ವಾಸ್ತುಶಾಸ್ತ್ರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವಾಸ್ತುಶಾಸ್ತ್ರ = ವಾಸ್ತು ವೇದ. ವಾಸ್ತುಶಾಸ್ತ್ರವು ಪ್ರಮುಖವಾದ ಹಿಂದೂ ನಿರ್ಮಾಣ ವಿಧಾನವಾಗಿರುತ್ತದೆ. ಇದನ್ನು ದೇವಸ್ಥಾನ ನಿರ್ಮಾಣದಲ್ಲಿ ಅತೀ ಮುಖ್ಯವಾದ ಅಂಶ ಎಂದು ಭಾವಿಸಲಾಗುತ್ತದೆ. ವಾಸ್ತುಶಾಸ್ತ್ರವನ್ನು ದೇವಾಲಯ ಮತ್ತು ಮನುಷ್ಯಾಲಯ ನಿರ್ಮಾಣಗಳಲ್ಲಿ ಬಹಳವಾಗಿ ಬಳಸಲಾಗುತ್ತದೆ. ಇನ್ನು, ಯಾನ=ವಾಹನ, ಆಸನ ಇತ್ಯಾದಿಗಳ ನಿರ್ಮಾಣದಲ್ಲಿಯೂ ಬಳಸಲಾಗುತ್ತದೆ. ನಗರಗಳ ನಿರ್ಮಾಣಗಳ ಬಗ್ಗೂ ವಿಚಾರಗಳು ಲಭ್ಯವಿವೆ.

ಪರಿಭಾಷೆ[ಬದಲಾಯಿಸಿ]

"ವಸತಿ ಇತಿ ವಾಸ್ತುಃ" = "ವಾಸ ಮಾಡಲ್ಪಡುತ್ತದೆ ಎನ್ನುವುದರಿಂದ ವಾಸ್ತು"ಎಂದು ಮಯಮತದಲ್ಲಿ ನಿರ್ವಚಿಸಲಾಗಿದೆ. ಸಂಸ್ಕೃತದಲ್ಲಿ ವಾಸ್ತು ಅಂದರೆ ಯಾವುದೇ ಸ್ಥಿರವಾದ ವಸ್ತು, ಪದಾರ್ಥ, ಭೌತಿಕವಸ್ತು, ಅಥವಾ ಸರಕು; ಸಾಮಾನು, ಸಂಪತ್ತು ಅಥವಾ ಆಸ್ತಿ, ಸ್ವತ್ತು, ಸಂಪತ್ತು. ಸಂಸ್ಕೃತದಲ್ಲಿ ಶಾಸ್ತ್ರ ಅಂದರೆ ವಿಜ್ಞಾನ = ವಿಶೇಷ ಜ್ಞಾನ; ವೈಜ್ಞಾನಿಕ /ಪಾರಂಪರಿಕ ಬೋಧನೆ ಎನ್ನಬಹುದು[೧]. ಪಾರಂಪರಿಕವಾಗಿ ಆಗಮ ಶಾಸ್ತ್ರ ಕೇಂದ್ರಿತವಾಗಿಯೇ ವಾಸ್ತುವು ಬೆಳೆದುಬಂದಿದೆ. ಈ ಮಧ್ಯೆಯೂ ಯೋಗಶಾಸ್ತ್ರ ಮತ್ತಿತರ ದರ್ಶನ ಶಾಸ್ತ್ರಗಳನ್ನು ಆಧರಿಸಿದ ಮೂಲಭೂತ ವಿಜ್ಞಾನವನ್ನು ಒಳಗೊಂಡ ಆದರೆ ವ್ಯಾಪಕವಾಗಿ ಬಳಕೆಯಲ್ಲಿ ಇಲ್ಲದ ಯೋಗಿಗಳ ಅರಿವಿನ ಒಳಗೇ ಹುದುಗಿರುವ ವಿಭಿನ್ನವಾದ ಪರಂಪರೆಯೂ ಇದೆ.

