ಫ್ರೆಂಚ್ ಕ್ರಾಂತಿ

ವಿಕಿಪೀಡಿಯ ಇಂದ
Jump to navigation Jump to search
೧೭೮೯ರ ಮಾನವ ಹಕ್ಕುಗಳ ಘೋಷಣೆ (ಡೆಕ್ಲರಾಷನ್ ಆಫ್ ಇಂಡಿಪೆಂಡೆನ್ಸ್)

ಫ್ರೆಂಚ್ ಕ್ರಾಂತಿ (೧೭೯೮೧೭೯೯) ಫ್ರಾನ್ಸ್ ದೇಶದ ಇತಿಹಾಸದಲ್ಲಿ ಉಂಟಾದ ಒಂದು ರಾಜಕೀಯ ಮತ್ತು ಸಾಮಾಜಿಕ ಕ್ರಾಂತಿ. ಇದರಿಂದ ಫ್ರಾನ್ಸ್ ಚಕ್ರಾಧಿಪತ್ಯ ಹೊಂದಿದ್ದ ದೇಶದಿಂದ ಗಣರಾಜ್ಯವಾಗಿ ಪರಿವರ್ತನಗೊಂಡಿತು.ರಾಷ್ಟ್ರೀಯತವಾದ ಮತ್ತು ಮಾನವ ಹಕ್ಕುಗಳ ಕಲ್ಪನೆಗಳು ಇತಿಹಾಸದಲ್ಲಿ ಪ್ರಾಮುಖ್ಯತೆಗೆ ಬರಲು ಈ ಕ್ರಾಂತಿ ಒಂದು ಪ್ರಮುಖ ಕಾರಣ.

ಕಾರಣಗಳು[ಬದಲಾಯಿಸಿ]

ಫ್ರೆಂಚ್ ಸಮಾಜದ ವಿಭಾಗ[ಬದಲಾಯಿಸಿ]

೩ನೇ ಎಸ್ಟೇಟ್ ೨ನೇ ಮತ್ತು ೧ನೇಯವರನ್ನು ಎತ್ತಿಹಿಡಿದಿರುವುದು.

೧೮ನೇ ಶತಮಾನದಲ್ಲಿ ಫ್ರೆಂಚ್ ಸಮಾಜವು ೩ ಭಾಗಗಳಾಗಿದ್ದವು- ಅದರಲ್ಲಿ ೧ನೇ ಮತ್ತು ೨ನೇ ಎಸ್ಟೇಟ್ರವರು ಬರೀ ೧೦%ರವರಾಗಿದ್ದು ಎಲ್ಲ ಭೂಮಿಯ ಒಡೆಯರಾಗಿದ್ದರು.೩ನೇ ಎಸ್ಟೇಟ್ರವರು ೯೦%ರವರಾಗಿದ್ದರು, ಇವರು ಚಿಕ್ಕ ವ್ಯಾಪಾರಿಗಳು, ಕೃಷಿಕರು, ಬಡವರು ಇದ್ದರು.ಆದರೇ ಕಂದಾಯವನ್ನು ೩ನೇ ಭಾಗದವರು ಮಾತ್ರ ಕಟ್ಟುತ್ತಿದ್ದರು.ಈ ತರಹದ ವಿಭಾಗ ಜನರಲ್ಲಿ ಕೆಂಡ-ಮಂಡ ಸೃಷ್ಟಿಸಿತು.

