ವಿಷಯಕ್ಕೆ ಹೋಗು

ಬಾಕ್ಸೈಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
QEMSCAN mineral maps of bauxite ore-forming pisoliths
Bauxite with core of unweathered rock
Bauxite output in 2005
One of the world's largest Bauxite mines in Weipa, Australia
Bauxite, in Les Baux-de-Provende, France

ಬಾಕ್ಸೈಟ್ ದು ಅಲ್ಯುಮಿನಿಯಮ್‍ನ ಉತ್ಪಾದನೆಯಲ್ಲಿ ಬಳಕೆಯಾಗುವ ಅದಿರು.ಇದನ್ನು ಘರ್ಷಕಗಳ (abrasives) ಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ.ಉಕ್ಕು ಕರಗಿಸುವ ಕುಲುಮೆಗಳ ತಯಾರಿಯಲ್ಲಿ ಬಾಕ್ಸೈಟ್ ಮಿಶ್ರಿತ ಜೇಡಿಮಣ್ಣನ್ನು ಉಪಯೋಗಿಸುತ್ತಾರೆ.ಔಷದಗಳ ತಯಾರಿಯಲ್ಲಿ ಬಳಸುವ ಪಟಿಕ(Alum) ಇದರ ಉಪ ಉತ್ಪನ್ನವಾಗಿದೆ.ಇದು ಪ್ರಥಮ ಬಾರಿಗೆ ಪತ್ತೆಯಾದ ಸ್ಥಳವಾದ ಪ್ರಾನ್ಸ್ ನ ಲೆಸ್ ಬಾಕ್ಸ್ (Les Baux)ನ ಹೆಸರು ಇದರ ಹೆಸರಿನಲ್ಲಿ ಸೇರಿಕೊಂಡಿದೆ. ಬಾಕ್ಸೈಟ್‍ನಲ್ಲಿ ಮುಖ್ಯವಾಗಿ ಅಲ್ಯುಮಿನಿಯಮ್ ಹೈಡ್ರಾಕ್ಸೈಡ್ ಇರುತ್ತದೆ. ಹೆಚ್ಚಿನ ಬಾಕ್ಸೈಟ್ ನಲ್ಲಿ ೩೦ ರಿಂದ ೬೦ ಶೇಕಡಾ ಅಲ್ಯುಮಿನಿಯಮ್ ಇದ್ದು,೧೨ ರಿಂದ ೩೦ ಶೇಕಡಾ ನೀರು ಇರುತ್ತದೆ. ಅದರಲ್ಲಿರುವ ಇತರ ಸಂಯುಕ್ತಗಳ ಮೇಲೆ ಇದರ ಬಣ್ಣ ಕಡು ಕೆಂಪಿನಿಂದ ಕೆಂಪು, ಗುಲಾಬಿ ಅಥವಾ ಬಿಳಿ ಬಣ್ಣವಿರುತ್ತದೆ.

ಉತ್ಪಾದನೆ

[ಬದಲಾಯಿಸಿ]

ಬಾಕ್ಸೈಟ್ ಉದ್ಯಮದಲ್ಲಿ ಆಸ್ತ್ರೇಲಿಯ ಮುಂಚೂಣಿಯಲ್ಲಿದೆ.ವಿವಿಧ ದೇಶಗಳಲ್ಲಿ ಲಭ್ಯವಿರುವ ಅದಿರಿನ ಪ್ರಮಾಣ, ಉತ್ಪಾದನೆ ಈ ಕೆಳಗಿನ ತಖ್ತೆಯಲ್ಲಿದೆ.

೨೦೦೮ರಲ್ಲಿ ಅಂದಾಜಿಸಲಾದ ಒಟ್ಟು ಬಾಕ್ಸೈಟ್ ಮೀಸಲು reserves x೧೦೦೦ ಟನ್
Country Mine production Reserves Reserve base
2007 2008
 ಗಿನಿ 18,000 18,000 7,400,000 8,600,000
 ಆಸ್ಟ್ರೇಲಿಯಾ 62,400 63,000 5,800,000 7,900,000
 ವಿಯೆಟ್ನಾಮ್ 30 30 2,100,000 5,400,000
 Jamaica 14,600 15,000 2,000,000 2,500,000
 Brazil 24,800 25,000 1,900,000 2,500,000
 ಗಯಾನ 1,600 1,600 700,000 900,000
 ಭಾರತ 19,200 20,000 770,000 1,400,000
 ಚೀನಾ 30,000 32,000 700,000 2,300,000
 Greece 2,220 2,200 600,000 650,000
 ಇರಾನ್ 500[]
 ಸುರಿನಾಮ್ 4,900 4,500 580,000 600,000
 ಕಜಾಕಸ್ಥಾನ್ 4,800 4,800 360,000 450,000
 ವೆನೆಜುವೆಲಾ 5,900 5,900 320,000 350,000
 ರಷ್ಯಾ 6,400 6,400 200,000 250,000
 ಅಮೇರಿಕ ಸಂಯುಕ್ತ ಸಂಸ್ಥಾನ NA NA 20,000 40,000
Other countries 7,150 6,800 3,200,000 3,800,000
World total (rounded) 202,000 205,000 27,000,000 38,000,000

ಬಾಕ್ಶೈಟ್‍ನ ಸಂಸ್ಕರಣೆಗೆ ಅಪಾರ ಪ್ರಮಾಣದ ವಿದ್ಯುತ್ ಬೇಕಾಗುವುದರಿಂದ ಹಲವಾರು ಬಡ ದೇಶಗಳು ಅದಿರನ್ನೇ ನೇರವಾಗಿ ರಫ್ತು ಮಾಡುತ್ತವೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2008-07-01. Retrieved 2012-06-25.