ಅಗ್ನಿ(ಹಿಂದೂ ದೇವತೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಗ್ನಿ ಇಂದ ಪುನರ್ನಿರ್ದೇಶಿತ)
ಅಗ್ನಿ
God of Fire
ಅಗ್ನಿ ಬೆಂಕಿಯ ದೇವತೆ
ದೇವನಾಗರಿअग्नि
ಸಂಸ್ಕೃತ ಲಿಪ್ಯಂತರಣಅಗ್ನಿ
ಸಂಲಗ್ನತೆದೇವ
ಸಂಗಾತಿಸ್ವಾಹಾ
ವಾಹನಟಗರು

ಅಗ್ನಿ ಒಬ್ಬ ಹಿಂದೂ ದೇವತೆ, ವೈದಿಕ ದೇವತೆಗಳ ಅತ್ಯಂತ ಪ್ರಮುಖರ ಪೈಕಿ ಒಬ್ಬನು. ಅವನು ಬೆಂಕಿಯ ದೇವರು ಮತ್ತು ಬಲಿಗಳ ಸ್ವೀಕಾರಕ. ಅಗ್ನಿಗೆ ಅರ್ಪಿಸಲಾದ ಬಲಿಗಳು ದೇವತೆಗಳಿಗೆ ಹೋಗುತ್ತವೆ ಏಕೆಂದರೆ ಅಗ್ನಿಯು ಇತರ ದೇವತೆಗಳಿಂದ ಮತ್ತು ಇತರ ದೇವತೆಗಳಿಗೆ ಸಂದೇಶವಾಹಕ. ಅಗ್ನಿಯು ಪೃಥ್ವಿಗೆ ಅಧಿಪತಿಯಾದ ದೇವತೆ ಎಂದು ಪ್ರಸಿದ್ಧನಾಗಿದ್ದು ದ್ಯಾವಾಪೃಥಿವ್ಯಾದಿ ಸಕಲ ಲೋಕಗಳಲ್ಲೂ ವ್ಯಾಪಿಸಿರುವ ದಿವ್ಯಜ್ಯೋತಿ, ದಿವ್ಯಶಕ್ತಿ. ಸಕಲ ದೇವಮಾನವಾದಿಗಳೆಲ್ಲರ ವ್ಯವಹಾರಕ್ಕೂ ಮಾರ್ಗದರ್ಶಕನಾದ್ದರಿಂದ ಅಗ್ನಿ ಎಂಬ ಹೆಸರು ಅನ್ವರ್ಥವಾಗಿದೆ (ನಿರುಕ್ತ 7.14). ವಿಶ್ವವ್ಯಾಪಕನೂ ವಿಶ್ವಧಾರಕನೂ ಸಕಲದೇವತಾತ್ಮನೂ ಅಮರನೂ ಆದ ಅಗ್ನಿಯ ರೂಪಾಂತರಗಳು ವೈಶ್ವಾನರಾದಿ ಸಂಜ್ಞೆಗಳಿಂದ ಪ್ರಶಂಸಿತವಾಗಿದೆ. ಸಕಲ ಭೂತಗಳಲ್ಲೂ ಪ್ರವೇಶಿಸಿ ನೇತೃವಾಗಿರುವುದರಿಂದ ವೈಶ್ವಾನರ, ಧನ ಮತ್ತು ಶಕ್ತಿದಾತನಾದ್ದರಿಂದ ಪ್ರವಿಣೋದಾಃ, ಉತ್ಪನ್ನವಾದ ಸಕಲವನ್ನೂ ಅರಿತಿರುವುದರಿಂದ ಜಾತವೇದಸ್, ನರರಿಂದ ಪ್ರಶಂಸಿತನಾಗಿರುವುದರಿಂದ ನರಾಶಂಸ, ಉದಕಗಳಿಂದ ಓಷಧಿಗಳೂ ಓಷಧಿಗಳಿಂದ ಅಗ್ನಿಯೂ ಉತ್ಪನ್ನವಾಗುವುದರಿಂದ ಅಪಾಂನಪಾತ್, ತನ್ನಿಂದ ತಾನೇ ಉತ್ಪನ್ನವಾಗುವುದರಿಂದ ತನೂನಪಾತ್, ಅಂಗಾರದಿಂದ (ಕೆಂಡ) ಉತ್ಪನ್ನವಾಗುವುದರಿಂದ ಅಂಗಿರಾ-ಹೀಗೆ ನಾನಾವಿಧವಾಗಿ ಅಗ್ನಿಯ ರೂಪಾಂತರಗಳನ್ನು ಸ್ತುತಿಸಿದೆ. ಅಗ್ನಿಯ ಸ್ವರೂಪವೆರಡು ವಿಧ. ಒಂದು ನಿತ್ಯ-ನಿಣ್ಯ ಗುಹ್ಯ ಇತ್ಯಾದಿ ವಿಶೇಷಣಗಳಿಂದ ವರ್ಣಿತವಾದ ಮತ್ತು ಸಾಧಾರಣ ದೃಷ್ಟಿಗೆ ಗೋಚರವಾಗದ ದಿವ್ಯ ಸ್ವರೂಪವುಳ್ಳದ್ದು. ಇನ್ನೊಂದು ಉತ್ಪನ್ನ-ಲೌಕಿಕಸ್ವರೂಪವುಳ್ಳದ್ದಾದರೂ ಅಸಾಧಾರಣಶಕ್ತಿಯಿಂದ ಕೂಡಿದ್ದು. ಈ ಎರಡು ರೂಪಗಳಿಂದಲೂ ಅಗ್ನಿಯ ಪ್ರಸಾರ ಮತ್ತು ಆಧಿಪತ್ಯ ಮೂರು ಲೋಕಗಳಿಗೂ ಸಂಬಂಧಿಸಿದೆ. ಅಗ್ನಿ ಪ್ರಥಮತಃ ದ್ಯುಲೋಕದಲ್ಲಿ ಆದಿತ್ಯಾತ್ಮನಾಗಿ ಉತ್ಪನ್ನನಾದ. ಎರಡನೆಯದಾಗಿ ಪೃಥ್ವಿಯಲ್ಲಿ ಜಾತವೇದರೂಪವನ್ನು ಹೊಂದಿದ. ಮೂರನೆಯದಾಗಿ ಅಂತರಿಕ್ಷದಲ್ಲಿ ಮಿಂಚಿನ ರೂಪದಲ್ಲಿ ಜನಿಸಿದ. ಈತ ದ್ಯುಲೋಕಕ್ಕೆ ಶಿರಸ್ಸಿನಂತೆ ಪ್ರಧಾನ. ಪೃಥ್ವಿಗೆ ನಾಭಿ ರೂಪದ ಸಂರಕ್ಷಕ. ದ್ಯಾವಾಪೃಥ್ವಿಗಳೆರಡಕ್ಕೂ ಅಧಿಪತಿ. ದಿವ್ಯಾಗ್ನಿ ರಾತ್ರಿಕಾಲದಲ್ಲಿ ಅಗ್ನಿ ರೂಪದಿಂದಲೂ ಪ್ರಾತಃಕಾಲ ಸೂರ್ಯರೂಪದಿಂದಲೂ ಪ್ರಕಾಶಿಸುತ್ತ ತನ್ನ ಲೋಕರಕ್ಷಣಾಕಾರ್ಯವನ್ನು ನಿರ್ವಹಿಸುತ್ತಾನೆ. ಸಕಲರೂಪಗಳನ್ನು ಹೊಂದಿರುವುದರಿಂದ ವಿಶ್ವಾಪ್ಸು. ಇವನೇ ಚಂದ್ರ, ಇವನೇ ವರುಣ, ಮಿತ್ರಾದಿ ಸಕಲದೇವತೆಗಳೂ ಇವನೇ. ಮೂರು ಲೋಕಗಳಲ್ಲೂ ವ್ಯಾಪಿಸುವುದರಿಂದ ತ್ರಿತ. ಆದಿತ್ಯಾದಿ ಮೂರು ರೂಪಗಳಿಂದ ಪ್ರಕಾಶಿಸುವುದರಿಂದ ತ್ರಯಃಕೇಶಿನಃ ಎಂದು ಪ್ರಶಂಸಿತನಾಗಿದ್ದಾನೆ. ತ್ರಿಮೂರ್ಥಾ ತ್ರಿಧಾತು ತ್ರಿಪಾಜಸ್ಯ ತ್ರ್ಯನೀಕ ಇತ್ಯಾದಿ ವಿಶೇಷಣಗಳು ಮೂರುಲೋಕಗಳಲ್ಲೂ ಅಗ್ನಿಯ ಪ್ರಸಾರಕ್ರಮವನ್ನು ಕ್ರಿಯಾಪ್ರಭೇದಗಳನ್ನು ತಿಳಿಸುತ್ತವೆ. ಇವನು ಯಜ್ಞದಲ್ಲಿ ಅರ್ಪಿಸಿದ ಹವಿಸ್ಸನ್ನು ಎಲ್ಲ ದೇವತೆಗಳಿಗೂ ಮುಟ್ಟಿಸುವನು; ಆದ್ದರಿಂದ ಎಲ್ಲ ದೇವತೆಗಳಿಗೂ ಬೇಕಾದವನು. ಅಗ್ನಿಯನ್ನು ಕುರಿತು ಋಗ್ವೇದದಲ್ಲಿ ಅನೇಕ ಸೂಕ್ತಿಗಳಿವೆ. ಪಾರ್ಥಿವಾಗ್ನಿಯ ಉತ್ಪತ್ತಿ ಅನೇಕ ವಿಧ. ಎಲೈ ಅಗ್ನಿಯೇ, ಶುಷ್ಕವೂ ರಸರಹಿತವೂ, ನಿರ್ಜೀವಿಯೂ ಆದ ಅರಣಿಗಳಿಂದ ಚೈತನ್ಯಾತ್ಮಕವಾದ ನೀನು ಉತ್ಪನ್ನನಾದೊಡನೆ ಯಜಮಾನರು ಭಕ್ತಿಯಿಂದ ನಿನ್ನನ್ನು ಪುಜಿಸಿದರು. ಈ ಶಿಶು ಉತ್ಪನ್ನನಾದೊಡನೆ ತನ್ನ ಅಲೌಕಿಕವಾದ ಪ್ರಭಾವದಿಂದ ತನ್ನ ಪಿತೃಗಳನ್ನೆ ನುಂಗುವ ಪ್ರಯತ್ನಮಾಡುತ್ತದೆ. ಅಗ್ನಿ ಉತ್ಪನ್ನನಾದೊಡನೆ ನುಲುಚಿಕೊಂಡು ಏದುವ ಸರ್ಪದಂತೆ ತೀವ್ರ ಗಮನವುಳ್ಳವನಾಗಿ ಮಾನವನ ಹಿಡಿತಕ್ಕೆ ಸಿಲುಕದೆ ತಪ್ಪಿಸಿಕೊಳ್ಳುತ್ತಾನೆ. ‘ಸ್ವರೂಪತಃ ಅಗ್ನಿ ಸುವರ್ಣಾತ್ಮಕ ಮತ್ತು ಪ್ರಭಾಪೂರಿತ. ಆದರೆ, ಅವನ ಸಂಚಾರಮಾರ್ಗ ಕೃಷ್ಣವರ್ಣವುಳ್ಳದ್ದು. ವನವನ್ನೆಲ್ಲ ಆಕ್ರಮಿಸಿ ದಹಿಸಿ ಎಲ್ಲವನ್ನೂ ಕೃಷ್ಣವರ್ಣವುಳ್ಳದ್ದನ್ನಾಗಿ ಮಾಡುತ್ತಾನೆ.' ಅವನ ಜ್ವಾಲೆಗಳು ಸಮುದ್ರದ ಅಲೆಗಳಂತೆ ಭೋರ್ಗರೆಯುತ್ತದೆ. ಗುಡುಗಿನಂತೆಯೂ ಸಿಂಹದಂತೆಯೂ ಗರ್ಜಿಸುತ್ತಾನೆ. ಅವನ ರಥ ಪ್ರಭಾಯುತವೂ ಸುವರ್ಣನಿರ್ಮಿತವೂ ಆಕರ್ಷಕವೂ ಆಗಿದೆ. ರಥದ ಅಶ್ವಗಳು ಇನ್ನೂ ಆಕರ್ಷಕವಾಗಿವೆ. ಅವು ಘೃತಪೃಷ್ಠವುಳ್ಳವಾಗಿಯೂ ವಾಯುಪ್ರೇರಿತವಾಗಿಯೂ ಹೊಂಬಣ್ಣದಿಂದ ಕೂಡಿಯೂ ಕ್ರಿಯಾಶಕ್ತಿಯುತವಾಗಿಯೂ ನಾನಾ ರೂಪವಾಗಿಯೂ ಸಂಕಲ್ಪ ಮಾತ್ರದಿಂದಲೆ ರಥಕ್ಕೆ ಯೋಜಿತವಾಗಿಯೂ ಇವೆ. ದ್ಯುಲೋಕದ ಶ್ಯೇನ (ಗಿಡುಗ) ಪಕ್ಷಿಯಾದ ಅಗ್ನಿ ದಿವ್ಯರಥದಲ್ಲಿ ಕುಳಿತು ಯಜ್ಞಾರ್ಥವಾಗಿ ಇಳಿಯುತ್ತಾನೆ. ಇಂಥ ಅಸಾಧಾರಣ ಪ್ರಭಾವವುಳ್ಳ ಅಗ್ನಿಯನ್ನು ಭೃಗು, ಅಂಗೀರಸ, ಅಥರ್ವ, ಇತ್ಯಾದಿ ಮಹರ್ಷಿಗಳು ಯಜ್ಞಾರ್ಥವಾಗಿ ಪೃಥ್ವಿಗೆ ಕರೆತಂದರು, ದೇವಮಾನವಾದಿಗಳಿಂದೆಲ್ಲ ಪ್ರಾರ್ಥಿತನಾದ ಅಗ್ನಿ ಸಕಲ ಯಜ್ಞಕರ್ಮಗಳನ್ನೂ ಸಮಸ್ತ ಋತ್ವಿಕ್ಕುಗಳ ರೂಪದಲ್ಲಿ ನಿರ್ವಹಿಸಲು ಶಕ್ತ. ಅತ್ಯುತ್ತಮವಾದ ಜ್ಞಾನವುಳ್ಳವ. ಕವಿಗಳಿಗೆಲ್ಲ ದಿವ್ಯಸ್ವರೂಪಿ. ಯಜ್ಞಸಾಧಕ, ಯಜ್ಞರಕ್ಷಕ. ಪ್ರತಿಯೊಂದು ಗೃಹದಲ್ಲೂ ಪ್ರಭಾವಯುತನಾದ ಅತಿಥಿ. ಸಕಲರಿಗೂ ಕ್ಷೇಮಕಾರಿ. ಸಕಲ ಮಾನವರಿಗೂ ಪ್ರಭುವೂ ಪಾಲಕನೂ ಆದ ಎಲೈ ಅಗ್ನಿಯೇ, ನೀನು ಯಾಗಾರ್ಥವಾಗಿ ಉತ್ಪನ್ನನಾಗಿದ್ದೀಯೆ. ಸ್ವತಃ ತೇಜೋಮಯನಾಗಿದ್ದು ಸಕಲ ಜಗತ್ತಿಗೂ ಪ್ರಕಾಶವನ್ನು ಹರಡುತ್ತೀಯೆ. ನಿನ್ನ ಮಾಹಾತ್ಮ್ಯ ದ್ಯುಲೋಕಕ್ಕಿಂತಲೂ ಅಧಿಕವಾಗಿ ಬೆಳೆದಿದೆ. ಮಾನವರಿಗೆ ಪ್ರಭುವಾಗಿರುವಂತೆ ಸಕಲ ದೇವತೆಗಳಿಗೂ ನೀನು ಪ್ರಭು. ದ್ವಾವಾಪೃಥಿವಿಗಳು ವಿಸ್ತೃತವಾಗಿ ಪ್ರಸರಿಸಲು ನೀನೇ ಕಾರಣ. ಅವು ನಿನ್ನ ಶಕ್ತಿಯಿಂದಲೇ ಸ್ಥಿರವಾಗಿ ನಿಂತಿವೆ. ‘ಔಷನ್ಯೋಗ್ನಿ ದ್ಯಾವಾಪೃಥಿವಿಗಳೆರಡನ್ನೂ ತನ್ನ ತೇಜಸ್ಸುಗಳಿಂದ ಅಲಂಕರಿಸುತ್ತ ಉದಕಕ್ಕೆ ಮೂಲಸ್ಥಾನವಾದ ಅಂತರಿಕ್ಷವನ್ನೆಲ್ಲ ವ್ಯಾಪಿಸುತ್ತಾನೆ. ಅಂತರಿಕ್ಷದ ಜಲ ಸಂಘಾತವನ್ನು ಪ್ರವಾಹರೂಪದಿಂದ ಹರಿಯುವಂತೆ ಮಾಡುತ್ತಾನೆ. ವೃಷ್ಟಿಯ ಫಲವಾಗಿ ಉತ್ಪನ್ನವಾದ ಸಕಲ ಸಸ್ಯಗಳಲ್ಲೂ ವ್ಯಾಪಿಸುತ್ತಾನೆ.' ‘ಸಕಲ ಚರಾಚರಾತ್ಮಕವಾದ ಜಗತ್ತಿಗೂ ನಾಭಿಭೂತವಾದ ಅಗ್ನಿಯ ವೈಶ್ವಾನರ ಸಂಜ್ಞಕವಾದ ತತ್ತ್ವವನ್ನು ಮನಸ್ಸಿನಲ್ಲಿಯೇ ಧ್ಯಾನಿಸಿ ಪುಜಿಸೋಣ‘.

