ಇಡ್ಲಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಇಡ್ಲಿ ದಕ್ಷಿಣ ಭಾರತ ದ ಸಾಂಪ್ರದಾಯಕ ತಿನಿಸುಗಳಲ್ಲಿ ಒಂದು. ಪ್ರಧಾನವಾಗಿ ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸಲ್ಪಡುವ ಇಡ್ಲಿ ಸಾಮಾನ್ಯವಾಗಿ ತಿಂಡಿಯಾಗಿ ಬಳಸಲ್ಪಡುತ್ತದೆ. ಇಡ್ಲಿಯನ್ನು ಚಟ್ನಿ ಮತ್ತು ಸಾಂಬಾರ್ ಜೊತೆಗೆ ನೀಡಲಾಗುತ್ತದೆ.

ಇಡ್ಲಿ
ಇಡ್ಲಿ ತಯಾರಿಸುವ ತಟ್ಟೆಗಳು.

ಇಡ್ಲಿ ದಕ್ಷಿಣ ಭಾರತದ ಪ್ರಾಚೀನ ತಿನಿಸುಗಳಲ್ಲಿ ಒಂದು. ಹಳೆಗನ್ನಡ ಲೇಖಕ ಶಿವಕೋಟ್ಯಾಚಾರ್ಯನ (ಕ್ರಿ.ಶ. ೯೨೦) ಬರಹಗಳಲ್ಲಿ ಇಡ್ಲಿಯ ಪ್ರಸ್ತಾಪ ಬಂದಿದೆ. ಆ ಕಾಲದಲ್ಲಿ ಇಡ್ಲಿಯನ್ನು ಮಾಡಲು ಉದ್ದಿನ ಬೇಳೆಯನ್ನು ಮಾತ್ರ ಉಪಯೋಗಿಸುತ್ತಿದ್ದರೆಂಬುದು ಕಂಡು ಬರುತ್ತದೆ. ಕ್ರಿ.ಶ. ೧೦೨೫ ರ ಒಂದು ದಾಖಲೆಯಂತೆ ಉದ್ದಿನ ಬೇಳೆಯನ್ನು ಮಜ್ಜಿಗೆಯಲ್ಲಿ ನೆನೆಸಿ, ರುಬ್ಬಿ, ಮೆಣಸು, ಕೊತ್ತಂಬರಿ ಇಂಗು ಮೊದಲಾದವನ್ನು ಸೇರಿಸಿ ಇಡ್ಲಿ ಹಿಟ್ಟನ್ನು ಸಿದ್ಧ ಪಡಿಸುತ್ತಿದ್ದರು. ಮೂರನೆಯ ಸೋಮೇಶ್ವರ ತನ್ನ ಸಂಸ್ಕೃತ ಗ್ರಂಥವಾದ ಮಾನಸೋಲ್ಲಾಸ ದಲ್ಲಿ (ಕ್ರಿ.ಶ. ೧೧೩೦) ಇಡ್ಲಿ ತಯಾರಿಸುವ ವಿಧಾನವನ್ನು ವರ್ಣಿಸಿದ್ದಾನೆ. ಇಡ್ಲಿ ತಯಾರಿಕೆಯಲ್ಲಿ ಅಕ್ಕಿಯನ್ನು ಉಪಯೋಗಿಸುವ ಪ್ರಸ್ತಾಪ ೧೭ ನೆಯ ಶತಮಾನದವರೆಗೆ ಯಾವ ದಾಖಲೆ ಗಳಲ್ಲೂ ಲಭ್ಯವಾಗಿಲ್ಲ ಎಂಬುದು ಕುತೂಹಲಕರ ಸಂಗತಿ. ಇತ್ತೀಚಿನ ದಿನಗಳಲ್ಲಿ ಇಡ್ಲಿಯು ಅನೇಕ ರೂಪಾಂತರಗಳಲ್ಲಿ ಕಾಣಿಸಿ ಕೊಂಡಿವೆ:

  • ರವೆ ಇಡ್ಲಿ
  • ಬಟನ್ ಇಡ್ಲಿ
  • ಕಾಂಚೀಪುರಮ್ ಇಡ್ಲಿ, ಇತ್ಯಾದಿ.


"https://kn.wikipedia.org/w/index.php?title=ಇಡ್ಲಿ&oldid=715348" ಇಂದ ಪಡೆಯಲ್ಪಟ್ಟಿದೆ