ಲುಯಿಸ್ ೧೬ರ ಅಪ್ಪಟ ಆಳ್ವಿಕೆ[ಬದಲಾಯಿಸಿ]

ಅಪ್ಪಟ ರಾಜ ಲುಯಿಸ್ ೧೬

೧೭೭೪ರಲ್ಲಿ ಲುಯಿಸ್ ೧೬ ಫ್ರೆಂಚ್ ಅರಮನೆಯ ಆಸನವನ್ನು ಏರಿದ.ಇವನ ಆಳ್ವಿಕೆಯಲ್ಲಿ ಬಹು ಯುದ್ಧಗಳು ನಡೆದವು ಹಾಗು ಅಮೇರಿಕದ ೧೬ ರಾಜ್ಯಗಳಿಗೆ ಸ್ವಾತಂತ್ರ್ಯವು ಬಂತು.ಇದರಿಂದ ಖಜಾನೆಯು ಖಾಲಿಯಾಗುವ ಸ್ಥಿತಿಗೆ ಬಂದಿತ್ತು.ಇಷ್ಟೇಯಲ್ಲದೆ ಇವನ ತುಟ್ಟಿಯಾದ ಅರಮನೆಯ ರಾಜಸಭೆಯನ್ನು ಇಡಲು ೩ನೇ ಭಾಗದ ಜನರ ಮೇಲೆ ಕಂದಾಯವನ್ನು ಜಾಸ್ತಿ ಮಾಡಿದನು.ಈ ಅಪ್ಪಟ ಆಳ್ವಿಕೆ ಜನರ ಮನಸ್ಸಿನಲ್ಲಿ ಕ್ರಾಂತಿಯ ಯೋಚನೆಯನ್ನು ಹುಟ್ಟುಹಾಕಿತು.
ಲುಯಿಸ್ ೧೬ ಜುಲೈ ೧೪ ೧೭೮೯ರಂದು ತನ್ನ ಸೈನ್ಯಕ್ಕೆ ಪ್ಯಾರಿಸ್ ನಗರಕ್ಕೆ ಮುನ್ನುಗ್ಗಲು ನಿರ್ದೇಶಿಸಿದ.ಮುಂದೆ ಅವರು ಜನ್ರ ಮೇಲೆ ಗುಂಡು ಹಾರಿಸುವರೆಂಬ ಗಾಳಿಮಾತಿತ್ತು.ಅದುದರಿಂದ ಜನರು ಅವನ ವಿರುದ್ಧ ಕ್ರಾಂತಿಯಲ್ಲಿ ಹೋರಾಡಿದರು.

ಬೆಲೆ ಏರಿಕೆ[ಬದಲಾಯಿಸಿ]

ಪ್ರಾನ್ಸ್ ದೇಶದ ಜನಸಂಖ್ಯೆ ಜಾಸ್ತಿಯಾದ ಕಾರಣ ಧನ-ಧಾನ್ಯಗಳ ಬೇಡಿಕೆ ಜಾಸ್ತಿಯಾಯಿತು.ಬ್ರೆಡ್ಗಳ ಬೆಲೆ ಏರಿತು.ಬಡವರಿಗೆ ಗಿಟ್ಟದಂತಹ ಬೆಲೆಗಳು ಅವು.ಇದರಿಂದ ಬಡವರು ಮತ್ತು ಶ್ರೀಮಂತರ ಅಂತರವು ಜಾಸ್ತಿಯಾಯಿತು.
೩-೪ ಗಂಟೆಗಳ ಕಾಲ ಬೇಕರಿಯ ಮುಂದೆ ನಿಂತರು ಬ್ರೆಡ್ ಸಿಗದಂತಹ ಪರಿಸ್ಥಿತಿ.ಇದರಿಂದ ಬೇಸತ್ತ ಜನರು ಕ್ರಾಂತಿಯಲ್ಲಿ ಭಾಗಿತರಾದರು.

