ಮೇಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಮೇಣಗಳು ವೈವಿಧ್ಯಮಯ ವರ್ಗದ ಕಾರ್ಬನಿಕ ಸಂಯುಕ್ತಗಳು. ಹೊರಗಿನ ತಾಪಮಾನದ ಹತ್ತಿರ ಇವು ಲಿಪಿಡ್‌ಗಳಲ್ಲಿ/ಕೊಬ್ಬುಗಳಲ್ಲಿ ಕರಗುವ, ಬಡಿದು ತಗಡಾಗಿಸಬಲ್ಲ ಘನಪದಾರ್ಥಗಳಾಗಿರುತ್ತವೆ. ಮೇಣಗಳು ನೀರಿನ ಕರಗುವುದಿಲ್ಲ ಆದರೆ ಕಾರ್ಬನಿಕ, ಅಧ್ರುವೀಯ ದ್ರಾವಕಗಳಲ್ಲಿ ಕರಗುತ್ತವೆ. ಪ್ರಾಣಿಗಳು ಮತ್ತು ಸಸ್ಯಗಳು ವಿಭಿನ್ನ ಬಗೆಗಳ ಪ್ರಾಕೃತಿಕ ಮೇಣಗಳನ್ನು ಉತ್ಪಾದಿಸುತ್ತವೆ ಮತ್ತು ಮೇಣಗಳು ಖನಿಜ ತೈಲದಲ್ಲಿ ಕಂಡುಬರುತ್ತವೆ.

ಅತ್ಯಂತ ಪರಿಚಿತವಾದ ಪ್ರಾಣಿ ಮೇಣವೆಂದರೆ ಜೇನಿನ ಮೇಣ. ಇದು ಜೇನುನೊಣಗಳ ಗೂಡುಗಳ ನಿರ್ಮಾಣದಲ್ಲಿ ಬಳಸಲ್ಪಡುತ್ತದೆ. ಆದರೆ ಇತರ ಕೀಟಗಳೂ ಮೇಣವನ್ನು ಸ್ರವಿಸುತ್ತವೆ. ಟ್ರಯಾಕಾಂಟೆನಾಲ್ ಮತ್ತು ಪಾಮಿಟಿಕ್ ಆಮ್ಲದ ಎಸ್ಟರ್ ಆಗಿರುವ ಮಿರಿಸಿಲ್ ಪಾಮಿಟೇಟ್ ಜೇನಿನ ಮೇಣದ ಪ್ರಧಾನ ಘಟಕವಾಗಿದೆ. ಇದರ ಕರಗುವ ಬಿಂದು 62-65 °C ಆಗಿದೆ. ಉಣ್ಣೆಕೊಬ್ಬು ಉಣ್ಣೆಯಿಂದ ದೊರಕುವ ಮೇಣವಾಗಿದೆ, ಮತ್ತು ಇದು ಸ್ಟೆರಾಲ್‍ಗಳ ಎಸ್ಟರ್‌ಗಳನ್ನು ಹೊಂದಿರುತ್ತದೆ.[೧] ಸ್ಪರ್ಮಸೆಟಿಯು ಸ್ಪರ್ಮ್ ತಿಮಿಂಗಲದ ಶಿರದ ತೈಲದಲ್ಲಿ ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Wilhelm Riemenschneider1 and Hermann M. Bolt "Esters, Organic" Ullmann's Encyclopedia of Industrial Chemistry, 2005, Wiley-VCH, Weinheim. doi:10.1002/14356007.a09_565.pub2
"https://kn.wikipedia.org/w/index.php?title=ಮೇಣ&oldid=911744" ಇಂದ ಪಡೆಯಲ್ಪಟ್ಟಿದೆ