ಅಗ್ನಿಯ ಉಪಯೋಗದಿಂದ ಮಾನವಸಮಾಜ ತನ್ನ ಸುತ್ತಲಿನ ಪ್ರಾಣಿವರ್ಗದಿಂದ ಭಿನ್ನವಾಗಿದೆ. ಅದನ್ನುಪಯೋಗಿಸದ ಜನರಿಲ್ಲ. ಅನೂಹ್ಯವಾದ ಅದರ ಶಕ್ತಿ ಮತ್ತು ಅಗತ್ಯತೆಗಳು ಕಾರಣವಾಗಿ ಅದಕ್ಕೆ ಪವಿತ್ರತೆಯ ದೇವಪಟ್ಟ ಲಭಿಸಿದೆ. ಭಾರತೀಯರಂತೆ ಜರತುಷ್ಟ್ರನ ಅನುಯಾಯಿಗಳು ಸೂರ್ಯನೊಂದಿಗೆ ಅಗ್ನಿಯನ್ನೂ ಪುಜಿಸುತ್ತಾರೆ. ಗ್ರೀಕರು ತಮ್ಮ ವಸಾಹತುಗಳಿಗೆ ಮೂಲನಗರದಿಂದ ಬೆಂಕಿಯನ್ನೊಯ್ಯುತ್ತಿದ್ದರು. ರೋಮನರಲ್ಲಿ ಅಗ್ಗಿಷ್ಟಿಕೆಯ ದೇವತೆಯಾದ ವೆಸ್ಟಳ ಪಂಥ ಪ್ರಬಲವಾಗಿತ್ತು. ಬೆಂಕಿ ತಂದ ಪ್ರಮಿತಿಯಸ್ಸನ ಕಥೆ ಗ್ರೀಕ್ ಪುರಾಣದಲ್ಲಿ ಬಹುಪ್ರಸಿದ್ಧವಾದದ್ದು. ಅಗ್ನಿ ನಾಲ್ಕು ಮೂಲವಸ್ತುಗಳಲ್ಲೊಂದೆಂದು ಗ್ರೀಕ್ ತತ್ತ್ವಜ್ಞಾನಿಗಳ ಅಭಿಮತ.

