ರಾಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಗಿ
Finger millet grains of mixed color.jpg
ರಾಗಿ
Egg fossil classification
Kingdom:
plantae
Division:
Class:
Order:
Family:
Subfamily:
Genus:
Species:
E. coracana
Binomial nomenclature
ಎಲೂಸಿನ್ ಕೋರಕಾನ

ರಾಗಿ ಆಫ್ರಿಕ ಮತ್ತು ಏಷ್ಯಾದ ಹಲವಾರು ಒಣ ಪ್ರದೇಶಗಳಲ್ಲಿ ಬೆಳೆಯಲಾಗುವ ಒಂದು ಬಗೆಯ ಆಹಾರ ಧಾನ್ಯ. ಇತಿಯೋಪಿಯ ಮೂಲದ ಈ ವಾರ್ಷಿಕ ಬೆಳೆಯು ಸುಮಾರು ೪೦೦೦ ವರ್ಷಗಳ ಹಿಂದೆ ಭಾರತಕ್ಕೆ ತರಲಾಯಿತು.

ಭಾರತದಲ್ಲಿ ರಾಗಿಬೆಳೆಯುವ ರಾಜ್ಯಗಳು[ಬದಲಾಯಿಸಿ]

ರಾಗಿ ಬೆಳೆ, ದಕ್ಷಿಣ ಭಾರತದಲ್ಲಿ ಹೆಸರುವಾಸಿಯಾಗಿದೆ.[೧] ಕರ್ನಾಟಕ ಬಿಟ್ಟರೆ, ತಮಿಳುನಾಡು, ಮತ್ತು ಮಹಾರಾಷ್ಟ್ರ ರಾಜ್ಯಗಳು ರಾಗಿಯನ್ನು ಹೆಚ್ಚಾಗಿ ಬೆಳೆಯುತ್ತಿವೆ. ಇದನ್ನು’ಫಿಂಗರ್ ಮಿಲೆಟ್ ” ಎಂದೂ ಕರೆಯುತ್ತಾರೆ. ಪುಷ್ಕಳ ಪೋಶಕಾಂಷವಿರುವ ಈ ಧಾನ್ಯ , ವಿಶ್ವದ ತೃಣಧಾನ್ಯ ಬೆಳೆಗಳಲ್ಲಿ, ಸಜ್ಜೆ, ನವಣೆ, ಬರಗು ಬೆಳೆಗಳನಂತರದ ಸ್ಥಾನ, ರಾಗಿಯದು. ರಾಗಿ ಬೇಸಾಯದಲ್ಲಿ ಭಾರತಕ್ಕೆ ಅಗ್ರಸ್ಥಾನವಿದೆ. ವರ್ಷಂಪ್ರತಿ ಸುಮಾರು ೨೨ ಲಕ್ಷ ಹೆಕ್ಟೇರುಪ್ರದೇಶದಲ್ಲಿ ರಾಗಿ ಬೆಳೆದು ೨೬ ರಿಂದ ೨೮ ಲಕ್ಷ ಟನ್ ರಾಗಿಯನ್ನು ದೇಶದಲ್ಲಿ ಉತ್ಪಾದಿಸಲಾಗುತ್ತಿದೆ. ಉತ್ಪಾದನೆಯ ಮುಕ್ಕಾಲುಪಾಲು ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಮತ್ತು ಮಹಾರಾಷ್ಟ್ರ ರಾಜ್ಯಗಳು ಉತ್ಪಾದಿಸುತ್ತಿವೆ.ಇನ್ನುಳಿದ ಕಾಲು ಭಾಗ, ಬಿಹಾರ, ಉತ್ತರ ಪ್ರದೇಶ, ಒರಿಸ್ಸ, ಮಧ್ಯ ಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶಗಳು ಪೂರೈಸುತ್ತವೆ.

