ನವಣೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ನವಣೆ'
'ನವಣೆ'

'ನವಣೆ' [೧] ಒಂದು ಸತ್ವಯುತ ಕಿರುಧಾನ್ಯ. ಇದು ಅಲ್ಪಾವಧಿ ಬೆಳೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಕಡಿಮೆ ಅಳದ, ಹೆಚ್ಚು ಫಲವತ್ತತೆಯಿಲ್ಲದ ಮಣ್ಣಿನಲ್ಲಿ ಮತ್ತು ಗುಡ್ಡ-ಗಾಡು ಪ್ರದೇಶಗಳಲ್ಲಿ ಸಹ, ಅತ್ಯಂತ ಸುಲಭವಾಗಿ ಬೆಳೆಯಬಹುದಾದ ಧಾನ್ಯ. 'ಉತ್ತಮ ಪೌಷ್ಟಿಕ ಮೌಲ್ಯ'ವನ್ನು ಹೊಂದಿದ್ದರೂ ಈ ಧಾನ್ಯದ ಬಳಕೆ ಕಡಿಮೆ. 'ಕಿರುಧಾನ್ಯ'ಗಳಿಗೆ ಉತ್ತಮ ಮಾರುಕಟ್ಟೆ ಮತ್ತು 'ಬೆಂಬಲಬೆಲೆ', ಇಲ್ಲದಿರುವುದು ಮತ್ತು 'ಬಡವರ ಆಹಾರ,' ಎಂಬ ಭಾವನೆ ಇರುವುದರಿಂದ ಕ್ರಮೇಣವಾಗಿ ನವಣೆಯಂತಹ ಕಿರುಧಾನ್ಯಗಳು ಅವಸಾನದ ಅಂಚನ್ನು ಮುಟ್ಟುತ್ತಿವೆ. ನವಣೆ ಕೀಟ ಮತ್ತು ರೋಗ ನಿರೋಧಕ ಶಕ್ತಿ ಹೊಂದಿದೆ. ಕಡಿಮೆ ಫಲವತ್ತಾದ ಹೊಲಗಳಲ್ಲೂ ಸುಲಭವಾಗಿ ಬೆಳೆಯಬಹುದು.

ನವಣೆಯಲ್ಲಿ ಪ್ರೋಟೀನ್ ೧೨.೩ ಗ್ರಾಂ, ಹಾಗೂ ಅಕ್ಕಿಯಲ್ಲಿ ೬.೮೦ ಗ್ರಾಂ.ಅಂಶವಿದೆ. ನವಣೆಯಿಂದ ಕೆಳಗೆ ನಮೂದಿಸಿದ ಎಲ್ಲ ಖಾದ್ಯಗಳನ್ನೂ ಮಾಡಬಹುದು.

ಚಕ್ಕುಲಿ, ದೋಸೆ, ಇಡ್ಲಿ, ರೊಟ್ಟಿ, ಉಪ್ಪಿಟ್ಟು, ಪೊಂಗಲ್, ತಾಲಿಪಟ್ಟು, ಹೋಳಿಗೆ, ಚಿಕ್ಕಿ, ಭಜಿಯ, ಬಿಸ್ಕೆಟ್, ಮುದ್ದೆ, ಗಂಜಿ ಇತ್ಯಾದಿಗಳನ್ನೆಲ್ಲಾ, 'ನವಣೆ' ಯಿಂದ ಮಾಡಬಹುದು.

ಉಲ್ಲೇಖಗಳು[ಬದಲಾಯಿಸಿ]

  1. ಕನ್ನಡ ಪ್ರಭ, ೨೦೧೪, ಜೂನ್,೧೦,'ಬೇಳೆ ಭಾತ್'
"https://kn.wikipedia.org/w/index.php?title=ನವಣೆ&oldid=664674" ಇಂದ ಪಡೆಯಲ್ಪಟ್ಟಿದೆ