ಇತಿಹಾಸ[ಬದಲಾಯಿಸಿ]

ಸಕಲ ದೇವಮಾನವಾದಿಗಳೆಲ್ಲರ ವ್ಯವಹಾರಕ್ಕೂ ಮಾರ್ಗದರ್ಶಕನಾದ್ದರಿಂದ ಅಗ್ನಿ ಎಂಬ ಹೆಸರು ಅನ್ವರ್ಥವಾಗಿದೆ (ನಿರುಕ್ತ 7.14). ವಿಶ್ವವ್ಯಾಪಕನೂ ವಿಶ್ವಧಾರಕನೂ ಸಕಲದೇವತಾತ್ಮನೂ ಅಮರನೂ ಆದ ಅಗ್ನಿಯ ರೂಪಾಂತರಗಳು ವೈಶ್ವಾನರಾದಿ ಸಂಜ್ಞೆಗಳಿಂದ ಪ್ರಶಂಸಿತವಾಗಿದೆ. ಸಕಲ ಭೂತಗಳಲ್ಲೂ ಪ್ರವೇಶಿಸಿ ನೇತೃವಾಗಿರುವುದರಿಂದ ವೈಶ್ವಾನರ, ಧನ ಮತ್ತು ಶಕ್ತಿದಾತನಾದ್ದರಿಂದ ಪ್ರವಿಣೋದಾಃ, ಉತ್ಪನ್ನವಾದ ಸಕಲವನ್ನೂ ಅರಿತಿರುವುದರಿಂದ ಜಾತವೇದಸ್, ನರರಿಂದ ಪ್ರಶಂಸಿತನಾಗಿರುವುದರಿಂದ ನರಾಶಂಸ, ಉದಕಗಳಿಂದ ಓಷಧಿಗಳೂ ಓಷಧಿಗಳಿಂದ ಅಗ್ನಿಯೂ ಉತ್ಪನ್ನವಾಗುವುದರಿಂದ ಅಪಾಂನಪಾತ್, ತನ್ನಿಂದ ತಾನೇ ಉತ್ಪನ್ನವಾಗುವುದರಿಂದ ತನೂನಪಾತ್, ಅಂಗಾರದಿಂದ (ಕೆಂಡ) ಉತ್ಪನ್ನವಾಗುವುದರಿಂದ ಅಂಗಿರಾ-ಹೀಗೆ ನಾನಾವಿಧವಾಗಿ ಅಗ್ನಿಯ ರೂಪಾಂತರಗಳನ್ನು ಸ್ತುತಿಸಿದೆ.

ಅಗ್ನಿಯ ಸ್ವರೂಪ[ಬದಲಾಯಿಸಿ]

