ಕರಿಬೇವಿನ ಮರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
This article is about Murraya koenigii, an aromatic leaf often used in Indian cuisine. For Curry Plant, see Helichrysum italicum. For the dish or sauce, see Curry.
ಕರಿಬೇವಿನ ಮರ
Curry Trees.jpg
ವೈಜ್ಞಾನಿಕ ವರ್ಗೀಕರಣ
Kingdom: plantae
(unranked): Angiosperms
(unranked): Eudicots
(unranked): Rosids
Order: Sapindales
Family: ರುಟೇಸಿಯೇ
Genus: ಮುರ್ರಯ
Species: M. koenigii
ದ್ವಿಪದ ಹೆಸರು
Murraya koenigii
(L.) Sprengel[೧]

ಕರಿಬೇವಿನ ಮರ (ಸಿಂಹಳದಲ್ಲಿ: කරපිංචා, ತಮಿಳಿನಲ್ಲಿ:கறி (ಕರ್ರಿ)வேப்பிலை, ಕನ್ನಡದಲ್ಲಿ:ಕರಿಬೇವು ತೆಲುಗಿನಲ್ಲಿ:కరివేపాకు ಮಲಯಾಳಂನಲ್ಲಿ: കറിവേപ്പില) (ಮುರ್ರಾಯಾ ಕೋನಿಗೈ ಸಮಾ; . ಬೆರ್ಗೆರಾ ಕೋನಿಗೈ, ಚಾಕಸ್ ಕೋನಿಗೈ ) ಎನ್ನುವುದು ಭಾರತ ಮೂಲದ ರುಟೇಸಿಯೇ ಕುಟುಂಬದ ಉಷ್ಣವಲಯದಿಂದ ಉಪೋಷ್ಣ ವಲಯದಲ್ಲಿ ಬೆಳೆಯುವ ಮರವಾಗಿದೆ. ಹೆಸರನ್ನು ತಮಿಳಿನಲ್ಲಿ 'ಕರಿವೇಪಿಳ್ಳೈ' (ಕರಿ-ಮಸಾಲೆ ಪದಾರ್ಥ, ವೆಪ್ಪು-ಬೇವು ಮತ್ತು ಇಲೈ- ಎಲೆ) ಎಂದು ಉಚ್ಚರಿಸಲಾಗುತ್ತದೆ ಮತ್ತು ಇದು ಕರಿಬೇವಿನ ಎಲೆಗಳ ಅಕ್ಷರಶಃ ಭಾಷಾಂತರವಾಗಿದೆ. ತಮಿಳು ಹೆಸರಿನ ಅರ್ಥವು "ಮಸಾಲೆ ಪದಾರ್ಥವನ್ನು ತಯಾರಿಸಲು ಬಳಸುವ ಎಲೆ" ಎಂದು ಆಗಿದೆ ಮತ್ತು ಇದು ತಮಿಳುನಾಡಿನಲ್ಲಿ (ದಕ್ಷಿಣ ಭಾರತದ ಒಂದು ರಾಜ್ಯ) ತಯಾರಿಸುವ ಬಹುಪಾಲು ಎಲ್ಲಾ ಅಡುಗೆ ಪದಾರ್ಥಗಳಲ್ಲಿ ಕೊತ್ತುಂಬರಿ ಸೊಪ್ಪಿನ ಜೊತೆಗೆ ಬಳಸಲ್ಪಡುತ್ತದೆ. ಆಗಾಗ್ಗೆ ಮಸಾಲೆ ಪದಾರ್ಥಗಳಲ್ಲಿ ಬಳಸುವ ಎಲೆಗಳನ್ನು ಸಾಮಾನ್ಯವಾಗಿ "ಕರಿಬೇವಿನ ಎಲೆಗಳು" ಎನ್ನಲಾಗುತ್ತದೆ, ಆದರೆ ಇವುಗಳಿಗೆ "ಸಿಹಿ ಬೇವಿನ ಎಲೆಗಳು" ಎಂತಲೂ ಕರೆಯಲಾಗುತ್ತದೆ. ದಕ್ಷಿಣ ಭಾರತದಲ್ಲಿ ಇದು ಮಸಾಲೆ ಪದಾರ್ಥಗಳಲ್ಲಿ ಬಳಸಲಾಗುವ ಅವಿಭಾಜ್ಯ ಘಟಕವಾಗಿದ್ದು, ಅಲ್ಲಿ ಕರಿಬೇವಿನ ಎಲೆಗಳಿಲ್ಲದೇ ಮಸಾಲೆ ಪದಾರ್ಥವು ರುಚಿಹೀನ ಎಂದು ಭಾವಿಸಲಾಗುತ್ತದೆ. ಎಲೆಯ ನೋಟವು ಕಹಿಯಾದ ಬೇವಿನ ಮರದ ಎಲೆಗಳ ಹಾಗೆ ಇರುವುದರಿಂದ ಕನ್ನಡದಲ್ಲಿ ಇದನ್ನು "ಕರಿ ಬೇವು" ಎಂದು ಕರೆಯಲಾಗುತ್ತದೆ. ಮೆಡಿಟರೇನಿಯನ್‌ನ ಸುವಾಸನೆಭರಿತ ಬೇ ಎಲೆಗಳು ಮತ್ತು ಕಾಮಕಸ್ತೂರಿ ಎಲೆಗಳಿಗಿಂತ ಕರಿಬೇವಿನ ಎಲೆಗಳು ಸಂಪೂರ್ಣವಾಗಿ ಭಿನ್ನವಾಗಿವೆ.

