ಇಂಗು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Asafoetida
Ferula scorodosma syn. assafoetida
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
F. assafoetida
Binomial name
Ferula assafoetida

ಅಸಾಫೋಟಿಡಾ (ಫೆರುಲಾ ಅಸ್ಸಾಫೋಟಿಡಾ ) (ಪರ್ಷಿಯನ್‌ انگدان ಅಂಗೆಡಾನ್‌), ಪರ್ಯಾಯ ಕಾಗುಣಿತ ಅಸಾಫೆಟಿಡಾ , pronounced /æsəˈfɛtɨdə/[೧] (ಇದನ್ನು ದೆವ್ವದ ಹೊಲಸು , ದುರ್ಗಂಧದ ಅಂಟು , ಅಸಾಂತ್‌ , ದೇವರ ಆಹಾರ , ಕಾಯಮ್‌ (ಮಲಯಾಳಂ), ಹಿಂಗ್‌ (ಬಂಗಾಳೀ, Marathi, ಗುಜರಾತಿ, ಹಿಂದಿ, ಉರ್ದು, ನೇಪಾಳೀ), ಇಂಗುವಾ (ತೆಲುಗು), ಇಂಗು (ಕನ್ನಡ), ಪೆರುಂಗಾಯಂ (ತಮಿಳು), ಹಿಲ್ಟೀಟ್‌ (ಮಿಷ್ನಾಯಿಕ್‌ ಹೀಬ್ರ್ಯೂ), ಹಾಗೂ ಜೈಂಟ್‌ ಫೆನ್ನೆಲ್‌ ಎಂದೆಲ್ಲಾ ಕರೆಯಲಾಗುತ್ತದೆ) ಪರ್ಷಿಯಾ (ಇರಾನ್‌) ಮೂಲದ ಫೆರುಲಾ ತಳಿಗೆ ಸೇರಿದೆ. ಅಸಾಫೋಟಿಡಾ ಕಚ್ಚಾ ಸ್ಥಿತಿಯಲ್ಲಿದ್ದಾಗ ಕಟುವಾದ, ಅಹಿತಕಾರಿ ವಾಸನೆಯನ್ನು ಹೊಂದಿರುತ್ತದೆ, ಆದರೆ ಅಡಿಗೆಯಲ್ಲಿ ಬಳಸಿದಾಗ, ಅದು, ಲೀಕ್‌ಗಳನ್ನು ನೆನಪಿಗೆ ತರುವ ಪರಿಮಳವನ್ನು ಬೀರುತ್ತದೆ.

ಪ್ರಯೋಜನಗಳು(ಉಪಯೋಗಗಳು)[ಬದಲಾಯಿಸಿ]

ಅಡಿಗೆ[ಬದಲಾಯಿಸಿ]

ಈ ಮಸಾಲೆ ಪದಾರ್ಥವನ್ನು ಜೀರ್ಣ ಸಹಕಾರಿಯಾಗಿ , ಆಹಾರದಲ್ಲಿ ವ್ಯಂಜನವಾಗಿ ಹಾಗೂ ಉಪ್ಪಿನಕಾಯಿಗಳಲ್ಲಿ ಬಳಸಲಾಗುತ್ತದೆ. ಇದರ ವಾಸನೆಯು, ಬೇಯಿಸದಿದ್ದಾಗ, ಎಷ್ಟು ಕಟುವಾಗಿರುತ್ತದೆಂದರೆ ಅದನ್ನು ಗಾಳಿ ಆಡದ ಪಾತ್ರೆಯಲ್ಲಿಡಬೇಕಿರುತ್ತದೆ; ಇಲ್ಲದಿದ್ದರೆ ಅದರ ಸೊಗಡು ಸಮೀಪದ ಇತರ ಮಸಾಲೆ ಪದಾರ್ಥಗಳನ್ನು ಕಲುಷಿತಗೊಳಿಸಬಹುದು. ಆದಾಗ್ಯೂ, ಎಣ್ಣೆ ಅಥವಾ ತುಪ್ಪದಲ್ಲಿ ಬಿಸಿ ಮಾಡಿದಾಗ ಅದರ ವಾಸನೆ ಹಾಗೂ ರುಚಿಯು ಮತ್ತಷ್ಟು ಸೌಮ್ಯವಾಗಿ ಹಾಗೂ ಹಿತಕರವಾಗುತ್ತದೆ, ಸೌತೀಡ್‌ ಈರುಳ್ಳಿ ಹಾಗೂ ಬೆಳ್ಳುಳ್ಳಿಗಳನ್ನು ನೆನಪಿಸಿಕೊಳ್ಳುವಂತಹಾ ರುಚಿ ಹಾಗೂ ಪರಿಮಳವನ್ನು ಪಡೆಯುತ್ತದೆ.[೨]

ಜಠರವಾಯುವಿರೋಧಿ[ಬದಲಾಯಿಸಿ]

ಅಸಾಫೋಟಿಡಾವು ಕರುಳಿನ ಸ್ಥಳೀಯ ಕಿರುವನಸ್ಪತಿಗಳ ಬೆಳವಣಿಗೆಯನ್ನು ತಡೆಹಿಡಿದು, ವಾಯುಬಾಧೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.[೩]

ವೈದ್ಯಕೀಯ ಪ್ರಯೋಜನಗಳು[ಬದಲಾಯಿಸಿ]

