ವಿಷಯಕ್ಕೆ ಹೋಗು

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

Coordinates: 12°57′41″N 074°53′24″E / 12.96139°N 74.89000°E / 12.96139; 74.89000
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Mangaluru Airport
Aerial view of the passenger terminal
ಐಎಟಿಎ: IXEಐಸಿಎಒ: VOML
ಸಾರಾಂಶ
ಪ್ರಕಾರಸಾರ್ವಜನಿಕ
ಮಾಲಕ/ಕಿಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರ
ಸೇವೆಮಂಗಳೂರು
ಸ್ಥಳಬಜ್ಪೆ, ಮಂಗಳೂರು
ಸಮುದ್ರಮಟ್ಟಕ್ಕಿಂತ ಎತ್ತರ೩೩೭ ft / 103 m
ನಿರ್ದೇಶಾಂಕ12°57′41″N 074°53′24″E / 12.96139°N 74.89000°E / 12.96139; 74.89000
ರನ್‌ವೇ
ದಿಕ್ಕು Length Surface
ft m
09/27 ೫,೩೦೦ ೧,೬೧೫ Asphalt
06/24 ೮,೦೩೮ ೨,೪೫೦ Concrete
Statistics (2015-16)
Passenger movements೧೬,೭೪,೨೫೧(Increase೨೮.೧%)
Aircraft movements೧೩,೮೦೫ (Increase೨೦.೦%)
Cargo tonnage೯೩೬ (Increase೩೬.೮%)
Source: AAI,

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಜ್ಪೆ ವಿಮಾನ ನಿಲ್ದಾಣ ,IATA: Ixe, ICAO: VOML),ಇದು ಕರ್ನಾಟಕದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು ಕರಾವಳಿ ನಗರವಾದ ಮಂಗಳೂರಿಗೆ ಸೇವೆಯನ್ನು ನೀಡುತ್ತದೆ. ಇದು ಕರ್ನಾಟಕಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಒಂದು.ಇನ್ನೊಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು. ಇಲ್ಲಿಂದ ದೈನಂದಿನ ಹಾರಾಟಗಳು ಮಧ್ಯಪ್ರಾಚ್ಯ್ ದೇಶಗಳಿಗೆ ಮತ್ತು ದಕ್ಷಿಣ ಮತ್ತು ಪಶ್ಚಿಮ ಭಾರತದ ನಗರಗಳಿಗೆ ವಿಮಾನ ಸೇವೆ ನೀಡುತ್ತದೆ. []

ಬಜ್ಪೆ ವಿಮಾನ ನಿಲ್ದಾಣ 25 ಡಿಸೆಂಬರ್ 1951 ರಂದು ಪ್ರಾರಂಭವಾಯಿತು,2014 ರಂತೆ, ಮಂಗಳೂರು ವಿಮಾನ ನಿಲ್ದಾಣ ಪ್ರಯಾಣಿಕ ಸಂದಣಿಯಲ್ಲಿ 54℅ ರಷ್ಟು ಬೆಳವಣಿಗೆಯೊಂದಿಗೆ, ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಬೆಳವಣಿಗೆ ಪ್ರಮಾಣವನ್ನು ಹೊಂದಿದೆ. ವಿಮಾನ ನಿಲ್ದಾಣ ಪ್ರಾಥಮಿಕ ಸ್ಥಳ ಮಂಗಳೂರು ನಗರವಾದರು, ಈ ವಿಮಾನ ನಿಲ್ದಾಣ ಮಣಿಪಾಲ, ಉಡುಪಿ, ಕುಂದಾಪುರ, ಶಿವಮೊಗ್ಗ, ಮಡಿಕೇರಿ, ಸಕಲೇಶಪುರ, ಚಿಕ್ಕಮಗಳೂರು, ಭಟ್ಕಳ , ಕರಾವಳಿ ಕರ್ನಾಟಕ ಮತ್ತು ಮಲೆನಾಡು ಪ್ರದೇಶದ ಅನೇಕ ಸ್ಥಳಗಳಿಗೆ ಮತ್ತು ಕಾಸರಗೋಡು,ಕೇರಳದ ಉತ್ತರ ಭಾಗದ ನಗರಗಳಿಗೆ ಸೇವೆಯನ್ನು ನೀಡುತ್ತದೆ.

ಅವಘಡಗಳು

[ಬದಲಾಯಿಸಿ]
  1. 19 ಆಗಸ್ಟ್ 1981 ರಂದು, ಇಂಡಿಯನ್ ಏರ್‌ಲೈನ್ಸ್ ಫ್ಲೈಟ್ 557, HAL 748 VT-DXF ಆರ್ದ್ರ ವಾತಾವರಣದಲ್ಲಿ ಮಂಗಳೂರು-ಬಜ್ಪೆ ವಿಮಾನ ನಿಲ್ದಾಣದಲ್ಲಿ 1,763 ಮೀಟರ್ (5,783 ಅಡಿ) ಹಳೆಯ ರನ್‌ವೇ 27 ಅನ್ನು ಅತಿಕ್ರಮಿಸಿತು. ವಿಮಾನವು ರನ್‌ವೇ ಅಂಚಿನ ಆಚೆಗೆ ನಿಂತಿತು.[] ಯಾವುದೇ ಸಾವುನೋವುಗಳು ಸಂಭವಿಸದಿದ್ದರೂ, ವಿಮಾನವು ದುರಸ್ತಿ ಮಾಡಲಾಗದಷ್ಟು ಹಾನಿಗೊಳಗಾಗಿ ಅದನ್ನು ಏಲಂ ಮಾಡಲಾಯಿತು. ಆಗಿನ ಕರ್ನಾಟಕ ಸರಕಾರದ ಹಣಕಾಸು ಸಚಿವರಾಗಿದ್ದ ವೀರಪ್ಪ ಮೊಯ್ಲಿ ಪ್ರಯಾಣಿಕರಲ್ಲಿ ಒಬ್ಬರಾಗಿದ್ದರು.[]
  2. 22 ಮೇ 2010 ರಂದು, ದುಬೈ-ಮಂಗಳೂರು ಮಾರ್ಗದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ 812, ಬೋಯಿಂಗ್ 737-800 VT-AXV, ವಿಮಾನ ಇಳಿಸುವ ಸಮಯದಲ್ಲಿ 2,448 ಮೀಟರ್ (8,033 ಅಡಿ) ರನ್‌ವೇ ಸಂಖ್ಯೆ 06/24 ಅನ್ನು ಅತಿಕ್ರಮಿಸಿ ಅವಘಡಕ್ಕೀಡಾಯಿತು.[] ದುರಂತದಲ್ಲಿ 6 ಸಿಬ್ಬಂದಿ ಸೇರಿದಂತೆ 158 ಜನರು ಸಾವಿಗೀಡಾದರು; ಕೇವಲ 8 ಮಂದಿ ಪವಾಡ ಸದೃಶದಂತೆ ಬದುಕುಳಿದರು.[]

ಉಲ್ಲೇಖಗಳು

[ಬದಲಾಯಿಸಿ]