ಅಮುಲ್
ಸಂಸ್ಥೆಯ ಪ್ರಕಾರ | Cooperative |
---|---|
ಸ್ಥಾಪನೆ | 1946 |
ಮುಖ್ಯ ಕಾರ್ಯಾಲಯ | Anand, India |
ಪ್ರಮುಖ ವ್ಯಕ್ತಿ(ಗಳು) | Chairman, Kaira District Cooperative Milk Producers' Union Limited. (KDCMPUL) |
ಉದ್ಯಮ | Dairy |
ಉತ್ಪನ್ನ | See complete products listing. |
ಆದಾಯ | INR (Indian Rupee) 67.11 billion, $1.33 billion USD (in 2008-09) |
ಉದ್ಯೋಗಿಗಳು | 735 employees of Marketing Arm. However, real pool consist of 2.8 million milk producers |
ಜಾಲತಾಣ | www.amul.com |
ಅಮುಲ್ ಎಂದರೆ (ಸಂಸ್ಕೃತದಲ್ಲಿ "ಬೆಲೆಕಟ್ಟಲಾಗದ್ದು") ಸಂಸ್ಕೃತದ "ಅಮೂಲ್ಯ"(ಅರ್ಥ ಬೆಲೆಬಾಳುವ)ಪದದಿಂದ ಹುಟ್ಟಿದ ವ್ಯಾಪಾರ ಮುದ್ರೆ "ಅಮುಲ್" ಹೆಸರನ್ನು ಆನಂದ್‌ನ ಗುಣಮಟ್ಟ ನಿಯಂತ್ರಣ ತಜ್ಞರೊಬ್ಬರು ಸಲಹೆ ಮಾಡಿದರು.[೧] ೧೯೪೬ರಲ್ಲಿ ರಚನೆಯಾದ ಇದು ಭಾರತದ ಡೈರಿ ಸಹಕಾರ ಸಂಸ್ಥೆಯಾಗಿದೆ. ಇದು ಬ್ರಾಂಡ್(ವ್ಯಾಪಾರ ಮುದ್ರೆ)ನ ಹೆಸರಾಗಿದ್ದು,ಮುಖ್ಯ ಸಹಕಾರ ಸಂಸ್ಥೆಯಾದ ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟ ನಿರ್ವಹಿಸುತ್ತದೆ(GCMMF).ಫ಼ಇದರಲ್ಲಿ ಇಂದು ಭಾರತದ ಗುಜರಾತ್‌ನ ೨.೮ದಶಲಕ್ಷ ಹಾಲು ಉತ್ಪಾದಕರು ಜಂಟಿ ಮಾಲೀಕತ್ವ ಹೊಂದಿದ್ದಾರೆ.[೨] ಅಮುಲ್ ಗುಜರಾತಿನ ಆನಂದ್‌ನಲ್ಲಿ ನೆಲೆಗೊಂಡಿದ್ದು,ಸುದೀರ್ಘಾವಧಿಯಲ್ಲಿ ಸಹಕಾರ ಸಂಸ್ಥೆಯ ಯಶಸ್ಸಿಗೆ ಒಂದು ಉದಾಹರಣೆಯಾಗಿದೆ. ಅಭಿವೃದ್ಧಿಶೀಲ ಆರ್ಥಿಕವ್ಯವಸ್ಥೆಯಲ್ಲಿ ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅತ್ಯುತ್ತಮ ಉದಾಹರಣೆಗಳಲ್ಲಿ ಇದು ಒಂದಾಗಿದೆ.[ಸೂಕ್ತ ಉಲ್ಲೇಖನ ಬೇಕು] ಗುಜರಾತಿನ ರಾಜ್ಯದಲ್ಲಿ ಡೈರಿ ಸಹಕಾರ ಸಂಸ್ಥೆಗಳನ್ನು ಕಂಡಿರುವ ಯಾರಾದರೂ,ವಿಶೇಷವಾಗಿ ಅತ್ಯಂತ ಯಶಸ್ವಿ ಅಮುಲ್ ಎಂದು ಹೆಸರಾದ ಸಹಕಾರ ಸಂಸ್ಥೆಯನ್ನು ಕಂಡಿದ್ದರೆ, ಅಭಿವೃದ್ಧಿಶೀಲ ಪ್ರದೇಶಗಳಲ್ಲಿ ಎಲ್ಲ ಕಡೆಯೂ ಇಂತಹ ಮಾದರಿಯ ಸಾವಿರ ಪಟ್ಟು ಸಂಖ್ಯೆವೃದ್ಧಿಸಲು ಯಾವ ಪ್ರಭಾವಗಳು ಮತ್ತು ಪ್ರೋತ್ಸಾಹಗಳ ಸಂಯೋಜನೆ ಅಗತ್ಯವಿರಬಹುದು ಎಂದು ಸಹಜವಾಗಿ ಆಶ್ಚರ್ಯಪಟ್ಟಿರುತ್ತಾರೆ.[೩] ಅಮುಲ್ ನಮೂನೆ ಯು ಗ್ರಾಮೀಣ ಅಭಿವೃದ್ಧಿಗೆ ವಿಶಿಷ್ಟ ಸೂಕ್ತ ಮಾದರಿ ಎಂದು ಸ್ವತಃ ಸ್ಥಿರಪಡಿಸಿದೆ. ಅಮುಲ್ ಭಾರತದಲ್ಲಿ ಶ್ವೇತ(ಕ್ಷೀರ) ಕ್ರಾಂತಿಯನ್ನು ಹುಟ್ಟುಹಾಕಿದ್ದು,ಇದರಿಂದ ಭಾರತವು ವಿಶ್ವದಲ್ಲೇ ಹಾಲು ಮತ್ತು ಹಾಲಿನ ಉತ್ಪನ್ನಗಳ ಅತ್ಯಂತ ದೊಡ್ಡ ಉತ್ಪಾದಕ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ[ಸೂಕ್ತ ಉಲ್ಲೇಖನ ಬೇಕು]. ಇದು ವಿಶ್ವದ ಅತೀದೊಡ್ಡ ಸಸ್ಯಾಹಾರಿ ಗಿಣ್ಣಿನ ಬ್ರಾಂಡ್ ಕೂಡ ಆಗಿದೆ. [೪]. ಅಮುಲ್ ಭಾರತದಲ್ಲಿ ಅತೀ ದೊಡ್ಡ ಆಹಾರದ ಬ್ರಾಂಡ್ ಎನಿಸಿದೆ ಮತ್ತು ವಿಶ್ವದ ಅತೀದೊಡ್ಡ ಪೊಟ್ಟಣದ ಹಾಲಿನ ಬ್ರಾಂಡ್ ಆಗಿದ್ದು, ೧೦೫೦ ದಶಲಕ್ಷ ಡಾಲರುಗಳ ವಾರ್ಷಿಕ ವಹಿವಾಟು ಹೊಂದಿದೆ.(೨೦೦೬–೦೭) [೫]. ಪ್ರಸಕ್ತ ಸಂಘಗಳಿಂದ ರಚನೆಯಾಗಿರುವ GCMMF ೨.೮ದಶಲಕ್ಷ ಹಾಲು ಉತ್ಪಾದಕ ಸದಸ್ಯರನ್ನು ಹೊಂದಿದ್ದು, ಪ್ರತಿ ದಿನ ಸರಾಸರಿ ೧೦.೧೬ ದಶಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತದೆ. ಭಾರತವಲ್ಲದೇ ಅಮುಲ್ ವಿದೇಶಿ ಮಾರುಕಟ್ಟೆಗಳಾದ ಮಾರಿಷಿಯಸ್, UAE, USA, ಬಾಂಗ್ಲಾದೇಶ್, ಆಸ್ಟ್ರೇಲಿಯ, ಚೀನಾ,ಸಿಂಗಪುರ್ಹಾಂಕಾಂಗ್ ಮತ್ತು ಕೆಲವು ದಕ್ಷಿಣ ಆಫ್ರಿಕಾದ ರಾಷ್ಟ್ರಗಳನ್ನು ಪ್ರವೇಶಿಸಿದೆ. ೧೯೯೪ರಲ್ಲಿ ಜಪಾನಿನ ಮಾರುಕಟ್ಟೆಯನ್ನು ಪ್ರವೇಶಿಸುವ ಅದರ ಪ್ರಯತ್ನ ಯಶಸ್ವಿಯಾಗಿಲ್ಲ. ಆದರೆ ಈಗ ಜಪಾನಿನ ಮಾರುಕಟ್ಟೆಯನ್ನು ಪ್ರವೇಶಿಸಲು ಹೊಸ ಯೋಜನೆಗಳನ್ನು ಹಮ್ಮಿಕೊಂಡಿದೆ.[೬] ಪರಿಗಣಿಸಲಾದ ಇತರೆ ಸಮರ್ಥ ಮಾರುಕಟ್ಟೆಗಳಲ್ಲಿ ಶ್ರೀಲಂಕಾ ಕೂಡ ಸೇರಿದೆ. GCMMFನ ಮಾಜಿ ಅಧ್ಯಕ್ಷ ಡಾ.ವರ್ಗೀಸ್ ಕುರಿಯನ್ ಅಮುಲ್ ಯಶಸ್ಸಿನ ಹಿಂದಿನ ಪ್ರಮುಖ ವ್ಯಕ್ತಿ ಎಂದು ಗುರುತಿಸಲಾಗಿದೆ. ೨೦೦೬ರ ಆಗಸ್ಟ್ ೧೦ರಂದು ಬನಸ್ಕಾಂತ ಸಂಘದ ಅಧ್ಯಕ್ಷ ಪಾರ್ತಿ ಭಾಟೊಲ್ ಅವರು GCMMFಅಧ್ಯಕ್ಷರಾಗಿ ಆಯ್ಕೆಯಾದರು.
GCMMF ಇಂದು
[ಬದಲಾಯಿಸಿ]GCMMF ಭಾರತದ ಅತೀ ದೊಡ್ಡ ಆಹಾರ ಉತ್ಪನ್ನಗಳ ಮಾರಾಟ ವ್ಯವಸ್ಥೆಯ ಸಂಸ್ಥೆಯಾಗಿದೆ.[ಸೂಕ್ತ ಉಲ್ಲೇಖನ ಬೇಕು]. ಇದು ಗುಜರಾತಿನ ಹಾಲು ಸಹಕಾರ ಸಂಘಗಳ ರಾಜ್ಯಮಟ್ಟದ ಸರ್ವೋಚ್ಛ ಸಂಸ್ಥೆಯಾಗಿದ್ದು, ರೈತರಿಗೆ ಲಾಭದಾಯಕ ಆದಾಯ ಒದಗಿಸುವ ಗುರಿ ಹೊಂದಿದೆ ಮತ್ತು ಕೈಗೆಟಕುವ ದರದಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವ ಮೂಲಕ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುತ್ತದೆ. GCMMF ಅಮುಲ್ ಬ್ರಾಂಡ್ ಮಾರಾಟ ಮತ್ತು ನಿರ್ವಹಣೆಯನ್ನು ವಹಿಸುತ್ತದೆ. ೧೯೯೦ರ ಮಧ್ಯಾವಧಿಯಿಂದ ಅಮುಲ್ ಅದರ ಮುಖ್ಯ ವ್ಯವಹಾರಕ್ಕೆ ನೇರವಾಗಿ ಸಂಬಂಧಿಸಿರದ ಕ್ಷೇತ್ರಗಳಿಗೆ ಪ್ರವೇಶಿಸಿತು. ಅಲ್ಪಾವಧಿಯಲ್ಲಿ ದೊಡ್ಡ ಮಾರುಕಟ್ಟೆ ಪಾಲನ್ನು ವಶಕ್ಕೆ ತೆಗೆದುಕೊಂಡಿದ್ದರಿಂದ ಐಸ್ ಕ್ರೀಂ ಕ್ಷೇತ್ರಕ್ಕೆ ಅದರ ಪ್ರವೇಶವನ್ನು ಯಶಸ್ವಿ ಎಂದು ಪರಿಗಣಿಸಲಾಗಿದೆ-ಮುಖ್ಯವಾಗಿ ದರದ ವ್ಯತ್ಯಾಸ ಮತ್ತು ಬ್ರಾಂಡ್ ಹೆಸರು ಇದಕ್ಕೆ ಕಾರಣವಾಗಿದೆ. ಇದು ಪಿಜ್ಜಾ ವ್ಯಾಪಾರಕ್ಕೆ ಕೂಡ ಪ್ರವೇಶಿಸಿ ರೆಸ್ಟೊರೆಂಟ್ ಮಾಲೀಕರಿಗೆ ಮೂಲ ಪಾಕವಿಧಾನವನ್ನು ಒದಗಿಸಿತು. ಉಳಿದ ಮಾಲೀಕರು ೧೦೦ ರೂಪಾಯಿಗಿಂತ ಹೆಚ್ಚಿಗೆ ದರ ವಿಧಿಸುತ್ತಿದ್ದ ಸಂದರ್ಭದಲ್ಲಿ ಪ್ರತಿ ಪಿಜ್ಜಾಗೆ ೩೦ರೂಪಾಯಿಗಳಷ್ಟು ಕಡಿಮೆ ದರದಲ್ಲಿ ಮಾಲೀಕರು ಮಾರಲು ಸಾಧ್ಯವಾಗಿತ್ತು.
ಕಂಪೆನಿಯ ಮಾಹಿತಿ
[ಬದಲಾಯಿಸಿ]ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟ, ಆನಂದ್(GCMMF) ಭಾರತದ ಅತೀ ದೊಡ್ಡ ಆಹಾರ ಉತ್ಪನ್ನಗಳ ಮಾರಾಟ ಸಂಸ್ಥೆಯಾಗಿದೆ. ಇದು ಗುಜರಾತಿನ ಡೈರಿ ಸಹಕಾರ ಸಂಘಗಳ ಮುಖ್ಯ ಸಂಸ್ಥೆಯಾಗಿದೆ. ಈ ರಾಜ್ಯವು ಡೈರಿ(ಕ್ಷೀರಾಗಾರ) ಸಹಕಾರ ಸಂಸ್ಥೆಗಳನ್ನು ಸಂಘಟಿಸುವಲ್ಲಿ ಪ್ರವರ್ತಕವಾಗಿದ್ದು, ನಮ್ಮ ಯಶಸ್ಸನ್ನು ಭಾರತದಲ್ಲಿ ಅನುಕರಣೆ ಮಾಡಿರುವುದಲ್ಲದೇ ವಿಶ್ವದ ಉಳಿದ ರಾಷ್ಟ್ರಗಳಿಗೆ ಮಾದರಿಯಾಗಿದೆ. ಕಳೆದ ಐದೂವರೆ ದಶಕಗಳಲ್ಲಿ ಗುಜರಾತಿನ ಡೈರಿ ಸಹಕಾರ ಸಂಸ್ಥೆಗಳು ಆರ್ಥಿಕ ಜಾಲವನ್ನು ಸೃಷ್ಟಿಸಿದ್ದು, ಈ ಜಾಲವು ಸಹಕಾರ ವ್ಯವಸ್ಥೆ ಮೂಲಕ ಭಾರತ ಮತ್ತು ವಿದೇಶದ ಲಕ್ಷಾಂತರ ಗ್ರಾಹಕರ ಜತೆ ೨ .೮ದಶಲಕ್ಷ ಗ್ರಾಮ ಹಾಲು ಉತ್ಪಾದಕರ ಕೊಂಡಿಯನ್ನು ಕಲ್ಪಿಸಿದೆ. ಇದು ೧೩,೧೪೧ ಗ್ರಾಮ ಡೈರಿ ಸಹಕಾರ ಸಂಘಗಳನ್ನು(VDCS) ಗ್ರಾಮಮಟ್ಟದಲ್ಲಿ ಒಳಗೊಂಡಿದೆ. ಇದು ಜಿಲ್ಲಾಮಟ್ಟದಲ್ಲಿ ೧೩ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳು, ರಾಜ್ಯಮಟ್ಟದಲ್ಲಿ GCMMFಜತೆ ಸಂಯೋಜನೆಗೊಂಡಿದೆ. ಈ ಸಹಕಾರ ಸಂಸ್ಥೆಗಳು ಸರಾಸರಿ ಪ್ರತಿ ದಿನ ೭.೫ದಶಲಕ್ಷ ಲೀಟರ್ ಹಾಲನ್ನು ಅವರ ಉತ್ಪಾದಕ ಸದಸ್ಯರಿಂದ ಸಂಗ್ರಹಿಸುತ್ತಿದ್ದು,ಅವರಲ್ಲಿ ೭೦%ಕ್ಕಿಂತ ಹೆಚ್ಚು ಸಣ್ಣ,ಅತೀ ಸಣ್ಣ ಮತ್ತು ಭೂರಹಿತ ಕಾರ್ಮಿಕರಾಗಿದ್ದು, ಬುಡಕಟ್ಟು ಜನರು ಮತ್ತು ಪರಿಶಿಷ್ಟ ಜಾತಿಗಳಿಗೆ ಸೇರಿದ ಜನರ ಗಣನೀಯ ಜನಸಂಖ್ಯೆ ಇದರಲ್ಲಿ ಸೇರಿದೆ. GCMMF (ಅಮುಲ್)ನ ವಹಿವಾಟು ೨೦೦೮-೦೯ರ ಸಾಲಿನಲ್ಲಿ ರೂ. ೬೭.೧೧ ಶತಕೋಟಿಯಾಗಿತ್ತು. ಇದು ಪ್ರಖ್ಯಾತ ಅಮುಲ್ ಬ್ರಾಂಡ್ ಹೆಸರಿನಲ್ಲಿ ೩೦ ಡೈರಿ ಘಟಕಗಳಲ್ಲಿ ಜಿಲ್ಲಾ ಹಾಲು ಉತ್ಪಾದಕ ಸಂಘಗಳು ತಯಾರಿಸುವ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಈ ಘಟಕಗಳ ಒಟ್ಟು ಸಂಸ್ಕರಣೆ ಸಾಮರ್ಥ್ಯವು ಪ್ರತಿ ದಿನಕ್ಕೆ ೧೧.೬ದಶಲಕ್ಷ ಲೀಟರ್‌ಗಳಾಗಿದ್ದು, ನಾಲ್ಕು ಡೈರಿ ಘಟಕಗಳು ಪ್ರತಿ ದಿನ ಒಂದು ದಶಲಕ್ಷ ಲೀಟರ್‌ಗಳಿಗಿಂತ ಹೆಚ್ಚು ಸಂಸ್ಕರಣೆ ಸಾಮರ್ಥ್ಯವನ್ನು ಒಳಗೊಂಡಿವೆ. ಗುಜರಾತಿನ ರೈತರು ಏಷ್ಯಾದಲ್ಲೇ ಅತೀ ದೊಡ್ಡ ದೇಶೀಯ ಡೈರಿ ಘಟಕ-ಗುಜರಾತಿನ ಗಾಂಧಿನಗರದ ಮದರ್ ಡೈರಿಯನ್ನು ಹೊಂದಿದ್ದು, ಅದು ಪ್ರತಿ ದಿನ ೨.೫ದಶಲಕ್ಷ ಲೀಟರ್ ಹಾಲನ್ನು ನಿರ್ವಹಿಸುವ ಮತ್ತು ಪ್ರತಿದಿನ ೧೦೦ MTಗಳ ಹಾಲಿನ ಪುಡಿಯನ್ನು ಸಂಸ್ಕರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಕಳೆದ ವರ್ಷ, ೩.೧ ಶತಕೋಟಿ ಲೀಟರ್ ಹಾಲನ್ನು GCMMFನ ಸದಸ್ಯ ಸಂಘಗಳು ಸಂಗ್ರಹಿಸಿವೆ. ಹಾಲನ್ನು ಒಣಗಿಸುವ, ಉತ್ಪನ್ನ ತಯಾರಿಕೆ ಮತ್ತು ಜಾನುವಾರು ಮೇವು ತಯಾರಿಕೆಯ ಭಾರೀ ಸಾಮರ್ಥ್ಯಗಳನ್ನು ಅಳವಡಿಸಲಾಗಿದೆ. ಇವೆಲ್ಲ ಉತ್ಪನ್ನಗಳನ್ನು ಅತ್ಯಂತ ನೈರ್ಮಲ್ಯ ಪರಿಸ್ಥಿತಿಗಳಲ್ಲಿ ಉತ್ಪಾದಿಸಲಾಗುತ್ತದೆ. ಸಂಘಗಳ ಎಲ್ಲಾ ಡೈರಿ ಘಟಕಗಳು ISO ೯೦೦೧-೨೦೦೦, ISO ೨೨೦೦೦ ಮತ್ತು HACCP ಪ್ರಮಾಣೀಕೃತವಾಗಿವೆ. GCMMF (ಅಮುಲ್)ನ ಒಟ್ಟು ಗುಣಮಟ್ಟ ನಿರ್ವಹಣೆಯು ಆರಂಭದ ಹಂತದಿಂದ(ಹಾಲು ಉತ್ಪಾದಕ)ದಿಂದ ಹಿಡಿದು, ಮೌಲ್ಯಯುತ ಚಟುವಟಿಕೆಗಳ ಸರಪಣಿವರೆಗೆ ಅದು ಗ್ರಾಹಕರನ್ನು ಮುಟ್ಟುವ ತನಕ ಉತ್ಪನ್ನಗಳ ಗುಣಮಟ್ಟವನ್ನು ಖಾತರಿ ಮಾಡುತ್ತದೆ. ಈ ಅಭಿಯಾನವು ಐವತ್ತೈದು ವರ್ಷಗಳ ಹಿಂದೆ ಆರಂಭವಾದಾಗಿನಿಂದಲೂ,ಗುಜರಾತಿನ ಡೈರಿ ಸಹಕಾರ ಸಂಸ್ಥೆಗಳು ನಮ್ಮ ಗ್ರಾಮೀಣ ಜನರಿಗೆ ಗಮನಾರ್ಹ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯನ್ನು ಉಂಟುಮಾಡಿದೆ. ಡೈರಿ ಸಹಕಾರ ಸಂಸ್ಥೆಗಳು ರೈತರ ಶೋಷಣೆಯನ್ನು ಅಂತ್ಯಗೊಳಿಸುವಲ್ಲಿ ನೆರವಾಗಿವೆ ಮತ್ತು ನಮ್ಮ ಗ್ರಾಮೀಣ ಉತ್ಪಾದಕರು ಅನುಕೂಲ ಪಡೆದಾಗ,ಸಮುದಾಯ ಮತ್ತು ರಾಷ್ಟ್ರ ಕೂಡ ಅನುಕೂಲ ಹೊಂದುತ್ತದೆಂದು ತೋರಿಸಿದ್ದಾರೆ. ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟವನ್ನು ಕೇವಲ ವ್ಯಾಪಾರಿ ಸಂಸ್ಥೆಯೆಂದು ಭಾವಿಸಬಾರದು. ಇದು ಹಾಲು ಉತ್ಪಾದಕರು ಸ್ವತಃ ಸೃಷ್ಟಿಸಿದ ಸಂಸ್ಥೆಯಾಗಿದ್ದು, ಮುಖ್ಯವಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಪ್ರಜಾತಂತ್ರವಾಗಿ ಅವರ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಲು ಸೃಷ್ಟಿಸಲಾಗಿದೆ. ಉದ್ಯಮ ಸಂಸ್ಥೆಗಳು ತಮ್ಮ ಷೇರುದಾರರಿಗೆ ಹಂಚುವ ಸಲುವಾಗಿ ಲಾಭವನ್ನು ಸೃಷ್ಟಿಸುತ್ತವೆ. ಆದರೆ GCMMF ಪ್ರಕರಣದಲ್ಲಿ ಹೆಚ್ಚುವರಿ ಲಾಭವು ಜಿಲ್ಲಾ ಸಂಘಗಳು ಮತ್ತು ಗ್ರಾಮ ಸಂಘಗಳ ಮೂಲಕ ರೈತರಿಗೆ ಪುನಃ ವಾಪಸು ಸೇರುತ್ತದೆ. ರಚನೆಯೊಳಗೆ ಮೌಲ್ಯದ ಸೇರ್ಪಡೆಯಿಂದ ಬಂಡವಾಳ ದ ಪ್ರಸರಣವು ಅಂತಿಮ ಫಲಾನುಭವಿ-ರೈತನಿಗೆ ನೆರವಾಗುತ್ತದ್ದಲ್ಲದೇ ತರುವಾಯ ಗ್ರಾಮ ಸಮುದಾಯದ ಅಭಿವೃದ್ದಿಗೆ ಕೊಡುಗೆ ನೀಡುತ್ತದೆ. ರಾಷ್ಟ್ರವನ್ನು ನಿರ್ಮಿಸಲು ಅಮುಲ್ ಮಾದರಿ ಸಹಕಾರ ಸಂಘಗಳು ನಿರ್ಮಿಸಿದ ಅತ್ಯಂತ ಗಮನಾರ್ಹ ಕೊಡುಗೆ ಇದಾಗಿದೆ.
ಅಮುಲ್ ಹುಟ್ಟು ಮತ್ತು ಭಾರತದ ಡೈರಿ ಸಹಕಾರ ಆಂದೋಳನದ ಬೆಳವಣಿಗೆ
[ಬದಲಾಯಿಸಿ]ಆನಂದ್‌ನಲ್ಲಿ ಅಮುಲ್ ಹುಟ್ಟಿಕೊಂಡಿದ್ದು, ರಾಷ್ಟ್ರದಲ್ಲಿ ಸಹಕಾರ ಡೈರಿ ಅಭಿಯಾನಕ್ಕೆ ಉತ್ತೇಜನ ಒದಗಿಸಿತು. ಕೈರಾ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘವು ೧೯೪೬ ಡಿಸೆಂಬರ್ ೧೪ರಂದು ನೋಂದಣಿಯಾಯಿತು. ಆನಂದ್(ಗುಜರಾತಿನ ಕೈರಾ ಜಿಲ್ಲೆ)ಎಂದು ಹೆಸರಾದ ಸಣ್ಣ ಪಟ್ಟಣದಲ್ಲಿ ಆಗ ಅಸ್ತಿತ್ವದಲ್ಲಿದ್ದ ಡೈರಿಗಳ ಏಜೆಂಟರು ಅಥವಾ ವ್ಯಾಪಾರಿಗಳಿಂದ ಅತೀ ಸಣ್ಣ ಹಾಲು ಉತ್ಪಾದಕರ ಶೋಷಣೆಗೆ ಪ್ರತಿಕ್ರಿಯೆಯಾಗಿ ಇದನ್ನು ಸ್ಥಾಪಿಸಲಾಯಿತು. ಹಾಲು ಉತ್ಪಾದಕರು ಆನಂದ್‌ನಲ್ಲಿದ್ದ ಕೇವಲ ಒಂದು ಡೈರಿಯಾಗಿದ್ದ ಪೋಲ್ಸೋನ್ ಡೈರಿಗೆ ಹಾಲನ್ನು ಪೂರೈಸಲು ದೂರದವರೆಗೆ ಪ್ರಯಾಣಿಸಬೇಕಿತ್ತು. ಉತ್ಪಾದಕರು ಪಾತ್ರೆಗಳಲ್ಲಿ ದೈಹಿಕವಾಗಿ ಹಾಲನ್ನು ಒಯ್ಯುತ್ತಿದ್ದರಿಂದ ವಿಶೇಷವಾಗಿ ಬೇಸಿಗೆ ಋತುವಿನಲ್ಲಿ ಹಾಲು ಹುಳಿಯಾಗುತ್ತಿತ್ತು. ಈ ಏಜೆಂಟರು ಉತ್ಪಾದನೆ ಮತ್ತು ಋತುವನ್ನು ಅವಲಂಬಿಸಿ ಸ್ವೇಚ್ಛಾಚಾರದಿಂದ ಹಾಲಿನ ದರಗಳನ್ನು ನಿರ್ಧರಿಸುತ್ತಿದ್ದರು. ಹಾಲು ಪದಾರ್ಥವಾಗಿದ್ದು, ಪ್ರತಿಯೊಂದು ಹಸು/ಎಮ್ಮೆಯಿಂದ ದಿನಕ್ಕೆ ಎರಡು ಬಾರಿ ಕರೆದು ಸಂಗ್ರಹಿಸಬೇಕು. ಚಳಿಗಾಲದಲ್ಲಿ ಉತ್ಪಾದಕನ ಬಳಿ ಹೆಚ್ಚುವರಿ/ಮಾರಾಟವಾಗದ ಹಾಲು ಉಳಿಯುತ್ತದೆ ಅಥವಾ ಅದನ್ನು ತೀರಾ ಕಡಿಮೆ ದರಕ್ಕೆ ಮಾರಾಟ ಮಾಡುತ್ತಾನೆ. ಇದಲ್ಲದೇ, ಆ ಅವಧಿಯಲ್ಲಿ ಪೋಲ್ಸನ್ ಡೈರಿಗೆ(ಸರಿಸುಮಾರು ಆ ಅವಧಿಯಲ್ಲಿ ಪೋಲ್ಸನ್ ರಾಷ್ಟ್ರದಲ್ಲೇ ಹೆಸರಾಂತ ಬೆಣ್ಣೆ ಬ್ರಾಂಡ್ ಕಂಪೆನಿಯಾಗಿತ್ತು) ಆನಂದ್‌ನಿಂದ ಹಾಲು ಸಂಗ್ರಹಿಸಿ ಪ್ರತಿಯಾಗಿ ಮುಂಬಯಿ ನಗರಕ್ಕೆ ಪೂರೈಸುವಂತೆ ಸರ್ಕಾರವು ಅದಕ್ಕೆ ಏಕಸ್ವಾಮಿತ್ವದ ಹಕ್ಕುಗಳನ್ನು ನೀಡಿತ್ತು. ಭಾರತವು ೧೯೪೬ರಲ್ಲಿ ಹಾಲು ಉತ್ಪಾದಿಸುವ ರಾಷ್ಟ್ರಗಳ ಪೈಕಿ ಕಳಪೆ ಸ್ಥಾನವನ್ನು ಹೊಂದಿತ್ತು. ಅನ್ಯಾಯದ ಮತ್ತು ಕುತಂತ್ರದ ವ್ಯಾಪಾರ ಪದ್ಧತಿಗಳಿಂದ ಕೋಪಗೊಂಡ ಕೈರಾ ಜಿಲ್ಲೆಯ ರೈತರು ಸರ್ದಾರ್ ವಲ್ಲಭಾಯಿ ಪಟೇಲ್(ಅವರು ನಂತರ ಸ್ವತಂತ್ರ ಭಾರತದ ಪ್ರಥಮ ಉಪಪ್ರಧಾನ ಮಂತ್ರಿ ಮತ್ತು ಗೃಹಸಚಿವರಾಗಿ ಕಾರ್ಯನಿರ್ವಹಿಸಿದರು)ಅವರನ್ನು ಸ್ಥಳೀಯ ರೈತ ಮುಖಂಡ ತ್ರಿಭುವನ್‌ದಾಸ್ ಪಟೇಲ್ ನೇತೃತ್ವದಲ್ಲಿ ಸಂಪರ್ಕಿಸಿದರು. ರೈತರು ಸಹಕಾರ ಸಂಘವನ್ನು ಸ್ಥಾಪಿಸಿಕೊಂಡು ಪೋಲ್ಲನ್‌ಗೆ(ಪೋಲ್ಸನ್ ಕೂಡ ಮುಂಬಯಿ ಹಾಲು ಯೋಜನೆಗೆ ಹಾಲು ಪೂರೈಸುವ ಕೆಲಸವನ್ನೇ ಮಾಡುತ್ತಿತ್ತು ಹಾಗು ಹಾಲು ಉತ್ಪಾದಕರಿಗೆ ಕಡಿಮೆ ದರ ನೀಡುತ್ತಿತ್ತು) ಹಾಲು ಮಾರಾಟ ಮಾಡುವ ಬದಲಿಗೆ ಮುಂಬಯಿ ಹಾಲು ಯೋಜನೆಗೆ ನೇರವಾಗಿ ಹಾಲನ್ನು ಸರಬರಾಜು ಮಾಡುವಂತೆ ಸರ್ದಾರ್ ಪಟೇಲ್ ರೈತರಿಗೆ ಸಲಹೆ ನೀಡಿದರು. ಅವರು ಮೊರಾರ್ಜಿ ದೇಸಾಯಿ(ಬಳಿಕ ಅವರು ಭಾರತದ ಪ್ರಧಾನ ಮಂತ್ರಿಯಾದರು)ಅವರನ್ನು ರೈತರನ್ನು ಸಂಘಟಿಸುವುದಕ್ಕಾಗಿ ಕಳಿಸಿದರು. ೧೯೪೬ರಲ್ಲಿ ಆ ಪ್ರದೇಶದ ರೈತರು ಮತ್ತಷ್ಟು ಶೋಷಣೆಗೆ ಗುರಿಯಾಗುವುದನ್ನು ನಿರಾಕರಿಸಿ ಹಾಲಿನ ಮುಷ್ಕರವನ್ನು ಕೈಗೊಂಡರು. ಹೀಗೆ ೧೯೪೬ರಲ್ಲಿ ಕೈರಾ ಜಿಲ್ಲೆಯಲ್ಲಿ ಹಾಲನ್ನು ಸಂಗ್ರಹಿಸುವ,ಸಂಸ್ಕರಿಸುವ ಕೈರಾ ಜಿಲ್ಲಾ ಸಹಕಾರ ಸಂಘವು ಸ್ಥಾಪಿತವಾಯಿತು. ಹಾಲಿನ ಸಂಗ್ರಹವನ್ನು ವಿಕೇಂದ್ರೀಕರಿಸಲಾಯಿತು. ಬಹುತೇಕ ಉತ್ಪಾದಕರು ಅತೀ ಸಣ್ಣ ರೈತರಾಗಿದ್ದು, ಪ್ರತಿ ದಿನ ೧-೨ಲೀಟರ್ ಹಾಲನ್ನು ಪೂರೈಸಲು ಮಾತ್ರವೇ ಶಕ್ತರಾಗಿದ್ದರು. ಅತೀ ಸಣ್ಣ ಹಾಲು ಉತ್ಪಾದಕರನ್ನು ಸಂಘಟಿಸಲು ಪ್ರತೀ ಗ್ರಾಮದಲ್ಲಿ ಗ್ರಾಮಮಟ್ಟದ ಸಹಕಾರ ಸಂಘಗಳನ್ನು ಸ್ಥಾಪಿಸಲಾಯಿತು. ಸಹಕಾರ ಸಂಘವನ್ನು ಮತ್ತಷ್ಟು ಅಭಿವೃದ್ಧಿ ಮಾಡಲಾಯಿತು ಮತ್ತು ಡಾ.ವಿ.ಕುರಿಯನ್ ಅವರು ಎಚ್.ಎಂ.ದಲಾಯ ಜತೆ ಇದನ್ನು ನಿರ್ವಹಿಸಿದರು. ಕೈರಾ ಸಂಘದ ಪ್ರಥಮ ಆಧುನಿಕ ಡೈರಿಯನ್ನು ಆನಂದ್‌ನಲ್ಲಿ ಸ್ಥಾಪಿಸಲಾಯಿತು(ಇದು ಅದರ ಬ್ರಾಂಡ್ ಹೆಸರಿನಲ್ಲಿ ಅಮುಲ್ ಡೈರಿ ಎಂದು ಜನಪ್ರಿಯವಾಯಿತು). ಸಹಕಾರ ಸಂಘದಲ್ಲಿ ದೇಶೀಯ R&Dಮತ್ತು ತಂತ್ರಜ್ಞಾನ ಅಭಿವೃದ್ಧಿಯಿಂದ ಎಮ್ಮೆಯ ಹಾಲಿನಿಂದ ಕೆನೆತೆಗೆದ ಹಾಲಿನ ಪುಡಿಯ ಯಶಸ್ವಿ ಉತ್ಪಾದನೆಗೆ ದಾರಿಕಲ್ಪಿಸಿತು-ವಿಶ್ವದಲ್ಲೇ ವಾಣಿಜ್ಯ ಪ್ರಮಾಣದಲ್ಲಿ ಈ ರೀತಿಯ ತಯಾರಿಕೆ ಮೊದಲ ಬಾರಿಯಾಗಿತ್ತು. ಭಾರತವು ವಿಶ್ವದಲ್ಲೇ ಅತ್ಯಂತ ದೊಡ್ಡ ಸಂಖ್ಯಾಬಾಹುಳ್ಯದ ಎಮ್ಮೆಗಳನ್ನು ಹೊಂದಿದ್ದರಿಂದ ಭಾರತದಲ್ಲಿ ಆಧುನಿಕ ಡೈರಿ ಉದ್ಯಮಕ್ಕೆ ಅಡಿಪಾಯ ಹಾಕಲಾಯಿತು. ಗುಜರಾತಿನಲ್ಲಿ ಡೈರಿ ಸಹಕಾರ ಆಂದೋಳನದ ಯಶಸ್ಸು ವೇಗವಾಗಿ ಪ್ರಸರಿಸಿತು. ಅಲ್ಪಕಾಲಾವಧಿಯಲ್ಲಿ ಇನ್ನೂ ಐದು ಜಿಲ್ಲಾ ಸಂಘಗಳಾದ ಮೆಹಸಾನಾ, ಬನಸ್ಕಾಂತಾ,ಬರೋಡ,ಸಬರ್‌ಕಾಂತಾ ಮತ್ತು ಸೂರತ್‌ಗಳನ್ನು ಸಂಘಟಿಸಲಾಯಿತು. ಹಾಲು ಉತ್ಪಾದಕ ಶಕ್ತಿಗಳನ್ನು ಒಂದುಗೂಡಿಸಲು ಮತ್ತು ಮಾರುಕಟ್ಟೆಯನ್ನು ವಿಸ್ತರಿಸಿ ಜಾಹೀರಾತು ಹಣದಲ್ಲಿ ಉಳಿಕೆ ಮಾಡುವುದಲ್ಲದೇ, ಹಾಲು ಸಹಕಾರ ಸಂಘಗಳು ಪರಸ್ಪರ ಪೈಪೋಟಿಗೆ ಇಳಿಯದಂತೆ ಗುಜರಾತಿನಲ್ಲಿ ಸರ್ವೋಚ್ಚ ಡೈರಿ ಸಹಕಾರ ಸಂಘಗಳ ಮಾರಾಟ ಸಂಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಹೀಗೆ,೧೯೭೩ರಲ್ಲಿ ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟವು ಸ್ಥಾಪಿತವಾಯಿತು. ೧೯೫೫ರಲ್ಲಿ AMUL ವ್ಯಾಪಾರ ಮುದ್ರೆಯ ಹೆಸರನ್ನು ಸ್ಥಾಪಿಸಿದ ಕೈರಾ ಜಿಲ್ಲೆ ಸಹಕಾರ ಹಾಲು ಉತ್ಪಾದಕರ ಸಂಘವು ವ್ಯಾಪಾರ ಮುದ್ರೆ ಹೆಸರನ್ನು GCMMF (AMUL)ಗೆ ಹಸ್ತಾಂತರಿಸಲು ನಿರ್ಧರಿಸಿತು. GCMMF (AMUL)ಸೃಷ್ಟಿಯೊಂದಿಗೆ [who?] ಗುಜರಾತ್ ಸಹಕಾರ ಸಂಘಗಳ ನಡುವೆ ಸ್ಪರ್ಧೆಯನ್ನು ತಡೆಯಲು ಸಾಧ್ಯವಾಯಿತು ಮತ್ತು ಸಂಯೋಜಿತ ಪ್ರಬಲ ಶಕ್ತಿಯಾಗಿ ಖಾಸಗಿ ವಲಯದ ಜತೆ ಸ್ಪರ್ಧೆಗಿಳಿಯಲಾಯಿತು. GCMMF (AMUL) ರೈತರಿಗೆ ಲಾಭದಾಯಕ ಪ್ರತಿಫಲವನ್ನು ಖಾತರಿ ಮಾಡಿತು ಮತ್ತು AMULಬ್ರಾಂಡ್ ಹೆಸರಿನಲ್ಲಿ ಗ್ರಾಹಕರಿಗೆ ಉತ್ಪನ್ನಗಳನ್ನು ಒದಗಿಸಿತು. AMULನ ಸಂಸ್ಥಾಪಕ ಅಧ್ಯಕ್ಷ ತ್ರಿಭುವನ್‌ದಾಸ್ ಪಟೇಲ್ ನಾಯಕತ್ವ ಮತ್ತು ಕ್ಷೀರ(ಶ್ವೇತ) ಕ್ರಾಂತಿಯ ಪಿತಾಮಹ ಡಾ.ವರ್ಗೀಸ್ ಕುರಿಯನ್ ಅವರ ದೂರದೃಷ್ಟಿಯ ಫಲವಾಗಿ ಇದು ಸಾಧ್ಯವಾಯಿತು. ಕುರಿಯನ್ AMULನಲ್ಲಿ ವೃತ್ತಿಪರ ವ್ಯವಸ್ಥಾಪಕರಂತೆ ಕಾರ್ಯನಿರ್ವಹಿಸಿದರು. ಅಸಂಖ್ಯಾತ ಜನರು ಈ ಆಂದೋಲನಕ್ಕೆ ಕೊಡುಗೆ ಸಲ್ಲಿಸಿದ್ದು,ಇಲ್ಲದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ. ವಿಶ್ವ ಆಹಾರ ಪ್ರಶಸ್ತಿ ಮತ್ತು ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ ಡಾ.ವರ್ಗೀಸ್ ಕುರಿಯನ್ ಭಾರತದ ಶ್ವೇತ ಕ್ರಾಂತಿಯ ರೂವಾರಿಯಾಗಿದ್ದು, ಭಾರತವು ವಿಶ್ವದಲ್ಲೇ ಅತ್ಯಂತ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಲು ನೆರವಾಯಿತು. ಕೈರಾ ಜಿಲ್ಲೆಯಲ್ಲಿ ಡೈರಿ ಸಹಕಾರ ಸಂಘಗಳ ಅಭಿವೃದ್ಧಿ ಮತ್ತು ಅದರ ಯಶಸ್ಸಿನಿಂದ ಉತ್ತೇಜಿತರಾದ ಆಗಿನ ಭಾರತದ ಪ್ರಧಾನ ಮಂತ್ರಿ ಲಾಲ್ ಬಹಾದುರ್ ಶಾಸ್ತ್ರಿ ೧೯೬೪ರಲ್ಲಿ ಆನಂದ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಆನಂದ್ ವಿಧಾನದ ಡೈರಿ ಸಹಕಾರ ಸಂಘಗಳನ್ನು ಭಾರತದಾದ್ಯಂತ ಪುನರಾವರ್ತಿಸುವಂತೆ ಡಾ.ವಿ.ಕುರಿಯನ್ ಅವರಿಗೆ ಸೂಚಿಸಿದರು. ಹೀಗೆ,ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯನ್ನು ರಚಿಸಲಾಯಿತು ಹಾಗು ಭಾರತದಾದ್ಯಂತ ಅಮುಲ್ ಮಾದರಿಯ ಪುನರಾವರ್ತನೆಗೆ ಆಪರೇಷನ್ ಫ್ಲಡ್ ಕಾರ್ಯಕ್ರಮವನ್ನು ಆರಂಭಿಸಲಾಯಿತು. ವಿಶ್ವದ ಅತೀ ದೊಡ್ಡ ಡೈರಿ ಅಭಿವೃದ್ಧಿ ಕಾರ್ಯಕ್ರಮವಾದ ಆಪರೇಷನ್ ಫ್ಲಡ್ ಕಾರ್ಯಕ್ರಮವು ‘ಅಮುಲ್ ಮಾದರಿ‘ ಡೈರಿ ಸಹಕಾರ ಸಂಘಗಳಿಂದ ಸಿಕ್ಕಿದ ಅನುಭವವನ್ನು ಆಧರಿಸಿತ್ತು. ಎಲ್ಲ ಮಟ್ಟಗಳಲ್ಲಿ ಸೌಲಭ್ಯಗಳು ಸಂಪೂರ್ಣವಾಗಿ ರೈತ ಮಾಲೀಕತ್ವದಲ್ಲಿತ್ತು. ಸಹಕಾರ ಸಂಘಗಳು ಮಾರುಕಟ್ಟೆಗಳನ್ನು ನಿರ್ಮಿಸಲು, ಕಚ್ಚಾ ವಸ್ತುಗಳನ್ನು ಒದಗಿಸಲು ಮತ್ತು ಮೌಲ್ಯ ವರ್ಧಿತ ಸಂಸ್ಕರಣೆಯನ್ನು ಸೃಷ್ಟಿಸಲು ಸಮರ್ಥರಾದರು. ಹೀಗೆ ಅಮುಲ್ ಮಾದರಿ ಸಹಕಾರ ಸಂಘಗಳು ಆಧುನಿಕ ತಂತ್ರಜ್ಞಾನಗಳು ಮತ್ತು ವೃತ್ತಿಪರ ಆಡಳಿತವನ್ನು ಬಳಸಿಕೊಂಡು ಕೃಷಿ ಅಭಿವೃದ್ಧಿಯನ್ನು ಉತ್ತೇಜಿಸುವ ಅತೀ ಸೂಕ್ತ ಸಾಂಸ್ಥಿಕ ಶಕ್ತಿಯಾಗಿ ಕಂಡುಬಂದು,ಈ ಮೂಲಕ ಗ್ರಾಮೀಣ ಜನಸಮೂಹಕ್ಕೆ ಉದ್ಯೋಗಾವಕಾಶ ಒದಗಿಸಿದವು ಮತ್ತು ಅಭಿವೃದ್ಧಿಯಾಗದ ಪ್ರದೇಶಗಳಲ್ಲಿ ಬಡತನ ನಿವಾರಣೆ ಮಾಡಿದವು. ಈ ಮಾರ್ಗದಲ್ಲಿ ಭಾರತವು ಈಗಾಗಲೇ ತನ್ನ ಮೇಲುಗೈಯನ್ನು ಪ್ರದರ್ಶಿಸಿದೆ.
