ವಿಷಯಕ್ಕೆ ಹೋಗು

ಅಜ್ಮೇರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಜ್ಮೇರ್
अजमेर
ನಗರ
ಮೆಯೋ ಕಾಲೇಜು
ಮೆಯೋ ಕಾಲೇಜು
ದೇಶಭಾರತ
ರಾಜ್ಯರಾಜಸ್ಥಾನ
ಜಿಲ್ಲೆಅಜ್ಮೇರ್
Founded byರಾಜಾ ಅಜಯ್ ಪಾಲ್ ಚೌಹಾನ್
Government
 • Bodyಜಿಲ್ಲಾ ಕೇಂದ್ರ
Elevation
೪೮೬ m (೧,೫೯೪ ft)
Population
 (2011 ಜನಗಣತಿ)
 • ನಗರ೫,೪೨,೫೮೦
 • Metro
೨೬,೬೧,೭೨೦
ಭಾಷೆಗಳು
 • ಅಧಿಕೃತಹಿಂದಿ, ಇಂಗ್ಲಿಷ್
 • ಪ್ರಾದೇಶಿಕಹಿಂದಿ, ರಾಜಸ್ಥಾನಿ
Time zoneUTC+5:30 (ಐಎಸ್‍ಟಿ)
ಪಿನ್
3050 xx
ದೂರವಾಣಿ ಸಂಕೇತ+0145
Vehicle registrationRJ01
ಅತಿ ಹತ್ತಿರದ ನಗರಜೈಪುರ್, ಉದೈಪುರ್, ದೆಹಲಿ
Websitewww.ajmer.nic.in

ಅಜ್ಮೇರ್ ಇದು ರಾಜಸ್ಥಾನ ರಾಜ್ಯದ ಒಂದು ಪ್ರಮುಖ ಪಟ್ಟಣ. ರಾಜಸ್ಥಾನದ ಐದನೆಯ ದೊಡ್ಡ ಪಟ್ಟಣವಾಗಿದೆ. ಇದು ಅಜ್ಮೇರ್ ಜಿಲ್ಲೆಯ ಮುಖ್ಯಸ್ಥಳವಾಗಿಯೂ, ರಾಜಸ್ಥಾನ ರಾಜ್ಯದಲ್ಲಿ ಮಧ್ಯಭಾಗದಲ್ಲಿದ್ದು ವ್ಯಾಪಾರ ಕೇಂದ್ರವಾಗಿಯೂ ಪ್ರಸಿದ್ಧವಾಗಿದೆ. ಇಲ್ಲ್ಲಿ ಸೂಫಿ ಸಂತ ಕ್ವಾಜಾ ಮೊಯ್ನುದ್ದೀನ್ ಚಿಸ್ತಿ ಯ ಪೂಜಾ ಸ್ಥಳವಿದೆ. ಹತ್ತಿರದಲ್ಲಿ ಅಂದರೆ ಸುಮಾರು ೧೧ ಕಿ.ಮೀ.ದೂರದಲ್ಲಿ ಪುಷ್ಕರ ವಿದ್ದು ಇದು ಮುಸಲ್ಮಾನ ಹಾಗೂ ಹಿಂದು ಎರಡು ಧರ್ಮೀಯರಿಗೂ ಯಾತ್ರಾ ಸ್ಥಳವಾಗಿದೆ.

ಇತಿಹಾಸ

[ಬದಲಾಯಿಸಿ]

ಅಜ್ಮೀರ್ ರಾಜಾಸ್ಥಾನದಲ್ಲಿನ ಈ ನಗರ 11ನೆಯ ಶತಮಾನದ ಕೊನೆಯಲ್ಲಿ ಚೌಹಾನ್ ವಂಶದ ರಾಜ ಅಜಯದೇವನಿಂದ ನಿರ್ಮಿತವಾಯಿತು.

