ಚಿಕ್ಕಿ

ವಿಕಿಪೀಡಿಯ ಇಂದ
Jump to navigation Jump to search
Chikki assortment.jpg

ಚಿಕ್ಕಿ ಸಾಮಾನ್ಯವಾಗಿ ಕಡಲೆಕಾಯಿ ಮತ್ತು ಬೆಲ್ಲದಿಂದ ತಯಾರಿಸಲಾದ ಒಂದು ಸಾಂಪ್ರದಾಯಿಕ ಭಾರತೀಯ ಮಿಠಾಯಿ. ಅತ್ಯಂತ ಸಾಮಾನ್ಯ ಕಡಲೆಕಾಯಿ ಚಿಕ್ಕಿಯಲ್ಲದೆ ಚಿಕ್ಕಿಯ ಹಲವು ವಿಭಿನ್ನ ವಿಧಗಳಿವೆ. ಚಿಕ್ಕಿಯ ಪ್ರತಿ ವಿಧವನ್ನು, ಹುರಿಗಡ್ಲೆ, ಎಳ್ಳು, ಮಂಡಕ್ಕಿ, ಅವಲಕ್ಕಿ, ಅಥವಾ ಒಣಕೊಬ್ಬರಿಯನ್ನು ಒಳಗೊಂಡಂತೆ, ಬಳಸಲಾದ ಪದಾರ್ಥಗಳನ್ನು ಆಧರಿಸಿ ಹೆಸರಿಸಲಾಗುತ್ತದೆ.[೧]

ಕಡಲೇಬೀಜದ (ಶೇಂಗಾ) ಚಿಕ್ಕಿ ಬೇಕಾಗುವ ಪದಾರ್ಥಗಳು[ಬದಲಾಯಿಸಿ]

  • ಕಡಲೆಬೀಜ
  • ಒಂದು ಕಪ್ಬೆಲ್ಲ 1 ಕಪ್ (ಪುಡಿ ಮಾಡಿದ್ದು)
  • ಏಲಕ್ಕಿ- 4

ಮಾಡುವ ವಿಧಾನ[ಬದಲಾಯಿಸಿ]

ಮೊದಲಿಗೆ ಕಡಲೆ ಬೀಜ ಹುರಿದು ಪುಡಿ ಮಾಡಿಟ್ಟುಕೊಳ್ಳಿ.ಆಮೇಲೆ ಸ್ಟವ್ ಹಚ್ಚಿ ಅದರ ಮೇಲೆ ದಪ್ಪ ತಳ ಇರುವ ಪಾತ್ರೆ ಇಡಿ. ಪಾತ್ರೆಗೆ ಬೆಲ್ಲ ಹಾಕಿ 2 ಚಮಚ ನೀರು ಸೇರಿಸಿ,ಬೆಲ್ಲ ಕರಗಿ ಎಳೆ ಪಾಕ ಬಂದ ಕೂಡಲೇ ಅದಕ್ಕೆ ಪುಡಿ ಮಾಡಿದ ಕಡಲೆ ಬೀಜ ಸೇರಿಸಿ ನಂತರ ಅದಕ್ಕೆ ಏಲಕ್ಕಿ ಪುಡಿ ಮಾಡಿ ಚೆನ್ನಾಗಿ ಮಿಕ್ಸ್ ಮಾಡಿ ಆಮೇಲೆ ಒಂದು ತಟ್ಟೆಗೆ ಸ್ವಲ್ಪ ತುಪ್ಪ ಸವರಿ ಅದರ ಮೇಲೆ ಮಿಕ್ಸ್ ಹಾಕಿ ಬಿಸಿ ಇರುವಾಗಲೇ ಬೇಕಾದ ಆಕಾರಕ್ಕೆ ಚಿಕ್ಕಿಯನ್ನು ಕತ್ತರಿಸಿಕೊಳ್ಳಬಹುದು.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಚಿಕ್ಕಿ&oldid=759425" ಇಂದ ಪಡೆಯಲ್ಪಟ್ಟಿದೆ