ವಿಷಯಕ್ಕೆ ಹೋಗು

ರಾಷ್ಟ್ರೀಯತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಜಕೀಯ ಅಸ್ತಿತ್ವವುಳ್ಳ ವ್ಯಕ್ತಿಗಳ ಸಮೂಹದ ಒಂದು ದೃಢ ಗುರುತಿಸುವುಕೆಯನ್ನು ರಾಷ್ಟ್ರೀಯತೆ ಯು ಒಳಗೊಂಡಿದೆ, ಇದನ್ನು ರಾಷ್ಟ್ರೀಯತೆಯ ವಿಧಾನಗಳಲ್ಲಿ ಒಂದು ರಾಷ್ಟ್ರ ಎಂದು ವ್ಯಾಖ್ಯಾನಿಸಲಾಗಿದೆ. ಹಲವು ಬಾರಿ, ಒಂದು ಜನಾಂಗೀಯ ಗುಂಪಿಗೆ ರಾಜ್ಯತ್ವದ ಅಧಿಕಾರವಿದೆ ಎಂಬ ನಂಬಿಕೆ ಇದೆ,[೧] ಅಥವಾ ಒಂದು ರಾಜ್ಯದ ಪೌರತ್ವ ಬರಿ ಒಂದೇ ಜನಾಂಗೀಯ ಗುಂಪಿಗೆ ಸೀಮಿತವಾಗಿರಬೇಕೆಂದು, ಅಥವಾ ಒಂದೇ ರಾಜ್ಯದಲ್ಲಿ ಇರಬಹುದಾದ ಬಹುರಾಷ್ಟ್ರೀಯತೆಯು ಅವಶ್ಯವಾಗಿ ವ್ಯಕ್ತಪಡಿಸುವ ಹಕ್ಕನ್ನು ಒಳಗೊಂಡಿರಬೇಕು ಮತ್ತು ಅಲ್ಪಸಂಖ್ಯಾತರುಗಳಿಂದ ಕೂಡ ರಾಷ್ಟ್ರದ ಗುರುತಿಸುವಿಕೆಯನ್ನು ಕಾರ್ಯಗತ ಮಾಡಬಹುದು.[೨]

ಇತಿವೃತ್ತ

[ಬದಲಾಯಿಸಿ]

ರಾಜ್ಯವು ಪ್ರಾಥಮಿಕ ಪ್ರಾಮುಖ್ಯತೆಯದೆಂದು ನಂಬಿಕೆ ಅಥವಾ ಒಂದು ರಾಜ್ಯ ಇತರ ಎಲ್ಲ ರಾಜ್ಯಗಳಿಂದ ನೈಜವಾಗಿ ಉನ್ನತವೆಂಬ ನಂಬಿಕೆ ಕೂಡ ಒಳಗೊಳ್ಳಬಹುದು.[೩][೪] ಇದನ್ನು ಒಂದು ಚಳುವಳಿಯ ಸ್ಥಾಪನೆಯನ್ನು ವಿವರಿಸಲು ಅಥವಾ ಒಂದು ಜನಾಂಗೀಯ ಗುಂಪಿಗಾಗಿ ಸ್ವದೇಶವನ್ನು ಸಂರಕ್ಷಿಸುವುದಕ್ಕೂ (ಸಾಮಾನ್ಯವಾಗಿ ಒಂದು ಸ್ವಯಾಧಿಕಾರದ ರಾಜ್ಯ) ಬಳಸಬಹುದು. ಕೆಲವು ಸನ್ನಿವೇಶಗಳಲ್ಲಿ ರಾಷ್ಟ್ರೀಯ ಸಂಪ್ರದಾಯದ ಗುರುತಿಸುವಿಕೆ ಇತರ ಜನಾಂಗಗಳ ಅಥವಾ ಸಂಪ್ರದಾಯಗಳ ಒಂದು ನಕಾರಾತ್ಮಕ ದೃಷ್ಟಿಕೋನದ ಜೊತೆ ಸಂಯೋಜಿಸಲಾಗುವುದು.[೫] ಪರ್ಯಾಯವಾಗಿ, ರಾಷ್ಟ್ರೀಯತೆಯನ್ನು ನೈಜವಾಗಿ ಭಾಷೆ, ಜನಾಂಗ ಅಥವಾ ಜಾತಿಯ ಅಡಿಯಲ್ಲಿ ವ್ಯಕ್ತಪಡಿಸಲಾಗದ ಕಲ್ಪಿತ ಸಮುದಾಯಗಳತ್ತ ಸಂಗ್ರಹಿತ ಸ್ವವ್ಯಕ್ತಿತ್ವಗಳಾಗಿ ಕೂಡ ಪ್ರದರ್ಶಿಸಬಹುದು, ಆದರೆ ಇದನ್ನು ಒಂದು ವ್ಯಕ್ತಪಡಿಸಿದ ರಾಷ್ಟ್ರದ ಎಲ್ಲಾ ವ್ಯಕ್ತಿಗಳೂ ಕೂಡಿ ಸಾಮಾಜಿಕವಾಗಿ ನಿರ್ಮಿಸಬೇಕು.[೬] ರಾಷ್ಟ್ರೀಯತೆಯು ಗತಕಾಲದ ಹಿಂದಿನ ರಾಷ್ಟ್ರೀಯತೆಯನ್ನು ಬೇಡಿ ಕೆಲವು ಸಲ ಪ್ರತಿಗಾಮಿ ಆಗಿರುತ್ತದೆ, ಮತ್ತು ಇದು ಕೆಲವೊಮ್ಮೆ ವಿದೆಶೀಯರ ಹೊರದೂಡುವಿಕೆಯನ್ನು ಅಪೇಕ್ಷಿಸುತ್ತದೆ. ಕೆಳದರ್ಜೆಯ ಜನಾಂಗದ ಮೂಲಸ್ಥಳವೆಂಬ ಕಾರಣಕ್ಕೆ ಒಂದು ಸ್ವತಂತ್ರ ಪ್ರತ್ಯೇಕ ರಾಜ್ಯವನ್ನು ಸ್ಥಾಪಿಸಲು ಕರೆಯನ್ನು ನೀಡುವ ಮೂಲಕ ರಾಷ್ಟ್ರೀಯತೆಯ ಇನ್ನೊಂದು ಮುಖ ಕ್ರಾಂತಿದಾಯಕವಾಗಿದೆ.ರಾಷ್ಟ್ರೀಯತೆ ಸಂಗ್ರಹಿತ ಪರಿಚಯಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುತ್ತದೆ - ’ಜನರು’ ಸ್ವಯಾಧಿಕಾರಿಗಳಾಗಿರಬೇಕು, ಸಂಘಟಿತರಾಗಿರಬೇಕು ಮತ್ತು ಒಂದೇ ರಾಷ್ಟ್ರೀಯ ಸಂಪ್ರದಾಯವನ್ನು ವ್ಯಕ್ತಪಡಿಸಬೇಕು.[೭] ಹೇಗಿದ್ದರೂ, ಕೆಲವು ರಾಷ್ಟ್ರೀಯವಾದಿಗಳು ತನ್ನ ಸ್ವಂತ ರಾಷ್ಟ್ರೀಯ ಪರಿಚಯದ ಒಂದು ಪ್ರಮುಖ ಭಾಗವೆಂದು ವೈಯುಕ್ತತೆಗೆ ಪ್ರಾಧಾನ್ಯ ನೀಡುತ್ತಾರೆ.[೮]

ಧಾರ್ಮಿಕವಾದ ಪವಿತ್ರ ಚಿನ್ಹೆಗಳು

[ಬದಲಾಯಿಸಿ]

ರಾಷ್ಟ್ರ ಧ್ವಜಗಳು, ರಾಷ್ಟ್ರ ಗೀತೆಗಳು, ಹಾಗೂ ರಾಷ್ಟ್ರ ಪರಿಚಯದ ಇತರ ಚಿನ್ಹೆಗಳನ್ನು ರಾಜಕೀಯ ಚಿನ್ಹೆಗಳಿಗಿಂತ ಮಿಗಿಲಾಗಿ ಧಾರ್ಮಿಕವಾದ ಪವಿತ್ರ ಚಿನ್ಹೆಗಳೆಂದೆ ಭಾವಿಸಲಾಗುತ್ತದೆ. ಆಳವಾದ ಭಾವನೆಗಳು ಹೆಚ್ಚಾದವು.[೯][೧೦][೧೧][೧೨] ಗೆಲನರ್ ಹಾಗೂ ಬ್ರುಯೆಲಿ ಅವರು ರಾಷ್ಟ್ರಗಳು ಹಾಗೂ ರಾಷ್ಟ್ರೀಯತೆ ಎಂಬ ಪುಸ್ತಕದಲ್ಲಿ ರಾಷ್ಟ್ರೀಯತೆ ಹಾಗೂ ದೇಶಭಕ್ತಿಯ ನಡುವಿನ ವಿಭಿನ್ನತೆಯನ್ನು ತೋರಿಸುತ್ತಾರೆ. "ಅತಿ ಶ್ರೇಷ್ಠವಾದ ’ದೇಶಭಕ್ತಿ’ ಎಂಬ ಪದವನ್ನು ಒಂದು ವೇಳೆ ’ಪೌರ/ಪಾಶ್ಚ್ಯಾತ ರಾಷ್ಟ್ರೀಯತೆ’ಯಿಂದ ಬದಲಿಸಿದರೆ, ರಾಷ್ಟ್ರೀಯತೆ ಒಂದು ಸಾಮಾಜಿಕ ವಿದ್ಯಮಾನವಾಗಿ ಅಸ್ತಿತ್ವದಲ್ಲಿರುವುದು ಸಮಾಪ್ತಗೊಳ್ಳುತ್ತದೆ."[೧೩][೧೪][೧೫]

ಇತಿಹಾಸ

[ಬದಲಾಯಿಸಿ]