ರಾಗಿತಳಿಯಲ್ಲಿ ಸುಧಾರಣೆ[ಬದಲಾಯಿಸಿ]

ರಾಗಿ ತಳಿ ಅಭಿವೃದ್ಧಿ ೧೯೧೩ ನೆ ಇಸವಿಯಷ್ಟು ಹಿಂದೆಯೇ ಪ್ರಾರಂಭವಾಗಿತ್ತು. ಖ್ಯಾತ ತಜ್ಞ ಲೆಸ್ಲಿ ಕೋಲ್ ಮನ್ ರಾಗಿಯ ರೋಗ ನಿರೋಧಕತ್ವ ಮತ್ತು ಬರಸಹಿಷ್ಣುತೆಗಳನ್ನು ಗಮನಿಸಿ, ವಿವಿಧೆಡೆಯ ತಳಿಗಳನ್ನು ಕಲೆಹಾಕಿ, ಅವನ್ನು ತಿದ್ದಲು ಮಾಡಿದ ಪ್ರಯತ್ನಗಳು ಹೆಚ್ಚು ಫಲಕಾರಿಯಾಗಲಿಲ್ಲ. ರಾಗಿ ಸ್ವಭಾವತಃ ಸ್ವಕೀಯ ಪರಾಗಸ್ಪರ್ಶದ ಬೆಳೆ. ಅಸಂಖ್ಯ ಸೂಕ್ಷ್ಮ ಹೂಗಳಿಂದ ಅದರ ತೆನೆಗಳು ಗಾಳಿಯಲ್ಲಿ ತೊನೆದಾಡುತ್ತವೆ. ಅಯ್ಯಂಗಾರ್ ಎಂಬ ಸಂಶೋಧನಕರ್ತರು ೧೯೩೪ ರ ವಿಧಾನ,ಸಂಪರ್ಕ ಸಂಕರಣಾವಿಧಾನ(ಕಾಂಟಾಕ್ಟ್ ಮೆಥಡ್) ಸ್ವಲ್ಪಮಟ್ಟಿಗೆ ಸರಿಯಾಗಿದೆ. ಈ ವಿಧಾನದಲ್ಲಿ ವಿಭಿನ್ನ ಗುಣಗಳುಳ್ಳ ಎರಡು ಭಿನ್ನ ತಳಿಗಳನ್ನು ಒಟ್ಟೊಟ್ಟಿಗೆ ಬೆಳೆದು ಅವುಗಳ ತೆನೆಗಳನ್ನು ಹೂ ಬಿಡುವ ಸಮಯದಲ್ಲಿ ಒಟ್ಟಾಗಿ ಸೇರಿಸಿ ಕಟ್ಟಿ, ಅವನ್ನು ಪಾಲಿಥೀನ್ ಚೀಲದಿಂದ ಮುಚ್ಚುತ್ತಾರೆ. ಈ ಸಂಪರ್ಕ ಸಾಮೀಪ್ಯದಲ್ಲಿ ಕನಿಷ್ಠ ಕೆಲವು ಹೂಗಳಲ್ಲಾದರೂ ಪರಕೀಯ ಪರಾಗಸ್ಪರ್ಶವೇರ್ಪಟ್ಟು ಅವು ಸಂಕರ ಬೀಜ[ಹೈಬ್ರಿಡ್] ನೀಡುತ್ತವೆ.೧೯೫೧ ರಿಂದ ೧೯೬೪ ರ ಹೊತ್ತಿಗೆ, ರಾಜ್ಯದ ವಿವಿಧ ಹವಾಗುಣಗಳಿಗೆ ಒಗ್ಗುವಂತಹ ’ಅರುಣ’, 'ಉದಯ', 'ಪೂರ್ಣ', 'ಅನ್ನಪೂರ್ಣ', 'ಕಾವೇರಿ',ಮತ್ತು 'ಶಕ್ತಿ' ತಳಿಗಳು ತಯಾರಾದವು. ಭಾರತ ಮತ್ತು ಆಫ್ರಿಕಾದೇಶದ ತಳಿಗಳ ಸಮ್ಮಿಳನದಿಂದ ತಯಾರಾದ ತಳಿಗಳನ್ನು ’ಇಂಡಾಫ್’ ಎನ್ನುತ್ತಾರೆ. ಒಣಬೇಸಾಯದ ವ್ಯವಸ್ಥೆಗೆ ಇಂಡಾಫ್-೧, ೩, ೮ ನ್ನು ಶಿಫಾರಸ್ ಮಾಡಲಾಯಿತು. ಮುಂಗಾರು ತಡವಾದಾಗ ಇಂಡಾಫ್-೫ ಬೇಸಿಗೆಗೆ ಉತ್ತಮವೆನ್ನಿಸಿತು. ರಾಗಿ ಬೆಳೆಯ ತಜ್ಞ 'ರಾಗಿ ಬ್ರಹ್ಮ' ಲಕ್ಷ್ಮಯ್ಯರವರ ಪರಿಶ್ರಮದಿಂದ ಮೇಲೆ ಹೇಳಿದ ಸಾಧನೆಗಳಾಗಿವೆ.

ರಾಗಿಯ ಉಪಯೋಗಗಳು[ಬದಲಾಯಿಸಿ]

ರಾಗಿಹಿಟ್ಟಿನಿಂದ ರೊಟ್ಟಿ, ಮುದ್ದೆ, ಉಪ್ಪಿಟ್ಟು , ದೋಸೆ, ಗಂಜಿ, ಹಾಲ್ಬಾಯಿ (ಸಿಹಿ) ಎಂಬ ತಿನಿಸುಗಳನ್ನು ತಯಾರಿಸುತ್ತಾರೆ. ಮಕ್ಕಳ ಪೌಷ್ಟಿಕ ಆಹಾರವೆಂದರೆ- ಒಡ್ಡರಾಗಿಹಿಟ್ಟು. ಇದು ಅತ್ಯಂತ ವಿಟಮಿನ್-ಯುಕ್ತ ಆಹಾರ. ಜೀರ್ಣಿಸಿಕೊಳ್ಳಲು ಸುಲಭ. ಇದನ್ನು ಸೇವಿಸಿ ಬೆಳೆದ ಮಕ್ಕಳು ಬಹಳ ಆರೋಗ್ಯದಿಂದಲೂ ಗಟ್ಟಿ-ಮುಟ್ಟಾಗಿಯೂ ಇರುತ್ತಾರೆ. ರಾಗಿ ಮಾಲ್ಟನ್ನು ಸರಿಯಾಗಿ ಡಬ್ಬಿಗಳಲ್ಲಿ ಶೇಖರಿಸಿ ಮಾರುವು ಕಂಪೆನಿಗಳು ಚೆನ್ನಾಗಿ ಹಣ ಮಾಡುತ್ತಿವೆ. ಮಧುಮೇಹ(ಡಾಯಾಬೆಟೆಸ್) ರೋಗಿಗಳಿಗೆ ಇದು ವೈದ್ಯರಿಂದ ಶಿಫಾರಿಸ್ ಪಡೆದ ಪೇಯ. ರಾಗಿ ಅರಳನ್ನು ಹುರಿದು, ಅದನ್ನು ನುಣ್ಣಗೆ ಬೀಸಿ ಪುಡಿಮಾಡಿ, ಅದಕ್ಕೆ ಸರಿಯಾದ ಪ್ರಮಾಣದಲ್ಲಿ ಬೆಲ್ಲದ ಪುಡಿಬೆರೆಸಿ, ಹುಣಸೆಹುಳಿ, ಯಾಲಕ್ಕಿ ಪುಡಿ ಸೇರಿಸಿ,ಸೇವಿಸಿದರೆ, ಬಹಳ ಚೆನ್ನಾಗಿರುತ್ತದೆ. ಅರಳು ಪುಡಿಯನ್ನು ಮೊಸರಿನಲ್ಲಿ ಸೇರಿಸಿ, ಸಕ್ಕರೆ ಅಥವಾ ಬೆಲ್ಲದ ಜೊತೆಯೂ ಸೇವಿಸಬಹುದು.[೨]

ಪೋಷಕಾಂಶಗಳ ವಿವರ[ಬದಲಾಯಿಸಿ]

ರಾಗಿ ಅತ್ಯಧಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನೊಳಗೊಂಡಿದೆ. ಇದು ಒಂದು ಉತ್ತಮ ಆಹಾರ ಬೆಳೆಯಾಗಿದ್ದು ಮಕ್ಕಳು ದೊಡ್ದವರೆನ್ನೆದೆ ಉಪಯೋಗಿಸಬಹುದು. ರಾಗಿಮುದ್ದೆ ಅತ್ಯಂತ ಜನಪ್ರಿಯ ಆಹಾರ ಪ್ರಕಾರವಾಗಿದೆ.

೧೦೦ ಗ್ರಾಮ್ ರಾಗಿಯಲ್ಲಿನ ಪೋಷಕಾಂಶಗಳ ವಿವರ ಈ‌ ಕೆಳಕಂಡಂತಿದೆ:

ಪೋಷಕಾಂಶ ಪ್ರತಿಶತ
ಪ್ರೋಟಿನ್ ೭.೩ ಗ್ರಾಂ
ಕೊಬ್ಬು ೧.೩ ಗ್ರಾಂ
ಪಿಷ್ಟ ೭೨ ಗ್ರಾಂ
ಖನಿಜಾಂಶ ೨.೭ ಗ್ರಾಂ
ಸುಣ್ಣದಂಶ ೩.೪೪ ಗ್ರಾಂ
ನಾರಿನಂಶ ೩.೬ ಗ್ರಾಂ
ಶಕ್ತಿ ೩೨೮ ಕಿ.ಕ್ಯಾ.

ರಾಗಿ ಬೆಳೆಯ ಗುಳಿ ವಿಧಾನ[ಬದಲಾಯಿಸಿ]

ಇಲ್ಲಿ ನಾವು ಇದರ ಉಪಯುಕ್ತತೆ ಮತ್ತು ಇದು ಹೇಗೆ ಇಳುವರಿಯನ್ನು ಹೆಚ್ಚಿಸುತ್ತದೆ ಎಂದು ತಿಳಿಸುತ್ತೇವೆ. ಈ ವಿಧಾನವನ್ನು ನೀರಿನ ಮಿತಬಳಕೆ ಮತ್ತು ಹೆಚ್ಚಿನ ಇಳುವರಿಗಾಗಿ ಅಭಿವುಧ್ಡಿಪಡಿಸಲಾಗಿದೆ. ಇದನ್ನು ಈಗಾಗಲೇ ಪ್ರಯೋಗಿಸಿ ನೋಡಲಾಗಿದೆ.

ರಾಗಿ ಒಂದು ವಾಷಿ೯ಕ ಬೆಳೆಯಾಗಿದ್ದು, ಒಂದು ಬೆಳೆಯಾಗಿ ಅಥವಾ ಮಿಶ್ರಬೆಳೆಯಾಗಿಯೂ (ಶೇಂಗಾ, ಹಲಸಂದಿ ಜೊತೆಯಾಗಿ) ಬೆಳೆಯಬಹುದು. ಕಟಾವಾದ ನಂತರ ಬಹಳ ದಿನಗಳವರೆಗೆ ಸಂರಕ್ಷಿಸಬಹುದು.

ಅಧಿಕ ಇಳುವರಿ ಕೊಡುವ ಅನೇಕ ರಾಸಾಯನಿಕಗಳು ರಸಗೊಬ್ಬರಗಳಿದ್ದರೂ ರೈತರಿಗೆ ಎಕರೆಗೆ ೧೫ ಕ್ವಿಂಟಾಲ್ ಸಿಗುವುದು. ಆದರೆ ಹಾವೇರಿ (ಉತ್ತರ ಕನಾ೯ಟಕ) ಭಾಗದ ರೈತರಿಗೆ ಗುಳಿ ವಿಧಾನ ಬಳಸುವುದರಿಂದ ೧೮-೨೦ ಕ್ವಿಂಟಾಲ್ ದೊರೆಯುತ್ತಿದೆ. ಇದರಿಂದ ಅವರಿಗೆ ಹೈಬ್ರಿಡ್ ಬಳಸುವ ಅವಶ್ಯಕತೆ ಇಲ್ಲ. ಈ ವಿಧಾನ ಅತ್ಯಂತ ಸರಳವಾಗಿದ್ದು ಯಾರು ಬೇಕಾದರೂ ಅಳವಡಿಸಿಕೊಳ್ಳಬಹುದಾಗಿದ್ದು, ಇದು ಹಾವೇರಿ ರೈತರ ಸಾಧನೆಯಾಗಿದೆ.

ಭೂಮಿಯ ಸಿಧ್ಡತೆ ಮತ್ತು ರಸಗೊಬ್ಬರಗಳು[ಬದಲಾಯಿಸಿ]

 • ಎರಡು ಬಾರಿ ಉಳುಮೆ ಮಾಡುವುದು ಉತ್ತಮ.
 • ಭೂಮಿಯನ್ನು ಸಮಮಾಡಿ ಕಳೆ ಬೀಜಗಳನ್ನು ತೆಗೆಯುವುದು.
 • ಕೊರಡು ಬಳಸಿ ಭೂಮಿ ಉಳುಮೆ ಮಾಡಿ ಬಿತ್ತುವುದಕ್ಕೆ ಸಿಧ್ಡತೆ ಮಾಡಿ.
 • ಬಿತ್ತುವ ೧೫ ದಿನಗಳ ಮುಂಚೆ ೧೫ ರಿಂದ ೨೦ ಟನ್ ಸಾವಯವ ಗೊಬ್ಬರ ಪ್ರತಿ ಎಕರೆಗೆ ಬಳಸುವುದು.ಇದರಿಂದ ಉತ್ತಮ ಇಳುವರಿ ಸಾಧ್ಯ.