ಮೂರು ಹಂತದ "ಅಮುಲ್ ಮಾದರಿ"
[ಬದಲಾಯಿಸಿ]ಅಮುಲ್ ಮಾದರಿಯು ಮೂರು ಹಂತದ ಸಹಕಾರ ರಚನೆಯಾಗಿದೆ. ಈ ರಚನೆಯು ಗ್ರಾಮಮಟ್ಟದಲ್ಲಿ ಡೈರಿ ಸಹಕಾರ ಸೊಸೈಟಿಯನ್ನು ಹೊಂದಿದ್ದು, ಅದು ಜಿಲ್ಲಾ ಮಟ್ಟದಲ್ಲಿ ಹಾಲಿನ ಸಂಘದ ಜತೆ ಸಂಯೋಜನೆಯಾಗಿದ್ದು ,ಹಾಲಿನ ಸಂಘವು ರಾಜ್ಯ ಮಟ್ಟದಲ್ಲಿ ಹಾಲಿನ ಒಕ್ಕೂಟದೊಂದಿಗೆ ಜತೆಗೂಡಿದೆ. ಮೇಲಿನ ಮೂರು ಹಂತದ ರಚನೆಯು ವಿವಿಧ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲು ಸ್ಥಾಪಿಸಲಾಗಿದ್ದು, ಹಾಲಿನ ಸಂಗ್ರಹವನ್ನು ಗ್ರಾಮದ ಡೈರಿ ಸೊಸೈಟಿಯಲ್ಲಿ ಮಾಡಲಾಗುತ್ತಿದ್ದು, ಹಾಲಿನ ಖರೀದಿ ಮತ್ತು ಸಂಸ್ಕರಣೆಯನ್ನು ಜಿಲ್ಲಾ ಹಾಲು ಸಂಘದಲ್ಲಿ ಮತ್ತು ರಾಜ್ಯ ಹಾಲು ಒಕ್ಕೂಟದಲ್ಲಿ ಹಾಲು ಮತ್ತು ಹಾಲು ಉತ್ಪನ್ನಗಳ ಮಾರಾಟವನ್ನು ಮಾಡಲಾಗುವುದು. ಇದು ಆಂತರಿಕ ಸ್ಪರ್ಧೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಮಾತ್ರವಲ್ಲದೇ, ಉತ್ಪಾದನೆ ಹೆಚ್ಚಳದ ಮೂಲಕ ವೆಚ್ಚ ಕಡಿಮೆಯಾಗುವುದನ್ನು ಖಾತರಿ ಮಾಡಲು ನೆರವಾಗುತ್ತದೆ. ಮೇಲಿನ ರಚನೆಯು ಗುಜರಾತಿನ ಅಮುಲ್‌ನಲ್ಲಿ ಮೊದಲು ಹುಟ್ಟಿ, ನಂತರ ಆಪರೇಷನ್ ಫ್ಲಡ್ ಕಾರ್ಯಕ್ರಮದ ಅನ್ವಯ ದೇಶದ ಎಲ್ಲ ಕಡೆ ಪುನರಾವರ್ತನೆಯಾಯಿತು. ಇದು ಅಮುಲ್ ಮಾದರಿ ಅಥವಾ ಡೈರಿ ಸಹಕಾರ ಸಂಘಗಳ ‘ಆನಂದ್ ನಮೂನೆ’ ಎಂದು ಹೆಸರಾಗಿದೆ.
ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಜವಾಬ್ದಾರಿಯಾಗಿದೆ. ಹಾಲಿನ ಖರೀದಿ ಮತ್ತು ಸಂಸ್ಕರಣೆಗೆ ಜವಾಬ್ದಾರಿಯಾಗಿದೆ. ಹಾಲಿನ ಸಂಗ್ರಹಕ್ಕೆ ಜವಾಬ್ದಾರಿಯಾಗಿದೆ. ಹಾಲಿನ ಉತ್ಪಾದನೆಗೆ ಜವಾಬ್ದಾರಿಯಾಗಿದೆ. ೩.೧ ಗ್ರಾಮ ಡೈರಿ ಸಹಕಾರ ಸೊಸೈಟಿ (VDCS) ಸ್ವಯಂ ಬಳಕೆಯ ನಂತರದ ಹೆಚ್ಚುವರಿ ಹಾಲನ್ನು ಹೊಂದಿರುವ ಗ್ರಾಮದ ಹಾಲು ಉತ್ಪಾದಕರು ಒಟ್ಟಿಗೆ ಸೇರಿ ಗ್ರಾಮ ಡೈರಿ ಸಹಕಾರ ಸೊಸೈಟಿ(VDCS)ಯನ್ನು ರಚಿಸಿಕೊಂಡಿದ್ದಾರೆ. ಗ್ರಾಮದ ಡೈರಿ ಸಹಕಾರ ಸಂಘವು ಮೂರು ಹಂತಗಳ ರಚನೆಯ ಮುಖ್ಯ ಸೊಸೈಟಿಯಾಗಿದೆ. ಇದು ಗ್ರಾಮದ ಹಾಲು ಉತ್ಪಾದಕರ ಸದಸ್ಯತ್ವವನ್ನು ಹೊಂದಿದ್ದು,ಚುನಾಯಿತ ಆಡಳಿತ ಸಮಿತಿಯಿಂದ ನಿರ್ವಹಿಸಲಾಗುತ್ತದೆ. ಆಡಳಿತ ಸಮಿತಿಯು ಒಬ್ಬ ಸದಸ್ಯರು, ಒಂದು ವೋಟು ತತ್ವದ ಆಧಾರದ ಮೇಲೆ ಹಾಲು ಉತ್ಪಾದಕರ ೯ರಿಂದ ೧೨ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುತ್ತಾರೆ. ಗ್ರಾಮದ ಸೊಸೈಟಿಯು ದಿನನಿತ್ಯದ ಚಟುವಟಿಕೆಗಳ ನಿರ್ವಹಣೆಗೆ ಕಾರ್ಯದರ್ಶಿಯನ್ನು ನೇಮಕಮಾಡುತ್ತದೆ(ವೇತನ ಪಡೆಯುವ ನೌಕರ ಮತ್ತು ಆಡಳಿತ ಸಮಿತಿಯ ಸದಸ್ಯ ಕಾರ್ಯದರ್ಶಿ). ಕಾರ್ಯದರ್ಶಿಯ ಅವನ/ಅಥವಾ ಅವಳ ದಿನನಿತ್ಯದ ಕೆಲಸಗಳನ್ನು ನಿರ್ವಹಿಸಲು ನೆರವಾಗುವುದಕ್ಕಾಗಿ ಅದು ವಿವಿಧ ಜನರನ್ನು ನೇಮಕ ಮಾಡಿಕೊಳ್ಳುತ್ತದೆ. VDCSನ ಮುಖ್ಯ ಕಾರ್ಯಚಟುವಟಿಕೆಗಳು ಕೆಳಗಿನಂತಿವೆ:
- ಗ್ರಾಮದ ಹಾಲು ಉತ್ಪಾದಕರಿಂದ ಹೆಚ್ಚುವರಿ ಹಾಲನ್ನು ಸಂಗ್ರಹಿಸುವುದು &ಗುಣಮಟ್ಟ ಮತ್ತು ಪ್ರಮಾಣವನ್ನು ಆಧರಿಸಿ ಹಣಪಾವತಿ ಮಾಡುವುದು.
- ಪಶುವೈದ್ಯಕೀಯ ಪ್ರಥಮ ಚಿಕಿತ್ಸೆ ಮುಂತಾದ ಸದಸ್ಯರಿಗೆ ಬೆಂಬಲ ಸೇವೆಗಳು, ಕೃತಕ ಗರ್ಭಧಾರಣೆ ಸೇವೆಗಳು,ಜಾನುವಾರು-ಮೇವು ಮಾರಾಟಗಳು,ಖನಿಜ ಮಿಶ್ರಣ ಮಾರಾಟ, ಮೇವು ಮತ್ತು ಮೇವಿನ ಬೀಜ ಮಾರಾಟ,ಪಶುಸಂಗೋಪನೆ ಮತ್ತು ಡೈರಿ ಮುಂತಾದುವಲ್ಲಿ ತರಬೇತಿ ಮುಂತಾದವು ಸೇರಿವೆ.
- ಗ್ರಾಮದ ಸ್ಥಳೀಯ ಗ್ರಾಹಕರಿಗೆ ದ್ರವ ಹಾಲನ್ನು ಮಾರಾಟಮಾಡುವುದು.
- ಜಿಲ್ಲಾ ಹಾಲಿನ ಸಂಘಕ್ಕೆ ಹಾಲಿನ ಪೂರೈಕೆ ಮಾಡುವುದು.
ಆದ್ದರಿಂದ VDCS ಸ್ವತಂತ್ರ ಅಂಗವಾಗಿ, ಹಾಲು ಉತ್ಪಾದಕರಿಂದ ಸ್ಥಳೀಯವಾಗಿ ನಿರ್ವಹಿಸಲ್ಪಡುತ್ತಿದ್ದು, ಜಿಲ್ಲಾ ಹಾಲು ಉತ್ಪಾದಕರ ಸಂಘ ನೆರವಾಗುತ್ತಿದೆ. ೩.೨ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘ(ಮಿಲ್ಕ್ ಯೂನಿಯನ್) ಸ್ಥಳೀಯ ಹಾಲು ಮಾರಾಟಗಳ ನಂತರ ಹೆಚ್ಚುವರಿ ಹಾಲು ಹೊಂದಿರುವ ಜಿಲ್ಲೆಯ ಗ್ರಾಮ ಸೊಸೈಟಿಗಳು(ಗುಜರಾತಿನ ಪ್ರತಿ ಹಾಲಿನ ಸಂಘಕ್ಕೆ ೭೫ರಿಂದ ೧೬೫೩ಗ್ರಾಮ ಸೊಸೈಟಿಗಳು)ಒಟ್ಟಿಗೆ ಸೇರಿ ಜಿಲ್ಲಾ ಹಾಲು ಸಂಘವನ್ನು ಸ್ಥಾಪಿಸಿಕೊಂಡಿದೆ. ಹಾಲು ಸಂಘವು ಮೂರು ಹಂತದ ರಚನೆಯಲ್ಲಿ ಎರಡನೇ ಹಂತವಾಗಿದೆ. ಇದು ಜಿಲ್ಲೆಯ ಗ್ರಾಮ ಡೈರಿ ಸೊಸೈಟಿಗಳ ಸದಸ್ಯತ್ವ ಹೊಂದಿದ್ದು, ಗ್ರಾಮ ಸೊಸೈಟಿಗಳ ೯ರಿಂದ ೧೮ಚುನಾಯಿತ ಪ್ರತಿನಿಧಿಗಳನ್ನು ಹೊಂದಿರುವ ನಿರ್ದೇಶಕರ ಮಂಡಳಿಯಿಂದ ನಿರ್ವಹಿಸಲ್ಪಡುತ್ತದೆ. ಹಾಲು ಸಂಘವು ದಿನನಿತ್ಯದ ಕಾರ್ಯಚಟುವಟಿಕೆಗಳ ನಿರ್ವಹಣೆಗೆ ವೃತ್ತಿಪರ ವ್ಯವಸ್ಥಾಪಕ ನಿರ್ದೇಶಕ(ವೇತನದ ನೌಕರ ಮತ್ತು ಮಂಡಳಿಯ ಸದಸ್ಯ ಕಾರ್ಯದರ್ಶಿ)ರನ್ನು ನೇಮಕ ಮಾಡುತ್ತದೆ. ವ್ಯವಸ್ಥಾಪಕ ನಿರ್ದೇಶಕರಿಗೆ ಅವರ ದಿನನಿತ್ಯದ ಕರ್ತವ್ಯಗಳನ್ನು ನಿರ್ವಹಿಸುವುದಕ್ಕೆ ನೆರವಾಗಲು ಇದು ವಿವಿಧ ಜನರನ್ನು ನೇಮಿಸಿಕೊಳ್ಳುತ್ತದೆ. ಹಾಲು ಸಂಘದ ಮುಖ್ಯ ಕಾರ್ಯಚಟುವಟಿಕೆಗಳು ಕೆಳಗಿನಂತಿವೆ:
- ಜಿಲ್ಲೆಯ ಗ್ರಾಮ ಡೈರಿ ಸೊಸೈಟಿಗಳಿಂದ ಹಾಲಿನ ಖರೀದಿ
- VDCSನಿಂದ ಹಾಲಿನ ಸಂಘಕ್ಕೆ ಹಸಿ ಹಾಲಿನ ಸಾಗಣೆ ವ್ಯವಸ್ಥೆ ಮಾಡುವುದು.
- ಪಶುವೈದ್ಯಕೀಯ ಆರೈಕೆ ಮುಂತಾದ ಉತ್ಪಾದಕರಿಗೆ, ಕೃತಕ ಗರ್ಭದಾರಣೆ ಸೇವೆಗಳು,ಜಾನುವಾರು ಮೇವು ಮಾರಾಟಗಳು,ಖನಿಜ ಮಿಶ್ರಣ ಮಾರಾಟಗಳು, ಮೇವು &ಮೇವು ಬೀಜ ಮಾರಾಟಗಳು ಮುಂತಾದುವಕ್ಕೆ ಕಚ್ಚಾಪದಾರ್ಥಗಳ ಸೇವೆಯನ್ನು ಒದಗಿಸುವುದು.
- ಸಹಕಾರ ಅಭಿವೃದ್ಧಿ,ಪಶು ಸಂಗೋಪನೆ ಮತ್ತು ಡೈರಿಯಲ್ಲಿ ಹಾಲು ಉತ್ಪಾದಕರಿಗೆ ತರಬೇತಿ ನಿರ್ವಹಿಸುವುದು ಮತ್ತು VDCSಸಿಬ್ಬಂದಿ &ಆಡಳಿತ ಸಮಿತಿ ಸದಸ್ಯರಿಗೆ ವಿಶೇಷ ಕೌಶಲ್ಯ ಅಭಿವೃದ್ಧಿ ಮತ್ತು ನಾಯಕತ್ವ ಅಭಿವೃದ್ಧಿ ತರಬೇತಿಯನ್ನು ನಿರ್ವಹಿಸುವುದು.
- VDCS ಗೆ ಆಡಳಿತ ಬೆಂಬಲದ ಜತೆ ಅದರ ಚಟುವಟಿಕೆಗಳ ನಿಯಮಿತ ಮೇಲ್ವಿಚಾರಣೆಯನ್ನು ಒದಗಿಸುವುದು.
- ಗ್ರಾಮಗಳಿಂದ ಸ್ವೀಕರಿಸಿದ ಹಾಲನ್ನು ಸಂಸ್ಕರಿಸಲು ಶೀತಲ ಕೇಂದ್ರಗಳನ್ನು ಮತ್ತು ಡೈರಿ ಘಟಕಗಳನ್ನು ಸ್ಥಾಪಿಸುವುದು.
- ಜಿಲ್ಲೆಯಲ್ಲಿ ದ್ರವರೂಪದ ಹಾಲು &ಹಾಲಿನ ಉತ್ಪನ್ನಗಳನ್ನು ಮಾರುವುದು.
- ಹಾಲನ್ನು ವಿವಿಧ ಹಾಲು & ಹಾಲು ಉತ್ಪನ್ನಗಳಿಗೆ ರಾಜ್ಯ ಮಾರಾಟ ಒಕ್ಕೂಟದ ಅಗತ್ಯಗಳಿಗೆ ಅನುಗುಣವಾಗಿ ಸಂಸ್ಕರಿಸುವುದು.
- ಹಾಲಿನ ಉತ್ಪಾದಕರಿಗೆ ಪಾವತಿ ಮಾಡುವ ಹಾಲಿನ ದರಗಳ ಬಗ್ಗೆ ಮತ್ತು ಸದಸ್ಯರಿಗೆ ಒದಗಿಸುವ ಬೆಂಬಲ ಸೇವೆಗಳ ದರಗಳ ಬಗ್ಗೆ ನಿರ್ಧರಿಸುವುದು.
೩.೩ ರಾಜ್ಯ ಸಹಕಾರ ಹಾಲು ಒಕ್ಕೂಟ(ಒಕ್ಕೂಟ) ರಾಜ್ಯದ ಹಾಲಿನ ಸಂಘಗಳು ರಾಜ್ಯ ಸಹಕಾರ ಹಾಲು ಒಕ್ಕೂಟವಾಗಿ ಒಂದುಗೂಡಿದೆ. ಮೂರು ಹಂತದ ರಚನೆಯ ಅನ್ವಯ ಒಕ್ಕೂಟವು ಪ್ರಮುಖ ಹಂತವಾಗಿದೆ. ಇದು ರಾಜ್ಯದ ಎಲ್ಲ ಸಹಕಾರ ಹಾಲು ಸಂಘಗಳ ಸದಸ್ಯತ್ವ ಹೊಂದಿದ್ದು, ಪ್ರತಿ ಹಾಲು ಸಂಘದ ಒಬ್ಬ ಚುನಾಯಿತ ಪ್ರತಿನಿಧಿಯನ್ನು ಹೊಂದಿರುವ ನಿರ್ದೇಶಕ ಮಂಡಳಿಯು ಆಡಳಿತ ನಿರ್ವಹಿಸುತ್ತದೆ. ರಾಜ್ಯ ಒಕ್ಕೂಟವು ದಿನನಿತ್ಯದ ಕಾರ್ಯಚಟುವಟಿಕೆಗಳ ನಿರ್ವಹಣೆಗೆ ಆಡಳಿತ ನಿರ್ದೇಶಕರನ್ನು(ವೇತನ ಪಡೆಯುವ ನೌಕರ ಮತ್ತು ಮಂಡಳಿಯ ಸದಸ್ಯ ಕಾರ್ಯದರ್ಶಿ) ನೇಮಕ ಮಾಡುತ್ತದೆ. ಅವರ ದಿನನಿತ್ಯದ ಕರ್ತವ್ಯಗಳನ್ನು ಸಾಧಿಸಲು ವ್ಯವಸ್ಥಾಪಕ ನಿರ್ದೇಶಕರಿಗೆ ನೆರವಾಗಲು ಅದು ವಿವಿಧ ಜನರನ್ನು ನೇಮಕ ಮಾಡಿಕೊಳ್ಳುತ್ತದೆ. ಒಕ್ಕೂಟದ ಮುಖ್ಯ ಕಾರ್ಯಚಟುವಟಿಕೆಗಳು ಕೆಳಗಿನಂತಿವೆ:
- ಹಾಲಿನ ಸಂಘಗಳು ಸಂಸ್ಕರಿಸಿದ/ಉತ್ಪಾದಿಸಿದ ಹಾಲು&ಹಾಲಿನ ಉತ್ಪನ್ನಗಳ ಮಾರಾಟ.
- ಹಾಲು & ಹಾಲಿನ ಉತ್ಪನ್ನಗಳ ಮಾರಾಟಕ್ಕೆ ವಿತರಣೆ ಜಾಲವನ್ನು ಸ್ಥಾಪಿಸುವುದು.
- ಹಾಲಿನ ಸಂಘಗಳಿಂದ ಮಾರುಕಟ್ಟೆಗೆ ಹಾಲು& ಹಾಲಿನ ಉತ್ಪನ್ನಗಳನ್ನು ಸಾಗಣೆ ಮಾಡುವುದು.
- ಹಾಲು & ಹಾಲಿನ ಉತ್ಪನ್ನಗಳ(ವ್ಯಾಪಾರಮುದ್ರೆ ನಿರ್ಮಾಣ)ಮಾರಾಟಕ್ಕೆ ವ್ಯಾಪಾರಮುದ್ರೆಯನ್ನು ಸೃಷ್ಟಿಸುವುದು &ನಿರ್ವಹಿಸುವುದು.
- ಹಾಲಿನ ಸಂಘಗಳು ಮತ್ತು ಸದಸ್ಯರಿಗೆ ತಾಂತ್ರಿಕ ಮಾಹಿತಿಗಳು,ಆಡಳಿತ ಬೆಂಬಲ ಮತ್ತು ಸಲಹಾ ಸೇವೆಗಳು ಮುಂತಾದ ಬೆಂಬಲ ಸೇವೆಗಳನ್ನು ಒದಗಿಸುವುದು.
- ಹಾಲಿನ ಸಂಘಗಳಿಂದ ಹೆಚ್ಚುವರಿ ಹಾಲನ್ನು ಸಂಗ್ರಹಿಸುವುದು ಮತ್ತು ಕೊರತೆಯ ಹಾಲಿನ ಸಂಘಗಳಿಗೆ ಸರಬರಾಜು ಮಾಡುವುದು.
- ಹಾಲಿನ ಸಂಘಗಳ ಹೆಚ್ಚುವರಿ ಹಾಲನ್ನು ಸಂಸ್ಕರಣೆ ಮಾಡಲು ಮೇವು-ಸಮತೋಲನ ಡೈರಿ ಘಟಕಗಳನ್ನು ಸ್ಥಾಪಿಸುವುದು.
- ಹಾಲಿನ ಉತ್ಪನ್ನಗಳ ಉತ್ಪಾದನೆ/ಪ್ಯಾಕೇಜಿಂಗ್‌ನಲ್ಲಿ ಬಳಸುವ ಕಚ್ಚಾ ಪದಾರ್ಥಗಳ ಸಾಮಾನ್ಯ ಖರೀದಿಗೆ ವ್ಯವಸ್ಥೆ ಮಾಡುವುದು.
- ಹಾಲಿನ ಸಂಘಗಳಿಗೆ ಪಾವತಿ ಮಾಡುವ ಹಾಲು & ಹಾಲಿನ ಉತ್ಪನ್ನಗಳ ದರಗಳನ್ನು ನಿರ್ಧರಿಸುವುದು.
- ವಿವಿಧ ಹಾಲಿನ ಸಂಘಗಳಲ್ಲಿ(ಉತ್ಪನ್ನ-ಮಿಶ್ರಣ)ತಯಾರಿಸುವ ಉತ್ಪನ್ನಗಳು ಮತ್ತು ಅದಕ್ಕೆ ಅಗತ್ಯವಾದ ಸಾಮರ್ಥ್ಯವನ್ನು ನಿರ್ಧರಿಸುವುದು.
- ಸುದೀರ್ಘಾವಧಿಯ ಹಾಲಿನ ಉತ್ಪಾದನೆ,ಖರೀದಿ ಮತ್ತು ಸಂಸ್ಕರಣೆ ಜತೆ ಮಾರಾಟ ಯೋಜನೆಯನ್ನು ನಿರ್ವಹಿಸುವುದು.
- ಹಾಲಿನ ಸಂಘಗಳಿಗೆ ಹಣಕಾಸು ವ್ಯವಸ್ಥೆ ಮಾಡುವುದು ಮತ್ತು ಅವಕ್ಕೆ ತಾಂತ್ರಿಕ ವಿಧಾನಗಳನ್ನು ಒದಗಿಸುವುದು.
- ಸಹಕಾರ ಅಭಿವೃದ್ಧಿ,ತಾಂತ್ರಿಕ &ಮಾರಾಟ ಚಟುವಟಿಕೆಗಳ ವಿನ್ಯಾಸ ಮತ್ತು ತರಬೇತಿ ಒದಗಿಸುವುದು.
- ಸಂಘರ್ಷ ತೀರ್ಮಾನ ಮತ್ತು ಇಡೀ ರಚನೆಯನ್ನು ಹಾನಿಯಾಗದಂತೆ ಇಡುವುದು.
ನಾವು[who?] ೨೦೦೮ನೇ ವರ್ಷಕ್ಕೆ ಕಾಲಿಡೋಣ. ಭಾರತದ ಡೈರಿ ಉದ್ಯಮ ವಿಶೇಷವಾಗಿ ಗುಜರಾತಿನಲ್ಲಿ ಡೈರಿ ಉದ್ಯಮ ಅತೀ ಭಿನ್ನವಾಗಿ ಕಂಡುಬಂತು. ಭಾರತವು ವಿಶ್ವದಲ್ಲೇ ಅತೀ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿತು. ಹಾಲು ಮತ್ತು ಹಾಲಿನ ಉತ್ಪನ್ನದ ತಯಾರಿಕೆಗೆ ಸಂಬಂಧಿಸಿದಂತೆ ಗುಜರಾತ್ ತನ್ನ ಸಹಕಾರ ಡೈರಿ ಆಂದೋಳನದ ಮೂಲಕ ಅತ್ಯಂತ ಯಶಸ್ವಿ ರಾಜ್ಯವಾಗಿ ಹೊರಹೊಮ್ಮಿತು. ಕೈರಾ ಜಿಲ್ಲೆ ಸಹಕಾರ ಹಾಲು ಉತ್ಪಾದಕರ ಸಂಘ ಆನಂದ್ ಇಡೀ ಪ್ರದೇಶದ ಡೈರಿ ಅಭಿವೃದ್ಧಿಯ ಕೇಂದ್ರ ಬಿಂದುವಾಗಿದ್ದು, ಅನೇಕ ಅಂತಾರಾಷ್ಟ್ರೀಯ ಬ್ರಾಂಡ್‌ಗಳನ್ನು ಮೀರಿಸಿ ಅಮುಲ್ ಭಾರತದಲ್ಲಿ ಅತ್ಯಂತ ಮಾನ್ಯತೆಯ ವ್ಯಾಪಾರಮುದ್ರೆಯಾಗಿ ಹೊರಹೊಮ್ಮಿತು. ಇಂದು ನಮ್ಮಲ್ಲಿ ಸರಿಸುಮಾರು ಒಂದೇ ನಮೂನೆಯಲ್ಲಿ ೧,೨೫೦೦೦[quantify]ಡೈರಿ ಸಹಕಾರ ಸೊಸೈಟಿಗಳಿಂದ ರಚನೆಯಾದ ೧೭೬ ಸಹಕಾರ ಡೈರಿ ಸಂಘಗಳಿವೆ. ೧೩ದಶಲಕ್ಷ ರೈತರ ಒಟ್ಟು ಸದಸ್ಯತ್ವವನ್ನು ಹೊಂದಿದೆ. ಈ ರೈತರು ಗುಜರಾತಿನ ಅಮುಲ್ ಆಗಿರಲಿ ಅಥವಾ ಪಂಜಾಬ್‌ನ ವರ್ಕಾ, ಆಂಧ್ರಪ್ರದೇಶದ ವಿಜಯ ಅಥವಾ ಕರ್ನಾಟಕದ ನಂದಿನಿ ಆಗಿರಲಿ, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸಂಸ್ಕರಿಸಿ,ಲಾಭದಾಯಕವಾಗಿ ಸಂಸ್ಕರಣೆ ಮತ್ತು ಮಾರಾಟ ಮಾಡುತ್ತಿದೆ. ಈ ಇಡೀ ಪ್ರಕ್ರಿಯೆಯು ಭಾರತದಾದ್ಯಂತ ಹರಡಿದ ೧೯೦ಡೈರಿ ಸಂಸ್ಕರಣೆ ಘಟಕಗಳನ್ನು ಈ ರೈತರ ಸಂಸ್ಥೆಗಳಿಂದ ದೊಡ್ಡ ಬಂಡವಾಳಗಳೊಂದಿಗೆ ಸೃಷ್ಟಿಸಿದೆ. ಈ ಸಹಕಾರ ಸಂಘಗಳು ಇಂದು ಅಂದಾಜು ೨೩ ದಶಲಕ್ಷ ಕೇಜಿ ಹಾಲನ್ನು ಪ್ರತಿ ದಿನ ಸಂಗ್ರಹಿಸಿ, ವರ್ಷದಲ್ಲಿ ಹಾಲಿನ ಉತ್ಪಾದಕರಿಗೆ ೧೨೫ಶತಕೋಟಿ ರೂ.ಗಳಿಗಿಂತ ಹೆಚ್ಚು ಒಟ್ಟು ಮೊತ್ತದ ಹಣವನ್ನು ಪಾವತಿ ಮಾಡುತ್ತಿದೆ.
