ಅಮೆರಿಕಾದ ಕ್ರಾಂತಿ
- ಈ ಲೇಖನದಲ್ಲಿ, ಅಮೆರಿಕಾದ ಕ್ರಾಂತಿಯನ್ನು ಬೆಂಬಲಿಸಿದ ಹದಿಮೂರು ವಸಾಹತುಗಳ ನಿವಾಸಿಗರನ್ನು ಮೂಲತಃ "ಅಮೆರಿಕನ್ನರೆಂದು" ಸೂಚಿಸಲಾಗುತ್ತದೆ, ಇವರನ್ನು ಪ್ರಾಸಂಗಿಕವಾಗಿ "ದೇಶಪ್ರೇಮಿಗಳು", "ವಿಗ್‌ಗಳು", "ದಂಗೆಕೋರರು" ಅಥವಾ "ಕ್ರಾಂತಿಕಾರಿಗಳು" ಎಂದು ನಿರೂಪಿಸಲಾಗುತ್ತದೆ. ಕ್ರಾಂತಿಯನ್ನು ವಿರೋಧಿಸುವಲ್ಲಿ ಬ್ರಿಟಿಷರಿಗೆ ಬೆಂಬಲ ನೀಡಿದ ವಸಾಹತುಗಾರರನ್ನು ಸಾಮಾನ್ಯವಾಗಿ "ಒಕ್ಕೂಟದ ಬೆಂಬಲಿಗರು" ಅಥವಾ "ಟೋರಿಗಳೆಂದು" ಕರೆಯಲಾಗುತ್ತದೆ. ಹದಿಮೂರು ವಸಾಹತುಗಳ ಭೌಗೋಳಿಕ ಪ್ರದೇಶವನ್ನು ಹೆಚ್ಚಾಗಿ "ಅಮೆರಿಕ" ಎನ್ನಲಾಗುತ್ತದೆ.
'ಅಮೆರಿಕಾದ ಕ್ರಾಂತಿ ೆ. ಭೌಗೋಳಿಕ ಅನ್ವೇಷಣೆಯಿಂದಾಗಿ ಯುರೋಪಿಯನ್ ರು ಅಮೆರಿಕಾಕ್ಕೆ ವಲಸೆ ಹೋಗಲು ಆರಂಭಿಸಿದರು.ಹೀಗೆ ಮೊದಲಿಗೆ ಮೆಪ್ಲವರ್ ಎಂಬ ಹಡಗಿನ ಮೂಲಕ ಯುರೋಪಿಯನ್ನರು ಅಮೇರಿಕಾ ವನ್ನು ತಲುಪಿದರು. ಇವರನ್ನು ಪಿಲ್ಗ್ರಿಮ್ ಪಾದರ್ಸ ಎಂದು ಕರೆಯುತ್ತಾರೆ. ಸಂದರ್ಭದಲ್ಲಿ ಉತ್ತರ ಅಮೆರಿಕದ ಹದಿಮೂರು ವಸಾಹತುಗಳು ಬ್ರಿಟಿಷ್ ಸಾಮ್ರಾಜ್ಯವನ್ನು ಅಡಗಿಸಲು ಒಟ್ಟಿಗೆ ಸೇರಿದವು ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನವನ್ನು ರೂಪಿಸಲು ಒಂದುಗೂಡಿದವು. ಅವು ಮೊದಲು ಕಡಲಾಚೆಯಿಂದ ಪ್ರಾತಿನಿಧ್ಯವಿಲ್ಲದೆ ಆಳ್ವಿಕೆ ಮಾಡುವ ಗ್ರೇಟ್ ಬ್ರಿಟನ್‌ನ ಪಾರ್ಲಿಮೆಂಟ್‌ನ ಆಡಳಿತವನ್ನು ನಿರಾಕರಿಸಿದವು ಹಾಗೂ ನಂತರ ಎಲ್ಲಾ ರಾಜವಂಶದ ಅಧಿಕಾರಿಗಳನ್ನು ಹೊರ ಅಟ್ಟಿದವು. 1774ರಲ್ಲಿ ಪ್ರತಿಯೊಂದು ವಸಾಹತು ಸ್ವಂತವಾಗಿ-ಆಡಳಿತ ನಡೆಸುವ ರಾಜ್ಯಗಳನ್ನು ರೂಪಿಸಲು ಒಂದು ಪ್ರಾಂತೀಯ ಕಾಂಗ್ರೆಸ್‌ಅನ್ನು ಅಥವಾ ಸಮಾನ ಸರಕಾರಿ ಸಂಸ್ಥೆಯೊಂದನ್ನು ಸ್ಥಾಪಿಸಿದವು. 1775ರಲ್ಲಿ ಎರಡನೇ ಭೂಖಂಡೀಯ ಕಾಂಗ್ರೆಸ್‌ಗೆ ಪ್ರತಿನಿಧಿಗಳನ್ನು ಕಳುಹಿಸುವ ಮೂಲಕ, ಅವು ಮೊದಲು ಅವುಗಳ ಸ್ವ-ಆಡಳಿತವನ್ನು ರಕ್ಷಿಸಿಕೊಳ್ಳಲು ಹಾಗೂ ಅಮೆರಿಕಾದ ಕ್ರಾಂತಿಕಾರಿ ಯುದ್ಧ (1775–83, ಅಮೆರಿಕಾದ ಸ್ವಾತಂತ್ರ್ಯಾ ಕದನ ) ಎಂದು ಕರೆಯುವ ಬ್ರಿಟಿಷ್ ವಿರುದ್ಧ ಶಸ್ತ್ರಸಜ್ಜಿತವಾದ ಹೋರಾಟವನ್ನು ಮಾಡಲು ಒಂದುಸೇರಿದವು. ಅಂತಿಮವಾಗಿ ರಾಜ್ಯಗಳು, ಬ್ರಿಟಿಷ್ ರಾಜಪ್ರಭುತ್ವವು ನಿರಂಕುಶಾಧಿಕಾರದ ಮೂಲಕ ನ್ಯಾಯಸಮ್ಮತವಾಗಿ ಅವುಗಳ ರಾಜನಿಷ್ಠೆಯನ್ನು ಪಡೆಯಲಾಗುವುದಿಲ್ಲವೆಂಬುದನ್ನು ಕಂಡುಹಿಡಿದವು. ನಂತರ ಅವು, 1776ರ ಜುಲೈನಲ್ಲಿ ರಾಜಪ್ರಭುತ್ವವನ್ನು ನಿರಾಕರಿಸಿ ಹೊಸ ರಾಷ್ಟ್ರದ ಪರವಾಗಿ ಕಾಂಗ್ರೆಸ್ ಸ್ವಾತಂತ್ರ್ಯಾ ಘೋಷಣೆಯನ್ನು ಮಾಡಿದಾಗ ಬ್ರಿಟಿಷ್ ಸಾಮ್ರಾಜ್ಯದೊಂದಿಗೆ ಸಂಬಂಧವನ್ನು ಬಿಗಿಗೊಳಿಸಿದವು. ಯುದ್ಧವು ಪರಿಣಾಮಕಾರಿ ಅಮೆರಿಕಾದ ಗೆಲುವಿನೊಂದಿಗೆ 1781ರ ಅಕ್ಟೋಬರ್‌ನಲ್ಲಿ ಕೊನೆಗೊಂಡಿತು. ಆನಂತರ 1783ರಲ್ಲಿ ಪ್ಯಾರಿಸ್ ಒಪ್ಪಂದದಿಂದ ಅಮೆರಿಕ ಸಂಯುಕ್ತ ಸಂಸ್ಥಾನದೊಂದಿಗಿನ ಹಿಂದಿನ ಬ್ರಿಟಿಷರ ಎಲ್ಲಾ ಕೋರಿಕೆಗಳನ್ನು ಸಂಪೂರ್ಣವಾಗಿ ತೊರೆಯಲಾಯಿತು. ಅಮೆರಿಕಾದ ಕ್ರಾಂತಿಯು ಆರಂಭಿಕ ಅಮೆರಿಕಾದ ಸಮಾಜ ಮತ್ತು ಸರಕಾರದಲ್ಲಿ ಹಲವಾರು ಸಾಮಾಜಿಕ, ರಾಜಕೀಯ ಮತ್ತು ಬೌದ್ಧಿಕ ಬದಲಾವಣೆಗಳನ್ನು ಉಂಟುಮಾಡಿತು. ಅಮೆರಿಕನ್ನರು ಶ್ರೀಮಂತಪ್ರಭುತ್ವದ ಯುರೋಪ್‌ನಲ್ಲಿ ಸಾಮಾನ್ಯವಾಗಿದ್ದ ಮಿತಜನತಂತ್ರವನ್ನು ನಿರಾಕರಿಸಿದರು. ಬದಲಿಗೆ ಉದಾರ-ವಾದದ ದಾರ್ಶನಿಕ ಚಳವಳಿ-ಅರಿವಿನ ಆಧಾರದಲ್ಲಿ ಪ್ರಜಾಪ್ರಭುತ್ವ-ವಾದದ ಅಭಿವೃದ್ಧಿಯನ್ನು ಸಮರ್ಥಿಸಿದರು. ಕ್ರಾಂತಿಯ ಪ್ರಮುಖ ಪರಿಣಾಮವಾಗಿ ಜನರ ಆಸೆ-ಆಕಾಂಕ್ಷೆಗಳಿಗೆ ಜವಾಬ್ದಾರನಾಗಿರುವ ಮಾದರಿ ಸರಕಾರವೊಂದು ರಚಿಸಲ್ಪಟ್ಟಿತು. ಆದರೂ, ಹಲವಾರು ಸ್ಥಾಪಕರು ದೊಂಬಿಯ ಆಡಳಿತಕ್ಕೆ ಭಯಪಡುವುದರೊಂದಿಗೆ ಪ್ರಜಾಪ್ರಭುತ್ವ ಅಪೇಕ್ಷಣೀಯ ಹೊಸ ಸರಕಾರದಲ್ಲಿ ಪ್ರಬಲ ರಾಜಕೀಯ ವಿವಾದಗಳು ಎದ್ದವು. ರಾಷ್ಟ್ರೀಯ ಸರಕಾರದ ಅನೇಕ ಮೂಲಭೂತ ಸಮಸ್ಯೆಗಳು, 1781ರಲ್ಲಿ ರಚಿಸಲ್ಪಟ್ಟ ದುರ್ಬಲ ಮೊದಲ ಪ್ರಯತ್ನ ಆರ್ಟಿಕಲ್ಸ್ ಆಫ್ ಕಾನ್ಫೆಡರೇಶನ್ಅನ್ನು, 1788ರಲ್ಲಿ ಬದಲಿಸಿದ ಅಮೆರಿಕ ಸಂಯುಕ್ತ ಸಂಸ್ಥಾನದ ಸಂವಿಧಾನದ ಊರ್ಜಿತಗೊಳಿಸುವಿಕೆಯಿಂದ ಪರಿಹರಿಸಲ್ಪಟ್ಟವು. ಕಾನ್ಫೆಡರೇಶನ್ಅನ್ನು ಕಳೆದುಕೊಂಡಿದುದಕ್ಕೆ ಪ್ರತಿಯಾಗಿ, ಸಂವಿಧಾನವು ಪ್ರಬಲ ಸಂಯುಕ್ತ ಸರಕಾರವೊಂದನ್ನು ಸ್ಥಾಪಿಸಿತು. ಇದನ್ನು ಮೊದಲ 10 ಸಂವಿಧಾನಾತ್ಮಕ ತಿದ್ದುಪಡಿಗಳನ್ನು ಒಳಗೊಂಡ ಅಮೆರಿಕ ಸಂಯುಕ್ತ ಸಂಸ್ಥಾನದ ಹಕ್ಕುಗಳ ಮಸೂದೆಯು (1791) ಶೀಘ್ರದಲ್ಲಿ ಅನುಸರಿಸಿತು. ಕ್ರಾಂತಿಯನ್ನು ಸಮರ್ಥಿಸುವಲ್ಲಿ ಪ್ರಭಾವ ಬೀರಿದ್ದ ಮತ್ತು ವ್ಯಾಪಕವಾದ ವೈಯಕ್ತಿಕ ಸ್ವಾತಂತ್ರ್ಯಗಳೊಂದಿಗೆ ಪ್ರಬಲ ರಾಷ್ಟ್ರೀಯ ಸರಕಾರವನ್ನು ಸ್ಥಾಪಿಸಲು ಪ್ರಯತ್ನಿಸಿದ ಅನೇಕ ಮೂಲಭೂತ ಹಕ್ಕುಗಳಿಗೆ ಇದು ಭರವಸೆ ನೀಡಿತು. ಅಮೆರಿಕನ್ನರು ಅಧಿಕವಾಗಿ ಗಣತಂತ್ರ-ವಾದವನ್ನು ಸಮರ್ಥಿಸಿದರಿಂದ ಮತ್ತು ಕ್ರಮೇಣ ಪ್ರಜಾಪ್ರಭುತ್ವವು ಹೆಚ್ಚಾದುದರಿಂದ, ಸಾಂಪ್ರದಾಯಿಕ ಸಾಮಾಜಿಕ ಶ್ರೇಣಿ ವ್ಯವಸ್ಥೆಯಲ್ಲಿ ಕ್ರಾಂತಿ ಉಂಟಾಗಲು ಕಾರಣವಾಯಿತು ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ರಾಜಕೀಯ ಮೌಲ್ಯಗಳ ಮೂಲಾಂಶವಾದ ನೀತಿನಿಯಮಗಳು ರೂಪುಗೊಳ್ಳುವಂತೆ ಮಾಡಿತು.[೧]
ಮೂಲಗಳು
[ಬದಲಾಯಿಸಿ]ಅಮೆರಿಕಾದ ಕ್ರಾಂತಿಯು ಸ್ಥಳೀಯ ರಾಷ್ಟ್ರದಿಂದ ವಸಾಹತುಶಾಹಿ ಒಡೆತನಗಳ ರಾಜಕೀಯ ಮತ್ತು ಸಾಮಾಜಿಕ ಬೇರ್ಡುವಿಕೆಗೆ ಹಾಗೂ ಆ ಹಿಂದಿನ ವಸಾಹತುಗಳೆಲ್ಲವೂ ಒಂದು ಸ್ವತಂತ್ರ ರಾಷ್ಟ್ರವಾಗಿ ಒಂದುಗೂಡಲು ಕಾರಣವಾದ ಹಲವಾರು ಚಿಂತನೆ ಮತ್ತು ಘಟನೆಗಳಿಂದ ಸಂಭವಿಸಿತು.
ಸಾರಾಂಶ
[ಬದಲಾಯಿಸಿ]ಕ್ರಾಂತಿಕಾರಿ ಯುಗವು 1763ರಲ್ಲಿ ಫ್ರೆಂಚ್ ಮಿಲಿಟರಿಯು ಬ್ರಿಟಿಷ್ ಉತ್ತರ ಅಮೆರಿಕಾದ ವಸಾಹತುಗಳಿಗೆ ಬೆದರಿಕೆಯನ್ನು ನೀಡಿದಾಗ ಆರಂಭವಾಯಿತು. ವಸಾಹತುಗಳನ್ನು ಸಾಮ್ರಾಜ್ಯದಲ್ಲಿ ಇರಿಸುವುದಕ್ಕೆ ಸಂಬಂಧಿಸಿದಂತೆ ಅವು ಅತಿ ಹೆಚ್ಚಿನ ಪ್ರಮಾಣದ ವೆಚ್ಚವನ್ನು ಪಾವತಿಸಬೇಕೆಂಬ ನೀತಿಯನ್ನು ಅಳವಡಿಸಿಕೊಂಡು ಬ್ರಿಟನ್, ಬ್ರಿಟಿಷ್ ಆಡಳಿತವನ್ನು ತೋರ್ಪಡಿಸುವ ಸಲುವಾಗಿ ಹಲವಾರು ನೇರ ಕಂದಾಯಗಳನ್ನು ಮತ್ತು ಇತರ ಕಾನೂನುಗಳನ್ನು ವಿಧಿಸಿತು. ಇವೆಲ್ಲವೂ ಅಮೆರಿಕದಲ್ಲಿ ಜನರಿಂದ ವಿಪರೀತವಾಗಿ ನಿರಾಕರಿಸಲ್ಪಟ್ಟವು. ಆಳ್ವಿಕೆ ನಡೆಸುತ್ತಿದ್ದ ಬ್ರಿಟಿಷ್ ಸಂಸತ್ತಿನಲ್ಲಿ ವಸಾಹತುಗಳು ಚುನಾಯಿತ ಪ್ರಾತಿನಿಧ್ಯದ ಕೊರತೆಯನ್ನು ಅನುಭವಿಸಿದರಿಂದ, ಹೆಚ್ಚಿನ ವಸಾಹತುಗಾರರು ಈ ಕಾನೂನುಗಳನ್ನು ನ್ಯಾಯ ವಿರುದ್ಧವಾದುದು ಹಾಗೂ ಅವುಗಳ ಹಕ್ಕುಗಳು ಇಂಗ್ಲೀಷರಾಗಿ ಉಲ್ಲಂಘನೆಯಾಗುತ್ತಿದೆ ಎಂಬುದಾಗಿ ಪರಿಗಣಿಸಿದರು. 1772ರಲ್ಲಿ, ವಸಾಹತುಗಾರರ ಗುಂಪುಗಳು ಹೊಂದಿಕೆಗಳ ಕಮಿಟಿಗಳನ್ನು ರಚಿಸಲು ಆರಂಭಿಸಿದವು. ಅವು ನಂತರ ಹೆಚ್ಚಿನ ವಸಾಹತುಗಳಲ್ಲಿ ಅವುಗಳ ಸ್ವಂತ ಪ್ರಾಂತೀಯ ಕಾಂಗ್ರೆಸ್ ಆದವು. ಎರಡು ವರ್ಷಗಳಲ್ಲಿ ಪ್ರಾಂತೀಯ ಕಾಂಗ್ರೆಸ್‌ಗಳು ಅಥವಾ ಅವುಗಳ ಸಮಾನ ಸಂಘಟನೆಗಳು ಸಂಸತ್ತನ್ನು ನಿರಾಕರಿಸಿದವು ಹಾಗೂ ಹಿಂದಿನ ವಸಾಹತುಗಳಲ್ಲಿದ್ದ ಬ್ರಿಟಿಷ್ ಆಡಳಿತ ವ್ಯವಸ್ಥೆಯನ್ನು 1774ರಲ್ಲಿ ಸುಸಂಘಟಿತ ಮೊದಲ ಭೂಖಂಡೀಯ ಕಾಂಗ್ರೆಸ್‌ನಿಂದ ಬದಲಿಸಿದವು. ಬೋಸ್ಟನ್‌ನಲ್ಲಿನ ಸಂಸತ್ತಿನ ಅಧಿಕಾರವನ್ನು ದೃಢಪಡಿಸುವ ಪ್ರಯತ್ನಗಳ ವಿರೋಧಗಳಿಗೆ ಪ್ರತಿಕ್ರಿಯೆಯಾಗಿ, ಬ್ರಿಟಿಷ್ ಕದನ ಸಶಸ್ತ್ರದಳಗಳನ್ನು ಕಳುಹಿಸಿತು, ಸ್ಥಳೀಯ ಸರಕಾರಗಳನ್ನು ವಿಸರ್ಜಿಸಿತು ಹಾಗೂ ರಾಜವಂಶದ ಅಧಿಕಾರಿಗಳಿಂದ ನೇರ ಆಡಳಿತವನ್ನು ಹೇರಿತು. ಅದಕ್ಕೆ ಪ್ರತಿಯಾಗಿ ವಸಾಹತುಗಳು ಅವುಗಳ ಸೇನೆಗಳನ್ನು ಬಲಪಡಿಸಿದವು ಹಾಗೂ 1775ರಲ್ಲಿ ಯುದ್ಧವು ಆರಂಭವಾಯಿತು. ರಾಜ ಜಾರ್ಜ್ IIIನಿಗೆ ಮೊದಲು ತೋರಿಕೆಗಾಗಿ ರಾಜಭಕ್ತಿ ತೋರಿಸಿ ಭೂಖಂಡೀಯ ಕಾಂಗ್ರೆಸ್‌ನ ರಾಜಪ್ರಭುತ್ವವು, ಸಂಸತ್ತಿನೊಂದಿಗಿನ ಹೋರಾಟದಲ್ಲಿ ತಮ್ಮ ಪರವಾಗಿ ಮಧ್ಯಪ್ರವೇಶಿಸಬೇಕೆಂದು ಸತತವಾಗಿ ಮಾಡಿದ ಕೋರಿಕೆಯು, ರಾಜ್ಯಗಳು "ದಂಗೆ" ಮತ್ತು ಕಾಂಗ್ರೆಸ್ ದೇಶದ್ರೋಹಿಗಳ ಕೈಯಲ್ಲಿದೆ ಎಂದು ರಾಜನು ಘೋಷಿಸುವಂತೆ ಮಾಡಿದವು. 1776ರಲ್ಲಿ, ಮೂಲ ಹದಿಮೂರು ರಾಜ್ಯಗಳ ಪ್ರತಿನಿಧಿಗಳು ಎರಡನೇ ಭೂಖಂಡೀಯ ಕಾಂಗ್ರೆಸ್‌ನಲ್ಲಿ ಸ್ವಾತಂತ್ರ್ಯಾ ಘೋಷಣೆಯನ್ನು ಅನುಮೋದಿಸಲು ಸರ್ವಾನುಮತದಿಂದ ಆಯ್ಕೆಯಾದರು. ಈ ಘೋಷಣೆಯು ಈಗ ಬ್ರಿಟಿಷ್ ರಾಜಪ್ರಭುತ್ವವನ್ನು ಹಾಗೂ ಅದರ ಸಂಸತ್ತನ್ನೂ ನಿರಾಕರಿಸಿದೆ. ಈ ಘೋಷಣೆಯು ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಸ್ಥಾಪಿಸಿತು. ಇದು ಮೂಲತಃ ರಾಜ್ಯ ಶಾಸಕಾಂಗಗಳಿಂದ ಆಯ್ಕೆಯಾದ ಪ್ರಾತಿನಿಧಿಕ ಸರಕಾರದಿಂದ ಅಸಂಯುಕ್ತ ಕಾನ್ಫೆಡರೇಶನ್ ಆಗಿ ಆಡಳಿತ ನಡೆಸಲ್ಪಡುತ್ತಿತ್ತು (ಎರಡನೇ ಭೂಖಂಡೀಯ ಕಾಂಗ್ರೆಸ್ ಮತ್ತು ಕಾನ್ಫೆಡರೇಶನ್‌ನ ಕಾಂಗ್ರೆಸ್ ಅನ್ನು ಗಮನಿಸಿ).
ಸ್ವಾತಂತ್ರ್ಯ, ಪ್ರಜಾಪ್ರಭುತ್ವ-ವಾದ ಮತ್ತು ಧರ್ಮ
[ಬದಲಾಯಿಸಿ]ಸ್ವಾತಂತ್ರ್ಯದ ಬಗೆಗಿನ ಜಾನ್ ಲಾಕ್ನ ಚಿಂತನೆಗಳು ಕ್ರಾಂತಿಗೆ ಕಾರಣವಾದ ರಾಜಕೀಯ ಯೋಚನೆಗಳ ಮೇಲೆ ತೀವ್ರವಾದ ಪ್ರಭಾವವನ್ನು ಬೀರಿವೆ; ಉದಾಹರಣೆಗಾಗಿ, ಅವನ "ಸಾಮಾಜಿಕ ಒಪ್ಪಂದ" ಸಿದ್ಧಾಂತವು, ಮಾನವನ ಮೂಲಭೂತ ಹಕ್ಕುಗಳಲ್ಲಿ ಮುಖ್ಯವಾದ ಜನರ ನಾಯಕರನ್ನು ಪದಚ್ಯುತಗೊಳಿಸುವ ಹಕ್ಕು ಆ ನಾಯಕರ ಐತಿಹಾಸಿಕ ಇಂಗ್ಲೀಷರ ಹಕ್ಕುಗಳನ್ನು ಸೂಚಿಸಬೇಕು ಎಂಬುದನ್ನು ನಿರೂಪಿಸುತ್ತದೆ.[೨][೩] ರಾಜ್ಯ ಮತ್ತು ರಾಷ್ಟ್ರೀಯ ಸಂವಿಧಾನಗಳನ್ನು ಬರೆಯುವಾಗ, ಅಮೆರಿಕನ್ನರು "ಸಮತೋಲನ" ಬ್ರಿಟಿಷ್ ಸಂವಿಧಾನದ ಮಾಂಟೆಸ್ಕ್ಯೂನ ವಿಶ್ಲೇಷಣೆಯನ್ನು ಬಳಸಿಕೊಂಡಿದ್ದಾರೆ. ಕ್ರಾಂತಿಗೆ ಕಾರಣವಾದ ಒಂದು ಪ್ರೇರಕ ಶಕ್ತಿಯೆಂದರೆ 1775ರಲ್ಲಿ ವಸಾಹತುಗಳಲ್ಲಿ ಪ್ರಬಲವಾಗಿದ್ದ ಅಮೆರಿಕಾದ "ಪ್ರಜಾಪ್ರಭುತ್ವ-ವಾದ" ಎಂಬ ರಾಜಕೀಯ ಸಿದ್ಧಾಂತದ ಬಳಸಿಕೊಳ್ಳುವಿಕೆ. ಪ್ರಜಾಪ್ರಭುತ್ವ-ವಾದವು ಬ್ರಿಟನ್‌ನನ "ರಾಷ್ಟ್ರ ಪಕ್ಷ"ದಿಂದ ಉತ್ತೇಜಿಸಲ್ಪಟ್ಟಿತು. ಬ್ರಿಟಿಷ್ ಸರಕಾರದ ಬಗೆಗಿನ ಆ ಪಕ್ಷದ ಟೀಕೆಯು ಭೃಷ್ಟಾಚಾರವನ್ನು ಬ್ರಿಟನ್‌ನ ಭೀಕರ ಸತ್ಯತೆ ಎಂಬುದಾಗಿ ಒತ್ತಿಹೇಳಿತು.[ಸೂಕ್ತ ಉಲ್ಲೇಖನ ಬೇಕು] ಭೃಷ್ಟಾಚಾರವು ಅಟ್ಲಾಂಟಿಕ್ಅನ್ನು ದಾಟಬಹುದೆಂದು ಅಮೆರಿಕನ್ನರು ಭಯಗೊಂಡರು; ಹೆಚ್ಚಿನ ಅಮೆರಿಕನ್ನರ ಪ್ರಜಾತಂತ್ರವಾದಿ ಮೌಲ್ಯಗಳು ಮತ್ತು ಅವರ ಹಕ್ಕುಗಳ ಬಗೆಗಿನ ಬದ್ಧತೆಯು ಕ್ರಾಂತಿಯನ್ನು ಕಾರ್ಯೋದ್ಯುಕ್ತಗೊಳಿಸಿತು. ಬ್ರಿಟನ್ ಮಿತಿಮೀರಿದ ಭೃಷ್ಟಾಚಾರವನ್ನು ಹೊಂದಿದೆ ಮತ್ತು ಅದು ಅಮೆರಿಕನ್ನರ ಆಸಕ್ತಿಗಳಿಗೆ ಪ್ರತಿಕೂಲವಾಗಿದೆ ಎಂದು ಭಾವಿಸಲಾಯಿತು.[ಸೂಕ್ತ ಉಲ್ಲೇಖನ ಬೇಕು] ಬ್ರಿಟನ್ ಅಮೆರಿಕನ್ನರು ಅಂಗೀಕರಿಸಿದ ಸ್ವಾತಂತ್ರ್ಯಗಳಿಗೆ ಬೆದರಿಕೆಯನ್ನು ಹಾಕಿತು.[೪] ಸ್ವಾತಂತ್ರ್ಯಕ್ಕೆ ಒದಗಿದ ಅತಿ ದೊಡ್ಡ ಅಪಾಯವೆಂದರೆ ಲಂಡನ್‌ನಲ್ಲಿ ಮಾತ್ರವಲ್ಲದೆ ಪ್ರತಿ ಮನೆಯಲ್ಲೂ ಇದ್ದ ಭೃಷ್ಟಾಚಾರ. ವಸಾಹತುಗಾರರು ಇದನ್ನು ಸುಖಭೋಗ ಮತ್ತು ವಿಶೇಷವಾಗಿ ಶ್ರೀಮಂತ-ಪ್ರಭುತ್ವದೊಂದಿಗೆ ಜೊತಗೂಡಿಸಿದರು.[೫]
ಸ್ಥಾಪಕ ಪಿತಾಮಹರು ಪ್ರಜಾತಂತ್ರದ ಮೌಲ್ಯಗಳ ಪ್ರಬಲ ಸಮರ್ಥಕರಾಗಿದ್ದಾರೆ, ವಿಶೇಷವಾಗಿ ಸ್ಯಾಮ್ಯುಯೆಲ್ ಆಡಮ್ಸ್, ಪ್ಯಾಟ್ರಿಕ್ ಹೆನ್ರಿ, ಜಾರ್ಜ್ ವಾಷಿಂಗ್ಟನ್, ಥೋಮಸ್ ಪೈನೆ, ಬೆಂಜಮಿನ್ ಫ್ರ್ಯಾಂಕ್ಲಿನ್, ಜಾನ್ ಆಡಮ್ಸ್, ಥೋಮಸ್ ಜೆಫ್ಫೆರ್ಸನ್, ಜೇಮ್ಸ್ ಮ್ಯಾಡಿಸನ್ ಮತ್ತು ಅಲೆಕ್ಸಾಂಡರ್ ಹ್ಯಾಮಿಲ್ಟನ್[೬]. ವೈಯಕ್ತಿಕ ಆಸೆಗಳನ್ನು ಮೀರಿ ಪೌರ ಕರ್ತವ್ಯಗಳಿಗೆ ಹೆಚ್ಚು ಗಮನ ಹರಿಸುವುದು ಅಗತ್ಯವಾಗಿತ್ತು. ಜನರು ಅವರ ರಾಷ್ಟ್ರದ ಪುರುಷರು ಮತ್ತು ಮಹಿಳೆಯರ ಹಕ್ಕು ಮತ್ತು ಸ್ವಾತಂತ್ರ್ಯಗಳಿಗಾಗಿ ಹೋರಾಡುವ ದೃಢ ಸಂಕಲ್ಪವನ್ನು ಹಾಗೂ ಯೋಜಿತ ಪೌರ ಕರ್ತವ್ಯಗಳನ್ನು ಹೊಂದಿದ್ದರು. 1776ರಲ್ಲಿ ಮರ್ಸಿ ಓಟಿಸ್ ವಾರೆನ್ಗೆ ಬರೆಯುತ್ತಾ ಜಾನ್ ಆಡಮ್ಸ್, "ಸಾರ್ವಜನಿಕ ಪ್ರಭಾವವು ಖಾಸಗಿತನವಿಲ್ಲದೆ ಇರುವುದಿಲ್ಲ ಹಾಗೂ ಸಾರ್ವಜನಿಕ ಪ್ರಭಾವವೇ ಪ್ರಜಾಪ್ರಭುತ್ವವಾದದ-ಸ್ಥಾಪನೆಯಾಗಿದೆ" ಎಂದು ಹೇಳುವ ಮೂಲಕ ಕೆಲವು ಪುರಾತನ ಗ್ರೀಕ್ ಮತ್ತು ರೋಮನ್ ಚಿಂತಕರನ್ನು ಸಮರ್ಥಿಸಿದ್ದಾನೆ. ಅವನು ಹೀಗೆಂದು ಮುಂದುವರಿಸಿದ್ದಾನೆ:
"ಸಾರ್ವಜನಿಕ ಒಳ್ಳೆಯದಕ್ಕಾಗಿ, ಸಾರ್ವಜನಿಕ ಆಸಕ್ತಿಗಾಗಿ, ಗೌರವ, ಪ್ರಾಬಲ್ಯ ಮತ್ತು ವೈಭವಕ್ಕಾಗಿ ಧನಾತ್ಮಕ ಉದ್ವೇಗವಿರುತ್ತದೆ ಅಥವಾ ಪ್ರಜಾತಂತ್ರದ ಸರಕಾರವಿರುವುದಿಲ್ಲ ಅಥವಾ ಯಾವುದೇ ನೈಜ ಸ್ವಾತಂತ್ರ್ಯವೂ ಇರುವುದಿಲ್ಲ. ಈ ಸಾರ್ವಜನಿಕ ತೀವ್ರಾಸಕ್ತಿಯು ಎಲ್ಲಾ ಖಾಸಗಿ ಉದ್ವೇಗಗಳಿಗಿಂತ ಉತ್ತಮವಾಗಿರಬೇಕು. ಸಮಾಜದ ಹಕ್ಕುಗಳೊಂದಿಗೆ ಹೋರಾಟದಲ್ಲಿ ಭಾಗವಹಿಸುವಾಗ ಜನರು ಅವರ ಖಾಸಗಿ ಸ್ನೇಹ ಮತ್ತು ಬಾಂಧವರ ಸಂಪರ್ಕವನ್ನು ಗಮನಿಸದೆ ತಯಾರಾಗಿರಬೇಕು, ಆತ್ಮಾಭಿಮಾನವನ್ನು ಹೊಂದಿರಬೇಕು ಮತ್ತು ಅವರ ಖಾಸಗಿ ಸಂತೋಷ, ಉದ್ವೇಗ ಮತ್ತು ಆಸಕ್ತಿಗಳನ್ನು ತ್ಯಾಗ ಮಾಡಲು ಆನಂದದಿಂದಿರಬೇಕು. "[೭]
ಮಹಿಳೆಯರಿಗೆ, ಅಬಿಗೈಲ್ ಆಡಮ್ಸ್ ಮತ್ತು ಮರ್ಸಿ ಓಟಿಸ್ ವಾರೆನ್ ನಿರೂಪಿಸಿದ "ಪ್ರಜಾತಂತ್ರದ ಮಾತೃತ್ವ"ವು ಪ್ರಮುಖ ಆದರ್ಶವಾಯಿತು; ಪ್ರಜಾತಂತ್ರದ ಮಹಿಳೆಯ ಮೊದಲ ಕರ್ತವ್ಯವೆಂದರೆ ಪ್ರಜಾತಂತ್ರದ ಮೌಲ್ಯವನ್ನು ಅವಳ ಮಕ್ಕಳಲ್ಲಿ ತುಂಬುವುದು ಹಾಗೂ ಸುಖವಿಲಾಸ ಮತ್ತು ಆಡಂಬರದ ಜೀವನದಿಂದ ದೂರ ಇರುವುದು.
