ಹ. ಕ. ರಾಜೇಗೌಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಹ. ಕ. ರಾಜೇಗೌಡ
ಮಾನಸ ಗಂಗೋತ್ರಿಯ ಕಾರ್ಯಕ್ರಮವೊಂದರಲ್ಲಿ ರಾಜೇಗೌಡ
ಜನನ೧೯೩೬
ಹನುಮನಹಳ್ಳಿ, ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ
ಮರಣ೧೭ ಜೂನ್, ೨0೨೧
(೮೩ ವರ್ಷ)
ಮೈಸೂರು
ಕಾವ್ಯನಾಮಹ. ಕ. ರಾಜೇಗೌಡ
ವೃತ್ತಿಲೇಖಕ, ಸಂಶೋಧಕ, ಸಂಪಾದಕ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಜಾನಪದ ಸಂಶೋಧನೆ, ಸಂಪಾದನೆ
ವಿಷಯಗ್ರಾಮ್ಯ ಮತ್ತು ಬುಡಕಟ್ಟು ಸಂಸ್ಕೃತಿ, ಜನಪದ ಸಾಹಿತ್ಯ
ಮಕ್ಕಳುಡಾ. ಚೇತನ ಹೆಚ್. ಆರ್.

ಹನುಮನಹಳ್ಳಿ ಕಪನೀಗೌಡ ರಾಜೇಗೌಡ (೧೯೩೬–೨೦೨೧), ಸಾಹಿತ್ಯಲೋಕದಲ್ಲಿ ಡಾ. ಹ. ಕ. ರಾಜೇಗೌಡ (English: H. K. Rajegowda) ಎಂದೇ ಹೆಸರುವಾಸಿ. ಜಾನಪದ ಅಧ್ಯಯನ, ಸಂಶೋಧನೆ, ಸಂಗ್ರಹಣೆ ಮತ್ತು ಸಂಪಾದನೆಯಲ್ಲಿ ರಾಜೇಗೌಡರದು ದೊಡ್ಡ ಹೆಸರು. ಹಾ.ಮಾ.ನಾಯಕ, ಜೀ ಶಂ ಪರಮಶಿವಯ್ಯನವರ ಸಹವರ್ತಿಯಾಗಿ ಜಾನಪದ ಅಧ್ಯಯನಕ್ಕೆ ದುಡಿದ ಅವರು, ಕನ್ನಡ ಜಾನಪದ ಸಂಶೋಧನೆಯ ಮಹತ್ವನ್ನು ಪ್ರಾಯೋಗಿಕವಾಗಿ ಸಾಧಿಸಿ ತೋರಿಸಿದ ಆದ್ಯರಲ್ಲಿ ಒಬ್ಬರು.

ಬಾಲ್ಯ-ಶಿಕ್ಷಣ-ವೃತ್ತಿ[ಬದಲಾಯಿಸಿ]

1936ರಲ್ಲಿ ನಾಗಮಂಗಲ ತಾಲೂಕಿನ ಹನುಮನಹಳ್ಳಿಯ ಕೃಷಿಕ ಕುಟುಂಬದಲ್ಲಿ ರಾಜೇಗೌಡ ಹುಟ್ಟಿದರು. ಕನ್ನಡ ಸ್ನಾತಕೋತ್ತರ ಪದವಿ ಪಡೆದ ಅವರ ಆಸಕ್ತಿ ಜಾನಪದ ಅಧ್ಯಯನದೆಡೆ ಹೊರಳಿತು.

ಬೆಂಗಳೂರು, ಕನಕಪುರ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ ರಾಜೇಗೌಡರು ಮೈಸೂರು ವಿಶ್ವವಿದ್ಯಾಲಯಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾ ವಿಭಾಗ ಸೇರಿದರು. ಅವರ ಸಂಶೋಧನೆಯ ಫಲವಾಗಿ ಸಾಕಷ್ಟು ಮೌಲಿಕ ಕೃತಿಗಳು ಹೊರಬಂದವು. ಹಲವಾರು ಭಾಷೆಗಳಲ್ಲಿ ಮಾತನಾಡಬಲ್ಲ ರಾಜೇಗೌಡರು ಮರಾಠಿ, ಪಂಜಾಬಿ, ಒಡಿಯಾ, ತಮಿಳು,ಮಲಯಾಳಂ, ಹಿಂದಿ ಭಾಷೆಗಳ ಕಥೆಗಳನ್ನು ಅನುವಾದಿಸಿ ಪ್ರಕಟಿಸಿದ್ದಾರೆ.[೧]

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ, ಸಂಶೋಧಕರ ಸಂಘದ ಅಧ್ಯಕ್ಷರಾಗಿ ರಾಜೇಗೌಡರು ಜಾನಪದ ಸಂಶೋಧನಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಮರಣ[ಬದಲಾಯಿಸಿ]

ರಾಜೇಗೌಡರು ೧೭ ಜೂನ್ ೨೦೨೧ರ ಗುರುವಾರದಂದು ಮೈಸೂರಿನಲ್ಲಿ ನಿಧನರಾದರು.[೨] ಅವರಿಗೆ ೮೩ ವರ್ಷ ವಯಸ್ಸಾಗಿತ್ತು.