"ಅಮುಲ್ ಮಾದರಿ"ಯ ಪರಿಣಾಮ
[ಬದಲಾಯಿಸಿ]ಆಪರೇಷನ್ ಫ್ಲಡ್ ಪ್ರೋಗ್ರಾಂ ಪರಿಣಾಮಗಳಿಗೆ ಇತ್ತೀಚಿನ ಮೌಲ್ಯಮಾಪನ ವರದಿಯಲ್ಲಿ ವಿಶ್ವಬ್ಯಾಂಕ್ ಹೆಚ್ಚಿನ ಮೌಲ್ಯ ನಿರ್ಣಯ ಮಾಡಿದೆ. ಆಪರೇಷನ್ ಫ್ಲಡ್ ಪ್ರೋಗ್ರಾಂ ಅಡಿಯಲ್ಲಿ ೭೦ ಮತ್ತು ೮೦ರ ದಶಕಗಳಲ್ಲಿ ೨೦ ವರ್ಷಗಳ ಕಾಲಾವಧಿಯಲ್ಲಿ ಹೂಡಿಕೆ ಮಾಡಿದ ೨೦ ಶತಕೋಟಿ ರೂ. ಬಂಡವಾಳವು ಭಾರತದ ಹಾಲು ಉತ್ಪಾದನೆಯಲ್ಲಿ ೪೦ ದಶಲಕ್ಷ ಮೆಟ್ರಿಕ್ ಟನ್(MMT)ಹೆಚ್ಚುವರಿ ಕೊಡುಗೆ ನೀಡಿರುವುದು ಸಾಬೀತಾಗಿದೆ. ಅಂದರೆ,ಆಪರೇಷನ್ ಫ್ಲಡ್ ಪ್ರೋಗ್ರಾಂ ಪೂರ್ವದಲ್ಲಿ ೨೦(MMT)ಯಿಂದ ಆಪರೇಷನ್ ಫ್ಲಡ್ ಪ್ರೋಗ್ರಾಂ ಕೊನೆಯಲ್ಲಿ ೬೦(MMT)ಗಿಂತ ಹೆಚ್ಚು ಉತ್ಪಾದನೆಯಾಗಿದೆ. ಹೀಗೆ,ವಾರ್ಷಿಕವಾಗಿ ೪೦೦ಶತಕೋಟಿ ಹೆಚ್ಚಿದ ಆದಾಯವು ೨೦ ವರ್ಷಗಳ ಕಾಲಾವಧಿಯಲ್ಲಿ ಹೂಡಿಕೆ ಮಾಡಿದ ಬಂಡವಾಳದಿಂದ ಉತ್ಪತ್ತಿಯಾಗಿದೆ. ಇದು ವಿಶ್ವದಲ್ಲಿ ಬೇರಾವುದೇ ಕಡೆಗಿಂತ ವಿಶ್ವಬ್ಯಾಂಕ್ ಆರ್ಥಿಕನೆರವಿನ ಅತ್ಯಂತ ಅನುಕೂಲಕರ ಯೋಜನೆಯಾಗಿದೆ. ಭಾರತದ ಹಾಲು ಉತ್ಪಾದನೆಯ ಹೆಚ್ಚಳ ಮುಂದುವರಿದು ಈಗ ೯೦MMTಯಲ್ಲಿ ನಿಂತಿದ್ದು, ಈ ಪ್ರಯತ್ನಗಳ ಪರಿಣಾಮಗಳನ್ನು ಗಮನಿಸಬಹುದು. ಹಾಲು ಉತ್ಪಾದನೆಯಲ್ಲಿ ನಾಲ್ಕು ಪಟ್ಟು ಹೆಚ್ಚಳವಾದರೂ, ಈ ಅವಧಿಯಲ್ಲಿ ಹಾಲಿನ ದರಗಳಲ್ಲಿ ಕುಸಿತ ಉಂಟಾಗಿಲ್ಲ ಮತ್ತು ಬೆಳವಣಿಗೆ ಮುಂದುವರಿಸಿದೆ. ಈ ಆಂದೋಲನದ ಕಾರಣದಿಂದ,ದೇಶದ ಹಾಲಿನ ಉತ್ಪಾನೆಯು ೧೯೭೧ ಮತ್ತು ೧೯೯೬ರ ನಡುವಿನ ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಯಿತು. ಇದೇ ರೀತಿ ೧೯೭೩ರಲ್ಲಿ ತಲಾವಾರು ಹಾಲಿನ ಸೇವನೆಯು ಪ್ರತಿ ದಿನಕ್ಕೆ ೧೧೧ಗ್ರಾಂಗಳಿಂದ ೨೦೦೦ದಲ್ಲಿ ಪ್ರತಿ ದಿನಕ್ಕೆ ೨೨೨ ಗ್ರಾಂಗಳಿಗೆ ದುಪ್ಪಟ್ಟಾಯಿತು. ಹೀಗೆ,ಈ ಸಹಕಾರ ಸಂಘಗಳು ಭಾರತದ ಗ್ರಾಮೀಣ ಸಮಾಜಗಳ ಆರ್ಥಿಕ ಅಭಿವೃದ್ಧಿಗೆ ಕಾರಣಕರ್ತವಾಗಿದ್ದಲ್ಲದೇ, ಭಾರತದ ಸಮಾಜದ ಆರೋಗ್ಯ ಮತ್ತು ಪೌಷ್ಠಿಕ ಅಗತ್ಯದ ಸುಧಾರಣೆಗೆ ಪ್ರಮುಖ ಅಂಶವನ್ನು ಒದಗಿಸಿದೆ. ಭಾರತದ ಕೆಲವೇ ಉದ್ಯಮಗಳು ಇಂತಹ ಅಗಾಧ ಜನಸಂಖ್ಯೆಯನ್ನು ಒಳಗೊಂಡಂತೆ ಸಮಾಂತರವಾದ ಅಭಿವೃದ್ಧಿಯನ್ನು ಸಾಧಿಸಿವೆ. ಈ ಡೈರಿ ಸಹಕಾರ ಸಂಘಗಳು ವಿಶೇಷವಾಗಿ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನದ ವೃದ್ಧಿಗೆ ಕಾರಣವಾಗಿದೆ.ಪುರುಷರು ಕೃಷಿ ಚಟುವಟಿಕೆಗಳಲ್ಲಿ ನಿರತರಾದ ಸಂದರ್ಭದಲ್ಲಿ ಮಹಿಳೆಯರು ಮೂಲತಃ ಡೈರಿ ಚಟುವಟಿಕೆಗಳಲ್ಲಿ ಒಳಗೊಂಡಿದ್ದರು. ಇದು ಮಹಿಳೆಯರಿಗೆ ನಿಶ್ಚಿತ ಆದಾಯ ಮೂಲವನ್ನು ಒದಗಿಸಿ ಅವರ ಆರ್ಥಿಕ ಸ್ವಾತಂತ್ರ್ಯಕ್ಕೆ ದಾರಿ ಕಲ್ಪಿಸಿತು. ಮೂರು ಹಂತಗಳ ‘ಅಮುಲ್ ಮಾದರಿ’ಯು ದೇಶದಲ್ಲಿ ಶ್ವೇತಕ್ರಾಂತಿಯನ್ನು ಉಂಟುಮಾಡುವಲ್ಲಿ ಕಾರಣಕರ್ತವಾಯಿತು. ಭಾರತದಲ್ಲಿ ಡೈರಿ ಅಭಿವೃದ್ಧಿ ಪರಿಣಾಮದ ಬಗ್ಗೆ ವಿಶ್ವಬ್ಯಾಂಕ್ ಬೆಲೆ ಅಂದಾಜು ವರದಿಯ ಪ್ರಕಾರ, ಆನಂದ್ ನಮೂನೆ ಕೆಳಗಿನ ಅನುಕೂಲಗಳನ್ನು ಪ್ರದರ್ಶಿಸಿದೆ:
- ಬಡತನ ನಿವಾರಣೆಯಲ್ಲಿ ಡೈರಿಯ ಪಾತ್ರ
- ಕೃಷಿ ಉತ್ಪಾದನೆಗಿಂತ ಹೆಚ್ಚಾಗಿ ಗ್ರಾಮೀಣ ಅಭಿವೃದ್ದಿಯು ಒಳಗೊಂಡಿದೆಯೆಂಬ ಸತ್ಯ.
- ಅಬಿವೃದ್ಧಿಯಲ್ಲಿ ರಾಷ್ಟ್ರೀಯ ‘ಮಾಲೀಕತ್ವ‘ದ ಮೌಲ್ಯ.
- ಬಡತನದ ಕೆಟ್ಟ ಅಂಶಗಳ ಉಪಶಮನಕ್ಕೆ ಅಧಿಕ ಆದಾಯಗಳ ಅನುಕೂಲಕರ ಪರಿಣಾಮಗಳು.
- ಉದ್ಯೋಗಗಳನ್ನು ಸೃಷ್ಟಿಸುವ ಡೈರಿಯ ಸಾಮರ್ಥ್ಯ
- ಕಡಿಮೆ ವೆಚ್ಚದಲ್ಲಿ ಬಡವರಿಗೆ ಅನುಕೂಲವಾಗುವ ಡೈರಿಯ ಸಾಮರ್ಥ್ಯ.
- ಅಭಿವೃದ್ಧಿಗೆ ವಾಣಿಜ್ಯ ಮಾರ್ಗದ ಪ್ರಾಮುಖ್ಯತೆ
- ಬಹು ಆಯಾಮಗಳ ಪರಿಣಾಮಗಳನ್ನು ಹೊಂದಿರುವ ಏಕ-ಸರಕು ಯೋಜನೆಗಳ ಸಾಮರ್ಥ್ಯ
- ವಾಣಿಜ್ಯ ಸಂಸ್ಥೆಗಳಿಂದ ಸರ್ಕಾರವನ್ನು ಹೊರಗಿಡುವ ಪ್ರಾಮುಖ್ಯತೆ.
- ಕೃಷಿಯಲ್ಲಿ ಮಾರುಕಟ್ಟೆ ವೈಫಲ್ಯದ ಪ್ರಾಮುಖ್ಯತೆ
- ಭಾಗವಹಿಸುವಿಕೆ ಅವಕಾಶದ ಸಂಸ್ಥೆಗಳ ಶಕ್ತಿ ಮತ್ತು ಸಮಸ್ಯೆಗಳು.
- ನೀತಿಯ ಪ್ರಾಮುಖ್ಯತೆ
"ಅಮುಲ್ ಅಭಿಯಾನ"ದ ಸಾಧನೆಗಳು
[ಬದಲಾಯಿಸಿ]- ಭಾರತದಲ್ಲಿ ೨೦ದಶಲಕ್ಷ MTಯಿಂದ ೧೦೦ ದಶಲಕ್ಷ MTವರೆಗೆ ಕೇವಲ ೪೦ ವರ್ಷಗಳ ಅವಧಿಯಲ್ಲಿ ಹಾಲಿನ ಉತ್ಪಾದನೆಯ ಗಮನಾರ್ಹ ಬೆಳವಣಿಗೆಯು ಡೈರಿ ಸಹಕಾರ ಆಂದೋಳನದ ಫಲವಾಗಿ ಸಾಧ್ಯವಾಗಿದೆ. ಇದು ಭಾರತವನ್ನು ವಿಶ್ವದಲ್ಲೇ ಇಂದು ಅತ್ಯಧಿಕ ಹಾಲು ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಲು ನೆರವಾಗಿದೆ.
- ಡೈರಿ ಸಹಕಾರ ಆಂದೋಳನ ಭಾರತದ ಡೈರಿ ರೈತರನ್ನು ಹೆಚ್ಚು ಪ್ರಾಣಿಗಳನ್ನು ಸಾಕುವಂತೆ ಪ್ರೋತ್ಸಾಹಿಸಿತು.ಇದರ ಫಲವಾಗಿ ವಿಶ್ವದಲ್ಲೇ ಅತ್ಯಧಿಕವಾದ ೫೦೦ದಶಲಕ್ಷ ಜಾನುವಾರು ಮತ್ತು ಎಮ್ಮೆಯ ಸಂಖ್ಯೆಯನ್ನು ಭಾರತ ಹೊಂದಿದೆ.
- ಡೈರಿ ಸಹಕಾರ ಆಂದೋಳನವು ಹಾಲು ಉತ್ಪಾದಕರ ದೊಡ್ಡ ನೆಲೆಯನ್ನು ಹುಟ್ಟುಹಾಕಿತು ಮತ್ತು ಅವರ ಸದಸ್ಯತ್ವ ಇಂದು ೧೩ದಶಲಕ್ಷ ಸದಸ್ಯ ಕುಟುಂಬಗಳಿಗಿಂತ ಹೆಚ್ಚಾಗಿರುವುದು ಹೆಮ್ಮ ತಂದಿದೆ.
- ಡೈರಿ ಸಹಕಾರ ಆಂದೋಳನ ದೇಶದ ಉದ್ದಗಲಕ್ಕೂ ಹರಡಿತು ಮತ್ತು ೨೨ ರಾಜ್ಯಗಳ ೧೮೦ಜಿಲ್ಲೆಗಳ ೧೨೫,೦೦೦ ಗ್ರಾಮಗಳನ್ನು ಒಳಗೊಂಡಿತ್ತು.
- ಡೈರಿ ಸಹಕಾರ ಸಂಘಗಳು ಕನಿಷ್ಠ ಜನಸಾಮಾನ್ಯರ ಮಟ್ಟದಲ್ಲಿ ಪ್ರಜಾತಂತ್ರ ರಚನೆಯನ್ನು ಕಾಯ್ದುಕೊಳ್ಳಲು ಸಮರ್ಥವಾದವು. ಗ್ರಾಮ ಮಟ್ಟದ ಘಟಕದ ಆಡಳಿತ ಸಮಿತಿಯು ಬಹುಮಟ್ಟಿನ ಗ್ರಾಮಗಳಲ್ಲಿ ಸದಸ್ಯರ ನಡುವಿನಿಂದ ಆಯ್ಕೆ ಮಾಡಲಾಯಿತು.
- ಡೈರಿ ಸಹಕಾರಸಂಘಗಳು ಕೂಡ ಮುಕ್ತ ಮತ್ತು ಸ್ವಯಂಪ್ರೇರಣೆಯ ಸದಸ್ಯತ್ವವನ್ನು ನೀಡುವ ಮೂಲಕ ಗ್ರಾಮಗಳಲ್ಲಿ ಜಾತಿ,ಮತ, ಧರ್ಮ ಮತ್ತು ಭಾಷೆಗಳ ನಡುವೆ ಸಾಮಾಜಿಕ ಒಡಕನ್ನು ತೆಗೆದು ಸಂಪರ್ಕಸೇತುವಾಗುವಲ್ಲಿ ಕಾರಣಕರ್ತವಾಯಿತು.
- ಡೈರಿ ಸಹಕಾರ ಸಂಘಗಳು ವೈಜ್ಞಾನಿಕ ಪಶುಸಂಗೋಪನೆ ಮತ್ತು ನಿರ್ವಹಣೆಗಳ ದಕ್ಷತೆಯ ಪರಿಕಲ್ಪನೆಗಳನ್ನು ಯಶಸ್ವಿಯಾಗಿ ಪ್ರಚಾರ ಮಾಡಿದವು. ಇದರಿಂದ ಹಾಲಿನ ಕಡಿಮೆ ವೆಚ್ಚದ ಉತ್ಪಾದನೆ ಮತ್ತು ಸಂಸ್ಕರಣೆಗೆ ಕಾರಣವಾಯಿತು.
- ಈ ಆಂದೋಳನವು ಜಿಲ್ಲಾ ಮತ್ತು ರಾಜ್ಯ ಮಟ್ಟಗಳಲ್ಲಿ ಚೆನ್ನಾಗಿ ಅಭಿವೃದ್ಧಿ ಹೊಂದಿದ ಖರೀದಿ ವ್ಯವಸ್ಥೆ ಮತ್ತು ಬೆಂಬಲಿತ ಒಕ್ಕೂಟ ರಚನೆಗಳ ಕಾರಣದಿಂದ ಯಶಸ್ವಿಯಾಯಿತು.
- ಡೈರಿ ಸಹಕಾರ ಸಂಘಗಳು ದೊಡ್ಡ ಸಂಸ್ಕರಣೆ ಸಾಮರ್ಥ್ಯಗಳನ್ನು ನಿರ್ಮಿಸುವಲ್ಲಿ ಸದಾ ಸಕ್ರಿಯವಾಗಿದ್ದವು. ಇದರಿಂದ ಹಾಲಿನ ಉತ್ಪಾದನೆ ಮತ್ತಷ್ಟು ವೃದ್ಧಿಸಿತು.
- ಈ ಸಂಘಗಳು ಪ್ರಬಲ ಸಹಕಾರ ಅಭಿನ್ನತೆ, ಮೌಲ್ಯಗಳು ಮತ್ತು ಉದ್ದೇಶವನ್ನು ಈಗಲೂ ಪೋಷಿಸುವ ಭಾರತದ ಕೆಲವೇ ಸಂಸ್ಥೆಗಳ ಪೈಕಿ ಸೇರಿದೆ. ನೌಕರರ ಮತ್ತು ಸದಸ್ಯರ ಸದ್ಬಾವನೆ ಮತ್ತು ಆದರ್ಶವಾದದ ಬಗ್ಗೆ ಈಗಲೂ ಹೆಮ್ಮೆಯಿಂದ ಪ್ರದರ್ಶಿಸುತ್ತವೆ.
- ಡೈರಿ ಸಹಕಾರ ಸಂಘಗಳು ಏಜೆಂಟರು ಮತ್ತು ಮದ್ಯವರ್ತಿಗಳ ಮುಷ್ಠಿಯಿಂದ ಭಾರತದ ಬಡ ರೈತರನ್ನು ಪಾರು ಮಾಡಿ ಅವರ ಉತ್ಪನ್ನಗಳಿಗೆ ಭರವಸೆಯ ಮಾರುಕಟ್ಟೆಯನ್ನು ಒದಗಿಸಿದೆ. ಇವು ಸ್ವತಃ ರೈತರೇ ನಡೆಸುವ ಸಂಸ್ಥೆಗಳಾದ್ದರಿಂದ,ಸದಸ್ಯರಿಗೆ ಅವರ ಉತ್ಪನ್ನಗಳಿಗೆ ನ್ಯಾಯಯುತ ಪ್ರತಿಫಲವನ್ನು ನೀಡಿತು.
