ವಿಷಯಕ್ಕೆ ಹೋಗು

ಕಟಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಟಕ್
କଟକ
Katak
ನಗರ
Clockwise from top left: Deity of Cuttack Chandi Temple, Uttareshwar Temple, Barabati stadium, Railway Bridge on River Mahanadi, View of Odisha High Court from Ravenshaw Collegiate School premises, Badambadi Bus Terminal
Clockwise from top left: Deity of Cuttack Chandi Temple, Uttareshwar Temple, Barabati stadium, Railway Bridge on River Mahanadi, View of Odisha High Court from Ravenshaw Collegiate School premises, Badambadi Bus Terminal
Nicknames: 
  • Silver City
  • City of 1000 Years
  • Millennium City
Country India
StateOdisha
DistrictCuttack
Established989 CE
Founded byKing Markata Keshari
Named forAncient military cantonment of Utkal
Government
 • TypeMayor–council
 • BodyCuttack Municipal Corporation (CMC)
 • MayorMeenakshee Behera (BJD)
 • Municipal CommissionerGyana Das (IAS)
 • Commissioner of PoliceYogesh Bahadur Khurania (IPS)
Area
 • ನಗರ೪೩.೭ km (೧೬.೯ sq mi)
 • Metro
೧೯೨.೫ km (೭೪.೩ sq mi)
Elevation
೩೬ m (೧೧೮ ft)
Population
 (2011)[]
 • ನಗರ೬,೦೬,೦೦೭
 • Rank72nd
 • Density೧೩,೮೬೭.೪೩/km (೩೫,೯೧೬.೫/sq mi)
 • Metro
೬,೬೬,೭೦೨
DemonymCuttacki
Languages
 • OfficialOdia
Time zoneUTC+5:30 (IST)
ZIP code(s)
7530xx/754xxx
Telephone code0671
Vehicle registrationOD-05/OR-05
UN/LOCODEIN CUT
Websitecmccuttack.gov.in

ಕಟಕ್ : ಒರಿಸ್ಸ ರಾಜ್ಯದ ಒಂದು ನಗರ; ಜಿಲ್ಲೆ, ಮಹಾನದಿಯ ದಂಡೆಯ ಮೇಲೆ ಅದರ ಮುಖ್ಯ ಶಾಖೆಯಾದ ಕಟ್ಜೋರಿ ಕವಲೊಡೆಯುವಲ್ಲಿ, ಕೋಲ್ಕೊತದ ನೈರುತ್ಯಕ್ಕೆ ೩೫೨ ಕಿಮೀ ಮತ್ತು ಸಮುದ್ರತೀರದಿಂದ 72 ಕಿಮೀ ದೂರದಲ್ಲಿ ಕಟಕ್ ನಗರವಿದೆ.ಇದು ಒರಿಸ್ಸ ರಾಜ್ಯದ ಹಿಂದಿನ ರಾಜಧಾನಿಯೂ ಹೌದು. ಉತ್ತರ ಅಕ್ಷಾಂಶ 2೦º-26’ ಮತ್ತು ಪುರ್ವರೇಖಾಂಶ 85º-56' ಗಳಲ್ಲಿದೆ. ಇದು ಆಗ್ನೇಯ ರೈಲ್ವೆಯ ಒಂದು ನಿಲ್ದಾಣ. ಚೆನ್ನೈ-ಹೌರಾ ರೈಲು ಮಾರ್ಗವೂ ಕೋಲ್ಕೊತ - ಚೆನ್ನೈ ರಾಷ್ಟ್ರೀಯ ಹೆದ್ದಾರಿಯೂ ಇದರ ಮೂಲಕ ಹಾದುಹೋಗುತ್ತವೆ.ಕಟಕ್ ಮತ್ತು ಭುವನೇಶ್ವರವನ್ನು ಅವಳಿ ನಗರಗಳೆಂದು ಪರಿಗಣಿಸಲಾಗಿದ್ದು, ಇವುಗಳ ಒಟ್ಟು ಜನಸಂಖ್ಯೆ ೨೦೧೪ರಲ್ಲಿ ೧೬.೮ಲಕ್ಷದಷ್ಟಿದೆ.[] ಇವುಗಳು ಭಾರತ ಸರಕಾರದ ವರ್ಗೀಕರಣದಂತೆ ಎರಡನೇ ಸ್ಥರದ ನಗರಗಳಾಗಿವೆ.[][][][]