ಕೃತಿಗಳು[ಬದಲಾಯಿಸಿ]

ರಾಜೇಗೌಡರು ಸಂಪಾದಿಸಿ, ಪ್ರಕಟಿಸಿರುವ ಅಸಂಖ್ಯಾತ ಲೇಖನಗಳು, ಕೃತಿಗಳಲ್ಲಿ ಕೆಲವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.[೩]

ಕಥಾಸಂಕಲನಗಳು
 • "ಜಗತ್ತಿನ ಜನಪದ ಕಥೆಗಳು"
 • "ಮಳೆ ಹುಯ್ಯುತ್ತಿದೆ"
ವಿಮರ್ಶಾಕೃತಿಗಳು
 • "ವಿವೇಚನೆ"
ಸಂಪಾದನೆ
 • "ಕುವೆಂಪು ಸಾಹಿತ್ಯ ಲೋಕ" - ಸಂಪುಟ ೧, ೨, ೩, ೪[೪]
 • "ಕರಿಭಂಟನ ಕಾಳಗ"
 • "ಕೊಡಗದ ಮಾರಯ್ಯನ ಚರಿತ್ರೆ"
 • "ಕಲ್ಯಾಣಕೀರ್ತಿಯ ಕೃತಿಗಳು"
 • "ಪರೋಪಕಾರಿ: ಶ್ರೀ ಎನ್. ಜಿ. ಗುಜ್ಜೇಗೌಡ" - ಅಭಿನಂದನಾ ಗ್ರಂಥ
 • "ಸಾಹಸಯಾತ್ರಿ: ಶ್ರೀ ಪಿ. ಎನ್. ಜವರಪ್ಪ ಗೌಡ" - ಅಭಿನಂದನಾ ಗ್ರಂಥ
ಇತರೆ
 • "ಸಾವನ ದುರ್ಗ"
 • "ಆದಿ ಚುಂಚನಗಿರಿ'"
 • "ಸಂಶೋಧನ ದರ್ಶನ"

ಪ್ರಶಸ್ತಿ-ಪುರಸ್ಕಾರ[ಬದಲಾಯಿಸಿ]

 • 2014 - ’ಹ. ಕ. ರಾಜೇಗೌಡ - 78: ಅಭಿನಂದನಾ ಸಮಾರಂಭ’ದಲ್ಲಿ "ರಾಜಪಥ" ಅಭಿನಂದನಾ ಗ್ರಂಥ ಸಮರ್ಪಣೆ[೫]
 • ಆದಿ ಚುಂಚನಗಿರಿ ಮಹಾಸಂಸ್ಥಾನ - "ಚುಂಚಶ್ರೀ ಪ್ರಶಸ್ತಿ"
 • 2011 - ಆದಿಚುಂಚನಗಿರಿಯಲ್ಲಿ ನಡೆದ 10ನೇ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೌರವ[೬]
 • 2007 - ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ "ಬಿ. ಎಸ್. ಗದ್ದಗಿಮಠ" ಪ್ರಶಸ್ತಿ[೭]

ಇತ್ಯಾದಿ.

ಉಲ್ಲೇಖಗಳು[ಬದಲಾಯಿಸಿ]

 1. "ಹ. ಕ. ರಾಜೇಗೌಡ". bookbrahma.com.
 2. Dilip DR (17 June 2021). "ಸಾಹಿತಿ ಹಾಗೂ ಹಿರಿಯ ಸಂಶೋಧಕ ರಾಜೇಗೌಡ ವಿಧಿವಶ". Vijaya Karnataka.
 3. "Books by H. K. Rajegowda". worldcat.org.
 4. "ಕುವೆಂಪು ಸಾಹಿತ್ಯ ಲೋಕ ಸಂಪುಟ". Navakarnatakaonline.com.
 5. "ಹ. ಕ. ರಾಜೇಗೌಡ-೭೮:ಅಭಿನಂದನಾ ಸಮಾರಂಭ". Vijayakarnataka.com.
 6. "ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹ. ಕ. ರಾಜೇಗೌಡ ಆಯ್ಕೆ". Prajavani.com.
 7. "ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ". Times of India.

ಹೊರಗಿನ ಕೊಂಡಿಗಳು[ಬದಲಾಯಿಸಿ]

"Books by H. K. Rajegowda". worldcat.org.