ರಾಷ್ಟ್ರೀಯತೆಯು ಅಭಿವೃದ್ಧಿಗೊಳ್ಳುವದಕ್ಕಿಂತ ಮುಂಚೆ, ಜನರು ಸಾಮಾನ್ಯವಾಗಿ ಅವರ ರಾಷ್ಟ್ರಕ್ಕಿಂತ ಹೆಚ್ಚಾಗಿ ಒಂದು ನಗರದತ್ತ ಅಥವಾ ಒಬ್ಬ ನಿರ್ದಿಷ್ಟ ನಾಯಕನಿಗೆ ನಿಷ್ಠಾವಂತರಾಗಿರುತ್ತಿದ್ದರು. 18ನೇಯ ಶತಮಾನದ ಅಂತ್ಯದ ಅಮೇರಿಕ ಕ್ರಾಂತಿ ಹಾಗೂ ಫ್ರೆಂಚ್ ಕ್ರಾಂತಿಯ ಚಳುವಳಿಯ ಪ್ರಾರಂಭವನ್ನು ಎನ್‌ಸೈಕ್ಲೋಪೀಡಿಯ ಬ್ರಿಟಾನಿಕಾದಲ್ಲಿ ಗುರುತಿಸಲಾಗಿದೆ; ಇತರ ಇತಿಹಾಸಕಾರರು ವಿಶೇಷವಾಗಿ ಫ್ರೆಂಚ್ ಕ್ರಾಂತಿಯ ಸಮಯದ ಫ್ರಾಂನ್ಸ್‌ನಲ್ಲಿನ ಅತಿರಿಕ್ತ-ರಾಷ್ಟ್ರೀಯತೆಯ ಪಕ್ಷವನ್ನು ಎತ್ತಿ ತೋರಿಸುತ್ತಾರೆ.[೧೬][೧೭][೧೮] ರಾಷ್ಟ್ರೀಯತೆ ಎಂಬ ಪದವು ಜೊಹಾನ್ ಒಟ್ಟಫ್ರೆಡ್ ಹರ್ಡರ್ (ನ್ಯಾಶನಲಿಸಮ್us ) ಅವರಿಂದ 1770ರ ಅಂತ್ಯದಲ್ಲಿ ಸೃಷ್ಟಿಸಲಾಗಿತ್ತು.[೧೯] ರಾಷ್ಟ್ರೀಯತೆ ನಿರ್ಧಿಷ್ಟವಾಗಿ ಎಲ್ಲಿ ಹಾಗೂ ಯಾವಾಗ ಉದ್ಭವಿಸಿತು ಎಂದು ಗುರುತಿಸುವುದು ಕಠಿಣ, ಆದರೆ ಇದರ ಅಭಿವೃದ್ಧಿಯು ಆಧುನಿಕ ರಾಜ್ಯಕ್ಕೆ ತೀರ ಹತ್ತಿರದ ಸಂಬಂಧವನ್ನು ಹೊಂದಿದೆ ಮತ್ತು 18ನೇಯ ಶತಮಾನದ ಅಂತ್ಯದ ಫ್ರೆಂಚ್ ಕ್ರಾಂತಿ ಹಾಗೂ ಇದು ಅಮೆರಿಕಾದ ಕ್ರಾಂತಿಯ ಜೊತೆ ಜನಪ್ರಿಯ ಸಾರ್ವಭೌಮತ್ವದ ಪ್ರೇರಣೆಯ ಮೂಲಕ ಅಸ್ತಿತ್ವಕ್ಕೆ ಬಂದಿತ್ತು.[೧೬] ಆ ಸಮಯದಿಂದ, ಪ್ರಾಯಶಃ ಬಹಳ ಗಮನಾರ್ಹವಾಗಿ ಮೊದಲನೇ ವಿಶ್ವ ಯುದ್ಧ ಹಾಗೂ ವಿಶೇಷವಾಗಿ ಎರಡನೇಯ ವಿಶ್ವ ಯುದ್ಧರ ಒಂದು ಪ್ರಮುಖ ಪ್ರಭಾವವಾಗಿ ಅಥವಾ ಆಧಾರ ಸೂತ್ರವಾಗಿ ರಾಷ್ಟ್ರೀಯತೆ ಇತಿಹಾಸದ ಒಂದು ಅತಿ ಪ್ರಮುಖ ರಾಜಕೀಯ ಹಾಗೂ ಸಾಮಾಜಿಕ ಶಕ್ತಿಯಾಗಿ ಬೆಳೆದಿದೆ. ದಬ್ಬಾಳಿಕೆಇದು ಒಂದು ಪ್ರಕಾರದ ಅಧಕಾರವುಳ್ಳ ಪೌರ ರಾಷ್ಟ್ರೀಯತೆ, ಇದು ರಾಜ್ಯದ ಸಂಪೂರ್ಣ ನಿಷ್ಠೆ ಹಾಗೂ ಆಜ್ಞಾಪಾಲನೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತದೆ, ಇದರ ಉದ್ದೇಶ ಒಬ್ಬಂಟಿಯಾಗಿ ರಾಷ್ಟ್ರದ ಹಿತಾಸಕ್ತಿಗಳ ಸೇವೆಯನ್ನು ನೆರವೇರಿಸುವುದಾಗಿದೆ.[೨೦][೨೧][೨೨][೨೩]

ವಿಧಗಳು

[ಬದಲಾಯಿಸಿ]

ರಾಷ್ಟ್ರೀಯ ಪವಿತ್ರತೆ

[ಬದಲಾಯಿಸಿ]
ರಾಷ್ಟ್ರೀಯತಾವಾದಿ ಕಲೆಯ ಪ್ರಮುಖ ಉದಾಹರಣೆಯಂತೆ ಸ್ವಾತಂತ್ರ್ಯವು ಜನರಿಗೆ ಮಾರ್ಗದರ್ಶನ ನೀಡುತ್ತದೆ.(ಈಜೆನ್ ಡೆಲಕ್ರಕ್ಸ್)

ಕೆಲವು ರಾಷ್ಟ್ರೀಯತಾವಾದಿಗಳು ನಿಶ್ಚಿತವಾದ ಗುಂಪುಗಳಿಂದ ಬೇರ್ಪಡುತ್ತಾರೆ. ಕೆಲವರ ದೃಷ್ಟಿಯಲ್ಲಿ ವಾಸ್ತವವಾಗಿ ತಮ್ಮ ರಾಷ್ಟ್ರದ ಪೌರರು ಒಂದು ಅರ್ಥದಲ್ಲಿ ನಿಜವಾದ ಪೌರರಲ್ಲ ಎಂಬ ಭಾವನೆ ಮತ್ತು ಆ ಕಾರ‍ಣದಿಂದಾಗಿ "ನಿಜವಾದ" ಪೌರರು ಸಮರ್ಥವಾದ ಹಕ್ಕುಗಳಿಂದ ಸಂರಕ್ಷಿತವಾಗಿರುವುದಿಲ್ಲ. ರಾಷ್ಟ್ರೀಯ ಪರಿಚಯಕ್ಕೆ ರಾಷ್ಟ್ರದಿಂದ ಆಕ್ರಮಿಸಲಾದ ವಾಸ್ತವವಾದ ಕ್ಷೇತ್ರಗಳಿಗಿಂತ ಕೆಲವು ಸಲ ಪೌರಾಣಿಕ ಮೂಲನಾಡು ಹೆಚ್ಚು ಮಹತ್ವದಾಗಿರುತ್ತದೆ.[೨೪]

ಪೌರ ರಾಷ್ಟ್ರೀಯತೆ

[ಬದಲಾಯಿಸಿ]

ಸಮಾನವಾದ ಹಾಗೂ ಹಂಚಿಕೊಂಡ ರಾಜಕೀಯ ಹಕ್ಕುಗಳುಳ್ಳ ಮತ್ತು ಏಕರೂಪದ ರಾಜಕೀಯ ಪ್ರಕ್ರಿಯೆಗಳಿಗೆ ನಿಷ್ಠೆಯುಳ್ಳ ಜನರ ಸಂಘಟನೆಯೇ ರಾಷ್ಟ್ರ ಎಂದು ಪೌರ ರಾಷ್ಟ್ರೀಯತೆ ವ್ಯಾಖ್ಯಾನಿಸಿದೆ.[೨೫] ಪೌರ ರಾಷ್ಟ್ರೀಯತೆಯ ಸಿದ್ಧಾಂತದ ಪ್ರಕಾರ ರಾಷ್ಟ್ರವು ಸಮಾನವಾದ ಜನಾಂಗೀಯ ವಂಶಪರಂಪರೆಯ ಮೇಲೆ ಆಧಾರಿತವಾಗಿಲ್ಲ ಹಾಗೂ ಜನಾಂಗೀಯತೆಯೇ ಮೂಲ ಮಂತ್ರವಲ್ಲದ ಒಂದು ರಾಜಕೀಯ ಘಟಕವಾಗಿದೆ. ರಾಷ್ಟ್ರೀಯತೆಯ ಈ ಪೌರ ಪರಿಕಲ್ಪನೆಯ ದೃಷ್ಟಾಂತವನ್ನು ಅರ್ನಸ್ಟ್ ರೆನನ್ ತಮ್ಮ 1882 ರ "ವಾಟ್ ಇಸ್ ಅ ನೇಷನ್?" ಎಂಬ ಉಪಾವ್ಯಾಸದಲ್ಲಿ ನೀಡಿದ್ದಾರೆ, ಇದರಲ್ಲಿ ರಾಷ್ಟ್ರವನ್ನು "ಒಟ್ಟಿಗೆ ಕೂಡಿ ಬಾಳನ್ನು ಮುಂದುವರಿಸುವ ಜನರ ಅಭಿಪ್ರಾಯದ ಪ್ರತಿದಿನದ ಜನಮತ" ಎಂದು ವ್ಯಾಖ್ಯಾನಿಸಿದ್ದಾರೆ.[೨೫]

ಪೌರ ರಾಷ್ಟ್ರೀಯತೆಯು (ಅಥವಾ ಪೌರತ್ವದ ರಾಷ್ಟ್ರೀಯತೆ) ರಾಷ್ಟ್ರೀಯತೆಯ ಒಂದು ಪ್ರಕಾರ, ಇದರಲ್ಲಿ ರಾಜ್ಯವು ರಾಜಕೀಯ ತರ್ಕ ಸಮ್ಮತಿಯನ್ನು "ಜನರ ಇಚ್ಛೆಯನ್ನು" ಪ್ರತಿಬಿಂಬಿಸುವ ಮಟ್ಟದಲ್ಲಿ ನಾಗರೀಕರ ಸಕ್ರೀಯ ಭಾಗವಹಿಸುವಿಕೆಯಿಂದ ಪಡೆಯುತ್ತದೆ. ಇದ ಜೀನ್-ಜಾಕಸ್ ರೊಸಿಯು ಅವರಿಂದ ಹಾಗೂ ವಿಶೇಷವಾಗಿ ಅವರ 1762ರ ಪುಸ್ತಕ ದಿ ಸೊಶೀಯಲ್ ಕಾಂಟ್ರಾಕ್ಟ್‌ ನಿಂದ ಪಡೆದ ಸಾಮಾಜಿಕ ಸಿದ್ಧಾಂತಗಳಿಂದ ಉದ್ಭವಿಸಿದೆ ಎಂದು ಹಲವು ಬಾರಿ ಕಂಡು ಬಂದಿದೆ. ವಿಚಾರವಾದ ಹಾಗೂ ಉದಾರಶೀಲತೆಯ ಪರಂಪರೆಗಳೊಳಗೆ ಪೌರ ರಾಷ್ಟ್ರೀಯತೆ ನೆಲೆಯಾಗಿದೆ, ಆದರೆ ರಾಷ್ಟ್ರೀಯತೆಯ ಒಂದು ವಿಧಾನವಾಗಿರುವುದರಿಂದ ಇದು ಜನಾಂಗೀಯ ರಾಷ್ಟ್ರೀಯತೆಗಿಂತ ವಿಭಿನ್ನವಾಗಿದೆ. ಪೌರ ರಾಷ್ಟ್ರದ ಸದಸ್ಯತ್ವವು ಸ್ವಯಂಪ್ರೇರಿತ ಎಂದು ಪರಿಗಣಿಸಲಾಗಿದೆ. ಸಂಯುಕ್ತ ರಾಷ್ಟ್ರಗಳಲ್ಲಿ ಹಾಗೂ ಫ್ರಾಂನ್ಸ್ ನಂತಹ ದೇಶಗಳಲ್ಲಿ ಪ್ರತಿನಿಧಿ ಪ್ರಜಾಪ್ರಭುತ್ವದ ಅಭಿವೃದ್ಧಿಯು ಪೌರ-ರಾಷ್ಟ್ರಗಳ ಆದರ್ಶಗಳಿಂದ ಪ್ರಭಾವಿತವಾಗಿತ್ತು.

ಜನಾಂಗೀಯ ಶ್ರೇಷ್ಟತೆಯ ನೀತಿ

[ಬದಲಾಯಿಸಿ]

ಆದರೆ ರಾಷ್ಟ್ರೀಯತೆ ಒಂದು ಜನಾಂಗದ ಉತ್ಕ್ರಷ್ಟತೆಯನ್ನು ಅಗತ್ಯವಾಗಿ ಇನ್ನೊಂದು ಜನಾಂಗದ ಮೇಲೆ ಹೋರುವ ನಂಬಿಕೆಯನ್ನು ಅಳವಡಿಸುವುದಿಲ್ಲ, ಕೆಲವು ರಾಷ್ಟ್ರೀಯತಾವಾದಿಗಳು ಜನಾಂಗೀಯ ಶ್ರೇಷ್ಟತಾ ನೀತಿಯ ಸಂರಕ್ಷಣತೆ ಅಥವಾ ಜನಾಂಗೀಯ ಶ್ರೇಷ್ಟತಾ ನೀತಿಯ ಸರ್ವಶ್ರೇಷ್ಠತೆಯನ್ನು ಬೆಂಬಲಿಸುತ್ತಾರೆ. ಇಂತಹ ಆಚರಣೆ ಮನುಷ್ಯರಲ್ಲಿ ಹುಟ್ಟಿನಿಂದ ಬಂದ ಸ್ವಭಾವಿಕ ಆದ್ಯತೆಗಳಿಂದ ಉದ್ಭವಿಸುತ್ತದೆ ಎಂದು ಅಧ್ಯಯನಗಳ ಪುರಾವೆಗಳು ಹೇಳಿವೆ.[೨೬]

ಉದಾಹರಣೆಗೆ USA ನಲ್ಲಿ, ಸ್ಥಳೀಯವಲ್ಲದ ಜನಾಂಗೀಯ ಶ್ರೇಷ್ಟತಾ ನೀತಿಯ ರಾಷ್ಟ್ರೀಯತೆಯ ಚಳುವಳಿಗಳು [clarification needed] ಬಿಳಿ ಹಾಗೂ ಕಪ್ಪು ಎರಡೂ ಜನರ ಅಸ್ತಿತ್ವದಲ್ಲಿದೆ. ಈ ತರಹದ "ರಾಷ್ಟ್ರೀಯತೆ" ಹಲವು ಬಾರಿ ತನ್ನ ರಾಷ್ಟ್ರಕ್ಕೆ ತಾನೇ ಉದಾಹರಣೆಯ ರೂಪದಲ್ಲಿ ಸೇವೆ ಸಲ್ಲಿಸಬಹುದೆಂಬ ನಂಬಿಕೆಯ ಆದಾರದಲ್ಲಿ ವಿದೇಶಿ ರಾಷ್ಟ್ರಗಳನ್ನು ಪ್ರಚಾರ ಮಾಡುತ್ತದೆ ಅಥವಾ ಹೊಗಳುತ್ತದೆ ಆಂಗ್ಲೋಫೀಲಿಯ ಅಥವಾ ಆಫ್ರೋಸೆಂಟಿಸಮ್ ನೋಡಿ.

