ಮಹಾನದಿ
ಗೋಚರ
ಮಹಾನದಿ ಭಾರತದ ಛತ್ತೀಸ್‌ಗಢ ರಾಜ್ಯದ ಉನ್ನತಪ್ರಾಂತ್ರ್ಯದಲ್ಲಿ ರಾಯ್ ಪುರ ಜಿಲ್ಲೆಗೆ ಸೇರಿದ ಸಿಂಹಾವ ಎಂಬಲ್ಲಿ ಉಗಮಿಸುತ್ತದೆ. ಮುಂದೆ ಒಡಿಶಾ ರಾಜ್ಯದ ಮೂಲಹ ಪ್ರವಹಿಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಮಹಾನದಿಯ ಉದ್ದ ಸುಮಾರು ೮೬೦ ಕಿ.ಮೀ.ಗಳು. ಈ ನದಿಯ ಜಲಾನಯನ ಪ್ರದೇಶಗಳು ಮಹಾರಾಷ್ಟ್ರ, ಛತ್ತೀಸ್‌ಗಢ, ಝಾರ್ಖಂಡ್ ಮತ್ತು ಒಡಿಶಾ ರಾಜ್ಯಗಳ ಭಾಗಗಳು. ಭಾರತದ ದೊಡ್ಡನದಿಗಳ ಪೈಕಿ ಒಂದಾದ ಮಹಾನದಿಗೆ ಅಡ್ಡಲಾಗಿ ಸಂಬಾಲ್ಪುರದ ಬಳಿ ಜಗತ್ತಿನ ಅತ್ಯಂತ ದೊಡ್ಡ ಮಣ್ಣುಗಾರೆಯ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಈ ಆಣೆಗೆ ಹಿರಾಕುಡ್ ಆಣೆಕಟ್ಟು ಎಂಬ ಹೆಸರು. ಮಹಾನದಿ ಕಣಿವೆಯ ಫಲವತ್ತಾದ ನೆಲದಲ್ಲಿ ಭತ್ತವನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಮಹಾನದಿಯು ಬ್ರಾಹ್ಮಣಿ ನದಿಯೊಂದಿಗೆ ಸಂಗಮಿಸಿ ಬಂಗಾಳ ಕೊಲ್ಲಿಯನ್ನು ಸೇರುವೆಡೆಯಲ್ಲಿ ಬೃಹತ್ ಮುಖಜಭೂಮಿಯನ್ನು ಸೃಷ್ಟಿಸಿದೆ. ಈ ಮುಖಜಭೂಮಿಯಲ್ಲಿ ಜಂಬೂದ್ವೀಪದ ಅತ್ಯಂತ ವಿಸ್ತಾರವಾದ ಮ್ಯಾಂಗ್ರೋವ್ ಅರಣ್ಯಗಳಿವೆ. ಅಲ್ಲದೆ ಈ ಪ್ರದೇಶವು ಪೂರ್ವ ಭಾರತದ ಭತ್ತದ ಕಣಜವೆಂದು ಕರೆಯಲ್ಪಡುವುದು.
-
ಕಟಕ್ ಬಳಿ ಮಹಾನದಿಯಲ್ಲಿ ಮೀನುಗಾರಿಕೆ.
-
ಮಹಾನದಿಯ ಇನ್ನೊಂದು ನೋಟ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Bargarh district topography Archived 2008-04-12 ವೇಬ್ಯಾಕ್ ಮೆಷಿನ್ ನಲ್ಲಿ.
- Burnt paddy and dead fish Archived 2008-12-03 ವೇಬ್ಯಾಕ್ ಮೆಷಿನ್ ನಲ್ಲಿ.
- Orissa Govt. blamed for declining quality of river water Archived 2011-01-20 ವೇಬ್ಯಾಕ್ ಮೆಷಿನ್ ನಲ್ಲಿ.
- Mahanadi River Archived 2004-11-04 ವೇಬ್ಯಾಕ್ ಮೆಷಿನ್ ನಲ್ಲಿ.