- ಡೈರಿ ಸಹಕಾರ ಸಂಘಗಳು ತಮ್ಮ ಸ್ವಚ್ಛ ಆಡಳಿತದಿಂದ ಪ್ರಾಮಾಣಿಕ ಮತ್ತು ಪಾರದರ್ಶಕತೆಯ ಮಾರುಕಟ್ಟೆ ಪರಿಕಲ್ಪನೆಯನ್ನು ಸೃಷ್ಟಿಸಲು ಸಾಧ್ಯವಾಯಿತು.
GCMMF ಸಾಧನೆಗಳು
[ಬದಲಾಯಿಸಿ]- ೨.೮ ದಶಲಕ್ಷ ಹಾಲು ಉತ್ಪಾದಕ ಸದಸ್ಯ ಕುಟುಂಬಗಳು
- ೧೩,೭೫೯ ಗ್ರಾಮ ಸೊಸೈಟಿಗಳು
- ೧೩ ಜಿಲ್ಲಾ ಸಂಘಗಳು
- ೮.೫ ದಶಲಕ್ಷ ಲೀಟರ್‌ಗಳಷ್ಟು ಹಾಲು ಪ್ರತಿದಿನ ಖರೀದಿ
- Rs. ೧೫೦ ದಶಲಕ್ಷ ನಗದು ಪ್ರತಿದಿನ ಬಟವಾಡೆ
- GCMMF ಸಣ್ಣ ಉತ್ಪಾದಕರ ಅತೀ ದೊಡ್ಡ ಸಹಕಾರ ಉದ್ಯಮವಾಗಿದ್ದು,೫೩ಶತಕೋಟಿ ವಾರ್ಷಿಕ ವಹಿವಾಟು ಹೊಂದಿದೆ.
- ಭಾರತ ಸರ್ಕಾರವು ಅಮುಲ್‌ಗೆ “ಎಲ್ಲ ವರ್ಗಗಳಲ್ಲಿ ಅತ್ಯುತ್ತಮವಾದ ರಾಜೀವ್ ಗಾಂಧಿ ನ್ಯಾಷನಲ್ ಕ್ವಾಲಿಟಿ ಅವಾರ್ಡ್”. ನೀಡಿ ಗೌರವಿಸಿದೆ.
- ಏಷ್ಯಾದಲ್ಲೇ ಅತೀ ದೊಡ್ಡ ಹಾಲನ್ನು ನಿರ್ವಹಿಸುವ ಸಾಮರ್ಥ್ಯ
- ಅತೀ ದೊಡ್ಡ ಶೀತಲ ಸರಪಳಿ ಜಾಲ
- ೪೮ ಮಾರಾಟ ಕಚೇರಿಗಳು,೩೦೦೦ಸಗಟು ವಿತರಣೆಗಳು, ೫ ಲಕ್ಷ ಚಿಲ್ಲರೆ ಅಂಗಡಿಗಳು
- ೩೭ ರಾಷ್ಟ್ರಗಳಿಗೆ ೧೫೦ ಕೋಟಿ ರೂ. ಮೌಲ್ಯದ ರಫ್ತುಗಳು
- ಸತತವಾಗಿ ಒಂಭತ್ತು ಅನುಕ್ರಮ ವರ್ಷಗಳಲ್ಲಿ APEDA ಪ್ರಶಸ್ತಿ ವಿಜೇತ.
ಅಮುಲ್ ಬ್ರಾಂಡ್ ನಿರ್ಮಾಣ
[ಬದಲಾಯಿಸಿ]ಯಾವುದೇ FMCGಕಂಪೆನಿಗೆ ಅತೀ ದೊಡ್ಡ ವಿತರಣೆ ಜಾಲವನ್ನು GCMMF (ಅಮುಲ್)ಹೊಂದಿದೆ. ದೇಶದಾದ್ಯಂತ ಇದು ಸುಮಾರು ೫೦ ಮಾರಾಟ ಕಚೇರಿಗಳನ್ನು ಹೊಂದಿದ್ದು, ೩೦೦೦ಕ್ಕಿಂತ ಹೆಚ್ಚು ಸಗಟು ವ್ಯಾಪಾರಿಗಳು ಮತ್ತು ೫,೦೦,೦೦೦ಚಿಲ್ಲರೆ ವ್ಯಾಪಾರಿಗಳನ್ನು ಹೊಂದಿದೆ. ಅಮುಲ್ ದೇಶದಲ್ಲಿ ಡೈರಿ ಉತ್ಪನ್ನಗಳ ಅತೀ ದೊಡ್ಡ ರಫ್ತುದಾರ ಸಂಸ್ಥೆಯಾಗಿದೆ. ಅಮುಲ್ ವಿಶ್ವದ ೪೦ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಇಂದು ಲಭ್ಯವಿದೆ. ಅಮುಲ್ ವಿಶಾಲ ವೈವಿಧ್ಯದ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದು ಅವುಗಳಲ್ಲಿ ಕೆನೆ ತೆಗೆದಿರದ ಮತ್ತು ಕೆನೆ ತೆಗೆದಿರುವ ಹಾಲಿನ ಪುಡಿ, ಮೃದುಚೀಸು(ಪನೀರ್), UHT ಹಾಲು,ಕಾಯಿಸಿದ ಬೆಣ್ಣೆ(ತುಪ್ಪ) ಮತ್ತು ದೇಶೀಯ ಸಿಹಿತಿಂಡಿಗಳು. ಅದರ ಪ್ರಮುಖ ಮಾರುಕಟ್ಟೆಗಳು USA, ವೆಸ್ಟ್ ಇಂಡೀಸ್,ಆಫ್ರಿಕಾದ ರಾಷ್ಟ್ರಗಳು, ಕೊಲ್ಲಿ ಪ್ರದೇಶ, ಮತ್ತು [SAARC] SAARCನೆರೆಯರಾಷ್ಟ್ರಗಳು, ಸಿಂಗಪುರ್, ಫಿಲಿಪೈನ್ಸ್, ಥಾಯ್ಲೆಂಡ್ , ಜಪಾನ್ ಮತ್ತು ಚೀನಾ.
೨೦೦೭ ಸೆಪ್ಟೆಂಬರ್‌ನಲ್ಲಿ ಅಮುಲ್ ಪ್ರಮುಖ ಭಾರತದ ಬ್ರಾಂಡ್ ಆಗಿ ಹೊರಹೊಮ್ಮಿತು. ಏಷ್ಯಾದ ಅಗ್ರ ೧೦೦೦ ಬ್ರಾಂಡ್‌ಗಳನ್ನು ಶೋಧಿಸಲು ಸೈನೊವೇಟ್ ನಡೆಸಿದ ಸಮೀಕ್ಷೆ ಪ್ರಕಾರ ಇದು ತಿಳಿದುಬಂದಿದೆ.[೭]
ಉತ್ಪನ್ನಗಳು
[ಬದಲಾಯಿಸಿ]ಅಮುಲ್ ಉತ್ಪನ್ನಗಳ ವ್ಯಾಪ್ತಿಯು ಹಾಲಿನ ಪುಡಿ, ಹಾಲು, ಬೆಣ್ಣೆ, ತುಪ್ಪ, ಗಿಣ್ಣು, ಮಸ್ತಿ ದಾಹಿ, ಮೊಸರು, ಮಜ್ಜಿಗೆ ಚಾಕೊಲೇಟ್, ಐಸ್ ಕ್ರೀಂ, ಕ್ರೀಂ, ಶ್ರೀಖಂಡ್, ಪನೀರ್(ತಾಜಾ ಗಿಣ್ಣು) ಗುಲಾಬ್ ಜಾಮೂನ್ಗಳು, ಸುವಾಸನೆ ಹಾಲು, ಬಾಸುಂದಿ, ನ್ಯೂಟ್ರಮುಲ್ ಬ್ರಾಂಡ್ ಮುಂತಾದವನ್ನು ಒಳಗೊಂಡಿದೆ. ೨೦೦೬ ಜನವರಿಯಲ್ಲಿ ಅಮುಲ್ ಭಾರತದ ಪ್ರಥಮ ಕ್ರೀಡಾ ಪೇಯ ಸ್ಟಾಮಿನಾ ವನ್ನು ಆರಂಭಿಸಲು ಯೋಜಿಸಿದೆ. ಅದು ಕೋಕಾ ಕೋಲಾದ ಪವರೇಡ್ ಮತ್ತು ಪೆಪ್ಸಿಕೊದ ಗಾಟೊರೇಡ್ ಜತೆ ಪೈಪೋಟಿಗೆ ಇಳಿಯಲಿದೆ.[೮] ೨೦೦೭ರ ಆಗಸ್ಟ್‌ನಲ್ಲಿ ಅಮುಲ್ ಕೂಲ್ ಕೊಕೊವನ್ನು ಪರಿಚಯಿಸಿತು. ಇದು ಚಾಕೊಲೇಟ್ ಹಾಲಿನ ಬ್ರಾಂಡ್ ಆಗಿದ್ದು, ಹಾಲಿನ ಉತ್ಪನ್ನಗಳ ವಿಭಾಗಕ್ಕೆ ತನ್ನ ಉತ್ಪನ್ನವನ್ನು ವಿಸ್ತರಿಸಿತು. ಇತರೆ ಅಮುಲ್ ಬ್ರಾಂಡ್‌ಗಳು ಕಡಿಮೆ ಕ್ಯಾಲರಿಯ ಬಾಯಾರಿಕೆ ನೀಗಿಸುವ ಪಾನೀಯವಾದ ಅಮುಲ್ ಕೂಲ್, ಮಸ್ತಿ ಮಜ್ಜಿಗೆ, ಕೂಲ್ ಕೆಫೆ, ಕುಡಿಯಲು ಸಿದ್ಧಪಿಡಿಸಿದ ಕಾಫೀ ಮತ್ತು ಭಾರತದ ಪ್ರಥಮ ಕ್ರೀಡಾ ಪೇಯ ಸ್ಟಾಮಿನಾ. ಅಮುಲ್‌ನ ಸಕ್ಕರೆ ಮುಕ್ತ ಪ್ರೊಬಯೋಟಿಕ್(ಉಪಕಾರಿ ಬ್ಯಾಕ್ಟೀರಿಯ) ಐಸ್‌ಕ್ರೀಂ ೨೦೦೭ರ ಅಂತಾರಾಷ್ಟ್ರೀಯ ಡೈರಿ ಒಕ್ಕೂಟ ಮಾರಾಟ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.[ಸೂಕ್ತ ಉಲ್ಲೇಖನ ಬೇಕು]
ಮ್ಯಾಸ್ಕಾಟ್
[ಬದಲಾಯಿಸಿ]೧೯೬೭ರಿಂದೀಚೆಗೆ [೯] ಅಮುಲ್ ಉತ್ಪನ್ನಗಳಮ್ಯಾಸ್ಕಾಟ್(ಅದೃಷ್ಟ ತರುವ ಸಾಂಕೇತಿಕ ಚಿತ್ರ) ಅತ್ಯಂತ ಗಮನಾರ್ಹ "ಅಮುಲ್ ಬೇಬಿ"( ಬೆಣ್ಣೆಯನ್ನು ತಿನ್ನುವ ದಪ್ಪ ಗಾತ್ರದ ಬಾಲಕಿ ಸಾಮಾನ್ಯವಾಗಿ ಪೋಲ್ಕಾ ಚುಕ್ಕೆಯ ಉಡುಪನ್ನು ಧರಿಸುತ್ತಾಳೆ)ನಾಮಫಲಕಗಳು ಮತ್ತು ಉತ್ಪನ್ನದ ಹೊದಿಕೆ(ಕವಚ) ಮೇಲೆ ಅಷ್ಟೇ ಗಮನಾರ್ಹವಾದ ಲೇಬಲ್ ಅಟ್ಟರ್ಲಿ ಬಟ್ಟರ್ಲಿ ಡೆಲಿಶಿಯಸ್ ಅಮುಲ್ ನೊಂದಿಗೆ ತೋರಿಸಲಾಗಿತ್ತು.ಮ್ಯಾಸ್ಕಾಟ್ ಮೊದಲಿಗೆ ಅಮುಲ್ ಬೆಣ್ಣೆಗೆ ಬಳಸಲಾಯಿತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅಮುಲ್ ಉತ್ಪನ್ನಗಳಿಗೆ ಜಾಹೀರಾತು ಪ್ರಚಾರದ ಎರಡನೇ ಅಲೆಯಲ್ಲಿ, ಅವಳನ್ನು ಇತರೆ ಉತ್ಪನ್ನಗಳಾದ ತುಪ್ಪ ಮತ್ತು ಹಾಲಿನಲ್ಲಿ ಬಳಸಲಾಯಿತು.