ಸ್ಪಷ್ಟ ಜೀವಶಾಸ್ತ್ರದ ವರ್ಣ ಸಿದ್ಧಾಂತ 19ನೇಯ ಶತಮಾನದ ಕೊನೆಯ ಸಮಯದಿಂದ ಪ್ರಭಾವಶಾಲಿಯಾಗಿ ಬೆಳೆಯಿತು. ರಾಷ್ಟ್ರೀಯತಾವಾದಿ ಹಾಗೂ ಪ್ರತಿಗಾಮಿ ಚಳುವಳಿಗಳು 20ನೇಯ ಶತಮಾನದ ಮೊದಲನೇಯ ಅರ್ಧ ಭಾಗದಲ್ಲಿ ಈ ಸಿದ್ಧಾಂತಗಳಿಗೆ ಹಲವು ಬಾರಿ ಮೇಲ್ಮನವಿ ಸಲ್ಲಿಸಿದ್ದವು.[clarification needed] ರಾಷ್ಟ್ರೀಯ ಸಮಾಜವಾದಿ ಆದರ್ಶತೆ ಅತಿ ವಿಸ್ತೃತವಾದ "ವರ್ಣ" ಆದರ್ಶತೆಗಳಲ್ಲೊಂದು: "ವರ್ಣ" ಪದದ ಪರಿಕಲ್ಪನೆಯು ನಾಜಿ ಜರ್ಮನಿಯ ಕಾರ್ಯನೀತಿಗಳ ಅಂಶಗಳ ಮೇಲೆ ಪ್ರಭಾವ ಬೀರಿತು. 21ನೇಯ ಶತಮಾನದಲ್ಲಿ "ವರ್ಣ" ಎಂಬ ಪದ ಮನುಷ್ಯನ ಮುಖಚರ್ಯೆ ಸಮೂದಾಯಗಳ ಶ್ರೇಣಿಯನ್ನು ವಿವರಿಸಲು ಅರ್ಥಪೂರ್ಣ ಪದ ಎಂದು ಹೆಚ್ಚು ಜನರಿಂದ ಪರಿಗಣಿಸಲಾಗುತ್ತಿಲ್ಲ[clarification needed]; ಜನಾಂಗೀಯ ಶ್ರೇಷ್ಟತೆ ನೀತಿ ಪದವು ಹೆಚ್ಚು ನಿಖರ ಹಾಗೂ ಅರ್ಥಪೂರ್ಣವಾದ ಪದ.[೨೭]

ಜನಾಂಗೀಯತೆಯ ಶುದ್ಧೀಕರಣ ಹಲವು ಬಾರಿ ರಾಷ್ಟ್ರೀಯತೆ ಹಾಗೂ ಜನಾಂಗೀಯ ಶ್ರೇಷ್ಟತೆಯ ನೀತಿ ಎರಡೂ ವಿದ್ಯಾಮಾನಗಳಲ್ಲಿ ಕಂಡು ಬರುತ್ತವೆ. ಇದು ರಾಷ್ಟ್ರೀಯತೆಯ ತರ್ಕಶಾಸ್ತ್ರದ ಭಾಗವಾದ ಕಾರಣ ರಾಜ್ಯವು ಒಂದು ರಾಷ್ಟ್ರದ ರೂಪದಲ್ಲಿ ಮೀಸಲಾಗಿದೆ, ಆದರೆ ಎಲ್ಲ ರಾಷ್ಟ್ರೀಯತಾವಾದಿ ರಾಷ್ಟ್ರ‍-ರಾಜ್ಯಗಳು ತಮ್ಮ ಅಲ್ಪಸಂಖ್ಯಾತರುಗಳನ್ನು ಹೊರದೂಡುವುದಿಲ್ಲ.

ವಿಸ್ತರಣವಾದಿ ರಾಷ್ಟ್ರೀಯತೆ

[ಬದಲಾಯಿಸಿ]

ಸಾಮಾನ್ಯವಾಗಿ ಪ್ರಸ್ತುತ ಕ್ಷೇತ್ರ ಅತಿ ಚಿಕ್ಕದು ಅಥವಾ ಭೌತಿಕವಾಗಿ ಅಥವಾ ಆರ್ಥಿಕವಾಗಿ ರಾಷ್ಟ್ರದ ಜನಸಂಖ್ಯೆಯನ್ನು ಪೋಷಿಸಲು ಸಾಧ್ಯವಾಗುವುದಿಲ್ಲ ಎಂಬ ಆಪಾದನೆಯ ಕಾರಣದಿಂದ ವಿಸ್ತರಣವಾದಿ ರಾಷ್ಟ್ರೀಯತೆ ಹೊಸ ಕ್ಷೇತ್ರಗಳಲ್ಲಿ ವಿಸ್ತರಣೆಯನ್ನು ಉತ್ತೇಜಿಸುತ್ತದೆ. ಇದಕ್ಕೆ ಒಂದು ಉದಾಹರಣೆ ಎಂದರೆ ಅಡಾಲ್ಫ್ ಹಿಟ್ಲರ್‌ನ ಕ್ಷೇತ್ರೀಯ ಬೇಡಿಕೆಗಳು.

ಎಡ-ಪಕ್ಷ ರಾಷ್ಟ್ರೀಯತೆ

[ಬದಲಾಯಿಸಿ]

ಎಡ-ಪಕ್ಷ ರಾಷ್ಟ್ರೀಯತೆ ಎಂದರೆ (ಕೆಲವು ಸಲ ಸಮಾಜವಾದಿ ರಾಷ್ಟ್ರೀಯತೆ ಎಂದು ಕೂಡ ಪ್ರಚಲಿತವಾದ)[೨೮], ಎಡ-ಪಕ್ಷ ರಾಜಕೀಯಗಳನ್ನು ರಾಷ್ಟ್ರೀಯತೆಯೊಂದಿಗೆ ಸಂಯೋಜಿಸುವ ಯಾವುದೇ ರಾಜಕೀಯ ಚಳುವಳಿ ಎಂದು ಉಲ್ಲೇಖಿಸಲಾಗಿದೆ. ಅವರ ರಾಷ್ಟ್ರಗಳು ಇತರ ರಾಷ್ಟ್ರಗಳಿಂದ ಕಿರುಕುಳ ಅನುಭವಿಸುತ್ತಿದ್ದಾರೆಂಬ ದೃಷ್ಟಿಯಿಂದ ಹಾಗೂ ಹೀಗೆ ತಮ್ಮನ್ನು ಆರೋಪಿತ ಕಿರುಕುಳ ಕೊಡುವವರಿಂದ ಮುಕ್ತಗೊಳಿಸಲು ತಮ್ಮ ಆತ್ಮ ಸಂಕಲ್ಪವನ್ನು ಹೆಚ್ಚಿಸುವ ಅಗತ್ಯವಿರುತ್ತದೆ ಎಂಬ ದೃಷ್ಟಿಕೋನದಿಂದ ಹಲವು ರಾಷ್ಟ್ರೀಯತಾ ಚಳುವಳಿಗಳು ರಾಷ್ಟ್ರೀಯ ವಿಮೋಚನೆಗೆ ಸಮರ್ಪಿತವಾಗಿವೆ. ತಿದ್ದುಪಡಿ-ವಿರೋಧಕ ಮಾರ್ಕ್ಸ್‌-ಲೇನಿನ್‌ವಾದಿಗಳು ಈ ಆದರ್ಶವಾದಕ್ಕೆ ತೀರ ಹತ್ತಿರದ ಸಂಬಂಧವನ್ನು ಹೊಂದಿವೆ ಮತ್ತು ಇದು ಸ್ಟಾಲಿನ್ ಅವರ ಮೊದಲ ಕಾರ್ಯವಾದ ಮಾರ್ಕ್ಸ್‌ಇಸಂ ಅಂಡ್ ಸಿ ನೇಶನಲ್ ಕ್ವಶ್ಚನ್ ಮತ್ತು ಆತನ ಸೋಶಿಯಲಿಸಂ ಇನ್ ಒನ್ ಕಂಟ್ರಿ ಎಂಬ ಪ್ರಾಯೋಗಿಕ ಉದಾಹರಣೆಯ ಆದೇಶವನ್ನು ಒಳಗೊಂಡಿದೆ, ಇದು ವರ್ಣೀಯ ಅಥವಾ ಧಾರ್ಮಿಕ ವಿಭಜನೆಗಳಿಲ್ಲದ ರಾಷ್ಟ್ರೀಯ ಸ್ವಾತಂತ್ರತೆಯ ಹೋರಾಟ ಮುಂತಾದ ಅಂತರಾಷ್ಟ್ರೀಯ ಪ್ರಕರಣದಲ್ಲಿ ಕೂಡ ರಾಷ್ಟ್ರೀಯವಾದವನ್ನು ಬಳಸಿಕೊಳ್ಳಬಹುದು ಎಂಬುದನ್ನು ಬಹಿರಂಗಪಡಿಸುತ್ತದೆ. ಎಡ-ಪಕ್ಷ ರಾಷ್ಟ್ರೀಯತೆಯು ಒಳಗೊಂಡಿರುವ ಇತರ ಉದಾಹರಣೆಗಳೆಂದರೆ 1959ರಲ್ಲಿ ಅಮೇರಿಕಾ-ಮೂಲದ ಫಲ್ಗೆನ್ಸಿಯೋ ಬಟಿಸ್ತಾ ಅವರನ್ನು ಪದಚ್ಯುತಿಗೊಳಿಸಿದ ಕಬ್ಬನ್ ಕ್ರಾಂತಿಯನ್ನು ಪರಿಚಯಿಸಿದ ಫೀಡೆಲ್ ಕ್ಯಾಸ್ಟ್ರೋಜುಲೈ 26ರ ಚಳುವಳಿ, ಐರ್ಲೆಂಡಿಸಿನ್ ಫೇಯಿನ್, ಬಾಂಗ್ಲಾದೇಶಅವಾಮಿ ಲೀಗ್ ಮತ್ತು ದಕ್ಷಿಣ ಆಪ್ರಿಕಾದ ಆಪ್ರಿಕನ್ ನೇಶನಲ್ ಕಾಂಗ್ರೆಸ್.

ಕ್ಷೇತ್ರೀಯ ರಾಷ್ಟ್ರೀಯತೆ

[ಬದಲಾಯಿಸಿ]
ಬ್ರೆಜಿಲ್ ಮಿಲಿಟರಿ ಸರ್ಕಾರದ ಸಂದರ್ಭದಲ್ಲಿ ಪದೇ ಪದೇ "ಬ್ರೆಜಿಲ್ ಲವ್ ಇಟ್ ಅರ್ ಲಿವ್ ಇಟ್" ಎಂಬ ರಾಷ್ಟ್ರೀಯ ಘೋಷಣೆಗಳನ್ನು ಕೂಗುತ್ತಿದ್ದರು.