ಟಾಮ್ ಪೈನೆಯ ಅತ್ಯುತ್ತಮವಾಗಿ ಮಾರಾಟ ಕಂಡ ಕರಪತ್ರ ಕಾಮನ್ ಸೆನ್ಸ್ ಕ್ರಾಂತಿಯು ಆರಂಭವಾದ ನಂತರ 1776ರಲ್ಲಿ ಪ್ರಕಟಗೊಂಡಿತು. ಕ್ರಾಂತಿಗೆ ಜನಪ್ರಿಯ ಬೆಂಬಲ ನೀಡಲು, ಬ್ರಿಟನ್‌ನಿಂದ ಬೇರ್ಪಡುವುದನ್ನು ಸಮರ್ಥಿಸಲು ಹಾಗೂ ಭೂಖಂಡೀಯ ಸೇನೆಗೆ ಹೊಸಸೇರ್ಪಡೆಯನ್ನು ಮಾಡಲು, ಇದನ್ನು ಹೋಟೆಲುಗಳಲ್ಲಿ ಗಟ್ಟಿಯಾಗಿ ಓದಲಾಗುತ್ತಿತ್ತು. ಇತಿಹಾಸಕಾರರು 1776ರಲ್ಲಿ ಬಿಡುಗಡೆಯಾದ ಥೋಮಸ್ ಪೈನೆಯ ಕಾಮನ್ ಸೆನ್ಸ್ ನ ಅಗಾಧ ಜನಪ್ರಿಯತೆಯ ಬಗ್ಗೆ ಸೂಚಿಸುತ್ತಾರೆ. ಅದು ಜನರಿಗೆ ಪ್ರಜಾಪ್ರಭುತ್ವ-ವಾದವನ್ನು ವಿವರಿಸಿ, ಹೆಚ್ಚಿನ ಪುರುಷ ನಾಗರಿಕರನ್ನು ಒಂದುಗೂಡಿಸಿತು.[೮] ಅಂದಿನ ಭಿನ್ನಮತೀಯ (ಅಂದರೆ, ಪ್ರೊಟೆಸ್ಟೆಂಟ್, ಚರ್ಚ್ ಆಫ್ ಇಂಗ್ಲೆಂಡ್-ಅಲ್ಲದ) ಚರ್ಚ್‌ಗಳು “ಪ್ರಜಾಪ್ರಭುತ್ವದ ಶಾಲೆ”ಗಳಾಗಿದ್ದವು.[೯] ಕಾಲೇಜ್ ಆಫ್ ನ್ಯೂಜೆರ್ಸಿಯ (ಈಗಪ್ರಿನ್ಸೆಟನ್ ಯೂನಿವರ್ಸಿಟಿ) ಅಧ್ಯಕ್ಷ ಜಾನ್ ವಿದರ್‌ಸ್ಪೂನ್, ಅಮೆರಿಕಾದ ಕ್ರಾಂತಿಯನ್ನು ಯೆಹೂದ್ಯರ ಬೈಬಲ್‌ನ ಬೋಧನೆಗಳೊಂದಿಗೆ ಸಂಬಂಧ ಕಲ್ಪಿಸುವ ವ್ಯಾಪಕವಾಗಿ ಹಂಚಲ್ಪಟ್ಟ ಧರ್ಮೋಪದೇಶಗಳನ್ನು ಬರೆದನು. ವಸಾಹತುಗಳಾದ್ಯಂತ ಭಿನ್ನಮತೀಯ ಪ್ರೊಟೆಸ್ಟೆಂಟ್ ಸಮುದಾಯಗಳು (ಪ್ಯೂರಿಟನ್, ಸ್ಥಳೀಯ ಪದ್ಧತಿಯ ಅನುಯಾಯಿ, ಬ್ಯಾಪ್ಟಿಸ್ಟ್ ಮತ್ತು ಪ್ರೆಸ್ಬಿಟೀರಿಯನ್) ಕ್ರಾಂತಿಕಾರಿ ಅಂಶಗಳನ್ನು ಅವುಗಳ ಬೋಧನೆಗಳಲ್ಲಿ ವಾಚಿಸಿದವು ಹಾಗೂ ಅವುಗಳ ಸಮುದಾಯಗಳನ್ನು ಕ್ರಾಂತಿಕಾರಿ ಹೋರಾಟ ರಾಜಕಾರಣದ ಪ್ರಮುಖ ಕೇಂದ್ರವಾಗಿ ಆಯೋಜಿಸಿದವು. ಇತರರು ವಿಶೇಷವಾಗಿ ಚರ್ಚ್ ಆಫ್ ಇಂಗ್ಲೆಂಡ್ ಸದಸ್ಯರು ರಾಜನನ್ನು ಬೆಂಬಲಿಸಿದರು.[೧೦] ನಿರಂಕುಶಾಧಿಕಾರ-ವಿರೋಧಿ ಹೋರಾಟದ ಧಾರ್ಮಿಕ ಪ್ರೇರಣೆಯು ಶ್ರೀಮಂತರು ಮತ್ತು ಬಡವರು, ಪುರುಷರು ಮತ್ತು ಮಹಿಳೆಯರು, ಗಡಿನಾಡಿನವರು ಮತ್ತು ಊರಿನ ನಿವಾಸಿಗಳು, ಕೃಷಿಕರು ಮತ್ತು ವ್ಯಾಪಾರಿಗಳು ಹೀಗೆ ವ್ಯಾಪಕವಾಗಿ ಹರಡಿತು.[೧೧] ದಾರ್ಶನಿಕ ಚಳವಳಿಯ ಅವಧಿಯಲ್ಲಿ ಓದಿದ ಪುರಾತನ ಲೇಖಕರು, ರಾಜನ, ಶ್ರೀಮಂತ ಪ್ರಭುತ್ವದ ಮತ್ತು ಸಾಮಾನ್ಯರ ಸಾಮಾಜಿಕ ಶ್ರೇಣಿ ವ್ಯವಸ್ಥೆಯನ್ನು ಒಳಗೊಂಡ ಪ್ರಜಾತಂತ್ರ-ಸರಕಾರದ ಸೈದ್ಧಾಂತಿಕ ಚಿಂತನೆಯನ್ನು ಬೋಧಿಸಿದರು. ವಿಶೇಷ ಹಕ್ಕು, ಸವಲತ್ತುಗಳುಳ್ಳ ವರ್ಗಕ್ಕೆ ಶ್ರೇಣಿ ವ್ಯವಸ್ಥೆಯ ವ್ಯತ್ಯಾಸವನ್ನು ನಿರ್ವಹಿಸುವುದರೊಂದಿಗೆ, ಇಂಗ್ಲಿಷ್ ಸ್ವಾತಂತ್ರ್ಯಗಳು ಈ ಮೂರು ಸಾಮಾಜಿಕ ಶ್ರೇಣಿ ವ್ಯವಸ್ಥೆಗಳ ನಡುವಿನ ಸಮತೋಲನ ಸಾಮರ್ಥ್ಯವನ್ನು ಅವಲಂಬಿಸಿದೆ ಎಂದು ವ್ಯಾಪಕವಾಗಿ ನಂಬಲಾಗಿದೆ.[೧೨] ಇತಿಹಾಸಕಾರ ಬರ್ನಾರ್ಡ್ ಬೈಲಿನ್ ಹೀಗೆಂದು ಹೇಳಿದ್ದಾನೆ - "ಬೈಬಲ್ ಬೋಧಿಸಿದ ಎಲ್ಲರೂ ಸಮಾನರು, ವ್ಯಕ್ತಿಯ ಮೌಲ್ಯವು ಆತನ ವರ್ಗದಲ್ಲಿಲ್ಲದೆ ನೈತಿಕ ವರ್ತನೆಯಲ್ಲಿರುತ್ತದೆ ಹಾಗೂ ಅಂತಹವರೆಲ್ಲರೂ ರಕ್ಷಿಸಲ್ಪಡುತ್ತಾರೆ ಎಂದು ಉಪದೇಶಿಸುವ ಮೂಲಕ, ಮಧ್ಯ-ಹದಿನೆಂಟನೇ ಶತಮಾನದ ಪ್ಯೂರಿಟನ್ ವಾದ ಮತ್ತು ವ್ಯಾಪಕವಾಗಿದ್ದ ಸುವಾರ್ತೆಯ ಬೋಧನೆಯು ಸಾಮಾಜಿಕ ಶ್ರೇಣೀಕರಣದ ಸಾಂಪ್ರದಾಯಿಕ ಕಲ್ಪನೆಗಳಿಗೆ ಸವಾಲುಗಳನ್ನು ಸೃಷ್ಟಿಸಿದವು".[೧೩]
ಉದ್ರೇಕಕಾರಿ ಬ್ರಿಟಿಷ್ ಕಾನೂನುಗಳು
[ಬದಲಾಯಿಸಿ]ಈ ಕ್ರಾಂತಿಯು ಅಮೆರಿಕನ್ನರಿಗಾಗಿ ಬ್ರಿಟಿಷ್ ಸಂಸತ್ತು ರಚಿಸಿದ ಅನೇಕ ತೀವ್ರ ಕಾನೂನುಗಳಿಂದಾಗಿ ಸಂಭವಿಸಿತು. ಈ ಕಾನೂನುಗಳು ಆ ಸರಕಾರದಲ್ಲಿ ಪ್ರಾತಿನಿಧ್ಯವನ್ನು ಪಡೆಯದ ಇಂಗ್ಲೀಷರ ವಿರುದ್ಧ ಅಮೆರಿಕಾದಲ್ಲಿ ಕಾನೂನನ್ನು ಹೇರಲು ಹಕ್ಕಿಲ್ಲದ, ಸರಕಾರದ ನ್ಯಾಯ ಸಮ್ಮತವಲ್ಲದ ಚಟುವಟಿಕೆಗಳಾಗಿದ್ದವು. ಮಾತೃ ರಾಷ್ಟ್ರಕ್ಕೆ ಪ್ರಯೋಜನವಾಗುವಂತೆ ರೂಪಿಸಿದ ಆರ್ಥಿಕ ಅಭಿವೃದ್ಧಿಯ ಹೆಸರಿನಲ್ಲಿ ದೀರ್ಘ ಕಾಲದವರೆಗೆ ಸ್ವಯಮಾಧಿಪತ್ಯವನ್ನು ನಡೆಸಲು ಅವಕಾಶ ನೀಡಿದ ವಸಾಹತುಶಾಹಿ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಈ ಕಾನೂನುಗಳು ಅವಶ್ಯಕವೆಂದು ನಿಯಮಗಳ ರಚನೆಕಾರರು ಪರಿಗಣಿಸಿದರು.
ಸಮುದ್ರಯಾನದ ಕಾಯಿದೆಗಳು
[ಬದಲಾಯಿಸಿ]ಬ್ರಿಟಿಷ್ ಸಾಮ್ರಾಜ್ಯವು ಆ ಸಂದರ್ಭದಲ್ಲಿ ವಾಣಿಜ್ಯ ವ್ಯವಸ್ಥೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅದರಲ್ಲಿ ಆರ್ಥಿಕ ಸಂಪತ್ತನ್ನು ಅಥವಾ ಕ್ಯಾಪಿಟಲ್ ಬುಲಿಯನ್ನಿಂದ (ಚಿನ್ನ, ಬೆಳ್ಳಿ ಮತ್ತು ವ್ಯಾಪಾರ ಮೌಲ್ಯ) ಸೂಚಿಸಲಾಗುತ್ತಿತ್ತು. ಇದು ಇತರ ರಾಷ್ಟ್ರಗಳೊಂದಿಗೆ ಧನಾತ್ಮಕ ವ್ಯಾಪಾರ ಸಮತೋಲನದ (ರಫ್ತು ಮತ್ತು ಆಮದುಗಳ ವ್ಯತ್ಯಾಸ) ಮೂಲಕ ಉತ್ತಮವಾಗಿ ಬೆಳೆವಣಿಗೆ ಹೊಂದಿದ ರಾಜ್ಯದಿಂದ ನಡೆಸಲ್ಪಡುತ್ತಿತ್ತು. ಆಡಳಿತ ನಡೆಸುವ ಸರಕಾರವು ಆರ್ಥಿಕ ಸ್ಥಿತಿಯಲ್ಲಿ ಆರ್ಥಿಕ-ರಕ್ಷಣಾ ವಾದಿ ಪಾತ್ರವನ್ನು ವಹಿಸುವ ಮೂಲಕ, ವಿಶೇಷವಾಗಿ ಸುಂಕದ ಕಾನೂನುಗಳನ್ನು ಬಳಸಿಕೊಂಡು ರಫ್ತುಗಳನ್ನು ಪ್ರೋತ್ಸಾಹಿಸಿ ಮತ್ತು ಆಮದುಗಳನ್ನು ಕಡಿಮೆ ಮಾಡಿ ಈ ಗುರಿಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ವಾಣಿಜ್ಯ ಸಿದ್ಧಾಂತವು ಸೂಚಿಸುತ್ತದೆ. ಗ್ರೇಟ್ ಬ್ರಿಟನ್ ವಸಾಹತುಗಳ ಆರ್ಥಿಕ ಸ್ಥಿತಿಯನ್ನು ವಾಣಿಜ್ಯ ಸಿದ್ಧಾಂತದ ತತ್ವಗಳ ಪ್ರಕಾರ ಸಮುದ್ರಯಾನದ ಕಾಯಿದೆಗಳ ಮೂಲಕ ನಿಯಂತ್ರಿಸಿತು. ಈ ಕಾನೂನುಗಳಿಂದ ವ್ಯಾಪಕವಾಗಿ ತಪ್ಪಿಸಿಕೊಳ್ಳಲಾಗುತ್ತಿತ್ತು. ಅಂತಿಮವಾಗಿ, ಪೂರ್ವನಿರ್ಧಾರಿತ ಮಿತಿ ಇರದ ಶೋಧನೆ ಅಧಿಕಾರಗಳ (ವ್ರಿಟ್ಸ್ ಆಫ್ ಅಸಿಸ್ಟನ್ಸ್) ಬಳಕೆಯಿಂದ ಈ ಕಾಯಿದೆಗಳನ್ನು ಕಟ್ಟುನಿಟ್ಟಾಗಿ ಹೇರಲಾಯಿತು. 1761ರಲ್ಲಿ ಮಸ್ಸಾಚ್ಯುಸೆಟ್ಸ್ ನ್ಯಾಯವಾದಿ ಜೇಮ್ಸ್ ಓಟಿಸ್, ಈ ಆಜ್ಞೆಗಳು ವಸಾಹತುಗಾರರ ಸಂವಿಧಾನಾತ್ಮಕ ಹಕ್ಕುಗಳನ್ನು ಉಲ್ಲಂಘಿಸಿದವು ಎಂದು ವಾದಿಸಿದನು. ಅವನು ಆ ಕೇಸ್‌ನಲ್ಲಿ ಸೋತನು. ಆದರೆ ನಂತರ ಜಾನ್ ಆಡಮ್ಸ್ "ಅಮೆರಿಕಾದ ಸ್ವಾತಂತ್ರ್ಯವು ಆಗಲೇ ಹುಟ್ಟಿಕೊಂಡಿತು" ಎಂದು ಬರೆದಿದ್ದಾನೆ. 1762ರಲ್ಲಿ ಪ್ಯಾಟ್ರಿಕ್ ಹೆನ್ರಿಯು, ಶಾಸಕಾಂಗವು ಒಂದು ಕಾನೂನನ್ನು ಮಂಡಿಸಿ, ಅದು ರಾಜನಿಂದ ನಿರಾಕರಿಸಲ್ಪಟ್ಟ ವರ್ಜಿನಿಯಾದಲ್ಲಿನ ಪಾರ್ಸನ್ ಕಾರಣವನ್ನು ಸೂಚಿಸಿದನು. ಹೆನ್ರಿಯು ಹೀಗೆಂದು ವಾದಿಸಿದ್ದಾನೆ - "ಒಬ್ಬ ರಾಜನು ಅವನ ಜನರಿಗೆ ಮುಖ್ಯ ನಾಯಕನಾಗಿದ್ದುಕೊಂಡು ಈ ಪ್ರಯೋಜಕರ ಕಾಯಿದೆಗಳಿಗೆ ಅವಕಾಶ ನೀಡದಿರುವುದು ಅವನನ್ನು ಒಬ್ಬ ನಿರಂಕುಶಾಧಿಕಾರಿಯನ್ನಾಗಿ ಮಾಡುತ್ತದೆ ಹಾಗೂ ಅವನ ಜನರ ವಿಧೇಯತೆಗೆ ಎಲ್ಲಾ ಹಕ್ಕುಗಳ ದಂಡ ತೆರಬೇಕಾಗುತ್ತದೆ".[೧೪]
ಪಶ್ಚಿಮದ ಗಡಿನಾಡು
[ಬದಲಾಯಿಸಿ]ಫ್ರೆಂಚ್ ಮತ್ತು ಭಾರತದ ಕದನದ ನಂತರ, ಬ್ರಿಟಿಷ್ ಸರಕಾರವು ಸಾಧ್ಯವಾದಷ್ಟು ರಕ್ಷಣಾ ವೆಚ್ಚವನ್ನು ಕಡಿಮೆ ಮಾಡಲು ಪ್ರಯತ್ನಿಸಿತು ಹಾಗೂ ಫ್ರೆಂಚ್ ಒಂದಿಗೆ ಸಂಬಂಧ ಬೆಳೆಸಿಕೊಂಡಿದ್ದ ಭಾರತೀಯ ಸಮುದಾಯಗಳೊಂದಿಗೆ ಶಾಂತಿಯುತ ಸಂಬಂಧಗಳನ್ನು ನಿರ್ವಹಿಸುವ ಉದ್ದೇಶವನ್ನು ಹೊಂದಿತ್ತು. ಇದಕ್ಕಾಗಿ 1763ರ ಘೋಷಣೆಯು, ಅಪ್ಪಲಚಿಯನ್ ಮೌಂಟೇನ್ಸ್ ಭಾರತಕ್ಕೆ ಸೇರಿದ ಪ್ರದೇಶವೆಂದು ನಿರೂಪಿತವಾದುದರಿಂದ ಅಲ್ಲಿನ ವಸಾಹತುಗಾರಿಕೆಯನ್ನು ಪರಿಮಿತಗೊಳಿಸಿತು. ಇದನ್ನು ಲೆಕ್ಕಿಸದೆ, ಹಲವಾರು ವಸಾಹತುಗಾರರು ಪಶ್ಚಿಮಕ್ಕೆ ಹೋಗುವುದನ್ನು ಮತ್ತು ಅಲ್ಲಿ ಗುತ್ತಿಗೆ ಪ್ರದೇಶಗಳನ್ನು ಸ್ಥಾಪಿಸುವುದನ್ನು ಮುಂದುವರಿಸಿದರು. ಘೋಷಣೆಯನ್ನು ಶೀಘ್ರದಲ್ಲಿ ಮಾರ್ಪಡಿಸಲಾಯಿತು ಹಾಗೂ ಅದು ನಂತರ ವಸಾಹತೀಕರಣಕ್ಕೆ ಅಡಚಣೆಯನ್ನುಂಟುಮಾಡಲಿಲ್ಲ. ಆದರೆ ಅದರ ಪ್ರಕಟಣೆ ಮತ್ತು ವಸಾಹತುಗಾರರನ್ನು ಸಂಪರ್ಕಿಸದೆ ಬರೆಯಲಾಗಿದೆ ಎಂಬ ವಿಷಯವು ಅವರನ್ನು ಸಿಟ್ಟುಗೊಳಿಸಿತು. 1774ರ ಕ್ವೆಬೆಕ್ ಕಾಯಿದೆ ಹದಿಮೂರು ವಸಾಹತುಗಳ ವಾದಗಳನ್ನು ಲಕ್ಷಿಸದೆ, ಕ್ವೆಬೆಕ್ನ ಗಡಿಯನ್ನು ಓಹಿಯೊ ನದಿಯವರೆಗೆ ವಿಸ್ತರಿಸಿತು. ಆ ನಂತರ ಅಮೆರಿಕನ್ನರು ಲಂಡನ್‌ನ ಹೊಸ ಕಾನೂನುಗಳಿಗೆ ಗೌರವವನ್ನು ನೀಡಲಿಲ್ಲ; ಅವರು ಸೇನೆಗೆ ಕಟ್ಟುನಿಟ್ಟಾಗಿ ಅಭ್ಯಾಸ ಮಾಡಿಸಿದರು ಹಾಗೂ ಯುದ್ಧಕ್ಕಾಗಿ ವ್ಯವಸ್ಥೆ ಮಾಡಿಕೊಂಡರು.[೧೫]
ಪ್ರಾತಿನಿಧ್ಯವಿಲ್ಲದ ತೆರಿಗೆ ಸಂದಾಯ
[ಬದಲಾಯಿಸಿ]1763ರಲ್ಲಿ ಗ್ರೇಟ್ ಬ್ರಿಟನ್ ಉತ್ತರ ಅಮೆರಿಕದಲ್ಲಿ ವ್ಯಾಪಕ ಹಿಡಿತವನ್ನು ಸಾಧಿಸಿತು. ಹದಿಮೂರು ವಸಾಹತುಗಳೊಂದಿಗೆ ಇಪ್ಪತ್ತನಾಲ್ಕು ಸಣ್ಣ ವಸಾಹತುಗಳು ರಾಜಪ್ರಭುತ್ವದ ಗವರ್ನರುಗಳಿಂದ ನೇರವಾಗಿ ಆಳಲ್ಪಟ್ಟವು. ಏಳು ವರ್ಷದ ಕದನದ ಗೆಲುವು ಗ್ರೇಟ್ ಬ್ರಿಟನ್‌ಗೆ ನ್ಯೂ ಫ್ರಾನ್ಸ್ (ಕೆನಡಾ), ಸ್ಪ್ಯಾನಿಶ್ ಫ್ಲೋರಿಡಾ ಮತ್ತು ಮಿಸ್ಸಿಸಿಪ್ಪಿ ನದಿಯ ಪೂರ್ವ ಭಾಗದ ಅಮೆರಿಕಾದ ಮೂಲನಿವಾಸಿಗಳ ಪ್ರದೇಶಗಳನ್ನು ಕೊಟ್ಟಿತು. ಆದರೂ 1765ರಲ್ಲಿ ವಸಾಹತುಗಾರರು ಅವರನ್ನು, ಬ್ರಿಟನ್‌ನ ಪ್ರಜೆಗಳ ಐತಿಹಾಸಿಕ ಹಕ್ಕು ಮತ್ತು ಕಟ್ಟುಪಾಡುಗಳೊಂದಿಗೆ ಬ್ರಿಟಿಷ್ ರಾಜನ ನಿಷ್ಠಾವಂತ ಪ್ರಜೆಗಳೆಂದು ಪರಿಗಣಿಸಿದರು.[೧೬] ವಸಾಹತುಗಳು ಫ್ರೆಂಚ್ ಮತ್ತು ಭಾರತದ ಕದನದ ಸಂದರ್ಭದಲ್ಲಿ ಉಂಟಾದ ಸಾಲದಲ್ಲಿ ಆಸಕ್ತಿ ವಹಿಸುವುದನ್ನು ಅಥವಾ ಹಿಂದಕ್ಕೆ ಸರಿಯುವುದನ್ನು ಬ್ರಿಟಿಷ್ ನಿರೀಕ್ಷಿಸಲಿಲ್ಲ. ಆದರೆ ಅವರು ವಸಾಹತುಗಳ ರಕ್ಷಣೆಗೆ ಮಾಡಿದ ಖರ್ಚಿನ ಸ್ವಲ್ಪ ಭಾಗವನ್ನು ಅಮೆರಿಕನ್ನರು ಪಾವತಿಸಬೇಕೆಂದು ಹೇಳಿದರು. ಭೂಖಂಡೀಯ ವಸಾಹತುಗಳ ಮತ್ತು ವೆಸ್ಟ್ ಇಂಡೀಸ್ನ ರಕ್ಷಣೆಗಾಗಿ ಮಾಡಿದ ಖರ್ಚಿನ ಅಂದಾಜು ವಾರ್ಷಿಕವಾಗಿ ಸರಿಸುಮಾರು £200,000ನಷ್ಟಿತ್ತು. ಈ ಯುದ್ಧದ ನಂತರದ ಬ್ರಿಟಿಷ್, ವಸಾಹತುಗಳಿಗೆ ಈ ಮೊತ್ತಕ್ಕೆ £78,000ನಷ್ಟು ತೆರಿಗೆ ವಿಧಿಸುವ ಗುರಿಯನ್ನು ಹೊಂದಿತ್ತು. ಸಂಸತ್ತು ಸಂಪೂರ್ಣ ನಿಯಂತ್ರಣದಲ್ಲಿರುವುದನ್ನು ಕಂದಾಯವು ಪ್ರಮಾಣೀಕರಿಸಿತೆಂದು ಲಂಡನ್ ಸೂಚಿಸಿತು.[೧೭] ವಸಾಹತುಗಾರರೊಂದಿಗಿನ ಸಮಸ್ಯೆಯೆಂದರೆ ತೆರಿಗೆಗಳು ಹೆಚ್ಚಾಗಿದ್ದವೆಂಬುದಲ್ಲ (ಅವು ಕಡಿಮೆಯಾಗಿದ್ದವು), ತೆರಿಗೆಗಳನ್ನು ವಿಧಿಸಿದ ಸಂಸತ್ತಿನಲ್ಲಿ ವಸಾಹತುಗಳು ಯಾವುದೇ ಪ್ರಾತಿನಿಧ್ಯವನ್ನು ಹೊಂದಿಲ್ಲವೆಂಬುದಾಗಿತ್ತು. 1775ರಲ್ಲಿ ಲಾರ್ಡ್ ನಾರ್ತ್, ಇಂಗ್ಲೀಷರು ತೆರಿಗೆಗಳಲ್ಲಿ ವಾರ್ಷಿಕವಾಗಿ ಸುಮಾರು ಇಪ್ಪತ್ತೈದು ಷಿಲಿಂಗನ್ನು ಪಾವತಿಸುತ್ತಾರೆ ಆದರೆ ಅಮೆರಿಕನ್ನರು ಕೇವಲ ಆರುಪೆನ್ನಿಯನ್ನು ಮಾತ್ರ ಪಾವತಿಸುತ್ತಾರೆ ಎಂದು ಬ್ರಿಟಿಷ್ ಪರವಾಗಿ ವಾದಿಸಿದನು.[೧೮] "ಪ್ರಾತಿನಿಧ್ಯವಿಲ್ಲದೆ ತೆರಿಗೆ ಪಾವತಿಸುವುದಿಲ್ಲ" ಎಂಬ ಘೋಷಣಾ ವಾಕ್ಯವು ಅಮೆರಿಕಾದಲ್ಲಿ ಜನಪ್ರಿಯವಾಯಿತು. ಲಂಡನ್ ವಸಾಹತುಗಾರರನ್ನು "ವಾಸ್ತವಿಕವಾಗಿ ನಿರೂಪಿಸಲಾಗುತ್ತದೆ" ಎಂದು ಸಮರ್ಥಿಸಿಕೊಂಡಿತು; ಆದರೆ ಹೆಚ್ಚಿನ ಅಮೆರಿಕನ್ನರು ಇದನ್ನು ನಿರಾಕರಿಸಿದರು.[೧೯]
1764 – ಹೊಸ ತೆರಿಗೆಗಳು
[ಬದಲಾಯಿಸಿ]1764ರಲ್ಲಿ ಸಂಸತ್ತು ಶುಗರ್ ಆಕ್ಟ್ ಮತ್ತು ಕರೆನ್ಸಿ ಆಕ್ಟ್ಅನ್ನು ವಿಧಿಸಿತು. ಇದು ವಸಾಹತುಗಾರರನ್ನು ಮತ್ತಷ್ಟು ಕೆರಳಿಸಿತು. ಪ್ರತಿಭಟನೆಗಳು ಪ್ರಬಲವಾದ ಹೊಸ ವಿಧಾನ ಬ್ರಿಟಿಷ್ ಸರಕಿನ ಉದ್ದೇಶಪೂರ್ವಕವಾದ ಬಹಿಷ್ಕಾರಕ್ಕೆ ದಾರಿ ಮಾಡಿಕೊಟ್ಟವು. ಬ್ರಿಟಿಷ್ ಅದೇ ವರ್ಷ ಕ್ವಾರ್ಟೆರಿಂಗ್ ಕಾಯಿದೆಅನ್ನು ವಿಧಿಸುವ ಮೂಲಕ ವಸಾಹತುಗಾರರನ್ನು ಮತ್ತಷ್ಟು ಕೆಳಕ್ಕೆ ತಳ್ಳಿತು. ಈ ಆಕ್ಟ್ ಬ್ರಿಟಿಷ್ ಸೈನಿಕರನ್ನು ಕೆಲವು ಪ್ರದೇಶಗಳ ನಿವಾಸಿಗರ ಖರ್ಚಿನಲ್ಲಿ ಬಿಡದಿಗಳಲ್ಲಿ ಇರಿಸುವಂತೆ ಘೋಷಿಸಿತು.
ಸ್ಟ್ಯಾಂಪ್ ತೆರಿಗೆ ಶಾಸನ 1765
[ಬದಲಾಯಿಸಿ]1765ರಲ್ಲಿ ವಿಧಿಸಲಾದ ಸ್ಟ್ಯಾಂಪ್ ತೆರಿಗೆ ಶಾಸನ ಸಂಸತ್ತು ವಸಾಹತುಗಳ ಮೇಲೆ ಜಾರಿಗೊಳಿಸಿದ ಮೊದಲ ನೇರ ತೆರಿಗೆಯಾಗಿದೆ. ಎಲ್ಲಾ ವಾರ್ತಾಪತ್ರಿಕೆಗಳು, ಪಂಚಾಂಗಗಳು, ಕರಪತ್ರಗಳು ಮತ್ತು ಅಧಿಕೃತ ದಾಖಲೆಗಳು ಮಾತ್ರವಲ್ಲದೆ ಇಸ್ಪೀಟು ಕಟ್ಟುಗಳೂ ಸ್ಟ್ಯಾಂಪ್‌ಗಳನ್ನು ಹೊಂದಿರಬೇಕಾಗಿತ್ತು. ಎಲ್ಲಾ 13 ವಸಾಹತುಗಳು ಭಾವೋದ್ವೇಗದಿಂದ ವಿರೋಧಿಸಿದವು. ವರ್ಜಿನಿಯಾದಲ್ಲಿ ಪ್ಯಾಟ್ರಿಕ್ ಹೆನ್ರಿ ಮತ್ತು ಮಸ್ಸಾಚ್ಯುಸೆಟ್ಸ್‌ನಲ್ಲಿ ಜೇಮ್ಸ್ ಓಟಿಸ್ ಮೊದಲಾದ ಜನಪ್ರಿಯ ಮುಖಂಡರು ಪ್ರತಿಭಟನೆಯಲ್ಲಿ ಜನರನ್ನು ಒಂದುಗೂಡಿಸಿದರು. "ಸನ್ಸ್ ಆಫ್ ಲಿಬರ್ಟಿ" ಎಂಬ ರಹಸ್ಯ ಗುಂಪೊಂದು ಅನೇಕ ಪಟ್ಟಣಗಳಲ್ಲಿ ರೂಪುಗೊಂಡಿತು ಹಾಗೂ ಸ್ಟ್ಯಾಂಪ್‌ಗಳನ್ನು ಮಾರಾಟ ಮಾಡಿದರೆ ಹಿಂಸೆಯ ಮೂಲಕ ಬೆದರಿಕೆ ಹಾಕಿತು.[೨೦] ಬೋಸ್ಟನ್‌ನಲ್ಲಿ, ಸನ್ಸ್ ಆಫ್ ಲಿಬರ್ಟಿಯು ವೈಸ್ ಅಡ್ಮಿರಲ್‌ನ ಕೋರ್ಟಿನ ದಾಖಲೆಗಳನ್ನು ಸುಟ್ಟುಹಾಕಿತು ಹಾಗೂ ಮುಖ್ಯ ನ್ಯಾಯಮೂರ್ತಿ ಥೋಮಸ್ ಹಟ್ಚಿನ್ಸನ್ನ ವಿಲಾಸಮಯ ಮನೆಯನ್ನು ದರೋಡೆ ಮಾಡಿತು. ಸಂಯುಕ್ತ ಕಾರ್ಯಾಚರಣೆಗಾಗಿ ಅನೇಕ ಶಾಸನ ಸಭೆಗಳನ್ನು ಕರೆಯಲಾಯಿತು ಹಾಗೂ ಒಂಬತ್ತು ವಸಾಹತುಗಳು ನ್ಯೂಯಾರ್ಕ್ ನಗರದಲ್ಲಿ 1765ರ ಅಕ್ಟೋಬರ್‌ನಲ್ಲಿ ನಡೆದ ಸ್ಟ್ಯಾಂಪ್ ಆಕ್ಟ್ ಕಾಂಗ್ರೆಸ್‌ಗೆ ಪ್ರತಿನಿಧಿಗಳನ್ನು ಕಳುಹಿಸಿತು. ಜಾನ್ ಡಿಕಿನ್ಸನ್ ನಿರ್ದೇಶಿಸಿದ ಮಂದಗಾಮಿಗಳು, ಪ್ರಾತಿನಿಧ್ಯವಿಲ್ಲದೆ ವಿಧಿಸಿದ ತೆರಿಗೆಗಳು ಅವರ ಇಂಗ್ಲೀಷರ ಹಕ್ಕುಗಳನ್ನು ಉಲ್ಲಂಘಿಸಿದವೆಂದು ನಿರೂಪಿಸುತ್ತಾ, "ಹಕ್ಕು ಮತ್ತು ದೂರುಗಳ ಘೋಷಣೆ"ಯೊಂದನ್ನು ಸಾರಿದರು. ಬ್ರಿಟಿಷ್ ವಾಣಿಜ್ಯ ಸರಕಿನ ಆರ್ಥಿಕ ಬಹಿಷ್ಕಾರದ ವಿಷಯಕ್ಕೆ ಪ್ರಾಮುಖ್ಯತೆಯನ್ನು ನೀಡಿದರಿಂದ ವಸಾಹತುಗಳ ಆಮದುಗಳು 1764ರಲ್ಲಿದ್ದ £2,250,000ರಿಂದ 1765ರ ಹೊತ್ತಿಗೆ £1,944,000ರಷ್ಟಕ್ಕೆ ಕುಸಿಯಿತು. ಲಂಡನ್‌ನಲ್ಲಿ ರಾಕಿಂಗ್ಯಮ್ ಸರಕಾರವು ಆಡಳಿತಕ್ಕೆ ಬಂದ ಸಂದರ್ಭದಲ್ಲಿ, ಸಂಸತ್ತು ಸ್ಟ್ಯಾಂಪ್ ತೆರಿಗೆ ಶಾಸನವನ್ನು ಹಿಂತೆಗೆದುಕೊಳ್ಳಬೇಕೇ ಅಥವಾ ಅದನ್ನು ಬಲವಂತವಾಗಿ ವಿಧಿಸಲು ಸೇನೆಯನ್ನು ಕಳುಹಿಸಬೇಕೇ ಎಂದು ಚರ್ಚಿಸಿತು. ಬೆಂಜಮಿನ್ ಫ್ರ್ಯಾಂಕ್ಲಿನ್ ಫ್ರೆಂಚ್ ಮತ್ತು ಅಮೆರಿಕಾದ ಮೂಲನಿವಾಸಿಗಳ ವಿರುದ್ಧದ ಯುದ್ಧಗಳ ಸರಣಿಯಲ್ಲಿ ಸಾಮ್ರಾಜ್ಯವನ್ನು ರಕ್ಷಿಸುವಲ್ಲಿ ವಸಾಹತುಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಜನಬಲ, ಹಣ ಮತ್ತು ಬಲಿಯನ್ನು ನೀಡಿವೆ ಹಾಗೂ ಆ ಯುದ್ಧಗಳಿಗಾಗಿ ಮತ್ತಷ್ಟು ತೆರಿಗೆಗಳನ್ನು ಪಾವತಿಸಲು ಹೇಳುವುದು ನ್ಯಾಯವಲ್ಲದ್ದು ಮತ್ತು ಅದು ದಂಗೆಯನ್ನು ಉಂಟುಮಾಡಬಹುದು ಎಂದು ವಿವರಿಸುತ್ತಾ ಬಹಿಷ್ಕರಿಸುವವರಿಗಾಗಿ ಕೇಸೊಂದನ್ನು ಹೂಡಿದನು. ಸಂಸತ್ತು ಇದನ್ನು ಒಪ್ಪಿ, ತೆರಿಗೆಯನ್ನು ಹಿಂತೆಗೆದುಕೊಂಡಿತು. ಆದರೆ "ಡಿಕ್ಲರೇಟರ್ ಆಕ್ಟ್"ನಲ್ಲಿ 1766ರ ಮಾರ್ಚ್‌ನಲ್ಲಿ ಸಂಸತ್ತು "ಎಲ್ಲಾ ಸಂದರ್ಭದಲ್ಲೂ" ವಸಾಹತುಗಳಿಗೆ ಕಾನೂನುಗಳನ್ನು ಮಾಡುವ ಸಂಪೂರ್ಣ ಅಧಿಕಾರವನ್ನು ಪುನಃಪಡೆದುಕೊಂಡಿದೆ ಎಂದು ಸೂಚಿಸಿತು.[೧೪]
ಟೌವ್ನ್‌ಶೆಂಡ್ ಆಕ್ಟ್ 1767 ಮತ್ತು ಬೋಸ್ಟನ್ ಹತ್ಯಾಕಾಂಡ 1770
[ಬದಲಾಯಿಸಿ]1767ರಲ್ಲಿ ಸಂಸತ್ತು ಟೌವ್ನ್‌ಶೆಂಡ್ ಆಕ್ಟ್ಅನ್ನು ಜಾರಿಗೆ ತಂದಿತು. ಇದು ಕಾಗದ, ಗಾಜು ಮತ್ತು ಟೀ ಮೊದಲಾದ ಹಲವಾರು ಅವಶ್ಯಕ ವಸ್ತುಗಳ ಮೇಲೆ ತೆರಿಗೆಯನ್ನು ವಿಧಿಸಿತು. ತೆರಿಗೆಗಳ ಹೆಚ್ಚಳದಿಂದ ಕೋಪಗೊಂಡ ವಸಾಹತುಗಾರರು ಬ್ರಿಟಿಷ್ ಸರಕುಗಳ ಬಹಿಷ್ಕಾರವನ್ನು ಕೈಗೊಂಡವು. ಬೋಸ್ಟನ್‌ನಲ್ಲಿ 1770ರ ಮಾರ್ಚ್ 5ರಂದು ದೊಡ್ಡ ಜನಸಮೂಹವೊಂದು ಬ್ರಿಟಿಷ್ ಸೈನಿಕರ ಗುಂಪನ್ನು ಸುತ್ತುವರಿದವು. ಜನಸಮೂಹವು ಬೆಳೆದು ಸೈನಿಕರಿಗೆ ಹೆಚ್ಚು ಹೆಚ್ಚು ಬೆದರಿಕೆ ಹಾಕಲು, ಹಿಮದ ಚೆಂಡುಗಳನ್ನು, ಕಲ್ಲುಗಳನ್ನು ಮತ್ತು ಕಲ್ಲುಪುಡಿಗಳನ್ನು ಎಸೆಯಲು ಆರಂಭಿಸಿದವು. ಒಬ್ಬ ಸೈನಿಕನಿಗೆ ಕಲ್ಲು ತಾಗಿ, ಕೆಳಕ್ಕೆ ಬಿದ್ದನು. ಪ್ರತಿಯಾಗಿ ಸೈನಿಕರು ಜನಸಮೂಹದ ಮೇಲೆ ಗುಂಡು ಹಾರಿಸಿದರು. ಹನ್ನೊಂದು ಮಂದಿ ಗಾಯಗೊಂಡರು; ಮೂವರು ನಾಗರಿಕರು ಆ ಸ್ಥಳದಲ್ಲೇ ಕೊಲ್ಲಲ್ಪಟ್ಟರು ಹಾಗೂ ಇಬ್ಬರು ಘಟನೆಯ ನಂತರ ಸಾವನ್ನಪ್ಪಿದರು. ಆ ಘಟನೆಯನ್ನು ಬೋಸ್ಟನ್ ಹತ್ಯಾಕಾಂಡವೆಂದು ಕರೆಯಲಾಯಿತು. ಸೈನಿಕರನ್ನು ಪರೀಕ್ಷಿಸಿ, ನಿರಪರಾಧಿಗಳೆಂದು ಘೋಷಿಸಲ್ಪಟ್ಟರೂ ಜಾನ್ ಆಡಮ್ಸ್ನಿಂದ ರಕ್ಷಿಸಲ್ಪಟ್ಟರು), ವ್ಯಾಪಕವಾದ ವಿವರಣೆಗಳು ಅತಿ ಶೀಘ್ರದಲ್ಲಿ ವಸಾಹತುಗಾರರ ಭಾವಾತಿರೇಕದ ಅಭಿವ್ಯಕ್ತಿಯು ಬ್ರಿಟಿಷ್ ವಿರುದ್ಧ ಪರಿವರ್ತನೆಯಾಗುವಂತೆ ಪ್ರಚಾರ ಪಡೆದವು. ಇದು ಬ್ರಿಟನ್ ಮತ್ತು ಮಸ್ಸಾಚ್ಯುಸೆಟ್ಸ್ ಪ್ರಾಂತದ ನಡುವಿನ ಸಂಬಂಧದಲ್ಲಿ ಅಧೋಗತಿಯ ಇಳಿಕೆಗೆ ಕಾರಣವಾಯಿತು.
ಟೀ ತೆರಿಗೆ ಶಾಸನ 1773
[ಬದಲಾಯಿಸಿ]1772ರ ಜೂನ್‌ನಲ್ಲಿ, ಗ್ಯಾಸ್ಪೀ ಅಫೇರ್ ಎಂದು ಕರೆಯಲ್ಪಟ್ಟ, ತೀವ್ರವಾಗಿ ವ್ಯಾಪಾರ ನಿರ್ಬಂಧಗಳನ್ನು ಹೇರುತ್ತಿದ್ದ ಬ್ರಿಟಿಷ್ ಸಮರನೌಕೆಯೊಂದನ್ನು ಅಮೆರಿಕಾದ ದೇಶಪ್ರೇಮಿಗಳು ಸುಟ್ಟುಹಾಕಿದರು. ಆನಂತರ ಮಸ್ಸಾಚ್ಯುಸೆಟ್ಸ್‌ನ ಗವರ್ನರ್ ಥೋಮಸ್ ಹಟ್ಚಿನ್ಸನ್ ಆತನು ಮತ್ತು ರಾಜಪ್ರಭುತ್ವದ ನ್ಯಾಯಮೂರ್ತಿಗಳು ಲಂಡನ್‌ನಿಂದ ನೇರವಾಗಿ ಪಾವತಿಸಲ್ಪಡುತ್ತಿದುದರಿಂದ ವಸಾಹತಿನ ಶಾಸಕಾಂಗವನ್ನು ನಿರ್ಲಕ್ಷಿಸಿದೆವು ಎಂದು ವರದಿ ಮಾಡಿದನು. 1773ರ ಡಿಸೆಂಬರ್ 16ರಲ್ಲಿ, ಸ್ಯಾಮ್ಯುಯೆಲ್ ಆಡಮ್ಸ್ ನಿರ್ದೇಶನದ ಮತ್ತು ಅಮೆರಿಕಾದ ಭಾರತೀಯರನ್ನು ಎಚ್ಚರಿಸಲು ವ್ಯವಸ್ಥೆಗೊಂಡ ಜನರ ಗುಂಪೊಂದು ಸರಕಾರ-ಅನುಮೋದಿತ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಹಡಗುಗಳನ್ನು ಆಕ್ರಮಿಸಿತು ಹಾಗೂ £10,000ನಷ್ಟು ಮೌಲ್ಯದ ಟೀಯನ್ನು (2008ರಲ್ಲಿ ಸರಿಸುಮಾರು £636,000) ಬಂದರಿನಲ್ಲಿ ಸುರಿಯಿತು. ಈ ಘಟನೆಯು ಬೋಸ್ಟನ್ ಟೀ ಪಾರ್ಟಿ ಎಂಬ ಹೆಸರು ಪಡೆಯಿತು ಹಾಗೂ ಅಮೆರಿಕಾದ ದೇಶಭಕ್ತಿಯ ಸಂಗತಿಗಳಲ್ಲಿ ಪ್ರಮುಖ ಭಾಗವಾಗಿ ಉಳಿಯಿತು.