ಜಾಹೀರಾತು
[ಬದಲಾಯಿಸಿ]ಗಂಭೀರವಾಗಿ ಪರಿಗಣಿಸದ(ಟಂಗ್ ಇನ್ ಚೀಕ್)ರೇಖಾಚಿತ್ರಗಳನ್ನು ಬಳಸಿಕೊಂಡು ಅದರ ಜಾಹೀರಾತು ಕೂಡ ಆರಂಭವಾಯಿತು. ಇದರಲ್ಲಿ ಅಮುಲ್ ಬೇಬಿ ಇತ್ತೀಚಿನ ಸುದ್ದಿಗಳು ಅಥವಾ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಹರ್ಷದಿಂದ ಪ್ರತಿಕ್ರಿಯಿಸುತ್ತದೆ. ಆಕೆಯ ಪದಗಳಲ್ಲಿನ ಚಮತ್ಕಾರದ ಪದಪ್ರಯೋಗವು ಜನಪ್ರಿಯವಾಗಿದೆ. ಅಮುಲ್ ಹೊರಾಂಗಣದ ಜಾಹೀರಾತು ಬಿಲ್‌ಬೋರ್ಡ್‌ಗಳನ್ನು ಬಳಸಿಕೊಂಡು, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಹಾಸ್ಯಭರಿತವಾಗಿ ವಿವರಿಸುತ್ತವೆ ಮತ್ತು ಅದನ್ನು ಆಗಾಗ್ಗೆ ಪರಿಷ್ಕರಿಸಲಾಗುತ್ತದೆ. ಅಮುಲ್ ಜಾಹೀರಾತುಗಳು ವಿಷಯವನ್ನು ಆಧರಿಸಿದ ದೀರ್ಘಾವಧಿಯ ಜಾಹೀರಾತುಗಳಾಗಿದ್ದು,ಈಗ ಸ್ಮೋಕಿ ಬಿಯರ್‌ನೊಂದಿಗೆ ಸುದೀರ್ಘಾವಧಿಯ ಜಾಹೀರಾತು ಪ್ರಚಾರ ಎನಿಸಿಕೊಂಡ ಹಿನ್ನೆಲೆಯಲ್ಲಿ ಗಿನ್ನೆಸ್ ದಾಖಲೆಗೆ ಸ್ಪರ್ಧಿಸುತ್ತಿದೆ. ಜಾಹೀರಾತು ಏಜೆನ್ಸಿ ASPಯ ವ್ಯವಸ್ಥಾಪಕ ನಿರ್ದೇಶಕ ಸಿಲ್ವಸ್ಟರ್ ಡಾ ಕುನಾ. ಏಜನ್ಸಿಯು ೧೯೬೭ರಲ್ಲಿ ಪ್ರಚಾರವನ್ನು ಸೃಷ್ಟಿಸಿತು. ಅಮುಲ್ ಐಸ್ ಕ್ರೀಂನ ಘೋಷವಾಕ್ಯ "ರಿಯಲ್ ಮಿಲ್ಕ್, ರಿಯಲ್ ಐಸ್ ಕ್ರೀಂ"
ಸ್ಪರ್ಧಿಗಳು
[ಬದಲಾಯಿಸಿ]ಅಮುಲ್ ಯಶಸ್ಸಿನಿಂದ ಭಾರತದಾದ್ಯಂತ ರಾಜ್ಯ ಸರ್ಕಾರಗಳು ಅದೇ ರೀತಿಯ ಸಂಸ್ಥೆಗಳನ್ನು ಸ್ಥಾಪಿಸಲು ಕಾರಣವಾಯಿತು. ಇವುಗಳು ಬಹುಮಟ್ಟಿಗೆ ತರ್ಕಬದ್ಧ ಯಶಸ್ಸನ್ನು ಗಳಿಸಿದವು. ಉದಾಹರಣೆಗಳು ಕೇರಳದ ಮಿಲ್ಮಾ ,ಆಂಧ್ರ ಪ್ರದೇಶದ ವಿಜಯ, ತಮಿಳುನಾಡಿನ ಆವಿನ್, ಕರ್ನಾಟಕದ K.M.F (ನಂದಿನಿ) , ಬಿಹಾರ ಸುಧಾ, Orissaದ ಓಮ್‌ಫೆಡ್ ರಾಜಾಸ್ತಾನ್‌ನ ಸರಸ್ ಉತ್ತರಪ್ರದೇಶದ ಪರಗ್, ಪಂಜಾಬ್‌ನ ಪರಗ್ ಉತ್ತರಖಂಡದ ಆಂಚಲ್, ಹರ್ಯಾಣದ ವೀಟಾ ಮತ್ತಿತರ.[ಸೂಕ್ತ ಉಲ್ಲೇಖನ ಬೇಕು] ಅಮುಲ್‌ನ ಇತರೆ ಸಹಕಾರ ಸ್ಪರ್ಧಿಗಳು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (NDDB)(ಅದರ ಮದರ್ ಡೈರಿ ಮತ್ತು ಸುಗಮ್ ಬ್ರಾಂಡ್‌ಗಳೊಂದಿಗೆ)ಸೇರಿವೆ. ಅಮುಲ್ ಕ್ರೀಡಾ ಪೇಯದ ಮಾರುಕಟ್ಟೆಗೆ ಪ್ರವೇಶಿಸುವುದರೊಂದಿಗೆ, ಅವುಗಳ ಪ್ರತಿಸ್ಪರ್ಧಿಗಳಲ್ಲಿ ಈಗ ಕೋಕಾ ಕೋಲಾ ಮತ್ತು ಪೆಪ್ಸಿಕೊ ಸೇರಿವೆ.[ಸೂಕ್ತ ಉಲ್ಲೇಖನ ಬೇಕು]
ಜನಪ್ರಿಯ ಸಂಸ್ಕೃತಿಯಲ್ಲಿ
[ಬದಲಾಯಿಸಿ]ಅಮುಲ್ ಸ್ಥಾಪನೆಯನ್ನು ಶ್ವೇತ ಕ್ರಾಂತಿಎಂದು ಕೂಡ ಕರೆಯಲಾಗುತ್ತದೆ. ಭಾರತದ ಶ್ವೇತ ಕ್ರಾಂತಿಯು ಹೆಸರಾಂತ ಚಿತ್ರನಿರ್ಮಾಪಕ ಶ್ಯಾಂ ಬೆನಗಲ್ ಅವರಿಗೆ ಇದರ ಆಧಾರದ ಮೇಲೆ ಮಂಥನ್ ಚಿತ್ರ ತೆಗೆಯಲು ಸ್ಫೂರ್ತಿ ನೀಡಿತು. ಚಲನಚಿತ್ರವು ಸ್ಮಿತಾ ಪಾಟೀಲ್, ಗಿರೀಶ್ ಕಾರ್ನಾಡ್, ನಸಿರುದ್ದೀನ್ ಷಾ ಮತ್ತು ಅಮರೀಶ್ ಪುರಿ ತಾರಾಗಣವನ್ನು ಒಳಗೊಂಡಿದೆ. ಚಲನಚಿತ್ರವು ಸ್ವತಃ ಐದು ಲಕ್ಷಕ್ಕಿಂತ ಹೆಚ್ಚು ಗುಜರಾತಿನ ಗ್ರಾಮೀಣ ರೈತರಿಂದ ಆರ್ಥಿಕ ನೆರವು ಪಡೆದಿದೆ. ಅವರು ಚಲಚಿತ್ರದ ಬಜೆಟ್‌ಗೆ ಪ್ರತಿಯೊಬ್ಬರೂ ತಲಾ ೨ ರೂಪಾಯಿ ನೀಡಿದರು. ಅದರ ಬಿಡುಗಡೆ ನಂತರ ಈ ರೈತರು ಟ್ರಕ್‌ಗಳಲ್ಲಿ ಕಿಕ್ಕಿರಿದು ತುಂಬಿಕೊಂಡು ತಮ್ಮ ಚಲನಚಿತ್ರ ವೀಕ್ಷಣೆಗೆ ಹೊರಟರು ಮತ್ತು ಇದು ವಾಣಿಜ್ಯ ಯಶಸ್ಸು ಗಳಿಸಿತು.[೧೦][೧೧] ಈ ಚಲನಚಿತ್ರವನ್ನು ೧೯೭೭ರ ಅತ್ಯುತ್ತಮ ಹಿಂದಿ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಅಮುಲ್ ಯಶಸ್ಸಿನ ಕಥೆಯನ್ನು ವಿಶ್ವದ ಅನೇಕ ಪ್ರಮುಖ ಆಡಳಿತ ಸಂಸ್ಥೆಗಳು ಕೇಸ್ ಸ್ಟಡಿ(ಪ್ರಕರಣದ ಅಧ್ಯಯನ)ಯನ್ನಾಗಿ ತೆಗೆದುಕೊಂಡಿವೆ. ಶ್ವೇತ ಕ್ರಾಂತಿಯು ಅಲ್ಪ ಮೊತ್ತದ ಹಾಲಿನ ಉತ್ಪಾದನೆ ಮತ್ತು ವಿತರಣೆಯಿಂದ ವಿಪುಲ ಹಾಲಿನ ಉತ್ಪಾದನೆ ಮತ್ತು ವಿತರಣೆ ಶಕೆಗೆ ಕಾರಣವಾಯಿತು. ಈ ಯೋಜನೆಯು ಗಮನಾರ್ಹ ಯಶಸ್ಸು ಗಳಿಸಿದ್ದಲ್ಲದೇ, "ಸಾಮೂಹಿಕ ಕ್ರಿಯೆ"ಯ ಶಕ್ತಿಯನ್ನು ಪ್ರದರ್ಶಿಸಿತು. ಗುಜರಾತಿನ ಖೇಡಾ ಜಿಲ್ಲೆಯ ಬಡ ರೈತರ ಸಣ್ಣ ಗುಂಪು ಸಮಾಜಕ್ಕೆ ಒಳಿತಾಗುವ, ಸ್ವಾರ್ಥಪರವಲ್ಲದ ರೀತಿಯಲ್ಲಿ ಕಾರ್ಯನಿರ್ವಹಿಸುವ ದೂರದೃಷ್ಟಿ ಮತ್ತು ಮುನ್ನೋಟವನ್ನು ಹೊಂದಿದ್ದರು.
ಕ್ಷೀರೋತ್ಪಾದನೆ /ಹಾಲಿನ ಉತ್ಪಾದನೆಯಲ್ಲಿ ವೃದ್ಧಿ
[ಬದಲಾಯಿಸಿ]ಹಾಲಿನ ಉತ್ಪಾದನೆಯಲ್ಲಿ ಅಧಿಕ ಸಾಧನೆಯಾಗಿದೆ ಎಂದು, 2014ರಲ್ಲಿ 'ಅಸೋಚಾಂ'(ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ೨೦೦೬ ರಿಂದ ೨೦೧೦ ( 2006-2010)ರ ಅವಧಿಯಲ್ಲಿ ಆಂಧ್ರವು ಕ್ಷೀರ ಉತ್ಪಾದನೆಯಲ್ಲಿ ೧೧ಲಕ್ಷ ಟನ್ ಹಾಲು ಉತ್ಪಾದನೆ ಆಗುತ್ತಿದೆ.ದೇಶದಲ್ಲಿ ೩ನೇ ಸ್ಥಾನದಲ್ಲದೆ.
- ಭಾರತ (ಶೇ.೧೯ರಷ್ಟು ಅಧಿಕ) ೨೦೧೦/ 2010ರಲ್ಲಿ ೧೨೧೧ (1211) ಲಕ್ಷ ಟನ್ ಹಾಲು ಉತ್ಪಾದನೆ ಆಗಿದೆ -
- ಉತ್ತರ ಪ್ರದೇಶ ಮೊದಲ ಸ್ಥಾನ -ಶೇ. ೧೭ ರಷ್ಟು ಉತ್ಪಾದನೆ.(ತಲಾ ಪ್ರತಿದಿನ ೨೫೨ಗ್ರಾಂ ಭಾರತದಲ್ಲಿ - ಜಾಗತಿಕ ೫೨೨ ಗ್ರಾಂ)
- ನ್ಯೂಜಿಲೆಂಡ್ - ಪ್ರತಿದಿನ ೯೭೭೩ ಗ್ರಾಂ.ಐರ್ಲೆಂಡ್ -೩೨೬೦ಗ್ರಾಂ. ಡೆನ್ಮಾರ್ಕ್ -೨೪೧೧ ಗ್ರಾಂ.
- ಪಂಜಾಬು -೯೩೭ ಗ್ರಾಂ.ಕರ್ನಾಟಕ - ತಲಾ ? ಉತ್ಪಾದನಾಪ್ರಗತಿ ಶೇ ೨೪ರಷ್ಟು.
- ೨೦೧೯-೨೦ ಕ್ಕೆ ೧೭೭೦ಲಕ್ಷ ಟನ್ ಗುರಿ.
- ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ -ಸುದ್ದಿಗೋಷ್ಟಿ ೨೨-೪-೨೦೧೪;೨೩-೪-೨೦೧೪ ಪ್ರಜಾವಾಣಿ)
ಉಲ್ಲೇಖಗಳು
[ಬದಲಾಯಿಸಿ]- ↑ Amul - The Taste of India. "Welcome to Amul - The Taste of India". Amul.com. Retrieved 2010-07-12.
- ↑ "ದಿ ಅಮುಲ್ ಸ್ಟೋರಿ - ಜನರಲ್ ಮ್ಯಾನೇಜ್‌ಮೆಂಟ್ ರಿವ್ಯೂ". Archived from the original on 2005-12-04. Retrieved 2011-01-25.
- ↑ ಅಲೆಕ್ಸಾಂಡರ್ ಫ್ರೇಸರ್ ಲೇಡ್‌ಲಾ. ಸಹಕಾರ ಸಂಘಗಳು ಮತ್ತು ಬಡವರು . ಇಂಟರ್‌ನ್ಯಾಷನಲ್ ಕೋಆಪರೇಟಿವ್ ಅಲೈಯೆನ್ಸ್ ಮತ್ತು ಕೆನಡಿಯನ್ ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್ ಏಜನ್ಸಿ, ೧೯೭೭ಕ್ಕೆ ಸಿದ್ಧಪಡಿಸಿದ ಬೆಳವಣಿಗೆ ಅಧ್ಯಯನ.
- ↑ ಎಕಾನಾಮಿಕ್ ಟೈಮ್ಸ್
- ↑ ಅಮುಲ್‌ನ ಸೇಲ್ಸ್ ಟರ್ನೋವರ್
- ↑ "ಅಮುಲ್ ಹೋಪ್ಸ್ ಟು ಫ್ಲೋ ಇಂಟು ಜಪಾನೀಸ್ ಮಾರ್ಕೆಟ್". Archived from the original on 2006-01-17. Retrieved 2021-08-24.
- ↑ "ಆರ್ಕೈವ್ ನಕಲು" (PDF). Archived from the original (PDF) on 2011-07-27. Retrieved 2011-01-25.
- ↑ ಅಮುಲ್ ರೆಡಿ ಟು ಟೇಕ್ ಆನ್ ಪೆಪ್ಸಿ, ಕೋಕ್ ಇನ್ ಸ್ಪೋರ್ಟ್ಸ್ ಡ್ರಿಂಕ್ ಸೆಗ್ಮೆಂಟ್
- ↑ ದಿ ಅಮುಲ್ ಮ್ಯಾಸ್ಕಾಟ್ ಸ್ಟೋರಿ - ಅಮುಲ್'ಸ್ ವೆ ಬ್‌ಸೈಟ್
- ↑ NDTV ಮೂವೀಸ್ Archived 2007-09-29 ವೇಬ್ಯಾಕ್ ಮೆಷಿನ್ ನಲ್ಲಿ. NDTV .
- ↑ ಶ್ಯಾಮ್ ಬೆನಗಲ್ ಎಟ್ ucla.net ಸೌತ್ ಏಷ್ಯಾ ಸ್ಟಡೀಸ್ , ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯ, ಲಾಸ್ ಏಂಜಲೀಸ್ (UCLA).
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಅಧಿಕೃತ ಅಂತರಜಾಲತಾಣ
- ಅಮುಲ್‌ನ ಇತಿಹಾಸ Archived 2006-03-12 ವೇಬ್ಯಾಕ್ ಮೆಷಿನ್ ನಲ್ಲಿ.
- Amul.tv Archived 2007-02-28 ವೇಬ್ಯಾಕ್ ಮೆಷಿನ್ ನಲ್ಲಿ.
- [೧]
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with hatnote templates targeting a nonexistent page
- Articles with unsourced statements from November 2009
- Articles with unsourced statements from March 2009
- Articles with unsourced statements from April 2009
- All articles with specifically marked weasel-worded phrases
- Articles with specifically marked weasel-worded phrases from September 2009
- All articles with unsourced statements
- Articles with unsourced statements from September 2009
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with unsourced statements from October 2009
- Commons category link is on Wikidata
- ಭಾರತದಲ್ಲಿ ಸಹಕಾರ ಸಂಘಗಳು
- 1946ರಲ್ಲಿ ಸ್ಥಾಪನೆಯಾದ ಕಂಪೆನಿಗಳು
- ಗುಜರಾತಿನ ಮೂಲದ ಕಂಪೆನಿಗಳು
- ಐಸ್ ಕ್ರೀಂ ಬ್ರಾಂಡ್‌ಗಳು
- ಗುಜರಾತಿನ ಆರ್ಥಿಕತೆ
- ಭಾರತದ ಡೈರಿ ಉತ್ಪನ್ನಗಳ ಕಂಪೆನಿಗಳು
- ಭಾರತದ ಬ್ರಾಂಡ್‌ಗಳು
- ಉದ್ಯಮ
- ಕಂಪನಿಗಳು