ಒಂದು ನಿರ್ಧಿಷ್ಟ ರಾಷ್ಟ್ರದ ಎಲ್ಲ ನಿವಾಸಿಗಳು ತಾವು ಜನಿಸಿದ ಅಥವಾ ಸ್ವೀಕರಿಸಿದ ದೇಶದ ಪ್ರತಿ ನಿಷ್ಠೆಯಿಂದ ಋಣಿಯಾಗಿರುತ್ತಾರೆಂದು ಕ್ಷೇತ್ರೀಯ ರಾಷ್ಟ್ರೀಯತಾವಾದಿಗಳು ಭಾವಿಸುತ್ತಾರೆ.[೨೯] ರಾಷ್ಟ್ರದಲ್ಲಿ ಒಂದು ಪೂಜ್ಯ ಗುಣವನ್ನು ಶೋಧಿಸಿ ಪಡೆದುಕೊಳ್ಳಲಾಗುತ್ತದೆ ಹಾಗೂ ಜನಪ್ರಿಯ ಸ್ಮರಣೆಗಳಲ್ಲಿ ಅದು ಉದ್ಭವಿಸುತ್ತದೆ.[೩೦] ಕ್ಷೇತ್ರಿಯ ರಾಷ್ಟ್ರೀಯತಾವಾದಿಗಳಿಂದ ನಾಗರೀಕತೆಯನ್ನು ಆದರ್ಶಗೊಳಿಸಲಾಗಿದೆ[೩೦], ಪ್ರಾದೇಶಿಕ ರಾಷ್ಟ್ರೀಯವಾದದ ಒಂದು ಮಾನದಂಡವು ಜನಸಮೂದಾಯದ ಸಾಮಾನ್ಯ ಮೌಲ್ಯ ಮತ್ತು ಸಂಪ್ರದಾಯಗಳ ಆದಾರದ ಮೇಲೆ ಸಾಮೂಹಿಕತೆಯನ್ನು, ಸಾರ್ವಜನಿಕ ಸಂಸ್ಕೃತಿಯನ್ನು ಬೆಳೆಸುವಿಕೆಯಾಗಿದೆ.[೩೦]

ಅತಿರಿಕ್ತ-ಮಿತಿಮೀರಿದ-ರಾಷ್ಟ್ರೀಯತೆ

[ಬದಲಾಯಿಸಿ]

ಅತಿರಿಕ್ತ-ರಾಷ್ಟ್ರೀಯತೆ ಹಲವು ಬಾರಿ ರಾಜ್ಯದೊಳಗೆ ಹಾಗೂ ರಾಜ್ಯಗಳ ನಡುವೆ ಗೊಂದಲಕ್ಕೆ ದಾರಿ ಮಾಡುತ್ತದೆ, ಹಾಗೂ ಇದರ ತೀವ್ರ ರೂಪದಲ್ಲಿ ಯುದ್ಧ, ವಿಯೋಜನೆ, ಅಥವಾ ಜನಾಂಗ ಹತ್ಯೆಗೆ ದಾರಿಯಾಗುತ್ತದೆ.[೩೧][೩೨]

ದಬ್ಬಾಳಿಕೆ ಸರ್ವಾಧಿಕಾರ ಅತಿರಿಕ್ತ-ರಾಷ್ಟ್ರೀಯತೆಯ ಒಂದು ಸ್ವರೂಪ[೨೦][೨೧][೨೨][೩೩], ಇದು ರಾಷ್ಟ್ರೀಯ ಕ್ರಾಂತಿ, ರಾಷ್ಟ್ರೀಯ ಸಂಗ್ರಹಿಕತೆ, ಒಂದು ನಿರಂಕುಶವಾದ ರಾಜ್ಯ, ಮತ್ತು ರಾಜ್ಯದ ಒಗ್ಗೂಡಿಕೆ ಹಾಗೂ ಬೆಳೆವಣಿಗೆ ಆಸ್ಪದ ನೀಡುವ ಏಕೀಕರಣತೆ ಅಥವಾ ವಿಸ್ತರಣತೆಯನ್ನು ಪ್ರೋತ್ಸಾಹಿಸುತ್ತದೆ. ದಬ್ಬಾಳಿಕೆಗಾರರು ಹಲವು ಬಾರಿ ಜನಾಂಗೀಯ ರಾಷ್ಟ್ರೀಯತೆಗೆ ಪ್ರೋತ್ಸಾಹಿಸಿದರೂ ಕೆಲವು ಬಾರಿ ಒಂದು ನಿರ್ಧಿಷ್ಟ ಜನಾಂಗೀಯ ಗುಂಪಿನ ಹೊರಗಿನ ಜನರ ಸಾಂಸ್ಕೃತಿಕ ಸಮೀಕರಣೆಯನ್ನು ಸೇರಿದಂತೆ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಪ್ರೋತ್ಸಾಹಿಸುತ್ತದೆ. ದಬ್ಬಾಳಿಕೆ ರಾಜ್ಯದ ಪ್ರತಿ ವೈಯುಕ್ತಿಕರ ದಾಸ್ಯಮನೋಭಾವಕ್ಕೆ, ಮತ್ತು ಒಬ್ಬ ಸಮರ್ಥ ಅಧಿಕಾರಯತ ಸಂಪೂರ್ಣ ಹಾಗೂ ಪ್ರಶ್ನಿಸದ ನಿಷ್ಠೆಯ ಅಗತ್ಯಕ್ಕೆ ಪ್ರಾಧಾನ್ಯ ನೀಡುತ್ತದೆ.[೩೪]

ರಾಷ್ಟ್ರೀಯತೆ ಪೂಜೆಯ ಮಟ್ಟಕ್ಕೆ

[ಬದಲಾಯಿಸಿ]

ದೇಶಪ್ರೇಮವನ್ನು ಸಂಕೇತಗಳ ಪೂಜೆಯ ಮಟ್ಟಕ್ಕೆ ಇಳಿಸಲು ಕೆಲವರು ಬಯಸುವರು. ಆದರೆ, ದೇಶದ ಧ್ವಜಕ್ಕೆ ದಿನಕ್ಕೆ ಹತ್ತು ಬಾರಿ ಪೂಜೆ ಮಾಡಿದರೆ ಒಳ್ಳೆಯ ದೇಶಪ್ರೇಮಿ ಆಗುವುದು ಸಾಧ್ಯವಿಲ್ಲ. ತಮ್ಮ ಪ್ರದೇಶ, ತಮ್ಮ ಪಟ್ಟಣ, ತಮ್ಮ ಜಿಲ್ಲೆ, ತಮ್ಮ ರಾಜ್ಯ ಮತ್ತು ತಮ್ಮ ದೇಶವನ್ನು ಹೆಚ್ಚು ಸಹಿಷ್ಣುವಾಗಿ, ಎಲ್ಲರನ್ನೂ ಒಳಗೊಳ್ಳುವಂತಹುದಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ರೂಪಿಸುವುದೇ ಹೆಚ್ಚು ಬಾಳಿಕೆ ಬರುವ ಹಾಗೂ ಹೆಚ್ಚು ರಚನಾತ್ಮಕವಾದ ದೇಶಪ್ರೇಮದ ವಿಧಾನವಾಗಿದೆ.[೩೫]

ಟೀಕೆಗಳು

[ಬದಲಾಯಿಸಿ]

ಒಂದು ’ರಾಷ್ಟ್ರ’ದಲ್ಲಿ ಏನನ್ನು ನಿಯೋಜಿಸಲಾಗಿದೆ ಅಥವಾ ಒಂದು ರಾಷ್ಟ್ರವು ರಾಜಕೀಯ ಆಡಳಿತದ ಏಕಮಾತ್ರ ತರ್ಕಬದ್ಧ ಘಟಕ ಏಕೆ ಆಗಿರಬೇಕು ಎಂಬುದು ಅಸ್ಪಷ್ಟವಾಗಿದೆ ಎಂದು ರಾಷ್ಟ್ರೀಯತೆಯ ವಿಮರ್ಶಕರು ಚರ್ಚಿಸಿದ್ದಾರೆ. ರಾಷ್ಟ್ರ ಒಂದು ಸಾಂಸ್ಕೃತಿಕ ಮೂಲ ಸ್ವರೂಪವಾಗಿದೆ, ಮತ್ತು ಇದು ಒಂದು ರಾಜಕೀಯ ಸಂಘಟನೆ ಅಥವಾ ಒಂದು ನಿರ್ಧಿಷ್ಟ ಕ್ಷೇತ್ರಿಯ ಪ್ರದೇಶಕ್ಕೆ ಸಂಪರ್ಕ ಹೊಂದಿರಬೇಕೆಂಬ ಅಗತ್ಯವಿಲ್ಲ - ಅದಾಗ್ಯೂ ಸಾಧ್ಯವಾದಷ್ಟು ರಾಷ್ಟ್ರದ ಹಾಗೂ ರಾಜ್ಯದ ಸೀಮೆಗಳು ಸಮನಾಗಬೇಕೆಂದು ರಾಷ್ಟ್ರೀಯತಾವಾದಿಗಳು ಚರ್ಚಿಸುತ್ತಾರೆ.[೩೬] ತತ್ವಜ್ಞಾನಿ A.C. ಗ್ರೆಲಿಂಗ್ ರಾಷ್ಟ್ರಗಳನ್ನು ಕೃತಕ ನಿರ್ಮಾಣಗಳೆಂದು ವರ್ಣಿಸುತ್ತಾರೆ ಅಲ್ಲದೆ "ಅದರ ಸೀಮಾರೇಖೆಗಳು ಗತಕಾಲದ ಯುದ್ಧಗಳಲ್ಲಿನ ರಕ್ತದಿಂದ ಎಳೆಯಲಾಗಿದೆ" ಎಂದಿದ್ದಾರೆ. ಅವರ ಚರ್ಚೆಯ ಅನುಸಾರ "ಈ ಭೂಮಿಯ ಮೇಲೆ ಒಂದಕ್ಕಿಂತ ಹೆಚ್ಚು ವೈವಿಧ್ಯ ಆದರೆ ಒಟ್ಟಿಗೆ ಅಸ್ತಿತ್ವದಲ್ಲಿರುವ ಸಂಪ್ರದಾಯಗಳಿಗೆ ಮನೆಯಾಗದಿರುವ ಯಾವುದೇ ದೇಶವಿಲ್ಲ. ಸಾಂಸ್ಕೃತಿಕ ಆನುವಂಶಿಕ ಪ್ರಾಪ್ತಿಯು ರಾಷ್ಟ್ರೀಯ ಅನನ್ಯತೆಯ ಒಂದೇ ಸ್ವರೂಪವಲ್ಲ".[೩೭]