ಸಹಿಸಲಾಗದ ಕಾಯಿದೆಗಳು 1774
[ಬದಲಾಯಿಸಿ]ಬ್ರಿಟಿಷ್ ಸರಕಾರವು ಮತ್ತಷ್ಟು ಕಾಯಿದೆಗಳನ್ನು ವಿಧಿಸುವ ಮೂಲಕ ಪ್ರತಿಕ್ರಿಯಿಸಿತು. ಇವು ಸಹಿಸಲಾಗದ ಕಾಯಿದೆಗಳೆಂಬ ಹೆಸರು ಪಡೆದವು. ಇವು ಬ್ರಿಟಿಷ್ ವಿರುದ್ಧದ ವಸಾಹತುಗಳ ಅಭಿಪ್ರಾಯಗಳನ್ನು ಇನ್ನಷ್ಟು ತೀವ್ರಗೊಳಿಸಿದವು. ಅವು ಬ್ರಿಟಿಷ್ ಸಂಸತ್ತು ಜಾರಿಗೊಳಿಸಿದ ನಾಲ್ಕು ಕಾನೂನುಗಳನ್ನು ಒಳಗೊಂಡಿದ್ದವು.[೨೧] ಮೊದಲನೆಯದು ಮಸ್ಸಾಚ್ಯುಸೆಟ್ಸ್ ಸರಕಾರ ಕಾಯಿದೆ, ಇದು ಮಸ್ಸಾಚ್ಯುಸೆಟ್ಸ್‌ನ ಶಾಸನ ಪತ್ರವನ್ನು ಬದಲಾಯಿಸಿತು ಹಾಗೂ ಪಟ್ಟಣದಲ್ಲಿ ಸಭೆ ಸೇರುವುದನ್ನು ನಿರ್ಬಂಧಿಸಿತು. ಎರಡನೆಯದು ಅಡ್ಮಿನಿಸ್ಟ್ರೇಷನ್ ಆಫ್ ಜಸ್ಟಿಸ್ ಕಾಯಿದೆ. ಇದು ಪರೀಕ್ಷಿಸಲ್ಪಡುವ ಎಲ್ಲಾ ಬ್ರಿಟಿಷ್ ಸೈನಿಕರು ಬ್ರಿಟನ್‌ಅನ್ನು ಆಪಾದಿಸಬೇಕೇ ಹೊರತು ವಸಾಹತುಗಳನ್ನಲ್ಲ ಎಂದು ಆದೇಶಿಸಿತು. ಮೂರನೆಯದು ಬೋಸ್ಟನ್ ಪೋರ್ಟ್ ಕಾಯಿದೆ, ಇದು ಬೋಸ್ಟನ್ ಟೀ ಪಾರ್ಟಿಯಲ್ಲಿ ಕಳೆದುಕೊಂಡ ಟೀಗೆ ಬ್ರಿಟಿಷ್ ನಷ್ಟ ತುಂಬುವವರೆಗೆ ಬೋಸ್ಟನ್‌ನ ಬಂದರನ್ನು ಮುಚ್ಚಿತು (ಬ್ರಿಟಿಷ್ ಅಂತಹ ಸಂದಾಯವನ್ನು ಪಡೆಯಲಿಲ್ಲ). ನಾಲ್ಕನೆಯದು 1774ರ ಕ್ವಾರ್ಟೆರಿಂಗ್ ಕಾಯಿದೆ, ಇದು ಬ್ರಿಟಿಷ್ ಸೈನಿಕರಿಗೆ ನಾಗರಿಕರ ಮನೆಗಳಲ್ಲಿ ಮಾಲೀಕನ ಅನುಮತಿ ಇಲ್ಲದೆ ವಸತಿ ಒದಗಿಸಲು ರಾಜಪ್ರಭುತ್ವದ ಗವರ್ನರುಗಳಿಗೆ ಅವಕಾಶ ನೀಡಿತು.
ಅಮೆರಿಕಾದ ರಾಜಕೀಯ ವಿರೋಧ
[ಬದಲಾಯಿಸಿ]ಅಮೆರಿಕಾದ ರಾಜಕೀಯ ವಿರೋಧವು ವಸಾಹತುಗಳಾದ್ಯಂತದ ಪ್ರತಿನಿಧಿಗಳನ್ನೊಳಗೊಂಡ ಸ್ಟ್ಯಾಂಪ್ ಆಕ್ಟ್ ಕಾಂಗ್ರೆಸ್‌ನಂತಹ ವಸಾಹತಿನ ಗುಂಪುಗಳಿಂದ ಆರಂಭವಾಯಿತು. 1765ರಲ್ಲಿ ಸನ್ಸ್ ಆಫ್ ಲಿಬರ್ಟಿಯು ರಚನೆಗೊಂಡು, ಬ್ರಿಟಿಷ್ ತೆರಿಗೆ ಕಾನೂನುಗಳನ್ನು ಬಲವಂತ ಪಡಿಸಲಾಗದು ಎಂಬುದನ್ನು ಖಡಿತಪಡಿಸಲು ಸಾರ್ವಜನಿಕ ಪ್ರದರ್ಶನಗಳನ್ನು ಮಾಡಿತು, ದೌರ್ಜನ್ಯ ನಡೆಸಿತು ಹಾಗೂ ಹಿಂಸೆಯ ಬೆದರಿಕೆಗಳನ್ನು ಹಾಕಿತು. ಕ್ರೂರವಾದ ಸಂಸತ್ತು ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪರಿಗಣಿಸಿದ ವಸಾಹತುಗಾರರು ಆಗಲೂ ನಿಷ್ಠೆಯನ್ನು ತೋರಿಸುತ್ತಿದ್ದ ರಾಜನು ಮಧ್ಯಪ್ರವೇಶಿಸಬೇಕೆಂಬ ಅನೇಕ ಕೋರಿಕೆ ಮತ್ತು ವಿನಂತಿಗಳನ್ನು ಸಲ್ಲಿಸಿದರು. 1772ರ ಉತ್ತರಾರ್ಧದಲ್ಲಿ ಗ್ಯಾಸ್ಪೀ ಅಫೇರ್ನ ನಂತರ, ಸ್ಯಾಮ್ಯುಯೆಲ್ ಆಡಮ್ಸ್ ಹೊಸ ಹೊಂದಿಕೆಯ ಕಮಿಟಿಗಳನ್ನು ರಚಿಸಿದನು. ಅದು ಎಲ್ಲಾ ಹದಿಮೂರು ವಸಾಹತುಗಳ ದೇಶಪ್ರೇಮಿಗಳನ್ನು ಒಂದುಗೂಡಿಸಿತು ಹಾಗೂ ಅಂತಿಮವಾಗಿ ದಂಗೆಕೋರ ಸರಕಾರಕ್ಕೆ ಚೌಕಟ್ಟನ್ನು ಒದಗಿಸಿತು. 1773ರ ಆರಂಭದಲ್ಲಿ ಅತಿ ದೊಡ್ಡ ವಸಾಹತು ವರ್ಜಿನಿಯಾ ಅದರ ಹೊಂದಿಕೆಯ ಕಮಿಟಿಯನ್ನು ಸ್ಥಾಪಿಸಿತು. ಅದರಲ್ಲಿ ಪ್ಯಾಟ್ರಿಕ್ ಹೆನ್ರಿ ಮತ್ತು ಥೋಮಸ್ ಜೆಫ್ಫೆರ್ಸನ್ ಕಾರ್ಯನಿರ್ವಹಿಸುತ್ತಿದ್ದರು.[೨೨] ಮಸ್ಸಾಚ್ಯುಸೆಟ್ಸ್ ಸರಕಾರ ಕಾಯಿದೆ ಗೆ ಪ್ರತಿಯಾಗಿ, ಮಸ್ಸಾಚ್ಯುಸೆಟ್ಸ್ ಮತ್ತು ಇತರ ವಸಾಹತುಗಳು "ಪ್ರಾಂತೀಯ ಕಾಂಗ್ರೆಸ್"ಗಳೆಂಬ ಸ್ಥಳೀಯ ಸರಕಾರಗಳನ್ನು ರೂಪಿಸಿದವು. 1774ರಲ್ಲಿ, ಮೊದಲ ಭೂಖಂಡೀಯ ಕಾಂಗ್ರೆಸ್ ಚರ್ಚೆ ಮತ್ತು ಸಮೂಹಿಕ ಕಾರ್ಯಕ್ಕೆ ಮಾರ್ಗವಾಗುವ ಉದ್ದೇಶದಿಂದ ಪ್ರತಿ ಪ್ರಾಂತೀಯ ಕಾಂಗ್ರೆಸ್ ಅಥವಾ ಅವುಗಳಿಗೆ ಸಮಾನವಾದವುಗಳ ಪ್ರತಿನಿಧಿಗಳನ್ನು ಒಳಗೊಂಡ ಸಭೆಯನ್ನು ಕರೆಯಿತು. ಹೊಂದಿಕೆಯ ಕಮಿಟಿ, ಪ್ರಾಂತೀಯ ಕಾಂಗ್ರೆಸ್ ಮತ್ತು ಭೂಖಂಡೀಯ ಕಾಂಗ್ರೆಸ್‌ನಿಂದ ತೀರ್ಮಾನಗಳ ವಿಧಿಸುವುದಕ್ಕಾಗಿ ಪ್ರತಿ ಪ್ರಾಂತೀಯ ಕಾಂಗ್ರೆಸ್ ಅಥವಾ ಸಮಾನವಾದವುಗಳು ಸ್ಥಿರ ಸುರಕ್ಷತೆಯ ಕಮಿಟಿಗಳು ರಚಿಸಿದವು. ಜನರಿಗೆ ಸರಕಾರದ ಜವಾಬ್ದಾರಿಯನ್ನು ಹೊಂದಿರದ ಉತ್ತರ ಅಮೆರಿಕದ ಬ್ರಿಟಿಷ್ ವಸಾಹತುಗಳು ಭೂಖಂಡೀಯ ಕಾಂಗ್ರೆಸ್‌ಅನ್ನು ಸೇರಿಕೊಳ್ಳದೆ, ರಾಜನಿಗೆ ನಿಷ್ಠಾವಂತರಾಗಿ ಉಳಿದವು. ಅವುಗಳೆಂದರೆ: ಕ್ವೆಬೆಕ್, ನೋವ ಸ್ಕೋಟಿಯಾ, ನ್ಯೂಫೌಂಡ್‌ಲ್ಯಾಂಡ್, ಬರ್ಮುಡಾ, ಪಶ್ಚಿಮ ಫ್ಲೋರಿಡಾ ಮತ್ತು ಪೂರ್ವ ಫ್ಲೋರಿಡಾ.
ಒಳಪಂಗಡಗಳು: ದೇಶಪ್ರೇಮಿಗಳು, ಒಕ್ಕೂಟದ ಬೆಂಬಲಿಗರು(ನಿಷ್ಠಾವಂತರು) ಮತ್ತು ತಟಸ್ಥ ಪ್ರಜೆಗಳು
[ಬದಲಾಯಿಸಿ]ಹದಿಮೂರು ವಸಾಹತುಗಳ ಜನರೆಲ್ಲರೂ ಒಂದೇ ತೆರನಾಗಿರಲಿಲ್ಲ, ವಿಶೇಷವಾಗಿ ಅವರ ರಾಜಕೀಯ ಅಭಿಪ್ರಾಯ ಮತ್ತು ಮನೋಭಾವನೆಗಳಲ್ಲಿ. ಒಕ್ಕೂಟದ ಬೆಂಬಲಿಗರು ಮತ್ತು ನಿಷ್ಠಾವಂತರು ಪ್ರದೇಶ ಮತ್ತು ಸಮುದಾಯಗಳಲ್ಲಿ ವ್ಯಾಪಕವಾಗಿದ್ದುದು ಮಾತ್ರವಲ್ಲದೆ ಕುಟುಂಬಗಳಲ್ಲೂ ಇದ್ದರು ಹಾಗೂ ಕೆಲವರು ಕ್ರಾಂತಿಯ ಸಂದರ್ಭದಲ್ಲಿ ಸ್ಥಳಾಂತರಗೊಂಡರು.
ದೇಶಪ್ರೇಮಿಗಳು – ಕ್ರಾಂತಿಕಾರಿಗಳು
[ಬದಲಾಯಿಸಿ]ಆ ಸಂದರ್ಭದಲ್ಲಿ ಕ್ರಾಂತಿಕಾರಿಗಳನ್ನು 'ದೇಶಪ್ರೇಮಿಗಳು', 'ವಿಗ್‌ಗಳು', 'ಕಾಂಗ್ರೆಸ್ಸಿಗರು' ಅಥವಾ 'ಅಮೆರಿಕನ್ನರು' ಎಂದು ಕರೆಯಲಾಯಿತು. ಅವರು ಬೇರೆ ಬೇರೆ ಸಾಮಾಜಿಕ ಮತ್ತು ಆರ್ಥಿಕ ವರ್ಗಗಳಿಂದ ಬಂದವರಾಗಿದ್ದರು, ಆದರೆ ಅಮೆರಿಕನ್ನರ ಹಕ್ಕುಗಳನ್ನು ರಕ್ಷಿಸುವ ಅವಶ್ಯಕತೆಯ ಬಗ್ಗೆ ಏಕಾಭಿಪ್ರಾಯವನ್ನು ಹೊಂದಿದ್ದರು. ಯುದ್ಧದ ನಂತರ, ಜಾರ್ಜ್ ವಾಷಿಂಗ್ಟನ್, ಜೇಮ್ಸ್ ಮ್ಯಾಡಿಸನ್, ಜಾನ್ ಆಡಮ್ಸ್, ಅಲೆಕ್ಸಾಂಡರ್ ಹ್ಯಾಮಿಲ್ಟನ್ ಮತ್ತು ಜಾನ್ ಜೇ ಮೊದಲಾದ ದೇಶಪ್ರೇಮಿಗಳು ಪ್ರಜಾಪ್ರಭುತ್ವ-ವಾದಕ್ಕೆ ತೀವ್ರವಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು ಹಾಗೂ ಶ್ರೀಮಂತ ಮತ್ತು ಪ್ರಬಲ ರಾಷ್ಟ್ರವನ್ನು ಕಟ್ಟಲು ಅತ್ಯಾಸಕ್ತಿಯನ್ನು ಹೊಂದಿದ್ದರು. ಪ್ಯಾಟ್ರಿಕ್ ಹೆನ್ರಿ, ಬೆಂಜಮಿನ್ ಫ್ರ್ಯಾಂಕ್ಲಿನ್ ಮತ್ತು ಥೋಮಸ್ ಜೆಫ್ಫೆರ್ಸನ್ ಮೊದಲಾದ ದೇಶಭಕ್ತರು ಪ್ರಜಾಪ್ರಭುತ್ವದ ಅಂತಃಪ್ರೇರಣೆಯನ್ನು ಹಾಗೂ ಹೆಚ್ಚು ರಾಜಕೀಯ ಸಮಾನತೆಯೊಂದಿಗೆ ಸ್ಥಳೀಕರಿಸಿದ ಸಮಾಜದ ಅವಶ್ಯಕತೆ ಇರುವ ಭೂಸ್ವಾಮ್ಯದ ವಸಾಹತು ಸ್ಥಾಪಿಸುವ ಅಂಶವನ್ನು ತೋರ್ಪಡಿಸಿದರು. "ದೇಶಪ್ರೇಮಿ" ಪದವು ಅಮೆರಿಕಾದ ಕ್ರಾಂತಿಯ ಪರವಹಿಸಿದ ವಸಾಹತುಗಳ ವ್ಯಕ್ತಿಯನ್ನು ಸೂಚಿಸುತ್ತದೆ. ಕ್ರಾಂತಿಕಾರಿಗಳನ್ನು "ದೇಶಪ್ರೇಮಿ"ಗಳೆಂದು ಕರೆಯುವುದು ಯುದ್ಧಕ್ಕಿಂತ ಮೊದಲೇ ದೀರ್ಘ-ಕಾಲದಿಂದ ಬಳಕೆಯಲ್ಲಿರುವ ಐತಿಹಾಸಿಕ ರೂಢಿಯಾಗಿದೆ. ಉದಾಹರಣೆಗಾಗಿ, “ದೇಶಪ್ರೇಮಿ” ಪದವನ್ನು ಅಮೆರಿಕಾದ ವಸಾಹತುಗಾರರು 1760ರ ಸಂದರ್ಭದಲ್ಲೇ ಬಳಸುತ್ತಿದ್ದರು. ದಾರ್ಶನಿಕ ಚಳವಳಿಯ ಯುಗದಲ್ಲಿ, "ದೇಶಪ್ರೇಮಿ" ಪದವನ್ನು ಇಂದಿರುವಂತೆ "ಸ್ವಾತಂತ್ರ್ಯ ಹೋರಾಟಗಾರ"ದೊಂದಿಗೆ ಬದಲಿಯಾಗಿ ಬಳುಸುತ್ತಿರಲಿಲ್ಲ. ದಾರ್ಶನಿಕ ಚಳವಳಿಯ ಅಂಶಗಳೊಂದಿಗೆ ಸಂಯೋಜಿಸಿದ್ದ ದೇಶಪ್ರೇಮದ ಕಲ್ಪನೆಯು ಉತ್ತಮ ವಿಷಯವಾಗಿತ್ತು. ಇದು ರಾಷ್ಟ್ರೀಯ ಮತ್ತು ಸಾಮಾಜಿಕ ಗಡಿಗಳನ್ನು ಮೀರಿಸಿತ್ತು. ದೇಶಪ್ರೇಮದಲ್ಲಿ ಅವರ ನಾಯಕತ್ವದ ಚಟುವಟಿಕೆಯನ್ನು ಅಥವಾ ರಾಷ್ಟ್ರದ ನೀತಿಗಳನ್ನು ಎಲ್ಲಾ ಸಂದರ್ಭದಲ್ಲಿ ಬೇರೆಯವರು ಬೆಂಬಲಿಸುವ ಅವಶ್ಯಕತೆ ಇರುವುದಿಲ್ಲ. ದೇಶಪ್ರೇಮಿಯಾಗುವುದರ ಹಾಗೂ ರಾಜ ಮತ್ತು ರಾಷ್ಟ್ರದ ವಿರುದ್ಧ ದಂಗೆ ಏಳುವುದರ ಮಧ್ಯೆ ಅಸಮಂಜಸತೆಯ ಅಗತ್ಯವಿರುವುದಿಲ್ಲ.[೨೩]
ಮನೋವಿಜ್ಞಾನ
[ಬದಲಾಯಿಸಿ]ದೇಶಪ್ರೇಮಿಗಳನ್ನು ಅರ್ಥ ಮಾಡಿಕೊಳ್ಳುವ ಒಂದು ಮಾರ್ಗವೆಂದರೆ ಅವರ ಮನೋವಿಜ್ಞಾನವನ್ನು ಒಕ್ಕೂಟದ ಬೆಂಬಲಿಗರ ಮನೋವಿಜ್ಞಾನದೊಂದಿಗೆ ಹೋಲಿಕೆ ಮಾಡುವುದು. ಲ್ಯಾಬರೀ (1948) ಒಕ್ಕೂಟದ ಬೆಂಬಲಿಗರನ್ನು ಪ್ರತ್ಯೇಕವಾಗಿರಿಸಿದ ಎಂಟು ವೈಶಿಷ್ಟ್ಯತೆಗಳನ್ನು ಗುರುತಿಸಿದನು; ಅದರ ವಿರೋಧ ಲಕ್ಷಣಗಳು ದೇಶಪ್ರೇಮಿಗಳನ್ನು ನಿರೂಪಿಸಿದವು. ಮನೋವೈಜ್ಞಾನಿಕವಾಗಿ, ಒಕ್ಕೂಟದ ಬೆಂಬಲಿಗರು ಹಿರಿಯರು, ಉತ್ತಮ ದೃಢತೆಯನ್ನ ಹೊಂದಿರುವವರು ಮತ್ತು ಹೊಸತನವನ್ನು ವಿರೋಧಿಸುವವರು. ಅವರು ನ್ಯಾಯಸಮ್ಮತವಾದ ಸರಕಾರ ರಾಜಪ್ರಭುತ್ವವನ್ನು ವಿರೋಧಿಸುವುದು ನೈತಿಕವಾಗಿ ತಪ್ಪು ಎಂದು ಯೋಚಿಸಿದರೆ, ದೇಶಪ್ರೇಮಿಗಳು ನೈತಿಕತೆಯು ಅವರ ಕಡೆಯಲ್ಲಿದೆ ಎಂದು ಅಭಿಪ್ರಾಯ ಪಟ್ಟರು. ದೇಶಪ್ರೇಮಿಗಳು ಮನೆಗಳನ್ನು ಸುಟ್ಟುಹಾಕುವಂತಹ ಹಿಂಸೆಯನ್ನು ಮಾಡಿದಾಗ ಅವರು ಅದು ಆಗದಂತೆ ಮಾಡಿದರು. ಒಕ್ಕೂಟದ ಬೆಂಬಲಿಗರು ಮಧ್ಯಸ್ಥ ಸ್ಥಾನವನ್ನು ಪಡೆಯಲು ಬಯಸಿದರು. ದೇಶಪ್ರೇಮಿಗಳು ಅವರ ಸ್ಥಾನವನ್ನು ಘೋಷಿಸಲು ನಿರ್ಬಂಧಿಸಿದಾಗ ಕೋಪಗೊಂಡರು. ಅನೇಕ ಒಕ್ಕೂಟದ ಬೆಂಬಲಿಗರು ವಿಶೇಷವಾಗಿ ಬಂದರು ನಗರಗಳ ವ್ಯಾಪಾರಿಗಳು ಬ್ರಿಟನ್ ಒಂದಿಗೆ ದೀರ್ಘಕಾಲದ ಭಾವನಾತ್ಮಕ ಒಲವನ್ನು ಹೊಂದಿದ್ದರು (ಹೆಚ್ಚಾಗಿ ಬ್ರಿಟಿಷ್ ಸಾಮ್ರಾಜ್ಯದ ಇತರ ಭಾಗಗಳೊಂದಿಗೆ ವ್ಯಾವಹಾರಿಕ ಮತ್ತು ಕುಟುಂಬದ ಸಂಬಂಧಗಳು). ಕೆಲವು ಒಕ್ಕೂಟದ ಬೆಂಬಲಿಗರು ಕಾಲತಳ್ಳುವವರಾಗಿದ್ದು, ಅವರು ಕೆಲವು ದಿನಗಳಲ್ಲಿ ಸ್ವಾತಂತ್ರ್ಯ ಸಿಗಬಹುದು ಎಂಬುದನ್ನು ಕಂಡುಕೊಂಡಿದ್ದರು ಆದರೆ ಅದನ್ನು ಮುಂದಕ್ಕೆ ಹಾಕಬೇಕೆಂದು ಬಯಸುತ್ತಿದ್ದರು; ದೇಶಪ್ರೇಮಿಗಳು ಅದನ್ನು ವಶಪಡಿಸಿಕೊಳ್ಳಲು ಇಚ್ಚಿಸುತ್ತಿದ್ದರು. ಒಕ್ಕೂಟದ ಬೆಂಬಲಿಗರು ಜಾಗರೂಕರಾಗಿದ್ದರು ಮತ್ತು ದೊಂಬಿಯಿಂದ ಬರಬಹುದಾದ ಅರಾಜಕತೆ ಅಥವಾ ನಿರಂಕುಶಾಧಿಕಾರದ ಬಗ್ಗೆ ಭಯಭೀತರಾಗಿದ್ದರು; ದೇಶಪ್ರೇಮಿಗಳು ದೊಂಬಿಯ ಹಿಂಸೆಯನ್ನು ಬಳಸಲು ಮತ್ತು ನಿಯಂತ್ರಿಸಲು ವ್ಯವಸ್ಥಿತ ಪ್ರಯತ್ನವನ್ನು ಮಾಡಿದರು. ಅಂತಿಮವಾಗಿ ಲ್ಯಾಬರೀ, ಒಕ್ಕೂಟದ ಬೆಂಬಲಿಗರು ದೇಶಪ್ರೇಮಿಗಳು ತೋರ್ಪಡಿಸುತ್ತಿದ್ದಷ್ಟು ಭವಿಷ್ಯದಲ್ಲಿ ವಿಶ್ವಾಸವನ್ನು ಹೊಂದಿರದ ನಿರಾಶಾವಾದಿಗಳಾಗಿದ್ದರು ಎಂದು ವಾದಿಸಿದ್ದಾನೆ.[೨೪][೨೫][೨೬]
ವರ್ಗದ ಅಂಶಗಳು
[ಬದಲಾಯಿಸಿ]J. ಫ್ರ್ಯಾಂಕ್ಲಿನ್ ಜೇಮ್ಸನ್ನಂತಹ ಇತಿಹಾಸಕಾರರು 20ನೇ ಶತಮಾನದ ಆರಂಭದಲ್ಲಿ, ಕ್ರಾಂತಿಯಲ್ಲಿ ವರ್ಗ ಯುದ್ಧವಿತ್ತು ಎಂಬುದಕ್ಕೆ ಸಾಕ್ಷ್ಯಿಯಾಗಿ ದೇಶಪ್ರೇಮಿಗಳ ವರ್ಗ ರಚನೆಯನ್ನು ಪರಿಶೀಲಿಸಿದರು. ಕಳೆದ 50 ವರ್ಷಗಳಲ್ಲಿ, ಇತಿಹಾಸಕಾರರು ಆ ಅರ್ಥವಿವರಣೆಯನ್ನು ಬಹುಮಟ್ಟಿಗೆ ಬಿಟ್ಟುಬಿಟ್ಟರು. ಬದಲಿಗೆ ಸೈದ್ಧಾಂತಿಕ ಏಕತೆಯ ಉತ್ಕೃಷ್ಟತೆಯನ್ನು ಒತ್ತಿ ಹೇಳಿದರು.[೨೭] ಶ್ರೀಮಂತ ಮತ್ತು ಬಡ ಒಕ್ಕೂಟದ ಬೆಂಬಲಿಗರಿದ್ದಂತೆ, ದೇಶಪ್ರೇಮಿಗಳೂ ಸಹ ಮಿಶ್ರವಾಗಿದ್ದರು. ಶ್ರೀಮಂತರು ಮತ್ತು ಉತ್ತಮರು ಹೆಚ್ಚು ಶಿಕ್ಷಣವನ್ನು ಪಡೆದು ಸೇನೆಯಲ್ಲಿ ಅಧಿಕಾರಿಗಳಾಗ ಬಯಸುತ್ತಿದ್ದರು. ಸೈದ್ಧಾಂತಿಕ ಬೇಡಿಕೆಗಳು ಯಾವಾಗಲೂ ಮೊದಲು ಬರುತ್ತಿದ್ದವು: ದೇಶಪ್ರೇಮಿಗಳು ಸ್ವಾತಂತ್ರ್ಯವನ್ನು ಬ್ರಿಟಿಷ್ ದಬ್ಬಾಳಿಕೆ ಮತ್ತು ತೆರಿಗೆ ಸಂದಾಯದಿಂದ ಸ್ವತಂತ್ರಗೊಳಿಸುವ ಹಾಗೂ ಅವರ ಹಕ್ಕುಗಳೆಂದು ಪರಿಗಣಿಸಿದುದನ್ನು ಪುನಃದೃಢಪಡಿಸಿಕೊಳ್ಳುವ ಸಾಧನವಾಗಿ ಭಾವಿಸಿದರು. ಸಣ್ಣ ಜಮೀನುದಾರ ರೈತರು, ಕರಕುಶಲಕರ್ಮಿಗಳು ಮತ್ತು ಸಣ್ಣ ವ್ಯಾಪಾರಿಗಳು ದೇಶಪ್ರೇಮ ಪಕ್ಷವನ್ನು ಸೇರಿಕೊಂಡರು ಹಾಗೂ ಹೆಚ್ಚು ರಾಜಕೀಯ ಸಮಾನತೆಯನ್ನು ಕೋರಿದರು. ಅವರು ಪೆನ್ಸಿಲ್ವೇನಿಯಾದಲ್ಲಿ ವಿಶೇಷವಾಗಿ ಯಶಸ್ವಿಯಾದರು ಮತ್ತು ನ್ಯೂ ಇಂಗ್ಲೆಂಡ್‌ನಲ್ಲಿ ಸ್ವಲ್ಪ ಕಡಿಮೆ ಮಟ್ಟದಲ್ಲಿ ಯಶಸ್ಸು ಗಳಿಸಿದರು. ಅಲ್ಲಿ ಜಾನ್ ಆಡಮ್ಸ್, ಥೋಮಸ್ ಪೈನೆಯ ಕಾಮನ್ ಸೆನ್ಸ್ "ಅಸಂಬದ್ಧ ಪ್ರಜಾಪ್ರಭುತ್ವದ ಕಲ್ಪನೆ"ಗಳನ್ನು ಪ್ರಸ್ತಾಪಿಸುದುದಕ್ಕಾಗಿ ಅದನ್ನು ಖಂಡಿಸಿದನು.[೨೮]
ಒಕ್ಕೂಟದ ಬೆಂಬಲಿಗರು ಮತ್ತು ತಟಸ್ಥ ಪ್ರಜೆಗಳು
[ಬದಲಾಯಿಸಿ]ನಿಜವಾದ ಸದಸ್ಯರ ಬಗ್ಗೆ ತಿಳಿಯಲು ಯಾವುದೇ ದಾರಿಗಳಿಲ್ಲದಿದ್ದರೂ, ಇತಿಹಾಸಕಾರರು ಸುಮಾರು 15–20%ನಷ್ಟು ಜನರು ಬ್ರಿಟಿಷ್ ರಾಜನಿಗೆ ನಿಷ್ಠಾವಂತರಾಗಿದ್ದರು ಎಂದು ಅಂದಾಜು ಮಾಡಿದ್ದಾರೆ; ಅವರನ್ನು ಆ ಕಾಲದಲ್ಲಿ "ಒಕ್ಕೂಟದ ಬೆಂಬಲಿಗರು", "ಟೋರಿಗಳು" ಅಥವಾ "ರಾಜನ ಜನರು" ಎಂದು ಕರೆಯಲಾಗುತ್ತಿತ್ತು.[೨೯][೩೦] ಒಕ್ಕೂಟದ ಬೆಂಬಲಿಗರು ಬ್ರಿಟಿಷ್ ಆರ್ಮಿಯು ಆಕ್ರಮಿಸದ ಪ್ರದೇಶದಲ್ಲಿ ಪ್ರಭುತ್ವ ನಡೆಸುತ್ತಿರಲಿಲ್ಲ.[೩೧] ಒಕ್ಕೂಟದ ಬೆಂಬಲಿಗರು ಹಿರಿಯರಾಗಿದ್ದು, ಹಿಂದಿನ ರಾಜಭಕ್ತಿಯನ್ನು ಮುರಿಯಲು ಇಷ್ಟಪಡುತ್ತಿರಲಿಲ್ಲ, ಹೆಚ್ಚಾಗಿ ಚರ್ಚ್ ಆಫ್ ಇಂಗ್ಲೆಂಡ್ ಒಂದಿಗೆ ಸಂಬಂಧವನ್ನು ಹೊಂದಿದ್ದರು ಹಾಗೂ ಸಾಮ್ರಾಜ್ಯದಾದ್ಯಂತ ವ್ಯಾಪಾರ ಸಂಪರ್ಕವನ್ನು ಹೊಂದಿದ್ದ ಅನೇಕ ಸ್ಥಿರ ವ್ಯಾಪಾರಿಗಳನ್ನು ಮಾತ್ರಲ್ಲದೆ ಬೋಸ್ಟನ್‌ನ ಥೋಮಸ್ ಹಟ್ಚಿನ್ಸನ್ನಂತಹ ರಾಜವಂಶದ ಅಧಿಕಾರಿಗಳನ್ನೂ ಒಳಗೊಂಡಿದ್ದರು. ಕ್ರಾಂತಿಯು ಕೆಲವು ಕುಟುಂಬಗಳನ್ನು ವಿಭಜಿಸಿತು; ಉದಾಹರಣೆಗಾಗಿ, ಫ್ರ್ಯಾಂಕ್ಲಿನ್‌ಗಳು. ಬೆಂಜಮಿನ್ ಫ್ರ್ಯಾಂಕ್ಲಿನ್ನ ಮಗ ಮತ್ತು ನ್ಯೂಜೆರ್ಸಿಯ ಗವರ್ನರ್ ವಿಲಿಯಂ ಫ್ರ್ಯಾಂಕ್ಲಿನ್ ಯುದ್ಧದಾದ್ಯಂತ ರಾಜಪ್ರಭುತ್ವಕ್ಕೆ ನಿಷ್ಠಾವಂತನಾಗಿದ್ದನು ಹಾಗೂ ಅವನ ತಂದೆಯೊಂದಿಗೆ ಮಾತನಾಡಲಿಲ್ಲ. ಒಳನಾಡಿನ ಸ್ಕಾಟಿಶ್ ವಸಾಹುತಗಾರರಂತಹ ಸಂಪೂರ್ಣವಾಗಿ ಅಮೆರಿಕಾದವರಾಗದಿದ್ದ ಇತ್ತೀಚಿನ ವಲಸಿಗರೂ ಸಹ ರಾಜನಿಗೆ ಬೆಂಬಲ ನೀಡಿದರು; ಇದರ ಅತ್ಯುತ್ತಮ ಉದಾಹರಣೆಗಾಗಿ, ಫ್ಲೋರ ಮ್ಯಾಕ್‌ಡೊನಾಲ್ಡ್ಅನ್ನು ಗಮನಿಸಿ.[೩೨] ಹೆಚ್ಚಿನ ಅಮೆರಿಕಾದ ಮೂಲನಿವಾಸಿಗಳು ತಟಸ್ಥರಾಗಿದ್ದಾರೆ ಎಂಬ ವಾದವನ್ನು ತಳ್ಳಿಹಾಕಿ, ರಾಜನನ್ನು ಬೆಂಬಲಿಸಿದರು. ವಸಾಹತಿನ ವ್ಯಾಪಾರವನ್ನು ಹೆಚ್ಚಾಗಿ ಅವಲಂಬಿಸಿದ್ದ ಸಮುದಾಯಗಳು ರಾಜಕೀಯ ಅಂಶಗಳು ಮುಖ್ಯವಾಗಿದ್ದರೂ ಕ್ರಾಂತಿಕಾರಿಗಳ ಮಾರ್ಗವನ್ನು ಹಿಡಿದವು. ರಾಜನನ್ನು ಬೆಂಬಲಿಸಿದ ಪ್ರಮುಖ ಅಮೆರಿಕಾದ ಮೂಲನಿವಾಸಿಗಳ ಮುಖಂಡನೆಂದರೆ ಮೊಹಾವ್ಕ್ ನೇಶನ್ನ ಜೋಸೆಫ್ ಬ್ರ್ಯಾಂಟ್. ಅವನು ಪೆನ್ಸಿಲ್ವೇನಿಯಾ ಮತ್ತು ನ್ಯೂಯಾರ್ಕ್‌ನಲ್ಲಿ ಪ್ರತ್ಯೇಕ ವಸಾಹತೀಕರಣಗಳ ಮೇಲೆ ಗಡಿನಾಡ ದಾಳಿಯನ್ನು ನಿರ್ದೇಶಿಸಿದನು. ಜಾನ್ ಸುಲ್ಲಿವ್ಯಾನ್ ಮುಂದಾಳತ್ವದಲ್ಲಿ ಅಮೆರಿಕಾದ ಸೇನೆಯು 1779ರಲ್ಲಿ ನ್ಯೂಯಾರ್ಕ್ಅನ್ನು ರಕ್ಷಿಸುವವರೆಗೆ ಈ ದಾಳಿಯನ್ನು ಮುಂದುವರಿಸಿದನು. ಒಕ್ಕೂಟದ ಬೆಂಬಲಿಗ ಭಾರತೀಯರನ್ನು ಶಾಶ್ವತವಾಗಿ ಕೆನಡಾಕ್ಕೆ ಕಳುಹಿಸಲು ಬಲವಂತ ಪಡಿಸಿದನು.[೩೩] ಕೆಲವು ಆಫ್ರಿಕನ್-ಅಮೆರಿಕನ್ ಜೀತದಾಳುಗಳು ರಾಜಕೀಯವಾಗಿ ಪ್ರಬಲರಾಗಿ ರಾಜನನ್ನು ಬೆಂಬಲಿಸಿದರು. ವಿಶೇಷವಾಗಿ ವರ್ಜಿನಿಯಾದಲ್ಲಿ ರಾಜಪ್ರಭುತ್ವದ ಗವರ್ನರ್ ವಿಮೋಚನೆ, ಅವರ ಕುಟುಂಬಕ್ಕೆ ರಕ್ಷಣೆ ಮತ್ತು ಜಮೀನನ್ನು ನೀಡುವುದಾಗಿ ಮಾತು ನೀಡುವ ಮೂಲಕ ಕರಿಯರನ್ನು ಬ್ರಿಟಿಷ್ ಸೇನೆಗೆ ನೇಮಕಮಾಡಿಕೊಂಡಿದ್ದರು. ಯುದ್ಧದ ನಂತರ ಅನೇಕ ಈ "ಕರಿಯ ಒಕ್ಕೂಟದ ಬೆಂಬಲಿಗರು" ನೋವ ಸ್ಕೋಟಿಯಾ, ಮೇಲಿನ ಮತ್ತು ಕೆಳ ಕೆನಡಾ, ಹಾಗೂ ಬ್ರಿಟಿಷ್ ಸಾಮ್ರಾಜ್ಯದ ಇತರ ಭಾಗಗಳಲ್ಲಿ ನೆಲೆಸಿದರು. ಅವರ ಕೆಲವು ಸಂತತಿಯವರು ಈಗಲೂ ಅಲ್ಲಿ ವಾಸಿಸುತ್ತಿದ್ದಾರೆ.[೩೪] ಕೆಲವು ಮಂದಿ ಯುದ್ಧದ ಸಂದರ್ಭದಲ್ಲಿ ತಟಸ್ಥರಾಗಿಲು ಬಯಸಿದರು. ಹೆಚ್ಚಿನವರು ಇತರರ ಕಣ್ಣಿಗೆ ಬೀಳದಂತಿದ್ದರು. ಕ್ವೇಕರ್ಗಳು ವಿಶೇಷವಾಗಿ ಪೆನ್ಸಿಲ್ವೇನಿಯಾದಲ್ಲಿ ತಟಸ್ಥತೆಯ ಬಗ್ಗೆ ಮುಚ್ಚುಮರೆಯಿಲ್ಲದೆ ಹೇಳಿಕೊಂಡ ಪ್ರಮುಖ ಗುಂಪಾಗಿದೆ. ದೇಶಪ್ರೇಮಿಗಳು ಸ್ವಾತಂತ್ರ್ಯವನ್ನು ಘೋಷಿಸಿದಾಗ ಬ್ರಿಟಿಷ್ ಒಂದಿಗೆ ವ್ಯಾಪಾರವನ್ನು ಮುಂದುವರಿಸಿದ ಕ್ವೇಕರ್‌ಗಳು, ಕ್ರಾಂತಿಕಾರಿ ವಿಷಯದ ವಿಮರ್ಶಕರಾದ "ಬಂಡಾಯ ಎಬ್ಬಿಸುವಂತಹ ಪ್ರಕಟಣೆಗಳ ರಚನೆಕಾರರು ಮತ್ತು ಲೇಖಕರಿಂದ" ಬ್ರಿಟಿಷ್ ಆಡಳಿತದ ಬೆಂಬಲಿಗರೆಂದು ಟೀಕಿಸಲ್ಪಟ್ಟರು.[೩೫] ಯುದ್ಧದ ನಂತರ 450,000–500,000ರಷ್ಟು ಒಕ್ಕೂಟದ ಬೆಂಬಲಿಗರು ಅಮೆರಿಕದಲ್ಲಿ ಉಳಿದರು ಮತ್ತು ಸಾಮಾನ್ಯ ಜೀವನನ್ನು ಮತ್ತೆ ಆರಂಭಿಸಿದರು. ಸ್ಯಾಮ್ಯುಯೆಲ್ ಸೀಬರಿಯಂತಹ ಕೆಲವರು ಅಮೆರಿಕಾದ ಮುಖಂಡರಾದರು. ಸುಮಾರು 62,000 ಒಕ್ಕೂಟದ ಬೆಂಬಲಿಗರು ಕೆನಡಾಕ್ಕೆ ಮತ್ತು ಇತರರು ಬ್ರಿಟನ್‌ಗೆ (7,000) ಅಥವಾ ಫ್ಲೋರಿಡಾಕ್ಕೆ ಅಥವಾ ವೆಸ್ಟ್ ಇಂಡೀಸ್ಗೆ (9,000) ಹೊಸ ಸ್ಥಳಕ್ಕೆ ಹೋದರು. ಇದು ವಸಾಹತುಗಳ ಒಟ್ಟು ಜನಸಂಖ್ಯೆಯ ಸರಿಸುಮಾರು 2%ನಷ್ಟನ್ನು ಒಳಗೊಂಡಿತು. ಒಕ್ಕೂಟದ ಬೆಂಬಲಿಗರು 1783ರಲ್ಲಿ ದಕ್ಷಿಣ ಭಾಗವನ್ನು ಬಿಟ್ಟು, ಸಾವಿರಾರು ಕರಿಯರನ್ನು ಜೀತದಾಳುಗಳಾಗಿ ತಮ್ಮೊಂದಿಗೆ ಕರೆದುಕೊಂಡು ಬ್ರಿಟಿಷ್ ವೆಸ್ಟ್ ಇಂಡೀಸ್‌ಗೆ ಹೋದರು.[೩೬]
