ರವೆ ಇಡ್ಲಿ
ರವೆ ಅಥವಾ ಬಾಂಬೆ ರವೆ ಬಳಸಿ ತಯಾರಿಸಲಾಗುವ ರವೆ ಇಡ್ಲಿಯು (Rava idli) ದಕ್ಷಿಣ ಭಾರತದ ಜನಪ್ರಿಯ ಉಪಾಹಾರ ತಿನಿಸಾದ ಇಡ್ಲಿಯ ಒಂದು ಬಗೆ. ಇದು ಕರ್ನಾಟಕದ ಒಂದು ವೈಶಿಷ್ಟ್ಯ ಉಪಾಹಾರ.
ರವೆ ಇಡ್ಲಿ ಆವಿಷ್ಕರಣ
[ಬದಲಾಯಿಸಿ]ಬೆಂಗಳೂರಿನ ಜನಪ್ರಿಯ ಉಪಾಹಾರ ಗೃಹ ಸಂಸ್ಥೆ ಎಂಟಿಆರ್ ಇದನ್ನು ಆವಿಷ್ಕರಿಸಿತೆಂದು ಹೇಳಿಕೊಳ್ಳುತ್ತದೆ.[೧] .ಎಂಟಿಆರ್ ಪ್ರಕಾರ, ಎರಡನೇ ವಿಶ್ವಯುದ್ಧದ ಅವಧಿಯಲ್ಲಿ, ಇಡ್ಲಿ ತಯಾರಿಕೆಯಲ್ಲಿ ಮುಖ್ಯ ವಸ್ತುವಾದ ಅಕ್ಕಿಯ ಸರಬರಾಜು ಕಡಿಮೆಯಿತ್ತು, ಹಾಗಾಗಿ ರವೆಯನ್ನು ಬಳಸಿ ಇಡ್ಲಿ ತಯಾರಿಕೆಯನ್ನು ಪ್ರಯೋಗ ಮಾಡಲಾಯಿತು ಮತ್ತು ರವೆ ಇಡ್ಲಿಯ ಸೃಷ್ಟಿಯಾಯಿತು.[೨]
ಬೇಕಾಗುವ ಸಾಮಗ್ರಿಗಳು
[ಬದಲಾಯಿಸಿ]- ರವೆ (ಲೋಕಲ್ ರವೆ)
- ಎರಡು ಕಪ್ ಮೊಸರು
- ಅಡುಗೆ ಎಣ್ಣೆ
- ಹಸಿಮೆಣಸಿನಕಾಯಿ ನಾಕಾರು
- ಉದ್ದಿನ ಬೇಳೆ
- ಸಾಸಿವೆ ಅರ್ಧ ಟೀ ಸ್ಪೂನ್
- ಕಾಯಿತುರಿ
- ಇಂಗು ಚಿಟಿಕೆ, ಕೊತ್ತಂಬರಿ, ಕರಿಬೇವು ಸಣ್ಣಗೆ ಹೆಚ್ಚಿದ್ದು
- ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ
[ಬದಲಾಯಿಸಿ]ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಉದ್ದಿನ ಬೇಳೆ, ಸಣ್ಣಗೆ ಹೆಚ್ಚಿಕೊಂಡ ಹಸಿಮೆಣಸಿನಕಾಯಿ, ಕರಿಬೇವು, ಇಂಗು ಹಾಕಿ ಚೆನ್ನಾಗಿ ತಾಳಿಸಿ ನಂತರ ರವೆಯನ್ನು ಹಾಕಬೇಕು. ರವೆ ಘಂ ಅಂತ ವಾಸನೆ ಬರುವವರೆಗೆ ಹುರಿಯಬೇಕು. ಹುರಿದು ತಣ್ಣಗಾದ ಬಳಿಕ ಉಪ್ಪು, ಕೊತ್ತಂಬರಿ ಸೊಪ್ಪು, ಕಾಯಿತುರಿ ಹಾಕಿ ಮೊಸರನ್ನು ಹಾಕುತ್ತ ಇಡ್ಲಿ ಹಿಟ್ಟಿನ ಹದಕ್ಕೆ ಬರುವವರೆಗೆ ಕಲಿಸಬೇಕು. ಸ್ವಲ್ಪ ಕಾಯಿತುರಿ, ಕ್ಯಾರೆಟ್ ತುರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಮಿಕ್ಸ್ ಮಾಡಿಟ್ಟುಕೊಳ್ಳಬೇಕು. ಆ ಕಡೆ ಗೋಡಂಬಿಯನ್ನು ತುಪ್ಪದಲ್ಲಿ ಹುರಿದಿಟ್ಟು ಕೊಂಡಿರಬೇಕು. ನಂತರ ಎಣ್ಣೆ ಸವೆರಿದ ಇಡ್ಲಿ ತಟ್ಟೆಗೆ ಒಂದೊಂದು ಗೋಡಂಬಿ ಇಟ್ಟಮೇಲೆ ಕ್ಯಾರೆಟ್ ತುರಿ ಮಿಕ್ಸ್ ಮಾಡಿದ್ದನ್ನು ಹದವಾಗಿ ಹರಡಿ ಮೊಸರು ಸೇರಿಸಿ ಕಲೆಸಿದ ಹಿಟ್ಟನ್ನು ಹಾಕಿ ಕುಕ್ಕರನ್ನು ಸ್ಟೌವ್ ಮೇಲೆ ಪ್ರತಿಷ್ಠಾಪಿಸಬೇಕು. 10 ನಿಮಿಷಕ್ಕೆ ಕುಕ್ಕರ್ ಆಫ್ ಮಾಡಿದರೆ ಸಾಕು ಬಿಸಿಬಿಸಿ ರವೆ ಇಡ್ಲಿ ತಯಾರಾಗಿರುತ್ತದೆ.ರವೆ ಇಡ್ಲಿಯನ್ನು ಸಾಗು, ಕಾಯಿ ಚಟ್ನಿ ಮತ್ತು ಸಾಂಬಾರ್ ಜೊತೆ ಮೆಲ್ಲಬಹುದು. [೩][೪][೫]
ಉಲ್ಲೇಖನಗಳು
[ಬದಲಾಯಿಸಿ]- ↑ "ರವೆ ಇಡ್ಲಿ ಆವಿಷ್ಕರಣ". www.straitstimes.com accessdate 1 Oct 2016.
- ↑ "ರವೆ ಇಡ್ಲಿ ಇತಿಹಾಸ". cookclickndevour.com accessdate1 Oct 2016.
- ↑ "ರವೆ ಇಡ್ಲಿ ಮಾಡುವ ವಿಧಾನ". kannada.boldsky.com accessdate 1 Oct 2016.
- ↑ "ರವೆ ಇಡ್ಲಿ ಮಾಡುವ ವಿಧಾನ ಮತ್ತು ಹಂತಗಳು". www.vegrecipesofindia.com accessdate 1 Oct 2016.
- ↑ "ಮನೆಯಲ್ಲೇ ಮಾಡಿ ಈ ಅಡುಗೆ ಮಿಶ್ರಣ". m.prajavani.net accessdate 1 Oct 2016.[ಶಾಶ್ವತವಾಗಿ ಮಡಿದ ಕೊಂಡಿ]