ಭೌಗೋಳಿಕ

[ಬದಲಾಯಿಸಿ]

ಊರು ಅರಾವಳಿ ಬೆಟ್ಟಗಳ ಉತ್ತರದ ತುದಿಯ ಇಳಿಜಾರಿನಲ್ಲಿದೆ. (260, 28 ಉ. ಅ-740,41 ಪೂ.ರೇ). ಇದರ ಉತ್ತರಕ್ಕೆ ಆನಾಸಾಗರ, ಮೇಲುಭಾಗದಲ್ಲಿ ಫಾಯ್ ಸಾಗರಗಳೆಂಬ ಸರೋವರಗಳುಂಟು. ಎರಡನೆಯ ಸರೋವರ ಅಜ್ಮೀರ್ ಪಟ್ಟಣಕ್ಕೆ ನೀರನ್ನು ಸರಬರಾಜು ಮಾಡುತ್ತದೆ.

ಪ್ರೇಕ್ಷಣೀಯ ಸ್ಥಳ

[ಬದಲಾಯಿಸಿ]
The Pushkar Ghati connecting Ajmer and Pushkar
A long shot of Pushkar ghati
ಅಜ್ಮೇರ್ ದರ್ಗಾ ಷರೀಫ್
Baradari on Lake Anasagar

ಈ ಪಟ್ಟಣದಲ್ಲಿ ಖ್ಯಾತ ಮಹಮದೀಯ ಸಂತ ಮುಯಿನ್-ಉದ್-ದೀನ್ ಚಿಸ್ಠಿಯವರ ಸಮಾಧಿಯಿದೆ. ಇಲ್ಲಿ ಬಿಳಿ ಅಮೃತಶಿಲೆಯ ಕಟ್ಟಡಗಳುಂಟು. ಅಕ್ಬರ್ ದೊರೆ ತನ್ನ ರಾಣಿಯ ಸಂಗಡ ಆಗ್ರಾದಿಂದ ಇಲ್ಲಿಗೆ ನಡೆದುಬಂದು ಮಗನನ್ನು ಪಡೆಯುವುದಕ್ಕಾಗಿ ಪ್ರ್ರಾರ್ಥಿಸಿದನೆಂದು ಪ್ರತೀತಿ. 1200ರಲ್ಲಿ ಇಲ್ಲಿದ್ದ ಒಂದು ಜೈನ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಲಾಯಿತೆಂದು ತಿಳಿದುಬರುತ್ತದೆ. ಇದು ತಾರಗರ್ ಬೆಟ್ಟದ ಇಳಿಜಾರಿನಲ್ಲಿದೆ. ಇದರ ಕಲೆಯ ಸೌಂದರ್ಯ ಇಂದಿಗೂ ಅಲ್ಪಸ್ವಲ್ಪ ಉಳಿದಿದೆ. ಇಲ್ಲಿರುವ ಒಂದು ದೊಡ್ಡ ಛಾವಣಿಗೆ 40 ಆಧಾರಸ್ತಂಭಗಳಿವೆ. ಬೆಟ್ಟದ ತುದಿಯಲ್ಲಿರುವ ಕೋಟೆಯ ಗೋಡೆ ಸುಮಾರು 2 ಮೈ.ಗಳಷ್ಟಿದೆ. ಈ ಕೋಟೆಗೆ ಕಾಲುದಾರಿ ಮಾತ್ರವುಂಟು.

ವಾಣಿಜ್ಯ

[ಬದಲಾಯಿಸಿ]

ಅಜ್ಮೀರ್ ನಗರ ಒಂದು ಮುಖ್ಯ ಆಡಳಿತ ಕೇಂದ್ರ ಮತ್ತು ರೈಲ್ವೆನಿಲ್ದಾಣ. ನಗರ ನಿರ್ಮಾಣ ಉತ್ತಮ ಯೋಜನೆಯಿಂದ ಕೂಡಿದ್ದು ಅದಕ್ಕೆ ಸೌಂದರ್ಯವನ್ನಿತ್ತಿದೆ. ಸಾಂಬಾರ್ ಸರೋವರ ಹಾಗೂ ರಾಮ್‍ಸುರ್‍ನಿಂದ ಬರುವ ಉಪ್ಪು ಇಲ್ಲಿ ವ್ಯಾಪಾರವಾಗುತ್ತದೆ. ಈ ನಗರ ಎಣ್ಣೆ ತಯಾರಿಕೆಗೆ, ಹತ್ತಿ ಬಟ್ಟೆಗಳಿಗೆ ಬಣ್ಣಹಾಕುವ ಕೈಗಾರಿಕೆಗೆ ಹೆಸರುವಾಸಿಯಾಗಿದೆ. 1875ರಲ್ಲಿ ವೇಯೋ ರಾಜಕುಮಾರ ಕಾಲೇಜನ್ನು ಸ್ಥಾಪಿಸಲಾಯಿತು. ಮೊದಲು ಇದು ರಾಜಪುತ್ರಸ್ಥಾನದ ಶ್ರೀಮಂತ ವರ್ಗದ ಮಕ್ಕಳಿಗೆ ಮೀಸಲಾಗಿತ್ತು. ಆಗ್ರಾ ವಿಶ್ವವಿದ್ಯಾನಿಲಯಕ್ಕೆ ಸೇರಿದ ಕಾಲೇಜುಗಳು ಈ ನಗರದಲ್ಲಿವೆ.