ಮಹಿಳೆಯರು
[ಬದಲಾಯಿಸಿ]ಅನೇಕ ರೀತಿಯ ಮಹಿಳೆಯರು ಹಲವಾರು ವಿಧಗಳಲ್ಲಿ ಅಮೆರಿಕಾದ ಕ್ರಾಂತಿಗೆ ಕೊಡುಗೆಯನ್ನು ಸಲ್ಲಿಸಿದ್ದಾರೆ. ಪುರುಷರಂತೆ ಮಹಿಳೆಯರೂ ಯುದ್ಧದ ಎರಡೂ ಬದಿಗಳಲ್ಲಿ ಭಾಗವಹಿಸಿದ್ದಾರೆ. ಮಹಿಳೆಯರಲ್ಲಿ ಯುರೋಪಿನ-ಅಮೆರಿಕನ್ನರು, ಆಫ್ರಿಕಾದ-ಅಮೆರಿಕನ್ನರು ಮತ್ತು ಅಮೆರಿಕಾದ ಮೂಲನಿವಾಸಿಗಳು ಸಹ ದೇಶಪ್ರೇಮಿ ಮತ್ತು ಒಕ್ಕೂಟದ ಬೆಂಬಲಿಗ ಪಕ್ಷಗಳಾಗಿ ವಿಂಗಡಿಸಲ್ಪಟ್ಟಿದ್ದಾರೆ. ಸಾಂಪ್ರದಾಯಿಕ ಕ್ರಾಂತಿಕಾರಿ ರಾಜಕಾರಣವು ಮಹಿಳೆಯರನ್ನು ಸೇರಿಸಿಕೊಳ್ಳಲಿಲ್ಲ. ದೇಶಪ್ರೇಮಿ ಮಹಿಳೆಯು ರಾಜಕೀಯ, ಪ್ರಜಾ ಮತ್ತು ಸಂಸಾರದ ಜೀವನದ ಎಲ್ಲಾ ಅಂಶಗಳನ್ನು ವ್ಯಾಪಿಸಿದ ಯುದ್ಧವನ್ನು ಎದುರಿಸಿದರಿಂದ, ಸಾಮಾನ್ಯ ಸಂಸಾರದ ವರ್ತನೆಗಳು ರಾಜಕೀಯ ಪ್ರಾಮುಖ್ಯತೆಯನ್ನು ಪಡೆದುಕೊಂಡವು. ಅವರು ಬ್ರಿಟಿಷ್ ಸರಕುಗಳನ್ನು ಬಹಿಷ್ಕರಿಸಿ, ಬ್ರಿಟಿಷ್ ಬಗ್ಗೆ ಗೂಢಚರ್ಯೆ ನಡೆಸಿ, ಸೇನೆಗಳು ಮುನ್ನಡೆದಂತೆ ಅವರೊಂದಿಗೇ ಹೋಗಿ, ಸೈನಿಕರ ಬಟ್ಟೆಗಳನ್ನು ತೊಳೆದು, ಅವರಿಗೆ ಬೇಯಿಸಿ ಹಾಕಿ ಮತ್ತು ಶುಶ್ರೂಷೆ ಮಾಡಿ, ರಹಸ್ಯ ಸಂದೇಶಗಳನ್ನು ಕಳುಹಿಸಿ ಹಾಗೂ ಕೆಲವು ಸಂದರ್ಭದಲ್ಲಿ ಡೆಬೋರ್ಯಾಹ್ ಸ್ಯಾಮ್ಸನ್ಳಂತೆ ಪುರುಷರಾಗಿ ವೇಷ ಮರೆಸಿ ಕ್ರಾಂತಿಯಲ್ಲಿ ಭಾಗವಹಿಸಿದರು. ಅಲ್ಲದೆ ಅವರು ಸೇನೆ ಮತ್ತು ಅವರ ಕುಟುಂಬಗಳ ಆಹಾರಕ್ಕಾಗಿ ಮನೆಯಲ್ಲಿ ಕೃಷಿ ಕೆಲಸವನ್ನು ಆರಂಭಿಸಿದರು.[೩೭] ಬ್ರಿಟಿಷರ ಸರುಕಗಳ ಬಹಿಷ್ಕಾರಕ್ಕೆ ಅಮೆರಿಕಾದ ಮಹಿಳೆಯರ ಮನಃಪೂರ್ವಕವಾದ ಭಾಗವಹಿಸುವಿಕೆಯ ಅಗತ್ಯವಿತ್ತು; ಏಕೆಂದರೆ ಬಹಿಷ್ಕೃತ ವಸ್ತುಗಳು ಹೆಚ್ಚಾಗಿ ಟೀ ಮತ್ತು ಬಟ್ಟೆಯಂತಹ ಗೃಹಬಳಕೆಯ ಸಾಮಾಗ್ರಿಗಳಾಗಿದ್ದವು. ಮಹಿಳೆಯರು ಬಳಕೆ ತಪ್ಪಿಹೋಗಿದ್ದ ನೂಲುವ ಮತ್ತು ನೇಯುವ ಕರಕುಶಲ ಕೆಲಸಗಳನ್ನು ಪುನಃಆರಂಭಿಸಿದರು. 1769ರಲ್ಲಿ ಬೋಸ್ಟನ್‌ನ ಮಹಿಳೆಯರು 40,000ನಷ್ಟು ನೂಲುಹುರಿಗಳ ಪಿಂಜಿಗಳನ್ನು ಉತ್ಪಾದಿಸಿದರು ಹಾಗೂ ಮಸ್ಸಾಚ್ಯುಸೆಟ್ಸ್‌ನ ಮಿಡ್ಲ್‌ಟೌವ್ನ್ನ 180 ಮಹಿಳೆಯರು 20,522 yards (18,765 m)ನಷ್ಟು ಬಟ್ಟೆಯನ್ನು ನೇಯ್ದರು.[೩೮] ರಾಜಕೀಯ ನಿಷ್ಠೆಯ ವಿಷಮಸ್ಥಿತಿಯು ವಸಾಹತಿನ ಅಮೆರಿಕಾದ ಮಹಿಳೆಯರ ಬಟ್ಟೆ ನೇಯ್ಗೆಯ ಮೇಲೆಯೂ ಪ್ರಭಾವ ಬೀರಿತು: ರಾಜನಿಗೆ ನಿಷ್ಠೆಯನ್ನು ಖಾಸಗಿ ಸಂಬಂಧವಾಗಿದ್ದ ಮಹಿಳೆಯೊಬ್ಬಳ ಅವಳ ಪತಿಯೊಂದಿಗಿನ ನಿಷ್ಠಾವಂತಿಕೆಯು ರಾಜಕೀಯ ಚಟುವಟಿಕೆಯಾಯಿತು, ವಿಶೇಷವಾಗಿ ರಾಜನಿಗೆ ನಿಯತ್ತಾಗಿದ್ದ ಪುರುಷನೊಂದಿಗೆ ನಿಷ್ಠೆಯನ್ನು ಹೊಂದಿದ್ದ ಮಹಿಳೆಯರು. ರಾಜನನ್ನು ಬೆಂಬಲಿಸುತ್ತಿದ್ದ ಪುರಷರ ಪತ್ನಿಯರಾದ ದೇಶಪ್ರೇಮಿ ಮಹಿಳೆಯರಿಗೆ ಸಾಮಾನ್ಯವಾಗಿ ವಿರಳವಾಗಿದ್ದ ಕಾನೂನುಸಮ್ಮತ ವಿವಾಹ ವಿಚ್ಛೇದನವು ಸಿಗುತ್ತಿತ್ತು.[೩೯]
ಇತರ ಭಾಗಿಗಳು
[ಬದಲಾಯಿಸಿ]ಸ್ಪೇನ್
[ಬದಲಾಯಿಸಿ]ಸ್ಪೇನ್ 1779ರ ಜೂನ್ 21ರಲ್ಲಿ ಇಂಗ್ಲೆಂಡ್ ವಿರುದ್ಧ ಯುದ್ಧವನ್ನು ಸಾರುವ ಮೂಲಕ ಅಮೆರಿಕಾದ ಕ್ರಾಂತಿಯಲ್ಲಿ ಸಂಪೂರ್ಣವಾಗಿ ಸೇರಿಕೊಂಡಿತು. ನ್ಯೂ ಸ್ಪೇನ್‌ನಲ್ಲಿ ಸ್ಪ್ಯಾನಿಶ್ ಸೇನೆಯ ಜನರಲ್ ಆಗಿದ್ದ ಮತ್ತು ಲೂಸಿಯಾನದ ಗವರ್ನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬರ್ನಾರ್ಡೊ ಡಿ ಗ್ಯಾಲ್ವೆಜ್ ವೈ ಮ್ಯಾಡ್ರಿಡ್ನನ್ನು, ವಸಾಹತಿನ ಸೈನಿಕರ ವಿಶೇಷ ಕಾರ್ಯಯಾತ್ರೆಯ ಮುಖಂಡನಾಗಿ ಅಮೆರಿಕಾದ ವಸಾಹತುಗಾರರಿಗೆ ಅವರ ಬ್ರಿಟನ್ ವಿರುದ್ಧದ ದಂಗೆಯಲ್ಲಿ ನೆರವು ಒದಗಿಸುವುದಕ್ಕಾಗಿ ಫ್ಲೋರಿಡಾಕ್ಕೆ ಕಳುಹಿಸಲಾಯಿತು.[೪೦] ಅಮೆರಿಕಾದ ದೃಷ್ಟಿಕೋನದಿಂದ ಗ್ಯಾಲ್ವೆಜ್‌ನ ಕಾರ್ಯಾಚರಣೆಯ ಪ್ರಾಮುಖ್ಯತೆಯೆಂದರೆ - ಅವನು ಅಮೆರಿಕಾದ ದಂಗೆಕೋರರನ್ನು ದಕ್ಷಿಣದಿಂದ ಸುತ್ತುವರಿಯುವ ಬ್ರಿಟಿಷ್ ಅಭಿಪ್ರಾಯವನ್ನು ನಿರಾಕರಿಸಿದನು ಹಾಗೂ ಪೂರೈಕೆಗಾಗಿ ಒಂದು ಜೀವಧಾರಕ ಮಾರ್ಗವನ್ನು ತೆರೆದಿಟ್ಟನು. ಅಮೆರಿಕಾದ ಕ್ರಾಂತಿಗೆ ಅವನು ನೀಡಿದ ನೆರವನ್ನು ಪರಿಗಣಿಸಿ ಜಾರ್ಜ್ ವಾಷಿಂಗ್ಟನ್ ಜುಲೈ 4ರ ಪೆರೇಡ್‌ನಲ್ಲಿ ಅವನನ್ನು ಬಲ ಭಾಗದಲ್ಲಿ ಕರೆದುಕೊಂಡು ಹೋದನು ಹಾಗೂ ಅಮೆರಿಕಾದ ಕಾಂಗ್ರೆಸ್ ಕ್ರಾಂತಿಯ ಸಂದರ್ಭದಲ್ಲಿನ ಗ್ಯಾಲ್ವೆಜ್‌ನ ಸಹಾಯಕ್ಕಾಗಿ ಅವನನ್ನು ದೃಷ್ಟಾಂತವಾಗಿ ನಮೂದಿಸಿತು.[೪೧][೪೨]
ಫ್ರಾನ್ಸ್
[ಬದಲಾಯಿಸಿ]1776ರ ಆರಂಭದಲ್ಲಿ ಫ್ರಾನ್ಸ್ ಅಮೆರಿಕನ್ನರಿಗೆ ಸಹಾಯ ಒದಗಿಸುವ ಒಂದು ಪ್ರಮುಖ ಯೋಜನೆಯನ್ನು ರೂಪಿಸಿತು ಹಾಗೂ ಸ್ಪ್ಯಾನಿಶ್ ರಹಸ್ಯವಾಗಿ ಬಂಡವಾಳವನ್ನು ಒದಗಿಸಿತು. ಪ್ರತಿ ರಾಷ್ಟ್ರವು ಯುದ್ಧ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು ಒಂದು ದಶಲಕ್ಷ "ಲೀವ್ರ್ ಟಾರ್ನೈಸ್"ಗಳನ್ನು ವ್ಯಯ ಮಾಡಿದವು. ಪಿಯೆರ್ರೆ ಬಿಯಮಾರ್ಕೈಸ್ನಿಂದ ನಡೆಸಲ್ಪಡುತ್ತಿದ್ದ ಒಂದು ತೋರ್ಕೆಯ ಸಂಘಟನೆಯು ಅವುಗಳ ಚಟುವಟಿಕೆಗಳನ್ನು ರಹಸ್ಯವಾಗಿಟ್ಟಿತು. ಅಮೆರಿಕನ್ನರು ಹಾಲ್ಯಾಂಡ್ ಮೂಲಕ ಹಾಗೂ ಫ್ರೆಂಚ್ ಮತ್ತು ಸ್ಪ್ಯಾನಿಶ್ ಬಂದರುಗಳಿಂದ ವೆಸ್ಟ್ ಇಂಡೀಸ್ನಲ್ಲಿ ಕೆಲವು ಯುದ್ಧ ಸಾಮಾಗ್ರಿಗಳನ್ನು ಪಡೆದರು.[೪೩]
ಅಮೆರಿಕಾದ ಮೂಲನಿವಾಸಿಗಳು
[ಬದಲಾಯಿಸಿ]ಮಿಸ್ಸಿಸಿಪ್ಪಿಯ ಪೂರ್ವದ 200,000ನಷ್ಟು ಅಮೆರಿಕಾದ ಮೂಲನಿವಾಸಿಗಳು ವಸಾಹತುಗಾರರನ್ನು ಶಂಕಿಸಿ, ಬ್ರಿಟಿಷರನ್ನು ಬೆಂಬಲಿಸಿದರು.[೪೪] ಅಮೆರಿಕಾದ ವಸಾಹತುಗಳ ಮೇಲೆ ದಾಳಿ ನಡೆಸಲು ಬ್ರಿಟಿಷ್ ಬಂಡವಾಳ ಮತ್ತು ಗನ್‌ಗಳನ್ನು ಒದಗಿಸಿತು. ಯುರೋಪಿನ ಸಂಘರ್ಷದಲ್ಲಿ ಭಾಗವಹಿಸುವುದು ಬೆಲೆಯಿಲ್ಲದಿರುವುದೆಂದು ಭಾವಿಸಿ ಕೆಲವು ಭಾರತೀಯರು ತಟಸ್ಥರಾಗಿರಲು ಪ್ರಯತ್ನಿಸಿದರು. ಕೆಲವರು ಅಮೆರಿಕಾದ ಕ್ರಾಂತಿಯನ್ನು ಬೆಂಬಲಿಸಿದರು.[೪೫] ಬ್ರಿಟಿಷ್ ಕ್ಯಾರೊಲಿನಾಸ್‌ನಿಂದ ನ್ಯೂಯಾರ್ಕ್‌ವರೆಗೆ ಗಡಿನಾಡಿನ ವಸಾಹತೀಕರಣವನ್ನು ಆಕ್ರಮಿಸಿಕೊಳ್ಳಲು ಭಾರತೀಯರಿಗೆ ಒಕ್ಕೂಟದ ಬೆಂಬಲಿಗರ ನಾಯಕತ್ವದಡಿಯಲ್ಲಿ ಸೇನೆಗಳನ್ನು ಒದಗಿಸಿತು. ವಿಶೇಷವಾಗಿ ಪೆನ್ಸಿಲ್ವೇನಿಯಾದಲ್ಲಿ ವಸಾಹತುಗಾರರನ್ನು ಕೊಲೆ ಮಾಡುವುದಾಗಿ ಬೆದರಿಕೆ ನೀಡಿತು. 1778 ಮತ್ತು 1780ರಲ್ಲಿ 300 ಭಾರತೀಯ ಸೈನಿಕರನ್ನು ಹಾಗೂ 100 ಬಿಳಿಯ ಒಕ್ಕೂಟದ ಬೆಂಬಲಿಗರನ್ನು ನಿರ್ದೇಶಿಸಿದ ಅತಿ ಪ್ರಮುಖ ಮೊಹಾವ್ಕ್‌ನ ಮುಖಂಡ ಜೋಸೆಫ್ ಬ್ರ್ಯಾಂಟ್ ನ್ಯೂಯಾರ್ಕ್ ಮತ್ತು ಪೆನ್ಸಿಲ್ವೇನಿಯಾದಲ್ಲಿ ಸಣ್ಣ ವಸಾಹತುಗಳ ಮೇಲೆ ಅನೇಕ ದಾಳಿಗಳನ್ನು ನಡೆಸಿದನು.[೪೬] 1776ರಲ್ಲಿ ಚೆರೋಕೀ ಯುದ್ಧ ಪಕ್ಷಗಳು ದಕ್ಷಿಣದ ಗಡಿಪ್ರದೇಶಗಳಾದ್ಯಂತ ಆಕ್ರಮಣ ಮಾಡಿದವು.[೪೭] ಭಾರತೀಯರು 100 ಮಂದಿಯಷ್ಟು ಮಾತ್ರ ಸೈನಿಕ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿತ್ತು. ಅವರು ಸಾವಿರಾರು ಸಿಪಾಯಿಗಳ ತೀವ್ರ ಆಕ್ರಮಣದ ವಿರುದ್ಧ ಹೋರಾಡಲು ಸಾಕಷ್ಟು ಸೈನಿಕರನ್ನು ಸಜ್ಜುಗೊಳಿಸಿರಲಿಲ್ಲ. ಆದ್ದರಿಂದ ಅಮೆರಿಕನ್ನರು 1776 ಮತ್ತು 1780ರಲ್ಲಿ ಚೆರೋಕೀಯರ ವಿರುದ್ಧ ಸೆಣಸಾಡಲು ದಾಳಿಯ ಸೈನ್ಯವನ್ನು ಕಳುಹಿಸಿದರು. 1779ರಲ್ಲಿ ವಾಷಿಂಗ್ಟನ್ ಪಶ್ಚಿಮ ನ್ಯೂಯಾರ್ಕ್‌ನಿಂದ ಐರೊಕ್ಯೋಯಸ್‍ರನ್ನು ಹೊರಗೆ ತರಲು ಭೂಖಂಡೀಯ ಸೈನಿಕರ ನಾಲ್ಕು ಪಡೆಗಳೊಂದಿಗೆ ಜನರಲ್ ಜಾನ್ ಸುಲ್ಲಿವ್ಯಾನ್ನನ್ನು ಕಳುಹಿಸಿತು. ಅಲ್ಲಿ ಕಾಳಗ ನಡೆಯದಿದ್ದರೂ ಸುಲ್ಲಿವ್ಯಾನ್ 40 (ಖಾಲಿ) ಭಾರತೀಯ ಹಳ್ಳಿಗಳನ್ನು ಸುಟ್ಟುಹಾಕಿದನು ಹಾಗೂ ಅತಿ ಮುಖ್ಯವಾಗಿ ಚಳಿಗಾಲದ ಆಹಾರವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 160,000ರಷ್ಟು ಮೆಕ್ಕೆಜೋಳದ ಬುಷಲ್‌ಗಳನ್ನು ನಾಶ ಮಾಡಿದನು. ಉಪವಾಸವನ್ನು ಎದುರಿಸಿದ ಐರೊಕ್ಯೋಯಸ್‍ರು ಶಾಶ್ವತವಾಗಿ ನಿಯಾಗರ ಫಾಲ್ಸ್ ಪ್ರದೇಶ ಮತ್ತು ಕೆನಡಾಕ್ಕೆ ಪಲಾಯನ ಮಾಡಿದರು. ಅಲ್ಲಿ ಅವರಿಗೆ ಬ್ರಿಟಿಷರು ಆಹಾರವನ್ನು ನೀಡಿದರು.[೪೮] ಶಾಂತಿ ಅಧಿವೇಶನದಲ್ಲಿ ಬ್ರಿಟಿಷ್ ಅದರ ಭಾರತೀಯರೊಂದಿಗಿನ ಸಂಬಂಧವನ್ನು ತೊರೆಯಿತು ಹಾಗೂ ಅಮೆರಿಕನ್ನರು ಮಿಸ್ಸಿಸಿಪ್ಪಿಯ ಪಶ್ಚಿಮದ ಮತ್ತು ಫ್ಲೋರಿಡಾದ ಉತ್ತರದ ಎಲ್ಲಾ ಪ್ರದೇಶಗಳ ಸ್ವಾಧೀನವನ್ನು ಪಡೆದರು. ಕ್ಯಾಲೋವೆ ಹೀಗೆಂದು ತರ್ಕಿಸಿದ್ದಾನೆ:
- ಸುಟ್ಟುಹೋದ ಹಳ್ಳಿಗಳು ಮತ್ತು ಬೆಳೆಗಳು, ಕೊಲ್ಲಲ್ಪಟ್ಟ ಮುಖಂಡರು, ವಿಭಜಿಸಲ್ಪಟ್ಟ ಕೌನ್ಸಿಲ್‌ಗಳು ಮತ್ತು ನಾಗರಿಕ ಕದನಗಳು, ದೇಶಾಂತರಣ, ಪಟ್ಟಣಗಳು ಮತ್ತು ಕೋಟೆಗಳು ನಿರಾಶ್ರಿತರಿಂದ ನಾಶಗೊಂಡವು, ಆರ್ಥಿಕ ಹಾನಿ, ಪುರಾತನ ಸಂಪ್ರದಾಯಗಳ ಮುರಿಯುವಿಕೆ, ಯುದ್ಧದಲ್ಲಿ ಆದ ನಷ್ಟ, ಕಾಯಿಲೆ ಮತ್ತು ಉಪವಾಸ, ಶತ್ರುಗಳ ನಂಬಿಕೆದ್ರೋಹ ಮೊದಲಾದವೆಲ್ಲವೂ ಸೇರಿ ಅಮೆರಿಕಾದ ಕ್ರಾಂತಿಯನ್ನು ಅಮೆರಿಕಾ-ಭಾರತದ ಇತಿಹಾಸದಲ್ಲಿ ಕರಾಳ ಅವಧಿಯಾಗಿ ಮಾಡಿದವು.[೪೯]
ಬ್ರಿಟಿಷರು ಪಶ್ಚಿಮದಲ್ಲಿನ ಅವರ ಕೋಟೆಯನ್ನು 1796ರವರೆಗೆ ಬಿಟ್ಟುಕೊಡಲಿಲ್ಲ ಹಾಗೂ ಈಗ ಮಿಡ್‌ವೆಸ್ಟ್‌ನ ವಿಸ್ಕನ್ಸಿನ್‌ನ ಓಹಿಯೊ ಇರುವಲ್ಲಿ ಭಾರತೀಯ ರಾಷ್ಟ್ರೀಯ ಉಪಗ್ರಹವೊಂದನ್ನು ರೂಪಿಸುವ ಕನಸನ್ನು ಉಳಿಸಿಕೊಂಡಿದ್ದರು. ಈ ಪ್ರತಿಕೂಲ ಗುರಿಯು 1812ರ ಯುದ್ಧದ ಒಂದು ಕಾರಣವಾಗಿದೆ.[೫೦][೫೧]
ಜೀತದಾಳುಗಳು
[ಬದಲಾಯಿಸಿ]ಕೆಲವು ಜೀತದಾಳುಗಳು ಕ್ರಾಂತಿಯು ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ನೀಡುತ್ತದೆ ಎಂದು ತಿಳಿದರು. ಬ್ರಿಟಿಷ್ ಮತ್ತು ಅಮೆರಿಕಾದ ಸರಕಾರಗಳೆರಡೂ ಸೇವೆಯನ್ನು ಒದಗಿಸಿದವರಿಗೆ ಸ್ವಾತಂತ್ರ್ಯ ನೀಡುವುದಾಗಿ ಮಾತು ಕೊಟ್ಟವು ಹಾಗೂ ಕೆಲವು ಜೀತದಾಳುಗಳು ಒಂದು ಅಥವಾ ಮತ್ತೊಂದು ಸೇನೆಗಳಲ್ಲಿ ಸೆಣಸಾಡಿದರು. 1777ರ ಆರಂಭದಲ್ಲಿ ಉತ್ತರದಲ್ಲಿ ಮಾಲೀಕರಿಗೆ ಪಾವತಿಸದ ಮೂಲಕ ಗುಲಾಮಗಿರಿ ರದ್ದತಿಯು ಕಂಡುಬಂದಿತು. ಆದರೆ ದಕ್ಷಿಣದಲ್ಲಿ ಜೀತದಾಳು ಪದ್ಧತಿಯು ಉಳಿದುಕೊಂಡಿತು ಹಾಗೂ ಅದು 1790ರಲ್ಲಿ ಹೊಸ ಜೀವನವನ್ನು ಪಡೆಯಿತು.[೫೨] ಕ್ರಾಂತಿಯ ಸಂದರ್ಭದಲ್ಲಿ, ಬ್ರಿಟಿಷರು ಜೀತದಾಳುಗಳು ಅಮೆರಿಕನ್ನರ ವಿರುದ್ಧ ತಿರುಗಿಬೀಳುವಂತೆ ಮಾಡಲು ಪ್ರಯತ್ನಿಸಿದರು.[೩೦] ಆದರೆ ಇತಿಹಾಸಕಾರ ಡೇವಿಡ್ ಬ್ರಿಯಾನ್ ಡೇವಿಸ್ ಜೀತದಾಳುಗಳಿಗೆ ಸಂಪೂರ್ಣ ಅನುಕೂಲ ಕಲ್ಪಿಸುವ ನೀತಿಯಲ್ಲಿನ ಸಮಸ್ಯೆಗಳನ್ನು ಹೀಗೆಂದು ವಿವರಿಸಿದ್ದಾನೆ:
But England greatly feared the effects of any such move on its own West Indies, where Americans had already aroused alarm over a possible threat to incite slave insurrections. The British elites also understood that an all-out attack on one form of property could easily lead to an assault on all boundaries of privilege and social order, as envisioned by radical religious sects in Britain’s seventeenth-century civil wars.[೫೩]
ಡೇವಿಸ್ ಬ್ರಿಟಿಷ್ ವಿಷಮ ಸ್ಥಿತಿಯನ್ನು ಹೀಗೆಂದು ಒತ್ತಿಹೇಳಿದ್ದಾನೆ: "ದಂಗೆಕೋರ ಅಮೆರಿಕಾದ ವಸಾಹತುಗಾರರಿಂದ ದಾಳಿಗೊಳಗಾದಾಗ ಬ್ರಿಟನ್ ಅವರ ಜೀತದಾಳುಗಳ ಪ್ರತಿಭಟನೆಯ ಭಯವನ್ನು ಸ್ವಪ್ರಯೋಜನಕ್ಕೆ ಬಳಸಿಕೊಳ್ಳಲು ಆಶಿಸಿತು ಹಾಗೂ ಅನೇಕ ಜೀತದಾಳುಗಳನ್ನು-ಹೊಂದಿದ್ದ ಒಕ್ಕೂಟದ ಬೆಂಬಲಿಗರಿಗೆ ಮತ್ತು ಶ್ರೀಮಂತ ಕ್ಯಾರಿಬೀನ್ ಕೃಷಿಕರಿಗೆ ಮತ್ತು ವ್ಯಾಪಾರಿಗಳಿಗೆ ಅವರ ಜೀತದಾಳು ಸಂಪತ್ತು ಭದ್ರವಾಗಿರುತ್ತದೆ ಎಂಬ ಪುನರಾಶ್ವಾಸನೆಯನ್ನು ನೀಡಿತು".[೫೪] ವಸಾಹತುಗಾರರು ಜೀತದಾಳುಗಳ ದಂಗೆಯನ್ನು ಪ್ರೇರೇಪಿಸುತ್ತಿದ್ದುದಕ್ಕಾಗಿ ಬ್ರಿಟಿಷರನ್ನು ದೂಷಿಸಿದರು.[೫೫] ಅಮೆರಿಕಾದ ಸ್ವಾತಂತ್ರ್ಯ ಪಕ್ಷವಾದಿಗಳ ಹೆಚ್ಚಿನ ಮುಖಂಡರು ಜೀತದಾಳುಗಳನ್ನು-ಇಟ್ಟುಕೊಂಡವರಾಗಿದ್ದುದರಿಂದ ಅವರ ಬೂಟಾಟಿಕೆಯ ಸ್ವಾತಂತ್ರ್ಯದ ಕರೆಗಾಗಿ ಅವರು ಬ್ರಿಟನ್‌ನಲ್ಲಿ ತೀಕ್ಷ್ಣವಾದ ಟೀಕೆಗೊಳಗಾದರು. "ನೀಗ್ರೋಗಳನ್ನು ಜೀತದಾಳುಗಳಾಗಿ ಹೊಂದಿದವರಲ್ಲಿ ಸ್ವಾತಂತ್ರ್ದಕ್ಕಾಗಿ ಅಬ್ಬರದ ಕೂಗನ್ನು ನಾವು ಹೇಗೆ ಕೇಳಲು ಸಾಧ್ಯ?" ಎಂದು ಸ್ಯಾಮ್ಯುಯೆಲ್ ಜಾನ್ಸನ್ ಹೇಳಿದ್ದಾನೆ.[೫೬] ಜೀತದಾಳು-ವ್ಯಾಪಾರವನ್ನು ಮುಂದುವರಿಸಿಕೊಂಡು "ಒಬ್ಬ ನೀಗ್ರೋನನ್ನು ಸ್ವತಂತ್ರಗೊಳಿಸುವ" (ಸಾಮರ್ಸೆಟ್) ಬಗೆಗಿನ ಬ್ರಿಟಿಷರ ಆತ್ಮಾಭಿನಂದನೆಯನ್ನು ಟೀಕಿಸುವ ಮೂಲಕ ಬೆಂಜಮಿನ್ ಫ್ರ್ಯಾಂಕ್ಲಿನ್ ಪ್ರತಿಭಟಿಸಿದ್ದಾನೆ.[೫೭][೫೮] ಅಮೆರಿಕಾವನ್ನು ಪ್ರತಿನಿಧಿಸುವಲ್ಲಿ ಕೊಲಂಬಿಯಾದ ಪಾತ್ರವನ್ನು ಜನಪ್ರಿಯಗೊಳಿಸಿದ ಕರಿಯರ ಕವಯಿತ್ರಿ ಫಿಲ್ಲಿಸ್ ವೀಟ್ಲಿ, ಅವಳ ಪೋಯಮ್ಸ್ ಆನ್ ವೇರಿಯಸ್ ಸಬ್ಜೆಕ್ಟ್ಸ್, ರಿಲೀಜಿಯಸ್ ಆಂಡ್ ಮೋರಲ್ 1773ರಲ್ಲಿ ಪ್ರಕಟಗೊಂಡಾಗ ಜನರ ಗಮನಕ್ಕೆ ಬಂದಳು.[೫೮]
ಮಿಲಿಟರಿ ಯುದ್ಧದ ಆರಂಭ
[ಬದಲಾಯಿಸಿ]ಲೆಕ್ಸಿಂಗ್ಟನ್ ಮತ್ತು ಕಾಂಕರ್ಡ್ ಯುದ್ಧವು 1775ರ ಎಪ್ರಿಲ್ 19ರಂದು ಕಾಂಕರ್ಡ್ನಲ್ಲಿನ ಕ್ರಾಂತಿಕಾರಿಗಳನ್ನು ಬಂಧಿಸಲು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಬ್ರಿಟಿಷ್ ಸುಮಾರು 1000 ಯೋಧರ ಸೈನ್ಯವೊಂದನ್ನು ಕಳುಹಿಸಿದಾಗ ನಡೆಯಿತು.[೫೯] ಅವರು ಅಲ್ಲಿನ ಸ್ಥಳೀಯ ಮಿಲಿಟರಿಯೊಂದಿಗೆ ಸೆಣಸಾಡಿದರು. ಇದು ಅಮೆರಿಕಾದ ಕ್ರಾಂತಿಕಾರಿ ಯುದ್ಧದ ಮೊದಲ ಹೋರಾಟವಾಗಿ ಗುರುತಿಸಲ್ಪಟ್ಟಿತು. ಈ ಸುದ್ಧಿಯು 13 ವಸಾಹತುಗಳು ಅವುಗಳ ಸೇನೆಯನ್ನು ಒಂದುಗೂಡಿಸುವಂತೆ ಮತ್ತು ಸೈನಿಕರನ್ನು ಬೋಸ್ಟನ್‌ಗೆ ಮುತ್ತಿಗೆ ಹಾಕಲು ಕಳುಹಿಸುವಂತೆ ಪ್ರಚೋದಿಸಿತು. ಬಂಕರ್ ಹಿಲ್ ಯುದ್ಧವು 1775ರ ಜೂನ್ 17ರಂದು ಸಂಭವಿಸಿತು. ಈ ಬ್ರಿಟಿಷ್ ಗೆಲುವಿನಲ್ಲಿ ಸಾಕಷ್ಟು ನಷ್ಟ ಉಂಟಾಯಿತು; ಸುಮಾರು 6,000ರಷ್ಟು ರಕ್ಷಕ ಸೈನ್ಯದಿಂದ ಬ್ರಿಟಿಷ್ ಸುಮಾರು 1,000 ಮಂದಿಯನ್ನು ಕಳೆದುಕೊಂಡಿತು ಹಾಗೂ ಅಮೆರಿಕಾವು ಅತಿ ದೊಡ್ಡ ಸೇನಾ ವ್ಯವಸ್ಥೆಯಿಂದ ಸುಮಾರು 500 ಸೈನಿಕರನ್ನು ಕಳೆದುಕೊಂಡಿತು.[೬೦][೬೧]
ಯುದ್ಧವು ಆರಂಭವಾದ ನಂತರ 1775ರಲ್ಲಿ ಎರಡನೇ ಭೂಖಂಡೀಯ ಕಾಂಗ್ರೆಸ್ ಸಭೆಯನ್ನು ಕರೆಯಿತು. ಕಾಂಗ್ರೆಸ್ ಭೂಖಂಡೀಯ ಸೈನ್ಯವನ್ನು ರಚಿಸಿತು ಹಾಗೂ ರಾಜನಿಗೆ ರಾಜಿಯ ಪ್ರಯತ್ನವಾಗಿ ಆಲಿವ್ ಬ್ರ್ಯಾಂಚ್ ಮನವಿಯನ್ನು ಸಲ್ಲಿಸಿತು. ದಂಗೆಯ ಘೋಷಣೆಯನ್ನು ಪಡೆಯುವ ಬದಲಿಗೆ "ರಾಜದ್ರೋಹಿ"ಗಳ ವಿರುದ್ಧ ಕಾರ್ಯ ನಡೆಸುವ ಅವಶ್ಯಕತೆ ಇರುವುದಾಗಿ, ರಾಜ ಜಾರ್ಜ್ III ಇದನ್ನು ಸ್ವೀಕರಿಸಲು ನಿರಾಕರಿಸಿದನು. 1775ರ ಚಳಿಗಾಲದಲ್ಲಿ ಅಮೆರಿಕನ್ನರು ಕೆನಡಾವನ್ನು ಆಕ್ರಮಿಸಿಕೊಂಡರು. ಜನರಲ್ ರಿಚಾರ್ಡ್ ಮಾಂಟ್ಗೊಮೆರಿಯು ಮಾಂಟ್ರಿಯಲ್ಅನ್ನು ವಶಪಡಿಸಿಕೊಂಡನು. ಆದರೆ ಬೆನೆಡಿಕ್ಟ್ ಆರ್ನಾಲ್ಡ್ನ ನೆರವಿನೊಂದಿಗೆ ಕ್ವೆಬೆಕ್‌ನ ಮೇಲೆ ಮಾಡಿದ ಜಂಟಿ ದಾಳಿಯು ವಿಫಲಗೊಂಡಿತು. 1776ರ ಮಾರ್ಚ್‌ನಲ್ಲಿ ಜಾರ್ಜ್ ವಾಷಿಂಗ್ಟನ್ನನ್ನು ಹೊಸ ಸೈನ್ಯದ ಕಮಾಂಡರ್ ಆಗಿ ಹೊಂದಿಕೊಂಡು ಭೂಖಂಡೀಯ ಸೇನೆಯು ಬ್ರಿಟಿಷರನ್ನು ಬೋಸ್ಟನ್‌ನಿಂದ ಸ್ಥಳಾಂತರಗೊಳ್ಳುವಂತೆ ಬಲವಂತ ಪಡಿಸಿತು. ಆ ಮೂಲಕ ಕ್ರಾಂತಿಕಾರಿಗಳು ಎಲ್ಲಾ 13 ವಸಾಹತುಗಳ ನಿಯಂತ್ರಣವನ್ನು ಪಡೆದುಕೊಂಡರು ಹಾಗೂ ಸ್ವಾತಂತ್ರ್ಯವನ್ನು ಘೋಷಿಸಲು ತಯಾರಾಗಿದ್ದರು. ಅಲ್ಲಿ ಅನೇಕ ಒಕ್ಕೂಟದ ಬೆಂಬಲಿಗರು ಮತ್ತೂ ಇದ್ದರು. ಅವರು 1776ರ ಜುಲೈವರೆಗೆ ಯಾರ ನಿಯಂತ್ರಣಕ್ಕೂ ಬಂದಿರಲಿಲ್ಲ ಹಾಗೂ ಎಲ್ಲಾ ರಾಜವಂಶದ ಅಧಿಕಾರಿಗಳು ಪಲಾಯನಗೈದರು.[೬೨]
