಪೇಟ್, ಸೇಲಂ. (ಬಾಲಕರಿಗಾಗಿ ಮಾತ್ರ)
- C.S.I. ಮೆಟ್ರಿಕ್ಯುಲೇಷನ್ ಪ್ರೌಢಶಾಲೆ, ಶೇವಾಪೇಟ್, ಸೇಲಂ.
- [೩] Archived 2010-03-27 ವೇಬ್ಯಾಕ್ ಮೆಷಿನ್ ನಲ್ಲಿ.ಹೋಲಿ ಕ್ರಾಸ್ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆ, ಸೇಲಂ Archived 2010-03-27 ವೇಬ್ಯಾಕ್ ಮೆಷಿನ್ ನಲ್ಲಿ. (ಬಾಲಕರಿಗಾಗಿ ಮಾತ್ರ)
- ಹೋಲಿ ಏಂಜಲ್ಸ್ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆ, ಫೆಯಿರ್ಲ್ಯಾಂಡ್ಸ್, ಸೇಲಂ.
- ನೋಟ್ರೆಡೇಮ್ ಆಫ್ ಹೋಲಿ ಕ್ರಾಸ್ ಶಾಲೆ [CBSE], ಗುಂಡುಕಲೂರ್, ಸೇಲಂ - 636104.
- ಕ್ಲೂನಿ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆ, ಸೇಲಂ [೪] Archived 2009-08-30 ವೇಬ್ಯಾಕ್ ಮೆಷಿನ್ ನಲ್ಲಿ. (ಬಾಲಕಿಯರಿಗಾಗಿ ಮಾತ್ರ)
- ಗೋಲ್ಡನ್ ಗೇಟ್ಸ್ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆ, ಸೇಲಂ.
- ಗೋಲ್ಡನ್ ಚಾಯ್ಸ್ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆ, ಸೇಲಂ.
- ಗುಗಾಯ್ ಹೈಯರ್ ಸೆಕೆಂಡರಿ ಶಾಲೆ, ಲೈನ್ ಮೆಡು, ಸೇಲಂ.
- ಗುಗಾಯ್ ಮೆಟ್ರಿಕ್ಯುಲೇಷನ್ ಹೈಯರ್ ಶಾಲೆ, ಲೈನ್ ಮೆಡು, ಸೇಲಂ.
- ಶ್ರೀ ವಿದ್ಯಾ ಮಂದಿರ [CBSE], ಅಮ್ಮಾಪೇಟ್, ಸೇಲಂ.
- ಶ್ರೀ ವಿದ್ಯಾ ಮಂದಿರ [CBSE], ಶೇವಾಪೇಟ್, ಸೇಲಂ.
- ಶ್ರೀ ವಿದ್ಯಾ ಮಂದಿರ [CBSE], ಕೊಂಡ್ಲಂಪಟ್ಟಿ, ಸೇಲಂ.
- ವಾಸವಿ ಹೈಯರ್ ಸೆಕೆಂಡರಿ ಶಾಲೆ, ಶೇವಾಪೇಟ್, ಸೇಲಂ.
- ಶ್ರೀ ರಾಮಕೃಷ್ಣ ಶಾರದ ಹೈಯರ್ ಸೆಕೆಂಡರಿ ಶಾಲೆ, ಸೇಲಂ.
- ಶ್ರೀ ಶಾರದ ವಿದ್ಯಾಲಯ, ಸೇಲಂ.
- ಸೌರಾಷ್ಟ್ರ ಪ್ರೌಢಶಾಲೆ, ಸೇಲಂ - 1.
- [೫] Archived 2010-02-05 ವೇಬ್ಯಾಕ್ ಮೆಷಿನ್ ನಲ್ಲಿ.ಸೇಂಟ್.ಜಾನ್ಸ್ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆ, ಸೇಲಂ - 16. Archived 2010-02-05 ವೇಬ್ಯಾಕ್ ಮೆಷಿನ್ ನಲ್ಲಿ. (ಬಾಲಕರಿಗಾಗಿ ಮಾತ್ರ) ಜೊತೆಗೆ ಹಾಸ್ಟೆಲ್ ಇದೆ.