ರಾಷ್ಟ್ರೀಯತೆ ಮೂಲಸ್ವರೂಪದಲ್ಲಿ ಒಡಕುಂಟು ಮಾಡುತ್ತದೆ. ಏಕೆಂದರೆ ಇದು ತನ್ನ ಸ್ವಂತ ರಾಷ್ಟ್ರದ ಅನನ್ಯತೆಯನ್ನು ಹೋಲಿಸುವ ವ್ಯಕ್ತಿತ್ವಕ್ಕೆ ಪ್ರಾಧಾನ್ಯತೆ ನೀಡಿ ಜನರ ನಡುವಿನ ವ್ಯತ್ಯಾಸಗಳನ್ನು ಎತ್ತಿ ತೋರಿಸುತ್ತದೆ. ಈ ಕಲ್ಪನೆ ಸಂಭಾವ್ಯತವಾಗಿ ಕಠೋರವಾಗಿದೆ, ಕಾರಣ ಇದು ವ್ಯಕ್ತಿಯ ವೈಯುಕ್ತಿಕತೆಯನ್ನು ಒಂದು ಇಡಿ ರಾಷ್ಟ್ರದ ಕಲ್ಪನೆಯಲ್ಲಿ ಮುಳುಗಿಸುತ್ತದೆ, ಮತ್ತು ಸಮಾಜಶ್ರೇಷ್ಠರಿಗೆ ಅಥವಾ ರಾಜಕೀಯ ನಾಯಕರಿಗೆ ಸಮೂಹಗಳನ್ನು ಕುಶಲತೆಯಿಂದ ನಿರ್ವಹಿಸಲು ಅಥವಾ ನಿಯಂತ್ರಸಲು ಸಮರ್ಥ ಅವಕಾಶಗಳನ್ನು ನೀಡುತ್ತದೆ.[೩೮] ಆರಂಭದಲ್ಲಿನ ರಾಷ್ಟ್ರೀಯತೆಯ ವಿರೋಧಗಳು ಹೆಚ್ಚಾಗಿ ಪ್ರತಿ ರಾಷ್ಟ್ರಕ್ಕೆ ಒಂದು ಪ್ರತ್ಯೇಕ ರಾಜ್ಯ ಎಂಬ ಭೂ-ರಾಜಕೀಯ ಕಲ್ಪನೆಗೆ ಸಂಬಂಧಿತವಾಗಿತ್ತು. 19ನೇಯ ಶತಮಾನದ ಶ್ರೇಷ್ಠ ರಾಷ್ಟ್ರೀಯತೆಯ ಚಳುವಳಿಗಳು ಯುರೋಪ್‌ನಲ್ಲಿ ಬಹು-ಜನಾಂಗೀಯ ಸಾಮ್ರಾಜ್ಯಗಳ ಅಸ್ತಿತ್ವವನ್ನು ತಿರಸ್ಕರಿಸಿವೆ. ಆದಾಗ್ಯೂ, ಆರಂಭದ ಹಂತದಲ್ಲಿ ಕೂಡ ರಾಷ್ಟ್ರೀಯವಾದದ ಆದರ್ಶಾತ್ಮಕ ವಿಮರ್ಶಕರಿದ್ದರು. ಅದು ಪಶ್ಚಿಮ ಜಗತ್ತಿನಲ್ಲಿ ರಾಷ್ಟ್ರೀಯತೆಯ ವಿರುದ್ಧದ ಹಲವು ರೂಪಗಳಲ್ಲಿ ಬೆಳೆವಣಿಗೆಯಾಗಿತ್ತು. 20ನೇಯ ಶತಮಾನದ ಮುಸ್ಲಿಂ ಪುನರುಜ್ಜೀವನವು ಕೂಡ ರಾಷ್ಟ್ರ-ರಾಜ್ಯದ ಒಂದು ಇಸ್ಲಾಮಿಕ್ ರಾಜ್ಯ ಕಲ್ಪನೆಯ ಕುರಿತು ವಿಮರ್ಶಾತ್ಮಕತೆಯನ್ನು ಹುಟ್ಟುಹಾಕಿತು.

19ನೆಯ ಶತಮಾನದ ಕೊನೆಯ ಭಾಗದಲ್ಲಿ ಮಾರ್ಕ್‌ವಾದಿಗಳು ಮತ್ತು ಇತರ ಸಮಾಜವಾದಿಗಳು (ರೊಸಾ ಲಕ್ಸಂಬರ್ಗ್ ಅವರಂತಹ) ರಾಜಕೀಯ ವಿಶ್ಲೇಷಣೆಯನ್ನು ಉತ್ಪಾದಿಸಿದರು ಮತ್ತು ಅವು ಅಂದು ಮಧ್ಯ ಮತ್ತು ಪೂರ್ವ ಯೂರೋಪಿನ ಭಾಗದಲ್ಲಿ ಚಾಲ್ತಿಯಲ್ಲಿದ್ದ ರಾಷ್ಟ್ರೀಯವಾದಿ ಚಳುವಳಿಯ ವಿಮರ್ಶೆಗಳನ್ನು ಒಳಗೊಂಡಿದ್ದವು (ಆದಾಗ್ಯೂ ಲೆನಿನ್ (ಸಮತಾವಾದಿ) ಇಂದ ಜೋಸೆಫ್ ಪಿಸುಡ್ಸ್ಕಿ (ಸಮಾಜವಾದಿ) ವರೆಗಿನ ಇತರ ಸಮಕಾಲೀನ ಸಮಾಜವಾದಿಗಳ ಮತ್ತು ಸಮತಾವಾದಿಗಳ ವೈವಿಧ್ಯತೆಯು ರಾಷ್ಟ್ರೀಯ ಸ್ವ-ನಿರ್ಧಾರಕ್ಕೆ ಹೆಚ್ಚು ಸ್ನೇಹಪರವಾಗಿದ್ದವು.[೩೯] ರಾಷ್ಟ್ರೀಯತೆಯ ಹಲವು ಸಾಮಾಜಿಕ ಸಿದ್ಧಾಂತಗಳು ಎರಡನೇಯ ವಿಶ್ವ ಯುದ್ಧದ ನಂತರದಿಂದ ಉಂಟಾಗಿವೆ.

ಉದಾರ ರಾಜಕೀಯ ಸಂಪ್ರದಾಯದಲ್ಲಿ ’ರಾಷ್ಟ್ರೀಯತೆ’ಯು ಒಂದು ಅಪಾಯಕಾರಿ ಶಕ್ತಿ ಮತ್ತು ರಾಷ್ಟ್ರ-ರಾಜ್ಯಗಳ ನಡುವೆ ಭಿನ್ನಾಭಿಪ್ರಾಯ ಹಾಗೂ ಯುದ್ಧದ ಕಾರಣವೆಂದು ವ್ಯಾಪಕವಾದ ವಿಮರ್ಶೆ ಇದೆ. ನಾಗರಿಕರು ರಾಷ್ಟ್ರದ ಭಿನ್ನಾಭಿಪ್ರಾಯದಲ್ಲಿ ಭಾಗವಹಿಸಬೇಕೆಂದು ಪ್ರೋತ್ಸಾಹಿಸಲು ರಾಷ್ಟ್ರೀಯತೆ ಹಲವು ಬಾರಿ ಶೋಷಣೆಗೆ ಒಳಗಾಗಿದೆ. ದ ಗ್ರೇಟ್ ವಾರ್ ಹಾಗೂ ವರ್ಲ್ಡ್ ವಾರ್ ಟು ಅಂತಹ ಉದಾಹರಣೆಗಳು ಒಳಗೊಂಡಿವೆ, ಇಲ್ಲಿ ಪ್ರಚಾರ ಕಾರ್ಯದಲ್ಲಿ ರಾಷ್ಟ್ರೀಯತೆ ಒಂದು ಪ್ರಮುಖ ಅಂಶವಾಗಿತ್ತು. ಉದಾರಿಗಳು ಸಾಮಾನ್ಯವಾಗಿ ರಾಷ್ಟ್ರ-ರಾಜ್ಯಗಳ ಅಸ್ತಿತ್ವವನ್ನು ವಾದಿಸುವುದಿಲ್ಲ. ಉದಾರಿ ವಿಮರ್ಶಾತ್ಮಕ ಲೇಖನವು ಕೂಡ ರಾಷ್ಟ್ರೀಯ ಸ್ವರೂಪದ ವಿರುದ್ಧ ವೈಯುಕ್ತಿಕ ಸ್ವಾತಂತ್ರ್ಯೆಕ್ಕೆ ಪ್ರಾಧಾನ್ಯ ನೀಡುತ್ತದೆ, ಇದು ವ್ಯಾಖ್ಯಾನದಲ್ಲಿ ಸಂಗ್ರಹಿತ ಎಂದಿದೆ (ಸಂಗ್ರಹಿಕಾತ್ಮತೆ ನೋಡಿ).

ರಾಷ್ಟ್ರೀಯತೆಯ ಶಾಂತಿಪ್ರಿಯ ವಿಮರ್ಶಕ ಲೇಖನ ರಾಷ್ಟ್ರೀಯತೆಯ ಚಳುವಳಿಗಳ ಹಿಂಸೆ, ಮಿಲಿಟರಿತನ, ಹಾಗೂ ಅತಿರೇಕದ ರಾಷ್ಟ್ರಪ್ರೇಮಿ ಅಥವಾ ದುರಭಿಮಾನದಿಂದ ಪ್ರೇರಿತ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯಗಳ ಮೇಲೂ ಗಮನ ಹರಿಸುತ್ತದೆ. ಕೆಲವು ದೇಶಗಳಲ್ಲಿ ವಿಶೇಷವಾಗಿ ಜರ್ಮನಿಯಲ್ಲಿ ರಾಷ್ಟ್ರೀಯ ಚಿನ್ಹೆಗಳು ಹಾಗೂ ದೇಶಭಕ್ತಿಯ ಒತ್ತಿಹೇಳುವಿಕೆಗಳನ್ನು ತಮ್ಮ ಗತಕಾಲದ ಯುದ್ಧಗಳ ಐತಿಹಾಸಿಕ ಸಂಪರ್ಕದ ಕಾರಣ ಬೆಂಬಲಿಸುವುದಿಲ್ಲ. ಪ್ರಚಲಿತ ಶಾಂತಿಪ್ರಿಯ ಬರ್ಟ್ರಾಂಡ್ ರಸ್ಸೆಲ್‌ರು ರಾಷ್ಟ್ರೀಯತೆಯನ್ನು ಖಂಡಿಸುತ್ತದೆ, ಕಾರಣ ಇದು ವೈಯುಕ್ತಿಕರ ತಮ್ಮ ಪಿತೃಭೂಮಿಯ ವಿದೇಶೀ ನೀತಿಯನ್ನು ತೀರ್ಮಾನಿಸುವುದರ ಸಾಮರ್ಥ್ಯವನ್ನು ಅಳಿಸುತ್ತದೆ.[೪೦] ವಿಲಿಯಂ ಬ್ಲಮ್ ಬೇರೆ ಪದಗಳಲ್ಲಿ ಹೀಗೆ ಹೇಳಿದ್ದಾರೆ: "ಪ್ರೀತಿ ಕುರುಡಾಗಿದ್ದರೆ, ದೇಶಭಕ್ತಿ ತನ್ನ ಎಲ್ಲ ಐದು ಇಂದ್ರಿಯ ಶಕ್ತಿಗಳನ್ನು ಕಳೆದುಕೊಂಡಿದೆ."[೪೧][page needed] ಆಲ್ಬರ್ಟ್ ಐನ್‌ಸ್ಟೈನ್ ಹೇಳಿದ್ದು: "ರಾಷ್ಟ್ರೀಯತೆ ಒಂದು ಕೂಸುಗಳ ರೋಗವಿದ್ದಂತೆ... ಇದು ಮನುಷ್ಯತ್ವದ ದಡಾರ." [೪೨]

ರಾಷ್ಟ್ರೀಯತೆಯ ವರ್ಣ-ವಿರೋಧಿ ವಿಮರ್ಶಾತ್ಮಕ ಲೇಖನ ಇತರ ರಾಷ್ಟ್ರಗಳತ್ತದ ಮನೋಭಾವಕ್ಕೆ ಏಕಾಗ್ರ ಗಮನ ಹರಿಸುತ್ತದೆ, ಹಾಗೂ ವಿಶೇಷವಾಗಿ ಒಂದು ರಾಷ್ಟ್ರೀಯ ಗುಂಪಿನ ಇತರರಿಂದ ಬಹಿಷ್ಕರಣೆಗೆ ರಾಷ್ಟ್ರ-ರಾಜ್ಯದ ಬೋಧನೆ ಅಸ್ತಿತ್ವದಲ್ಲಿರುತ್ತದೆ ಎಂಬ ಮನೋಭಾವ. ಈ ದೃಷ್ಟಿಕೋನ ರಾಷ್ಟ್ರೀಯತಾ ಮೃದುಭಾವನೆಯಿಂದ ಹಲವು ಬಾರಿ ಪರಿಣಮಿಸಿದ ದುರಭಿಮಾನ ಹಾಗೂ ಅನ್ಯ ದ್ವೇಷಕ್ಕೆ ಪ್ರಾಧಾನ್ಯ ನೀಡುತ್ತದೆ. ರಾಷ್ಟ್ರೀಯತೆಯ ಉದ್ಭವವನ್ನು ಜನಾಂಗೀಯ ಶುಚಿಗೊಳಿಸುವಿಕೆ ಹಾಗೂ ಜನಾಂಗ ಹತ್ಯೆಗೆ ನಾರ್ಮನ್ ನೈಮಾರ್ಕ್ ಸಂಬಂಧಿಸುತ್ತಾರೆ. ಇದರಲ್ಲಿ ಅಮೇರಿಕಾದ ಜನಾಂಗ ಹತ್ಯೆ, ನಾಜಿ ಸಾಮೂಹಿಕ ಹತ್ಯಾಕಾಂಡ, ಸ್ಟಾಲಿನ್ ಅಡಿಯಲ್ಲಿ ಚೆಚ್ಚನಿಯರ ಹಾಗೂ ಚ್ರೈಮೆನ್ ಟಾರ್ಟರರ ದೇಶಾಂತರ ಕಳುಹಿಸುವಿಕೆ, ಎರಡನೇಯ ವಿಶ್ವ ಯುದ್ಧದ ಅಂತ್ಯದಲ್ಲಿ ಪೋಲ್ಯಾಂಡ್ ಹಾಗೂ ಚೆಕೋಸ್ಲೊವಾಕಿಯದಿಂದ ಜರ್ಮನರ ಹೊರಡೂಡುವಿಕೆ, ಮತ್ತು 1990ರ ಯುಗೊಸ್ಲಾವ್ ಯುದ್ಧಗಳ ಸಮಯದ ಜನಾಂಗೀಯ ಶುಚಿಗೊಳಿಸುವಿಕೆ ಒಳಗೊಂಡಿದೆ.[೪೩]

