ವಿಷಯಕ್ಕೆ ಹೋಗು

ಕರ್ನಾಟಕ ಮಿಲ್ಕ್ ಫೆಡರೇಶನ್ ಲಿಮಿಟೆಡ್(ಕೆ.ಎಮ್.ಎಫ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶಇತಿಹಾಸ[ಬದಲಾಯಿಸಿ]

 • ಅಮುಲ್ ಮಾದರಿಯಲ್ಲಿ ಹಾಲುತಯಾರಿಕಾ (ಡೈರಿ) ಸಹಕಾರಿ ಸಂಘಗಳ ಕ್ರಿಯಾ ಯೋಜನೆಯನ್ನು ೧೯೭೪-೭೫ ರಲ್ಲಿ(from 1974-75) ವಿಶ್ವ ಬ್ಯಾಂಕ್ ನೆರವಿನೊಂದಿಗೆ ಕರ್ನಾಟಕದಲ್ಲಿ ಪ್ರಾರಭಿಸಲಾಯಿತು. ಇದನ್ನು ಆನಂದ್ ಸಹಕಾರಿಸಂಸ್ಥೆ ಮಾದರಿಯನ್ನು ಅನುಸರಿಸಿದೆ . ಗ್ರಾಮಾಂತರ ಡೈರಿ ಸಹಕಾರಿ ಸಂಘಗಳನ್ನು ತಳಮಟ್ಟದಿಂದ ಆರಂಭಿಸಲಾಗಿದೆ.
 • ಜಿಲ್ಲಾಮಟ್ಟದಲ್ಲಿ ಮಧ್ಯವರ್ತಿ ಸಂಗ್ರಹ ಕೇಂದ್ರವಾಗಿ ಸಂಘಗಳ ಒಕ್ಕೂಟವಿದೆ. ಇದು ಹಾಲು ಸಂಗ್ರಹ, ಸಂಸ್ಕರಣೆ, ವಿತರಣೆಗಳನ್ನು ಮಾಡುವುದು.
 • ಕರ್ನಾಟಕ ಮಿಲ್ಕ್ ಫೆಡರೇಶನ್ ರಾಜ್ಯಮಟ್ಟದಲ್ಲಿದ್ದು , ಅದು ಅಪೆಕ್ಸ ಸಂಸ್ಥೆಯಾಗಿದೆ

"ಅಮುಲ್ ಮತ್ತು ನಂದಿನಿ ಹಾಲು ಉತ್ಪನ್ನ ಮಾದರಿ"ಯ ಪರಿಣಾಮ[ಬದಲಾಯಿಸಿ]

ಆಪರೇಷನ್ ಫ್ಲಡ್ ಪ್ರೋಗ್ರಾಂ ಪರಿಣಾಮಗಳಿಗೆ ಇತ್ತೀಚಿನ ಮೌಲ್ಯಮಾಪನ ವರದಿಯಲ್ಲಿ ವಿಶ್ವಬ್ಯಾಂಕ್ ಹೆಚ್ಚಿನ ಮೌಲ್ಯ ನಿರ್ಣಯ ಮಾಡಿದೆ. ಆಪರೇಷನ್ ಫ್ಲಡ್ ಪ್ರೋಗ್ರಾಂ ಅಡಿಯಲ್ಲಿ ೭೦ ಮತ್ತು ೮೦ರ ದಶಕಗಳಲ್ಲಿ ೨೦ ವರ್ಷಗಳ ಕಾಲಾವಧಿಯಲ್ಲಿ ಹೂಡಿಕೆ ಮಾಡಿದ ೨೦ ಶತಕೋಟಿ ರೂ. ಬಂಡವಾಳವು ಭಾರತದ ಹಾಲು ಉತ್ಪಾದನೆಯಲ್ಲಿ ೪೦ ದಶಲಕ್ಷ ಮೆಟ್ರಿಕ್ ಟನ್(MMT)ಹೆಚ್ಚುವರಿ ಕೊಡುಗೆ ನೀಡಿರುವುದು ಸಾಬೀತಾಗಿದೆ. ಅಂದರೆ,ಆಪರೇಷನ್ ಫ್ಲಡ್ ಪ್ರೋಗ್ರಾಂ ಪೂರ್ವದಲ್ಲಿ ೨೦(MMT)ಯಿಂದ ಆಪರೇಷನ್ ಫ್ಲಡ್ ಪ್ರೋಗ್ರಾಂ ಕೊನೆಯಲ್ಲಿ ೬೦(MMT)ಗಿಂತ ಹೆಚ್ಚು ಉತ್ಪಾದನೆಯಾಗಿದೆ. *ಹೀಗೆ,ವಾರ್ಷಿಕವಾಗಿ ೪೦೦ಶತಕೋಟಿ ಹೆಚ್ಚಿದ ಆದಾಯವು ೨೦ ವರ್ಷಗಳ ಕಾಲಾವಧಿಯಲ್ಲಿ ಹೂಡಿಕೆ ಮಾಡಿದ ಬಂಡವಾಳದಿಂದ ಉತ್ಪತ್ತಿಯಾಗಿದೆ. ಇದು ವಿಶ್ವದಲ್ಲಿ ಬೇರಾವುದೇ ಕಡೆಗಿಂತ ವಿಶ್ವಬ್ಯಾಂಕ್ ಆರ್ಥಿಕನೆರವಿನ ಅತ್ಯಂತ ಅನುಕೂಲಕರ ಯೋಜನೆಯಾಗಿದೆ. ಭಾರತದ ಹಾಲು ಉತ್ಪಾದನೆಯ ಹೆಚ್ಚಳ ಮುಂದುವರಿದು ಈಗ ೯೦MMTಯಲ್ಲಿ ನಿಂತಿದ್ದು, ಈ ಪ್ರಯತ್ನಗಳ ಪರಿಣಾಮಗಳನ್ನು ಗಮನಿಸಬಹುದು. ಹಾಲು ಉತ್ಪಾದನೆಯಲ್ಲಿ ನಾಲ್ಕು ಪಟ್ಟು ಹೆಚ್ಚಳವಾದರೂ, ಈ ಅವಧಿಯಲ್ಲಿ ಹಾಲಿನ ದರಗಳಲ್ಲಿ ಕುಸಿತ ಉಂಟಾಗಿಲ್ಲ ಮತ್ತು ಬೆಳವಣಿಗೆ ಮುಂದುವರಿಸಿದೆ.