  • ಶೀತಜ್ವರವನ್ನು ಹೊಡೆದೋಡಿಸಲು - ಸ್ಪ್ಯಾನಿಷ್‌ ಶೀತಜ್ವರ ಸಾಂಕ್ರಾಮಿಕ ವ್ಯಾಧಿಯ ವಿರುದ್ಧ ಹೋರಾಡಲು 1918ರಲ್ಲಿ ಅಸಾಫೋಟಿಡಾವನ್ನು ಬಳಸಲಾಗಿತ್ತು. ತೈವಾನ್‌ಕಾವೋಸಿಯಂಗ್‌ ವೈದ್ಯಕೀಯ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಸಾಫೋಟಿಡಾದ ಬೇರು ಹಂದಿ ಜ್ವರ ವೈರಸ್‌, H1N1ಅನ್ನು ಕೊಲ್ಲುವ/ನಿಷ್ಕ್ರಿಯಗೊಳಿಸುವ ನೈಸರ್ಗಿಕ ವೈರಸ್‌ನಾಶಕ ಔಷಧೀಯ ಸಂಯುಕ್ತಗಳನ್ನು ಉತ್ಪಾದಿಸುತ್ತದೆ ಎಂದು ವರದಿಯೊಂದರಲ್ಲಿ ತಿಳಿಸಿದ್ದಾರೆ. ಅಮೇರಿಕನ್‌ ಕೆಮಿಕಲ್‌ ಸೊಸೈಟಿ ಸಂಸ್ಥೆಯ ಜರ್ನಲ್‌ ಆಫ್‌ ನ್ಯಾಚುರಲ್‌ ಪ್ರಾಡಕ್ಟ್ಸ್‌‌ ವೈಜ್ಞಾನಿಕ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ, ಸಂಶೋಧಕರು ಇದರ ಘಟಕಗಳು ಈ ತರಹದ ಶೀತಜ್ವರದ ವಿರುದ್ಧ "ಹೊಸ ಔಷಧಿಯ ಅಭಿವೃದ್ಧಿಯಲ್ಲಿ ಇದು ಒಂದು ಆಶಾಜನಕ ಪ್ರಮುಖ ಘಟಕವಾಗುವ ಸಾಧ್ಯತೆಗಳಿವೆ" ಎಂದಿದ್ದಾರೆ.[೪][೫]
  • ಜೀರ್ಣಕ್ರಿಯೆ - ಥೈಲೆಂಡ್‌, ಹಾಗೂ ಭಾರತಗಳಲ್ಲಿ ಜೀರ್ಣಕ್ರಿಯೆಗೆ ಸಹಕಾರಿಯಾಗಲೆಂದು ಉದರದ ಮೇಲೆ "ಮಹಾಹಿಂಗು" ಎಂದು ಕರೆಯಲ್ಪಡುವ ಮದ್ಯಸಾರ ಅಥವಾ ನೀರು ಮಿಶ್ರಿತ ದ್ರಾವಣವನ್ನು ಲೇಪಿಸುತ್ತಾರೆ.[ಸೂಕ್ತ ಉಲ್ಲೇಖನ ಬೇಕು]
  • ಉಬ್ಬಸ ಹಾಗೂ ಗೂರಲು ರೋಗ - ಉಬ್ಬಸ ಹಾಗೂ ಗೂರಲು ರೋಗಗಳ ಸಂದರ್ಭಗಳಲ್ಲಿ ಇದು ಉಪಯೋಗಕ್ಕೆ ಬರಬಲ್ಲದು[by whom?] ಎಂದೂ ಹೇಳಲಾಗುತ್ತದೆ. ಮಕ್ಕಳ ಶೀತಬಾಧೆಗೆ ಜಾನಪದ ಮದ್ದು: ಕಟು ವಾಸನೆ-ಬೀರುವ ಲೇಪವನ್ನಾಗಿ ಮಿಶ್ರ ಮಾಡಿ ಚೀಲದಲ್ಲಿಟ್ಟು ಬಾಧೆ ಪಡುತ್ತಿರುವ ಮಗುವಿನ ಕತ್ತಿನ ಸುತ್ತಾ ಕಟ್ಟಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]
  • ಸೂಕ್ಷ್ಮಜೀವಿವಿರೋಧಿ - ಅಸಾಫೋಟಿಡಾವು ಸಾಂಪ್ರದಾಯಿಕ ವೈದ್ಯದಲ್ಲಿ ಸೂಕ್ಷ್ಮಜೀವಿವಿರೋಧಿಯಾಗಿ ವ್ಯಾಪಕ ಬಳಕೆಯಲ್ಲಿದೆ, ಬೇರೂರಿದ ಗೂರಲು ರೋಗ ಹಾಗೂ ನಾಯಿಕೆಮ್ಮುಗಳ ಚಿಕಿತ್ಸೆಗೆ ಉಪಯುಕ್ತ ಹಾಗೂ ವಾಯುಬಾಧೆಯನ್ನು ಕಡಿಮೆ ಮಾಡುತ್ತದೆಂಬುದು ದಾಖಲಿತ ವಿಷಯವಾಗಿದೆ.[೬]
  • ಗರ್ಭನಿರೋಧಕ/ಗರ್ಭಸ್ರಾವಕ - ಅಸಾಫೋಟಿಡಾವು ಗರ್ಭನಿರೋಧಕ/ಗರ್ಭಸ್ರಾವಕ ಸ್ವಭಾವಗಳನ್ನೂ ಹೊಂದಿದೆಯೆನ್ನಲಾಗಿದೆ,[೭] ಹಾಗೂ ಪ್ರಾಚೀನ ಫೆರುಲಾ ತಳಿಯ ಸಿಲ್‌ಫಿಯಂಗೆ (ಅಲ್ಲದೇ ಅದರ ಕಡಿಮೆ ಗುಣಮಟ್ಟದ ಬದಲಿಯಾಗಿದೆ) ಸಂಬಂಧಪಟ್ಟಿದೆ.
  • ಅಪಸ್ಮಾರನಿರೋಧಕ - ಅಸಾಫೋಟಿಡಾ ತೈಲಲೇಪಿತ-ಮರದಂಟು ಅಪಸ್ಮಾರ ನಿರೋಧಕ ಗುಣವನ್ನು ಹೊಂದಿದೆ ಎಂದು ಪ್ರಾಚೀನ ಯುನಾನಿ ಹಾಗೂ ಮನುಕುಲಸಸ್ಯಶಾಸ್ತ್ರದ ಸಾಹಿತ್ಯಗಳಲ್ಲಿ ನಮೂದಾಗಿದೆ.[೮]
  • ವಾತವನ್ನು ನಿಯಂತ್ರಿಸುವುದು - ಆಯುರ್ವೇದದಲ್ಲಿ, ಅಸಾಫೋಟಿಡಾವನ್ನು ವಾತ ದೋಷವನ್ನು ನಿವಾರಿಸುವ ಉತ್ತಮ ಸಂಬಾರ ದ್ರವ್ಯಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ.[೯]