- ಬಾಲ ಭಾರತಿ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆ, ಸೇಲಂ - 7.
- ಸೇಂಟ್ ಪೌಲ್ಸ್ ಹೈಯರ್ ಸೆಕೆಂಡರಿ ಶಾಲೆ, ಸೇಲಂ-07 (ಬಾಲಕರಿಗಾಗಿ ಮಾತ್ರ)
- ಸೇಂಟ್ ಜೋಸೆಫ್ಸ್ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆ, ಲೈನ್ ಮೆಡು, ಸೇಲಂ - 6. (ಬಾಲಕಿಯರಿಗಾಗಿ ಮಾತ್ರ)
- ಸೇಂಟ್ ಮೇರೀಸ್ ಹೈಯರ್ ಸೆಕೆಂಡರಿ ಶಾಲೆ, ಅರಿಸಿಪಾಲ್ಯಂ, ಸೇಲಂ. (ಬಾಲಕಿಯರಿಗಾಗಿ ಮಾತ್ರ)
- ಸೇಂಟ್ ಮೇರೀಸ್ ಮೆಟ್ರಿಕ್ಯುಲೇಷನ್ ಶಾಲೆ, ಅರಿಸಿಪಾಲ್ಯಂ, ಸೇಲಂ. (ಬಾಲಕಿಯರಿಗಾಗಿ ಮಾತ್ರ)
- ಶ್ರೀ ವಿದ್ಯಾ ಮಂದಿರ ಹೈಯರ್ ಸೆಕೆಂಡರಿ ಶಾಲೆ, ಅತ್ತಾಯಂಪಟ್ಟಿ.
- ಶ್ರೀ ಶಾರದ ಬಾಲ ಮಂದಿರ ಹೈಯರ್ ಸೆಕೆಂಡರಿ ಶಾಲೆ (ಬಾಲಕರಿಗಾರಿ ಮಾತ್ರ), ಸೇಲಂ.
- ಸರಸ್ವತಿ ಮೆಟ್ರಿಕ್ ಹೈಯರ್ ಸೆಕೆಂಡರಿ ಶಾಲೆ, ಅಟ್ಟೂರು.
- ಮಾರುತಿ ಹೈಯರ್ ಸೆಕೆಂಡರಿ ಶಾಲೆ, ಮಣಿವಿಝುಂದನ್ (ದಕ್ಷಿಣ), ಅಟ್ಟೂರು.
- ಕ್ಲಾಸಿಕ್ ಮೆಟ್ರಿಕ್ಯುಲೇಷನ್ ಶಾಲೆ - ಸಿರುವಚೂರ್, ಅಟ್ಟೂರು.
- ಹೋಲಿ ಫ್ಲವರ್ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆ, ಸೇಲಂ.
- ಟ್ಯಾಗೂರ್ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆ, ಅಟ್ಟೂರು.
- ಜ್ಯೋತಿ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆ, ಅಮ್ಮಾಪೇಟ್, ಸೇಲಂ.
- ರಾಜ್ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆ, ಪಿ.ಜಿ. ಪಾಲಯಂ, ಅಟ್ಟೂರು.
- ಸಿಂಧಿ ಹಿಂದು ಪ್ರೌಢಶಾಲೆ, ನರಯ ನಗರ. ಸೇಲಂ
- ಗವರ್ನ್‌ಮೆಂಟ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆ, ವಳ್ಳುವರ್ ಪ್ರತಿಮೆಯ ಹತ್ತಿರ, ಸೇಲಂ-1.
ಸೇಂಟ್ ಮೇರೀಸ್ ಸೆಕೆಂಡರಿ ಶಾಲೆಯು ಅದರ ಡೈಮಂಡ್ ಜ್ಯುಬಿಲಿಯನ್ನು ಈ ವರ್ಷ ಆಚರಿಸಿಕೊಳ್ಳುತ್ತಿದೆ.
ಆಕರಗಳು
[ಬದಲಾಯಿಸಿ]- ↑ "Jungle Look". The Hindu. Archived from the original on 2007-10-17. Retrieved 2006-12-09.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "About Salem". Vii InnovatioN. Archived from the original on 2018-09-12. Retrieved 2009-08-29.