ಕೈದಿಗಳು
[ಬದಲಾಯಿಸಿ]1775ರ ಆಗಸ್ಟ್‌ನಲ್ಲಿ, ರಾಜಪ್ರಭುತ್ವ-ಅಧಿಕಾರದ ವಿರುದ್ಧದ ಸೈನ್ಯದಲ್ಲಿದ್ದ ಅಮೆರಿಕನ್ನರನ್ನು ರಾಜನು ರಾಜಪ್ರಭುತ್ವಕ್ಕೆ ವಿಶ್ವಾಸಘಾತುಕರಾಗಿದ್ದಾರೆ ಎಂದು ಘೋಷಿಸಿದನು. ಬ್ರಿಟಿಷ್ ಸರಕಾರವು ಆರಂಭದಲ್ಲಿ ಬಂಧಿಸಿದ ದಂಗೆಕೋರರರನ್ನು ಸಾಮಾನ್ಯ ಅಪರಾಧಿಗಳಾಗಿ ನೋಡಿಕೊಂಡಿತು ಹಾಗೂ ರಾಜದ್ರೋಹದ ವಿಚಾರಣೆ ನಡೆಸಲು ಸಿದ್ಧತೆಗಳನ್ನು ಮಾಡಿತು. ಅಮೆರಿಕಾದ ಕಾರ್ಯದರ್ಶಿ ಲಾರ್ಡ್ ಜರ್ಮೇನ್ ಮತ್ತು ಆಡ್ಮರಲ್-ಪದವಿಯ ಮೊದಲ ಲಾರ್ಡ್ ಲಾರ್ಡ್ ಸ್ಯಾಂಡ್ವಿಚ್, ಬ್ರಿಟಿಷ್ ಘಟಕದಲ್ಲಿ ಹಿಂದೆ ಸೇವೆ ಸಲ್ಲಿಸಿದವರಿಗೆ ವಿಶೇಷ ಮಹತ್ವ ನೀಡಲು ನಿರ್ಧರಿಸಿದರು (ಆ ಮೂಲಕ ರಾಜನಿಗೆ ನಿಷ್ಠೆಯ ಪ್ರತಿಜ್ಞೆಯ ಪ್ರಮಾಣ ಮಾಡಿದರು). ಬ್ರಿಟಿಷರು ಬಂಕರ್ ಹಿಲ್ನಲ್ಲಿ ಬಂಧಿಸಿದ ಅನೇಕ ಕೈದಿಗಳನ್ನು ನೇಣಿಗೇರಿಸುವಂತೆ ನಿರ್ಣಯಿಸಲಾಯಿತು. ಆದರೆ ಬ್ರಿಟಿಷ್ ಅಧಿಕಾರಿಗಳು ರಾಜದ್ರೋಹದ ವಿಚಾರಣೆ ಮತ್ತು ಮರಣದಂಡನೆಯಂತಹ ಮುಂದಿನ ಕ್ರಮವನ್ನು ಕೈಗೊಳ್ಳಲು ನಿರಾಕರಿಸಿದರು. ಅಮೆರಿಕಾದ ನಿಯಂತ್ರಣದಲ್ಲಿ ವಿಶ್ವಾಸಘಾತುಕ ವಿಚಾರಣೆಯ (ಅಮೆರಿಕನ್ನರಿಂದ) ಅಪಾಯದಲ್ಲಿದ್ದ ಸಾವಿರಾರು ಒಕ್ಕೂಟದ ಬೆಂಬಲಿಗರಿದ್ದರು[clarification needed]. ಬ್ರಿಟಿಷರು ಈ ಒಕ್ಕೂಟದ ಬೆಂಬಲಿಗರನ್ನು ಬಳಸಿಕೊಂಡು ಅವರ ಹೆಚ್ಚಿನ ಸಮರತಂತ್ರಗಳನ್ನು ಬೆಳೆಸಿಕೊಂಡರು. 1777ರಲ್ಲಿ ಸ್ಯಾರಟೋಗದಲ್ಲಿ ಶರಣಾದ ನಂತರವೂ ಸಾವಿರಾರು ಬ್ರಿಟಿಷ್ ಕೈದಿಗಳು ಅಮೆರಿಕಾದ ಹಿಡಿತದಲ್ಲಿದ್ದರು. ಆದ್ದರಿಂದ ಯಾವುದೇ ಅಮೆರಿಕಾದ ಕೈದಿಗಳ ರಾಜದ್ರೋಹದ ವಿಚಾರಣೆಯನ್ನು ನಡೆಸಲಿಲ್ಲ. ಆದರೆ ಹೆಚ್ಚಿನವರನ್ನು ಕ್ರೂರವಾಗಿ ನಡೆಸಿಕೊಳ್ಳಲಾಯಿತು ಮತ್ತು ಹಲವಾರು ಮಂದಿ ಸಾವನ್ನಪ್ಪಿದರು. ಪ್ರತಿ ಅಮೆರಿಕಾದ ರಣರಂಗದಲ್ಲಿ ಮತ್ತು ನೌಕಾ ಯುದ್ಧದಲ್ಲಿ ಮರಣ ಹೊಂದಿದವರಿಗಿಂತ ಹೆಚ್ಚು ಸಾವುಗಳು ಇದರಿಂದ ಸಂಭವಿಸಿದವು.[೬೩][೬೪] ಅಂತಿಮವಾಗಿ ಸಂಸತ್ತಿನಿಂದ ಅವರು ರಾಜದ್ರೋಹಿಗಳಲ್ಲ ಯುದ್ಧದ ಕೈದಿಗಳೆಂಬುದಾಗಿ ಅಧಿಕೃತವಾಗಿ ಅಂಗೀಕರಿಸಲ್ಪಟ್ಟಿದರಿಂದ 1782ರಲ್ಲಿ ಅವರಿಗೆ ಸಮರನಿರತ ರಾಷ್ಟ್ರದ ಹಕ್ಕುಗಳನ್ನು ನೀಡಲಾಯಿತು. ಯುದ್ಧದ ಕೊನೆಯಲ್ಲಿ ಎರಡೂ ರಾಷ್ಟ್ರಗಳು ಅವರ ಬದುಕುಳಿದಿದ್ದ ಕೈದಿಗಳನ್ನು ಬಿಡುಗಡೆ ಮಾಡಿದವು.[೬೫]
ಹೊಸ ರಾಜ್ಯ ಸಂವಿಧಾನಗಳ ರಚನೆ
[ಬದಲಾಯಿಸಿ]ಬಂಕರ್ ಹಿಲ್‌ನ ಕದನದ ನಂತರ 1775ರ ಜೂನ್‌ನಲ್ಲಿ, ದೇಶಪ್ರೇಮಿಗಳು ಹೆಚ್ಚಿನ ಪ್ರದೇಶಗಳ ಮತ್ತು ಜನರ ನಿಯಂತ್ರಣವನ್ನು ಹೊಂದಿದ್ದರು; ಒಕ್ಕೂಟದ ಬೆಂಬಲಿಗರು ದುರ್ಬಲರಾಗಿದ್ದರು.[dubious ] ಎಲ್ಲಾ ಹದಿಮೂರು ವಸಾಹತುಗಳಲ್ಲಿ ದೇಶಪ್ರೇಮಿಗಳು ಅಸ್ತಿತ್ವದಲ್ಲಿದ್ದ ಸರಕಾರಗಳನ್ನು ಉರುಳಿಸಿದರು, ನ್ಯಾಯಾಲಯಗಳನ್ನು ಮುಚ್ಚಿದರು ಹಾಗೂ ಬ್ರಿಟಿಷ್ ಗವರ್ನರುಗಳನ್ನು, ಪ್ರತಿನಿಧಿಗಳನ್ನು ಮತ್ತು ಬೆಂಬಲಿಗರನ್ನು ಅವರ ನೆಲದಿಂದ ಓಡಿಸಿದರು. ಯಾವುದೇ ಕಾನೂನು ಸಮ್ಮತ ಚೌಕಟ್ಟಿನಿಂದ ಹೊರಗಿದ್ದ ಒಡಂಬಡಿಕೆಗಳನ್ನು ಮತ್ತು "ಶಾಸಕಾಂಗಗಳನ್ನು" ಆರಿಸಿದರು; ರಾಜಪ್ರಭುತ್ವದ ವಿಶೇಷ ಸವಲತ್ತುಗಳನ್ನು ರದ್ದುಗೊಳಿಸಲು ಪ್ರತಿ ರಾಜ್ಯದಲ್ಲಿ ಹೊಸ ಸಂವಿಧಾನಗಳನ್ನು ಬಳಸಿದರು. ಅವು ಈಗ ರಾಜ್ಯಗಳು ವಸಾಹತುಗಳಲ್ಲ ಎಂಬುದಾಗಿ ಘೋಷಿಸಿದರು.[೬೬] 1776ರ ಜನವರಿ 5ರಲ್ಲಿ, ನ್ಯೂ ಹ್ಯಾಂಪ್ಶಿರ್ ಸ್ವಾತಂತ್ರ್ಯಾ ಘೋಷಣೆಗೆ ಸಹಿ ಹಾಕುವ ಆರು ತಿಂಗಳ ಮೊದಲು ಮೊದಲ ರಾಜ್ಯ ಸಂವಿಧಾನವನ್ನು ಅನುಮೋದಿಸಿತು. 1776ರ ಮೇಯಲ್ಲಿ, ಕಾಂಗ್ರೆಸ್ ಎಲ್ಲಾ ರೀತಿಯ ರಾಜನ ಅಧಿಕಾರವನ್ನು ನಿಗ್ರಹಿಸಿ, ಬದಲಿಗೆ ದೇಶೀಯ ಅಧಿಕಾರವನ್ನು ಸ್ಥಾಪಿಸಲು ನಿರ್ಧರಿಸಿತು. ವರ್ಜಿನಿಯಾ, ದಕ್ಷಿಣ ಕ್ಯಾರೊಲಿನ ಮತ್ತು ನ್ಯೂ ಜೆರ್ಸಿ ಮೊದಲಾದುವು ಅವುಗಳ ಸಂವಿಧಾನಗಳನ್ನು ಜುಲೈ 4ರಲ್ಲಿ ರಚಿಸಿದವು. ರೋಡೆ ಐಲ್ಯಾಂಡ್ ಮತ್ತು ಕನೆಕ್ಟಿಕಟ್ ಅಸ್ತಿತ್ವದಲ್ಲಿದ್ದ ರಾಜಪ್ರಭುತ್ವದ ವಿಶೇಷ ಸವಲತ್ತುಗಳನ್ನು ತೆಗೆದುಹಾಕಿತು ಹಾಗೂ ರಾಜನ ಎಲ್ಲಾ ಆಕರಗಳನ್ನು ಅಳಿಸಿಹಾಕಿತು.[೬೭] ಹೊಸ ರಾಜ್ಯಗಳು ಯಾವ ರೀತಿಯ ಸರಕಾರವನ್ನು ರಚಿಸಬೇಕೆಂಬುದನ್ನು ನಿರ್ಧರಿಸುವುದು ಮಾತ್ರವಲ್ಲದೆ, ಮೊದಲು ಸಂವಿಧಾನವನ್ನು ಕುಶಲತೆಯಿಂದ ತಯಾರಿಸುವವರನ್ನು ಹೇಗೆ ಆರಿಸುವುದು ಮತ್ತು ರಚಿತವಾದ ದಾಖಲೆಯನ್ನು ಹೇಗೆ ಅನುಮೋದಿಸುವುದು ಎಂಬುದನ್ನು ನಿರ್ಣಯಿಸಬೇಕಾಗಿತ್ತು. ಮೇರಿಲ್ಯಾಂಡ್, ವರ್ಜಿನಿಯಾ, ದೆಲಾವರೆ, ನ್ಯೂಯಾರ್ಕ್ ಮತ್ತು ಮಸ್ಸಾಚ್ಯುಸೆಟ್ಸ್ ಮೊದಲಾದ ರಾಜ್ಯಗಳಲ್ಲಿ ದೃಢವಾದ ಶ್ರೀಮಂತ ಸಂವಿಧಾನಗಳನ್ನು ರಚಿಸಲಾಯಿತು, ಇವು ಈ ಕೆಳಗಿನ ವೈಶಿಷ್ಟ್ಯತೆಗಳನ್ನು ಹೊಂದಿವೆ:
- ಮತದಾನಕ್ಕೆ ದೃಢವಾದ ಸ್ವತ್ತು-ಯೋಗ್ಯತೆ ಮತ್ತು ಚುನಾಯಿತ ಸ್ಥಾನಗಳಿಗೆ ಹೆಚ್ಚು ದೃಢವಾದ ಅವಶ್ಯಕತೆಗಳು (ಆದರೆ ನ್ಯೂಯಾರ್ಕ್ ಮತ್ತು ಮೇರಿಲ್ಯಾಂಡ್ ಸ್ವತ್ತು-ಯೋಗ್ಯತೆಯನ್ನು ಕಡಿಮೆಮಾಡಿದವು);[೬೬]
- ಕೆಳಮನೆಯ ಪರೀಶಿಲನೆಗಾಗಿ ಮೇಲಿನ ಮನೆಯೊಂದಿಗೆ, ಉಭಯ ಸದನಗಳ ಶಾಸಕಾಂಗಗಳು;
- ಶಾಸಕಾಂಗ ಮತ್ತು ದೃಢವಾದ ಆಯ್ಕೆಯ ಅಧಿಕಾರದ ಮೇಲೆ ಪ್ರಬಲ ನಿರಾಕರಣಾಧಿಕಾರವನ್ನು ಹೊಂದಿರುವ ಗವರ್ನರುಗಳು;
- ಸರಕಾರದಲ್ಲಿ ಹಲವು ಹುದ್ದೆಗಳನ್ನು ಹೊಂದಿರುವವರಿಗೆ ಸ್ವಲ್ಪ ಮಟ್ಟಿನ ಅಥವಾ ಯಾವುದೇ ನಿರೋಧವಿಲ್ಲದಿರುವುದು;
- ರಾಜ್ಯ-ಸ್ಥಾಪಿಸಿದ ಧರ್ಮದ ಮುಂದುವರಿಕೆ.
ಕಡಿಮೆ ಶ್ರೀಮಂತಿಕೆಯು ಸಾಕಷ್ಟು ಪರಿಣಾಮಕಾರಿ ಅಧಿಕಾರದೊಂದಿಗೆ ಆಯೋಜಿಸಿದ ರಾಜ್ಯಗಳಲ್ಲಿ ವಿಶೇಷವಾಗಿ ಪೆನ್ಸಿಲ್ವೇನಿಯಾ, ನ್ಯೂಜೆರ್ಸಿ ಮತ್ತು ನ್ಯೂ ಹ್ಯಾಂಪ್ಶಿರ್‌ನಲ್ಲಿ ಸಂವಿಧಾನವು ಈ ಕೆಳಗಿನವುಗಳನ್ನು ಒಳಗೊಂಡಿದೆ -
- ಸಾರ್ವತ್ರಿಕ ಬಿಳಿಯ ಪ್ರಾಪ್ತ ವಯಸ್ಕ ಮತದಾನದ ಹಕ್ಕು ಅಥವಾ ಮತದಾನಕ್ಕೆ ಅಥವಾ ಸ್ಥಾನವನ್ನು ಹೊಂದಲು ಕನಿಷ್ಠ ಸ್ವತ್ತು ಅವಶ್ಯಕತೆಗಳು (ನ್ಯೂಜೆರ್ಸಿಯು ಸ್ವತ್ತನ್ನು ಹೊಂದಿದ್ದ ಕೆಲವು ವಿಧವೆಯರಿಗೆ ಮತದಾನದ ಹಕ್ಕನ್ನು ನೀಡಿತು, ಇದು 25 ವರ್ಷಗಳ ನಂತರ ಹಿಂತೆಗೆದುಕೊಳ್ಳಲ್ಪಟ್ಟಿತು);
- ಪ್ರಬಲ ಉಭಯಸದನಗಳ ಶಾಸಕಾಂಗಗಳು;
- ನಿರಾಕರಣಾಧಿಕಾರವನ್ನು ಮತ್ತು ಆರಿಸುವ ಅಧಿಕಾರವನ್ನು ಹೊಂದಿರದ, ದುರ್ಬಲ ಗವರ್ನರುಗಳು;
- ಹಲವು ಸರಕಾರಿ ಹುದ್ದೆಗಳನ್ನು ಹೊಂದುವುದರ ನಿಷೇಧಿಸುವಿಕೆ;
ರಾಜ್ಯದಲ್ಲಿ ಸಂಪ್ರದಾಯವಾದಿಗಳು ಅಥವಾ ತೀವ್ರಗಾಮಿಗಳು ಪ್ರಭುತ್ವ ನಡೆಸುತ್ತಿದ್ದರೂ, ಕಡಿಮೆ ಪ್ರಾಬಲ್ಯದ ಪಕ್ಷವು ಗೋಪ್ಯವಾಗಿ ಫಲಿತಾಂಶವನ್ನು ಪಡೆಯುತ್ತದೆ ಎಂಬುವಂತಿಲ್ಲ. ಪೆನ್ಸಿಲ್ವೇನಿಯಾ ಸಂವಿಧಾನದ ತೀವ್ರಗಾಮಿ ನಿಬಂಧನೆಗಳು ಕೇವಲ ಹದಿನಾಲ್ಕು ವರ್ಷಗಳ ಕಾಲ ಮಾತ್ರ ಅಸ್ತಿತ್ವದಲ್ಲಿತ್ತು. 1790ರಲ್ಲಿ ಸಂಪ್ರದಾಯವಾದಿಗಳು ಹೊಸ ಸಂವಿಧಾನಾತ್ಮಕ ಒಡಂಬಡಿಕೆ ಎನ್ನುವ ರಾಜ್ಯ ಶಾಸಕಾಂಗದಲ್ಲಿ ಅಧಿಕಾರವನ್ನು ಪಡೆದರು ಹಾಗೂ ಸಂವಿಧಾನವನ್ನು ಪುನಃಬರೆದರು. ಹೊಸ ಸಂವಿಧಾನವು ಸಾರ್ವತ್ರಿಕ ಬಿಳಿಯ ಪ್ರಾಪ್ತ ವಯಸ್ಕ ಮತದಾನದ ಹಕ್ಕನ್ನು ಮೂಲಭೂತವಾಗಿ ಕಡಿಮೆ ಮಾಡಿತು, ಗವರ್ನರ್‌ಗೆ ನಿರಾಕರಣಾಧಿಕಾರ ಮತ್ತು ಆಯ್ಕೆಯ ಅಧಿಕಾರವನ್ನು ನೀಡಿತು ಹಾಗೂ ಉಭಯ ಸದನಗಳಿಗೆ ದೃಢವಾದ ಸ್ವತ್ತು-ಅರ್ಹತೆಯೊಂದಿಗೆ ಮೇಲ್ಮನೆಯನ್ನು ಸೇರಿಸಿತು. ಥೋಮಸ್ ಪೈನೆಯು ಇದನ್ನು ಅಮೆರಿಕಾದ ಸಂವಿಧಾನವು ತಿರಸ್ಕಾರಾರ್ಹವಾದುದೆಂದು ಹೇಳಿದನು.[೬೮]
ಸ್ವಾತಂತ್ರ್ಯ ಮತ್ತು ಸೇರಿಕೆ
[ಬದಲಾಯಿಸಿ]1776ರ ಜನವರಿ 10ರಲ್ಲಿ, ಥೋಮಸ್ ಪೈನೆಯು ಕಾಮನ್ ಸೆನ್ಸ್ ಎಂಬ ಶೀರ್ಷಿಕೆಯ ಕರಪತ್ರವನ್ನು ಪ್ರಕಟಿಸಿ, ಬ್ರಿಟನ್ ಒಂದಿಗಿನ ಸಮಸ್ಯೆಗೆ ಪ್ರಜಾಪ್ರಭುತ್ವ-ವಾದ ಮತ್ತು ಸ್ವಾತಂತ್ರ್ಯವೊಂದೇ ಪರಿಹಾರವೆಂದು ವಾದಿಸಿದನು.[೬೯] ಯುದ್ಧದ ನಂತರದ ತಿಂಗಳಲ್ಲಿ, ಒಂದುಗೂಡಿದ ರಾಜ್ಯಗಳು ಅಮೆರಿಕ ಸಂಯುಕ್ತ ಸಂಸ್ಥಾನದ ಹೆಸರಿನಲ್ಲಿ ಒಂದೇ ಸ್ಥಾಯಿಯಲ್ಲಿ ಸ್ವಾತಂತ್ರ್ಯವನ್ನು ಘೋಷಿಸುವ ಮೊದಲು, ವಸಾಹತುಗಳು ಸರ್ವತಂತ್ರ ಸ್ವತಂತ್ರ ರಾಜ್ಯಗಳನ್ನು ರೂಪಿಸಲು ಅವುಗಳ ಸ್ವಂತ ಸಂವಿಧಾನಗಳನ್ನು ರಚಿಸುವ ಕ್ರಿಯೆಯನ್ನು ಆರಂಭಿಸಿದವು ಹಾಗೂ ಕೆಲವು ಪ್ರತ್ಯೇಕವಾಗಿ ಸ್ವಾತಂತ್ರ್ಯವನ್ನು ಘೋಷಿಸಲು ನಿರ್ಧರಿಸಿದವು. ಉದಾಹರಣೆಗಾಗಿ, ವರ್ಜಿನಿಯಾ ಗ್ರೇಟ್ ಬ್ರಿಟನ್‌ನಿಂದ ಅದರ ಸ್ವಾತಂತ್ರ್ಯವನ್ನು 1776ರ ಮೆ 15ರಂದು ಘೋಷಿಸಿತು. ಯುದ್ಧವು 1775ರ ಎಪ್ರಿಲ್‌ನಿಂದ ಆರಂಭವಾಗಿ ಮುಂದುವರಿಯಿತು ಹಾಗೂ ಅಲ್ಲಿಯವರೆಗೆ ರಾಜ್ಯಗಳು ಶಾಂತಿಯುತ ಅವಧಿಗಾಗಿ ಅನ್ವೇಷಿಸಿದವು; ತಡವಾದ ಬ್ರಿಟಿಷ್ ಪ್ರಯತ್ನಗಳು ರಾಜಕೀಯ ಪರಿಹಾರಕ್ಕಾಗಿ ಬಂದರೂ ಸಂಧಾನವು ಸಾಧ್ಯವಾಗಿರಲಿಲ್ಲ.[೭೦] 1776ರ ಜೂನ್ 11ರಂದು ಎರಡನೇ ಭೂಖಂಡೀಯ ಕಾಂಗ್ರೆಸ್ ಸ್ವಾತಂತ್ರ್ಯಾ ಘೋಷಣೆಯ ಕರಡು ರಚಿಸಲು ಕಮಿಟಿಯೊಂದನ್ನು ನೇಮಿಸಿತು. ಜಾನ್ ಆಡಮ್ಸ್ ಮತ್ತು ಬೆಂಜಮಿನ್ ಫ್ರ್ಯಾಂಕ್ಲಿನ್ ಒಂದಿಗೆ ಥೋಮಸ್ ಜೆಫ್ಫೆರ್ಸನ್ ಕರಡನ್ನು ಜೂನ್ 8ರಂದು ಕಾಂಗ್ರೆಸ್‌ಗೆ ಮಂಡಿಸಿದನು. 1776ರ ಜುಲೈ 2ರಂದು ಕಾಂಗ್ರೆಸ್ ಅಮೆರಿಕ ಸಂಯುಕ್ತ ಸಂಸ್ಥಾನದ ಸ್ವಾತಂತ್ರ್ಯವನ್ನು ಅನುಮೋದಿಸಿತು; ಎರಡು ದಿನಗಳ ನಂತರ ಜುಲೈ 4ರಂದು ಇದು ಸ್ವಾತಂತ್ರ್ಯಾ ಘೋಷಣೆಯನ್ನು ಅಂಗೀಕರಿಸಿತು. ಈ ದಿನವನ್ನು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸ್ವಾತಂತ್ರ್ಯಾ ದಿನವೆಂದು ಆಚರಿಸಲಾಗುತ್ತದೆ. 1776ರ ಜೂನ್ 12ರಂದು ಎರಡನೇ ಭೂಖಂಡೀಯ ಕಾಂಗ್ರೆಸ್, ಆಡಳಿತ ನಡೆಸುವ ಸಂವಿಧಾನದ ಮತ್ತು ರಾಜ್ಯಗಳ ಶಾಶ್ವತ ಒಕ್ಕೂಟದ ಮೇಲೆ ಒಪ್ಪಂದದ ಕರಡನ್ನು ರಚಿಸಲು ಹದಿಮೂರು ಮಂದಿಯ ಕಮಿಟಿಯನ್ನು ನೇಮಿಸಿತು. ಸಾಮಾನ್ಯವಾಗಿ ಆರ್ಟಿಕಲ್ಸ್ ಆಫ್ ಕಾನ್ಫೆಡರೇಶನ್ ಅಥವಾ ಕೇವಲ ಆರ್ಟಿಕಲ್ಸ್ ಎಂದು ಕರೆಯಲ್ಪಡುವ ಆರ್ಟಿಕಲ್ಸ್ ಆಫ್ ಕಾನ್ಫೆಡರೇಶನ್ ಆಂಡ್ ಪರ್ಪೆಚ್ವಲ್ ಯೂನಿಯನ್, ಶಾಶ್ವತ ಮೈತ್ರಿ-ಪ್ರಕಾರದ ಸರಕಾರದ ಆಧಾರದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಮೊದಲ ಆಡಳಿತ ನಡೆಸುವ ದಾಖಲೆಯನ್ನು ರೂಪಿಸಿತು. ಈ ಅನುಚ್ಛೇದಗಳು ಸರ್ವತಂತ್ರ ಸ್ವತಂತ್ರವಾದ ರಾಜ್ಯಗಳನ್ನು ಶಾಶ್ವತ ಒಕ್ಕೂಟದೊಂದಿಗೆ ಒಟ್ಟುಸೇರಿಸಿದವು. ಎರಡನೇ ಭೂಖಂಡೀಯ ಕಾಂಗ್ರೆಸ್ ಈ ಅನುಚ್ಛೇದಗಳನ್ನು ರಾಜ್ಯಗಳಿಂದ ಅಂಗೀಕರಿಸಲು 1777ರ ನವೆಂಬರ್ 15ರಂದು ಅನುಮೋದಿಸಿತು ಹಾಗೂ ಅವುಗಳ ನಿಯಮದಡಿಯಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿತು. ಈ ಅನುಚ್ಛೇದಗಳು ಮೇರಿಲ್ಯಾಂಡ್‌ನ ಪ್ರತಿನಿಧಿಗಳು ಕೊನೆಗೆ 1781ರ ಮಾರ್ಚ್ 1ರಂದು ದಾಖಲೆಯ ಮೇಲಿ ಸಹಿಹಾಕಿದಾಗ ವಿಧ್ಯುಕ್ತವಾಗಿ ಅನುಮೋದಿಸಲ್ಪಟ್ಟವು. ಆ ಸಂದರ್ಭದಲ್ಲಿ ಭೂಖಂಡೀಯ ಕಾಂಗ್ರೆಸ್ ವಿಸರ್ಜಿಸಲ್ಪಟ್ಟಿತು. ಮರುದಿನ ಕಾಂಗ್ರೆಸ್ ಒಂದುಗೂಡಿದ ಅಮೆರಿಕ ಸಂಯುಕ್ತ ಸಂಸ್ಥಾನದ ಹೊಸ ಸರಕಾರವು ಸ್ಯಾಮ್ಯುಯೆಲ್ ಹಂಟಿಂಗ್ಟನ್ನನ್ನು ಅಧ್ಯಕ್ಷನಾಗಿ ಹೊಂದುವುದರೊಂದಿಗೆ ಅದರ ಸ್ಥಾನವನ್ನು ಪಡೆದುಕೊಂಡಿತು.[೭೧][೭೨]
ಕ್ರಾಂತಿಯ ಸಮರ್ಥನೆ
[ಬದಲಾಯಿಸಿ]ಬ್ರಿಟಿಷ್ ಹಿಂದಿರುಗುವಿಕೆ: 1776–1777
[ಬದಲಾಯಿಸಿ]ವಾಷಿಂಗ್ಟನ್ ಬ್ರಿಟಿಷರನ್ನು ಬೋಸ್ಟನ್‌ನಿಂದ 1776ರ ವಸಂತಕಾಲದಲ್ಲಿ ಹೊಡೆದೋಡಿಸಿದ ನಂತರ, ಬ್ರಿಟಿಷ್ ಅಥವಾ ಒಕ್ಕೂಟದ ಬೆಂಬಲಿಗರು ಯಾವುದೇ ಪ್ರಮುಖ ಪ್ರದೇಶಗಳ ಅಧಿಕಾರವನ್ನು ಪಡೆಯಲಿಲ್ಲ. ಆದರೆ ಬ್ರಿಟಿಷರು ಅವರ ಉತ್ತಮ ನೌಕಾದಳದ ಆಧಾರದಲ್ಲಿ ನೋವ ಸ್ಕೋಟಿಯಾದ ಹ್ಯಾಲಿಫ್ಯಾಕ್ಸ್ನಲ್ಲಿ ಸೈನ್ಯವನ್ನು ಒಂದುಗೂಡಿಸಿದರು. ಅವರು 1776ರ ಜುಲೈನಲ್ಲಿ ಸೈನ್ಯದೊಂದಿಗೆ ಹಿಂದಿರುಗಿ, ನ್ಯೂಯಾರ್ಕ್‌ನಲ್ಲಿ ಉಳಿದುಕೊಂಡರು ಹಾಗೂ ಆಗಸ್ಟ್‌ನಲ್ಲಿ ವಾಷಿಂಗ್ಟನ್‌ನ ಭೂಖಂಡೀಯ ಸೇನೆಯನ್ನು ಈ ಕ್ರಾಂತಿ ಯುದ್ಧದಲ್ಲೇ ಅತಿ ದೊಡ್ಡ ಕಾಳಗವಾದ ಬ್ರೂಕ್ಲಿನ್ ಕದನದಲ್ಲಿ ಸೋಲಿಸಿದರು. ಯುದ್ಧವನ್ನು ಸಂಧಾನದ ಮೂಲಕ ಕೊನೆಗೊಳಿಸಲು ಬ್ರಿಟಿಷ್ ಕಾಂಗ್ರೆಸ್‌ನ ಪ್ರತಿನಿಧಿಗಳೊಂದಿಗೆ ಸಭೆಯನ್ನು ಕರೆಯಿತು ಹಾಗೂ [[ಜಾನ್ ಆಡಮ್ಸ್ ಮತ್ತು ಬೆಂಜಮಿನ್ ಫ್ರ್ಯಾಂಕ್ಲಿನ್‌ರನ್ನು ಒಳಗೊಂಡ ನಿಯೋಗವೊಂದು ಸೆಪ್ಟೆಂಬರ್ 11ರಂದು ಸ್ಟೇಟನ್ ಐಲ್ಯಾಂಡ್‌ನ ನ್ಯೂಯಾರ್ಕ್ ಬಂದರಿನಲ್ಲಿ ಹೋವೆಯನ್ನು ಭೇಟಿಯಾಯಿತು]]. ಹೋವೆಯು ಸ್ವಾತಂತ್ರ್ಯಾ ಘೋಷಣೆಯನ್ನು ಹಿಂತೆಗೆದುಕೊಳ್ಳುವಂತೆ ಆದೇಶಿಸಿದನು. ಆದರೆ ಇದು ನಿರಾಕರಿಸಲ್ಪಟ್ಟಿತು ಮತ್ತು ಮಾತುಕತೆಯು 1781ರವರೆಗೆ ಮುಂದುಯವರಿಯಿತು. ನಂತರ ಬ್ರಿಟಿಷರು ಅತಿ ಶೀಘ್ರದಲ್ಲಿ ನ್ಯೂಯಾರ್ಕ್ ನಗರವನ್ನು ವಶಪಡಿಸಿಕೊಂಡರು ಹಾಗೂ ಹೆಚ್ಚುಕಡಿಮೆ ವಾಷಿಂಗ್ಟನ್ಅನ್ನೂ ಸ್ವಾಧೀನಪಡಿಸಿಕೊಂಡರು. ಅವರು ನಗರವನ್ನು ಉತ್ತರ ಅಮೆರಿಕದಲ್ಲಿ ಅವರ ಚಟುವಟಿಕೆಗಳ ಪ್ರಮುಖ ರಾಜಕೀಯ ಮತ್ತು ಮಿಲಿಟರಿ ಆಧಾರವಾಗಿ ಮಾಡಿಕೊಂಡು, 1783ರ ನವೆಂಬರ್‌ವರೆಗೆ ಹಿಡಿತದಲ್ಲಿಟ್ಟುಕೊಂಡಿದ್ದರು. ಆ ತರುವಾಯ ನ್ಯೂಯಾರ್ಕ್ ನಗರವು ಒಕ್ಕೂಟದ ಬೆಂಬಲಿಗ ನಿರಾಶ್ರಿತರ ಆಶ್ರಯ ತಾಣವಾಯಿತು ಹಾಗೂ ವಾಷಿಂಗ್ಟನ್‌ನ ಸುದ್ದಿಸಂಗ್ರಹ-ಜಾಲದ ಕೇಂದ್ರ ಬಿಂದುವಾಯಿತು.[೭೩] ಬ್ರಿಟಿಷ್ ನ್ಯೂಜೆರ್ಸಿಯನ್ನೂ ವಶಕ್ಕೆ ತೆಗೆದುಕೊಂಡಿತು ಹಾಗೂ ಭೂಖಂಡೀಯ ಸೇನೆಯನ್ನು ಪೆನ್ಸಿಲ್ವೇನಿಯಾಕ್ಕೆ ಬಲತ್ಕಾರದಿಂದ ತಳ್ಳಿತು. ಆದರೆ ಒಂದು ಆಶ್ಚರ್ಯಕರ ದಾಳಿಯಲ್ಲಿ 1776ರ ಡಿಸೆಂಬರ್‌ನ ಉತ್ತರಾರ್ಧದಲ್ಲಿ ವಾಷಿಂಗ್ಟನ್ ದೆಲಾವರೆ ನದಿಯನ್ನು ನ್ಯೂಜೆರ್ಸಿಗೆ ಮರಳಿ ತಂದುಕೊಟ್ಟಿತು ಹಾಗೂ ಟ್ರೆಂಟನ್ ಮತ್ತು ಪ್ರಿಂಸೆಟನ್ನಲ್ಲಿ ಹೆಸ್ಸಿಯನ್ ಮತ್ತು ಬ್ರಿಟಿಷ್ ಸೇನೆಗಳನ್ನು ಸೋಲಿಸಿ ನ್ಯೂಜೆರ್ಸಿಯನ್ನು ಪುನಃಪಡೆಯಿತು. ಗೆಲವುಗಳು ಸ್ವಾತಂತ್ರ್ಯ ಬೆಂಬಲಿಗರಿಗೆ ಅವರ ಸ್ಥೈರ್ಯವು ಕಡಿಮೆಯಾಗುತ್ತಿದ್ದ ಸಂದರ್ಭದಲ್ಲಿ ವೃದ್ಧಿಯನ್ನು ನೀಡಿದವು ಹಾಗೂ ಯುದ್ಧದ ಸಾಂಪ್ರದಾಯಿಕ ಘಟನೆಗಳಾದವು. 1777ರಲ್ಲಿ ಯುದ್ಧವನ್ನು ಕೊನೆಗೊಳಿಸುವ ಪ್ರಮುಖ ಕಾರ್ಯವಿಧಾನವಾಗಿ, ಬ್ರಿಟಿಷ್ ಚಳುವಳಿಗಾರರ ಪ್ರಾಥಮಿಕ ಮೂಲವೆಂದು ಗ್ರಹಿಸಿದ ನ್ಯೂ ಇಂಗ್ಲೆಂಡ್‌ಅನ್ನು ವಶಪಡಿಸಿಕೊಳ್ಳಲು ಕೆನಡಾದಿಂದ ದಾಳಿಯ ಸೈನ್ಯವನ್ನು ಕಳುಹಿಸಿತು. ನ್ಯೂಯಾರ್ಕ್ ನಗರದಲ್ಲಿನ ಬ್ರಿಟಿಷ್ ಸೇನೆಯು ವಾಷಿಂಗ್ಟನ್‌ನಿಂದ ವಶಪಡಿಸಿಕೊಂಡ ಫಿಲಡೆಲ್ಫಿಯಾಕ್ಕೆ ಹೋಯಿತು. ಬರ್ಗಾಯ್ನೆಯ ನೇತೃತ್ವದ ದಾಳಿಯ ಸೇನೆಯು ನ್ಯೂಯಾರ್ಕ್‌ನಿಂದ ಬಲವರ್ಧನೆಗಾಗಿ ವ್ಯರ್ಥವಾಗಿ ನಿರೀಕ್ಷಿಸಿತು ಮತ್ತು ಉತ್ತರ ಭಾಗದಿಂದ ಸಿಕ್ಕಿಬಿದ್ದಿತು. ಇದು ನ್ಯೂಯಾರ್ಕ್‌ನ ಸ್ಯಾರಟೋಗ ಕದನದ ನಂತರ 1777ರ ಅಕ್ಟೋಬರ್‌ನಲ್ಲಿ ಶರಣಾಯಿತು. 1777ರ ಅಕ್ಟೋಬರ್‌ನ ಆರಂಭದಿಂದ ನವೆಂಬರ್ 15ರವರೆಗೆ ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದ ಫೋರ್ಟ್ ಮಿಫ್ಲಿನ್ನ ಮೇಲೆ ಮಾಡಿದ ಪ್ರಧಾನ ಮುತ್ತಿಗೆಯು ಬ್ರಿಟಿಷ್ ಸೈನ್ಯವನ್ನು ತಬ್ಬಿಬ್ಬುಗೊಳಿಸಿತು ಹಾಗೂ ವಾಷಿಂಗ್ಟನ್ ಅವನ ಸೈನಿಕರನ್ನು ಸುರಕ್ಷಿತವಾಗಿ ವ್ಯಾಲೆ ಫೋರ್ಜ್ನ ಚಳಿಗಾಲದ ಕ್ವಾರ್ಟರ್‌ಗಳಿಗೆ ಕಳುಹಿಸುವ ಮೂಲಕ ಭೂಖಂಡೀಯ ಸೇನೆಯನ್ನು ರಕ್ಷಿಸಲು ಅವಕಾಶ ಪಡೆದನು.