ಎಡ ರಾಜಕೀಯ ಚಳುವಳಿಗಳು ಹಲವು ಬಾರಿ ರಾಷ್ಟ್ರೀಯತೆಯ ಸಂದೇಹ ಹುಟ್ಟಿಸುವಂತಿದೆ, ಮತ್ತೆ ಅಸ್ತಿತ್ವದಲ್ಲಿರುವ ರಾಷ್ಟ್ರ-ರಾಜ್ಯಗಳ ಅದೃಶ್ಯವಾಗುವಿಕೆಯನ್ನು ಹುಡುಕುವ ಅಗತ್ಯವಿಲ್ಲದಂತೆ. ಮಾರ್ಕ್ಸ್‌ವಾದ ರಾಷ್ಟ್ರ-ರಾಜ್ಯದತ್ತ ಅಸ್ಪಷ್ಟವಾಗಿದೆ, ಹಾಗೂ 19ನೇಯ ಶತಮಾನದ ಅಂತ್ಯದಲ್ಲಿ ಕೆಲವು ಮಾರ್ಕಸಿಸ್ಟ್ ಸಿದ್ಧಾಂತಗಳು ಸಂಪೂರ್ಣವಾಗಿ ತಿರಸ್ಕರಿಸಲಾಯಿತು. ಕೆಲವು ಮಾರ್ಕಸಿಸ್ಟ್‌ಗಳಿಗೆ ವಿಶ್ವ ಕ್ರಾಂತಿ ಒಂದು ವಿಶ್ವವ್ಯಾಪಕ ರಾಜ್ಯದ (ಅಥವಾ ವಿಶ್ವವ್ಯಾಪಕ ರಾಜ್ಯದ ಗೈರುಹಾಜರಿ) ಅರ್ಥಕೊಡುತ್ತದೆ; ಇನ್ನು ಇತರರಿಗೆ ಇದರ ಅರ್ಥ ಪ್ರತಿ ರಾಷ್ಟ್ರ-ರಾಜ್ಯ ತನ್ನ ಸ್ವಂತ ಕ್ರಾಂತಿಯನ್ನು ಹೊಂದಿತ್ತು. ಈ ಸಂದರ್ಭದಲ್ಲಿ ಒಂದು ಪ್ರಮುಖ ಘಟನೆ ಎಂದರೆ ಯುರೋಪ್‌ನಲ್ಲಿ ಅಡ್ಡವಾದ-ಸೀಮಾ ಕಾರ್ಮಿಕರನ್ನು ವಿಶ್ವ ಯುದ್ಧ I ರ ವಿರುದ್ಧ ಚಲಿಸುವಂತೆ ಮಾಡುವ ಸಾಮಾಜಿಕ-ಪ್ರಜಾಪ್ರಭುತ್ವೀಯ ಹಾಗೂ ಸಮಾಜವಾದಿ ಚಳುವಳಿಗಳ ವಿಫಲತೆ. ಪ್ರಸ್ತುತ ಹೆಚ್ಚು, ಆದರೆ ನಿರ್ಧಿಷ್ಟವಾಗಿ ಎಲ್ಲವಲ್ಲ, ಎಡ-ಘಟಕ ಗುಂಪುಗಳು ರಾಷ್ಟ್ರ-ರಾಜ್ಯವನ್ನು ಸ್ವೀಕರಿಸಿದೆ, ಹಾಗೂ ತನ್ನ ಚಟುವಟಿಕೆಗಳಿಗೆ ಇದನ್ನು ರಾಜಕೀಯ ರಣರಂಗ ಎಂದು ನೋಡುತ್ತಾರೆ.

ರಾಜ್ಯದ ಶಕ್ತಿ ಹಾಗೂ ಪ್ರಾಬಲ್ಯವನ್ನು ಸಮರ್ಥಿಸಿಕೊಳ್ಳುವ ಹಾಗೂ ಕ್ರೋಢೀಕರಿಸುವ ತನ್ನ ಪಾತ್ರದಲ್ಲಿ ಕೇಂದ್ರೀಕ್ರತವಾಗಿ ಅರಾಜಕತಾವಾದ ರಾಷ್ಟ್ರೀಯತೆಯ ಒಂದು ವಿಮರ್ಶಾತ್ಮಕ ಲೇಖನವನ್ನು ವೃದ್ಧಿಸಿದೆ. ತನ್ನ ಒಗ್ಗೂಡಿಸುವ ಗುರಿಯ ಮೂಲಕ ಅದು ನಿರ್ಧಿಷ್ಟ ಕ್ಷೇತ್ರಗಳಲ್ಲಿ ಹಾಗೂ ಪ್ರತ್ಯೇಕ ಆಡಳಿತ ನಡೆಸುವ ಸಮಾಜಶ್ರೇಷ್ಠರಲ್ಲಿ ಕೇಂದ್ರೀಕರಣಕ್ಕೆ ಶ್ರಮಿಸುತ್ತದೆ, ಹಾಗೆಯೆ ಒಂದು ಜನಸಂಖ್ಯೆಯನ್ನು ಬಂಡವಾಳಗಾರ ಶೋಷಿಸುವಿಕೆಗೆ ಕೂಡ ಸಿದ್ಧವಾಗುತ್ತದೆ. ರುಡೊಲ್ಫ್ ರೊಕರ್‌ ಅವರ ರಾಷ್ಟ್ರೀಯತೆ ಹಾಗೂ ಸಂಪ್ರದಾಯ ದಲ್ಲಿ ಮತ್ತು ಫ್ರೆಡಿ ಪರ್ಲ್‌ಮ್ಯಾನ್‌ರ ಕೃತ್ಯಗಳಾದ ಅಗೇಂಸ್ಟ್ ಹಿಸ್-ಸ್ಟೋರಿ, ಅಗೇಂಸ್ಟ್ ಲಿವೈಯಥನ್ ಹಾಗೂ "ದ ಕಂಟಿನ್ಯೂಯಿಂಗ್ ಅಪೀಲ್ ಒಫ್ ನ್ಯಾಷ್ನಲಿಸಮ್"ರಲ್ಲಿ ಅರಾಜಕತಾವಾದ ವಿಷಯದ ಒಳಗೆ ಇದನ್ನು ವಿಶೇಷವಾಗಿ ಪ್ರತಿಪಾದಿಸಲಾಗಿದೆ.

ಪಾಶ್ಚ್ಯಾತ ವಿಶ್ವದಲ್ಲಿ, ರಾಷ್ಟ್ರೀಯತೆಗೆ ಅತಿ ವ್ಯಾಪ್ತವಾದ ಪ್ರಸ್ತುತ ವಿಚಾರಪರಂಪರೆಯ ಪರ್ಯಾಯವು ಸರ್ವರಾಷ್ಟ್ರಪ್ರೇಮಿತತ್ವ. ಜನಾಂಗೀಯ ಸರ್ವರಾಷ್ಟ್ರಪ್ರೇಮಿ ತತ್ವವು ರಾಷ್ಟ್ರೀಯತೆಯ ಒಂದು ಮೂಲ ಜನಾಂಗೀಯ ಸಿದ್ಧಾಂತವನ್ನು ತಿರಸ್ಕರಿಸುತ್ತದೆ: ಅದು ಏನೆಂದರೆ ಮನುಷ್ಯಯರು ರಾಷ್ಟ್ರದ ತಮ್ಮ ಸಹ ಒಡನಾಡಿಯತ್ತ ಹೆಚ್ಚು ಕರ್ತವ್ಯ ಬದ್ಧನಾಗಿರಬೇಕು ಹಾಗೂ ಸದಸ್ಯರಲ್ಲದವರತ್ತ ಅಲ್ಲ. ಇದು ರಾಷ್ಟ್ರೀಯ ಸ್ವಸ್ವರೂಪ ಹಾಗೂ ರಾಷ್ಟ್ರೀಯ ನಿಷ್ಠೆ ಅಂತಹ ಮುಖ್ಯ ರಾಷ್ಟ್ರೀಯತಾವಾದಿ ಮೌಲ್ಯಗಳನ್ನು ತಿರಸ್ಕರಿಸುತ್ತದೆ. ಹೇಗಿದ್ದರೂ, ಇಲ್ಲಿ ಒಂದು ರಾಜಕೀಯ ಸರ್ವರಾಷ್ಟ್ರಪ್ರೇಮಿ ತತ್ವ ಕೂಡ ಇದೆ, ಇದರಲ್ಲಿ ರಾಷ್ಟ್ರೀಯತೆಗೆ ಹೋಲುವ ಒಂದು ಭೂರಾಜಕೀಯ ಕಾರ್ಯಕ್ರಮ ಕೂಡ ಇದೆ: ಇದು ಒಂದು ವಿಶ್ವ ಸರ್ಕಾರದ ಜೊತೆಗೆ ಒಂದು ರೂಪದ ವಿಶ್ವ ರಾಜ್ಯವನ್ನು ಕೂಡ ಹುಡುಕುತ್ತದೆ. ಬಹಳ ಕಡಿಮೆ ಜನರು ಪ್ರಕಟವಾಗಿ ಹಾಗೂ ಸ್ಪಷ್ಟವಾಗಿ ಒಂದು ವಿಶ್ವವ್ಯಾಪಕ ರಾಜ್ಯದ ಸ್ಥಾಪನೆಯನ್ನು ಬೆಂಬಲಿಸುತ್ತಾರೆ, ಆದರೆ ರಾಜಕೀಯ ಸರ್ವರಾಷ್ಟ್ರಪ್ರೇಮಿ ತತ್ವವು ಅಂತರರಾಷ್ಟ್ರೀಯ ಅಪರಾಧಿ ನಿಯಮದ ಬೆಳೆವಣಿಗೆ, ಹಾಗೂ ರಾಷ್ಟ್ರೀಯ ಸಾರ್ವಭೌಮತ್ವದ ಪ್ರತಿಷ್ಟೆಯನ್ನು ಭೂಸವೆತಕೆ ಪ್ರಭಾವ ಬೀರಿದೆ. ಇದಕ್ಕೆ ಪ್ರತಿಯಾಗಿ, ರಾಷ್ಟ್ರೀಯತಾವಾದಿಗಳು ಸರ್ವರಾಷ್ಟ್ರಪ್ರೇಮಿಗಳ ಮನೋಭಾವಗಳ ಬಗ್ಗೆ ತೀವ್ರ ಸಂಶಯ ಪಡುತ್ತಾರೆ, ಇದನ್ನು ಅವರು ವಿವಿಧ ರಾಷ್ಟ್ರೀಯ ಸಂಪ್ರದಾಯಗಳ ನಿರ್ಮೂಲನೆಯ ಜೊತೆಗೆ ಸಮನಾಗಿ ಹೋಲಿಸುತ್ತಾರೆ.