 • ಈ ಆಂದೋಲನದ ಕಾರಣದಿಂದ,ದೇಶದ ಹಾಲಿನ ಉತ್ಪಾನೆಯು ೧೯೭೧ ಮತ್ತು ೧೯೯೬ರ ನಡುವಿನ ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಯಿತು. ಇದೇ ರೀತಿ ೧೯೭೩ರಲ್ಲಿ ತಲಾವಾರು ಹಾಲಿನ ಸೇವನೆಯು ಪ್ರತಿ ದಿನಕ್ಕೆ ೧೧೧ಗ್ರಾಂಗಳಿಂದ ೨೦೦೦ದಲ್ಲಿ ಪ್ರತಿ ದಿನಕ್ಕೆ ೨೨೨ ಗ್ರಾಂಗಳಿಗೆ ದುಪ್ಪಟ್ಟಾಯಿತು. ಹೀಗೆ,ಈ ಸಹಕಾರ ಸಂಘಗಳು ಭಾರತದ ಗ್ರಾಮೀಣ ಸಮಾಜಗಳ ಆರ್ಥಿಕ ಅಭಿವೃದ್ಧಿಗೆ ಕಾರಣಕರ್ತವಾಗಿದ್ದಲ್ಲದೇ, ಭಾರತದ ಸಮಾಜದ ಆರೋಗ್ಯ ಮತ್ತು ಪೌಷ್ಠಿಕ ಅಗತ್ಯದ ಸುಧಾರಣೆಗೆ ಪ್ರಮುಖ ಅಂಶವನ್ನು ಒದಗಿಸಿದೆ. ಭಾರತದ ಕೆಲವೇ ಉದ್ಯಮಗಳು ಇಂತಹ ಅಗಾಧ ಜನಸಂಖ್ಯೆಯನ್ನು ಒಳಗೊಂಡಂತೆ ಸಮಾಂತರವಾದ ಅಭಿವೃದ್ಧಿಯನ್ನು ಸಾಧಿಸಿವೆ.
 • ಈ ಡೈರಿ ಸಹಕಾರ ಸಂಘಗಳು ವಿಶೇಷವಾಗಿ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನದ ವೃದ್ಧಿಗೆ ಕಾರಣವಾಗಿದೆ.ಪುರುಷರು ಕೃಷಿ ಚಟುವಟಿಕೆಗಳಲ್ಲಿ ನಿರತರಾದ ಸಂದರ್ಭದಲ್ಲಿ ಮಹಿಳೆಯರು ಮೂಲತಃ ಡೈರಿ ಚಟುವಟಿಕೆಗಳಲ್ಲಿ ಒಳಗೊಂಡಿದ್ದರು. ಇದು ಮಹಿಳೆಯರಿಗೆ ನಿಶ್ಚಿತ ಆದಾಯ ಮೂಲವನ್ನು ಒದಗಿಸಿ ಅವರ ಆರ್ಥಿಕ ಸ್ವಾತಂತ್ರ್ಯಕ್ಕೆ ದಾರಿ ಕಲ್ಪಿಸಿತು.
 • ಮೂರು ಹಂತಗಳ ‘ಅಮುಲ್ ಮಾದರಿ’ಯು ದೇಶದಲ್ಲಿ ಶ್ವೇತಕ್ರಾಂತಿಯನ್ನು ಉಂಟುಮಾಡುವಲ್ಲಿ ಕಾರಣಕರ್ತವಾಯಿತು. ಭಾರತದಲ್ಲಿ ಡೈರಿ ಅಭಿವೃದ್ಧಿ ಪರಿಣಾಮದ ಬಗ್ಗೆ ವಿಶ್ವಬ್ಯಾಂಕ್ ಬೆಲೆ ಅಂದಾಜು ವರದಿಯ ಪ್ರಕಾರ, ಆನಂದ್ ನಮೂನೆ ಕೆಳಗಿನ ಅನುಕೂಲಗಳನ್ನು ಪ್ರದರ್ಶಿಸಿದೆ:
 • ಬಡತನ ನಿವಾರಣೆಯಲ್ಲಿ ಡೈರಿಯ ಪಾತ್ರ
 • ಕೃಷಿ ಉತ್ಪಾದನೆಗಿಂತ ಹೆಚ್ಚಾಗಿ ಗ್ರಾಮೀಣ ಅಭಿವೃದ್ದಿಯು ಒಳಗೊಂಡಿದೆಯೆಂಬ ಸತ್ಯ.
 • ಅಬಿವೃದ್ಧಿಯಲ್ಲಿ ರಾಷ್ಟ್ರೀಯ ‘ಮಾಲೀಕತ್ವ‘ದ ಮೌಲ್ಯ.
 • ಬಡತನದ ಕೆಟ್ಟ ಅಂಶಗಳ ಉಪಶಮನಕ್ಕೆ ಅಧಿಕ ಆದಾಯಗಳ ಅನುಕೂಲಕರ ಪರಿಣಾಮಗಳು.
 • ಉದ್ಯೋಗಗಳನ್ನು ಸೃಷ್ಟಿಸುವ ಡೈರಿಯ ಸಾಮರ್ಥ್ಯ
 • ಕಡಿಮೆ ವೆಚ್ಚದಲ್ಲಿ ಬಡವರಿಗೆ ಅನುಕೂಲವಾಗುವ ಡೈರಿಯ ಸಾಮರ್ಥ್ಯ.
 • ಅಭಿವೃದ್ಧಿಗೆ ವಾಣಿಜ್ಯ ಮಾರ್ಗದ ಪ್ರಾಮುಖ್ಯತೆ
 • ಬಹು ಆಯಾಮಗಳ ಪರಿಣಾಮಗಳನ್ನು ಹೊಂದಿರುವ ಏಕ-ಸರಕು ಯೋಜನೆಗಳ ಸಾಮರ್ಥ್ಯ
 • ವಾಣಿಜ್ಯ ಸಂಸ್ಥೆಗಳಿಂದ ಸರ್ಕಾರವನ್ನು ಹೊರಗಿಡುವ ಪ್ರಾಮುಖ್ಯತೆ.* ಕೃಷಿಯಲ್ಲಿ ಮಾರುಕಟ್ಟೆ ವೈಫಲ್ಯದ ಪ್ರಾಮುಖ್ಯತೆ
 • ಭಾಗವಹಿಸುವಿಕೆ ಅವಕಾಶದ ಸಂಸ್ಥೆಗಳ ಶಕ್ತಿ ಮತ್ತು ಸಮಸ್ಯೆಗಳು.
 • ನೀತಿಯ ಪ್ರಾಮುಖ್ಯತೆ