ಇತಿಹಾಸ

[ಬದಲಾಯಿಸಿ]
Remains of the Barabati Fort

ಕಟಕ್ ನಗರವನ್ನು ಸ್ಥಾಪಿಸಿದವನು ಮೂರನೆಯ ಅನಂಗಭೀಮದೇವ (1211-38), ಬಾರಾಬತಿ ಕೋಟೆಯನ್ನು ಇವನೇ ಕಟ್ಟಿಸಿದ, ಮಹಾನದಿ ಮತ್ತು ಕಟ್ಜೋರಿಗಳ ಪ್ರವಾಹದಿಂದ ನಗರವನ್ನು ರಕ್ಷಿಸುವ ಉದ್ದೇಶದಿಂದ ಇವುಗಳ ದಂಡೆಯ ಉದ್ದಕ್ಕೂ ಕಲ್ಕಟ್ಟಣೆ ನಿರ್ಮಿಸಿದವನೂ ಈತನೇ ಇರಬಹುದು. ಮುಕುಂದದೇವನ(1559-68) ಕಾಲಕ್ಕೆ ಬಾರಾಬತಿ ಕೋಟೆ ಒಂಬತ್ತು ಅಂತಸ್ತುಗಳ ರಚನೆಯಾಗಿ ಮಾರ್ಪಟ್ಟಿತು. 1568ರಲ್ಲಿ ಆಫ್ಘನರು ಕಟಕ್ ನಗರವನ್ನಾಕ್ರಮಿಸಿಕೊಂಡರು. ಈ ಆಕ್ರಮಣದೊಂದಿಗೆ ಒರಿಸ್ಸದಲ್ಲಿ ಹಿಂದೂ ರಾಜರ ಆಳ್ವಿಕೆಯೂ ಕೊನೆಗೊಂಡಿತು. 1590ರಲ್ಲಿ ಇದನ್ನು ಮೊಗಲರೂ ೧೭೫೧ರಲ್ಲಿ ಮರಾಠರೂ ವಶಪಡಿಸಿಕೊಂಡರು. ಮರಾಠರನ್ನು ಓಡಿಸಿ ಇದನ್ನು ಬ್ರಿಟಿಷರು ಆಕ್ರಮಿಸಿಕೊಂಡದ್ದು 1803ರಲ್ಲಿ, ಅವರ ಆಳ್ವಿಕೆಯ ಕಾಲದಲ್ಲಿ ಇದು ಒರಿಸ್ಸದ ರಾಜಧಾನಿಯಾಗಿತ್ತು.

ಸ್ಮಾರಕಗಳು

[ಬದಲಾಯಿಸಿ]

ಕಟಕ್ ನಗರದಲ್ಲಿ ಅನೇಕ ಸ್ಮಾರಕಗಳಿವೆ. ಲಾಲ್ಬಾಗ್ ಅರಮನೆ (1633), ಜಾಮೀ ಮಸೀದಿ (1690), ಕದಾಂ ರಸೂಲ್ (1715) ಇವುಗಳೇ ಅಲ್ಲದೆ 18ನೆಯ ಶತಮಾನದಲ್ಲಿ ನಿರ್ಮಿತವಾದ ಅಮರೇಶ್ವರ ದೇವಸ್ಥಾನ ಮತ್ತು ಜೈನ ದೇವಾಲಯಗಳು ಮುಖ್ಯ, ಬ್ಯಾಪ್ಟಿಸ್ಟ್‌ ಚರ್ಚ್, ಕೆಥೊಲಿಕ್ ಚರ್ಚ್ ಇವು 19ನೆಯ ಶತಮಾನದಲ್ಲಿ ನಿರ್ಮಾಣವಾದವು.