1778ರ ನಂತರದ ಅಮೆರಿಕಾದ ಸಂಬಂಧಗಳು
[ಬದಲಾಯಿಸಿ]ಬ್ರಿಟಿಷ್ ಸೇನೆಯು ಸ್ಯಾರಟೋಗದಲ್ಲಿ ಬಂಧಿಸಲ್ಪಟ್ಟಿದುದು, ಫ್ರೆಂಚ್ಅನ್ನು ಕಾಂಗ್ರೆಸ್ ಬೆಂಬಲವಾಗಿ ಯುದ್ಧದಲ್ಲಿ ಪ್ರವೇಶಿಸುವಂತೆ ಪ್ರೇರೇಪಿಸಿತು. ಬೆಂಜಮಿನ್ ಫ್ರ್ಯಾಂಕ್ಲಿನ್ 1778ರ ಆರಂಭದಲ್ಲಿ ಶಾಶ್ವತ ಮಿಲಿಟರಿಯೊಂದನ್ನು ಸಂಧಾನದ ಮೂಲಕ ಪಡೆದುದರಿಂದ, ಇದು ಸ್ವಾತಂತ್ರ್ಯಾ ಘೋಷಣೆಯನ್ನು ಅಧಿಕೃತವಾಗಿ ಮಾಡಿದ ಮೊದಲ ರಾಜ್ಯವಾಯಿತು. ವಿಲಿಯಂ ಪಿಟ್ ಸಂಸತ್ತಿನಲ್ಲಿ ಅಮೆರಿಕಾದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಬ್ರಿಟನ್‌ಅನ್ನು ಪ್ರೋತ್ಸಾಹಿಸಿ, ಫ್ರಾನ್ಸ್ ವಿರುದ್ಧ ಅಮೆರಿಕಾದೊಂದಿಗೆ ಒಂದುಗೂಡುವಂತೆ ಕೇಳಿಕೊಂಡನು.[೭೪] ಹಿಂದೆ ಸ್ವಾತಂತ್ರ್ಯವನ್ನು ಬೆಂಬಲಿಸಿದ ಇತರ ಬ್ರಿಟಿಷ್ ರಾಜಕಾರಣಿಗಳು ಬ್ರಿಟಿಷ್ ಅಂತರಾಷ್ಟ್ರೀಯ ಎದುರಾಳಿ ಮತ್ತು ಶತ್ರು ರಾಷ್ಟ್ರಗಳೊಂದಿಗೆ ಸಂಬಂಧ ಬೆಳೆಸುವುದಕ್ಕಾಗಿ ಅಮೆರಿಕಾದ ದಂಗೆಯ ವಿರುದ್ಧ ಸಿಡಿದು ಬಿದ್ದರು.[ಸೂಕ್ತ ಉಲ್ಲೇಖನ ಬೇಕು] ನಂತರ ಸ್ಪೇನ್ (1779ರಲ್ಲಿ) ಮತ್ತು ಡಚ್ (1780) ಫ್ರೆಂಚ್‌ನ ಮಿತ್ರರಾಷ್ಟ್ರಗಳಾದವು. ಜಾಗತಿಕ ಕದನದಲ್ಲಿ ಪ್ರಮುಖ ಮಿತ್ರರಾಷ್ಟ್ರಗಳಿಲ್ಲದೆ ಬ್ರಿಟಿಷ್ ಸಾಮ್ರಾಜ್ಯವು ಏಕಾಂಗಿಯಾಗಿ ಹೋರಾಡುವಂತೆ ಹಾಗೂ ಅಂಟ್ಲಾಂಟಿಕ್‌ನ ತಡೆಯ ಮೂಲಕ ಸಿಕ್ಕಿಸುವಂತೆ ಮಾಡಿದವು. ಆದ್ದರಿಂದ ಅಮೆರಿಕಾದ ಕಾರ್ಯಕ್ಷೇತ್ರವು ಬ್ರಿಟನ್‌ನ ಯುದ್ಧದಲ್ಲಿ ಕೇವಲ ಒಂದು ಭಾಗವಾಯಿತು ಮಾತ್ರ.[೭೫] ಹೆಚ್ಚು ಬೆಲೆಯುಳ್ಳದ್ದೆಂದು ಪರಿಗಣಿಸಲಾದ ಸಕ್ಕರೆ-ಉತ್ಪಾದಿಸುವ ಕ್ಯಾರಿಬೀನ್ ದ್ವೀಪಗಳನ್ನು ಬಲಪಡಿಸುವುದಕ್ಕಾಗಿ, ಭೂಖಂಡೀಯ ಅಮೆರಿಕದಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ಬ್ರಿಟಿಷರಿಗೆ ಬಲವಂತ ಪಡಿಸಲಾಯಿತು. ಫ್ರಾನ್ಸ್ ಒಂದಿಗಿನ ಸಂಬಂಧ ಮತ್ತು ಕೆಡುತ್ತಿದ್ದ ಮಿಲಿಟರಿ ಸ್ಥಿತಿಯಿಂದಾಗಿ, ಬ್ರಿಟಿಷ್ ಕಮಾಂಡರ್ ಸರ್ ಹೆನ್ರಿ ಕ್ಲಿಂಟನ್ ನ್ಯೂಯಾರ್ಕ್ ನಗರವನ್ನು ಬಲಪಡಿಸಲು ಫಿಲಡೆಲ್ಫಿಯಾವನ್ನು ತೆರವುಗೊಳಿಸಿದನು. ಜನರಲ್ ವಾಷಿಂಗ್ಟನ್ ಹಿಮ್ಮೆಟ್ಟುತ್ತಿದ್ದ ಸೈನ್ಯವನ್ನು ಪ್ರತಿಬಂಧಿಸಲು ಪ್ರಯತ್ನಿಸಿದನು. ಅದರ ಫಲವಾಗಿ ಮಾನ್ಮೌತ್ ಕೋರ್ಟ್ ಹೌಸ್ ಕದನವು ಸಂಭವಿಸಿತು, ಇದು ಉತ್ತರದಲ್ಲಿ ನಡೆದ ಕೊನೆಯ ಪ್ರಮುಖ ಯುದ್ಧವಾಗಿದೆ. ಅನಿರ್ಣಾಯಕ ಯುದ್ಧದ ನಂತರ, ಬ್ರಿಟಿಷ್ ಯಶಸ್ವಿಯಾಗಿ ನ್ಯೂಯಾರ್ಕ್ ನಗರವನ್ನು ಪುನರ್ವಶಪಡಿಸಿಕೊಂಡಿತು. ಹೆಚ್ಚಿನ ಗಮನವು ದಕ್ಷಿಣದ ಸಣ್ಣ ಕ್ಷೇತ್ರಕ್ಕೆ ಕೇಂದ್ರೀಕೃವಾದುದರಿಂದ, ಉತ್ತರದ ಕದನವು ಆನಂತರ ಬಿಕ್ಕಟ್ಟಿನ ಸ್ಥಿತಿಯನ್ನು ತಲುಪಿತು.[೭೫]
ಬ್ರಿಟಿಷರು ದಕ್ಷಿಣಕ್ಕೆ ಸರಿದರು, 1778–1783
[ಬದಲಾಯಿಸಿ]ಅಮೆರಿಕದಲ್ಲಿನ ಬ್ರಿಟಿಷರ ಕಾರ್ಯನೀತಿಯು ನಂತರ ದಕ್ಷಿಣದ ವಸಾಹತುಗಳ ಮೇಲೆ ಕೇಂದ್ರೀಕೃತವಾಯಿತು. ಕೆಲವು ವ್ಯವಸ್ಥಿತ ಸೈನಿಕರು ನಿಯಂತ್ರಣವನ್ನು ಪಡೆಯುವುದರೊಂದಿಗೆ ಬ್ರಿಟಿಷ್ ಕಮಾಂಡರುಗಳು ದಕ್ಷಿಣದ ಆಡಳಿತವು ಹೆಚ್ಚು ಕಾರ್ಯಾಸಾಧ್ಯವಾದ ಯೋಜನೆಯಾಗಿದೆ ಎಂಬುದನ್ನು ಕಂಡುಕೊಂಡರು. ದಕ್ಷಿಣ ಭಾಗವು ಅಧಿಕ ಪ್ರಮಾಣದಲ್ಲಿ ಒಕ್ಕೂಟದ ಬೆಂಬಲಿಗರನ್ನು ಹೊಂದಿತ್ತು, ಅಲ್ಲದೆ ಆಗತಾನೆ ವಲಸೆ ಹೂಡಿದ್ದವರು ಮತ್ತು ಆಫ್ರಿಕನ್-ಅಮೆರಿಕನ್ನರು ಹೆಚ್ಚಿನ ಸಂಖ್ಯೆಯಲ್ಲಿದ್ದರು.[೭೬] 1778ರ ಡಿಸೆಂಬರ್‌ನ ಉತ್ತರಾರ್ಧದಲ್ಲಿ, ಬ್ರಿಟಿಷ್ ಸ್ಯಾವನ್ನಾಹ್ಅನ್ನು ಸ್ವಾಧೀನಪಡಿಸಿಕೊಂಡು, ಕರಾವಳಿಯನ್ನು ವಶಪಡಿಸಿಕೊಂಡಿತು. 1780ರಲ್ಲಿ ಅವರು ಒಂದು ಹೊಸ ದಾಳಿಯನ್ನು ಮಾಡಿ, ಕಾರ್ಲೆಸ್ಟನ್ಅನ್ನೂ ವಶಕ್ಕೆ ತೆಗೆದುಕೊಂಡರು. ಕ್ಯಾಮ್ಡೆನ್ ಕದನದ ಗಮನಾರ್ಹ ಗೆಲವು ರಾಜಪ್ರಭುತ್ವದ ಸೈನ್ಯವು ಅತಿ ಶೀಘ್ರದಲ್ಲಿ ಜಾರ್ಜಿಯಾ ಮತ್ತು ದಕ್ಷಿಣ ಕ್ಯಾರೊಲಿನವನ್ನು ನಿಯಂತ್ರಿಸುವಂತೆ ಮಾಡಿತು. ಒಕ್ಕೂಟದ ಬೆಂಬಲಿಗರು ಒಂದುಗೂಡುತ್ತಾರೆ ಎಂಬ ನಿರೀಕ್ಷೆಯೊಂದಿಗೆ ಬ್ರಿಟಿಷರು ಒಳನಾಡಿನ ಕೋಟೆಗಳ ಜಾಲವನ್ನು ವ್ಯವಸ್ಥೆಗೊಳಿಸಿದರು. ಸಾಕಷ್ಟು ಒಕ್ಕೂಟದ ಬೆಂಬಲಿಗರು ಸೇರಿಕೊಂಡಿಲ್ಲದಿದ್ದುದರಿಂದ ಬ್ರಿಟಿಷರು ಉತ್ತರ ಕ್ಯಾರೊಲಿನ ಮತ್ತು ವರ್ಜಿನಿಯಾವನ್ನು ವಶಪಡಿಸಿಕೊಳ್ಳುವುದಕ್ಕಾಗಿ ದುರ್ಬಲ ಸೈನ್ಯದೊಂದಿಗೆ ಹೋರಾಡಬೇಕಿತ್ತು. ಅವರು ವಶಪಡಿಸಿಕೊಂಡಿದ್ದ ಹೆಚ್ಚಿನ ಪ್ರದೇಶಗಳನ್ನು ಒಕ್ಕೂಟದ ಬೆಂಬಲಿಗರ ಮತ್ತು ಅಮೆರಿಕಾದ ಸೈನ್ಯದ ಮಧ್ಯೆ ನಡೆದ ಅಸ್ತವ್ಯವ್ಯಸ್ತವಾದ ಗೆರಿಲ್ಲ ಯುದ್ಧದಲ್ಲಿ ಕಳೆದುಕೊಂಡರು. ಇದು ಬ್ರಿಟೀಷರು ಮೊದಲು ಗಳಿಸಿದ್ದ ಹೆಚ್ಚಿನ ಸಂಪತ್ತನ್ನು ಕಳೆದುಕೊಳ್ಳುವಂತೆ ಮಾಡಿತು.[೭೭]
ಯಾರ್ಕ್‌ಟೌವ್ನ್ 1781
[ಬದಲಾಯಿಸಿ]ದಕ್ಷಿಣದ ಬ್ರಿಟಿಷ್ ಸೇನೆಯು ವರ್ಜಿನಿಯಾದ ಯಾರ್ಕ್‌ಟೌವ್ನ್‌ಗೆ ಮುಂದುವರಿಯಿತು, ಅಲ್ಲಿ ಅವರನ್ನು ನ್ಯೂಯಾರ್ಕ್‌ಗೆ ಹಿಂದಕ್ಕೆ ಕರೆದುಕೊಂಡು ಹೋಗುವ ಬ್ರಿಟಿಷ್ ನೌಕಾಸೇನೆಯಿಂದ ಅಪಾಯಕ್ಕೆ ಒಳಗಾದರು.[೭೮] ಆ ನೌಕಾ ಸೇನೆಯು ಫ್ರೆಂಚ್ ನೌಕಾ ಪಡೆಯಿಂದ ಸೋಲಲ್ಪಟ್ಟಾಗ, ಅವರು ಯಾರ್ಕ್‌ಟೌವ್ನ್‌ನಲ್ಲಿ ಸಿಕ್ಕಿಬಿದ್ದರು.[೭೯] 1781ರ ಅಕ್ಟೋಬರ್‌ನಲ್ಲಿ ಫ್ರೆಂಚ್ ಮತ್ತು ಭೂಖಂಡೀಯ ಸೈನ್ಯಗಳಿಂದ ಜಂಟಿ ದಾಳಿಗೊಳಗಾದ ಬ್ರಿಟಿಷ್, ಜನರಲ್ ಕಾರ್ನ್‌ವಾಲೀಸ್‌ನ ಆದೇಶದಡಿಯಲ್ಲಿ ಶರಣಾಯಿತು. ಆದರೆ ಕಾರ್ನ್‌ವಾಲೀಸ್ ಅವನ ಸೋಲಿನಿಂದ ಹೆಚ್ಚು ದಿಗ್ಭ್ರಮೆಗೊಳಗಾಗಿ, ಅವನ ಶರಣಾಗತಿಗಾಗಿ ಎರಡನೇ ಆದೇಶವನ್ನು ಕಳುಹಿಸಿದನು.[೮೦] ಸೋಲಿನ ವಿಷಯವು ಅಮೆರಿಕಾದಲ್ಲಿ ಪ್ರಮುಖ ಆಕ್ರಮಣಕಾರಿ ಚಟುವಟಿಕೆಗಳನ್ನು ಕೊನೆಗೊಳಿಸಿತು. ಸಂಘರ್ಷದ ಬೆಂಬಲವು ಬ್ರಿಟನ್‌ನಲ್ಲಿ ಹೆಚ್ಚು ಪ್ರಬಲವಾಗಿರಲಿಲ್ಲ. ಹೆಚ್ಚಿನವರು ದಂಗೆಕೋರರ ಬಗ್ಗೆ ಸಹಾನುಭೂತಿ ತೋರಿಸಿದರು. ಆದರೆ ಇದು ಈಗ ಹೊಸರೂಪವನ್ನು ಪಡೆದುಕೊಂಡಿದೆ.[೮೧] ರಾಜ ಜಾರ್ಜ್ III ವೈಯಕ್ತಿಕವಾಗಿ ಹೋರಾಡಲು ಬಯಸಿದರೂ, ಅವನ ಬೆಂಬಲಿಗರು ಸಂಸತ್ತಿನ ಅಧಿಕಾರವನ್ನು ಕಳೆದುಕೊಂಡರು ಹಾಗೂ ಯಾವುದೇ ಇತರ ಪ್ರಮುಖ ದಾಳಿಗಳು ಅಮೆರಿಕಾದ ಕಾರ್ಯಕ್ಷೇತ್ರದಲ್ಲಿ ನಡೆಯಲಿಲ್ಲ.[೭೫] ಕ್ಯಾಪ್ಟನ್ ಜಾನ್ ಬ್ಯಾರಿ ಮತ್ತು USS ಅಲೈಯನ್ಸ್ ನ ಅವನ ನಾವಿಕ ತಂಡದಿಂದ 1783ರ ಮಾರ್ಚ್ 10ರಂದು ಕ್ಯಾಪೆ ಕ್ಯಾನವರಲ್ನ ಕರಾವಳಿಯಲ್ಲಿ ಅಂತಿಮ ನೌಕಾದಳದ ಯುದ್ಧವು ನಡೆಯಿತು. ಅವರು ಭೂಖಂಡೀಯ ಸೈನ್ಯದ ಸಂಬಳದಾರ-ಪಟ್ಟಿಯನ್ನು ಪಡೆಯಲು ಪ್ರಯತ್ನಿಸುತ್ತಿದ್ದ HMS ಸೈಬಿಲ್ ಮುಂದಾಳತ್ವದ ಮೂರು ಬ್ರಿಟಿಷರ ಯುದ್ಧನೌಕೆಗಳನ್ನು ಸೋಲಿಸಿದರು.
ಶಾಂತಿ ಒಪ್ಪಂದ
[ಬದಲಾಯಿಸಿ]'ಪ್ಯಾರಿಸ್ ಒಪ್ಪಂದ' ಎಂದು ಕರೆಯಲ್ಪಡುವ ಬ್ರಿಟನ್ ಒಂದಿಗಿನ ಒಪ್ಪಂದವು U.S.ಗೆ ಮಿಸ್ಸಿಸಿಪ್ಪಿ ನದಿಯ ಪೂರ್ವದ ಮತ್ತು ಗ್ರೇಟ್ ಲೇಕ್ಸ್‌ನ ದಕ್ಷಿಣದ ಎಲ್ಲಾ ಪ್ರದೇಶಗಳನ್ನು ನೀಡಿತು. ಇದು ಫ್ಲೋರಿಡಾವನ್ನು ಒಳಗೊಂಡಿರಲಿಲ್ಲ (1783ರ ಸೆಪ್ಟೆಂಬರ್ 3ರಂದು, ಬ್ರಿಟನ್ ಸ್ಪೇನ್ ಒಂದಿಗೆ ಒಂದು ಪ್ರತ್ಯೇಕ ಒಪ್ಪಂದವನ್ನು ಮಾಡಿಕೊಂಡಿತ್ತು. ಅದರಲ್ಲಿ ಬ್ರಿಟನ್ ಫ್ಲೋರಿಡಾವನ್ನು ಸ್ಪೇನ್‌ನ ವಶಕ್ಕೆ ಒಪ್ಪಿಸಿತ್ತು). ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಅಮೆರಿಕಾದ ಮೂಲನಿವಾಸಿಗಳು ಈ ಒಪ್ಪಂದಕ್ಕೆ ಸೇರಿರಲಿಲ್ಲ ಹಾಗೂ ಅವರು ಅಮೆರಿಕ ಸಂಯುಕ್ತ ಸಂಸ್ಥಾನದ ಸೈನ್ಯದಿಂದ ಸೋಲಿಸಲ್ಪಡುವವರೆಗೆ ಅದು ಗುರುತಿಸಲ್ಪಟ್ಟಿರಲಿಲ್ಲ. ಗಡಿಪ್ರದೇಶ ಮತ್ತು ಸಾಲಗಳಿಗೆ ಸಂಬಂಧಿಸಿದ ಸಮಸ್ಯೆಗಳು 1795ರ ಜೆ ಒಪ್ಪಂದದವರೆಗೆ ಬಗೆಹರಿದಿರಲಿಲ್ಲ.[೮೨]
ಬ್ರಿಟನ್ ಮೇಲಿನ ಪ್ರಭಾವ
[ಬದಲಾಯಿಸಿ]ಯುದ್ಧದ ಸೋಲು ಮತ್ತು 13 ವಸಾಹತುಗಳ ಕಳೆದುಕೊಳ್ಳುವಿಕೆಯು ಬ್ರಿಟಿಷ್ ವ್ಯವಸ್ಥೆಗೆ ಭಾರಿ ಆಘಾತವನ್ನುಂಟುಮಾಡಿತು. ಯುದ್ಧವು ಬ್ರಿಟನ್‌ನ ರಾಜ್ಯಾದಾಯದ-ಮಿಲಿಟರಿ ಸ್ಥಿತಿಯ ಮಿತಿಗಳನ್ನು ಬಹಿರಂಗಪಡಿಸಿತು, ಅದು ಪ್ರಬಲ ಶತ್ರುಗಳನ್ನು ಹೊಂದಿದ್ದು, ಯಾವುದೇ ಮಿತ್ರರಾಷ್ಟ್ರಗಳ ಬೆಂಬಲವಿಲ್ಲದೆ, ಅಟ್ಲಾಂಟಿಕ್ ಸಾಗರದಾಚೆಯ ಸಂವಹನ ವ್ಯವಸ್ಥೆಯನ್ನು ಅವಲಂಬಿಸಿದ್ದು ಹಾಗೂ 17ನೇ ಶತಮಾನ ನಂತರ ಮೊದಲ ಬಾರಿಗೆ ಪ್ರೊಟೆಸ್ಟೆಂಟ್ ಮತ್ತು ಕ್ಯಾಥೋಲಿಕ್ ವೈರಿಗಳನ್ನು ಎದುರಿಸಿತು. ಸೋಲು ವೈಷಮ್ಯವನ್ನು ಹೆಚ್ಚಿಸಿತು ಮತ್ತು ರಾಜನ ಮಂತ್ರಿಗಳ ರಾಜಕೀಯ ವೈರವನ್ನು ವರ್ಧಿಸಿತು. ಸಂಸತ್ತಿನೊಳಗಿನ ಪ್ರಾಥಮಿಕ ಹಿತಾಸಕ್ತಿಯು, ಮಹತ್ವಪೂರ್ಣ ರಾಜನ ಬಗೆಗಿನ ಭಯದಿಂದ ಪ್ರಾತನಿಧ್ಯದ ಸಮಸ್ಯೆ, ಸಂಸತ್ತಿನ ಪುನಃರಚನೆ ಮತ್ತು ಸರಕಾರದ ತೆಗೆದುಹಾಕುವಿಕೆ ಮೊದಲಾದವುಗಳಾಗಿ ಬದಲಾಯಿತು. ಸುಧಾರಕರು ವ್ಯಾಪಕವಾಗಿ ಸಾಂಸ್ಥಿಕ ನೀತಿಭೃಷ್ಟತೆಯೆಂದು ಕಂಡವುಗಳನ್ನು ನಾಶಮಾಡಲು ಪ್ರಯತ್ನಿಸಿದರು. ಅದರ ಪರಿಣಾಮವೇ ಪ್ರಬಲವಾದ ಬಿಕ್ಕಟ್ಟು, 1776-1783. 1783ರ ಯುದ್ಧವಿರಾಮವು ಫ್ರಾನ್ಸ್ಅನ್ನು ಆರ್ಥಿಕವಾಗಿ ನಿಸ್ಸಹಾಯಗೊಳಿಸಿತು ಹಾಗೂ ಬ್ರಿಟಿಷ್ ಆರ್ಥಿಕತೆಯು ಅಮೆರಿಕಾದ ವ್ಯಾಪಾರವನ್ನು ಹಿಂದಿರುಗಿಸಿದಕ್ಕಾಗಿ ಕೃತಜ್ಞತೆ ಸೂಚಿಸಿತು. ಬಿಕ್ಕಟ್ಟು 1784ರಲ್ಲಿ ಚಾರ್ಲ್ಸ್ ಜೇಮ್ಸ್ ಫಾಕ್ಸ್ನನ್ನು (ಫಾಕ್ಸ್-ನಾರ್ತ್ ಕೊಯಲಿಷನ್ನ ಮುಖಂಡ) ಜಾಣ್ಮೆಯಿಂದ ಸೋಲಿಸಿದುದಕ್ಕಾಗಿ ರಾಜನಿಗೆ ಅಭಿನಂದನೆ ಸಲ್ಲಿಸಿದ ನಂತರ ಕೊನೆಗೊಂಡಿತು ಹಾಗೂ ಹೊಸ ಪ್ರಧಾನಿ ವಿಲಿಯಂ ಪಿಟ್ನಿಂದ ಶುರವಾದ ವ್ಯವಸ್ಥೆಯಲ್ಲಿ ವಿಶ್ವಾಸವು ಮತ್ತೆಹುಟ್ಟಿಕೊಂಡಿತು. ಅಮೆರಿಕಾದ ವಸಾಹತುಗಳ ಕಳೆದುಕೊಳ್ಳುವಿಕೆಯು ಬ್ರಿಟನ್‌ಗೆ ಫ್ರೆಂಚ್ ಕ್ರಾಂತಿಯೊಂದಿಗೆ ಹೆಚ್ಚು ಏಕತೆ ಮತ್ತು ಉತ್ತಮ ಸಂಘಟನೆಯೊಂದಿಗೆ ವ್ಯವಹರಿಸುವಂತೆ ಮಾಡಿತು ಎಂದು ಇತಿಹಾಸಕಾರರು ತರ್ಕಿಸಿದ್ದಾರೆ.[೮೩][೮೪]
ತಕ್ಷಣದ ಪರಿಣಾಮ
[ಬದಲಾಯಿಸಿ]ಅರ್ಥವಿವರಣೆಗಳು
[ಬದಲಾಯಿಸಿ]ಕ್ರಾಂತಿಯ ಪರಿಣಾಮದ ಬಗೆಗಿನ ಅರ್ಥವಿವರಣೆಗಳು ವ್ಯತ್ಯಾಸಗೊಳ್ಳುತ್ತವೆ. ಸಮಕಾಲೀನ ಭಾಗಿಗಳು ಈ ಘಟನೆಗಳನ್ನು "ಕ್ರಾಂತಿ" ಎಂದು ಸೂಚಿಸಿದ್ದಾರೆ[೮೫]. ಆದರೆ ಒಂದು ವೀಕ್ಷಣೆಯು ಅಮೆರಿಕಾದ ಕ್ರಾಂತಿಯು "ಕ್ರಾಂತಿಕಾರಿ"ಯಾದುದಲ್ಲವೇ ಅಲ್ಲವೆಂದು ಹೇಳುತ್ತದೆ, ಇದು ವಸಾಹತಿನ ಸಮಾಜವನ್ನು ಕ್ರೂರವಾಗಿ ಪರಿವರ್ತಿಸಲಿಲ್ಲ, ಬದಲಿಗೆ ದೂರದ ಸರಕಾರವನ್ನು ಸ್ಥಳೀಯ ಸರಕಾರದಿಂದ ಬದಲಾಯಿಸಿತು ಎಂದು ಸಮರ್ಥಿಸಿದೆ.[೮೬] ಬರ್ನಾರ್ಡ್ ಬೈಲಿನ್, ಗೋರ್ಡನ್ ವುಡ್ ಮತ್ತು ಎಡ್ಮಂಡ್ ಮೋರ್ಗನ್ ಮೊದಲಾದ ಇತಿಹಾಸಕಾರರು ಪ್ರಾರಂಭಿಸಿದ ಇತ್ತೀಚಿನ ಪಂಡಿತಲಕ್ಷಣವು, ಅಮೆರಿಕಾದ ಕ್ರಾಂತಿಯು ಅನನ್ಯವಾದುದು ಹಾಗೂ ಭಾರಿ ಬದಲಾವಣೆಗಳನ್ನು ಉಂಟುಮಾಡಿದ ಮತ್ತು ಪ್ರಪಂಚದ ಸಂಬಂಧಗಳ ಮೇಲೆ ಪರಿಣಾಮಕಾರಿ ಪ್ರಭಾವವನ್ನು ಬೀರಿದ ತೀವ್ರ ಘಟನೆಯಾಗಿದೆ ಎಂಬ ಸಮಕಾಲೀನ ಭಾಗಿಗಳ ಅಭಿಪ್ರಾಯವನ್ನು ಸಮರ್ಥಿಸುತ್ತದೆ. ಇದು ಆ ಅವಧಿಯಲ್ಲಿ ಉದಾರ-ವಾದವನ್ನು ಹೇಗೆ ತಿಳಿಯಲಾಗಿತ್ತು ಎಂಬುದರಲ್ಲಿ ಮತ್ತು ಪ್ರಜಾಪ್ರಭುತ್ವ-ವಾದದಲ್ಲಿ ಪ್ರತಿಬಿಂಬಿತವಾಗಿರುವಂತೆ ದಾರ್ಶನಿಕ ಚಳವಳಿಯ ನಿಯಮಗಳ ನಂಬಿಕೆಯನ್ನು ಆಧರಿಸಿತ್ತು. ಇವು ಮೂಲಭೂತ ಹಕ್ಕುಗಳ ಮತ್ತು ಜನರಿಂದ ಆರಿಸಲ್ಪಟ್ಟ ಕಾನೂನು-ವ್ಯವಸ್ಥೆಯ ರಕ್ಷಣೆಯನ್ನು ಬೆಂಬಲಿಸಿದ ನಾಯಕರಿಂದ ಮತ್ತು ಸರಕಾರದಿಂದ ಕಂಡುಹಿಡಿಯಲ್ಪಟ್ಟವು.[೮೭] ಡೇನಿಯಲ್ ಬೂರ್ಸ್ಟಿನ್‌ನಂತಹ ಕೆಲವು ಇತಿಹಾಸಕಾರರು ಕ್ರಾಂತಿಯ ಪ್ರೇರಣೆಯನ್ನು ಮೂಲತಃ ಕಾನೂನುಸಮ್ಮತವಾದುದೆಂದು ಹೇಳಿದ್ದಾರೆ.[೮೮] ವಸಾಹತುಗಾರರ ಬ್ರಿಟಿಷ್ ಸಂವಿಧಾನದೊಂದಿಗಿನ ಅಂಟಿಕೊಂಡಿರುವಿಕೆ ಮತ್ತು ಬ್ರಿಟಿಷ್ ಸಂಸತ್ತಿನಿಂದ ಇಂಗ್ಲಿಷ್ ಹಕ್ಕುಗಳ ನಿರಂಕುಶ ಅಪರಹಣವಾಗುತ್ತಿದೆ ಎಂದು ಪರಿಗಣಿಸಿದವುಗಳು, ರಾಜ ಜಾರ್ಜ್ III ಗ್ರೇಟ್ ಬ್ರಿಟನ್ ಒಂದಿಗೆ ತೀವ್ರ ರಾಜಕೀಯ ಸಂಬಂಧ ಬೆಳೆಸುವಂತೆ ವಸಾಹತುಗಾರರನ್ನು ಒತ್ತಾಯಪಡಿಸುತ್ತಿದ್ದಾರೆ ಎಂಬ ಟೀಕೆಗಳಿಂದ ಅವನ ಪ್ರಜೆಗಳನ್ನು ರಕ್ಷಿಸಲು ವಿಫಲನಾದುದಕ್ಕೆ ಸಂಬಂಧಿಸಿವೆ.[೮೮]
ಒಕ್ಕೂಟದ ಬೆಂಬಲಿಗರ ದೂರಹೋಗುವಿಕೆ
[ಬದಲಾಯಿಸಿ]ಅಮೆರಿಕ ಸಂಯುಕ್ತ ಸಂಸ್ಥಾನದ ಐದು ಪ್ರತಿಶತದಷ್ಟು ನಿವಾಸಿಗರ ಸೋಲಿಗೆ ಕಾರಣ ಅವರ ದೂರಹೋಗುವಿಕೆ. ಸರಿಸುಮಾರು 62,000ರಷ್ಟು ಸಂಯುಕ್ತ ಸಾಮ್ರಾಜ್ಯದ ಬೆಂಬಲಿಗರು ಹೊಸತಾಗಿ ರಚನೆಯಾದ ಪ್ರಜಾಪ್ರಭುತ್ವವನ್ನು ಬಿಟ್ಟು, ಕ್ವೆಬೆಕ್ ಪ್ರಾಂತ ({0ಈಸ್ಟರ್ನ್ ಟೌವ್ನ್‌ಶಿಪ್{/0}ನಲ್ಲಿರುವ), ಪ್ರಿನ್ಸ್ ಎಡ್ವರ್ಡ್ ದ್ವೀಪ ಮತ್ತು ನೋವ ಸ್ಕೋಟಿಯಾದಂತಹ ಉತ್ತರ ಅಮೆರಿಕಾದ ಉಳಿದ ಬ್ರಿಟಿಷ್ ವಸಾಹತುಗಳಲ್ಲಿ ವಾಸಿಸಿದರು. ಕೆನಡಾದ ಒಳನಾಡಿನ (ಈಗ ಒಂಟಾರಿಯೊ) ಮತ್ತು ನ್ಯೂ ಬರ್ನ್ಸ್‌ವಿಕ್ನ ಹೊಸ ವಸಾಹತುಗಳನ್ನು ಬ್ರಿಟನ್ ಅವರ ಪ್ರಯೋಜನಕ್ಕಾಗಿ ನಿರ್ಮಿಸಿತು.[೮೯]
ಮಾದರಿಯಾಗಿ ಅಥವಾ ಪ್ರೇರಣೆಯಾಗಿ
[ಬದಲಾಯಿಸಿ]ಕ್ರಾಂತಿಯ ನಂತರ, ಪ್ರಾಮಾಣಿಕವಾದ ಪ್ರಜಾಪ್ರಭುತ್ವದ ನೀತಿಗಳು ಅಸ್ತಿತ್ವಕ್ಕೆ ಬಂದವು.[೯೦] ಜನರ ಹಕ್ಕುಗಳು ರಾಜ್ಯ ಸಂವಿಧಾನಗಳಾಗಿ ಒಟ್ಟುಗೂಡಿದವು. ಆದ್ದರಿಂದ ಪ್ರಜಾಪ್ರಭುತ್ವ-ವಾದದ ಪ್ರಮುಖ ಮೌಲ್ಯಗಳನ್ನು ಅಮೆರಿಕನ್ನರಿಗೆ ತಿಳಿಸಿಕೊಡುವ ವ್ಯಾಪಕವಾದ ಸ್ವಾತಂತ್ರ್ಯದ ಸಮರ್ಥನೆ, ವೈಯಕ್ತಿಕ ಹಕ್ಕುಗಳು, ಸಮಾನತೆ ಮತ್ತು ನೀತಿಭೃಷ್ಟತೆಯ ವಿರೋಧ ಮೊದಲಾದವು ಬಳಕೆಗೆ ಬಂದವು. ಯುರೋಪ್‌ನ ಹಳೆಯ ಕ್ರಮದಲ್ಲಿದ್ದ ಪ್ರಮುಖ ಸಮಸ್ಯೆಯೆಂದರೆ ರಾಜಕೀಯ ಅಧಿಕಾರವನ್ನು ವಂಶಾನುಕ್ರಮವಾಗಿ ಮುಂದುವರಿಸುವ ತೊಂದರೆ ಮತ್ತು ಆಡಳಿತದ ಅನುಮೋದನೆಯನ್ನು ಆಧರಿಸಿದ ಸರಕಾರದ ಪ್ರಜಾಪ್ರಭುತ್ವದ ಚಿಂತನೆ. ಯುರೋಪ್ ಸಾಮ್ರಾಜ್ಯದ ವಿರುದ್ಧದ ಮೊದಲ ಯಶಸ್ವಿ ಕ್ರಾಂತಿ ಮತ್ತು ಪ್ರಜಾತಂತ್ರದ ರೀತಿಯ ಪ್ರಜಾಪ್ರಭುತ್ವಕ್ಕನುಗುಣವಾಗಿ ಚುನಾಯಿತ ಸರಕಾರದ ಮೊದಲ ಯಶಸ್ವಿ ಸಂಘಟನೆಯು, ಅನೇಕ ಇತರ ವಸಾಹತುಗಾರರಿಗೆ , ನೇರವಾಗಿ ಆರಿಸಿದ ಪ್ರತಿನಿಧಿ ಸರಕಾರದೊಂದಿಗೆ ಸ್ವ-ಆಡಳಿತದ ರಾಷ್ಟ್ರವನ್ನು ನಿರ್ಮಿಸಬಹುದೆಂದು ಕಂಡುಕೊಳ್ಳಲು ಮಾದರಿಯನ್ನು ಒದಗಿಸಿತು.[೯೧] 1777ರಲ್ಲಿ, ಮೊರೋಕೊ ಅಮೆರಿಕ ಸಂಯುಕ್ತ ಸಂಸ್ಥಾನದ ಸ್ವಾತಂತ್ರ್ಯವನ್ನು ಅಂಗೀಕರಿಸಿದ ಮೊದಲ ರಾಜ್ಯವಾಗಿದೆ. ಎರಡು ರಾಜ್ಯಗಳು ಹತ್ತು ವರ್ಷಗಳ ನಂತರ ಮೊರೊಕೊ-ಅಮೆರಿಕ ಸ್ನೇಹದ ಒಪ್ಪಂದಕ್ಕೆ ಸಹಿಹಾಕಿದವು. ಡಚ್ ರಿಪಬ್ಲಿಕ್ನ ಏಳು ಸಂಯುಕ್ತ ಪ್ರಾಂತಗಳಲ್ಲಿ ಒಂದಾದ ಫ್ರೀಸ್‌ಲ್ಯಾಂಡ್ ಅಮೆರಿಕಾದ ಸ್ವಾತಂತ್ರ್ಯಾವನ್ನು (ಫೆಬ್ರವರಿ 26, 1782) ಅಂಗೀಕರಿಸಿದ ಎರಡನೇ ರಾಜ್ಯವಾಗಿದೆ. ನಂತರ 1782ರ ಎಪ್ರಿಲ್ 19ರಂದು ಡಚ್ ರಿಪಬ್ಲಿಕ್‌ನ ಸ್ಟೇಟನ್-ಜನರಲ್ ಘೋಷಿಸಿತು. ಜಾನ್ ಆಡಮ್ಸ್ ದ ಹ್ಯಾಗ್ಯೂವಿನಲ್ಲಿ ಮೊದಲ US ರಾಯಭಾರಿಯಾದನು.[೯೨]. ಡಚ್ ರಿಪಬ್ಲಿಕ್ 1782ರಲ್ಲಿ ಯುನೆಟೆಡ್ ಕಿಂಗ್ಡಮ್ ಒಂದಿಗಿನ ಯುದ್ಧದಲ್ಲಿ ಒಪ್ಪಂದಕ್ಕೆ ಸಹಿಹಾಕುತ್ತಿದ್ದುದರಿಂದ, ಸ್ವೀಡನ್ಅನ್ನು ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಕಂಡುಹಿಡಿದ ಮೊದಲ ತಟಸ್ಥ ಸರ್ವಶ್ರೇಷ್ಠ ಆಡಳಿತವೆಂದು ಪರಿಗಣಿಸಲಾಗಿದೆ. 1783ರ ಎಪ್ರಿಲ್ 3ರಂದು, ಸ್ವೀಡನ್‌ನ ರಾಜನನ್ನು ಪ್ರತಿನಿಧಿಸುವ ವಿಶೇಷ ರಾಯಭಾರಿ ಮತ್ತು ಪೂರ್ಣಾಧಿಕಾರವುಳ್ಳ ನಿಯೋಗಿ ಕೌಂಟ್ ಗುಸ್ತಾಫ್ ಫಿಲಿಪ್ ಕ್ರುಯೆಟ್ಜ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದ ಪೂರ್ಣಾಧಿಕಾರವುಳ್ಳ ಮಂತ್ರಿ ಬೆಂಜಮಿನ್ ಫ್ರ್ಯಾಂಕ್ಲಿನ್ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಸ್ನೇಹ ಮತ್ತು ವಾಣಿಜ್ಯದ ಒಪ್ಪಂದವೊಂದಕ್ಕೆ ಸಹಿಹಾಕಿದರು. ಆ ಒಪ್ಪಂದದಲ್ಲಿ ಅವರು, ರಾಜ, ಅವನ ಹಕ್ಕುದಾರರು ಮತ್ತು ಉತ್ತರಾಧಿಕಾರಿಗಳು ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನದ ಮಧ್ಯೆ ದೃಢವಾದ, ಉಲ್ಲಂಘಿಸಕೂಡದ ಮತ್ತು ಸಾರ್ವತ್ರಿಕ ಶಾಂತಿ ಹಾಗೂ ನಿಜವಾದ ಮತ್ತು ಪ್ರಾಮಾಣಿಕ ಸ್ನೇಹವನ್ನು ಕಾಪಾಡಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದರು.[೯೩]. ಫ್ರೆಂಚ್ ಕ್ರಾಂತಿ, ಹೈಟಿಯನ್ ಕ್ರಾಂತಿ ಮತ್ತು ಲ್ಯಾಟಿನ್ ಅಮೆರಿಕಾದ ಸ್ವಾತಂತ್ರ್ಯ ಕದನಗಳನ್ನೊಳಗೊಂಡ ಅಟ್ಲಾಂಟಿಕ್ ಕ್ರಾಂತಿಗಳಲ್ಲಿ ಅಮೆರಿಕಾದ ಕ್ರಾಂತಿಯು ಮೊದಲನೆಯದಾಗಿದೆ. ನಂತರ ಇದು 1798ರ ಐರಿಷ್ ದಂಗೆಯಲ್ಲಿ ಐರ್ಲ್ಯಾಂಡ್, ಪೋಲಿಶ್-ಲಿತ್ವೇನಿಯನ್ ಕಾಮನ್‌ವೆಲ್ತ್ ಮತ್ತು ನೆದರ್‌ಲ್ಯಾಂಡ್ಸ್ಅನ್ನು ತಲುಪಿತು[೯೪] ಕ್ರಾಂತಿಯು ಗ್ರೇಟ್ ಬ್ರಿಟನ್, ಐರ್ಲ್ಯಾಂಡ್, ನೆದರ್‌ಲ್ಯಾಂಡ್ಸ್ ಮತ್ತು ಫ್ರಾನ್ಸ್ ಮೇಲೆ ಪ್ರಬಲ, ತಕ್ಷಣದ ಪ್ರಭಾವವನ್ನು ಬೀರಿದೆ. ಹೆಚ್ಚಿನ ಬ್ರಿಟಿಷ್ ಮತ್ತು ಐರಿಷ್ ವಿಗ್‌ಗಳು ಅಮೆರಿಕಾದ ಕ್ರಾಂತಿಯ ಪರವಾಗಿ ಮಾತನಾಡುತ್ತಾರೆ. ಡಚ್ ದಂಗೆ (16ನೇ ಶತಮಾನದ ಕೊನೆಯಲ್ಲಿ) ಮತ್ತು ಇಂಗ್ಲಿಷರ ಅಂತರ್ಯುದ್ಧದ (17ನೇ ಶತಮಾನದಲ್ಲಿ) ಒಂದಿಗೆ ಈ ಕ್ರಾಂತಿಯು, ಮಾರ್ಕ್ವಿಸ್ ಡಿ ಲ್ಯಾಫಯೆಟ್ಟೆನಂತಹ ನಂತರದ ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಕ್ರಿಯಾಶೀಲರಾಗಿದ್ದ ಅನೇಕ ಯುರೋಪಿನ್ನರಿಗೆ ಹಳೆಯ ಪ್ರಚಲಿತ ಪದ್ಧತಿಯನ್ನು ಬಿಟ್ಟುಬಿಡಲು ಕಲಿಸಿದವುಗಳಲ್ಲಿ ಒಂದಾಗಿದೆ. ಅಮೆರಿಕಾದ ಸ್ವಾತಂತ್ರ್ಯಾ ಘೋಷಣೆಯು 1789ರಲ್ಲಿ ಮಾಡಿದ ಫ್ರೆಂಚ್‌ನ ನಾಗರಿಕ ಹಕ್ಕುಗಳ ಘೋಷಣೆಯ ಮೇಲೆ ಸ್ವಲ್ಪ ಮಟ್ಟಿನ ಪರಿಣಾಮವನ್ನು ಬೀರಿದೆ.[೯೫][೯೬] ಉತ್ತರ ಅಮೆರಿಕಾದ ರಾಜ್ಯಗಳ, ಬ್ರಿಟಿಷ್ ಸಾಮ್ರಾಜ್ಯದಿಂದ ಹೊಸತಾಗಿ ಪಡೆದ ಸ್ವಾತಂತ್ರ್ಯವು ಕೆಲವು ಉತ್ತರದ ರಾಜ್ಯಗಳಲ್ಲಿ, 51 ವರ್ಷಗಳ ಹಿಂದೆ ಬ್ರಿಟಿಷ್ ವಸಾಹತುಗಳಲ್ಲಿ ರದ್ದುಗೊಳ್ಳಬೇಕಿದ್ದ ಜೀತದಾಳು ಪದ್ಧತಿಯನ್ನು ನಿರ್ಮೂಲನೆ ಮಾಡಿತು[ಸೂಕ್ತ ಉಲ್ಲೇಖನ ಬೇಕು] ಹಾಗೂ ದಕ್ಷಿಣ ರಾಜ್ಯಗಳಲ್ಲಿ ಜೀತದಾಳು ಪದ್ಧತಿಯನ್ನು ಎಲ್ಲಾ ಬ್ರಿಟಿಷ್ ವಸಾಹತುಗಳಲ್ಲಿ ರದ್ದುಗೊಂಡ 32 ವರ್ಷಗಳ ನಂತರ 1865ರವರೆಗೆ ಮುಂದುವರಿಸುವಂತೆ ಮಾಡಿತು.
