ಚಕ್ಕುಲಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Murukku
ಮೂಲ
Alternative name(s) Chakli, Chakri
ಮೂಲ ಸ್ಥಳ India
ಪ್ರಾಂತ್ಯ ಅಥವಾ ರಾಜ್ಯ Karnataka, Tamil Nadu, Andhra Pradesh, Maharashtra, Gujarat and Sri Lanka
ವಿವರಗಳು
Main ingredient(s) urad and rice flour

ಚಕ್ಕುಲಿ ಅಥವಾ ಚಕ್ಲಿ (Murukku - Tamil: முறுக்கு, Telugu:మురుకులు or Murkoo, Marathi: चकली) ) ಭಾರತ ಮತ್ತು ಶ್ರೀಲಂಕಾದ ಒಂದು ರುಚಿಯಾದ ತಿನಿಸು. ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಇರುವ ಫಿಜಿ ಮತ್ತು ಮಲೇಶಿಯಾ ದೇಶಗಳಲ್ಲೂ ಕೂಡ ಇದು ಪರಿಚಿತ.

ಚಿತ್ರಗಳು[ಬದಲಾಯಿಸಿ]

ಚಕ್ಕುಲಿ ದಕ್ಷಿಣ ಮತ್ತು ಪಶ್ಚಿಮ ಭಾರತ ಮೂಲದ ತಿನಿಸಾಗಿದೆ. ಇದರ ರುಚಿ ಮತ್ತು ಸುಲಭ ತಯಾರಿಕೆಯಿಂದಾಗಿ ಈಗ ಇದು ಎಲ್ಲಾ ಕಡೆಗಳಲ್ಲೂ ತಯಾರಾಗುವ ತಿಂಡಿಯಾಗಿದೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಇದು ಹೆಚ್ಚು ಪ್ರಚಲಿತವಾಗಿದೆ.

ಪದಾರ್ಥಗಳು[ಬದಲಾಯಿಸಿ]

ಸಾಮಾನ್ಯವಾಗಿ ಚಕ್ಕುಲಿಯು ಉದ್ದು ಮತ್ತು ಅಕ್ಕಿಹಿಟ್ಟು ಗಳ ಮಿಶ್ರಣದಿಂದ ತಯಾರಾಗುತ್ತದೆ. ಜೊತೆಗೆ ಉಪ್ಪು, ಮತ್ತು ಮತ್ತಿತರ ಸಾಂಬಾರ ಪದಾರ್ಥಗಳಾದ ಮೆಣಸು, ಇಂಗು, ajawain, ಅಥವಾ ಜೀರಿಗೆಗಳನ್ನೂ ಒಳಗೊಂಡಿರುತ್ತದೆ.

ತಯಾರಿಕೆ[ಬದಲಾಯಿಸಿ]

ಸ್ವಲ್ಪ ನೀರು ಮತ್ತು ಪದಾರ್ಥ ಮಿಶ್ರಣವನ್ನು ಹಿಟ್ಟನ್ನಾಗಿ ಕಲೆಸಿ ಅದನ್ನು ವೃತ್ತ ಮತ್ತು ಇನ್ನಿತರ ಆಕಾರಗಳಲ್ಲಿ ಸುತ್ತಲಾಗುತ್ತದೆ. ಅನಂತರ ಅದನ್ನು ಎಣ್ಣೆಯಲ್ಲಿ ಕರಿಯಲಾಗುತ್ತದೆ. ಚಕ್ಕುಲಿಯನ್ನು ಚಪ್ಪಟೆಯಾಗಿ ರಿಬ್ಬನ್ನಿನಂತೆಯೂ ಮಾಡಬಹುದಾಗಿದೆ ಮತ್ತು ಕೈಯಿಂದಲೂ ಸುತ್ತಬಹುದಾಗಿದೆ. (ಕೈಚಕ್ಕುಲಿ) ಕೈಚಕ್ಕುಲಿಯನ್ನು ಹಿಟ್ಟನ್ನು ಕೈಯಿಂದಲೇ ಒಂದು ಎಳೆಯನ್ನಾಗಿ ತೆಗೆದುಕೊಳ್ಳುತ್ತಾ ಅದನ್ನು ತಿರುಚುತ್ತಾ ಮತ್ತು ಹಾಗೆಯೇ ಅದನ್ನು ಬಳೆಯಾಕಾರದಲ್ಲಿ ಸುತ್ತುತ್ತಾ ತಯಾರಿಸಲಾಗುತ್ತದೆ. ಇದಕ್ಕೆ ಕಷ್ಟದ ಕೆಲಸವಾಗಿದ್ದು ಅಪಾರ ತಾಳ್ಮೆ, ಅಭ್ಯಾಸ ಬೇಕಾಗುತ್ತದೆ.

ಇದು ಫಿಜಿ ಮತ್ತು ಉತ್ತರ ಅಮೆರಿಕಾದಲ್ಲಿರುವ ಭಾರತೀಯ ಫಿಜಿಯನ್ನರಲ್ಲಿ ಜನಪ್ರಿಯವಾಗಿದೆ. ಚಕ್ಕುಲಿಯು ದೀಪಾವಳಿ ಹಬ್ಬದ ಒಂದು ಸಾಂಪ್ರದಾಯಿಕ ತಿನಿಸಾಗಿ ಬಳಸಲ್ಪಡುತ್ತದೆ. ಇತ್ತೀಚೆಗೆ ಚಕ್ಕುಲಿಯು ಉತ್ತರ ಅಮೆರಿಕಾ ಮತ್ತು ಯುನೈಟೆಡ್ ಕಿಂಗ್ಡಂಮ್ ಮಾರುಕಟ್ಟೆಯಲ್ಲೂ ಕೂಡ ಸಿಗುತ್ತಿದೆ.

ಇವನ್ನೂ ನೋಡಿ[ಬದಲಾಯಿಸಿ]

  • ಚಾಟ್‌
  • ಭಾರತೀಯ ತಿನಿಸುಗಳು

ಉಲ್ಲೇಖಗಳು[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಚಕ್ಕುಲಿ&oldid=656170" ಇಂದ ಪಡೆಯಲ್ಪಟ್ಟಿದೆ