ವಾಸ್ತುಶಾಸ್ತ್ರವನ್ನು ಒಳಗೊಂಡ ಪಾರಂಪರಿಕ ಗ್ರಂಥಗಳು[ಬದಲಾಯಿಸಿ]

 • ಮಾನಸಾರ ಶಿಲ್ಪಶಾಸ್ತ್ರ
 • ಮಯಮತ (ಮಯಾಸುರನ ರಚನೆ)
 • ವಿಶ್ವಕರ್ಮ ವಾಸ್ತುಶಾಸ್ತ್ರ (ವಿಶ್ವ ಕರ್ಮನ ರಚನೆ)
 • ಸಮರಾಂಗಣ ಸೂತ್ರಧಾರ (ರಾಜ ಭೋಜನ ರಚನೆ)
 • ಅಪರಾಜಿತ ಪೃಚ್ಛ (ವಿಶ್ವ ಕರ್ಮ ಮತ್ತು ಅವನ ಮಗ ಅಪರಾಜಿತರ ನಡುವಿನ ಮಾತುಕತೆ)
 • ಶಿಲ್ಪರತ್ನ
 • "ಮನುಷ್ಯಾಲಯ ಚಂದ್ರಿಕಾ"
 • "ತಂತ್ರಸಮುಚ್ಚಯ" ಮತ್ತು "ಶೇಷಸಮುಚ್ಚಯ"
 • "ವಾಸ್ತುಸೂತ್ರೋಪನಿಷತ್"

ಮೂಲಭೂತ ಪರಿಕಲ್ಪನೆ[ಬದಲಾಯಿಸಿ]

ಪಾರಂಪರಿಕ ಆಗಮ ಕೇಂದ್ರಿತ ವಾಸ್ತುಶಾಸ್ತ್ರದಲ್ಲಿ ಬಹಳಷ್ಟು ಪರಿಕಲ್ಪನೆಗಳನ್ನು ಆಗಮ ತಂತ್ರ ಗಳಿಂದಲೇ ಪಡೆಯಲಾಗಿದೆ. ಇದರಲ್ಲಿ "ವಾಸ್ತುಸೂತ್ರೋಪನಿಷತ್" ಎನ್ನುವ ಗ್ರಂಥದಲ್ಲಿ ವಿವರಿಸಿದಂತಹ ವೈದಿಕ ಮೂಲವಾದ ಪರಿಕಲ್ಪನೆಗಳು ಮತ್ತು ಆಗಮಗಳಲ್ಲಿ ಸ್ವತಂತ್ರವಾಗಿರುವ ಪರಿಕಲ್ಪನೆಗಳು ಇವೆ. ಬಹಳ ಗೌಣವಾಗಿ ಯೋಗ ಶಾಸ್ತ್ರ ಮತ್ತಿತರ ದರ್ಶನ ಶಾಸ್ತ್ರ ಕೇಂದ್ರಿತ ಕಲ್ಪನೆಗಳು ಇವೆ. [ಉದಾ: ಪಂಚ ಮಹಾಭೂತಗಳು= * ಪೃಥ್ವೀ=ಭೂಮಿ ; * ಜಲ=ನೀರು; * ವಾಯು=ಗಾಳಿ; * ಅಗ್ನಿ=ಬೆಂಕಿ; * ಆಕಾಶ]

ವಾಸ್ತು ಪುರುಷ ಮಂಡಲ[ಬದಲಾಯಿಸಿ]

ವಾಸ್ತು ಪುರುಷ ಮಂಡಲ ಸಿದ್ದಾಂತ

ವಾಸ್ತು ಪುರುಷ ಮಂಡಲ ಎನ್ನುವುದು ವಾಸ್ತುಶಾಸ್ತ್ರದಲ್ಲಿ ಅತ್ಯಗತ್ಯವಾದ ಭಾಗ. ಹಿಂದೂ ವಿಶ್ವವಿಜ್ಞಾನದ ಪ್ರಕಾರ ಭೂಮಿಯ ಮೇಲ್ಮೈ ಚೌಕ, ಭೂಮಿಯು ವಾಸ್ತು ಪುರುಷ ಮಂಡಲದ ನಾಲ್ಕು ಬದಿಗಳನ್ನು ದಿಗಂತವೆಂದೂ ಸೂರ್ಯಾಸ್ತ ಹಾಗೂ ಸೂರ್ಯೋದಯ ಹಾಗೂ ಉತ್ತರ ದಕ್ಶಿಣ ದಿಕ್ಕುಗಳೆನ್ನಲಾಗಿದೆ. ವಾಸ್ತು ಪುರುಷ ಮಂಡಲದ ನಂಬಿಕೆಯು ಈ ಪ್ರಕಾರವಾಗಿದೆ. ಒಮ್ಮೆ ಅಗೋಚರ ಶಕ್ತಿಯು ಸ್ವರ್ಗವನ್ನು ಭೂಮಿಯಿಂದ ತಡೆಗಟ್ಟಿದಾಗ ಬ್ರಹ್ಮ ಹಾಗೂ ಇತರೆ ದೇವರುಗಳು ಸೇರಿ ಅವನ್ನನ್ನು ಭೂಮಿಯ ಅಡಿಯಲ್ಲಿ ಬಂದಿಸಿ ಇಡುತ್ತಾರೆ. ಈ ಕಥೆಯ ಪ್ರಕಾರ ವಾಸ್ತು ಪುರುಷ ಮಂಡಲವು ರಚನೆಯಾಗಿದೆ. ವಾಸ್ತು ಪುರುಷ ಮಂಡಲದಲ್ಲಿ ೪೫ ದೇವರುಗಳು ಇವೆ, ಅವರಲ್ಲಿ ೩೨ ಅನ್ಯರು ಸೇರಿವೆ.

ಪ್ರಾಣ[ಬದಲಾಯಿಸಿ]

ವಾಸ್ತುಶಾಸ್ತ್ರವು ವೈಶಿಷ್ಟ್ಯವು ಕಟ್ಟಡ ಹಾಗೂ ಸ್ಠಳದ ಮೂಲಕ ಶಕ್ತಿಯ ಹರಿವನ್ನು ನಿರ್ಧರಿಸುವುದಾಗಿದೆ. ಗುರುತ್ವಾಕರ್ಷಣಾ ಶಕ್ತಿಯ ಅಧಿಪತಿಯೇ "ವಾಸ್ತುಪುರುಷ".ಭೂಮಿ ಮೇಲೆ ನಿರ್ಮಿಸಿದ ಎಂಥದೇ ಕಟ್ಟಡದಲ್ಲಿ ವಾಸ್ತುಪುರುಷ ವಾಸಿಸುತ್ತಾನೆ ಮತ್ತು ನಿಯಮಗಳನುಸಾರ ಆ ಕಟ್ಟಡದೊಳಗೆ ಪ್ರವೇಶಿಸುವ ದುಷ್ಟ ಹಾಗೂ ಅನಿಷ್ಟಕಾರ ಶಕ್ತಿಗಳನ್ನು ಆತ ನಿಯಂತ್ರಿಸುತ್ತಾನೆ.

ನಿರ್ಮಾಣದಲ್ಲಿ ಮಂಡಲದ ಪಾತ್ರ[ಬದಲಾಯಿಸಿ]

ಮಂಡಲದಲ್ಲಿರುವ ದೇವರುಗಳು ನೆಲಸಿದ ಪ್ರಕಾರ ಕಟ್ಟಡ ನಿರ್ಮಾಣ ಕೈಗೊಳ್ಳಲಾಗುತ್ತದೆ. ಅದರ ಪ್ರಕಾರ ಕಟ್ಟಡದ ಕೊಣೆಗಳನ್ನು ಕಟ್ಟಲಾಗುತ್ತದೆ. ಕೆಳಗಿನವು ಕೆಲವು ಉದಾಹರಣೆ:

 • ಉತ್ತರ - ಖಜಾನೆ, ಬೊಕ್ಕಸ, ಕೋಶಾಗಾರ, ಭಂಡಾರ
 • ಈಶಾನ್ಯ - ಪೂಜಾ ಸ್ಥಳ
 • ಪೂರ್ವ - ಮನೆಯ ದ್ವಾರ
Vastu floorplan.jpg
 • ಆಗ್ನೇಯ - ಅಡುಗೆ ಮನೆ
 • ದಕ್ಷಿಣ - ಮಲಗುವ ಕೋಣೆ, ಶಯನಗೃಹ
 • ನೈಋತ್ಯ - ಶಸ್ತ್ರಾಗಾರ
 • ಪಶ್ಚಿಮ - ಊಟದ ಕೊಣೆ , kkoಕೊಟ್ಟಿಗೆ
 • ವಾಯವ್ಯ - ಉಗ್ರಾಣ

References[ಬದಲಾಯಿಸಿ]