ಮೂಡಿಗೆರೆ
ಕಣಚೂರು :
ಕಣಚೂರು :
ಕಣಚೂರು ಎಂಬ ಗ್ರಾಮವು , ಹಂತೂರು ಅಂಚೆ , ಗೋಣಿಬೀಡು ಹೋಬಳಿ ,ಮೂಡಿಗೆರೆ ತಾಲ್ಲೂಕು ,ಚಿಕ್ಕಮಗಳೂರು ಜಿಲ್ಲೆಯಲ್ಲಿದೆ .
ಊರಿಗೆ ಹೆಸರು ಬರಲು ಕಾರಣ ಹಾಗೂ ಊರಿನ ಇತಿಹಾಸ: ಕಣಚೂರು ಎಂಬ ಹೆಸರು ಈ ಊರಿಗೆ ಬರಲು ಕಾರಣ “ ಕಣ್ಮ ಮಹಾ ಋಷಿ ತಪಸ್ಸು ಮಾಡಿದ ಸ್ಥಳ ” ಈ ಕಾರಣದಿಂದ ಕಣಚೂರು ಎಂಬ ಹೆಸರು ಈ ಊರಿಗೆ ಬಂದಿದೆ. ಹಾಗೇ ಕಣ್ಮ ಋಷಿ ತಪಸ್ಸು ಮಾಡಿರುವ ಸ್ಥಳದಲ್ಲಿ ಸಪ್ತ ಗುಡಿಗಳು ( ಏಳು ಸಣ್ಣ ಗುಡಿಗಳು ) ಇವೆ.
ಈ ಊರಿನಲ್ಲಿ ಹೊಯ್ಸಳ ಕಾಲದಲ್ಲಿ ಶಿಲೆಯಲ್ಲಿ ಕೆತ್ತಿದ ಶಾಸನ ಕಲ್ಲು ಗಳಿವೆ , ಮಾಸ್ತಿ ಕಲ್ಲು ವೀರಕಲ್ಲು ಗಳಿವೇ.
ವರ್ಷಕ್ಕೊಮ್ಮೆ ನಡೆಯುವಂತಹ ಸುಗ್ಗಿ ಉತ್ಸವ ದಲ್ಲಿ ದೇವರನ್ನ(ದಾಳಮ್ಮ, ಕುಮಾರಸ್ವಾಮಿ)ಯನ್ನು ಉಯ್ಯಾಲೆ ತೊಟ್ಟಿಲು ಮೇಲೆ ಕೂರಿಸಿ ಉಯ್ಯಾಲೆ ಪದ, ಜಾನಪದ ಹಾಡುಗಳು ಹಾಡುತ್ತಾರೆ.
ದೇವಾಲಯಗಳು : ರಾಮೇಶ್ವರ ದೇವಸ್ಥಾನ ,ಕಲ್ಲೇಶ್ವರ ದೇವಸ್ಥಾನ , ಮಾಳಮ್ಮ ದೇವಸ್ಥಾನ ಹಾಗೂ ದುರ್ಗಪರಮೇಶ್ವರಿ ದೇವಾಲಯಗಳಿವೆ.
ಕೃಷಿ : • ಈ ಊರಿನಲ್ಲಿ ಕಾಫಿ ಬೆಳೆಯುತ್ತಾರೆ ಕಾಫಿಯಲ್ಲಿ ರೊಬಸ್ಟಾ ,ಅರೇಬಿಕಾ, ಕಾವೇರಿ ಹೇಮಾವತಿ ಮತ್ತು ಚಂದ್ರಗಿರಿ ಈ ಬಗೆಯ ಕಾಫಿ ಬೆಳೆಯುತ್ತಾರೆ .
•ಕಾಳು ಮೆಣಸು ಬೆಳೆಯುತ್ತಾರೆ
•ಅಡಿಕೆ ಬೆಳೆಯುತ್ತಾರೆ,ಅಡಿಕೆಯಲ್ಲಿ ಮಂಗಳ ಮತ್ತು ನಾಟಿ ಬಗೆಯ ಅಡಿಕೆ ಬೆಳೆಯುತ್ತಾರೆ.
• ಭತ್ತ ಬೆಳಯುತ್ತಾರೆ ಭತ್ತ ದಲ್ಲಿ ತುಂಗಾ ಭತ್ತ ,ರಾಜಮುಡಿ, ಬಾಂಗ್ಲಾ ಭತ್ತ ,ದಪ್ಪ ಭತ್ತ , ಕೆಂಪು ಭತ್ತ ಬೆಳಯುತ್ತಾರೆ.
