ರೈಲು ನಿಲ್ದಾಣ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಲಂಡನ್‌ನ ಸ್ಯಾಂಡರ್ಸ್ಟೇಡ್ ರೈಲು ನಿಲ್ದಾಣ

ರೈಲು ನಿಲ್ದಾಣ(ರೈಲ್ವೆ ಸ್ಟೇಷನ್) - ರೈಲುಗಳಿಂದ ಪ್ರಯಾಣಿಕರು ಹಾಗು ಸಾಮಾನುಗಳನ್ನು ಇಳಿಸುವ ಅಥವಾ ಹತ್ತಿಸುವ ನಿಲುಗಡೆಯ ತಾಣ. ಸಮಾನ್ಯವಾಗಿ ರೈಲು ನಿಲ್ದಾಣಗಳಲ್ಲಿ ಓಂದು ಮುಖ್ಯ ಕಟ್ಟಡವಿದ್ದು, ಇದರಲ್ಲಿ ರೈಲು ನಿಲ್ದಾಣದ ಪ್ರಯಾಣಿಕರಿಕೆ ಬೇಕಾಗುವ ವ್ಯವಸ್ಥೆಯಿರುತ್ತದೆ. ರೈಲುಗಳನ್ನು ಹತ್ತಿ ಇಳಿಯಲು ಪ್ರಯಾಣಿಕರಿಕೆ ರೈಲು ಪ್ಲ್ಯಾಟ್‌ಫಾರ್ಮ್ಗಳ ವ್ಯವಸ್ಥೆಯಿರುತ್ತದೆ. ಸಣ್ಣ ರೈಲು ನಿಲ್ದಾಣಗಳಲ್ಲಿ ಒಂದರಿಂದ ಎರಡು ಪ್ಲ್ಯಾಟ್‌ಫಾರ್ಮಗಳಿದ್ದರೆ, ದೊಡ್ಡ ನಿಲ್ದಾಣಗಳಲ್ಲಿ ಅನೇಕ ಫ್ಲ್ಯಾಟ್‌ಫಾರ್ಮ್‌ಗಳಿರುತ್ತವೆ. ಹಿಂದಿನ ಕಾಲದಲ್ಲಿ ಪ್ರಯಾಣಿಕರು ಹಾಗು ಸಾಮನು ಸಾಗಣೆಗೆ ಒಂದೇ ನಿಲ್ದಾಣವನ್ನ ಉಪಯೋಗಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸರಕು ಸಾಗಣೆಗೆ ಪ್ರತ್ಯೇಕ ವ್ಯವಸ್ಥೆ ಇರುತ್ತದೆ.

ರೈಲು ನಿಲ್ದಾಣಗಳು ಬೆಳೆದ ಹಾದಿ[ಬದಲಾಯಿಸಿ]

ಕ್ಯೋಟೊ, ಜಪಾನ್ ನಗರದಲ್ಲರುವ ಆಧನಿಕ ನಿಲ್ದಾಣ

ಪ್ರಪಂಚದ ಪ್ರಥಮ ರೈಲು ನಿಲ್ದಾಣ ಇಂದಿನ ಕಾಲದ ಬಸ್ ನಿಲ್ದಾಣಗಳನ್ನು ಹೊಲುತ್ತಿತ್ತು. ಅವುಗಳಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಸರಿಯಾದ ವ್ಯವಸ್ಥೆ ಇರಲಿಲ್ಲ. ಲಿವರ್‌ಪೂಲ್ ಹಾಗು ಮ್ಯಾಂಚೆಶ್ಟರ್ ರೈಲ್ವೆಯ ವತಿಯಿಂದ ಪ್ರಥಮ ರೈಲು ನಿಲ್ದಾಣಗಳು ೧೮೩೦ರಲ್ಲಿ ಆರಂಭವಾಯಿತು.ಇವು ಜಾರ್ಜಿಯನ್ ಕಾಲದ ಸಾಲು ಮನೆಗಳನ್ನು ಹೊಲುತಿತ್ತು [೧].