ರಾಷ್ಟ್ರೀಯ ಸಾಲ
[ಬದಲಾಯಿಸಿ]ಅಮೆರಿಕಾದ ಕ್ರಾಂತಿಯ ನಂತರ ರಾಷ್ಟ್ರೀಯ ಸಾಲವು ಮೂರು ವರ್ಗಗಳಲ್ಲಿ ಕುಸಿಯಿತು. ಮೊದಲನೆಯದು $11 ದಶಲಕ್ಷದಷ್ಟು ವಿದೇಶಿಯರಿಗೆ ತೆರಬೇಕಾಗಿರುವುದು - ಹೆಚ್ಚಿನದು ಅಮೆರಿಕಾದ ಕ್ರಾಂತಿಯ ಸಂದರ್ಭದಲ್ಲಿ ಫ್ರಾನ್ಸ್‌ಗೆ ನೀಡಬೇಕಾಗಿರುವ ಸಾಲ. ಎರಡನೆಯದು ಮತ್ತು ಮೂರನೆಯದು - ಎರಡೂ ಸುಮಾರು $24 ದಶಲಕ್ಷದಷ್ಟು - ಕ್ರಾಂತಿಕಾರಿ ಸೈನ್ಯಗಳಿಗೆ ಆಹಾರ, ಕುದುರೆ ಮತ್ತು ಪೂರೈಕೆ ಸಾಮಾಗ್ರಿಗಳನ್ನು ಮಾರಾಟ ಮಾಡಿದ ಅಮೆರಿಕನ್ನರಿಗಾಗಿ ರಾಷ್ಟ್ರೀಯ ಮತ್ತು ರಾಜ್ಯ ಸರಕಾರಗಳು ನೀಡಬೇಕಾಗಿರುವ ಸಾಲ. ಹೊಸ ಸರಕಾರದ ಆಡಳಿತ ಮತ್ತು ಅಧಿಕಾರವು ವಿದೇಶಿ ಸಾಲವನ್ನು ಪಾವತಿಸಬೇಕೆಂದು ಕಾಂಗ್ರೆಸ್ ವಾದಿಸಿತು. ಕ್ರಾಂತಿಕಾರಿ ಯುದ್ಧದ ಸಂದರ್ಭದಲ್ಲಿ ಸೈನಿಕರಿಗೆ, ವ್ಯಾಪಾರಿಗಳಿಗೆ ಮತ್ತು ಕೃಷಿಕರಿಗೆ ನೀಡಲಾದ ವಾಗ್ದಾನ ಸಾಲಪತ್ರಗಳನ್ನೊಳಗೊಂಡ ಕೆಲವು ಸಾಲಗಳೂ ಇವೆ. ಇದನ್ನು ಹೊಸ ಸಂವಿಧಾನವು ಸರಕಾರವನ್ನು ರಚಿಸಿ, ಅದು ಈ ಸಾಲಗಳನ್ನು ಪಾವತಿಸುತ್ತದೆ ಎಂಬ ಆಧಾರವಾಕ್ಯದಲ್ಲಿ ನೀಡಲಾಗಿತ್ತು. ಪ್ರತಿಯೊಂದು ರಾಜ್ಯಗಳ ಯುದ್ಧದ ಖರ್ಚು $114,000,000ನಷ್ಟಾಗಿದೆ, ಒಟ್ಟು ಕೇಂದ್ರ ಸರಕಾರದಿಂದ $37 ದಶಲಕ್ಷದಷ್ಟು.[೯೭] 1790ರಲ್ಲಿ, ಖಜಾನೆಯ ಮೊದಲ ಕಾರ್ಯದರ್ಶಿ ಅಲೆಕ್ಸಾಂಡರ್ ಹ್ಯಾಮಿಲ್ಟನ್ನ ಸೂಚನೆಯೊಂದಿಗೆ ಕಾಂಗ್ರೆಸ್ ವಿದೇಶದೊಂದಿಗಿನ ರಾಜ್ಯಗಳ ಸಾಲಗಳನ್ನು ಮತ್ತು ಸ್ಥಳೀಯ ಸಾಲಗಳನ್ನು ಒಟ್ಟು $80 ದಶಲಕ್ಷದಷ್ಟರ ಒಂದು ರಾಷ್ಟ್ರೀಯ ಸಾಲವಾಗಿ ಒಂದುಗೂಡಿಸಿತು. ಪ್ರತಿಯೊಬ್ಬರೂ ಯುದ್ಧಕಾಲದ ಪ್ರಮಾಣೀಕರಣಕ್ಕಾಗಿ ಮುಖಬೆಲೆಯನ್ನು ಪಡೆದರು. ಆ ಮೂಲಕ ರಾಷ್ಟ್ರೀಯ ಗೌರವವು ಉಳಿದುಕೊಂಡಿತು ಮತ್ತು ರಾಷ್ಟ್ರೀಯ ಪ್ರಸಿದ್ಧಿಯು ಸ್ಥಾಪಿತವಾಯಿತು.
ಇವನ್ನೂ ಗಮನಿಸಿ
[ಬದಲಾಯಿಸಿ]- ಅಮೆರಿಕಾದ ದಾರ್ಶನಿಕ ಚಳವಳಿ
- ಅಮೆರಿಕಾದ ಕ್ರಾಂತಿಕಾರಿ ಯುದ್ಧದಲ್ಲಿನ ರಾಜತಂತ್ರ
- ಅಮೆರಿಕ ಸಂಯುಕ್ತ ಸಂಸ್ಥಾನ ಕ್ರಾಂತಿಕಾರಿ ಇತಿಹಾಸದ ಅವಧಿ (1760-1789)
- ಅಮೆರಿಕಾದ ಕ್ರಾಂತಿಯ ಬಗೆಗಿನ ನಾಟಕ ಮತ್ತು ಚಲನಚಿತ್ರಗಳ ಪಟ್ಟಿ
- ಎರಡನೇ ಅಮೆರಿಕಾದ ಕ್ರಾಂತಿ
ಗ್ರಂಥಸೂಚಿ
[ಬದಲಾಯಿಸಿ]ಟಿಪ್ಪಣಿಗಳು
[ಬದಲಾಯಿಸಿ]- ↑ ವುಡ್ (1992); ಗ್ರೀನಿ ಮತ್ತು ಪೋಲ್ (1994) ಚ್ಯಾಪ್ಟರ್. 70
- ↑ ಚಾರ್ಲ್ಸ W. ಟಾತ್, ಲಿಬರ್ಟೆ, ಎಗಲೈಟ್, ಫ್ರ್ಯಾಟೆರ್ನೈಟ್: ದ ಅಮೆರಿಕನ್ ರೆವಲ್ಯೂಷನ್ & ಯುರೋಪಿಯನ್ ರೆಸ್ಪಾನ್ಸ್. (1989) ಪುಟ 26.
- ↑ ಪುಟ 101, ಮಾರ್ಟಿನ್ ಕೊಹನ್‌ನ ತಾತ್ವಿಕ ಕಥೆಗಳು (ಬ್ಲ್ಯಾಕ್‌ವೆಲ್ 2008)
- ↑ ಬರ್ನಾರ್ಡ್ ಬೈಲಿನ್, ದ ಐಡಿಯಲಾಜಿಕಲ್ ಒರಿಜಿನ್ಸ್ ಆಫ್ ದ ಅಮೆರಿಕನ್ ರೆವಲ್ಯೂಷನ್ (1967)
- ↑ ಗೋರ್ಡನ್ S. ವುಡ್ ದ ರ್ಯಾಡಿಕ್ಯಾಲಿಸಮ್ ಆಫ್ ದ ಅಮೆರಿಕನ್ ರೆವಲ್ಯೂಷನ್ (1992) ಪುಟಗಳು 35, 174-5
- ↑ ರಾಬರ್ಟ್ E. ಶ್ಯಾಲ್‌ಹೋಪ್, "ಟುವರ್ಡ್ ಎ ರಿಪಬ್ಲಿಕ್ ಸಿಂಥೆಸಿಸ್" ವಿಲಿಯಂ ಮತ್ತು ಮೇರಿ ಕ್ವಾರ್ಟೆರ್ಲಿ , 29 (ಜನವರಿ 1972), ಪುಟ 49–80
- ↑ ಆಡಮ್ಸ್ ಕೋಟೆಡ್ ಇನ್ ಪಾಲ್ A. ರ್ಯಾಹೆ, ರಿಪಬ್ಲಿಕ್ಸ್ ಏನ್ಶಿಯೆಂಟ್ ಆಂಡ್ ಮಾಡರ್ನ್: ಕ್ಲಾಸಿಕಲ್ ರಪಬ್ಲಿಕ್ಯಾನಿಸಂ ಆಂಡ್ ದ ಅಮೆರಿಕನ್ ರೆವಲ್ಯೂಷನ್. ಸಂಪುಟ: 2 (1994) ಪುಟ 23.
- ↑ ಪರ್ಯಾಯ ಅಭಿಪ್ರಾಯವೊಂದನ್ನು ದೇವತಾಶಾಸ್ತ್ರಜ್ಞನಾದ ಮೈಕೆಲ್ ನೊವಕ್ ವ್ಯಕ್ತಪಡಿಸಿದು ಅಮೆರಿಕಾದ ಕ್ರಾಂತಿಯ ಬೆಂಬಲಿಗರಲ್ಲಿ, ಹೆಚ್ಚಿನ ದೇಶಪ್ರೇಮಿಗಳು ಬ್ರಿಟನ್ ವಿರುದ್ಧ ದಂಗೆ ಏಳುವಂತೆ ಪ್ರೇರೇಪಿಸಿದ ನಂಬಿಕೆಗಳು ಮತ್ತು ಮೌಲ್ಯಗಳು ಯೆಹೂದ್ಯರ ಬೈಬಲ್ ಮತ್ತು ಹೊಸ ಒಡಂಬಡಿಕೆಯಿಂದ ಬಂದಿವೆ ಎಂದು ನೊವಕ್ ವಾದಿಸಿದ್ದಾನೆ. ಮೈಕೆಲ್ ನೊವಕ್, ಆನ್ ಟು ವಿಂಗ್ಸ್ .ಹಂಬಲ್ ಫೈತ್ ಆಂಡ್ ಕಾಮನ್ ಸೆನ್ಸ್ ಅಟ್ ದ ಅಮೆರಿಕನ್ ಫೌಂಡಿಂಗ್. ಎನ್‌ಕೌಂಟರ್ ಬುಕ್ಸ್, 2002. ಪುಟಗಳು 11–13, 84. ನೊವ್ಯಾಕ್‌ನ ಅವಲೋಕನವು ಇತಿಹಾಸಕಾರರಿಂದ ಅನುಮೋದಿಸಲ್ಪಡಲಿಲ್ಲ.
- ↑ ಬೊನೋಮಿ, ಪುಟ 186
- ↑ ವಿಲಿಯಂ H. ನೆಲ್ಸನ್, ದ ಅಮೆರಿಕನ್ ಟೋರಿ (1961) ಪುಟ 186
- ↑ ಬೊನೋಮಿ, ಪುಟ 186, ಚ್ಯಾಪ್ಟರ್ 7 “ರಿಲಿಜಿಯನ್ ಆಂಡ್ ದ ಅಮೆರಿಕನ್ ರೆವಲ್ಯೂಷನ್
- ↑ ಬರ್ನಾರ್ಡ್ ಬೈಲಿನ್, ದ ಐಡಿಯಲಾಜಿಕಲ್ ಒರಿಜಿನ್ಸ್ ಆಫ್ ದ ಅಮೆರಿಕನ್ ರೆವಲ್ಯೂಷನ್ 1992 ಪುಟ 273-4, 299–300
- ↑ ಬೈಲಿನ್, 1992 ಪುಟ 303
- ↑ ೧೪.೦ ೧೪.೧ ಮಿಲ್ಲರ್ (1943)
- ↑ ಗ್ರೀನಿ ಮತ್ತು ಪೋಲ್ (1994) ಚ್ಯಾಪ್ಟರ್ 15
- ↑ ಗ್ರೀನಿ ಮತ್ತು ಪೋಲ್ (1994) ಚ್ಯಾಪ್ಟರ್ 11
- ↑ ಮಿಡ್ಲ್‌ಕಾಫ್, ಪುಟ 62.
- ↑ ಮಿಲ್ಲರ್, ಪುಟ 89
- ↑ ವಿಲಿಯಂ S. ಕಾರ್ಪೆಂಟರ್, "ಪ್ರಾತಿನಿಧ್ಯವಿಲ್ಲದ ತೆರಿಗೆ ಸಂದಾಯ" - ಡಿಕ್ಶನರಿ ಆಫ್ ಅಮೆರಿಕನ್ ಹಿಸ್ಟರಿ, ಸಂಪುಟ 7 (1976); ಮಿಲ್ಲರ್ (1943)
- ↑ ಪೌಲಿನ್ ಮೈಯರ್, ಫ್ರಮ್ ರೆಸಿಸ್ಟ್ಯಾನ್ಸ್ ಟು ರೆವಲ್ಯೂಷನ್: ಕೊಲೋನಿಯಲ್ ರ್ಯಾಡಿಕಲ್ಸ್ ಆಂಡ್ ದ ಡೆವಲಪ್ಮೆಂಟ್ ಆಫ್ ಅಮೆರಿಕನ್ ಒಪೊಸಿಶನ್ ಟು ಬ್ರಿಟನ್, 1765–1776 (1972)
- ↑ ಮಿಲ್ಲರ್ (1943) ಪುಟ 353–76
- ↑ ಗ್ರೀನಿ ಮತ್ತು ಪೋಲ್ (1994) ಚ್ಯಾಪ್ಟರ್ 22–24
- ↑ Chisick, Harvey, Historical Dictionary of the Enlightenment, pp. 313–314
- ↑ ಲಿಯೊನಾರ್ಡ್ ವುಡ್ಸ್ ಲ್ಯಾರಬೀ, ಕನ್ಸರ್ವೇಟಿಸಮ್ ಇನ್ ಅರ್ಲಿ ಅಮೆರಿಕನ್ ಹಿಸ್ಟರಿ (1948) ಪುಟ 164-65
- ↑ ಇವನ್ನೂ ಗಮನಿಸಿ - N. E. H. ಹಲ್, ಪೀಟರ್ C. ಹಾಫರ್ ಮತ್ತು ಸ್ಟೀವನ್ L. ಅಲ್ಲೆನ್, "ಚೂಸಿಂಗ್ ಸೈಡ್ಸ್: ಎ ಕ್ವಾಂಟಿಟೇಟಿವ್ ಸ್ಟಡಿ ಆಫ್ ದ ಪರ್ಸನಾಲಿಟಿ ಡಿಟರ್ಮಿನೆಂಟ್ಸ್ ಆಫ್ ಲಾಯಲಿಸ್ಟ್ ಆಂಡ್ ರಿವಲ್ಯೂಷನರಿ ಪಾಲಿಟಿಕಲ್ ಅಫ್ಲಿಯೇಷನ್ ಇನ್ ನ್ಯೂಯಾರ್ಕ್", ಜರ್ನಲ್ ಆಫ್ ಅಮೆರಿಕನ್ ಹಿಸ್ಟರಿ, ಸಂಪುಟ 65, ಸಂ 2 (ಸೆಪ್ಟೆಂಬರ್ 1978), ಪುಟ 344-366 ಇನ್ JSTOR
- ↑ ದೇಶಪ್ರೇಮ ಮನೋವಿಜ್ಞಾನದ ಹೆಚ್ಚು ಆಳದ ಅಧ್ಯಯನ - ಎಡ್ವಿನ್ G. ಬರ್ರೋವ್ಸ್ ಮತ್ತು ಮೈಕೆಲ್ ವ್ಯಾಲ್ಲೇಸ್, "ದ ಅಮೆರಿಕನ್ ರೆವಲ್ಯೂಷನ್: ದ ಐಡಿಯಾಲಜಿ ಆಂಡ್ ಸೈಕಾಲಜಿ ಆಫ್ ನ್ಯಾಷನಲ್ ಲಿಬರೇಷನ್" ಪರ್ಸ್ಪೆಕ್ಟಿವ್ಸ್ ಇನ್ ಅಮೆರಿಕನ್ ಹಿಸ್ಟರಿ, (1972) ಸಂಪುಟ 6, ಪುಟ 167-306
- ↑ ಗೋರ್ಡನ್ S. ವುಡ್, "ರೆಟಾರಿಕ್ ಆಂಡ್ ರಿಯಾಲಿಟಿ ಇನ್ ದ ಅಮೆರಿಕನ್ ರೆವಲ್ಯೂಷನ್" ವಿಲಿಯಂ ಮತ್ತು ಮೇರಿ ಕ್ವಾರ್ಟರ್ಲಿ , ಸಂಪುಟ 23, ಸಂ 1 (ಜನವರಿ, 1966), ಪುಟ 4-32 ಇನ್ JSTOR
- ↑ ನ್ಯಾಶ್ (2005); ರೆಸ್ಕ್ (2006)
- ↑ ಸ್ಪಾಫ್. ಟೋರ, ಎನ್‌ಸೈಕ್ಲೋಪೀಡಿಯ ಬ್ರಿಟಾನಿಕ
- ↑ ೩೦.೦ ೩೦.೧ ರೆವಲ್ಯೂಷನರಿ ವಾರ್: ದ ಹೋಮ್ ಫ್ರಂಟ್, ದ ಲೈಬ್ರರಿ ಆಫ್ ಕಾಂಗ್ರೆಸ್
- ↑ ಕ್ಯಾಲ್ಹೂನ್, "ಲಾಯಲಿಸಮ್ ಆಂಡ್ ನ್ಯೂಟ್ರಾಲಿಟಿ" - ಗ್ರೀನಿ ಮತ್ತು ಪೋಲ್, ಎ ಕಂಪ್ಯಾನಿಯನ್ ಟು ದ ಅಮೆರಿಕನ್ ರೆವಲ್ಯೂಷನ್ (2000) ಪುಟ 235
- ↑ ಕ್ಯಾಲ್ಹೂನ್, ರಾಬರ್ಟ್ M. "ಲಾಯಲಿಸಮ್ ಆಂಡ್ ನ್ಯೂಟ್ರಾಲಿಟಿ" - ಗ್ರೀನಿ ಮತ್ತು ಪೋಲ್, ದ ಬ್ಲ್ಯಾಕ್‌ವೆಲ್ ಎನ್‌ಸೈಕ್ಲೋಪೀಡಿಯಾ ಆಫ್ ದ ಅಮೆರಿಕನ್ ರೆವಲ್ಯೂಷನ್ (1991)
- ↑ ಕೋಲಿನ್ G. ಕ್ಯಾಲೊವೆ, ದ ಅಮೆರಿಕನ್ ರೆವಲ್ಯೂಷನ್ ಇನ್ ಇಂಡಿಯನ್ ಕಂಟ್ರಿ: ಕ್ರೈಸಿಸ್ ಆಂಡ್ ಡೈವರ್ಸಿಟಿ ಇನ್ ನೇಟಿವ್ ಅಮೆರಿಕನ್ ಕಮ್ಯೂನಿಟೀಸ್ (1995)
- ↑ ಹಿಲ್ (2007), ಇದನ್ನೂ ಗಮನಿಸಿ - blackloyalist.com
- ↑ ಗಾಟ್ಲೀಬ್ 2005
- ↑ ಗ್ರೀನಿ ಮತ್ತು ಪೋಲ್ (1994) ಚ್ಯಾಪ್ಟರ್ 20–22
- ↑ ಕ್ಯಾರೊಲ್ ಬರ್ಕಿನ್, ರೆವಲ್ಯೂಷನರಿ ಮದರ್ಸ್: ವುಮೆನ್ ಇನ್ ದ ಸ್ಟ್ರಗಲ್ ಫಾರ್ ಅಮೆರಿಕಾಸ್ ಇಂಡಿಪೆಂಡೆನ್ಸ್ (2005)
- ↑ ಬರ್ಕಿನ್ (2005); ಗ್ರೀನಿ ಮತ್ತು ಪೋಲ್ (1994) ಚ್ಯಾಪ್ಟರ್ 41
- ↑ ಲಿಂಡ ಕರ್ಬರ್, ವುಮೆನ್ ಆಫ್ ದ ರಿಪಬ್ಲಿಕ್: ಇಂಟೆಲೆಕ್ಟ್ ಆಂಡ್ ಐಡಿಯಾಲಜಿ ಇನ್ ರಿವಲ್ಯೂಷನರಿ ಅಮೆರಿಕ (1997) ಚ್ಯಾಪ್ಟರ್ 4, 6; ಇದನ್ನೂ ಗಮನಿಸಿ - ಮೇರಿ ಬೆತ್ ನಾರ್ಟನ್, ಲಿಬರ್ಟಿಸ್ ಡಾಟರ್ಸ್: ದ ರೆವಲ್ಯೂಷನರಿ ಎಕ್ಸ್‌ಪೀರಿಯನ್ಸ್ ಆಫ್ ಅಮೆರಿಕನ್ ವುಮೆನ್ (1980)
- ↑ ಎಡ್ವರ್ಡ್ F. ಬಟ್ಲರ್, "ಸ್ಪೇನ್ಸ್ ಇನ್ವಾಲ್ವ್ಮೆಂಟ್ ಇನ್ ದ ಅಮೆರಿಕನ್ ರೆವಲ್ಯೂಷನರಿ ವಾರ್" ದ SAR ಮ್ಯಾಗಜಿನ್ ಸಂಪುಟ 104 ಸಂ. 1
- ↑ U.S. nps.gov, ಬರ್ನಾರ್ಡೊ ಡಿ ಗ್ಯಾಲ್ವೆಜ್: ಹೌ ಮಚ್ ಡಿಫರೆಂಟ್ ಅಮೆರಿಕನ್ ಹಿಸ್ಟರಿ ಮೈಟ್ ಹ್ಯಾವ್ ಬೀನ್ ವಿದೌಟ್ ಹಿಮ್!
- ↑ ಥಾಂಪ್ಸನ್, ಬುಚ್ಯಾನನ್ ಪಾರ್ಕರ್, "ಸ್ಪೇನ್: ಫೊರ್ಗೋಟನ್ ಆಲಿ ಆಫ್ ದ ಅಮೆರಿಕನ್ ರೆವಲ್ಯೂಷನ್". ನಾರ್ತ್ ಕ್ವಿನ್ಸಿ, ಮಾಸ್: ಕ್ರಿಸ್ಟೋಫರ್ ಪಬ್ಲಿಷಿಂಗ್ ಹೌಸ್, 1976.
- ↑ ಜೊನಾತನ್ ಡಲ್, ಎ ಡಿಪ್ಲೊಮ್ಯಾಟಿಕ್ ಹಿಸ್ಟರಿ ಆಫ್ ದ ಅಮೆರಿಕನ್ ರೆವಲ್ಯೂಷನ್ (1985) ಪುಟ 57–65
- ↑ ಗ್ರೀನಿ ಮತ್ತು ಪೋಲ್ (2004) ಚ್ಯಾಪ್ಟರ್‌ಗಳು 19, 46 ಮತ್ತು 51; ಕೋಲಿನ್ G. ಕ್ಯಾಲೊವೆ, ದ ಅಮೆರಿಕನ್ ರೆವಲ್ಯೂಷನ್ ಇನ್ ಇಂಡಿಯನ್ ಕಂಟ್ರಿ: ಕ್ರೈಸಿಸ್ ಆಂಡ್ ಡೈವರ್ಸಿಟಿ ಇನ್ ನೇಟಿವ್ ಅಮೆರಿಕನ್ ಕಮ್ಯೂನಿಟೀಸ್ (1995)
- ↑ ಜೋಸೆಫ್ T. ಗ್ಲ್ಯಾಥಾರ್ ಮತ್ತು ಜೇಮ್ಸ್ ಕರ್ಬಿ ಮಾರ್ಟಿನ್, ಫೊರ್ಗಾಟನ್ ಅಲ್ಲೀಸ್: ದ ಆನೀಡ ಇಂಡಿಯನ್ಸ್ ಆಂಡ್ ದ ಅಮೆರಿಕನ್ ರೆವಲ್ಯೂಷನ್ (2007)
- ↑ ಗಮನಿಸಿ - ಬಾರ್ಬರ ಗ್ರೇಮಂಟ್, "ತ್ಯಾಯೆಂಡನೆಗಿಯ," ಡಿಕ್ಶನರಿ ಆಫ್ ಕೆನಡಿಯನ್ ಬಯೋಗ್ರಫಿ ಆನ್‌ಲೈನ್
- ↑ ಟಾಮ್ ಹ್ಯಾಟ್ಲಿ, ದ ಡಿವೈಡಿಂಗ್ ಪಾತ್ಸ್: ಚೆರೊಕೀಸ್ ಆಂಡ್ ಸೌತ್ ಕ್ಯಾರೊಲಿನಿಯನ್ಸ್ ಥ್ರೂ ದ ಎರ ಆಫ್ ರೆವಲ್ಯೂಷನ್ (1993); ಜೇಮ್ಸ್ H. ಒ ಡಾನ್ನೆಲ್, III, ಸದರ್ನ್ ಇಂಡಿಯನ್ಸ್ ಇನ್ ದ ಅಮೆರಿಕನ್ ರೆವಲ್ಯೂಷನ್ (1973)
- ↑ ಜೋಸೆಫ್ R. ಫಿಸ್ಕರ್, ಎ ವೆಲ್-ಎಕ್ಸಿಕ್ಯೂಟೆಡ್ ಫೈಲ್ಯೂರ್: ದ ಸುಲ್ಲಿವ್ಯಾನ್ ಕ್ಯಾಂಪೇನ್ ಎಗೈನೆಸ್ಟ್ ದ ಐರೊಕ್ಯುಯಸ್, ಜುಲೈ–ಸೆಪ್ಟೆಂಬರ್ 1779 (1997).
- ↑ ಕ್ಯಾಲೊವೆ (1995) ಪುಟ 290
- ↑ ಡ್ವೈಟ್ L. ಸ್ಮಿತ್, "ಎ ನಾರ್ತ್ ಅಮೆರಿಕನ್ ನ್ಯೂಟ್ರಲ್ ಇಂಡಿಯನ್ ಜೋನ್: ಪರ್ಸಿಸ್ಟೆನ್ಸ್ ಆಫ್ ಎ ಬ್ರಿಟಿಷ್ ಐಡಿಯಾ" ನಾರ್ತ್‌ವೆಸ್ಟ್ ಓಹಿಯೊ ಕ್ವಾರ್ಟೆರ್ಲಿ 1989 61(2–4): 46–63
- ↑ ಫ್ರ್ಯಾಂಕಿಸ್ M. ಕ್ಯಾರೋಲ್, ಎ ಗಾಡ್ ಆಂಡ್ ವೈಸ್ ಮೆಜರಿ: ದ ಸರ್ಚ್ ಫಾರ್ ದ ಕೆನಡಿಯನ್-ಅಮೆರಿಕನ್ ಬೌಂಡರಿ, 1783–1842 , 2001, ಪುಟ 23
- ↑ ಬೆಂಜಮಿನ್ ಕ್ವಾರ್ಲ್ಸ್, ದ ನೀಗ್ರೊ ಇನ್ ದ ಅಮೆರಿಕನ್ ರೆವಲ್ಯೂಷನ್ (1961)
- ↑ Davis p. 148
- ↑ [75] ^ ಡೇವಿಸ್, ಪುಟ 149
- ↑ ಸ್ಕ್ಯಾಮ, ಪುಟ.28-30 ಪುಟ 78-90
- ↑ ವೈನ್‌ಟ್ರಾಬ್, ಪುಟ 7
- ↑ ಸ್ಕ್ಯಾಮ, ಪುಟ 75
- ↑ ೫೮.೦ ೫೮.೧ ಹಾಚ್ಸ್‌ಚೈಲ್ಡ್, ಪುಟ 50-51
- ↑ ಮೋರಿಸೆ, ಪುಟ 35
- ↑ ಹಾರ್ವೆ, ಪುಟ 208-210
- ↑ ಅರ್ಬನ್, ಪುಟ 74
- ↑ ಮಿಲ್ಲರ್ (1948), ಪುಟ 87
- ↑ ಆಂಡರ್‌ಡಾಂಕ್, ಹೆನ್ರಿ. "ರೆವಲ್ಯೂಷನರಿ ಇನ್ಸಿಡೆಂಟ್ಸ್ ಆಫ್ ಸಫಾಕ್ ಆಂಡ್ ಕಿಂಗ್ಸ್ ಕೌಂಟೀಸ್; ವಿದ್ ಆನ್ ಅಕೌಂಟ್ ಆಫ್ ದ ಬ್ಯಾಟಲ್ ಆಫ್ ಲಾಂಗ್ ಐಲ್ಯಾಂಡ್ ಆಂಡ್ ದ ಬ್ರಿಟಿಷ್ ಪ್ರಿಸನ್ಸ್ ಆಂಡ್ ಪ್ರಿಸನ್-ಶಿಪ್ಸ್ ಅಟ್ ನ್ಯೂಯಾರ್ಕ್". ISBN 978-0804680752
- ↑ ಡ್ರಿಂದ್, ಥೋಮಸ್ ಮತ್ತು ಗ್ರೀನಿ, ಆಲ್ಬರ್ಟ್. "ರಿಕಲೆಕ್ಷನ್ಸ್ ಆಫ್ ದ ಜೆರ್ಸಿ ಪ್ರಿಸನ್ ಶಿಪ್" (ಅಮೆರಿಕನ್ ಎಕ್ಸ್‌ಪೀರಿಯನ್ಸ್ ಸೀರೀಸ್ 8), 1986 (ಮೂಲತಃ 1826ರಲ್ಲಿ ಮುದ್ರಿತಗೊಂಡಿತು). ISBN 978-0918222923
- ↑ ಜಾನ್ C. ಮಿಲ್ಲರ್, ಟ್ರಿಯಂಫ್ ಆಫ್ ಫ್ರೀಡಮ್, 1775–1783 1948. ಪುಟ 166.
- ↑ ೬೬.೦ ೬೬.೧ ನೆವಿನ್ಸ್ (1927); ಗ್ರೀನಿ ಮತ್ತು ಪೋಲ್ (1994) ಚ್ಯಾಪ್ಟರ್ 29
- ↑ ನೆವಿನ್ಸ್ (1927)
- ↑ ವುಡ್ (1992)
- ↑ ಗ್ರೀನಿ ಮತ್ತು ಪೋಲ್ (1994) ಚ್ಯಾಪ್ಟರ್ 26.
- ↑ ಗ್ರೀನಿ ಮತ್ತು ಪೋಲ್ (1994) ಚ್ಯಾಪ್ಟರ್ 27.
- ↑ ಗ್ರೀನಿ ಮತ್ತು ಪೋಲ್ (1994) ಚ್ಯಾಪ್ಟರ್ 30;
- ↑ Klos, Stanley L. (2004). President Who? Forgotten Founders. Pittsburgh, Pennsylvania: Evisum, Inc. ISBN 0-9752627-5-0.
- ↑ ಸ್ಕೆಕ್ಟರ್, ಬರ್ನೆಟ್. ದ ಬ್ಯಾಟಲ್ ಫಾರ್ ನ್ಯೂಯಾರ್ಕ್: ದ ಸಿಟಿ ಅಟ್ ದ ಹಾರ್ಟ್ ಆಫ್ ದ ಅಮೆರಿಕನ್ ರೆವಲ್ಯೂಷನ್ . (2002); ಮ್ಯಾಕ್‌ಕಲ್ಲಫ್, 1776 (2005)
- ↑ ವೈನ್‌ಟ್ರಾಬ್.
- ↑ ೭೫.೦ ೭೫.೧ ೭೫.೨ ಮ್ಯಾಕೆಸಿ, 1992; ಹಿಗ್ಗಿನ್‌ಬೊತಮ್ (1983)
- ↑ ಜೆಫ್ರೆ J. ಕ್ರೊ ಮತ್ತು ಲ್ಯಾರಿ E. ಟೈಸ್ - ಸಂಪಾದಕರು. ದ ಸದರ್ನ್ ಎಕ್ಸ್‌ಪೀರಿಯನ್ಸ್ ಇನ್ ದ ಅಮೆರಿಕನ್ ರೆವಲ್ಯೂಷನ್ (1978)
- ↑ ಹೆನ್ರಿ ಲಂಪ್ಕಿನ, ಫ್ರಮ್ ಸ್ಯಾವನ್ನಾಹ್ ಟು ಯಾರ್ಕ್‌ಟೌವ್ನ್: ದ ಅಮೆರಿಕನ್ ರೆವಲ್ಯೂಷನ್ ಇನ್ ದ ಸೌತ್ (2000)
- ↑ ಹಾರ್ವೆ, ಪುಟ 493-95
- ↑ ಹಾರ್ವೆ, ಪುಟ 502-06
- ↑ ಹಾರ್ವೆ, ಪುಟ 515
- ↑ ಹಾರ್ವೆ, ಪುಟ 528
- ↑ ಮಿಲ್ಲರ್ (1948), ಪುಟ 616–48
- ↑ ವಿಲಿಯಂ ಹ್ಯಾಗ್ಯು, ವಿಲಿಯಂ ಪಿಟ್ ದ ಯಂಗರ್ (2004)
- ↑ ಜೆರೆಮಿ ಬ್ಲ್ಯಾಕ್, ಜಾರ್ಜ್ III: ಅಮೆರಿಕಾಸ್ ಲಾಸ್ಟ್ ಕಿಂಗ್ (2006)
- ↑ ಮ್ಯಾಕ್‌ಕಲಫ್, ಡೇವಿಡ್. ಜಾನ್ ಆಡಮ್ಸ್. ಸೈಮನ್ ಮತ್ತು ಸ್ಕಸ್ಟರ್, 2001. ISBN 9780743223133
- ↑ Greene, Jack. "The American Revolution Section 25". The American Historical Review. Archived from the original on 2012-05-25. Retrieved 2007-01-06.
- ↑ ವುಡ್ (2003)
- ↑ ೮೮.೦ ೮೮.೧ Boorstin, Daniel J. (1953). The Genius of American Politics. Chicago: University of Chicago Press.
- ↑ ವ್ಯಾನ್ ಟೈನ್ ಅಮೆರಿಕಾನ್ ಲಾಯಲಿಸ್ಟ್ಸ್ 1902
- ↑ ವುಡ್, ರ್ಯಾಡಿಕ್ಯಾಲಿಸಮ್ , ಪುಟ 278-9
- ↑ ಪಾಮರ್, (1959)
- ↑ "Frisians first to recognize USA! (After an article by Kerst Huisman, Leeuwarder Courant 29th Dec. 1999)". Archived from the original on 2010-01-23. Retrieved 2009-10-29.
