ಏಲಕ್ಕಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Green cardamom
True cardamom
Elettaria cardamomum - Köhler–s Medizinal-Pflanzen-057.jpg
True Cardamom
(Elettaria cardamomum)
1896 illustration[೧]
Cardamom pods - Green BNC.jpg
ವೈಜ್ಞಾನಿಕ ವರ್ಗೀಕರಣ
Kingdom: Plantae
(unranked): Angiosperms
(unranked): Monocots
(unranked): Commelinids
Order: Zingiberales
Family: Zingiberaceae
Genus: Elettaria
Species: E. cardamomum
ದ್ವಿಪದ ಹೆಸರು
Elettaria cardamomum
(Carolus Linnaeus
Synonyms
 • Amomum cardamomum L.
 • Amomum repens Sonn., illegitimate superfluous name
 • Amomum racemosum Lam., illegitimate superfluous name
 • Alpinia cardamomum (L.) Roxb.
 • Cardamomum officinale Salisb.
ಹಸಿರು ಮತ್ತು ಕಪ್ಪು ಏಲಕ್ಕಿ

ಏಲಕ್ಕಿ ಒಂದು ಸಾಂಬಾರು ಬೆಳೆ. ಇದನ್ನು ಔಷಧೀಯ ಸಸ್ಯವಾಗಿಯೂ ಉಪಯೋಗಿಸುತ್ತಾರೆ. ಇದು ತನ ಪರಿಮಳದಿಂದಾಗಿ ಜಗತ್ಪ್ರಸಿದ್ಧವಾಗಿದೆ. ಏಲಕ್ಕಿಯನ್ನು ಹೆಚ್ಚಾಗಿ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಪರಿಮಳ ಹಾಗೂ ಸುವಾಸನೆಗಾಗಿ ಉಪಯೋಗಿಸಲಾಗುತ್ತದೆ. ಇದನ್ನು ಕಾಫಿ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯಲಾಗುತ್ತದೆ.

ಸಸ್ಯ ಪರಿಚಯ[ಬದಲಾಯಿಸಿ]

ಏಲಕ್ಕಿಯ ವೈಜ್ಞಾನಿಕ ಹೆಸರು ಎಲೆಟ್ಟೇರಿಯ ಕಾರ್ಡಮೊಮಂ. ಇದು ಝಿಂಜಿಬರೇಸಿ ಕುಟುಂಬಕ್ಕೆ ಸೇರಿದೆ.

ಏಲಕ್ಕಿ ಗಿಡ

ಇವು ಬಹುವಾರ್ಶಿಕ ಸಸ್ಯ ಮೂಲಿಕೆಗಳು. ಕಾಂಡವು ಎಲೆಗಳಿಂದ ಕೂಡಿದ್ದು,ಮೃದುವಾಗಿದೆ. ಎಲೆಯು ಮೂಲ ಬೇರಿನ ಬಳಿ ಅಥವಾ ಕಾಂಡದ ಮೇಲೆ ಬೆಳೆಯುತ್ತದೆ. ಇದರ ಹೂವುಗಳು ದ್ವಿಲಿಂಗಿಗಳಾಗಿರುತ್ತವೆ.

ಏಲಕ್ಕಿಯನ್ನು ಮಲೆನಾಡು ಪ್ರದೇಶಗಳಾದ ಚಿಕ್ಕಮಗಳೂರು, ಮೂಡಿಗೆರೆ, ಕೊಡಗು ಮತ್ತು ಸಕಲೇಶಪುರಗಳಲ್ಲಿ ಬೆಳೆಯಲಾಗುತ್ತದೆ.

ಇತರ ಹೆಸರುಗಳು[ಬದಲಾಯಿಸಿ]

ಬಂಗಾಳಿ- ಚೋಟೀಲಾಯಿಚಿ

ಗುಜರಾತಿ- ಇಲಾಯಿಚಿ

ಹಿಂದಿ- ಚೋಟಿ ಇಲಾಯಿಚಿ

ಕಾಶ್ಮೀರಿ- ಆಲ್‍ಬುದು ಆಲ್

ಮಲಯಾಳಂ- ಏಳತ್ತರಿ

ಮರಾಠಿ- ವೆಲ್‍ಚಿ

ಒಡಿಯಾ- ಅಲಿಯಾಯಿಚಿ

ತಮಿಳು- ಏಳಕ್ಕಾಯ್

ತೆಲುಗು-ಏಳಕ್ಕಯಿಲು[೨]

ವಿಧಗಳು[ಬದಲಾಯಿಸಿ]

ಏಲಕ್ಕಿ

ದೊಡ್ಡ ಏಲಕ್ಕಿ[ಬದಲಾಯಿಸಿ]