• ತರಕಾರಿ ಬೀನ್ಸ್, ಸೌತೆಕಾಯಿ, ಆಲ್ಸೊಂಡೆ ಕಾಯಿ, ತೊಂಡೆಕಾಯಿ, ಹೀರೆಕಾಯಿ, ಆಗಲಕಾಯಿ, ಹಸಿರು ಮೆಣಸಿನ ಕಾಯಿಯನ್ನು ಬೆಳೆಯುತ್ತಾರೆ.
ಹೋಬಳಿಗಳು[ಬದಲಾಯಿಸಿ]
( ಬಿಳಗುಳ: ಇದು ಮೂಡಿಗೆರೆಯಿಂದ ಚಿಕ್ಕಮಗಳೂರಿಗೆ ಹೋಗುವ ಮಾರ್ಗದಲ್ಲಿ ಸಿಗುತ್ತದೆ. ಮೂಡಿಗೆರೆ ಪಟ್ಟಣದಿಂದ ೧ ಕಿ.ಮೀ.) ಇಲ್ಲಿ ಮೀನುಗಾರಿಕೆ ಇಲಾಖೆ ಇದೆ.
ಇತಿಹಾಸ ಸ್ಥಳಗಳು[ಬದಲಾಯಿಸಿ]
- ದೇವವೃಂದ
- ಜಾವಳಿ -ಹೇಮವತಿ ನದಿ ಉಗಮ ಸ್ಥಳ ಹಾಗೂ ಗಣಪತಿ ದೇವಾಲಯ.
- ಸೊಮನಕಾಡು - ಅಣ್ಣಪ್ಪ ಸ್ವಾಮಿ ದೇವಾಲಯ.
- ದೇವರ ಮನೆ - ಇದು ಮೂಡಿಗೆರೆ ತಾಲೂಕಿನ ಬಣಕಲ್ ಬಳಿಯಿದೆ.
ಅಂಗಡಿ:-ಹೊಯ್ಸಳರ ಉಗಮಸ್ಥಾನ, ಜನ್ನಾಪುರದಿಂದ 7ಕಿಮಿ ದೂರದಲ್ಲಿದೆ ದೇವವೃಂದ ಗ್ರಾಮದಲ್ಲಿ ಪ್ರತಿ ವರ್ಷ ಯುಗಾದಿಯಂದು ಜಾತ್ರಾ ಮಹೋತ್ಸವ ನಡೆಯುತ್ತದೆ.
ಪ್ರವಾಸಿ ತಾಣ [ಬದಲಾಯಿಸಿ]
- ದೇವರ ಮನೆ ಸುಮಾರು ಮೂಡಿಗೆರೆಯಿಂದ ೨೦ ಕಿ.ಮೀ ದೂರದಲ್ಲಿರುವ ದೇವರಮನೆ ಪ್ರಕೃತಿಯ ತಾಣವಾಗಿದೆ. ಇಲ್ಲಿ ಕಾಲಭೈರವೇಶ್ವರ ದೇವರ ಸನ್ನಿಧಿ ಪ್ರಸಿದ್ಧಿಯಾಗಿದೆ.
- ಶ್ರೃಂಗೇರಿ
- ಹೊರನಾಾಡು
- ಮಲಯಮಾರುತ
- ಎತ್ತಿನ ಭುಜ ಚಾರ್ಮಾಡಿ ಘಾಟ್ ಅನೇಕ ಪಶ್ಚಿಮ ಘಟ್ಟಗಳ ಜಾಗಗಳಲ್ಲಿ ಒಂದು. ಎತ್ತಿನ ಭುಜವು 1300 ಮೀ (4,265 ಅಡಿ) ಎತ್ತರದಲ್ಲಿರುವ ಚಾರ್ಮಾಡಿ ಶ್ರೇಣಿಯ ಒಂದು ಭಾಗವಾಗಿದೆ. ಇದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವ್ಯಾಪ್ತಿಯಲ್ಲಿದೆ.
ಶಾಲೆಗಳು ಮತ್ತು ಕಾಲೇಜುಗಳು[ಬದಲಾಯಿಸಿ]
- ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆ
- ಸಂತಮಾರ್ಥಾ ಪ್ರೌಡ ಶಾಲೆ/ಪದವಿ ಪೂರ್ವ ಕಾಲೇಜು
- ಸರ್ಕಾರಿ ಪದವಿ ಪೂರ್ವ ಕಾಲೇಜು/ಪ್ರೌಡ ಶಾಲೆ
- ಡಿ.ಎಸ್.ಬಿ.ಜಿ.ಪ್ರಥಮ ದರ್ಜೆ ಕಾಲೇಜು
- ಒಕ್ಕಲಿಗರ ಸಂಘ ಸಿ.ಬಿ.ಎಸ್.ಇ ಶಾಲೆ ಮತ್ತು ಪದವಿ ಪೂರ್ವ ಕಾಲೇಜು
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |