ಒರಿಸ್ಸಾ
ಒಡಿಶಾ | |
ರಾಜಧಾನಿ - ಸ್ಥಾನ |
ಭುವನೇಶ್ವರ್ - |
ಅತಿ ದೊಡ್ಡ ನಗರ | ಭುವನೇಶ್ವರ್ |
ಜನಸಂಖ್ಯೆ (2001) - ಸಾಂದ್ರತೆ |
36,706,920 (11th) - 236/km² |
ವಿಸ್ತೀರ್ಣ - ಜಿಲ್ಲೆಗಳು |
155,707 km² (9th) - 30 |
ಸಮಯ ವಲಯ | IST (UTC+5:30) |
ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) |
ಜನವರಿ ೧, ೧೯೪೯ - ಮುರಳೀಧರ ಚಂದ್ರಕಾಂತ್ ಬಂಡಾರೆ - ನವೀನ್ ಪಟ್ನಾಯಕ್ - Unicameral (147) |
ಅಧಿಕೃತ ಭಾಷೆ(ಗಳು) | ಒಡಿಯಾ |
Abbreviation (ISO) | IN-OR |
ಅಂತರ್ಜಾಲ ತಾಣ: www.orissa.gov.in | |
ಒಡಿಶಾ ರಾಜ್ಯದ ಮುದ್ರೆ |
ಒಡಿಶಾ - ಭಾರತದ ಆಗ್ನೇಯ ತೀರದಲ್ಲಿರುವ ರಾಜ್ಯ. ಈ ರಾಜ್ಯದ ರಾಜಧಾನಿ ಭುವನೇಶ್ವರ. ಮಹಾಭಾರತದ ಕಾಲದಲ್ಲಿ "ಕಳಿಂಗ" ಎಂದು ಪ್ರಖ್ಯಾತವಾದ ನಾಡು ಇಂದಿನ ಒಡಿಶಾ. ಒಡಿಶಾ ಬ್ರಿಟೀಷ್ ಇಂಡಿಯಾದ ಒಂದು ಪ್ರಾಂತ್ಯವಾಗಿ ೧ ಎಪ್ರಿಲ್ ೧೯೩೬ರಲ್ಲಿ ರಚಿಸಲಾಯಿತು ಮತ್ತು ಮುಖ್ಯವಾಗಿ ಒಡಿಯಾ ಮಾತಾಡುವ ಜನರಿಂದ ಕೂಡಿತ್ತು. ಆದ್ದರಿಂದ ೧ ಎಪ್ರಿಲ್ ಅನ್ನು ಉತ್ಕಲ ದಿವಸವನ್ನಾಗಿ ಆಚರಿಸಲಾಗುತ್ತದೆ.
ಒಡಿಶಾ ವಿಸ್ತೀರ್ಣದಲ್ಲಿ ಭಾರತದ ಒಂಬತ್ತನೆಯ ಅತಿ ದೊಡ್ಡ ರಾಜ್ಯವಾಗಿದೆ ಹಾಗು ಜನಸಂಖ್ಯೆಯಲ್ಲಿ ಹನ್ನೊಂದನೆಯ ಅತಿ ದೊಡ್ಡ ರಾಜ್ಯವಾಗಿದೆ. ಒಡಿಯಾ ರಾಜ್ಯದ ಆಡಳಿತ ಭಾಷೆಯಾಗಿದೆ ಹಾಗು ಅತಿ ಹೆಚ್ಚು ಉಪಯೋಗಿಸಲ್ಪಡುವ ಭಾಷೆಯಾಗಿದೆ. ಒಡಿಶಾ ತುಲನಾತ್ಮಕವಾಗಿ ಸಮತಟ್ಟಾದ ಕರಾವಳಿಯನ್ನು (ಸುಮಾರು ೪೮೦ ಕಿ.ಮೀ.) ಹೊಂದಿದೆ ಪಾರಾದೀಪ್ ನಲ್ಲಿ ಪ್ರಮುಖ ಬಂದರನ್ನು ಹೊಂದಿದೆ. ಕಡಿಮೆಯಗಲದ ಸಮತಟ್ಟಾದ ಕರಾವಳಿಯು ಹಾಗು ಮಹಾನದಿಯ ಮುಖಜ ಭೂಮಿಯು ಬಹುಪಾಲು ಜನಸಂಖ್ಯೆಗೆ ಆಶ್ರಯವಾಗಿದೆ. ಒಡಿಶಾದ ಒಳನಾಡು ಗುಡ್ಡಗಾಡುಗಳಿಂದ ಕೂಡಿದ್ದು ನಿಬಿಡವಲ್ಲದಾಗಿದೆ. ರಾಜ್ಯದ ಅತಿ ಎತ್ತರದ ಸ್ಥಳ ದೇವಮಾಲಿಯಾಗಿದೆ. ಜಗತ್ತಿನ ಅತಿ ಉದ್ದವಾದ ಅಣೆಕಟ್ಟುಗಳಲ್ಲಿ ಒಂದಾದ ಹಿರಾಕುಡ್ ಅಣೆಕಟ್ಟು ಒಡಿಶಾದಲ್ಲಿದೆ. ಒಡಿಶಾ ತೀವ್ರವಾದ ಚಂಡಮಾರುತಗಳಿಗೀಡಾಗಿದೆ. ನೋಡಿ
ಹೆಸರು[ಬದಲಾಯಿಸಿ]
೨೦೧೧ ನವಂಬರ್ ೪ ರಂದು ಹಿಂದೆ ಇದ್ದ ಒಡಿಶಾ ಎಂಬ ಹೆಸರನ್ನು ಒಡಿಶಾ ಎಂದು ಬದಲಾಯಿಸಲಾಯಿತು.ಒಡಿಶಾ ಎಂಬ ಹಸರು ಸಂಸ್ಕತದ ಒಡ್ರ ದೇಶ ಎಂಬ ಶಬ್ದದಿಂದ ಉತ್ಪತ್ತಿಯಾಗಿದೆ.
ಇತಿಹಾಸ[ಬದಲಾಯಿಸಿ]
ಇತಿಹಾಸ ಪೂರ್ವದಿಂದಲೂ ಒಡಿಶಾದಲ್ಲಿ ಬುಡಕಟ್ಟು ಜನಾಂಗ ವಾಸವಾಗಿದ್ದರು.ಅಧಿಕೃತವಾಗಿ ಒಡಿಸ್ಸಾಕ್ಕೆ ಸುಮಾರು ೫೦೦೦ ವರ್ಷಗಳ ಇತಿಹಾಸವಿದೆ. ಕಳಿಂಗ ಪೂರ್ವದಲ್ಲಿ ಇದನ್ನು ಓಡ್ರ ದೇಶ ಎಂದು ಕರೆಯುತ್ತಿದ್ದರು. ಆ ಸಂದರ್ಭದಲ್ಲಿ ಇದು ಮುಖ್ಯವಾಗಿ ಮಹಾನದಿಯ ಕಣಿವೆ ಪ್ರದೇಶಕ್ಕೆ ಸೀಮಿತವಾಗಿದ್ದಿತು.ಈ ಪ್ರದೇಶವು ಕಳಿಂಗ,ಕೋಶಲ,ಉತ್ಕಲ ಮುಂತಾದ ವಂಶದವರಿಂದ ಆಳಲ್ಪಟ್ಟಿತ್ತು. ಇದರಲ್ಲಿ ಕಳಿಂಗ ವಂಶದ ಬಗ್ಗೆ ವೇದ ಕಾಲದ ಬರಹಗಾರರಿಂದಲೂ ಉಲ್ಲೇಖಿಸಲ್ಪಟ್ಟಿತ್ತು. .[೧] ಕ್ರಿಸ್ತಪೂರ್ವ ೬ನೆಯ ಶತಮಾನದಲ್ಲಿ ಬೋದಾಯನ ಋಷಿಯು ಕಳಿಂಗವು ವೈದಿಕ ಸಂಸ್ಕೃತಿಯಿಂದ ಹೊರಗಿದ್ದುದನ್ನು ಉಲ್ಲೇಖಿಸುತ್ತಾರೆ. .[೧]
ಒಡಿಶಾವು ಪ್ರಪಂಚದ ಇತಿಹಾಸದಲ್ಲಿ ಪ್ರಾಮುಖ್ಯವಾದ ಒಂದು ಘಟನೆಗೆ ಸಾಕ್ಷಿಯಾಗಿದೆ. ಅದುವೇ ಕಳಿಂಗ .[೧] ಯುದ್ಧ. ಕ್ರಿಸ್ತಪೂರ್ವ ೨೬೧ರಲ್ಲಿ ನಡೆದ ಈ ಯುದ್ಧದ ಪರಿಣಾಮ ಚಕ್ರವರ್ತಿ ಅಶೋಕನು ಹಿಂಸೆಯನ್ನು ತ್ಯಜಿಸಿ ಬೌದ್ಧಧರ್ಮವನ್ನು ಅನುಸರಿಸಿದ. ಮುಂದಿನ ದಿನಗಳಲ್ಲಿ ಬೌದ್ದಧರ್ಮವು ಭಾರತದಿಂದಾಚೆಗೂ ಪಸರಿಸಲು ಪ್ರೇರಕನಾದ.
ರಾಜಕೀಯ -ಚುನಾವಣೆ[ಬದಲಾಯಿಸಿ]
- (ಕನ್ನಡಕ್ಕೆ ಅನುವಾದಿಸಬೇಕು:)
- Odisha Result Status Status Known For 147 out of 147 Constituencies -April -May- 2014 elections with Lokasabha general elections
- Party--- Won
- Bharatiya Janata Party- 10
- Communist Party of India (Marxist)- 1
- Indian National Congress- 16
- Biju Janata Dal - 117
- Samata Kranti Dal - 1
- Independent - 2
- Total - 147
ಉಲ್ಲೇಖಗಳು[ಬದಲಾಯಿಸಿ]
- ↑ ೧.೦ ೧.೧ ೧.೨ "Odisha Government Portal". Orissa.gov.in. Retrieved 2012-05-23.
ಇದನ್ನೂ ನೋಡಿ[ಬದಲಾಯಿಸಿ]
- ಒಡಿಶಾದ ನೃತ್ಯ ಸಂಪ್ರದಾಯ
- ಒಡಿಶಾದ ಇತಿಹಾಸ
- ಒಡಿಶಾದ ಪ್ರಾಗಿತಿಹಾಸ
- ಒಡಿಶಾದ ವಾಸ್ತುಶಿಲ್ಪ
- ಒಡಿಶಾದ ಶಾಸನಗಳು ಮತ್ತು ನಾಣ್ಯಗಳು
- ೨೦೦೯ ಸಾರ್ವತ್ರಿಕ ಚುನಾವಣಾ ಫಲಿತಾಂಶ
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
![]() |
Jharkhand | West Bengal | ![]() | |
Chhattisgarh | ![]() |
Bay of Bengal | ||
![]() ![]() | ||||
![]() | ||||
Andhra Pradesh | Bay of Bengal |