ಪ್ರಾಂತೀಯ ಬಳಕೆಗಳು[ಬದಲಾಯಿಸಿ]

  • ಭಾರತದ, ಜಮ್ಮು ಪ್ರದೇಶದಲ್ಲಿ, ಅಸಾಫೋಟಿಡಾವನ್ನು ವಾಯುಬಾಧೆ ಹಾಗೂ ಮಲಬದ್ಧತೆಗಳಿಗೆ ಔಷಧಿಯಾಗಿ ಸ್ಥಳೀಯರಲ್ಲಿ 60%ರಷ್ಟು ಮಂದಿ ಬಳಸುತ್ತಾರೆ.[೧೦] ಇದನ್ನು ವಿಶೇಷವಾಗಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಬಳಸದ, ಹಿಂದೂಗಳಲ್ಲಿ ವೈಶ್ಯ ವರ್ಣಕ್ಕೆ ಸೇರಿದವರು ಹಾಗೂ ಜೈನಧರ್ಮೀಯರು ಹಾಗೂ ವೈಷ್ಣವರು ಬಳಸುತ್ತಾರೆ. ಇದನ್ನು ಅನೇಕ ಸಸ್ಯಾಹಾರಿ ಹಾಗೂ ಮಸುರ ಬೀಜ ಆಹಾರದಲ್ಲಿ ರುಚಿ ಹಾಗೂ ಸುವಾಸನೆಯನ್ನು ನೀಡಲು ಹಾಗೂ ವಾಯುಬಾಧೆಯನ್ನು ತಪ್ಪಿಸಲು ಬಳಸಲಾಗುತ್ತದೆ.

ಇತರ ಉಪಯೋಗಗಳು[ಬದಲಾಯಿಸಿ]

  • ಬೇಟೆ ಸೆಳೆಆಹಾರ - ಜಾನ್‌ C ಡುವಲ್‌ 1936ರಲ್ಲಿ ಟೆಕ್ಸಾಸ್‌/ಮೆಕ್ಸಿಕೊ ಗಡಿಯುದ್ದಕ್ಕೂ ಪ್ರಚಲಿತವಿರುವ ಸಾಮಾನ್ಯ ಮಾಹಿತಿಯ ಪ್ರಕಾರ ಅಸಾಫೋಟಿಡಾದ ವಾಸನೆಯಿಂದ ತೋಳ ಆಕರ್ಷಣೆಗೊಳಗಾಗುತ್ತದೆ ಎಂದು ವರದಿ ಮಾಡಿದ್ದರು. ವಿಶೇಷವಾಗಿ ಬೆಕ್ಕುಮೀನು/ಹೆಮ್ಮೀನು ಹಾಗೂ ಈಟಿಮೀನುಗಳಿಗೆ ಸೆಳೆಆಹಾರವಾಗಿ‌ ಬಳಸಲ್ಪಡಬಹುದಾದ ಅನೇಕ ವಾಸನಾಯುಕ್ತ ಸೆಳೆಆಹಾರಗಳಲ್ಲಿ ಇದೂ ಒಂದಾಗಿದೆ.
  • ಆತ್ಮಗಳನ್ನು ದೂರವಿರಿಸಲು - ಜಮೈಕಾದಲ್ಲಿ, ನೆತ್ತಿಕುಳಿಯ ಮೂಲಕ ಆತ್ಮಗಳು (ಜಮೈಕಾದ ಸ್ಥಳೀಯ ಭಾಷೆಯ ಪ್ರಕಾರ "ಡಪ್ಪೀಸ್‌") ಪ್ರವೇಶಿಸುವುದನ್ನು ತಡೆಯಲು ಅಸಾಫೋಟಿಡಾವನ್ನು ಸಾಂಪ್ರದಾಯಿಕವಾಗಿ ಮಗುವಿನ ನೆತ್ತಿಕುಳಿಗೆ (ಜಮೈಕಾದ ಸ್ಥಳೀಯ ಭಾಷೆಯ ಪ್ರಕಾರ "ಮೋಲ್‌") ಲೇಪಿಸಲಾಗುತ್ತದೆ. ಆಫ್ರಿಕನ್‌-ಅಮೇರಿಕನ್‌ ಹೂಡೂ ಪದ್ಧತಿಯಲ್ಲಿ, ಅಸಾಫೋಟಿಡಾವನ್ನು ಅದು ರಕ್ಷಿಸುವ ಹಾಗೂ ವಿಪತ್ತು ತರುವ ಎರಡೂ ಶಕ್ತಿಗಳಿವೆ ಎಂಬ ಭಾವನೆಯಿಂದಾಗಿ ಮಂತ್ರವಿದ್ಯೆಯಲ್ಲಿ ಬಳಸಲಾಗುತ್ತದೆ. ವಿಧಿಯುಕ್ತ ಮಂತ್ರವಿದ್ಯೆಯಲ್ಲಿ ಅದರಲ್ಲೂ ವಿಶೇಷವಾಗಿ ಕೀ ಆಫ್‌ ಸಾಲೊಮನ್‌ ದ ಕಿಂಗ್‌ ನಲ್ಲಿ, ಅದನ್ನು ಮಗುಸ್‌ರನ್ನು ರಾಕ್ಷಸಶಕ್ತಿಗಳಿಂದ ಕಾಪಾಡಲು ಹಾಗೂ ಅದನ್ನು ಬಳಸಿಯೇ ಅವುಗಳನ್ನು ಕಟ್ಟಿಹಾಕಲು ಬಳಸಲಾಗಿರುತ್ತದೆ.