ಬಿತ್ತನೆ[ಬದಲಾಯಿಸಿ]

ಈ ವಿಧಾನವನ್ನು ಬಳಸಿ, ರಾಗಿ ಬಿತ್ತನೆಯ ವಿವಿಧ ಹಂತಗಳು

 • ಎರಡು ಬಾರಿ ಪೂವ೯, ಪಶ್ಚಿಮ ಮತ್ತು ಉತ್ತರ ದಕ್ಷಿಣಕ್ಕೆ ಉಳುಮೆ ಮಾಡಿ ಗುಳಿ ಬೀಳಿಸಿ.
 • ಸಾಲಿನ ನಡುವಿನ ಅಂತರ ಅಧ೯ ಅಡಿ ಇರಲಿ.
 • ಎರಡು ಸಾಲು ಸೇರುವಲ್ಲ್ಲಿಗುಳಿ ಮಾಡಿ ಅದರಲ್ಲಿ ಗೊಬ್ಬರ ಹಾಕಿ.
 • ಎಲ್ಲಾ ಗುಳಿಗಳಲ್ಲಿ ಎರಡೆರಡು ೨೦-೨೫ ದಿನದ ಪೈರುಗಳನ್ನು ನೆಡಿ.
 • ಪೈರುಗಳು ೩೦ ದಿನ ಮೀರಿರಬಾರದು.

ಮಿಶ್ರಬಿತ್ತನೆ : ಎಡೆಕುಂಟೆ ಮತ್ತು ಕೊರಡು[ಬದಲಾಯಿಸಿ]

 • ಬಿತ್ತನೆಯ ಒಂದು ವಾರದ ನಂತರ ನಾಲ್ಕು ದಿಕ್ಕುಗಳಲ್ಲಿ ಎಡೆಕುಂಟೆ ಬಳಸಿ ಅನಾವಶ್ಯಕ ಕಳೆಗಳನ್ನು ತೆಗೆಯಿರಿ.
 • ಬಿತ್ತನೆಯ ೨೫ ದಿನಗಳ ನಂತರ ೩-೪ ಬಾರಿ ಕೊರಡು ಉಪಯೋಗಿಸಿ. ಇದು ಪೈರಿನ ಉತ್ತಮ ಬೆಳೆವಣಿಗೆ ಸಹಾಯಕ ಮತ್ತು ಕ್ರಿಮಿಕೀಟಗಳ ಕಾಟದಿಂದ ಮುಕ್ತಿ ನೀಡುವುದು.
 • ಕೊರಡು ಬಳಕೆಯಿಂದ ಪೈರಿನ ಬೆಳೆವಣಿಗೆ ಉತ್ತಮವಾಗುವುದು.
 • ಎಡೆಕುಂಟೆ ೫ ರಿಂದ ೬ ಬಾರಿ ಮತ್ತು ೩ ರಿಂದ ೪ ಬಾರಿ ಕೊರಡು ಉಪಯೋಗ ಅತ್ಯಾವಶ್ಯಕ.

ಕೊರಡು ಒಂದು ಉಪಯುಕ್ತ ಸಾಧನವಾಗಿದ್ದು, ಗಂಟುಗಳನ್ನು ಒಡೆಯುವುದು ಮತ್ತು ಭೂಮಿ ಸಮತಟ್ಟು ಮಾಡುವುದಕ್ಕೆ ಸಹಾಯಕ. ಬಿತ್ತನೆ ಸಮಯದಲ್ಲಿ ಅನಾವಶ್ಯಕ ಹುಳು ಹುಪ್ಪಟೆ ನಿಯಂತ್ರಣ ಮಾಡುವುದು. ಇದು ಒಂದು ಮರದ ಸಾಧನವಾಗಿದ್ದು ( ಬಗನೆ ಮರದಿಂದ ) ಐದೂವರೆ ಅಡಿ ಉದ್ದ ಮತ್ತು ಒಂದು ಅಡಿ ದಪ್ಪವಿದ್ದು ಕೆಳಗಡೆ ಟೊಳ್ಳಾಗಿದೆ. ಹಾವೇರಿಯಲ್ಲಿ ಇದರ ಉಪಯೋಗ ಬಹಳ.