ಅಗ್ನಿಯ ಸ್ವರೂಪವೆರಡು ವಿಧ. ಒಂದು ನಿತ್ಯ-ನಿಣ್ಯ ಗುಹ್ಯ ಇತ್ಯಾದಿ ವಿಶೇಷಣಗಳಿಂದ ವರ್ಣಿತವಾದ ಮತ್ತು ಸಾಧಾರಣ ದೃಷ್ಟಿ ಗೆ ಗೋಚರವಾಗದ ದಿವ್ಯ ಸ್ವರೂಪವುಳ್ಳದ್ದು. ಇನ್ನೊಂದು ಉತ್ಪನ್ನ-ಲೌಕಿಕಸ್ವರೂಪವುಳ್ಳದ್ದಾದರೂ ಅಸಾಧಾರಣಶಕ್ತಿಯಿಂದ ಕೂಡಿದ್ದು. ಈ ಎರಡು ರೂಪಗಳಿಂದಲೂ ಅಗ್ನಿಯ ಪ್ರಸಾರ ಮತ್ತು ಆಧಿಪತ್ಯ ಮೂರು ಲೋಕಗಳಿಗೂ ಸಂಬಂಧಿಸಿದೆ. ಅಗ್ನಿ ಪ್ರಥಮತಃ ದ್ಯುಲೋಕದಲ್ಲಿ ಆದಿತ್ಯಾತ್ಮನಾಗಿ ಉತ್ಪನ್ನನಾದ. ಎರಡನೆಯದಾಗಿ ಪೃಥ್ವಿಯಲ್ಲಿ ಜಾತವೇದೋರೂಪವನ್ನು ಹೊಂದಿದ. ಮೂರನೆಯದಾಗಿ ಅಂತರಿಕ್ಷದಲ್ಲಿ ಮಿಂಚಿನ ರೂಪದಲ್ಲಿ ಜನಿಸಿದ. ಈತ ದ್ಯುಲೋಕಕ್ಕೆ ಶಿರಸ್ಸಿನಂತೆ ಪ್ರಧಾನ. ಪೃಥಿವಿಗೆ ನಾಭಿ ರೂಪದ ಸಂರಕ್ಷಕ. ದ್ಯಾವಾಪೃಥಿಗಳೆರಡಕ್ಕೂ ಅಧಿಪತಿ. ದಿವ್ಯಾಗ್ನಿ ರಾತ್ರಿಕಾಲದಲ್ಲಿ ಅಗ್ನಿ ರೂಪದಿಂದಲೂ ಪ್ರಾತಃಕಾಲ ಸೂರ್ಯರೂಪದಿಂದಲೂ ಪ್ರಕಾಶಿಸುತ್ತ ತನ್ನ ಲೋಕರಕ್ಷಣಾಕಾರ್ಯವನ್ನು ನಿರ್ವಹಿಸುತ್ತಾನೆ. ಸಕಲರೂಪಗಳನ್ನು ಹೊಂದಿರುವದರಿಂದ ವಿಶ್ವಾಪ್ಸು. ಇವನೇ ಚಂದ್ರ, ಇವನೇ ವರುಣ, ಮಿತ್ರಾದಿ ಸಕಲದೇವತೆಗಳೂ ಇವನೇ. ಮೂರು ಲೋಕಗಳಲ್ಲೂ ವ್ಯಾಪಿಸುವುದರಿಂದ ತ್ರಿತ. ಆದಿತ್ಯಾದಿ ಮೂರು ರೂಪಗಳಿಂದ ಪ್ರಕಾಶಿಸುವುದರಿಂದ ತ್ರಯಃಕೇಶಿನಃ ಎಂದು ಪ್ರಶಂಸಿತನಾಗಿದ್ದಾನೆ. ತ್ರಿಮೂರ್ಥಾ ತ್ರಿಧಾತು ತ್ರಿಪಾಜಸ್ಯ ತ್ರ್ಯನೀಕ ಇತ್ಯಾದಿ ವಿಶೇಷಣಗಳು ಮೂರುಲೋಕಗಳಲ್ಲೂ ಅಗ್ನಿಯ ಪ್ರಸಾರಕ್ರಮವನ್ನು ಕ್ರಿಯಾಪ್ರಭೇದಗಳನ್ನು ತಿಳಿಸುತ್ತವೆ.

ದೇವತೆಗಳೂ[ಬದಲಾಯಿಸಿ]