ಪಶ್ಚಿಮದಲ್ಲಿನ ಇತಿಹಾಸ[ಬದಲಾಯಿಸಿ]

ಇರಾನ್‌‌ನಿಂದ ಭೂಭಾಗದ ಮೂಲಕ ಮೆಡಿಟರೇನಿಯನ್‌ ಪೂರ್ವಭಾಗಕ್ಕೆ ಬಂದು ಅಲ್ಲಿ ಪರಿಚಿತವಾಗಿತ್ತು. ಈಗ ಯೂರೋಪ್‌ನಲ್ಲಿ ಸಾಧಾರಣವಾಗಿ ಇದನ್ನು ಮರೆತಿದ್ದರೂ, ಭಾರತದಲ್ಲಿ ಇನ್ನೂ ವ್ಯಾಪಕವಾಗಿ ಬಳಕೆಯಲ್ಲಿದೆ (ಅಲ್ಲಿ ಹಿಂಗು ಎಂಬ ಹೆಸರಿನಿಂದ ಹೆಚ್ಚು ಪರಿಚಿತವಾಗಿದೆ). ಅಲೆಕ್ಸಾಂಡರ್‌ ಮಹಾಶಯನ ದಂಡಯಾತ್ರೆಯೊಂದರ ಮೂಲಕ ಯೂರೋಪ್‌ಗೆ ಬಂದಿತು, ಈಶಾನ್ಯ ಪರ್ಷಿಯಾದ ದಂಡಯಾತ್ರೆಯಿಂದ ಹಿಂದಿರುಗುವಾಗ, ಅದರಷ್ಟು ರುಚಿಯಿಲ್ಲದಿದ್ದರೂ ಉತ್ತರ ಆಫ್ರಿಕಾದ ಜನಪ್ರಿಯ ಸೈರೀನ್‌ಸಿಲ್‌ಫಿಯಂಗೆ ತದ್ವತ್ತಾದುದು ಅಂತ ತಿಳಿದಿದ್ದರು. ಡಯಾಸ್ಕೋರೈಡ್ಸ್‌‌, ಒಂದನೇ ಶತಮಾನದಲ್ಲಿ, "ಸಿರಿನೈಕ್‌ ವಿಧದ ತಳಿಯನ್ನು, ಯಾರಾದರೂ ಕೇವಲ ರುಚಿ ನೋಡಿದರೂ ಸಾಕು, ದೇಹಾದ್ಯಂತ ದೈಹಿಕ ಧಾತುವನ್ನು ಪಸರಿಸುತ್ತದೆ ಹಾಗೂ ಉಸಿರಿನ ಮೂಲಕ ತಿಳಿಯದಂತಹಾ ಅಥವಾ ತಿಳಿದರೂ ಸ್ವಲ್ಪ ಮಾತ್ರ ಆಗುವಂತಹಾ ಆರೋಗ್ಯಕರ ಸುವಾಸನೆಯನ್ನು ನೀಡುತ್ತದೆ; ಆದರೆ ಮೆಡಿಯನ್‌ [ಇರಾನಿನ] ತಳಿಯು ಕಡಿಮೆ ಸಾಮರ್ಥ್ಯದ್ದಲ್ಲದೇ ಅಸಹ್ಯ ವಾಸನೆಯನ್ನು ಹೊಂದಿದೆ" ಎಂದು ಬರೆದಿದ್ದರು. ಆದಾಗ್ಯೂ, ದೈವವಶಾತ್‌ ಅಡಿಗೆಯಲ್ಲಿ ಸಿಲ್‌ಫಿಯಂ ಬದಲಿಯಾಗಿ ಇದನ್ನು ಬಳಸಬಹುದಾಗಿದ್ದು, ಏಕೆಂದರೆ ಡಯಾಸ್ಕೋರೈಡ್ಸ್ ಕಾಲದ ಕೆಲವೇ ದಶಕಗಳಲ್ಲಿ, ಸಿರಿನ್‌ನ ಮೂಲ ಸಿಲ್‌ಫಿಯಂ ತಳಿಯು ಅಳಿದುಹೋಯಿತು, ವೈದ್ಯರಿಂದ ಹಾಗೂ ಅಡಿಗೆಯವರುಗಳಲ್ಲಿ ಜನಪ್ರಿಯತೆ ಹೆಚ್ಚಿಸಿಕೊಂಡಿತು.[೧೧]

ರೋಮನ್‌ ಸಾಮ್ರಾಜ್ಯವು ಅಂತ್ಯಗೊಂಡ ನಂತರ, 16ನೇ ಶತಮಾನದವರೆಗೆ, ಅಸಾಫೋಟಿಡಾವು ಯೂರೋಪ್‌ನಲ್ಲಿ ಅಪರೂಪದ್ದಾಗಿತ್ತು, ಹಾಗೂ ಎಲ್ಲಾದರೂ ಇದ್ದರೂ ಅದನ್ನು ಔಷಧಿಯಾಗಿ ಪರಿಗಣಿಸಲಾಗುತ್ತಿತ್ತು. "ಅದನ್ನು ಅಡಿಗೆಯಲ್ಲಿ ಬಳಸಿದರೆ, ತನ್ನ ದುರ್ವಾಸನೆಯಿಂದ ಉಳಿದ ಅಡಿಗೆಯನ್ನೂ ಕೆಡಿಸಿಬಿಡುತ್ತದೆ," ಎಂದು ಗಾರ್ಷಿಯಾ ಡೆ ಆರ್ಟಾ'ನ ಐರೋಪ್ಯ ಅತಿಥಿಯು ಪ್ರತಿಪಾದಿಸಿದ್ದರು. ಗಾರ್ಷಿಯಾ ಮರುತ್ತರ ನೀಡಿದರು ಅಸಂಬದ್ಧ ಮಾತು, "ಭಾರತದ ಪ್ರತಿ ಭಾಗದಲ್ಲೂ ಔಷಧೀಯವಾಗಿ ಹಾಗೂ ಅಡಿಗೆಯಲ್ಲಿ ಇದರಷ್ಟು ವ್ಯಾಪಕವಾಗಿ ಇನ್ನು ಯಾವುದನ್ನೂ ಬಳಸುವುದಿಲ್ಲ. ಅದನ್ನು ಕೊಳ್ಳುವ ಶಕ್ತಿಯಿರುವ ಪ್ರತಿಯೋರ್ವ ಹಿಂದೂವು ಅದನ್ನು ತನ್ನ ಅಡಿಗೆಯಲ್ಲಿ ಬಳಸಲು ಕೊಳ್ಳುತ್ತಾನೆ."[೧೧]