ವಿವರಣೆ[ಬದಲಾಯಿಸಿ]

ಚಿಕ್ಕ ಹೂವುಗಳು ಬಿಳಿಯಾಗಿರುತ್ತವೆ ಮತ್ತು ಸುವಾಸನೆ ಭರಿತವಾಗಿರುತ್ತವೆ.
ಪಕ್ವವಾದ ಮತ್ತು ಪಕ್ವವಾಗಿಲ್ಲದ ಹಣ್ಣುಗಳು
ಭಾರತದ ಪಶ್ಚಿಮ ಬಂಗಾಳದಲ್ಲಿನ ಜಲಪಾಯಿಗುರಿ ಜಿಲ್ಲೆಯಲ್ಲಿನ ಬುಕ್ಸಾ ಹುಲಿ ಧಾಮದಲ್ಲಿ ಜಯಂತಿ.

ಇದು ೪-೬ ಮೀ ಎತ್ತರಕ್ಕೆ, ೪೦ ಸೆಂಮೀ ಸುತ್ತಳತೆಯ ಕಾಂಡದೊಂದಿಗೆ ಬೆಳೆಯುವ ಚಿಕ್ಕ ಮರವಾಗಿದೆ. ಎಲೆಗಳು ಗರಿಯಂತಿದ್ದು, ೧೧-೨೧ ಚಿಗುರೆಲೆಗಳನ್ನು ಹೊಂದಿರುತ್ತದೆ ಮತ್ತು ಪ್ರತಿ ಚಿಗುರೆಲೆಯು ೨-೪ ಸೆಂಮೀ ಉದ್ದ ಮತ್ತು ೧-೨ ಸೆಂಮೀ ಅಗಲವಾಗಿರುತ್ತದೆ. ಇವುಗಳು ಅತೀ ಸುವಾಸನೆಭರಿತವಾಗಿರುತ್ತದೆ. ಹೂವುಗಳು ಚಿಕ್ಕದಾಗಿದ್ದು, ಬಿಳಿ ಬಣ್ಣವಾಗಿರುತ್ತದೆ ಮತ್ತು ಸುಗಂಧಭರಿತವಾಗಿರುತ್ತದೆ. ಚಿಕ್ಕದಾಗಿ ಕಪ್ಪಾಗಿದ್ದು ಹೊಳೆಯುವ ಹಣ್ಣುಗಳನ್ನು ತಿನ್ನಬಹುದು, ಆದರೆ ಅವುಗಳ ಬೀಜಗಳು ವಿಷಪೂರಿತವಾಗಿರುತ್ತವೆ.

ಸಸ್ಯ ಜಾತಿಯ ಹೆಸರು ಸಸ್ಯವಿಜ್ಞಾನಿಯಾದ ಜೊಹಾನನ್ ಕೋನಿಗ್ ಅವರ ಸ್ಮರಣಾರ್ಥವಾಗಿದೆ.

ಉಪಯೋಗಗಳು[ಬದಲಾಯಿಸಿ]

ಎಲೆಗಳನ್ನು ದಕ್ಷಿಣ ಮತ್ತು ಪಶ್ಚಿಮ ತೀರದ ಪ್ರದೇಶದ ಮತ್ತು ಶ್ರೀಲಂಕಾ ಅಡುಗೆಗಳಲ್ಲಿ ಮತ್ತು ಪ್ರಮುಖವಾಗಿ ಮಸಾಲೆ ಪದಾರ್ಥಗಳಲ್ಲಿ ಬೇ ಎಲೆಗಳಂತೆಯೇ ಪರಿಮಳದ ವಸ್ತುವಾಗಿ ಕರಿಬೇವಿನ ಎಲೆಗಳನ್ನು ಉಪಯೋಗಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ತಯಾರಿಯ ಮೊದಲ ಹಂತದಲ್ಲಿ ಇದನ್ನು ಕತ್ತರಿಸಿದ ಈರುಳ್ಳಿಯ ಜೊತೆಗೆ ಹುರಿಯಲಾಗುತ್ತದೆ. ಕರಿಬೇವಿನ ಎಲೆಗಳನ್ನು ತೋರಣ್, ವಡಾ, ರಸಂ ಮತ್ತು ಕಢಿ ಪದಾರ್ಥಗಳನ್ನು ತಯಾರಿಸಲು ಸಹ ಬಳಸಲಾಗುತ್ತದೆ. ತಾಜಾ ರೂಪದಲ್ಲಿ ಇವುಗಳು ಅತೀ ಅಲ್ಪ ಬಾಳಿಕಯ ಕಾಲಾವಧಿಯನ್ನು ಹೊಂದಿರುತ್ತವೆ ಮತ್ತು ಇವುಗಳು ರೆಫ್ರಿಜರೇಟರ್‌ನಲ್ಲಿಯೂ ತಾಜಾವಾಗಿರಲಾರವು. ಇವುಗಳು ಒಣ ರೂಪದಲ್ಲಿಯೂ ಲಭ್ಯವಿರುತ್ತವೆ, ಆದರೆ ಸುವಾಸನೆಯು ಅತೀ ಕಡಿಮೆ ಪ್ರಮಾಣದಲ್ಲಿರುತ್ತದೆ.