ಕ್ಷೀರೋತ್ಪಾದನೆ /ಹಾಲಿನ ಉತ್ಪಾದನೆಯಲ್ಲಿ ವೃದ್ಧಿ[ಬದಲಾಯಿಸಿ]

 • ಕರ್ನಾಟಕದಲ್ಲಿ ಪ್ರತಿದಿನ ನಂದಿನಿ ಹಾಲು ೫೫ ಲಕ್ಷ ಲೀಟರ್ ಉತ್ಪಾದನೆ ಆಗುತ್ತಿದೆ. ಈ ರಾಜ್ಯದಲ್ಲಿ ಸ್ವಂತ ಡೈರಿ , ಸ್ವಂತ ಹಾಲಿನ ಉತ್ಪಾದನೆ ಇದರಲ್ಲಿ ಸೇರಿಲ್ಲ.ಸುಮಾರು ೩ ಲಕ್ಷ ಕುಟುಂಬಗಳು ಗ್ರಾಮಾಂತರದಲ್ಲಿ ವಾಸಿಸುತ್ತಿವೆ (೬೦%) ಅದರಲ್ಲಿ ಒಂದು ಲಕ್ಷ ಕುಟುಂಬಗಳು ಸ್ವಂತ ಹೈನುಗಾರಿಕೆ ಇಟ್ಟುಕೊಂಡಿದೆ ಎಂದು ಭಾವಿಸಿದರೂ, ಸುಮಾರು ೫ ಲಕ್ಷ ಲೀಟರುಗಳ ಹಾಲು ಉತ್ಪಾದನೆ ಆಗುವುದು. ಸ್ವಂತ ಡೈರಿಗಳ ಉತ್ಒಆದನೆ ಲೆಕ್ಕ ಸಿಕ್ಕಿಲ್ಲ. ಅದೂ ದೊಡ್ಡ ಪ್ರಮಾಣದಲ್ಲಿದೆ . ಎಲ್ಲಾ ಸೇರಿ ಕರ್ನಾಟಕದಲ್ಲಿ ಒಟ್ಟು ೬೦ ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ ಎಂದು ಹೇಳಬಹುದು.
 • ೨೦೧೪ರ ಏಪ್ರಿಲ್ ಲೆಕ್ಕದಂತೆ, ಕರ್ನಾಟಕದಲ್ಲಿ ನಂದಿನಿಹಾಲು ಉತ್ಪಾದನೆಯಲ್ಲಿ ೩೫ ಲಕ್ಷ ಹಾಲು ಆಂತರಿಕವಾದಿ ಖರ್ಚಾಗಿ ೨೦ ಲಕ್ಷ ಲೀಟರ್ ಹಾಲು ಉಳಿಯುತ್ತದೆ . ಅದನ್ನು ಅಸ್ಸಾಂ, ಪಶ್ಚಿಮಬಂಗಾಳ, ಮಹಾರಾಷ್ಟ್ರ , ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ,ಅಲ್ಲದೆ ತಮಿಳುನಾಡು, ಮೊದಲಾದ ರಾಜ್ಯಗಳಿಗೆ ಕಳಿಸಲಾದುವುದು.ಆಂಧ್ರಪ್ರದೇಶ, ಕೇರಳಗಳಿಗೂ ಹಾಲು ಸರಬರಾಜು ಆಗುತ್ತಿದೆ. ಭಾರತೀಯ ಸೇನಾಪಡೆಗೆ, ವರ್ಷಕ್ಕೆ ೭೫ ಲಕ್ಷ ಲೀಟರ್ ಹಾಲು ಕಳಿಸಲಾಗುತ್ತಿದೆ. ಈ ಹಾಲು ಕೆಡದಂತೆ ಇಡಲು ಟೆಟ್ರಾ ಪ್ಯಾಕ್ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಟೆಟ್ರಾ ಪ್ಯಾಕ್ ನಲ್ಲಿ ೯೦ ದಿನಗಳವರೆಗೆ ಕೆಡದಂತೆ ಇಡಬಹುದು.(ಪತ್ರಿಕಾ ಹೇಳಿಕೆ- ಕೆ.ಎಂ.ಎಫ್. ವ್ಯವಸ್ಥಾಪಕ ನಿರ್ದೇಶಕ ಎ.ಎಸ್. ಪ್ರೇಮನಾಥ್- ವರದಿ ಫ್ರಜಾವಾಣಿ-೩೦-೪-೨೦೧೪)
 • ಹಾಲಿನ ಉತ್ಪಾದನೆಯಲ್ಲಿ ಅಧಿಕ ಸಾಧನೆಯಾಗಿದೆ ಎಂದು, 2014ರಲ್ಲಿ 'ಅಸೋಚಾಂ'(ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ೨೦೦೬ ರಿಂದ ೨೦೧೦ ( 2006-2010)ರ ಅವಧಿಯಲ್ಲಿ ಆಂಧ್ರವು ಕ್ಷೀರ ಉತ್ಪಾದನೆಯಲ್ಲಿ ೧೧ಲಕ್ಷ ಟನ್ ಹಾಲು ಉತ್ಪಾದನೆ ಆಗುತ್ತಿದೆ.ದೇಶದಲ್ಲಿ ೩ನೇ ಸ್ಥಾನದಲ್ಲದೆ.
 • ಭಾರತ (ಶೇ.೧೯ರಷ್ಟು ಅಧಿಕ) ೨೦೧೦/ 2010ರಲ್ಲಿ ೧೨೧೧ (1211) ಲಕ್ಷ ಟನ್ ಹಾಲು ಉತ್ಪಾದನೆ ಆಗಿದೆ -