ಹಿಂದಿನ ಕಾಲದಲ್ಲಿ ಅಮೇರಿಕ ಹಾಗು ಕೆನಡಾ ದೇಶಗಳ ಗ್ರಾಮಾಂತರ ಹಾಗು ದೂರದ ಪ್ರದೇಶಗಳಲ್ಲಿ,ಪ್ರಯಾಣಿಕರು ರೈಲು ನಿಲ್ದಾಣದಲ್ಲಿ ರೈಲುಗಳನ್ನು ನಿಲ್ಲ್ಲಿಸಲು ಬಾವುಟವನ್ನು ತೊರಿಸುತ್ತಿದ್ದರು. ಇಂತಹ ನಿಲ್ದಾಣಗಳನ್ನು ಫ್ಲ್ಯಾಗ್ ನಿಲ್ದಾಣವೆಂದು ಕರೆಯಲಾಗುತಿತ್ತು.[೧]

೧೯ನೆ ಶತಮಾನದಲ್ಲಿ ನಿರ್ಮಾಣವಾದ ರೈಲು ನಿಲ್ದಾಣಗಳು ಆಗಿನ ಕಾಲದ ವಾಸ್ತುಶಾಸ್ತ್ರ ಶೈಲಿಯನ್ವಯ ನಿರ್ಮಾಣಗೊಳ್ಳುತಿದ್ದವು. ಹೆಚ್ಚಿನ ನಿಲ್ದಾಣಗಳು ಗೊಥಿಕ್ ವಾಸ್ತುಶಾಸ್ತ್ರ ಶೈಲಿಯಲ್ಲಿ ನಿರ್ಮಾಣ ಗೊಳ್ಳುತ್ತಿದ್ದವು. ಇದಾದ ನಂತರ ಕೆಲವು ಕಾಲ ನಿಲ್ದಾಣಗಳನ್ನು ಇದೇ ಮಾದರಿಯಲ್ಲಿ ನಿಲ್ದಾಣಗಳನ್ನು ನಿರ್ಮಿಸಲಾಗುತಿತ್ತು. ಆದರೆ, ಇತ್ತೀಚೆಗೆ ನಿರ್ಮಾಣಗೊಂಡ ರೈಲು ನಿಲ್ದಾಣಗಳು, ಆಧುನಿಕ ವಿಮಾನ ನಿಲ್ದಾಣಗಳನ್ನು ಹೋಲುತ್ತವೆ.

ಆಧುನಿಕ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಕೆಲವು ಪ್ರಮುಖ ರೈಲು ನಿಲ್ದಾಣಗಳೆಂದರೆ:

ಪ್ರಪಂಚದ ಪ್ರಮುಖ ರೈಲು ನಿಲ್ದಾಣಗಳು[ಬದಲಾಯಿಸಿ]

ಜಪಾನ್ ದೇಶದ ಟೊಕಿಯೋ ನಗರದಲ್ಲಿರುವ ಶಿನ್ಜುಕು ರೈಲು ನಿಲ್ದಾಣ ಪ್ರಪಂಚದ ಅತ್ಯಂತ ಜನನಿಬಿಡ ರೈಲು ನಿಲ್ದಾಣ.ಇದರಿಂದ ಕೆಲವೇ ನಿಮಿಷಗಳ ದೂರದಲ್ಲಿರುವ ಇಕೆಬುಕುರೊ ರೈಲು ನಿಲ್ದಾಣ,ಪ್ರಪಂಚದ ಎರಡನೇ ಅತ್ಯಂತ ಜನನಿಬಿಡ ರೈಲು ನಿಲ್ದಾಣ.

ವಿಸ್ತೀರ್ಣದ ದೃಷ್ಟಿಯಿಂದ ಜಪಾನ್ ನಲ್ಲಿರುವ ನಗೋಯ ರೈಲು ನಿಲ್ದಾಣ ಅತಿ ದೊಡ್ಡ ನಿಲ್ದಾಣ.ಟೊಕಿಯೋ ನಗರದಲ್ಲಿರುವ ಶಿನ್ಜುಕು ರೈಲು ನಿಲ್ದಾಣ ಎರಡನೇ ಅತಿ ದೊಡ್ಡ ರೈಲು ನಿಲ್ದಾಣ.

ರೈಲು ಪ್ಲ್ಯಾಟ್‌ಫಾರ್ಮ್‌ಗಳ ಸಾಮರ್ಥ್ಯದ ದೃಷ್ಟಿಯಿಂದ ನ್ಯೂಯಾರ್ಕ ನಗರದಲ್ಲಿರುವ ಗ್ರ್ಯಾಂಡ್ ಸೆಂಟ್ರಲ್ ಟರ್ಮಿನಲ್ ಅತ್ಯಂತ ದೊಡ್ಡ ರೈಲು ನಿಲ್ದಾಣ.

ಇವನ್ನೂ ನೋಡಿ[ಬದಲಾಯಿಸಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]

  • Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.