ತತ್ವಜ್ಞಾನಿಗಳು(ಸಾಮಜಿಕ ದಾರ್ಶನಿಕರು)[ಬದಲಾಯಿಸಿ]

ಜಾನ್ ಲಾಕ್ಕೆ, ಜೀನ್ ಜಾಕ್ವೆಸ್ ರೋಶಿಯೋ, ಮಾಂಟೆಸ್ಕ್ಯೂರಂತಹ ಸಾಮಾಜಿಕ ದಾರ್ಶನಿಕರು ತಮ್ಮ ಪುಸ್ತಕಗಳಲ್ಲಿ ಹಾಗು ಪತ್ರಿಕೆಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಾಕಿದರು.ಇವರು ಜನರ ಕಣ್ಣುಗಳನ್ನು ತೆರೆಸಿ ಸಮಾನತೆಯ ಸಮಾಜವನ್ನು ತೋರಿಸಿದರು.ಇವರ ಈ ವಿಚಾರಗಳು, ಹಾಗು ಕಲ್ಪನೆಗಳು ಸಮಾಜವನ್ನು ಕ್ರಾಂತಿಗೆ ಮುನ್ನುಗ್ಗಿಸಿತು.

ಮಿಡಲ್ ಕ್ಲಾಸ್[ಬದಲಾಯಿಸಿ]

೧೮ನೇ ಶತಮಾನವು ಮಿಡಲ್ ಕ್ಲಾಸ್ ಜನಾಂಗದ ಜನನಕ್ಕೆ ಪ್ರೇಕ್ಷಕವಾಯಿತು.ಇವರು ವಕೀಲರು, ಕಾರ್ಯಕರ್ತರು, ಹಾಗು ವಿದ್ಯಾವಂತರಾಗಿದ್ದು, ಇವರ ಪ್ರಕಾರ ಯಾವ ಜನಾಂಗಕ್ಕು ಹಕ್ಕುಗಳು ಸೀಮಿತವಾಗಿರಬಾರದು.ಇವರೂ ತಮ್ಮ ಪಾತ್ರವನ್ನು ಕ್ರಾಂತಿಯಲ್ಲಿ ನಿರ್ವಹಿಸಿದರು.

ತುರ್ತಾದ ಕಾರಣ[ಬದಲಾಯಿಸಿ]

ಮುಖ್ಯವಾದ ತುರ್ತಾದ ಕಾರಣ-ಲುಯಿಸ್ ೧೬ ೧೭೮೯ರಲ್ಲಿ ಎಸ್ಟೇಟ್ ಜೆನೆರಲ್ಸ್ ಸಮ್ಮಿತಿಗೆ ಕರೆಸಿದನು.ಅಲ್ಲಿ ರಾಜನು ಏನೇ ನಿರ್ಧಾರವನ್ನು ತೆಗೆದುಕೊಂಡರು, ಅದನ್ನು ೩ ಎಸ್ಟೇಟ್ ರವರು ಒಪ್ಪಬೇಕು. ಒಂದು ಎಸ್ಟೇಟ್ ಒಂದು ವೋಟು ಎಂದು ಪ್ರತೀತಿಯ ಪ್ರಕಾರ ಇದು ನಡೆಯಿತ್ತು.ಇದನ್ನು ಒಬ್ಬ ಸದಸ್ಯ ಒಂದು ವೋಟು ಎಂದು ಮಾಡಲಿ ಎಂದು ೩ನೇ ಜನಾಂಗವನ್ನು ಕೇಳಿ ಅದನ್ನು ರಾಜನು ಒಪ್ಪದಿದ್ದಾಗ ಅವರು ಕೋಪಗೊಂಡು ಕ್ರಾಂತಿಯನ್ನು ಮುನ್ನಡಿಸಿದರು.

ನ್ಯಾಷಿನಲ್ ಅಸ್ಸೆಂಬ್ಲಿ(೧೭೮೯-೧೭೯೨)[ಬದಲಾಯಿಸಿ]

==ನ್ಯಾಷಿನಲ್ ಅಸ್ಸೆಂಬ್ಲಿ(೧೭೮೯-೧೭೯೨)==

ಟೆನ್ನಿಸ್ ಒಳಾಂಗಣ ಪ್ರಮಾಣ.