ಉತ್ತರ ಪ್ರದೇಶ ಮೊದಲ ಸ್ಥಾನ -ಶೇ. ೧೭ ರಷ್ಟು ಉತ್ಪಾದನೆ.(ತಲಾ ಪ್ರತಿದಿನ ೨೫೨ಗ್ರಾಂ ಭಾರತದಲ್ಲಿ - ಜಾಗತಿಕ ೫೨೨ ಗ್ರಾಂ)

 • ನ್ಯೂಜಿಲೆಂಡ್ - ಪ್ರತಿದಿನ ೯೭೭೩ ಗ್ರಾಂ.ಐರ್ಲೆಂಡ್ -೩೨೬೦ಗ್ರಾಂ. ಡೆನ್ಮಾರ್ಕ್ -೨೪೧೧ ಗ್ರಾಂ.
 • ಪಂಜಾಬು -೯೩೭ ಗ್ರಾಂ.ಕರ್ನಾಟಕ - ತಲಾ ? ಉತ್ಪಾದನಾಪ್ರಗತಿ ಶೇ ೨೪ರಷ್ಟು.
 • ೨೦೧೯-೨೦ ಕ್ಕೆ ೧೭೭೦ಲಕ್ಷ ಟನ್ ಗುರಿ.
 • ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ -ಸುದ್ದಿಗೋಷ್ಟಿ ೨೨-೪-೨೦೧೪;೨೩-೪-೨೦೧೪ ಪ್ರಜಾವಾಣಿ)
 • ಭಾರತದಲ್ಲಿ ೨೦ದಶಲಕ್ಷ MTಯಿಂದ ೧೦೦ ದಶಲಕ್ಷ MTವರೆಗೆ ಕೇವಲ ೪೦ ವರ್ಷಗಳ ಅವಧಿಯಲ್ಲಿ ಹಾಲಿನ ಉತ್ಪಾದನೆಯ ಗಮನಾರ್ಹ ಬೆಳವಣಿಗೆಯು ಡೈರಿ ಸಹಕಾರ ಆಂದೋಳನದ ಫಲವಾಗಿ ಸಾಧ್ಯವಾಗಿದೆ. ಇದು ಭಾರತವನ್ನು ವಿಶ್ವದಲ್ಲೇ ಇಂದು ಅತ್ಯಧಿಕ ಹಾಲು ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಲು ನೆರವಾಗಿದೆ.(ನೋಡಿ-ಅಮುಲ್)

ಪ್ರತಿ ಆಕಳಿಗೆ ಪ್ರತಿ ವರ್ಷಕ್ಕೆ 12 ಸಾವಿರ ಲೀಟರ್‌[ಬದಲಾಯಿಸಿ]

ವಾರ್ಷಿಕ 12000 ಲೀಟರ್ ಹಾಲುಕೊಡುವ ಇಸ್ರೇಲ್ ಹಸುಗಳು.