ಅಂತರರಾಷ್ಟ್ರೀಯತೆ ಸರ್ವರಾಷ್ಟ್ರಪ್ರೇಮಿತತ್ವದ ಸಂದರ್ಭದಲ್ಲಿ ವ್ಯಾಖ್ಯಾನದ ಅನುಸಾರ ರಾಷ್ಟ್ರಗಳ ಹಾಗೂ ರಾಜ್ಯಗಳ ನಡುವೆ ಸಹಕರಣೆಯನ್ನು ವ್ಯಕ್ತಗೊಳಿಸಿದರೆ, ಹೀಗೆ ರಾಷ್ಟ್ರಗಳ ಅಸ್ತಿತ್ವವಿರುತ್ತದೆ, ಕಾರ್ಮಿಕವರ್ಗದ ಅಂತರರಾಷ್ಟ್ರೀಯತೆ ವಿವಿಧವಾಗಿರುತ್ತದೆ. ಇದರಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ವರ್ಗದವರಿಗೆ ಇತರ ದೇಶಗಳ ತಮ್ಮ ಸಹೋಧರರನ್ನು ಅನುಸರಿಸಲು ಹಾಗೂ ಒಂದು ನಿರ್ಧಿಷ್ಟ ವರ್ಗದ ಕಾರ್ಯಕ್ಷೇತ್ರದವರು ತಮ್ಮ ರಾಷ್ಟ್ರೀಯ ಸರ್ಕಾರದ ಚಟುವಟಿಕೆಗಳು ಅಥವಾ ಒತ್ತಡಗಳನ್ನು ಪರಿಗಣಿಸದ ಒಗ್ಗೂಡಲು ಕರೆಯಲಾಗಿದೆ. ಇದೆ ಸಮಯದಲ್ಲಿ, (ಎಲ್ಲರಲ್ಲದಿದ್ದರೂ) ಹಲವೂ ಅರಾಜಕತಾವಾದಿಗಳು ಬಹುಪಾಲು ಸಾಮಾಜಿಕ ವರ್ಗದ ಆತ್ಮ ಸಂಕಲ್ಪದ ಆಧರದ ಮೇಲೆ ರಾಷ್ಟ್ರ-ರಾಜ್ಯಗಳನ್ನು ತಿರಸ್ಕರಿಸಿದ್ದಾರೆ. ರಾಷ್ಟ್ರಗಳ ಬದಲಾಗಿ ಅರಾಜಕತಾವಾದಿಗಳು ಸಾಮಾನ್ಯವಾಗಿ ಮುಕ್ತ ಸಾಹಚರ್ಯ ಹಾಗೂ ಪರಸ್ಪರ ಸಹಾಯದ ಆಧಾರದ ಮೇಲೆ ಜನಾಂಗೀಯತೆ ಅಥವಾ ವರ್ಣದ ಸಂಬಂಧವಿಲ್ಲದೆ ಸಹಕಾರಿ ಸಮಾಜಗಳ ಸೃಷ್ಟಿಸುವಿಕೆಯ ಪಕ್ಷ ವಹಿಸುತ್ತಾರೆ.