ಮುರ್ರಾಯ ಕೋನಿಗೈ ಯ ಎಲೆಗಳನ್ನು ಆಯುರ್ವೇದಿಕ್ ಔಷಧದಲ್ಲಿಯೂ ಸಹ ಔಷಧೀಯ ವಸ್ತುವವಾಗಿ ಬಳಸಲಾಗುತ್ತದೆ. ಈ ಎಲೆಗಳ ಗುಣಲಕ್ಷಣಗಳು ಸಕ್ಕರೆ ಕಾಯಿಲೆ ನಿರೋಧಕವಾಗಿ,[೨]ಆಂಟಿ ಆಕ್ಸಿಡೆಂಟ್ ಆಗಿ,[೩] ಸೂಕ್ಷ್ಮಾಣು ನಿರೋಧಕವಾಗಿ, ಊತ ನಿರೋಧಕವಾಗಿ, ಹೆಪಟೋಪ್ರೊಟೆಕ್ಟಿವ್ ಆಗಿ, ಆಂಟಿ-ಹೈಪರ್‌ಕೊಲೆಸ್ಟೆರೋಲೆಮಿಕ್ ಆಗಿ ಹಾಗೂ ಇತರ ರೋಗ ಲಕ್ಷಣಗಳಲ್ಲಿ ಉಪಯೋಗಕಾರಿಯಾಗಿದೆ. ಕೂದಲು ಆರೋಗ್ಯಪೂರ್ಣವಾಗಿ ಮತ್ತು ಸೊಂಪಾಗಿ ಬೆಳೆಯುವಲ್ಲಿ ಕರಿಬೇವಿನ ಎಲೆಗಳು ಸಹಾಯಕಾರಿ ಎಂಬುದಾಗಿಯೂ ಕಂಡುಬಂದಿದೆ. ಇವುಗಳು ಕಬ್ಬಿಣದ ಅಂಶವನ್ನು ಸಹ ಒಳಗೊಂಡಿದೆ.

ಸಾಂಬಾರು ಪದಾರ್ಥಗಳಲ್ಲಿ ಹೆಚ್ಚು ಸಾಮಾನ್ಯವಾಗಿ ಬಳಸಲ್ಪಡುವುದಾದರೂ, ಕರಿಬೇವಿನ ಮರದ ಎಲೆಗಳನ್ನು ರುಚಿಯನ್ನು ಹೆಚ್ಚಿಸಲು ಇತರ ಹಲವು ಆಹಾರ ಪದಾರ್ಥಗಳಲ್ಲಿ ಬಳಸಬಹುದು.

ಪ್ರಸರಣ[ಬದಲಾಯಿಸಿ]

ನೆಡಲು ಬೀಜಗಳು ಹಣ್ಣಾಗಿರಬೇಕು ಮತ್ತು ತಾಜಾ ಆಗಿರಬೇಕು; ಒಣಗಿದ ಅಥವಾ ಬಾಡಿದ ಹಣ್ಣುಗಳು ಮೊಳೆಯುವುದಿಲ್ಲ. ಒಂದೋ ಪೂರ್ಣ ಹಣ್ಣನ್ನು (ಅಥವಾ ಹಣ್ಣಿನ ತಿರುಳನ್ನು ತೆಗೆಯಿರಿ) ಕುಂಡದಲ್ಲಿ ನೆಡಬೇಕಾಗುತ್ತದೆ ಮತ್ತು ಅದನ್ನು ಒಣಗಿಸದೇ ತೇವಾಂಶದಲ್ಲಿ ಇಡಬೇಕಾಗುತ್ತದೆ.[original research?]

ಉಲ್ಲೇಖಗಳು‌[ಬದಲಾಯಿಸಿ]

  1. "Murraya koenigii information from NPGS/GRIN". www.ars-grin.gov. Retrieved 2008-03-11. 
  2. Lua error in ಮಾಡ್ಯೂಲ್:Citation/CS1 at line 3606: bad argument #1 to 'pairs' (table expected, got nil).
  3. Lua error in ಮಾಡ್ಯೂಲ್:Citation/CS1 at line 3606: bad argument #1 to 'pairs' (table expected, got nil).

ಬಾಹ್ಯ ಕೊಂಡಿಗಳು‌[ಬದಲಾಯಿಸಿ]