ಇವನು ಯಜ್ಞದಲ್ಲಿ ಅರ್ಪಿಸಿದ ಹವಿಸ್ಸನ್ನು ಎಲ್ಲ ದೇವತೆಗಳಿಗೂ ಮುಟ್ಟಿಸುವನು; ಆದ್ದರಿಂದ ಎಲ್ಲ ದೇವತೆಗಳೂ ಬೇಕಾದವನು. ಅಗ್ನಿಯನ್ನು ಕುರಿತ ಋಗ್ವೇದದಲ್ಲಿ ಅನೇಕ ಸೂಕ್ತಿಗಳಿವೆ. ಪಾರ್ಥಿವಾಗ್ನಿಯ ಉತ್ಪತ್ತಿ ಅನೇಕ ವಿಧ. ಎಲೈ ಅಗ್ನಿಯೇ, ಶುಷ್ಕವೂ ರಸರಹಿತವೂ, ನಿರ್ಜೀವಿಯೂ ಆದ ಅರಣಿಗಳಿಂದ ಚೈತನ್ಯಾತ್ಮಕವಾದ ನೀನು ಉತ್ಪನ್ನನಾದೊಡನೆ ಯಜಮಾನರು ಭಕ್ತಿಯಿಂದ ನಿನ್ನನ್ನು ಪೂಜಿಸಿದರು. ಈ ಶಿಶು ಉತ್ಪನ್ನನಾದೊಡನೆ ತನ್ನ ಅಲೌಕಿಕವಾದ ಪ್ರಭಾವದಿಂದ ತನ್ನ ಪಿತೃಗಳನ್ನೆ ನುಂಗುವ ಪ್ರಯತ್ನಮಾಡುತ್ತದೆ. ಅಗ್ನಿ ಉತ್ಪನ್ನನಾದೊಡನೆ ನುಲುಚಿಕೊಂಡು ಏದುವ ಸರ್ಪದಂತೆ ತೀವ್ರ ಗಮನವುಳ್ಳವನಾಗಿ ಮಾನವನ ಹಿಡಿತಕ್ಕೆ ಸಿಲುಕದೆ ತಪ್ಪಿಸಿಕೊಳ್ಳುತ್ತಾನೆ. `ಸ್ವರೂಪತಃ ಅಗ್ನಿ ಸುವರ್ಣಾತ್ಮಕ ಮತ್ತು ಪ್ರಭಾಪೂರಿತ. ಆದರೆ, ಅವನ ಸಂಚಾರಮಾರ್ಗ ಕೃಷ್ಣವರ್ಣವುಳ್ಳದ್ದು. ವನವನ್ನೆಲ್ಲ ಆಕ್ರಮಿಸಿ ದಹಿಸಿ ಎಲ್ಲವನ್ನೂ ಕೃಷ್ಣವರ್ಣವುಳ್ಳದ್ದನ್ನಾಗಿ ಮಾಡುತ್ತಾನೆ.` ಅವನ ಜ್ವಾಲೆಗಳು ಸಮುದ್ರದ ಅಲೆಗಳಂತೆ ಭೋರ್ಗರೆಯುತ್ತದೆ. ಗುಡುಗಿನಂತೆಯೂ ಸಿಂಹದಂತೆಯೂ ಗರ್ಜಿಸುತ್ತಾನೆ. ಅವನ ರಥ ಪ್ರಭಾಯುತವೂ ಸುವರ್ಣನಿರ್ಮಿತವೂ ಆಕರ್ಷಕವೂ ಆಗಿದೆ. ರಥದ ಅಶ್ವಗಳು ಇನ್ನೂ ಆಕರ್ಷಕವಾಗಿದೆ. ಅವು ಘೃತಪೃಷ್ಠವುಳ್ಳವಾಗಿಯೂ ವಾಯುಪ್ರೇರಿತವಾಗಿಯೂ ಹೊಂಬಣ್ಣದಿಂದ ಕೂಡಿಯೂ ಕ್ರಿಯಾಶಕ್ತಿಯುತವಾಗಿಯೂ ನಾನಾ ರೂಪವಾಗಿಯೂ ಸಂಕಲ್ಪ ಮಾತ್ರದಿಂದಲೆ ರಥಕ್ಕೆ ಯೋಜಿತವಾಗಿಯೂ ಇವೆ. ದ್ಯುಲೋಕದ ಶ್ಯೇನ (ಗಿಡುಗ) ಪಕ್ಷಿಯಾದ ಅಗ್ನಿ ದಿವ್ಯರಥದಲ್ಲಿ ಕುಳಿತು ಯಜ್ಞಾರ್ಥವಾಗಿ ಇಳಿಯುತ್ತಾನೆ.[೧]

ಪ್ರಭಾವಗಳೂ[ಬದಲಾಯಿಸಿ]

ಇಂಥ ಅಸಾಧಾರಣ ಪ್ರಭಾವವುಳ್ಳ ಅಗ್ನಿಯನ್ನು ಭೃಗು, ಅಂಗೀರಸ, ಅಥರ್ವ, ಇತ್ಯಾದಿ ಮಹರ್ಷಿಗಳು ಯಜ್ಞಾರ್ಥವಾಗಿ ಪೃಥ್ವಿಗೆ ಕರೆತಂದರು, ದೇವಮಾನವಾದಿಗಳಿಂದೆಲ್ಲ ಪ್ರಾರ್ಥಿತನಾದ ಅಗ್ನಿ ಸಕಲ ಯಜ್ಞಕರ್ಮಗಳನ್ನೂ ಸಮಸ್ತ ಋತ್ವಿಕ್ಕುಗಳ ರೂಪದಲ್ಲಿ ನಿರ್ವಹಿಸಲು ಶಕ್ತ. ಅತ್ಯುತ್ತಮವಾದ ಜ್ಞಾನವುಳ್ಳವ. ಕವಿಗಳಿಗೆಲ್ಲ ದಿವ್ಯಸ್ವರೂಪಿ. ಯಜ್ಞಸಾಧಕ, ಯಜ್ಞರಕ್ಷಕ, ಪ್ರತಿಯೊಂದು ಗೃಹದಲ್ಲೂ ಪ್ರಭಾವಯುತನಾದ ಅತಿಥಿ. ಸಕಲರಿಗೂ ಕ್ಷೇಮಕಾರಿ.ಸಕಲ ಮಾನವರಿಗೂ ಪ್ರಭವೂ ಪಾಲಕನು ಆದ ಎಲೈ ಅಗ್ನಿಯೇ, ನೀನು ಯಾಗಾರ್ಥವಾಗಿ ಉತ್ಪನ್ನನಾಗಿದ್ದೀಯೆ. ಸ್ವತಃ ತೇಜೋಮಯನಾಗಿದ್ದು ಸಕಲ ಜಗತ್ತಿಗೂ ಪ್ರಕಾಶವನ್ನು ಹರಡುತ್ತೀಯೆ. ನಿನ್ನ ಮಹಾತ್ಮ್ಯ ದ್ಯುಲೋಕಕ್ಕಿಂತಲೂ ಅಧಿಕವಾಗಿ ಬೆಳೆದಿದೆ. ಮಾನವರಿಗೆ ಪ್ರಭುವಾಗಿರುವಂತೆ ಸಕಲ ದೇವತೆಗಳಿಗೂ ನೀನು ಪ್ರಭು. ದ್ವಾವಾಪೃಥಿವಿಗಳು ವಿಸ್ತøತವಾಗಿ ಪ್ರಸರಿಸಲು ನೀನೇ ಕಾರಣ. ಅವು ನಿನ್ನ ಶಕ್ತಿಯಿಂದಲೇ ಸ್ಥಿರವಾಗಿ ನಿಂತಿವೆ.ಔಷನ್ಯೋಗ್ನಿ ದ್ಯಾವಾಪೃಥಿವಿಗಳೆರಡನ್ನೂ ತನ್ನ ತೇಜಸ್ಸುಗಳಿಂದ ಅಲಂಕರಿಸುತ್ತ ಉದಕಕ್ಕೆ ಮೂಲಸ್ಥಾನವಾದ ಅಂತರಿಕ್ಷವನ್ನೆಲ್ಲ ವ್ಯಾಪಿಸುತ್ತಾನೆ. ಅಂತರಿಕ್ಷದ ಜಲ ಸಂಘಾತವನ್ನು ಪ್ರವಾಹರೂಪದಿಂದ ಹರಿಯುವಂತೆ ಮಾಡುತ್ತಾನೆ. ವೃಷ್ಟಿಯ ಫಲವಾಗಿ ಉತ್ಪನ್ನವಾದ ಸಕಲ ಸಸ್ಯಗಳಲ್ಲೂ ವ್ಯಾಪಿಸುತ್ತಾನೆ.` `ಸಕಲ ಚರಾಚರಾತ್ಮಕವಾದ ಜಗತ್ತಿಗೂ ನಾಭಿಭೂತವಾದ ಅಗ್ನಿಯ ವಯಶ್ವಾನರ ಸಮಜ್ಞಕವಾದ ತತ್ತ್ವವನ್ನು ಮನಸ್ಸಿನಲ್ಲಿಯೇ ಧ್ಯಾನಿಸಿ ಪೂಜಿಸೋಣ`.(ಬಿ.ಎನ್.ಸಿ.)

