ಭೃಗು
ಗೋಚರ
ಭೃಗು ಪ್ರಾಚೀನ ಭಾರತದ ಸಪ್ತರ್ಷಿಗಳಲ್ಲಿ ಒಬ್ಬನು, ಬ್ರಹ್ಮನು ಸೃಷ್ಟಿಸಿದ ಅನೇಕ ಪ್ರಜಾಪತಿಗಳಲ್ಲಿ ಒಬ್ಬನು, ಭವಿಷ್ಯಸೂಚಕ ಜ್ಯೋತಿಷದ ಮೊದಲ ಸಂಕಲಕ, ಮತ್ತು ತ್ರೇತಾಯುಗದ ಅವಧಿಯಲ್ಲಿ ಬರೆದ ಅತ್ಯುತ್ಕೃಷ್ಟ ಜ್ಯೋತಿಷ ಕೃತಿ ಭೃಗು ಸಂಹಿತಾದ ಲೇಖಕ. ಭೃಗುವನ್ನು ಬ್ರಹ್ಮನ ಮಾನಸಪುತ್ರನೆಂದು ಪರಿಗಣಿಸಲಾಗಿದೆ. ಭೃಗು ಮನುವಿನ ದೇಶಬಾಂಧವ ಮತ್ತು ಅವನ ಕಾಲಕ್ಕೆ ಸೇರಿದವನು.