ಟಿಪ್ಪಣಿಗಳು

[ಬದಲಾಯಿಸಿ]
 1. Smith, Anthony D. (1993). National Identity. Reno: University of Nevada Press. ISBN 0874172047.[ಶಾಶ್ವತವಾಗಿ ಮಡಿದ ಕೊಂಡಿ]
 2. Kymlicka, Will. (1995). Multicultural Citizenship: A Liberal Theory of Minority Rights. Oxford: Oxford University Press. ISBN 0198290918.
 3. Smith, Anthony D. (1993). National Identity. Reno: University of NevadaPress. p. 72. ISBN 0874172047.[ಶಾಶ್ವತವಾಗಿ ಮಡಿದ ಕೊಂಡಿ]
 4. ಅರ್ನೆಸ್ಟ್ ಗೆಲ್ನೆರ್ ಮತ್ತು ಜಾನ್ ಬ್ರೆಯುಲಿ, ರಾಷ್ಟ್ರಗಳು ಮತ್ತು ರಾಷ್ಟ್ರೀಯತೆಯನ್ನು "ವಿವರವಾಗಿ ಹೇಳುವುದಾದರೆ, ರಾಷ್ಟ್ರೀಯತೆಯು ರಾಜಕೀಯ ವಿಧಿಯ ಸಿದ್ಧಾಂತ, ಅದು ಜನಾಂಗೀಯ ಗಡಿಗಳನ್ನು ರಾಜಕೀಯದಿಂದ ಅಡ್ಡವಾಗಿ ಕತ್ತರಿಸುವುದಿಲ್ಲ" ಕೊರ್ನೆಲ್ ವಿಶ್ವವಿದ್ಯಾಲಯ ವರದಿ, 2009, ISBN 978-0-8014-7500-9
 5. ಥಾಮಸ್ ಬ್ಲಾಂಕ್ ಪಿಟರ್ ಶ್ಮಿಥ್, ಸಂಯುಕ್ತ ಜರ್ಮನಿಯಲ್ಲಿ ರಾಷ್ಟ್ರೀಯ ಗುರುತು: ರಾಷ್ಟ್ರೀಯತೆ ಅಥವಾ ರಾಷ್ಟ್ರಪ್ರೇಮ ರಾಜಕೀಯ ಮನೋವಿಜ್ಞಾನ ದಲ್ಲಿ ವಿವರಣಾತ್ಮಕ ಪರೀಕ್ಷೆಯೊಂದಿಗೆ ಪ್ರತಿನಿಧಿ ದತ್ತಾಂಶ ಸಂಪುಟ ೨೪, ಸಂಖ್ಯೆ ೨, (2003)
 6. Anderson, Benedict (1991). Imagined Communities: Reflections on the Origin and Spread of Nationalism. New York: Verso. pp. 37–46. ISBN 978-0860915461.
 7. Hutchinson, John and Smith, Anthony D., ed. (1994). Nationalism. Oxford Readers. Oxford: Oxford University Press. pp. 4–5.{{cite book}}: CS1 maint: multiple names: editors list (link)
 8. ಅಂಥೋನಿ ಡಿ. ಸ್ಮಿಥ್, ನ್ಯಾಶನಲಿಸಮ್ , p. 17-20, ಪಾಲಿಟಿ, 2002 ISBN 978-0-7456-2659-8.
 9. Billig, Michael (1995). Banal Nationalism. London: Sage. ISBN 0803975252.
 10. Gellner, Ernest (2005). [http:// books.google.com/?id=jl7t2yMfxwIC Nations andNationalism] (Second ed.). Blackwell. ISBN 1405134429. {{cite book}}: Check |url= value (help)
 11. Canovan, Margaret (1996). Nationhood and Political Theory. Cheltenham: Edward Elgar. ISBN 1840640111.[ಶಾಶ್ವತವಾಗಿ ಮಡಿದ ಕೊಂಡಿ]
 12. Miller, David (1995). On Nationality. Oxford: Oxford University Press. ISBN 0198293569.[ಶಾಶ್ವತವಾಗಿ ಮಡಿದ ಕೊಂಡಿ]
 13. ಅರ್ನೆಸ್ಟ್ ಗೆಲ್ನೆರ್ ಮತ್ತು ಜಾನ್ ಬ್ರೆಯುಲಿ, ನೇಷನ್ಸ್ ಅಂಡ್ ನ್ಯಾಷನಲಿಸಂ , ಪಿ. xvii, ಕೊರ್ನೆಲ್ ಯುನಿವರ್ಸಿಟಿ ಪ್ರೆಸ್, 2009, ISBN 978-0-8014-7500-9
 14. Richard D. Ashmore, Lee J. Jussim, David Wilder; Jussim, Lee J; Wilder, David (2001). Social identity, intergroup conflict, and conflict reduction; Volume 3 of Rutgers series on self and social identity. Oxford University Press. pp. 74, 75. ISBN 9780195137422. {{cite book}}: More than one of |author1= and |author= specified (help)CS1 maint: multiple names: authors list (link)
 15. Istvan Hont (2005). Jealousy of trade: international competition and the nation-state in historical perspective. Harvard University Press. p. 144. ISBN 9780674010383.
 16. ೧೬.೦ ೧೬.೧ com/EBchecked /topic/405644/nationalism "Nationalism". Encyclopedia Britannica. Retrieved 2009-12-06. {{cite web}}: Check |url= value (help)[ಶಾಶ್ವತವಾಗಿ ಮಡಿದ ಕೊಂಡಿ]
 17. Smith, Anthony D. (1998). [http:// books. google.com/?id=4O0w3ZH57KkC Nationalism and Modernism: A Critical Survey of Recent Theories of Nations and Nationalism]. London: Routledge. ISBN 0415063418. {{cite book}}: Check |url= value (help)
 18. "ಫ್ರೆಂಚ್ ಕ್ರಾಂತಿ ...ಯನ್ನು ಇಯನ್ ಮೈಕೆಲಿನ್, ಅಲಿಸ್ಟೈರ್ ಮ್ಯಾಕ್‌ಮಿಲನ್,, ರಾಜಾಕೀಯ ಆಕ್ಸ್‌ಫರ್ಡ್ ಶಬ್ದಕೋಶದಲ್ಲಿ ಸೇರಿಸಿದ್ದರೆ. ಇದು ರಾಷ್ಟ್ರೀಯತೆಯ ಆಧುನಿಕ ತತ್ವವನ್ನು ರೂಪಿಸಿ, ಮತ್ತು ನೇರವಾಗಿ ಪಶ್ಚಿಮ ಯುರೋಪ್‌ನಾದ್ಯಂತ ವಿಸ್ತರಿಸಿದೆ...",ಆಕ್ಸ್‌ಫರ್ಡ್, 2009, ISBN 978-0-19-920516-5.
 19. T. C. W. Blanning (2003). The Culture of Power and the Power of Culture: Old Regime Europe 1660-1789. Oxford University Press. pp. 259, 260. ISBN 9780199265619.
 20. ೨೦.೦ ೨೦.೧ ಲ್ಯಾಕ್ಯೂಯೆರ್,ವಾಲ್ಟೆರ್." ಜುವನ್ ಜೆ. ಲಿನ್ಜ್ ರಿಂದ ನಿರಂಕುಶ ಪ್ರಭುತ್ವದ ಹೋಲಿಕೆಯ ಅಧ್ಯಯನ, ನಿರಂಕುಶತ್ವ, ಒಂದು ಓದುಗರ ದಿಕ್ಸೂಚಿ: ವಿಶ್ಲೇಷಣೆಗಳು, ನಿರೂಪಣೆಗಳು, ಗ್ರಂಥಸೂಚಿ. ಬರ್ಕೆಲಿ ಮತ್ತು ಲಾಸ್ ಅನ್‌ಜೆಜಿಸ್: ಕ್ಯಾಲಿಪೋರ್ನಿಯ ವಿಶ್ವವಿದ್ಯಾಲಯದ ವರದಿ, 1976. Pp. 15 " ನಿರಂಕುಶತ್ವವು ಮೇಲಿನ ಎಲ್ಲಾ ರಾಷ್ಟ್ರೀಯ ಚಳುವಳಿಗಳು ಮತ್ತು ಆದ್ದರಿಂದ ರಾಷ್ಟ್ರದಲ್ಲಿ ಎಲ್ಲೇ ಅದರೂ ಮತ್ತು ರಾಜ್ಯ ಬಲವಾಗಿ ಗುರುತಿಸಿಕೊಂಡಿವೆ."
 21. ೨೧.೦ ೨೧.೧ ಲ್ಯಾಕ್ಯೂಯೆರ್, ವಾಲ್ಟೆರ್. ನಿರಂಕುಶತ್ವ: ಭೂತ, ವರ್ತಮಾನ, ಭವಿಷ್ಯ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ, 1997. Pp. 90. "ರಾಷ್ಟ್ರೀಯತೆಯಲ್ಲಿ ಸಾಮಾನ್ಯ ನಂಬಿಕೆ, ಶ್ರೇಣಿಕೃತ ರಚನೆಗಳು, ಮತ್ತು ನಾಯಕತ್ವದ ಗುಣಗಳು."
 22. ೨೨.೦ ೨೨.೧ "ರಾಷ್ಟ್ರೀಯ ಸಮಾಜವಾದದ ಮೇಲೆ ಗೊಬ್ಬೆಲ್ಸ್, ಬೊಲ್‌ಶೆವಿಸಂ ಮತ್ತು ಪ್ರಜಾಪ್ರಭುತ್ವ, ವಿದೇಶಿ ವ್ಯವಹಾರಗಳ ಮೇಲಿನ ದಾಖಲೆಗಳು , ಸಂಪುಟ. II, 1938, pp. 17-19. ಫೆಬ್ರವರಿ 5 , 2009ರಲ್ಲಿ ಜೆವಿಶ್ ವರ್ಚುಯಲ್ ಗ್ರಂಥಾಲಯದಿಂದ ಪ್ರವೇಶ ಮಾಡಲಾಯಿತು. [೧] ನಾಜಿಗಳು ರಾಷ್ಟ್ರಗಳೊಂದಿಗೆ ಹೊಂದಣಿಕೆಮಾಡಿಕೊಳ್ಳುವುದನ್ನು ಜೊಸೆಫ್ ಗೊಬ್ಬೆಲ್ಸ್ ವಿವರಿಸಿದ "ಅಧಿಕಾರಶಾಹಿ ರಾಷ್ಟ್ರ" ರಾಜ್ಯದ ಸಿದ್ಧಾಂತ ಮತ್ತು ಭಾವನೆ " ಇದು ನಮಗೆ ಪ್ರಜಾಪ್ರಭುತ್ವ ಮತ್ತು ಸಾಮಾಜವಾದಿತನವು ಪ್ರಪಂಚದಲ್ಲಿ ಓಟ್ಟಿಗೆ ಇದ್ದರೂ ಒಂದನ್ನೊಂದು ವಿರೋಧಿಸುತ್ತ, ಮಾರ್ಪಡಿಸಲಾಗದ ಪರಸ್ಪರ ವಿರೋಧ ಸ್ಥಿತಿಯಲ್ಲಿವೆ ಮತ್ತು ಸರ್ವಾಧಿಕಾರ ರಾಷ್ಟ್ರಗಳ ಭಾವನೆಗಳು ಮತ್ತು ಪದ್ದತಿಗಳ ಮೇಲೆ ದಾಳಿ ನಡೆಸುತ್ತವೆ. ಸರ್ವಾಧಿಕಾರಿ ರಾಷ್ಟ್ರದ ರಾಜ್ಯ ಪ್ರತಿನಿಧಿ ಭಾವನೆಗಳು ಪ್ರಮುಖವಾಗಿ ಹೊಸದಾಗಿರುತ್ತವೆ. ಫ್ರೆಂಚ್ ಕ್ರಾಂತಿಯಲ್ಲಿ ಇದನ್ನು ಹೊರಗಿಡಲಾಗಿತ್ತು."
 23. ಕೊಲನ್, ಹ್ಯನ್ಸ್; ಕ್ಯಾಲ್‌ಹೌನ್, ಕ್ರೈಗ್. ದ ಐಡಿಯಾ ಆಫ್ ನ್ಯಾಶನಲಿಸಮ್: ಎ ಸ್ಟಡಿ ಇನ್ ಇಟ್ಸ್ ಒರಿಜಿನ್ಸ್ ಅಂಡ್ ಬ್ಯಾಕ್‌ಗ್ರೌಂಡ್. ಟ್ರಾನ್ಸ್ಯಾಕ್ಷನ್ ಪಬ್ಲಿಶರ್ಸ್ Pp 20.
  ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ. 1942. ಜರ್ನಲ್ ಆಫ್ ಸೆಂಟ್ರಲ್ ಯೂರೋಪಿಯನ್ ಅಫೇರ್ಸ್ ಸಂಪುಟ 2.
 24. ಸ್ಮಿಥ್, ಅನ್‌ಥೋನಿ ಡಿ. 1986 ದ ಎಥ್ನಿಕ್ ಒರಿಜಿನ್ಸ್ ಆಫ್ಹ್ ನೇಶನ್ಸ್ ಲಂಡನ್: ಬಾಸಿಲ್ ಬ್ಲಾಕ್‌ವೆಲ್. pp 6–18. ISBN 0-521-22515-9.
 25. ೨೫.೦ ೨೫.೧ Nash, Kate (2001). The Blackwell companion to political sociology. Wiley-Blackwell. p. 391. ISBN 0631210504.
 26. Bar-Haim, Yair (2008). "Nature and Nurture in Own-Race Face Processing". Psychological Science. 17 (2): 159–163. doi:10.1111/j.1467-9280.2006.01679.x. PMID 16466424. {{cite journal}}: Unknown parameter |coauthors= ignored (|author= suggested) (help)[ಶಾಶ್ವತವಾಗಿ ಮಡಿದ ಕೊಂಡಿ]
 27. Timothy G. Reagan (2005). Non-Western Educational Traditions: Indigenous Approaches to Educational Thought and Practice. Routledge. pp. 4–5. ISBN 9780805848571. {{cite book}}: Unknown parameter |DUPLICATE DATA: isbn= ignored (help)
 28. "ಪೊಲಿಟಿಕಲ್ ಸೈನ್ಸ್, ಸಂಪುಟ 35, ಸಂಚಿಕೆ 2; ಕ್ಲಾಸ್ ಅಂಡ್ ನೇಶನ್: ಪ್ರಾಬ್ಲೆಮ್ಸ್ ಆಫ್ ಸೋಶಿಯಲಿಸ್ಟ್ ನ್ಯಾಶನಲಿಸಮ್". Archived from the original on 2017-10-19. Retrieved 2021-08-10.
 29. ಮಿಡಲ್ ಈಸ್ಟ್ ಅಂಡ್ ನಾರ್ಥ್ ಆಫ್ರಿಕಾ: ಚಾಲೆಂಜ್ ಟು ವೆಸ್ಟರ್ನ್ ಸೆಕ್ಯುರಿಟಿ ಬರೆದವರು ಪಿಟರ್ ಡುಯಿಗ್‌ನಾನ್ ಅಂಡ್ ಎಲ್.ಹೆಚ್.ಗ್ಯಾನ್, ಹೂವರ್ ಇನ್‌ಸ್ಟಿಟ್ಯೂಷನ್ ಪ್ರೆಸ್,, 1981, ISBN 978-0-8179-7392-6 (ಪುಟ 22)
 30. ೩೦.೦ ೩೦.೧ ೩೦.೨ ಎನ್‌ಸೈಕ್ಲೋಪೀಡಿಯಾ ಆಫ್ ನ್ಯಾಶನಲಿಸಮ್ ಬರೆದವರು ಅಥೆನಾ ಎಸ್. ಲಿಯೊಸ್ಸಿ ಅಂಡ್ ಅಥೋನಿ ಡಿ. ಸ್ಮಿಥ್, ಟ್ರಾನ್ಸೆಕ್‌ಷನ್ ಪಬ್ಲಿಕೇಷನ್ಸ್, 2001, ISBN 978-0-7658-0002-2, (ಪುಟ 62)
 31. "ಆರ್ಕೈವ್ ನಕಲು" (PDF). Archived from the original (PDF) on 2011-09-28. Retrieved 2010-07-30.
 32. Connor, Walker (1994). Ethnonationalism: The Quest for Understanding. Princeton, New Jersey: Princeton University Press. p. 29. ISBN 9780691025636.
 33. ಕೊಲನ್, ಹ್ಯನ್ಸ್; ಕ್ಯಲೌನ್, ಕ್ರೈಗ್. ದ ಐಡಿಯಾ ಆಫ್ ನ್ಯಾಶನಲಿಸಮ್: ಎ ಸ್ಟಡಿ ಇನ್ ಇಟ್ಸ್ ಒರಿಜಿನ್ಸ್ ಅಂಡ್ ಬ್ಯಾಕ್‌ಗ್ರೌಂಡ್. ಟ್ರಾನ್ಸ್ಯಾಕ್ಷನ್ ಪಬ್ಲಿಶರ್ಸ್. ಪು. 20.
  ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ. 1942. ಜರ್ನಲ್ ಆಫ್ ಸೆಂಟ್ರಲ್ ಯೂರೋಪಿಯನ್ ಅಫೇರ್ಸ್ . ಸಂಪುಟ 81 .
 34. ರೋಜರ್ ಗ್ರಿಪಿನ್, ಫ್ಯಾಸಿಸಮ್ , ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, 1995, ISBN 978-0-19-289249-2.
 35. "ರಾಮಚಂದ್ರ ಗುಹಾ;ಅತಿರೇಕದ ರಾಷ್ಟ್ರಭಕ್ತಿ ದೇಶಪ್ರೇಮವೇ ಅಲ್ಲ;18 Aug, 2017". Archived from the original on 2017-08-18. Retrieved 2017-08-20.
 36. Heywood, Andrew (1999). Political Theory: An Introduction (Second ed.). London: Macmillan Press. pp. 97–98. ISBN 0333760913.
 37. Grayling, A.C. (2001). The Meaning of Things. Applying Philosophy to Life. London: Weidenfeld & Nicolson. pp. 78–79. ISBN 0297607588.
 38. Heywood, Andrew (2000). Key Concepts in Politics. London: Macmillan Press. p. 256. ISBN 0333770951.
 39. Cliff, Tony (1959). "Rosa Luxemburg and the national question". Marxists Internet Archive. Retrieved 2008-08-02.
 40. ರಸೆಲ್ ಸ್ಪೀಕ್ಸ್ ಹಿಸ್ ಮೈಂಡ್ ,1960. ಪ್ಲೆಟ್‌ಚೆರ್ ಅಂಡ್ ಸನ್ ಲಿ., ನೊರ್ವಿಚ್, ಯುನೈಟೆಡ್ ಕಿಂಗ್‌ಡಂ
 41. ಬ್ಲಮ್ ತನ್ನ ರೋಗ್ ಸ್ಟೇಟ್ ಪುಸ್ತಕದಲ್ಲಿ
 42. Einstein http://www.brainyquote.com/quotes/quotes/a/alberteins107012.html
 43. [cadmus.eui.eu/dspace/bitstream/1814/2599/1/HEC04-01.pdf "The Expulsion of 'German' Communities from Eastern Europe at the End of the Second World War"] (PDF). EUI Working Paper HEC No. 2004/1. 2004. p. 4. Retrieved 20 December 2009. {{cite web}}: Check |url= value (help); Unknown parameter |coauthors= ignored (|author= suggested) (help)

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]

ಸಾಮಾನ್ಯ

[ಬದಲಾಯಿಸಿ]
 • ಬ್ರೆಯುಲಿ, ಜಾನ್. 1994. ನ್ಯಾಷನಲಿಸಮ್ ಅಂಡ್ ಸ್ಟೆಟ್. 2ನೇ ಆವೃತ್ತಿ. ಚಿಕಾಗೊ: ಚಿಕಾಗೊ ಯುನಿವರ್ಸಿಟಿ ಪ್ರೆಸ್. ISBN 0-521-22515-9.
 • ಬ್ರುಬಕೆರ್, ರೊಗೆರ್ಸ್. 1996. ನ್ಯಾಷನಲಿಸಮ್ ರಿಫರ್ಮ್‌ಡ್: ನೇಷನ್‌ ಹೊಡ್ ಮತ್ತು ನ್ಯಾಷನಲ್ ಕ್ವೆಷನ್ ಇನ್ ದ ನ್ಯೂ ಯುರೋಪ್. ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್. ISBN 0-06-095339-X
 • ಗ್ರೀನ್‌ಫೆಲ್ಡ್, ಲೈ. 1992. ನ್ಯಾಷನಲಿಸಮ್: ಫೈವ್ ರೋಡ್ಸ್ ಟು ಮಾಡೆರ್ನಿಟಿ ಕೇಂಬ್ರಿಡ್ಜ್: ಹಾರ್ವರ್ಡ್ ಯುನಿವರ್ಸಿಟಿ ಪ್ರೆಸ್. ISBN 0-521-22515-9.
 • ಹಬ್ಸ್‌ಬವ್ಮ್, ಎರಿಕ್ ಜೆ. 1992. ನೇಷನ್ ಅಂಡ್ ನ್ಯಾಷನಲಿಸಮ್ ಸಿನ್ಸ್ 1780: ಪ್ರೊಗ್ರಮ್, ಮೈಥ್, ರಿಯಲಿಟಿ. 2ನೇ ಆವೃತ್ತಿ. ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್. ISBN 0-521-22515-9.

ಪರಾಮರ್ಶೆ ಕಾರ್ಯಗಳು

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]