- ↑ Falling Rain Genomic s, Inc - ಸೇಲಂ
- ↑ "List of Parliamentary and Assembly Constituencies" (PDF). Tamil Nadu. Election Commission of India. Archived from the original (PDF) on 2006-05-04. Retrieved 2008-10-09.
- ↑ Indian Census
- ↑ "Salem Silver Works". Archived from the original on 2010-05-31. Retrieved 2010-03-29.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Sago Point of the World". Archived from the original on 2010-05-28. Retrieved 2010-03-29.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Dept.Geology and mining, TN". Archived from the original on 2016-03-04. Retrieved 2010-03-29.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Tamilnadu Elcot Website". Elcot. Archived from the original on 2008-09-18. Retrieved 2008-09-26.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Site for IT Park ideally situated". The Hindu. Archived from the original on 2007-09-30. Retrieved 2006-01-09.
- ↑ "Site for IT Park ideally situated". Retrieved 2008-09-26.
- ↑ "Electrical and electronics industries". Government of Tamil Nadu. Archived from the original on 2009-04-21. Retrieved 2010-03-29.
- ↑ "Staff (14 October 2007) "ಸೇಲಂ railway division formed" The Hindu". Archived from the original on 13 ಫೆಬ್ರವರಿ 2009. Retrieved 29 ಮಾರ್ಚ್ 2010.
- ↑ ಆರ್ಕೈವ್ ನಕಲು, archived from the original on 2009-11-25, retrieved 2010-03-29
- ↑ http://www.mciindia.org/apps/search/view_ಕಾಲೇಜ್.asp?ID=226
- ↑ "ಆರ್ಕೈವ್ ನಕಲು". Archived from the original on 2009-06-24. Retrieved 2010-03-29.
ಹೊರಗಿನ ಕೊಂಡಿಗಳು
[ಬದಲಾಯಿಸಿ]- www. Archived 2010-04-09 ವೇಬ್ಯಾಕ್ ಮೆಷಿನ್ ನಲ್ಲಿ.SalemJilla.com The No-1 Portal Of salem City, Tamil Nadu Archived 2010-04-09 ವೇಬ್ಯಾಕ್ ಮೆಷಿನ್ ನಲ್ಲಿ.
- ಸೇಲಂ, ತಮಿಳುನಾಡು ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- Official Website of salem City Municipal Corporation
- NIC website for salem, Tamil Nadu Archived 2021-01-26 ವೇಬ್ಯಾಕ್ ಮೆಷಿನ್ ನಲ್ಲಿ.
- Police and prisons Archived 2007-10-24 ವೇಬ್ಯಾಕ್ ಮೆಷಿನ್ ನಲ್ಲಿ.
- Department of Geology & Mining, Govt. of Tamilnadu Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
ಇವನ್ನೂ ಗಮನಿಸಿ
[ಬದಲಾಯಿಸಿ]- Pages using the Phonos extension
- Pages using the JsonConfig extension
- CS1 errors: redundant parameter
- Short description is different from Wikidata
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- Pages using gadget WikiMiniAtlas
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with unsourced statements from July 2007
- Articles with invalid date parameter in template
- Articles with unsourced statements from January 2008
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles needing additional references from January 2007
- All articles needing additional references
- Articles with Open Directory Project links
- Commons category link is on Wikidata
- ಸೇಲಂ ಜಿಲ್ಲೆ
- ತಮಿಳುನಾಡಿನ ನಗರಗಳು ಮತ್ತು ಪಟ್ಟಣಗಳು
- ಸೇಲಂ ರೈಲ್ವೆ ವಿಭಾಗ
- ಭಾರತೀಯ ರೈಲ್ವೆಯ ವಿಭಾಗಗಳು
- ದಕ್ಷಿಣ ರೈಲ್ವೆ (ಭಾರತ) ಝೋನ್
- ಸೇಲಂ, ತಮಿಳುನಾಡು
- ತಮಿಳುನಾಡಿನ ನಗರಗಳು