ಕೃಷಿ ಹಾಗೂ ತಯಾರಿಕೆ[ಬದಲಾಯಿಸಿ]

ಕಾಂಡ ಹಾಗೂ ಬೇರುಗಳಿಂದ ಬೇರ್ಪಡಿಸಿದ ಒಣಗಿದ ಸಸ್ಯಸಾರದಿಂದ ಹೊರ ಬರುವ ಗುಗ್ಗುಳ-ದಂತಹಾ ಅಂಟು ಪದಾರ್ಥವನ್ನು ಸಂಬಾರ ಪದಾರ್ಥವಾಗಿ ಬಳಸುತ್ತಾರೆ. ಅಂಟು ತಾಜಾ ಇದ್ದಾಗ ಬೂದು ಬಣ್ಣ ಹೊಂದಿದ್ದು, ಒಣಗಿದಾಗ ದಟ್ಟ ಶಿಲಾರಾಳದ ಬಣ್ಣಕ್ಕೆ ತಿರುಗುತ್ತದೆ. ಅಸಾಫೋಟಿಡಾದ ಅಂಟನ್ನು ಹೆರೆ/ತುರಿಯುವುದು ಕಷ್ಟ, ಆದ್ದರಿಂದ ಸಾಂಪ್ರದಾಯಿಕವಾಗಿ ಕಲ್ಲುಗಳ ನಡುವೆ ಅಥವಾ ಸುತ್ತಿಗೆಯಿಂದ ಜಜ್ಜಲಾಗುತ್ತದೆ. ಇಂದು ಲಭ್ಯವಿರುವ ಅತಿ ಸಾಮಾನ್ಯ ರೂಪವೆಂದರೆ ಮಿಶ್ರಿತ ಅಸಾಫೋಟಿಡಾ ಅಕ್ಕಿ ಹಿಟ್ಟು ಹಾಗೂ ಗಮ್‌ ಅರೇಬಿಕ್‌ಗಳೊಂದಿಗೆ 30% ಅಸಾಫೋಟಿಡಾ ಅಂಟನ್ನು ಹೊಂದಿರುವ ಪುಡಿಯ ರೂಪವಾಗಿದೆ. ಫೆರುಲಾ ಅಸಾಫೋಟಿಡಾ ವು ಉಂಬೆಲ್ಲಿಫೆರೇ ಕುಟುಂಬಕ್ಕೆ ಸೇರಿದ ಮೂಲಿಕೆಯಂತಹಾ, ಉಭಯಲಿಂಗಿ, ಸರ್ವಋತು ಸಸ್ಯವಾಗಿದೆ, ಇದನ್ನು ಅಪಿಯೇಸೇ/ಕೇ ಎಂದೂ ಕರೆಯಲಾಗುತ್ತದೆ. 30–40 cm ಉದ್ದದ ಎಲೆಗಳಿಂದ ಆವೃತವಾದ ವರ್ತುಲಾಕಾರದ ಇದು 2 ಮೀಟರ್‌ಗಳೆತ್ತರಕ್ಕೆ ಬೆಳೆಯುತ್ತದೆ. ಕಾಂಡದ ಎಲೆಗಳು ಅಗಲವಾದ ಕೋಶಗಳುಳ್ಳ ಎಲೆಯ ತೊಟ್ಟುಗಳನ್ನು ಹೊಂದಿವೆ. ವಿಕಸಿಸುತ್ತಿರುವ ಕಾಂಡಗಳು 2.5–3 ಮೀಟರ್‌ಗಳಷ್ಟು ಎತ್ತರವಿದ್ದು 10 cm ದಪ್ಪ ಹಾಗೂ ಟೊಳ್ಳಾಗಿರುತ್ತದೆ, ಮರದ ಅಂಟನ್ನು ಹೊಂದಿರುವ ತೊಗಟೆಯಲ್ಲಿ ಸಾಕಷ್ಟು ಸಂಖ್ಯೆಯ ಷಿಜೋಗೆನಸ್‌ ಸಸ್ಯನಾಳಗಳನ್ನು ಹೊಂದಿರುತ್ತದೆ. ಹೂಗಳು ಮಸುಕಾದ ಹಸಿರು ಛಾಯೆಯ ಹಳದಿ ಬಣ್ಣವನ್ನು ಹೊಂದಿದ್ದು ದೊಡ್ಡ ಸಂಯೋಜಿತ ಹೂಗೊಂಚಲುಗಳಲ್ಲಿ ಬಿಡುತ್ತವೆ. ಹಣ್ಣುಗಳು ಅಂಡಾಕೃತಿಯವಾಗಿದ್ದು, ಚಪ್ಪಟೆ, ತೆಳು, ಕೆಂಪು ಛಾಯೆಯ ಕಂದು ಬಣ್ಣದವಾಗಿದ್ದು ಹಾಲಿನಂತಹಾ ರಸವನ್ನು ಹೊಂದಿರುತ್ತವೆ. ಬೇರುಗಳು ದಪ್ಪ, ಸ್ಥೂಲವಾಗಿರುವುದಲ್ಲದೇ ತಿರುಳನ್ನು ಹೊಂದಿರುತ್ತದೆ. ಅವು ಸಹಾ ಕಾಂಡಗಳು ನೀಡುವ ತರಹದ ಅಂಟುರಾಳವನ್ನು ನೀಡುತ್ತವೆ. ಸಸ್ಯದ ಎಲ್ಲಾ ಭಾಗಗಳು ವೈಶಿಷ್ಟ್ಯಸೂಚಕ ದುರ್ವಾಸನೆಯನ್ನು ಹೊಂದಿರುತ್ತವೆ.[೧೨] ನರವ್ಯವಸ್ಥೆಯನ್ನು ಉದ್ರೇಕಿಸುತ್ತವೆ ಎಂಬ ಕಾರಣಕ್ಕೆ ಬೆಳ್ಳುಳ್ಳಿ ಹಾಗೂ ಈರುಳ್ಳಿಯ ಸೇವನೆಯನ್ನು ವರ್ಜ್ಯಗೊಳಿಸುವ ನಿರ್ದಿಷ್ಟ ರೂಪದ ಮೆಡಿಡೇಷನ್‌ ಅಥವಾ ಶಾಕಾಹಾರಿ ವ್ಯವಸ್ಥೆಯ ಪಾಲಕರಲ್ಲಿ ಇದು ಹೆಚ್ಚು ಬಳಕೆಯಲ್ಲಿದೆ ಎಂಬುದು ಆಸಕ್ತಿದಾಯಕ ವಿಚಾರ. ಆ ವಿಶ್ವಾಸಿಕರಿಗೆ ಅಸಾಫೋಟಿಡಾವು, ಈರುಳ್ಳಿ ಹಾಗೂ ಬೆಳ್ಳುಳ್ಳಿಗಳನ್ನು ರುಚಿ ಹಾಗೂ ವಸ್ತುವಿನ ಬದಲಿಯಾಗಿ ಪರಿಣಮಿಸುತ್ತವೆ. (ಮೂಲ: ರೋಷನ್‌ T. T. ಛಿಖುರಿ, ಇವರು ಮಾರಿಷಸ್‌ನ ಸುರಕ್ಷೆ ಹಾಗೂ ಆರೋಗ್ಯ ಸಲಹಾಕಾರ ಹಾಗೂ ಸಮುದಾಯ ಆರೋಗ್ಯ ತಜ್ಞ ಸೌಕರ್ಯವ್ಯಕ್ತಿ)