ಲುಯಿಸ್ ೧೬ ೩ನೇ ಎಸ್ಟೇಟ್ರವರ ಬೇಡಿಕೆಯನ್ನು ಒಪ್ಪಲಿಲ್ಲವೋ, ಅವರು ವೆರ್ಸೈಲೆಸ್ಸ್ ಟೆನ್ನಿಸ್ ಒಳಾಂಗಣದಲ್ಲಿ ಫ್ರಾನ್ಸ್ ದೇಶಕ್ಕೆ ಸಂವಿಧಾನವನ್ನು ಕೊಡುವ ವರೆಗು ಅಗಲುವುದಿಲ್ಲವೆಂದು ಪ್ರಮಾಣವನ್ನು ತೆಗೆದುಕೊಂಡರು.ಇವರನ್ನು ಮಿರಬೋ ಹಾಗು ಅಬ್ಬೆ ಸಿಯೆಸ್ ಮುನ್ನಡೆಸಿದರು.
೧೪ ಜುಲೈ ೧೭೮೯ರಂದು ೧೦೦+ ಜನರು ಪ್ಯಾರಿಸ್ ನಗರದ ಕಾರಗಾರವಾದ ಬಾಸ್ಟಿಲ್ಗೆ ನುಗ್ಗಿ ಅಲ್ಲಿಯ ನಾಯಕನನ್ನು ಸೋಲಿಸಿ ಅಲ್ಲಿದ್ದ ೭ ಜನ ಬಂಧಿತರನ್ನು ಬಿಡುಗಡಿಸಿದರು.ಬಾಸ್ಟಿಲ್ ಲುಯಿಸ್ ೧೬ರ ಅಪ್ಪಟ ಆಳ್ವಿಕೆಯ ಚಿಹ್ನೆಯಾಗಿತ್ತು.

ಬಾಸ್ಟಿಲ್ ನೆಲಸಮ

ಅಸೆಂಬ್ಲಿ ಅಂಗೀಕರಣ[ಬದಲಾಯಿಸಿ]

೪ ಆಗಸ್ಟ್ ೧೭೮೯ರಂದು ಕ್ರಾಂತಿಯನ್ನು ತಾಳಲಾರದ ರಾಜನು ನ್ಯಾಷಿನಲ್ ಅಸೆಂಬ್ಲಿಯನ್ನು ಅಂಗೀಕರಿಸಿ ಸಂವಿಧಾನವನ್ನು ಸ್ವೀಕರಿಸಿದ.ಇದರಿಂದ ಫ್ರಾನ್ಸ್ ರಾಜಪ್ರಭುತ್ವದಿಂದ ಸಂವಿಧಾನ ರಾಜಪ್ರಭುತ್ವಕ್ಕೆ ಬದಲಾಯಿತು.

ಜೀತ ಪದ್ಧತಿಯ ನಿರ್ಮೂಲನೆ[ಬದಲಾಯಿಸಿ]

೪ನೇ ಆಗಸ್ಟ್ ರಾತ್ರಿಯು ನ್ಯಾಷಿನಲ್ ಅಸ್ಸೆಂಬ್ಲಿ ಜೀತ ಪದ್ಧತಿಯ ನಿರ್ಮೂಲನೆ ಎಂಬ ನ್ಯಾಯಜ್ಞೆಯನ್ನು ಅಂಗೀಕರಿಸಿದರು.ಇದರ ಪ್ರಕಾರ ಯಾರು ಜೀತ ಮಾಡದೆ ಎಲ್ಲರು ತಮ್ಮ ತಮ್ಮ ಆದಾಯಕ್ಕೆ ತಕ್ಕ ಹಾಗೆ ಕಂದಾಯವನ್ನು ಕಟ್ಟಬೇಕಾಗಿತ್ತು.ಈ ಆಜ್ಞೆಯಿಂದ ದೇಶ ೨ ಬಿಲಿಯನ್ ಲಿವರ್ಸ್(ಪ್ರಾನ್ಸ್ ದೇಶದ ಆಗಿನ ಕರೆಂಸಿ) ಪಡೆಯಿತು.
೨೬ ಆಗಸ್ಟರಂದು ಮಾನವ ಹಕ್ಕುಗಳ ಘೋಷಣೆಯನ್ನು ಮಾಡಿತು.ಇದು ಎಲ್ಲರಿಗು ಸಮಾನ ಹಕ್ಕುಗಳನ್ನು ನೀಡಿತು.ಈ ಸಮಯದಲ್ಲಿ ರಾಜೆಟ್ ದೆ ಲ್'ಇಸೆಲ್ ರಚಿಸಿದ ಮರ್ಸೈಲೆಸ್ ಹಾಡು ಫ್ರಾನ್ಸ್ ದೇಶದ ರಾಷ್ಟ್ರಗೀತೆಯಾಯಿತು.