ಹಾಲಿನ ಸರಾಸರಿ ಉತ್ಪಾದನೆ ಪರಿಗಣಿಸಿದರೆ ಜಾಗತಿಕ ಮಟ್ಟದಲ್ಲಿ ಇಸ್ರೇಲ್‌ಗೆ ಪ್ರಥಮ ಸ್ಥಾನ. ಇಲ್ಲಿನ ಸರಾಸರಿ ಉತ್ಪಾದನೆ ಪ್ರತಿ ಆಕಳಿಗೆ ಪ್ರತಿ ವರ್ಷಕ್ಕೆ 12 ಸಾವಿರ ಲೀಟರ್‌. ಭಾರತದಲ್ಲಿ ಇದರ ಪ್ರಮಾಣ ಗರಿಷ್ಠ 4 ಸಾವಿರ ಲೀಟರ್‌. ಸಾವಿರಾರು ಆಕಳು ಸಾಕಣೆ ಇರುವ ಡೇರಿಯಲ್ಲಿ ಕೆಲಸಗಾರರು ಆರೆಂಟು ಮಾತ್ರ. ಕಾರ್ಮಿಕರ ಕೊರತೆ ಸಮಸ್ಯೆಗೆ ಸ್ಪಂದಿಸಿದ ಸಂಶೋಧಕರು, ಎಲ್ಲಕ್ಕೂ ಯಂತ್ರ ರೂಪಿಸಿದ್ದಾರೆ. (ದಿ.11/03/2014 ಪ್ರಜಾವಾಣಿ-ಆನಂದತೀರ್ಥ ಪ್ಯಾಟಿ)

೨೦೧೪ರಲ್ಲಿ ಹಾಲಿನ ಉತ್ಪಾದನೆ ಹೆಚ್ಚಿಸಲು ಕ್ರಮ[ಬದಲಾಯಿಸಿ]

 • ಕರ್ನಾಟಕ ರಾಜ್ಯವು ಹಾಲಿನ ಉತ್ಪಾದನೆ ಹೆಚ್ಚಿಸಲು ಕೇಂದ್ರದ ಹೊಸ ಕ್ಷೀರ ಯೋಜನೆ ಜಾರಿಗೆ ತರಲು ಯೋಜಿಸಿದೆ. ಜಾನುವಾರುಗಳಿಗೆ ಕೃತಕ ಗರ್ಭಧಾರಣೆಗೆ ಜರ್ಮನಿಯ ಹೋರಿಯ ವೀರ್ಯವನ್ನು ಕೊಡಲು ಅಮದು ಮಾಡಿಕೊಳ್ಳಲಾಗಿದೆ.ಇದು ಕೇಂದ್ರದ ಯೋಜನೆ ; ಮೊದಲಿಗೆ ಪ್ರಯೋಗಕ್ಕಾಗಿ ಕರ್ನಾಟಕವನ್ನು ಕೇಂದ್ರ ಸರ್ಕಾರ ಆಯ್ದು ಕೊಂಡಿದೆ. ಇದಕ್ಕಾಗಿ ಹಳೆಯ ಮಾದರಿ ಬದಲು ಹೊಸ ವೀರ್ಯ ಕೊಡುವ ೩,೮೫ ಲಕ್ಷ ವಿಶಿಷ್ಟ ನಳಿಕೆಗಳು ಸಿದ್ಧವಾಗಿದೆ.
 • ಈಗಾಗಲೇ ಇರುವ ಹೊಸ ತಳಿಯು ಕೃತಕ ಗರ್ಭಧಾರಣೆಯ ಎಚ್.ಎಫ್ ; ಜರ್ಸಿ ಮೊದಲಾದವು ೧೫ ರಿಂದ ೧೭ ಲೀಟರ್ ಹಾಲು ಕೊಡುತ್ತವೆ . ಆದರೆ ಜರ್ಮನ್ ಹೋರಿಯ ವೀರ್ಯದಿಂದ ಜನಿಸಿದ ಹಸು ೩೦ ರಿಂದ ೩೫ ಲೀಟರ್ ಹಾಲುಹೊಡುತ್ತವೆ. ಈಗಾಗಲೇ ಜರ್ಮನಿಯಿಂದ ೩.೮೫ ಲಕ್ಷ ವೀರ್ಯ ನಳಿಕೆಗಳು ಬಂದಿದ್ದು ಎಲ್ಲಾ ಜಿಲ್ಲಾಕೇಂದ್ರಗಳಿಗೆ ಕಳಿಸಲಾಗಿದೆ.ಈ ತಳಿಯ ಹಸುಗಳು - ಈಗಾಗಲೇ ಇರುವ ತಳಿ ದೊಡ್ಡದು. ಜರ್ಮನಿಯ ಹೊಸ ತಳಿ ಇನ್ನೂ ದೊಡ್ಡದು.
 • ಕರ್ನಾಟಕದ ಹಾಲು ಕೊಡುವ ಮಿಶ್ರ ತಳಿಯ ಗೋವುಗಳು ೨೧.೯೧ ಲಕ್ಷ ಹಸುಗಳಿವೆ. ಈ ಹೊಸ ತಳಿಯ ವೀರ್ಯವನ್ನು ಎಚ್ ಎಫ್ ಹಾಗೂ ಜರ್ಸಿ (೨೫ , ೧೫ ಕಜಿ ಹಾಲುಕೊಉವ) ಹಸುಗಳಿಗೆ ಮಾತ್ರಾ ಕೊಡಲಾಗುವುದು.
 • (ಪಶುಸಾಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ದೇವದಾಸ್ ಹೇಳಿಕೆ - ವರದಿ: ಪ್ರಜಾವಾಣಿ- ೨೭-೪-೨೦೧೪ )