ಸಂಯೋಜನೆ[ಬದಲಾಯಿಸಿ]

ಸಾಧಾರಣ ಅಸಾಫೋಟಿಡಾವು 40-64%ರಷ್ಟು ಅಂಟುರಾಳ, 25% ಅಂತರ್ವಧಕ ಅಂಟು, 10-17%ರಷ್ಟು ಬಹುಬೇಗ ಆವಿಯಾಗುವ ತೈಲ, ಹಾಗೂ 1.5-10% ಭಸ್ಮವನ್ನು ಹೊಂದಿರುತ್ತದೆ. ಅಂಟುರಾಳದ ಭಾಗವು 'A' ಹಾಗೂ 'B' ಅಸಾರೆನಿನೊಟಾನ್ನಾಲ್‌ಗಳನ್ನು, ಫೆರುಲಿಕ್‌ ಆಮ್ಲ, ಉಂಬೆಲ್ಲಿಫೆರೋನ್‌ ಹಾಗೂ ನಾಲ್ಕು ಅಪರಿಚಿತ ಸಂಯೋಜನೆಗಳನ್ನು ಹೊಂದಿರುತ್ತದೆ.[೧೩]

ವ್ಯುತ್ಪತ್ತಿ ಶಾಸ್ತ್ರ[ಬದಲಾಯಿಸಿ]