ಸಂವಿಧಾನ[ಬದಲಾಯಿಸಿ]

೧೭೯೧ರ ಈ ಸಂವಿಧಾನದ ಪ್ರಕಾರ ನಾಗರೀಕರು ಸಕ್ರಿಯ ನಾಗರೀಕರು ಮತ್ತು 'ವಿಕ್ರಿಯ ನಾಗರೀಕರು ಎಂದು ಭಾಗ ಮಾಡಿದರು.ಸಕ್ರಿಯ ನಾಗರೀಕರು ೨೫ವರ್ಷ ಮೇಲ್ಪಟ್ಟ ಹಾಗು ಕೋಲಿಕಾರರ ೩ ದಿನದ ಸಂಬಳಕ್ಕೆ ಸಮಾನಾದ ಕಂದಾಯವನ್ನು ಕಟ್ಟುವ ಪುರುಷರು ಮಾತ್ರ ಸಕ್ರಿಯ ನಾಗರೀಕರು.೪ ಮಿಲಿಯನ್ ಜನಸಂಖ್ಯೆ ವೋಟ್ ಮಾಡಬಹುದಾಗಿತ್ತು.ಅವರು ಎಲೆಕ್ಟರ್ ಗಳನ್ನು ವೋಟ್ ಮಾಡಿ ಎಲೆಕ್ಟರ್ಸ್ ೭೪೫ ಜನರ ಅಸೆಂಬ್ಲಿಯನ್ನು ಮತವನ್ನು ಚಲಾಯಿಸಿ ಸೂಚಿಸುತ್ತಿದ್ದರು.ಸಕ್ರಿಯ ನಾಗರೀಕರು ನ್ಯಾಯಧೀಶನನ್ನು ಮತಗಳ ಮೂಲಕ ಸೂಚಿಸುತ್ತಿದ್ದರು.ಆದರೆ ಮಿಕ್ಕ ೨೪ ಮಿಲಿಯನ್ ಜನಸಂಖ್ಯೆ ವಿಕ್ರಿಯ ನಾಗರೀಕರಾಗಿದ್ದು ಯಾವ ಮತದ ಹಕ್ಕು ಇರಲಿಲ್ಲ.
ಸಂವಿಧಾನವು ಮಾನವ ಹಕ್ಕುಗಳ ಘೋಷಣೆಯಿಂದ ಪ್ರಾರಂಭವಾಯಿತು.ಅದು ಪ್ರತಿಯೊಬ್ಬ ಮನುಷ್ಯನಿಗೂ ಸಮಾನ ಹಕ್ಕುಗಳನ್ನು ನೀಡಿತು.ಇದು ಪರಾಮರ್ಶಕ-ರಹಿತ ಮಧ್ಯಮವನ್ನು ಜನರಿಗೆ ನೀಡಿತು.ಇದರಿಂದ ಪತ್ರಿಕೆಗಳು, ಬರ್ಚಣೆಗಳು ಇತ್ಯಾದಿಗಳು ಪ್ರಸಿದ್ಧವಾಯಿತು.