ಮಿಶ್ರ ಬೆಳೆ ಬೇಸಾಯ[ಬದಲಾಯಿಸಿ]

 • ಹಲಸಂದಿ, ಹೆಸರು ಮುಂತಾದ ಬೆಳೆಗಳನ್ನು ರಾಗಿ ಬಿತ್ತನೆಯ ಹದಿನೈದು ದಿನಗಳ ನಂತರ ಮಿಶ್ರ ಬೆಳೆಯಾಗಿ ಬೆಳೆಯಬಹುದು.
 • ರಾಗಿ ಮತ್ತು ಮಿಶ್ರಬೆಳೆಯನ್ನು ೬:೧ ರ ಅನುಪಾತದಲ್ಲಿ ಬೆಳೆಯಬಹುದು. ಎಡೆಕುಂಟೆ ಮತ್ತು ಕೊರಡು ಬಳಕೆ ಒಂದೇ ದಿಕ್ಕಿನ ಬಳಕೆ ಅವಶ್ಯಕ.
 • ಅಕ್ಟೋಬರ್ ಅಥವಾ ನವೆಂಬರ್ ತಿಂಗಳು ಹುರುಳಿ ಬೆಳೆಯಬಹುದು.

ತಳಿಗಳು[ಬದಲಾಯಿಸಿ]

ಸ್ಥಳೀಯ ತಳಿಗಳಾದ ಉಂಡೆ (ಹಾವೇರಿ), ಎಡಗು ಮತ್ತು ಬುಲ್ಡೆ (ಶಿಕಾರಿಪುರ) ತಳಿಗಳು ಉತ್ತಮ. ಉಂಡೆ ತಳಿಯ ವಿಶೇಷಗಳು

 • ಎತ್ತರ ೩-೩.೫ ಅಡಿ
 • ಗುಳಿಗೆ ೨೫ ರಿಂದ ೩೦ ಪೈರುಗಳು
 • ಅವಧಿ ೨೦ ರಿಂದ ೧೩೦ ದಿನಗಳು

ಇಳುವರಿ[ಬದಲಾಯಿಸಿ]

ರೈತರ ಅನುಭವದ ಪ್ರಕಾರ ಕನಿಷ್ಟ ೧೮ ರಿಂದ ೨೦ ಕ್ವಿಂಟಾಲ ಇಳುವರಿ (ಗರಿಷ್ಟ ೨೫) ಮತ್ತು ೮ ರಿಂದ ೧೦ ಗಾಡಿ ಮೇವು ಪ್ರತಿ ಎಕರೆಗೆ ದೊರೆಯುವುದು.

ಗುಳಿ ವಿಧಾನದ ವಿಶೇಷಗಳು[ಬದಲಾಯಿಸಿ]

 • ಸಾಲಿನ ಅಂತರ ೧.೫ ಅಡಿ
 • ಸೂಯ೯ನ ಬೆಳಕು, ತೇವಾಂಶ ಮತ್ತು ರಸಗೊಬ್ಬರದ ಅವಶ್ಯಕತೆ ಕಡಿಮೆ.
 • ಸಾಲಿನ ನಡುವಿನ ಅಂತರ ದ್ಯುತಿಸಂಶ್ಲೇಷಣ ಕ್ರಿಯೆಗೆ ಸಹಾಯಕ.
 • ಕೊರಡು ಬಳಸುವುದು ಉತ್ತಮ ಇಳುವರಿಗೆ ಸಹಾಯಕ.

ರಾಗಿಲೆಕ್ಕ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. http://www.agrifarming.in/finger-millet-farming/
 2. https://web.archive.org/web/20180916062008/https://www.kannadigaworld.com/kannada/karnataka-kn/295498.html
"https://kn.wikipedia.org/w/index.php?title=ರಾಗಿ&oldid=1045436" ಇಂದ ಪಡೆಯಲ್ಪಟ್ಟಿದೆ