ಅಸಾಫೋಟಿಡಾ'ದ ಆಂಗ್ಲ ಹಾಗೂ ವೈಜ್ಞಾನಿಕ ಹೆಸರು ಅಂಟು (ಅಸಾ) ಎಂಬರ್ಥದ ಪರ್ಷಿಯನ್‌ ಪದ ಹಾಗೂ ಲ್ಯಾಟಿನ್‌ ಪದ ಫೋಟಿಡಾ ಎಂಬ ಪದಗಳಿಂದ ವ್ಯುತ್ಪತ್ತಿಯಾಗಿದೆ, ಇವುಗಳು ಅದರ ತೀಕ್ಷ್ಣ ಗಂಧಕ ಪರಿಮಳವನ್ನು ಸೂಚಿಸುತ್ತವೆ. ಇದರ ಕಟು ವಾಸನೆಯು ಇದಕ್ಕೆ ಅನೇಕ ಅಹಿತಕಾರಿ ಹೆಸರುಗಳನ್ನು ಹೊಂದಲು ಕಾರಣವಾಗಿದೆ; tಆದ್ದರಿಂದ ಫ್ರೆಂಚ್‌ ಭಾಷೆಯಲ್ಲಿ ಇದನ್ನು (ಬೇರೆ ಹೆಸರುಗಳೊಂದಿಗೆ) ಮರ್ಡೆ ಡು ಡಯಾಬಲ್‌ (ದೆವ್ವದ ಹೊಲಸು) ಎಂದು ಕರೆಯುತ್ತಾರೆ; ಆಂಗ್ಲದ ಕೆಲ ಪ್ರಭೇದಗಳಲ್ಲಿ ಕೂಡಾ ಇದನ್ನು ದೆವ್ವದ ಸಗಣಿ ಎನ್ನುತ್ತಾರೆ, ಹಾಗೂ ಸಮಾನಾರ್ಥ ಬರುವಂತಹಾ ಇತರ ಹೆಸರುಗಳು ಜರ್ಮೇನಿಕ್‌ ಭಾಷೆಗಳಲ್ಲಿ ಕಂಡುಬರುತ್ತದೆ (e.g. ಜರ್ಮನ್‌ ಟ್ಯೂಫೆಲ್ಸ್‌ಡ್ರೆಕ್‌ ,[೧೪] ಸ್ವೀಡಿಷ್‌ ಭಾಷೆಯಲ್ಲಿ ಡೈವೆಲ್ಸ್‌ಟ್ರಾಕ್‌ , ಡಚ್‌ ಭಾಷೆಯಲ್ಲಿ ಡೂಯಿವೆಲ್ಸ್‌ಡ್ರೆಕ್‌ , ಆಫ್ರಿಕಾನ್ಸ್‌ನಲ್ಲಿ ಡೂಯಿವ್ಹೆಲ್ಸ್‌ಡ್ರೆಕ್ ), ಹಾಗೂ ಫಿನ್ನಿಷ್‌ ಭಾಷೆಯಲ್ಲಿ ಕೂಡಾ ಇದನ್ನು ಪಿರುನ್‌ಪಾಸ್ಕಾ ಅಥವಾ ಪಿರುನ್‌ಪಿಹ್ಕಾ ಎಂದು ಕರೆಯಲಾಗುತ್ತದೆ. ಟರ್ಕಿಷ್‌ ಭಾಷೆಯಲ್ಲಿ, ಇದನ್ನು ಸೆಟಾನ್‌ಟರ್ಸಿ (ದೆವ್ವದ ಸಿಹಿ), ಸೆಟಾಬ್‌ ಬೊಕು (ದೆವ್ವದ ಹೊಲಸು) ಅಥವಾ ಸೆಟಾನೊಟು (ದೆವ್ವದ ಮೂಲಿಕೆ) ಎಂದೆಲ್ಲಾ ಕರೆಯಲಾಗುತ್ತದೆ. ಅನೇಕ ಹಿಂದೂ/ಸಿಂಧೂ-ಆರ್ಯನ್‌ ಭಾಷೆಗಳಲ್ಲಿ ಇದು ಹಿಂಗ್‌ ಅಥವಾ "ಹೀಂಗ್‌" ಎಂಬ ಹೆಸರನ್ನು ಹೊಂದಿದೆ. ಅನೇಕ ದ್ರಾವಿಡ ಭಾಷೆಗಳಲ್ಲಿ (e.g. ತೆಲುಗು ಇಂಗುವಾ , ಕನ್ನಡ ಇಂಗು ), ತಮಿಳು (ಪೆರುಂಗಾಯಂ ) ಹಾಗೂ ಮಲಯಾಳಂ ಕಾಯಂ ಎಂಬ ಹೆಸರುಗಳನ್ನು ಹೊಂದಿದೆ. ಸಸ್ಯದ ಮೂಲ ಪರ್ಷಿಯನ್‌ ಹೆಸರು انگدان ಅಂಗೆಡಾನ್‌ ಎಂಬುದಾಗಿದ್ದು ಅದನ್ನು ಕೆಲವೊಮ್ಮೆ ಅರೇಬಿಕ್‌ ಭಾಷೆಯಲ್ಲಿ انجدان ಅಂಜೆಡಾನ್‌ ಎಂದೂ ಕರೆಯಲಾಗುತ್ತದೆ. ಅಸಾಫೋಟಿಡಾದ ಒಣಗಿದ ಸಸ್ಯಸಾರಕ್ಕೆ {آنغوزه {0}ಅಂಗೌಷೆ ಎಂಬ ಪರ್ಷಿಯನ್‌‌ ಹೆಸರಿದೆ.

ಇವನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. ಆಕ್ಸ್‌ಫರ್ಡ್‌ ಆಂಗ್ಲ ನಿಘಂಟು. ಅಸಾಫೋಟಿಡಾ . ಎರಡನೇ ಆವೃತ್ತಿ, 1989.
  2. "ಆರ್ಕೈವ್ ನಕಲು". Archived from the original on 2009-06-03. Retrieved 2010-04-06.
  3. S. K. GARG, A. C. BANERJEA, J. VERMA. ಹಾಗೂ M. J. ABRAHAM, EFFECT OF VARIOUS TREATMENTS OF PULSES ON IN VITRO GAS PRODUCTION BY SELECTED INTESTINAL CLOSTRIDIA. ಜರ್ನಲ್‌ ಆಫ್‌ ಫುಡ್‌ ಸೈನ್ಸ್‌‌, ಸಂಪುಟ 45, ಸಂಚಿಕೆ 6 (p 1601-1602).
  4. "Influenza A (H1N1) Antiviral and Cytotoxic Agents from Ferula assa-foetida". Journal of Natural Products. xxx (xx). August 19, 2009 (Web). doi:10.1021/np900158f. {{cite journal}}: Check date values in: |date= (help); Unknown parameter |coauthors= ignored (|author= suggested) (help)
  5. ಪ್ರಾಚೀನ ಚೀನೀ ವಿಧಾನ ಫ್ಲೂನ ಮೇಲೆ ಪರಿಣಾಮ ಬೀರಬಹುದು http://www.livescience.com/health/090910-flu-remedy.html
  6. ಶ್ರೀನಿವಾಸನ್‌, K.(2005)'ರೋಲ್‌ ಆಫ್‌ ಸ್ಪೀಷೀಸ್‌ ಬಿಯಾಂಡ್‌ ಫುಡ್‌ ಫ್ಲೇವರಿಂಗ್‌: ನ್ಯೂಟ್ರಾಸ್ಯೂಟಿಕಲ್ಸ್‌‌ ವಿತ್‌ ಮಲ್ಟಿಪಲ್‌ ಹೆಲ್ತ್‌‌ ಎಫೆಕ್ಟ್ಸ್‌‌', ಫುಡ್‌ ರಿವ್ಯೂಸ್‌ ಇಂಟರ್‌ನ್ಯಾಷನಲ್‌ ಸಂಸ್ಥೆ,21:2,167 — 188
  7. ರಿಡಲ್‌‌, ಜಾನ್‌‌ M. 1992. ಪ್ರಾಚೀನ ಕಾಲದಿಂದ ನವೋದಯ ಕಾಲದವರೆಗಿನ ಗರ್ಭನಿರೋಧಕತೆ ಹಾಗೂ ಗರ್ಭಸ್ರಾವ. ಹಾರ್ವಡ್‌ ವಿಶ್ವವಿದ್ಯಾಲಯ ಮುದ್ರಣಾಲಯ p. 28 ಹಾಗೂ ಅಲ್ಲಿನ ಆಕರಗಳು.
  8. ಟ್ರೆಡಿಷನಲ್‌ ಸಿಸ್ಟಂಸ್‌ ಆಫ್‌ ಮೆಡಿಸಿನ್‌ ಲೇ: ಅಬ್ದಿನ್‌, M Z ಅಬ್ದಿನ್‌, Y P ಅಬ್ರಾಲ್‌. ಪ್ರಕಾಶನ 2006 ಆಲ್ಫಾ ಸೈನ್ಸ್‌‌ Int'l Ltd. ISBN 81-7319-707-5
  9. pg. 74, ದ ಆಯುರ್ವೇದಿಕ್‌ ಕುಕ್‌ಬುಕ್‌ ಲೇ: ಅಮೇದಾ ಮಾರ್ನಿಂಗ್‌ಸ್ಟಾರ್‌ರೊಂದಿಗೆ ಊರ್ಮಿಳಾ ದೇಸಾಯಿ, ಲೋಟಸ್‌ ಲೈಟ್‌, 1991. ISBN 978-0-914955-06-1.
  10. ಹೇಮ್ಲಾ ಅಗರ್‌ವಾಲ್‌ ಹಾಗೂ ನಿಧಿ ಕೊತ್ವಾಲ್‌. ಫುಡ್ಸ್‌ ಯೂಸ್‌ಡ್‌ ಆಸ್‌ ಎಥ್ನೋ-ಮೆಡಿಸಿನ್‌ ಇನ್‌ ಜಮ್ಮು. ಎಥ್ನೋ-ಮೆಡ್‌‌, 3(1): 65-68 (2009)
  11. ೧೧.೦ ೧೧.೧ ಡೇಂಜರಸ್‌ ಟೇಸ್ಟ್‌ಸ್‌‌ : ದ ಸ್ಟೋರಿ ಆಫ್‌ ಸ್ಪೈಸಸ್‌ ಲೇ: ಆಂಡ್ರಯೂ ಡಾಲ್ಬಿ. ಪ್ರಕಾಶನ 2000 ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮುದ್ರಣಾಲಯ ಸ್ಪೈಸಸ್/ ಹಿಸ್ಟರಿ 184 ಪುಟಗಳು ISBN 0-520-23674-2
  12. ಮೆಡಿಸಿನಲ್‌ ಪ್ಲಾಂಟ್ಸ್‌ ಆಫ್‌ ದ ವರ್ಲ್ಡ್‌, ಸಂಪುಟ 3ರಿಂದ ಪಡೆದ ಸಾರಾಂಶ ಕೆಮಿಕಲ್‌ ಕಾನ್ಸ್‌ಟಿಟ್ಯೂಯೆಂಟ್ಸ್‌, ಟ್ರೆಡಿಷನಲ್‌ ಅಂಡ್‌ ಮಾಡರ್ನ್‌ ಮೆಡಿಸಿನಲ್‌ ಯೂಸಸ್‌‌. ಹುಮಾನಾ ಪ್ರೆಸ್‌. ISBN 978-1-58829-129-5 (ಮುದ್ರಿತ) 978-1-59259-887-8 (ಆನ್‌ಲೈನ್‌) DOI 10.1007/978-1-59259-887-8_6 ಲೇಖಕ: ಇವಾನ್‌ A. ರಾಸ್‌‌ http://www.springerlink.com/content/k358h1m6251u5053/[ಶಾಶ್ವತವಾಗಿ ಮಡಿದ ಕೊಂಡಿ]
  13. ಹ್ಯಾಂಡ್‌ಬುಕ್‌ ಆಫ್‌ ಇಂಡಿಸೀಸ್‌ ಆಫ್‌ ಫುಡ್‌ ಕ್ವಾಲಿಟಿ ಅಂಡ್‌ ಅಥೆಂಟಿಸಿಟಿ ಲೇ: ರೇಖಾ S. ಸಿಂಘಾಲ್‌, ಪುಷ್ಪಾ R. ಕುಲಕರ್ಣಿ. ಪ್ರಕಟಣೆ 1997 ವುಡ್‌ಹೆಡ್‌ ಪಬ್ಲಿಷಿಂಗ್‌ ಫುಡ್‌ ಇಂಡಸ್ಟ್ರಿ ಅಂಡ್‌ ಟ್ರೇಡ್‌ ISBN 1-85573-299-8 ... ಸೂಚನೆ: ಈ ಆಕರದಲ್ಲಿ ಸಂಯೋಜನೆಗಳ ಬಗ್ಗೆ ಮತ್ತಷ್ಟು ಒಳ್ಳೆಯ ಮಾಹಿತಿಯಿದೆ, ಪುಟ 395.
  14. ಥಾಮಸ್‌ ಕಾರ್ಲೈಲ್‌'ರ ವಿಖ್ಯಾರ 19ನೇ ಶತಮಾನದ ಕಾದಂಬರಿ ಸರ್ಟಾರ್‌ ರೆಸಾರ್ಟಸ್‌ ಟ್ಯೂಫೆಲ್ಸ್‌ಡ್ರಾಖ್‌ ಎಂಬ ಹೆಸರಿನ ಜರ್ಮನ್‌ ತತ್ವಜ್ಞಾನಿಯನ್ನು ಕುರಿತಾಗಿದೆ.

ಹೊರಗಿನ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಇಂಗು&oldid=1195277" ಇಂದ ಪಡೆಯಲ್ಪಟ್ಟಿದೆ