ಜಾಕೊಬಿನ್ ಸರ್ಕಾರ(೧೭೯೨-೧೭೯೪)[ಬದಲಾಯಿಸಿ]

೧೭೯೧ ಬರೀ ಕೆಲವು ವರ್ಗದವರಿಗೆ ಮಾತ್ರ ಮತಹಕ್ಕು ಕೊಟ್ಟಿದ್ದರಿಂದ ಬೇರೆಯವರು ಕ್ಲಬ್ಗಳನ್ನು ಸೃಷ್ಟಿಸಿಕೊಂಡು ಮುಂದಾಲೋಚನೆಯನ್ನು ಮಾಡಿದರು.ಇದರಲ್ಲಿ ಜಾಕೊಬಿನ್ ಕ್ಲಬ್ ಅತ್ಯಂತ ಮುಖ್ಯವಾದದ್ದು.ಜಾಕೊಬಿನ್ ಕ್ಲಬ್ರವರು ೩ನೇ ಎಸ್ಟೇಟ್ ಹಾಗು ವಿದ್ಯಾವಂತ ೧,೨ನೇ ಏಸ್ಟೇಟ್ರವರಿಗೆ ಸೇರಿದ್ದರು.ಇವರ ನಾಯಕ ಮ್ಯಾಕ್ಸಿಮಿಲ್ಲಿಯನ್ ರೋಬೆಸ್ಪಿಯರ್.
೧೦ನೇ ಆಗಸ್ಟ್ ೧೭೯೨ರಂದು ಜಾಕೊಬಿನ್ ಕ್ಲಬ್ರವರೆಲ್ಲರು ಟ್ಯುಲೇರಿಸ್ ಅರಮನೆಗೆ ನುಗ್ಗಿ ರಾಜನ ಕುಟುಂಬದವರನ್ನು ಹೋಸ್ಟೇಜಾಗಿ ಇಡಿಸಿದರು.ಆಗ ೨೧ ವರ್ಷ ಮೇಲ್ಪಟ್ಟ ಎಲ್ಲ ಪುರುಷರು ಮತ ಚಲಾಯಿಸಬಹುದೆಂದು ಆಜ್ಞೆಯಾಯಿತು.ಜಾಕೊಬಿನ್ ಸರ್ಕಾರ ಕಂವೆಂಷನ್ ಎಂದು ಕರೆಯಲ್ಪಟ್ಟಿತು.ಇದು ಫ್ರಾನ್ಸ್ ದೇಶವನ್ನು ಗಣರಾಜ್ಯವಾಗಿ ಮಾಡಿತು.

೨೧ ಜನವರಿ ೧೭೯೩ರಂದು ಲುಯಿಸ್ ೧೬ನ್ನು ಗಿಲಟೀನ್ನಲ್ಲಿ ಮರಣ ದಂಡಿಸಲಾಯಿತು.

ಲುಯಿಸ್ ೧೬ರ ಮರಣದಂಡನೆ

ರೀನ್ ಆಫ್ ಟೆರರ್[ಬದಲಾಯಿಸಿ]