- ↑ "Proclamation by the President of the United States, April 4, 1983". Archived from the original on 2008-07-24. Retrieved 2009-07-20.
- ↑ ಪಾಮರ್, (1959); ಗ್ರೀನಿ ಮತ್ತು ಪೋಲ್ (1994) ಚ್ಯಾಪ್ಟರ್ 53–55
- ↑ ಪಾಮರ್, (1959); ಗ್ರೀನಿ ಮತ್ತು ಪೋಲ್ (1994) ಚ್ಯಾಪ್ಟರ್ 49–52.
- ↑ "Enlightenment and Human Rights". Archived from the original on 2007-02-03. Retrieved 2007-01-06.
- ↑ ಜೆನ್ಸನ್, ದ ನ್ಯೂ ನೇಷನ್ (1950) ಪುಟ 379
ಆಕರ ಕೃತಿಗಳು
[ಬದಲಾಯಿಸಿ]- ಐಯನ್ ಬ್ಯಾರ್ನೆಸ್ ಮತ್ತು ಚಾರ್ಲ್ಸ್ ರಾಯ್ಸ್ಟರ್ ದ ಹಿಸ್ಟೋರಿಕಲ್ ಅಟ್ಲಾಸ್ ಆಫ್ ದ ಅಮೆರಿಕನ್ ರೆವಲ್ಯೂಷನ್ (2000), ನಕ್ಷೆ ಮತ್ತು ಟಿಪ್ಪಣಿ
- ಬ್ಲ್ಯಾಂಕೊ, ರಿಚಾರ್ಡ್. ದ ಅಮೆರಿಕನ್ ರೆವಲ್ಯೂಷನ್: ಆನ್ ಎನ್‌ಸೈಕ್ಲೊಪೀಡಿಯ 2 ಸಂಪುಟ (1993), 1850 ಪುಟಗಳು
- ಬೋಟ್ನರ್, ಮಾರ್ಕ್ ಮಾಯೊ, III. ಎನ್‌ಸೈಕ್ಲೊಪೀಡಿಯ ಆಫ್ ದ ಅಮೆರಿಕನ್ ರೆವಲ್ಯೂಷನ್. (1966); 1974ರಲ್ಲಿ ಪರಿಷ್ಕರಿಸಲಾಗಿದೆ. ISBN 0-8117-0578-1; ಹ್ಯಾರಲ್ಡ್ E. ಸೆಲೆಸ್ಕಿಯ 2006ರ ಹೊಸ ಆವೃತ್ತಿ
- ಫ್ರೆಮಂಟ್-ಬ್ಯಾರ್ನೆಸ್, ಗ್ರೆಗರಿ ಮತ್ತು ರಿಚಾರ್ಡ್ A. ರೇರ್ಸನ್ - ಸಂಪಾದಕರು. ದ ಎನ್‌ಸೈಕ್ಲೊಪೀಡಿಯ ಆಫ್ ದ ಅಮೆರಿಕನ್ ರೆವಲ್ಯೂಷನ್ ವಾರ್: ಎ ಪೊಲಿಟಿಕಲ್, ಸೋಷಿಯಲ್ ಆಂಡ್ ಮಿಲಿಟರಿ ಹಿಸ್ಟರಿ (ABC-CLIO 2006) 5 ಸಂಪುಟ; ಎಲ್ಲಾ ವಿಷಯಗಳನ್ನೊಳಗೊಂಡ, 150 ಪರಿಣಿತರ 1000 ನಮೂದುಗಳು
- ಗ್ರೀನೆ, ಜ್ಯಾಕ್ P. ಮತ್ತು J. R. ಪೋಲ್ - ಸಂಪಾದಕರು. ದ ಬ್ಲ್ಯಾಕ್‌ವೆಲ್ ಎನ್‌ಸೈಕ್ಲೊಪೀಡಿಯ ಆಫ್ ದ ಅಮೆರಿಕನ್ ರೆವಲ್ಯೂಷನ್ (1994), 845 ಪುಟ; ರಾಜಕೀಯ ಚಿಂತನೆಗಳಿಗೆ ಮಹತ್ವ ನೀಡಲಾಗಿದೆ; ಎ ಕಂಪ್ಯಾನಿಯನ್ ಟು ದ ಅಮೆರಿಕನ್ ರೆವಲ್ಯೂಷನ್ ಶೀರ್ಷಿಕೆಯ ಪರಿಷ್ಕೃತ ಆವೃತ್ತಿ (2004)
- ಪರ್ಸೆಲ್, L. ಎಡ್ವರ್ಡ್. ಹು ವಾಸ್ ಹು ಇನ್ ದ ಅಮೆರಿಕನ್ ರೆವಲ್ಯೂಷನ್ (1993); 1500 ಕಿರು ಆತ್ಮಚರಿತ್ರೆಗಳು
- ರೆಸ್ಕ್, ಜಾನ್ P. - ಸಂಪಾದಕರು. ಅಮೆರಿಕನ್ಸ್ ಅಟ್ ವಾರ್: ಸೊಸೈಟಿ, ಕಲ್ಚರ್ ಆಂಡ್ ದ ಹೋಮ್‌ಫ್ರಂಟ್ ಸಂಪುಟ 1 (2005)
ಪ್ರಾಥಮಿಕ ಮೂಲಗಳು
[ಬದಲಾಯಿಸಿ]- ದ ಅಮೆರಿಕನ್ ರೆವಲ್ಯೂಷನ್: ರೈಟಿಂಗ್ಸ್ ಫ್ರಮ್ ದ ವಾರ್ ಆಫ್ ಇಂಡಿಪೆಂಡೆನ್ಸ್ (2001), ಲೈಬ್ರರಿ ಆಫ್ ಅಮೆರಿಕ, 880 ಪುಟಗಳು
- ಕೊಮ್ಮ್ಯಾಗರ್, ಹೆನ್ರಿ ಸ್ಟೀಲಿ ಮತ್ತು ಮೋರಿಸ್, ರಿಚಾರ್ಡ್ B. - ಸಂಪಾದಕರು. ದ ಸ್ಪಿರಿಟ್ ಆಫ್ 'ಸೆವೆಂಟಿ-ಸಿಕ್ಸ್: ದ ಸ್ಟೋರಿ ಆಫ್ ದ ಅಮೆರಿಕನ್ ರೆವಲ್ಯೂಷನ್ ಆಸ್ ಟೋಲ್ಡ್ ಬೈ ಪಾರ್ಟಿಸಿಪೆಂಟ್ಸ್ (1975) (ISBN 0-06-010834-7) ನೂರಾರು ಅಧಿಕೃತ ಮತ್ತು ಅನಧಿಕೃತ ಮೂಲಗಳ ಕಿರು ಉಧೃತ ಭಾಗಗಳು
- ಡ್ರಿಂಗ್, ಥೋಮಸ್ ಮತ್ತು ಗ್ರೀನೆ, ಆಲ್ಬರ್ಟ್. ರಿಕಲೆಕ್ಷನ್ಸ್ ಆಫ್ ದ ಜೆರ್ಸಿ ಪ್ರಿಸನ್ ಶಿಪ್ (ಅಮೆರಿಕನ್ನರ ಅನುಭವ ಸರಣಿ, ಸಂ 8), 1986 (ಮೂಲತಃ 1826ರಲ್ಲಿ ಮುದ್ರಿಸಲಾಗಿದೆ). ISBN 978-0918222923
- ಹಂಫ್ರೆ, ಕ್ಯಾರಲ್ ಸ್ಯೂ - ಸಂಪಾದಕರು. ದ ರಿವಲ್ಯೂಷನರಿ ಎರ: ಪ್ರೈಮರಿ ಡಾಕ್ಯೂಮೆಂಟ್ಸ್ ಆನ್ ಈವೆಂಟ್ಸ್ ಫ್ರಮ್ 1776 ಟು 1800 - ಗ್ರೀನ್‌ವುಡ್ ಪ್ರೆಸ್, 2003
- ಮೋರಿಸನ್, ಸ್ಯಾಮ್ಯುಯೆಲ್ E. - ಸಂಪಾದಕರು. ಸೋರ್ಸಸ್ ಆಂಡ್ ಡಾಕ್ಯುಮೆಂಟ್ಸ್ ಇಲ್ಲಸ್ಟ್ರೇಟಿಂಗ್ ದ ಅಮೆರಿಕನ್ ರೆವಲ್ಯೂಷನ್, 1764–1788, ಮತ್ತು ಫಾರ್ಮೇಶನ್ ಆಫ್ ದ ಫೆಡೆರಲ್ ಕಾನ್‌ಸ್ಟಿಟ್ಯೂಷನ್ (1923). 370 ಪುಟಗಳು ಆನ್‌ಲೈನ್ ಆವೃತ್ತಿ Archived 2010-04-04 ವೇಬ್ಯಾಕ್ ಮೆಷಿನ್ ನಲ್ಲಿ.
- ಆಂಡೆರ್ಡಾಂಕ್, ಹೆನ್ರಿ. ರೆವಲ್ಯೂಷನರಿ ಇನ್ಸಿಡೆಂಟ್ಸ್ ಆಫ್ ಸಫಾಲ್ಕ್ ಆಂಡ್ ಕಿಂಗ್ಸ್ ಕೌಂಟೀಸ್; ವಿದ್ ಆನ್ ಅಕೌಂಟ್ ಆಫ್ ದ ಬ್ಯಾಟಲ್ ಆಫ್ ಲಾಂಗ್ ಐಲ್ಯಾಂಡ್ ಆಂಡ್ ದ ಬ್ರಿಟಿಷ್ ಪ್ರಿಸನ್ಸ್ ಆಂಡ್ ಪ್ರಿಸನ್-ಶಿಪ್ಸ್ ಅಟ್ ನ್ಯೂಯಾರ್ಕ್ . ISBN 978-0804680752
- ಟ್ಯಾನ್ಸಿಲ್, ಚಾರ್ಲ್ಸ್ C. - ಸಂಪಾದಕರು.; ಡಾಕ್ಯುಮೆಂಟ್ಸ್ ಇಲ್ಲಸ್ಟ್ರೇಟಿವ್ ಆಫ್ ದ ಫಾರ್ಮೇಶನ್ ಆಫ್ ದ ಯೂನಿಯನ್ ಆಫ್ ದ ಅಮೆರಿಕನ್ ಸ್ಟೇಟ್ಸ್. ಸರಕಾರಿ ಮುದ್ರಣ. ಕಛೇರಿ. (1927). 1124 ಪುಟಗಳು ಆನ್‌ಲೈನ್ ಆವೃತ್ತಿ Archived 2012-05-24 ವೇಬ್ಯಾಕ್ ಮೆಷಿನ್ ನಲ್ಲಿ.
- ಮಾರ್ಟಿನ್ ಕ್ಯಾಲಿಚ್ ಮತ್ತು ಆಂಡ್ರಿವ್ ಮ್ಯಾಕ್‌ಲೀಶ್ - ಸಂಪಾದಕರು. Archived 2007-06-13 ವೇಬ್ಯಾಕ್ ಮೆಷಿನ್ ನಲ್ಲಿ.ದ ಅಮೆರಿಕನ್ ರೆವಲ್ಯೂಷನ್ ಥ್ರೂ ಬ್ರಿಟಿಷ್ ಐಸ್ (1962) Archived 2007-06-13 ವೇಬ್ಯಾಕ್ ಮೆಷಿನ್ ನಲ್ಲಿ. ಆರಂಭಿಕ ದಾಖಲೆಗಳು
ಸ್ಥೂಲ ಸಮೀಕ್ಷೆಗಳು
[ಬದಲಾಯಿಸಿ]- ಬ್ಯಾಂಕ್ರಾಫ್ಟ್, ಜಾರ್ಜ್. ಹಿಸ್ಟರಿ ಆಫ್ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಫ್ರಮೇ ದ ಡಿಸ್ಕವರಿ ಆಫ್ ದ ಅಮೆರಿಕನ್ ಕಾಂಟಿನೆಂಟ್ (1854–78), ಸಂಪುಟ 4–10 ಆನ್‌ಲೈನ್ ಆವೃತ್ತಿ Archived 2007-02-16 ವೇಬ್ಯಾಕ್ ಮೆಷಿನ್ ನಲ್ಲಿ.
- ಕಾಂಗ್ಲಿಯಾನೊ, ಫ್ರಾನ್ಸಿಸ್ D. ರಿವಲ್ಯೂಷನರಿ ಅಮೆರಿಕ, 1763–1815; ಎ ಪೊಲಿಟಿಕಲ್ ಹಿಸ್ಟರಿ (2000), ಬ್ರಿಟಿಷ್ ಟೆಕ್ಸ್ಟ್‌ಬುಕ್
- ಹಾರ್ವೆ, ರಾಬರ್ಟ್ ಎ ಫ್ಯೂ ಬ್ಲಡಿ ನೋಸಸ್: ದ ಅಮೆರಿಕನ್ ರೆವಲ್ಯೂಷನರಿ ವಾರ್ (2004)
- ಹೆಗ್ಗಿನ್‌ಬೊತ್ಯಾಮ್, ಡಾನ್. ದ ವಾರ್ ಆಫ್ ಅಮೆರಿಕನ್ ಇಂಡಿಪೆಂಡೆನ್ಸ್: ಮಿಲಿಟರಿ ಆಟಿಟ್ಯೂಡ್ಸ್, ಪಾಲಿಸೀಸ್ ಆಂಡ್ ಪ್ರ್ಯಾಕ್ಟೀಸ್, 1763–1789 (1983) ಆನ್‌ಲೈನ್ ಇನ್ ACLS ಹಿಸ್ಟರಿ E-ಬುಕ್ ಪ್ರಾಜೆಕ್ಟ್. ಯುದ್ಧದ ಮಿಲಿಟರಿ ಮತ್ತು ಇತರ ಅಂಶಗಳ ವ್ಯಾಪಕ ವ್ಯಾಪ್ತಿ.
- ಹಾಕ್ಸ್‌ಚೈಲ್ಡ್, ಆಡಮ್. ಬರಿ ದ ಚೈನ್ಸ್: ದ ಬ್ರಿಟಿಷ್ ಸ್ಟ್ರಗಲ್ ಟು ಅಬಾಲಿಷ್ ಸ್ಲೇವರಿ (2006)
- ಜೆನ್ಸನ್, ಮೆರಿಲ್. ದ ಫೌಂಡಿಂಗ್ ಆಫ್ ಎ ನೇಶನ್: ಎ ಹಿಸ್ಟರಿ ಆಫ್ ದ ಅಮೆರಿಕನ್ ರೆವಲ್ಯೂಷನ್ 1763–1776. (2004)
- ಬರ್ನ್‌ಹಾರ್ಡ್ ನಾಲೆನ್‌ಬರ್ಗ್, ಗ್ರೋತ್ ಆಫ್ ದ ಅಮೆರಿಕನ್ ರೆವಲ್ಯೂಷನ್: 1766–1775 (2003) ಆನ್‌ಲೈನ್ ಆವೃತ್ತಿ Archived 2007-04-27 ವೇಬ್ಯಾಕ್ ಮೆಷಿನ್ ನಲ್ಲಿ.
- ಲೆಕಿ, ವಿಲಿಯಂ ಎಡ್ವರ್ಡ್ ಹ್ಯಾರ್ಟ್‌ಪೋಲ್. ದ ಅಮೆರಿಕನ್ ರೆವಲ್ಯೂಷನ್, 1763–1783 (1898), ಬ್ರಿಟಿಷ್ ದೃಷ್ಟಿಕೋನ ಆನ್‌ಲೈನ್ ಆವೃತ್ತಿ
- ಮ್ಯಾಕೆಸಿ, ಪಿಯರ್ಸ್. ದ ವಾರ್ ಫಾರ್ ಅಮೆರಿಕ: 1775–1783 (1992), ಬ್ರಿಟಿಷ್ ಮಿಲಿಟರಿ ಅಧ್ಯಯನ ಆನ್‌ಲೈನ್ ಆವೃತ್ತಿ
- ಮಿಡಲ್‌ಕಾಫ್, ರಾಬರ್ಟ್. ದ ಗ್ಲೋರಿಯಸ್ ಕಾಸ್: ದ ಅಮೆರಿಕನ್ ರೆವಲ್ಯೂಷನ್, 1763–1789 (2005). 1985ರ ಆವೃತ್ತಿಯು ಆನ್‌ಲೈನ್ ಆವೃತ್ತಿ ಯಲ್ಲಿ ಲಭ್ಯವಿದೆ.
- ಮಿಲ್ಲರ್, ಜಾನ್ C. ಟ್ರಿಯಂಫ್ ಫ್ರೀಡಮ್, 1775–1783 (1948) ಆನ್‌ಲೈನ್ ಆವೃತ್ತಿ Archived 2012-05-24 ವೇಬ್ಯಾಕ್ ಮೆಷಿನ್ ನಲ್ಲಿ.
- ಮಿಲ್ಲರ್, ಜಾನ್ C. ಒರಿಜಿನ್ಸ್ ಆಫ್ ಅಮೆರಿಕನ್ ರೆವಲ್ಯೂಷನ್ (1943) ಆನ್‌ಲೈನ್ ಆವೃತ್ತಿ Archived 2012-05-25 ವೇಬ್ಯಾಕ್ ಮೆಷಿನ್ ನಲ್ಲಿ.
- ಮೋರಿಸ್ಸೆ, ಬ್ರೆಂಡನ್. ಬೋಸ್ಟನ್ 1775:ದ ಶಾಟ್ ಹರ್ಡ್ ಅರೌಂಡ್ ದ ವರ್ಲ್ಡ್ . ಆಸ್‌ಪ್ರೆ (1993)
- ಸ್ಕ್ಯಾಮ, ಸೈಮನ್. ರಫ್ ಕ್ರಾಸಿಂಗ್ಸ್: ಬ್ರಿಟನ್, ದ ಸ್ಲೇವ್ಸ್ ಆಂಡ್ ದ ಅಮೆರಿಕನ್ ರೆವಲ್ಯೂಷನ್ (2006)
- ಅರ್ಬನ್, ಮಾರ್ಕ್. ಜನರಲ್ಸ್:ಟೆನ್ ಬ್ರಿಟಿಷ್ ಕಮಾಂಡರ್ಸ್ ಹು ಶೇಪ್ಡ್ ದ ವರ್ಲ್ಡ್ (2005)
- ವೈನ್‌ಟ್ರಾಬ್, ಸ್ಟ್ಯಾನ್ಲಿ. ಐರನ್ ಟಿಯರ್ಸ್: ರೆಬೆಲಿಯನ್ ಇನ್ ಅಮೆರಿಕ 1775–83 (2005)
- ವುಡ್, ಗಾರ್ಡನ್ S. ದ ಅಮೆರಿಕನ್ ರೆವಲ್ಯೂಷನ್: ಎ ಹಿಸ್ಟರಿ (2003), ಕಿರು ಸಮೀಕ್ಷೆ
- ವ್ರಾಂಗ್, ಜಾರ್ಜ್ M. ವಾಷಿಂಗ್ಟನ್ ಆಂಡ್ ಹಿಸ್ ಕೊಮ್ರೇಡ್ಸ್ ಇನ್ ಆರ್ಮ್ಸ್: ಎ ಕ್ರೋನಿಕಲ್ ಆಫ್ ದ ವಾರ್ ಆಫ್ ಇಂಡಿಪೆಂಡೆನ್ಸ್ (1921) ಆನ್‌ಲೈನ್ Archived 2006-08-28 ವೇಬ್ಯಾಕ್ ಮೆಷಿನ್ ನಲ್ಲಿ. - ಕೆನಡಿಯನ್ ಪಂಡಿತನ ಕಿರು ಸಮೀಕ್ಷೆ
ವಿಶಿಷ್ಟ ಅಧ್ಯಯನಗಳು
[ಬದಲಾಯಿಸಿ]- ಬೈಲಿನ್, ಬರ್ನಾರ್ಡ್. ದ ಐಡಿಯಾಲಜಿಕಲ್ ಒರಿಜಿನ್ಸ್ ಆಫ್ ದ ಅಮೆರಿಕನ್ ರೆವಲ್ಯೂಷನ್. ಹಾರ್ವರ್ಡ್ ಯೂನಿವರ್ಸಿಟಿ ಪ್ರೆಸ್, 2006. ISBN 0-674-44301-2
- ಬೆಕರ್, ಕಾರ್ಲ್. ದ ಡಿಕ್ಲರೇಷನ್ ಆಫ್ ಇಂಡಿಪೆಂಡೆನ್ಸ್: ಎ ಸ್ಟಡಿ ಆನ್ ದ ಹಿಸ್ಟರಿ ಆಫ್ ಪೊಲಿಟಿಕಲ್ ಐಡಿಯಾಸ್ (1922)ಆನ್‌ಲೈನ್ ಆವೃತ್ತಿ Archived 2017-04-30 ವೇಬ್ಯಾಕ್ ಮೆಷಿನ್ ನಲ್ಲಿ.
- ಸ್ಯಾಮ್ಯುಯೆಲ್ ಫ್ಲ್ಯಾಗ್ ಬೆಮಿಸ್. ದ ಡಿಪ್ಲೊಮೆಸಿ ಆಫ್ ಅಮೆರಿಕನ್ ರೆವಲ್ಯೂಷನ್ (1935) ಆನ್‌ಲೈನ್ ಆವೃತ್ತಿ Archived 2007-06-22 ವೇಬ್ಯಾಕ್ ಮೆಷಿನ್ ನಲ್ಲಿ.
- ಬರ್ಕಿನ್, ಕ್ಯಾರಲ್.ರೆವಲ್ಯೂಷನರಿ ಮದರ್ಸ್: ವುಮೆನ್ ಇನ್ ದ ಸ್ಟ್ರಗಲ್ ಫಾರ್ ಅಮೆರಿಕಾಸ್ ಇಂಡಿಪೆಂಡೆನ್ಸ್ (2006)
- ಬ್ರೀನ್, T. H. ದ ಮಾರ್ಕೆಟ್‌ಪ್ಲೇಸ್ ಆಫ್ ರೆವಲ್ಯೂಷನ್: ಹೌ ಕನ್ಸ್ಯೂಮರ್ ಪಾಲಿಟಿಕ್ಸ್ ಶೇಪ್ಡ್ ಅಮೆರಿಕನ್ ಇಂಡಿಪೆಂಡೆನ್ಸ್ (2005)
- ಕ್ರೊ, ಜೆಫ್ರಿ J. ಮತ್ತು ಲ್ಯಾರಿ E. ಟೈಸ್ - ಸಂಪಾದಕರು. ದ ಸದರ್ನ್ ಎಕ್ಸ್‌ಪೀರಿಯನ್ಸ್ ಇನ್ ದ ಅಮೆರಿಕನ್ ರೆವಲ್ಯೂಷನ್ (1978)
- ಡೇವಿಸ್, ಡೇವಿಡ್ ಬ್ರಿಯಾನ್. ಇನ್‌ಹ್ಯೂಮನ್ ಬಾಂಡೇಜ್: ದ ರೈಸ್ ಆಂಡ್ ಫಾಲ್ ಆಫ್ ಸ್ಲೇವರಿ ಇನ್ ದ ನ್ಯೂ ವರ್ಲ್ಡ್. (2006)
- ಫಿಸ್ಕರ್, ಡೇವಿಡ್ ಹ್ಯಾಕೆಟ್. ವಾಷಿಂಗ್ಟನ್ಸ್ ಕ್ರಾಸಿಂಗ್ (2004). 1776 ದಂಡಯಾತ್ರೆ; ಪುಲಿಟ್ಜರ್ ಪ್ರೈಜ್. ISBN 0-195-17034-2
- ಗ್ರೀನಿ, ಜ್ಯಾಕ್ - ಸಂಪಾದಕರು. Archived 2008-05-27 ವೇಬ್ಯಾಕ್ ಮೆಷಿನ್ ನಲ್ಲಿ.ದ ರೈಂಟರ್‌ಪ್ರಿಟೇಶನ್ ಆಫ್ ದ ಅಮೆರಿಕನ್ ರೆವಲ್ಯೂಷನ್ (1968) Archived 2008-05-27 ವೇಬ್ಯಾಕ್ ಮೆಷಿನ್ ನಲ್ಲಿ. - ಪಾಂಡಿತ್ಯಪೂರ್ಣ ಲೇಖನಗಳ ಸಂಗ್ರಹ
- ಕರ್ಬರ್, ಲಿಂಡ K. ವುಮೆನ್ ಆಫ್ ದ ರಿಪಬ್ಲಿಕ್: ಇಂಟೆಲೆಕ್ಟ್ ಆಂಡ್ ಐಡಿಯಾಲಜಿ ಇನ್ ರೆವಲ್ಯೂಷನರಿ ಅಮೆರಿಕ (1979)
- ಮ್ಯಾಕ್‌ಕಲ್ಲಫ್, ಡೇವಿಡ್. 1776 (2005). ISBN 0-7432-2671-2
- ಮೋರಿಸ್, ರಿಚಾರ್ಡ್ B. - ಸಂಪಾದಕರು. Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ.ದ ಎರಾ ಆಫ್ ದ ಅಮೆರಿಕನ್ ರೆವಲ್ಯೂಷನ್ (1939); ಹಳೆಯ ಪಾಂಡಿತ್ಯಪೂರ್ಣ ಲೇಖನಗಳು Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ.
- ನ್ಯಾಶ್, ಗ್ಯಾರಿ B. ದ ಅನ್‌ನೋನ್ ಅಮೆರಿಕನ್ ರೆವಲ್ಯೂಷನ್: ದ ಅನ್ರೂಲಿ ಬರ್ತ್ ಆಫ್ ಡೆಮೊಕ್ರ್ಯಸಿ ಆಂಡ್ ದ ಸ್ಟ್ರಗಲ್ ಟು ಕ್ರಿಯೇಟ್ ಅಮೆರಿಕ . (2005). ISBN 0-670-03420-7
- ನೆವಿನ್ಸ್, ಅಲ್ಲನ್; ದ ಅಮೆರಿಕನ್ ಸ್ಟೇಟ್ಸ್ ಡ್ಯೂರಿಂಗ್ ಆಂಡ್ ಆಫ್ಟರ್ ದ ರೆವಲ್ಯೂಷನ್, 1775–1789 1927. ಆನ್‌ಲೈನ್ ಆವೃತ್ತಿ
- ನಾರ್ಟನ್, ಮೇರಿ ಬೆತ್. ಲಿಬರ್ಟಿಸ್ ಡಾಟರ್ಸ್: ದ ರೆವಲ್ಯೂಷನರಿ ಎಕ್ಸ್‌ಪೀರಿಯನ್ಸ್ ಆಫ್ ಅಮೆರಿಕನ್ ವುಮೆನ್, 1750–1800 (1980)
- ಪಾಲ್ಮರ್, ರಾಬರ್ಟ್ R. ದ ಏಜ್ ಆಫ್ ದ ಡೆಮೋಕ್ರೆಟಿಕ್ ರೆವಲ್ಯೂಷನ್: ದ ಪೊಲಿಟಿಕಲ್ ಹಿಸ್ಟರಿ ಆಫ್ ಯುರೋಪ್ ಆಂಡ್ ಅಮೆರಿಕ, 1760–1800. ಸಂಪುಟ 1 (1959) ಆನ್‌ಲೈನ್ ಆವೃತ್ತಿ
- ರೆಸ್ಕ್, ಜಾನ್ ಫಿಲಿಪ್ಸ್ ಮತ್ತು ವಾಲ್ಟರ್ ಸರ್ಜೆಂಟ್ - ಸಂಪಾದಕರು. ವಾರ್ ಆಂಡ್ ಸೊಸೈಟಿ ಇನ್ ದ ಅಮೆರಿಕನ್ ರೆವಲ್ಯೂಷನ್: ಮೊಬಿಲೈಸೇಶನ್ ಆಂಡ್ ಹೋಮ್ ಫ್ರಂಟ್ಸ್ (2006)
- ರಾತ್‌ಬಾರ್ಡ್, ಮುರ್ರೆ, ಕನ್ಸೀವ್ಡ್ ಇನ್ ಲಬರ್ಟಿ (2000), ಸಂಪುಟ III: ಅಡ್ವಾನ್ಸ್ ಟು ಕ್ರಾಂತಿ, 1760–1775 ಮತ್ತು ಸಂಪುಟ IV: ದ ರೆವಲ್ಯೂಷನರಿ ವಾರ್, 1775–1784 . ISBN 0-945466-26-9.
- ಸ್ಯಾವಸ್, ಥಿಯೋಡೋರ್ ಮತ್ತು ಡ್ಯಾಮರಾನ್, J. ಡೇವಿಡ್. ಎ ಗೈಡ್ ಟು ದ ಬ್ಯಾಟಲ್ಸ್ ಆಫ್ ದ ಅಮೆರಿಕನ್ ರೆವಲ್ಯೂಷನ್ . ಸ್ಯಾವಸ್ ಬೀಟೈ LLC. El ಡೊರ್ಯಾಡೊ ಹಿಲ್ಸ್. ಮಾರ್ಚ್ 2006. ISBN 1-932714-12-X
- ಸ್ಕೆಕ್ಟರ್, ಬ್ಯಾರ್ನೆಟ್. ದ ಬ್ಯಾಟಲ್ ಫಾರ್ ನ್ಯೂಯಾರ್ಕ್: ದ ಸಿಟಿ ಅಟ್ ದ ಹಾರ್ಟ್ ಆಫ್ ದ ಅಮೆರಿಕನ್ ರೆವಲ್ಯೂಷನ್ . ವಾಕರ್ & ಕಂಪೆನಿ. ನ್ಯೂಯಾರ್ಕ್. ಅಕ್ಟೋಬರ್ 2002. ISBN 0-8027-1374-2
- ಶ್ಯಾಂಕ್‌ಮ್ಯಾನ್, ಆಂಡ್ರಿವ್. ಕ್ರೂಸಿಬಲ್ ಆಫ್ ಅಮೆರಿಕನ್ ಡೆಮಾಕ್ರಸಿ: ದ ಸ್ಟ್ರಗಲ್ ಟು ಫ್ಯೂಸ್ ಎಗಲಿಟ್ಯಾರಿಯಾನಿಸಮ್ ಆಂಡ್ ಕ್ಯಾಪಿಟಲಿಸಂ ಇನ್ ಜೆಫ್ಫೆರ್ಸನಿಯನ್ ಪೆನ್ಸಿಲ್ವೇನಿಯಾ . ಯೂನಿವರ್ಸಿಟಿ ಪ್ರೆಸ್ ಆಫ್ ಕ್ಯಾನ್ಸಾಸ್, 2004.
- ವ್ಯಾನ್ ಟೈನ್, ಕ್ಲಾಡೆ ಹ್ಯಾಲ್‌ಸ್ಡೆಡ್. ಅಮೆರಿಕನ್ ಲೋಯಲಿಸ್ಟ್ಸ್: ದ ಲಾಯಲಿಸ್ಟ್ಸ್ ಇನ್ ದ ಅಮೆರಿಕನ್ ರೆವಲ್ಯೂಷನ್ (1902)
- ವೋಲೊ, ಜೇಮ್ಸ್ M. ಮತ್ತು ಡೊರತಿ ಡೆನ್ನೀನ್ ವೋಲೊ. ಡೈಲಿ ಲೈಫ್ ಡ್ಯೂರಿಂಗ್ ದ ಅಮೆರಿಕನ್ ರೆವಲ್ಯೂಷನ್ (2003)
- ವಾಲ್ಕೆ, ಜಾನ್ C. - ಸಂಪಾದಕರು. ದ ಕಾಸಸ್ ಆಫ್ ದ ಅಮೆರಿಕನ್ ರೆವಲ್ಯೂಷನ್ (1967) ಲೇಖನಗಳು
- ವುಡ್, ಗೋರ್ಡನ್ S. ದ ರೇಡಿಕ್ಯಾಲಿಸಂ ಆಫ್ ದ ಅಮೆರಿಕನ್ ರೆವಲ್ಯೂಷನ್: ಹೌ ಎ ರೆವಲ್ಯೂಷನ್ ಟ್ರಾನ್ಸ್‌ಫೋರ್ಮ್ಡ್ ಎ ಮೊನಾರ್ಕಿಕಲ್ ಸೊಸೈಟಿ ಇನ್ಟು ಎ ಡೆಮೋಕ್ರಟಿಕ್ ಒನ್ ಅನ್‌ಲೈಕ್ ಎನಿ ದಾಟ್ ಹ್ಯಾಡ್ ಎವರ್ ಎಕ್ಸಿಸ್ಟೆಡ್ . ಆಲ್‌ಫ್ರೆಡ್ A. ಕ್ನಾಫ್, 1992.
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಅಮೆರಿಕಾದ ಕ್ರಾಂತಿಗೆ ಕಾಂಗ್ರೆಸ್ ಗೈಡ್ನ ಲೈಬ್ರರಿ
- ಪಿಕ್ಚರ್ಸ್ ಆಫ್ ರೆವಲ್ಯೂಷನರಿ ವಾರ್: ಸೆಲೆಕ್ಟ್ ಆಡಿಯೊವಿಶ್ವಲ್ ರೆಕಾರ್ಡ್ಸ್ - ಅನೇಕ ಮಿಲಿಟರಿಯಿಲ್ಲದ-ಘಟನೆಗಳನ್ನು ಮತ್ತು ಭಾವಚಿತ್ರಗಳನ್ನೊಳಗೊಂಡ ನ್ಯಾಷನಲ್ ಆರ್ಕಿವ್ಸ್ ಆಂಡ್ ರೆಕಾರ್ಡ್ಸ್ ಅಡ್ಮಿನಿಸ್ಟ್ರೇಶನ್ ಸಂಗ್ರಹಿಸಿದ ಚಿತ್ರಗಳು
- ಅಮೆರಿಕನ್ ರೆವಲ್ಯೂಷನ್ ಡಿಜಿಟಲ್ ಲರ್ನಿಂಗ್ ಪ್ರೋಜೆಕ್ಟ್ Archived 2007-02-07 ವೇಬ್ಯಾಕ್ ಮೆಷಿನ್ ನಲ್ಲಿ., ನ್ಯೂಯಾರ್ಕ್ ಹಿಸ್ಟೋರಿಕಲ್ ಸೊಸೈಟಿ
- PBS ಟೆಲಿವಿಷನ್ ಸರಣಿ Archived 2008-04-29 ವೇಬ್ಯಾಕ್ ಮೆಷಿನ್ ನಲ್ಲಿ.
- ಸ್ಮಿತ್ಸೋನಿಯನ್ ಸ್ಟಡಿ ಯುನಿಟ್ ಆನ್ ರೆವಲ್ಯೂಷನರಿ ಮನಿ
- ದ ಅಮೆರಿಕನ್ ರೆವಲ್ಯೂಷನ್: ಲೈಟಿಂಗ್ ಫ್ರೀಡಮ್ಸ್ ಫ್ಲೇಮ್ - US ನ್ಯಾಷನಲ್ ಪಾರ್ಕ್ ಸರ್ವಿಸ್ ವೆಬ್ಸೈಟ್
- ಹಾಲ್ಡಿಮಂಡ್ ಕಲೆಕ್ಷನ್ - ಪ್ರಮುಖ ನಿಯಮಗಳ ಯುದ್ಧಕ್ಕೆ ಸಂಬಂಧಿಸಿದ ಪತ್ರಗಳು ಸಂಪೂರ್ಣವಾಗಿ ಅನುಕ್ರಮಣಿಯಲ್ಲಿ ಸೇರಿಸಲಾಗಿದೆ
- "ಮಿಲಿಟರಿ ಹಿಸ್ಟರಿ ಆಫ್ ರೆವಲ್ಯೂಷನ್" - ರಿಚಾರ್ಡ್ ಜೆನ್ಸನ್ನ ಲೇಖನ Archived 2011-05-14 ವೇಬ್ಯಾಕ್ ಮೆಷಿನ್ ನಲ್ಲಿ. - ದಾಖಲೆಗಳು, ನಕ್ಷೆಗಳು ಮತ್ತು URLಗಳೊಂದಿಗೆ ಸಂಬಂಧಹೊಂದಿದೆ
- ಅಮೆರಿಕನ್ ಇಂಡಿಪೆಂಡೆನ್ಸ್ ಮ್ಯೂಸಿಯಂ
- ಬ್ಲ್ಯಾಕ್ ಲೋಯಲಿಸ್ಟ್ ಹೆರಿಟೇಜ್ ಸೊಸೈಟಿ
- ಅಮೆರಿಕಾದ ಕ್ರಾಂತಿಗೆ ಸ್ಪ್ಯಾನಿಶ್ ಮತ್ತು ಲ್ಯಾಟಿನ್ ಅಮೆರಿಕಾದ ಕೊಡುಗೆ
- ಅಮೆರಿಕನ್ ಆರ್ಕಿವ್ಸ್: ಡಾಕ್ಯುಮೆಂಟ್ಸ್ ಆಫ್ ದ ಅಮೆರಿಕನ್ ರೆವಲ್ಯೂಷನ್ Archived 2008-05-12 ವೇಬ್ಯಾಕ್ ಮೆಷಿನ್ ನಲ್ಲಿ. - ನಾರ್ತರ್ನ್ ಇಲಿನೋಯಸ್ ಯೂನಿವರ್ಸಿಟಿ ಲೈಬ್ರರೀಸ್
- ದ ಅಮೆರಿಕನ್ ರೆವಲ್ಯೂಷನ್ ಆಸ್ ಎ ಪೀಪಲ್ಸ್ ವಾರ್ - ವಿಲಿಯಂ F. ಮರೀನಾ, ದ ಇಂಡಿಪೆಂಡೆಂಟ್ ಇನ್ಸ್ಟಿಟ್ಯೂಟ್ , ಜುಲೈ 1, 1976
- ಅಮೆರಿಕನ್ ರೆವಲ್ಯೂಷನ್ Archived 2009-06-28 ವೇಬ್ಯಾಕ್ ಮೆಷಿನ್ ನಲ್ಲಿ. - ಅಧ್ಯಯನ ಮಾರ್ಗದರ್ಶಿ ಮತ್ತು ಬೋಧನಾ ಮೂಲಗಳು
- AmericanRevolution.Org - ಕಾಲೇಜು-ಪೂರ್ವ ಐತಿಹಾಸಿಕ ಶೈಕ್ಷಣಿಕ ಸಂಸ್ಥೆಗಳ ಮೂಲ
- Pages using the JsonConfig extension
- Pages using ISBN magic links
- Articles with unsourced statements from February 2010
- Wikipedia articles needing clarification from February 2009
- Articles with invalid date parameter in template
- All accuracy disputes
- Articles with disputed statements from August 2008
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with unsourced statements from April 2010
- Articles with unsourced statements from December 2009
- Pages containing citation needed template with deprecated parameters
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages using country topics with unknown parameters
- ಅಮೆರಿಕಾದ ಕ್ರಾಂತಿ
- 1770ರ ದಶಕಗಳು
- 1780ರ ದಶಕಗಳು
- ದಾರ್ಶನಿಕ ಚಳವಳಿ
- 18ನೇ-ಶತಮಾನದ ಕ್ರಾಂತಿಗಳು
- 18ನೇ-ಶತಮಾನದ ದಂಗೆಕೋರರು
- ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 18ನೇ ಶತಮಾನ
- ಅಮೇರಿಕ ಸಂಯುಕ್ತ ಸಂಸ್ಥಾನದ ಇತಿಹಾಸ
- ಅಮೇರಿಕ ಸಂಯುಕ್ತ ಸಂಸ್ಥಾನ
- ಇತಿಹಾಸ