ಮಂಡ್ಯದಲ್ಲಿ ಹಾಲು ಉತ್ಪಾದನೆ[ಬದಲಾಯಿಸಿ]

 • ರಾಜ್ಯದಲ್ಲಿ ನಿತ್ಯ 60 ಲಕ್ಷ ಲೀಟರ್‌ನಷ್ಟು ಹಾಲು ಸಂಗ್ರಹವಾ ಗುತ್ತಿದ್ದು, ಮಂಡ್ಯ ಜಿಲ್ಲೆಯೊಂದ­ರಿಂದಲೇ 6 ಲಕ್ಷಕ್ಕೂ ಹೆಚ್ಚು ಲೀಟರ್‌ ಹಾಲು ಪೂರೈಕೆಯಾಗುತ್ತಿದೆ.(೧೨-೧೦-೨೦೧೪}ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 1,083 ಹಾಲು ಉತ್ಪಾದಕ ಸಹಕಾರ ಸಂಘಗಳಿವೆ. ಅದರಲ್ಲಿ 426 ಮಹಿಳಾ ಸಹಕಾರ ಸಂಘಗಳಿವೆ. ನಿತ್ಯ ಪ್ರತಿ ಸಂಘದಿಂದ 100ರಿಂದ 3 ಸಾವಿರ ಲೀಟರ್‌ವರೆಗೆ ಹಾಲು ಸಂಗ್ರಹ ಮಾಡಲಾಗುತ್ತಿದೆ.
 • ಜಿಲ್ಲೆಯಲ್ಲಿ ಒಟ್ಟು 2,42,237 ಮಂದಿ ಸದಸ್ಯರಾಗಿದ್ದು, ಅದರಲ್ಲಿ 93,823 ಸಣ್ಣ ರೈತರು, 70,545 ಅತಿ ಸಣ್ಣ ರೈತರು, 36,211 ಭೂರಹಿತ ಕಾರ್ಮಿಕರು, 41,658 ಮಂದಿ ಇತರರು ಇದ್ದಾರೆ.
 • ಜಿಲ್ಲೆಯಲ್ಲಿ ಸಂಗ್ರಹವಾಗುವ ಹಾಲಿನಲ್ಲಿ 60 ಸಾವಿರ ಲೀಟರ್ ಹಾಲನ್ನು ನಿತ್ಯ ಕೇರಳಕ್ಕೆ ಸರಬರಾಜು ಮಾಡಲಾಗುತ್ತದೆ. ಕೆಎಂಎಫ್‌ ಮದರ್ ಡೇರಿಗೆ 80 ಸಾವಿರ ಲೀಟರ್‌, ಶಾಲಾ ಮಕ್ಕಳಿಗೆ ಪೂರೈಸುವ ಹಾಲಿನ ಪುಡಿ ತಯಾರಿಕೆಗಾಗಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣಕ್ಕೆ 30 ಸಾವಿರ ಲೀಟರ್‌ ಹಾಲು ಕಳುಹಿಸಲಾಗುತ್ತದೆ.
 • ಬೆಂಗಳೂರಿನ ಕುಂಬಳಗೋಡಿ ನಲ್ಲಿ ರುವ ಮಂಡ್ಯ ಒಕ್ಕೂಟದ ಘಟಕಕ್ಕೆ 55 ಸಾವಿರ ಲೀಟರ್ ‘ಗುಡ್‌ ಲೈಫ್‌’ ಹಾಲಿನ ಪ್ಯಾಕೆಟ್‌ ತಯಾರಿಸಲು ಕಳುಹಿಸಲಾಗುತ್ತಿದೆ. ಇದನ್ನು ಟೆಟ್ರಾ ಪ್ಯಾಕ್‌ ಮಾಡಲಾಗುತ್ತಿದ್ದು, 90 ದಿನದ ವರೆಗೂ ಈ ಹಾಲು ಕೆಡುವುದಿಲ್ಲ.@

ನಂದಿನಿ ಹಾಲಿನ ಉತ್ಪಾದನೆ ಮತ್ತು ವಿತರಣೆ[ಬದಲಾಯಿಸಿ]