ಸಂಸ್ಥೆಗಳು

[ಬದಲಾಯಿಸಿ]

ಕಟಕ್ ಉತ್ಕಲ ವಿಶ್ವವಿದ್ಯಾಲಯದ ಕೇಂದ್ರ. ರ್ಯಾವೆನ್ಷಾ ಕಾಲೇಜ್, ಕ್ರೈಸ್ಟ್‌ ಕಾಲೇಜ್, ಸ್ವೀವರ್ಟ್ ವಿಜ್ಞಾನ ಕಾಲೇಜ್, ಶೈಲಬಾಲಾ ಮಹಿಳಾ ಕಾಲೇಜ್, ಶ್ರೀರಾಮಚಂದ್ರಭಂಜ್ ವೈದ್ಯಕೀಯ ಕಾಲೇಜ್, ರಾಧಾನಾಥ್ ಟ್ರೇನಿಂಗ್ ಕಾಲೇಜ್ ಇವು ಉತ್ಕಲ ವಿಶ್ವವಿದ್ಯಾನಿಲಯದ ಕೆಲವು ಮುಖ್ಯ ಉಚ್ಚ ಶಿಕ್ಷಣ ಸಂಸ್ಥೆಗಳು. ಕೇಂದ್ರೀಯ ಅಕ್ಕಿ ಸಂಶೋಧನ ಸಂಸ್ಥೆಯೊಂದು ಇಲ್ಲಿ ಸ್ಥಾಪಿತವಾಗಿದೆ. ಒರಿಸ್ಸದ ಉಚ್ಚನ್ಯಾಯಾಲಯವಿರುವುದು ಈ ನಗರದಲ್ಲೇ.[]

ಕೈಗಾರಿಕೆಗಳು

[ಬದಲಾಯಿಸಿ]

ಕಟಕ್ ಅನೇಕ ಗುಡಿಸಲು ಕೈಗಾರಿಕೆಗಳ ಕೇಂದ್ರ. ಚಿನ್ನ ಬೆಳ್ಳಿಯ ತೆರಪು ಚಿತ್ರ ಕಲೆಯೂ ಕೊಂಬಿನ ಕುಶಲ ಕಲೆಯೂ ಮುಖ್ಯ. ಜವಳಿ ಗಿರಣಿಯೂ ಕಾಗದ, ಉಕ್ಕಿನ ಕೊಳವೆ ಮತ್ತು ಗಾಜಿನ ಕಾರ್ಖಾನೆಗಳೂ ಆಧುನಿಕ ಉದ್ಯಮಗಳೂ, ಒರಿಸ್ಸದ ನಾನಾಭಾಗಗಳೊಂದಿಗೆ ರೈಲ್ವೆ ಮತ್ತು ರಸ್ತೆ ಸಂಪರ್ಕ ಪಡೆದಿರುವ ಕಟಕ್ ಒಂದು ಮುಖ್ಯ ವಾಣಿಜ್ಯ ಕೇಂದ್ರ.

ಉಲ್ಲೇಖಗಳು

[ಬದಲಾಯಿಸಿ]
  1. "Cities having population 1 lakh and above" (PDF). Census of India, Government of India. Retrieved 2 November 2011.
  2. "Major Agglomerations of the World". City Population. City Population, Germany. Retrieved 2014-08-11.
  3. "Tier I and Tier II Cities map". Tier II Cities map. maps of India. Retrieved 2014-08-24.
  4. "Tier II and Tier III Cities". Tier II Cities. Business Today. Retrieved 2014-08-24.
  5. "Growth of Tier II and Tier III Cities". Tier II Cities growth. NBM Media. Retrieved 2014-08-24.
  6. "Looking Beyong Tier Landscape". Tier II. NASSCOM. Archived from the original on 2016-03-07. Retrieved 2014-08-24.
  7. "odisha high court location map". Odisha high court road map. Odisha Government. Retrieved 2014-08-08.
"https://kn.wikipedia.org/w/index.php?title=ಕಟಕ್&oldid=1183539" ಇಂದ ಪಡೆಯಲ್ಪಟ್ಟಿದೆ