ಉಪಯೋಗ[ಬದಲಾಯಿಸಿ]

ಅಗ್ನಿಯ ಉಪಯೋಗದಿಂದ ಮಾನವಸಮಾಜ ತನ್ನ ಸುತ್ತಲಿನ ಪ್ರಾಣಿವರ್ಗದಿಂದ ಭಿನ್ನವಾಗಿದೆ. ಅದನ್ನುಪಯೋಗಿಸದ ಜನರಿಲ್ಲ. ಅನೂಹ್ಯವಾದ ಅದರ ಶಕ್ತಿ ಮತ್ತು ಅಗತ್ಯತೆಗಳು ಕಾರಣವಾಗಿ ಅದಕ್ಕೆ ಪವಿತ್ರತೆಯ ದೇವಪಟ್ಟ ಲಭಿಸಿದೆ. ಭಾರತೀಯರಂತೆ ಜರತುಷ್ಟ್ರನ ಅನುಯಾಯಿಗಳು ಸೂರ್ಯನೊಂದಿಗೆ ಅಗ್ನಿಯನ್ನೂ ಪೂಜಿಸುತ್ತಾರೆ. ಗ್ರೀಕರು ತಮ್ಮ ವಸಾಹತುಗಳಿಗೆ ಮೂಲನಗರದಿಂದ ಬೆಂಕಿಯನ್ನೊಯ್ಯುತ್ತಿದ್ದರು. ರೋಮನರಲ್ಲಿ ಅಗ್ಗಿಷ್ಟಿಕೆಯ ದೇವತೆಯಾದ ವೆಸ್ಟಳ ಪಂಥ ಪ್ರಬಲವಾಗಿತ್ತು. ಬೆಂಕಿ ತಂದ ಪ್ರೊಮಿತ್ಯೂಸನ ಕಥೆ ಗ್ರೀಕ್ ಪುರಾಣದಲ್ಲಿ ಬಹುಪ್ರಸಿದ್ಧವಾದದ್ದು. ಅಗ್ನಿ ನಾಲ್ಕು ಮೂಲವಸ್ತುಗಳಲ್ಲೊಂದೆಂದು ಗ್ರೀಕ್‍ತತ್ತ್ವ ಜ್ಞಾನಿಗಳ ಅಭಿಮತ.(ಎನ್.ಎಸ್.ಎ.)

ಉಲ್ಲೇಖಗಳು[ಬದಲಾಯಿಸಿ]

  1. http://www.prajavani.net/news/article/2016/03/15/394414.html[ಶಾಶ್ವತವಾಗಿ ಮಡಿದ ಕೊಂಡಿ]

ಇದನ್ನೂ ನೋಡಿ[ಬದಲಾಯಿಸಿ]

ಬೆಂಕಿ