 • 28-12-2014(ಪ್ರಜಾವಾಣಿ ವಾರ್ತೆ)
 • ಕರ್ನಾಟಕ ರಾಜ್ಯದಲ್ಲಿ ನಿತ್ಯದ ಹಾಲು ಉತ್ಪಾದನೆ 62 ಲಕ್ಷ ಲೀಟರ್
 • ಇದರಲ್ಲಿ ಹಾಲು, ಮೊಸರು ರೂಪದಲ್ಲಿ ಮಾರಾಟ 40 ಲಕ್ಷ ಲೀಟರ್
 • ಉಳಿದ 22 ಲಕ್ಷ ಲೀ.ನಲ್ಲಿ ಪೌಡರ್‌ ತಯಾರಿಕೆಗೆ 7 ಲಕ್ಷ ಲೀ.
 • ಒಂದು ಲೀಟರ್ ಪೌಡರ್ ಉತ್ಪಾದನಾ ವೆಚ್ಚ ರೂ. 250
 • ಒಂದು ಲೀಟರ್ ಪೌಡರ್ ಮಾರಾಟ ದರ ರೂ. 160/- !!
 • ಕೆಎಂಎಫ್‌ ಅಧ್ಯಕ್ಷರ ಒತ್ತಡ ಹಾಗೂ 13 ಜಿಲ್ಲಾ ಹಾಲು ಒಕ್ಕೂಟಗಳ ಮನವಿಯ ಕಾರಣದಿಂದ ಪ್ರಸ್ತಾವ ಸಿದ್ಧಪಡಿಸಲಾಗಿದೆ ಎಂದು ಮೂಲಗಳು ಹೇಳಿವೆ.
 • 2013 ರ ಸೆಪ್ಟೆಂಬರ್‌ನಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆಯನ್ನು ಏರಿಕೆ ಮಾಡಲಾಗಿತ್ತು.ರಾಜ್ಯ ಸರ್ಕಾರ ರೂ. 4 ಪ್ರೋತ್ಸಾಹಧನ ನೀಡಲು ಆರಂಭಿಸಿದ ಬಳಿಕ ಹಾಲಿನ ಉತ್ಪಾದನೆ ಗಣನೀಯವಾಗಿ ಹೆಚ್ಚಿತ್ತು. ಖಾಸಗಿ ಸಂಸ್ಥೆಗಳಿಗೆ ಹಾಲು ನೀಡುತ್ತಿ­ದ್ದವರು ಕೆಎಂಎಫ್ ಗೆ ಹಾಲು ನೀಡ­ಲಾರಂಭಿಸಿದರು.
 • ಈಗ ಬೆಲೆ ಹೆಚ್ಚಿಸಿದರೆ ಹಾಲಿನ ಉತ್ಪಾದನಾ ಪ್ರಮಾಣ ಮತ್ತಷ್ಟು ಹೆಚ್ಚಲಿದೆ. ಮಾರಾಟ ಕುಸಿತ ಆಗಲಿದೆ. ದರ ಹೆಚ್ಚಳದಿಂದ ಸಂಸ್ಥೆ ಮತ್ತಷ್ಟು ನಷ್ಟ ಅನುಭವಿಸಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

೩೦೧೬ ಏಪ್ರಿಲ್'ಗೆ ಉತ್ಪಾದನೆ ಮತ್ತು ಲಾಭ[ಬದಲಾಯಿಸಿ]

 • 2015-2016 ರಲ್ಲಿ ಸಾಲಿನಲ್ಲಿ ಕೆಎಂಎಫ್‌ ರೂ.3,500 ಕೋಟಿ ವಹಿವಾಟು ನಡೆಸಿದೆ. ಎಲ್ಲ ಹಾಲು ಒಕ್ಕೂಟಗಳೂ ಸೇರಿ ವಹಿವಾಟಿನ ಮೊತ್ತ ರೂ.7,640 ಕೋಟಿಗೆ ಏರಿದೆ. ಈ ಒಕ್ಕೂಟಗಳು ರೂ.40 ಕೋಟಿ ಲಾಭ ಗಳಿಸಿವೆ.
 • 2014–15ನೇ ಸಾಲಿನಲ್ಲಿ ಕೆಎಂಎಫ್‌ ರೂ.100 ಕೋಟಿ ನಿವ್ವಳ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭ ಸ್ವಲ್ಪ ಕಡಿಮೆ ಆಗಿದೆ. ರೈತರಿಗೆ ₹ 80 ಕೋಟಿ ಸಹಾಯಧನ ನೀಡಿದ್ದು ಇದಕ್ಕೆ ಕಾರಣ.
 • ಕೆಎಂಎಫ್‌ ಬಳಿ 24,977 ಟನ್‌ ಹಾಲಿನ ಪುಡಿ ದಾಸ್ತಾನು ಇದೆ. ಹಾಲಿನ ಪುಡಿಯನ್ನು ಒಂದು ವರ್ಷದವರೆಗೆ ಬಳಸಬಹುದು. ದಾಸ್ತಾನಿರುವ ಪುಡಿ 6 ತಿಂಗಳ ಈಚೆಗೆ ತಯಾರಾದುದು. ಬೇಸಿಗೆಯಲ್ಲಿ ಹಾಲಿನ ಉತ್ಪಾದನೆ ಕಡಿಮೆ ಆಗುತ್ತದೆ. ದೈನಂದಿನ ಹಾಲು ಸಂಗ್ರಹ 73 ಲಕ್ಷ ಟನ್‌ಗಳಿಂದ 60 ಲಕ್ಷ ಟನ್‌ಗಳಿಗೆ ಇಳಿದಿದೆ. ನಿತ್ಯ ಸರಾಸರಿ 3.5 ಲಕ್ಷ ಲೀಟರ್‌ಗೆ ಹೆಚ್ಚುವರಿ ಹಾಲಿನಿಂದ ಪುಡಿಯನ್ನು ತಯಾರಿಸಲಾಗುತ್ತಿತ್ತು. ಪ್ರತೀ ಲೀಟರ್‌ ಹಾಲನ್ನು ಪುಡಿಯನ್ನಾಗಿ ಪರಿವರ್ತಿಸಲು ಆಗುವ ವೆಚ್ಚ ರೂ.26/-
 • ಒಂದು ವರ್ಷದಲ್ಲಿ ಉತ್ಪಾದನೆ ಆಗುವ ಹಾಲಿನ ಪುಡಿ. 59 ಸಾವಿರ ಟನ್.
 • ಒಂದು ವರ್ಷದಲ್ಲಿ ಉತ್ಪಾದನೆ ಆಗುವ ಬೆಣ್ಣೆ 36 ಸಾವಿರ ಟನ್.
 • ಕ್ಷೀರಭಾಗ್ಯ ಯೋಜನೆಗೆ ಕೆಎಂಎಪ್ ಸರ್ಕಾರದಿಂದ ಪಡೆಯುವ ಹಣ ರೂ.1248 ಕೋಟಿ.
 • ರಾಜ್ಯವು ಉತ್ಪಾದಕರಿಗೆ ಬಿಡುಗಡೆ ಮಾಡಿರುವ ಸಹಾಯ ಧನ ಗÀÆ.2179 ಕೋಟಿ.[೧]