೧೭೯೩-೧೭೯೪ನ್ನು ರೀನ್ ಆಫ್ ಟೆರರ್ ಎಂದೇ ಕರೆಯಲಾಗುತ್ತಿತ್ತು. ರಾಬೆಸ್ಪಿಯರ್ ಗಣರಾಜ್ಯವನ್ನು ವಿರೋಧಿಸಿದ ಎಲ್ಲರಿಗು ದಂಡಿಸುತ್ತಿದನು.ಅವರನ್ನು ಬಂಧಿಸಿ, ವಿಚಾರಿಸಿ, ಗಿಲಟೀನ್ನಲ್ಲಿ ಮರಣ ದಂಡಿಸಲಾಗುತ್ತಿತ್ತು.ಬ್ರೆಡ್ ಹಾಗು ಮಾಂಸದ ಬೆಲೆ ಕೆಳಕ್ಕೆ ಇಳಿಯಿತು.ಬಿಳೀ ಹಿಟ್ಟನ್ನು ಉಪಯೋಗಿಸಬಾರದಾಗಿತ್ತು.ಗೋಧಿ ಬ್ರೆಡ್ ಮಾತ್ರ ತಿನ್ನಬೇಕೆಂಬ ಅಡ್ಡಗೆರೆಯೂ ಆಯಿತು.ಚರ್ಚ್ಗಳನ್ನು ಮುಚ್ಚಿ ಕಾರ್ಯಾಲಯಗಳಾಗಿ ಬದಲಾಯಿಸಲಾಯಿತು.
ಆದರೆ ರಾಬೆಸ್ಪಿಯರ್ ಕಾರ್ಯನೀತಿ ನಿರ್ಣಾಯಗಳು ಕಠುವಾಗಿ ಇವನನ್ನು ಗಿಲಟೀನ್ನಲ್ಲಿ ಗಲ್ಲಿಗೇರಿಸಲಾಗಿತ್ತು.

ಡೈರೆಕ್ಟರಿ ಮತ್ತು ನೆಪೋಲಿಯನ್[ಬದಲಾಯಿಸಿ]

೧೭೯೪ರಲ್ಲಿ ಜಾಕೊಬಿನ್ ಬಿತ್ತು, ಆಗ ಸಮಾಜದ ಶ್ರೀಮಂತರು ಮತ್ತೆ ಸಮಾಜದ ಕೆಳಗಿನ ಜನಾಂಗದವರಿಂದ ಮತಹಕ್ಕನ್ನು ತೆಗೆದುಕೊಳ್ಳಿತು.ಆದರೆ ಈ ಡೈರೆಕ್ಟರಿಯೂ ನಿಲ್ಲಲಿಲ್ಲ.೧೮೦೪ರಲ್ಲಿ ನೆಪೋಲಿಯನ್ ರಾಜ್ಯವನ್ನು ತನ್ನ ಕೈಗಳಿಗೆ ತೆಗೆದುಕೊಂಡ.ರಾಜಪ್ರಭುತ್ವದಿಂದ ರಾಜಪ್ರಭುತ್ವಕ್ಕೆ ವಾಪಸ್ ಬಂತು.

ಈಗಲು ಕೂಡ[ಬದಲಾಯಿಸಿ]

ಫ್ರೆಂಚ್ ಕ್ರಾಂತಿಯ ಶಬ್ದಗಳಾಗಿ ಸ್ವಾತಂತ್ರ್ಯ, ಸಮಾನತೆ ಮತ್ತು ಒಡಹುಟ್ಟುತನ (liberty, equality and fraternity) ಹೊರಹೊಮ್ಮಿತು.ಇಂದೂ ಕೂಡ ಈ ಶಬ್ದಗಳು ಹಲವಾರು ದೇಶಗಳ ಸಂವಿಧಾನದ ಮೇಲಿದೆ.ಫ್ರಾನ್ಸ್ನಿಂದ ಬೇರೆ ದೇಶಗಳಿಗೂ ಹರಡಿದ ಈ ಸಾಮಾಜಿಕ ವಿಚಾರಗಳು ಜೀತಪದ್ಧತಿಯನ್ನು ತೆಗೆದುಹಾಕಿತು.ಫ್ರಾನ್ಸ್ ದೇಶದಲ್ಲಿ ಮಾರ್ಪಡದ ಗಣರಾಜ್ಯವನ್ನು ಸೃಷ್ಟಿಸಲು ಆಗದಿದ್ದರು, ಬೇರೆ ದೇಶಗಳಿಗೆ ತನ್ನ ಕಲ್ಪನೆಗಳನ್ನು ಹರಡಿಸಿ ಈ ಕ್ರಾಂತಿಯು ಸಫಲವಾಯಿತು.


ಬಾಹ್ಯ ಸಂಪರ್ಕಗಳು[ಬದಲಾಯಿಸಿ]