ಜನಸಂಖ್ಯೆ

[ಬದಲಾಯಿಸಿ]

ಅಜ್ಮೇರ್‍ನ ಜನಸಂಖ್ಯೆ ೨೦೧೧ರ ಜನಗಣತಿಯಂತೆ ೫,೫೧,೧೦೧.ಚಾರಿತ್ರಿಕ ಜನಸಂಖ್ಯೆಯ ಬೆಳವಣಿಗೆಯ ತಖ್ತೆ ಇಲ್ಲಿದೆ.

ಅಜ್ಮೇರ್‍ನ ಜನಸಂಖ್ಯೆ 
CensusPop.
1891೬೮,೮೦೦
1901೭೩,೮೦೦7.3%
1911೮೬,೨೦೦16.8%
1921೧,೧೩,೨೦೦31.3%
1931೧,೧೯,೫೦೦5.6%
1941೧,೪೭,೩೦೦23.3%
1951೧,೯೬,೩೦೦33.3%
1961೨,೩೧,೨೦೦17.8%
1971೨,೬೪,೩೦೦14.3%
1981೩,೭೪,೪೦೦41.7%
1991೪,೦೨,೭೦೦7.6%
2001೪,೯೦,೫೨೦21.8%
2011೫,೫೧,೧೦೧12.4%
source:[]
ಚಾರಿತ್ರಿಕ ಜನಸಂಖ್ಯಾ ಬೆಳವಣಿಗೆ
ವರ್ಷ ಜನಸಂಖ್ಯೆ
1891
೬೮,೮೦೦
1901
೭೩,೮೦೦
1911
೮೬,೨೦೦
1921
೧,೧೩,೨೦೦
1931
೧,೧೯,೫೦೦
1941
೧,೪೭,೩೦೦
1951
೧,೯೬,೩೦೦
1961
೨,೩೧,೨೦೦
1968
೨,೬೫,೨೦೦
1971
೨,೬೪,೩೦೦
1981
೩,೭೪,೪೦೦
1991
೪,೦೨,೭೦೦
2001
೪,೯೦,೫೨೦
2011
೫,೫೧,೧೦೧

Source:[] ಭಾರತದಲ್ಲಿ ಕಂಡುಬರುವ ಏಕಮಾತ್ರ ಬ್ರಹ್ಮ ದೇವಸ್ಥಾನ ಅಜ್ಮೀರ್‍ನಿಂದ 7 ಮೈಲಿ ದೂರದಲ್ಲಿನ ಪುಷ್ಕರ್ ಸರೋವರದ ಹತ್ತಿರ ಇದೆ. ವರ್ಷಕ್ಕೊಮ್ಮೆ ಇಲ್ಲಿ ಜಾತ್ರೆ ನಡೆಯುತ್ತದೆ. ಇಲ್ಲಿ ದೊರಕುವ ನೀರು ಬಹು ಶ್ರೇಷ್ಠ ಹಾಗೆ ಪಾವನವಾದುದೆಂದು ಮನ್ನಣೆ ಪಡೆದಿದೆ.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "Historical Census of India". Archived from the original on 2013-02-17. Retrieved 2016-03-31.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಅಜ್ಮೇರ್&oldid=1052773" ಇಂದ ಪಡೆಯಲ್ಪಟ್ಟಿದೆ