೨೦೧೭ ಉತ್ಪಾದನೆ[ಬದಲಾಯಿಸಿ]

 • 5 Feb, 2017
 • ರಾಜ್ಯ ಎದುರಿಸುತ್ತಿರುವ ಭೀಕರ ಬರಗಾಲದಲ್ಲೂ ಹೈನುಗಾರಿಕೆ ನೆಚ್ಚಿಕೊಂಡಿರುವ ನಾಡಿನ ರೈತರು ಉತ್ತಮ ಹಣ ಸಂಪಾದನೆ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ, ಬರದ ಮಧ್ಯೆಯೂ ಹಾಲಿನ ಉತ್ಪಾದನೆ ಕುಸಿಯದೇ ಇಳುವರಿ ಹೆಚ್ಚುತ್ತಿರುವುದು. ಬರದಿಂದಾಗಿ ನೀರು, ಮೇವಿನ ಕೊರತೆಯ ಇದ್ದರೂ ಹಸುಗಳು ಹೆಚ್ಚಿನ ಪ್ರಮಾಣದಲ್ಲಿ ಹಾಲು ನೀಡಲು ಸಾಧ್ಯವಾಗಿರುವುದು ಪಶು ಆಹಾರದಲ್ಲಿ ಬದಲಿಸಿರುವ ಸೂತ್ರ! ‘ಬರದಿಂದಾಗಿ ದೇಶದ ಬಹುತೇಕ ಭಾಗಗಳಲ್ಲಿ ಹಾಲಿನ ಇಳುವರಿ ಕಡಿಮೆ ಆಗಿದೆ. ಆದರೆ, ರಾಜ್ಯದಲ್ಲಿ ಮಾತ್ರ ಹಾಲಿನ ಉತ್ಪಾದನೆ ಹೆಚ್ಚಾಗಿದೆ. ಇದಕ್ಕೆ ಪಶು ಆಹಾರದ ಸೂತ್ರ ಬದಲಾಯಿಸಿರುವುದೇ ಕಾರಣ’ ಎನ್ನುತ್ತಾರೆ ಎನ್‌ಡಿಆರ್‌ಐನ ವಿಜ್ಞಾನಿ ಡಾ. ಬಂದ್ಲಾ ಶ್ರೀನಿವಾಸ್‌.( ಪಶು ಆಹಾರಕ್ಕೆ ಬಳಸುತ್ತಿದ್ದ ಕಚ್ಚಾ ಪದಾರ್ಥಗಳ ಬಳಕೆಯ ಪ್ರಮಾಣವನ್ನು ಬದಲಾಯಿಸಿದರು. ಈ ಹಿಂದಿನ ಫಾರ್ಮುಲಾ ಪ್ರಕಾರ, ಅಕ್ಕಿ ತೌಡು(ಎಣ್ಣೆ ಸಹಿತ) ಶೇ 40 ರಿಂದ ಶೇ 51, ಮುಸುಕಿನ ಜೋಳ ಶೇ 6 ರಿಂದ ಶೇ 18, ಅಕ್ಕಿ ತೌಡು(ಎಣ್ಣೆ ಸಹಿತ) ಶೇ 8, ಎಣ್ಣೆ ಬೀಜದ ಹಿಂಡಿ ಶೇ 6 ಇತ್ತು.‘ಹೊಸ ಸೂತ್ರದಲ್ಲಿ ಅಕ್ಕಿ ತೌಡು(ಎಣ್ಣೆ ರಹಿತ) ಶೇ 10, ಮುಸುಕಿನ ಜೋಳ ಶೇ 40, ಅಕ್ಕಿ ತೌಡು (ಎಣ್ಣೆ ಸಹಿತ) ಶೇ 5 ಮತ್ತು ಎಣ್ಣೆ ಬೀಜದ ಹಿಂಡಿ ಶೇ 11 ಮಿಶ್ರಣ ಮಾಡಲಾಗುತ್ತಿದೆ’ ಎಂದು ಮತ್ತೊಬ್ಬ ಪಶು ಆಹಾರ ತಜ್ಞ ಡಾ.ನಾಗೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ಪ್ರತಿ ರೈತನಿಗೆ ದಿನಕ್ಕೆ ಒಂದು ಹಸುವಿನಿಂದ (ಹೆಚ್ಚುವರಿ) ₹ 45, ವರ್ಷಕ್ಕೆ ₹ 16, 200 ಗಳಷ್ಟು ಆದಾಯ ಹೆಚ್ಚಿದೆ.)
 • ಹಾಲಿನ ಇಳುವರಿ:
 • 2014-15 55.68 ಲೀಟರ್;
 • 2015-16: 64.82 ಲೀಟರ್;
 • 3016-17: 66.50 (67.60/ 31-3-2017)[೨]

ಉಲ್ಲೇಖ[ಬದಲಾಯಿಸಿ]

 1. [೧]
 2. ಹೊಸ ‘ಆಹಾರ ಸೂತ್ರ’ದ ಚಮತ್ಕಾರ!;ಎಸ್‌. ರವಿಪ್ರಕಾಶ್‌;5 Feb, 2017