ಇದರ ವೈಜ್ಞಾನಿಕ ಹೆಸರು ಎಲೆಟ್ಟೇರಿಯ ಕಾರ್ಡಮೊಮಂ ಮೇಜರ್[೩]. ಸಣ್ಣ ಏಲಕ್ಕಿಯ ಮೂಲವು ದೊಡ್ಡ ಏಲಕ್ಕಿ ಎಂದು ಸಸ್ಯವಿಜ್ಞಾನಿಗಳು ಹೇಳುತ್ತಾರೆ. ಪಶ್ಚಿಮಘಟ್ಟ ಪ್ರದೇಶದಲ್ಲಿ, ಶ್ರೀಲಂಕಾದ ಕಾಡುಗಳಲ್ಲಿ ವನ್ಯ ಸಸ್ಯವಾಗಿ ಬೆಳೆಯುತ್ತದೆ. ಇದರ ಗಿಡವು ೯ ಅಡಿಯಷ್ಟು ಎತ್ತರ ಬೆಳೆಯುತ್ತದೆ. ಇದರ ಸುವಾಸನೆ ಸಣ್ಣ ಏಲಕ್ಕಿಗಿಂತ ಕಡಿಮೆ.

ಸಣ್ಣ ಏಲಕ್ಕಿ[ಬದಲಾಯಿಸಿ]

ನಾವು ಸಾಮಾನ್ಯವಾಗಿ ಬಳಸುವ ಏಲಕ್ಕಿ ಇದಾಗಿದೆ. ಇದರ ಬೀಜಗಳು ಗಾತ್ರದಲ್ಲಿ ತುಂಬಾ ಸಣ್ಣಗಿರುತ್ತದೆ. ಸಾಂಬಾರ ಪದಾರ್ಥವಾಗಿ ಇದನ್ನು ಉಪಯೋಗಿಸುತ್ತಾರೆ.

ಹವಾಗುಣ ಮತ್ತು ಮಣ್ಣು[ಬದಲಾಯಿಸಿ]

ಸಮುದ್ರ ಮಟ್ಟದಿಂದ ೬೦೦ ರಿಂದ ಸುಮಾರು ೧೫೦೦ ಮೀಟರ್ ಎತ್ತರದವರೆಗಿನ ಪ್ರದೇಶದಲ್ಲಿ ಏಲಕ್ಕಿ ಬೆಳೆಯನ್ನು ಬೆಳೆಯಬಹುದಾಗಿದೆ. ವಾರ್ಷಿಕ ಮಳೆಯು ೨೫೦ ರಿಂದ ೩೦೦ ಸೆಂ.ಮೀ. ಇರುವ ಪ್ರದೇಶದಲ್ಲಿ ಉತ್ತಮ ಇಳುವರಿ ದೊರೆಯುತ್ತದೆ. ಬಿಸಿಲು ನೇರವಾಗಿ ಗಿಡದ ಮೇಲೆ ಬೀಳದಂತಹ ವಾತಾವರಣದಲ್ಲಿ ಈ ಗಿಡವನ್ನು ಬೆಳೆಸುವುದು ಉತ್ತಮ. ವಾತಾವರಣದ ಉಷ್ಣತೆಯು ೧೨ ರಿಂದ ೩೫ ಡಿಗ್ರಿ ಉಷ್ಣಾಂಶವನ್ನು ಹೊಂದಿರುವುದು ಈ ಬೆಳೆಗೆ ಸೂಕ್ತ.

ನೀರು ಸರಿಯಾಗಿ ಹರಿದುಹೊಗುವಂತಹ ಕೆಂಪು ಮಣ್ಣು, ಮೆಕ್ಕಲುಮಣ್ಣು ಏಲಕ್ಕಿ ಕೃಷಿಗೆ ಒಳ್ಳೆಯದು. ಸಾವಯವ ಪದಾರ್ಥಗಳು ಹೇರಳವಾಗಿದ್ದರೆ ಏಲಕ್ಕಿಯು ಉತ್ತಮ ಇಳುವರಿಯನ್ನು ನೀಡುತ್ತದೆ. ಇದು ಹೆಚ್ಚಾಗಿ ನೆರಳನ್ನು ಬಯಸುವುದರಿಂದ ಮರದ ಅಡಿಯಲ್ಲಿ ಬೆಳೆಸುವುದು ಸೂಕ್ತ. ಹೆಚ್ಚಾಗಿ ಇದನ್ನು ಉಪಬೆಳೆಯಾಗಿ ಬೆಳೆಯುತ್ತಾರೆ.

ಉಪಯೋಗಗಳು[ಬದಲಾಯಿಸಿ]

ಏಲಕ್ಕಿಯನ್ನು ಔಷಧವಾಗಿ ಉಪಯೋಗಿಸುತ್ತಾರೆ. ಹಾಗೂ ಸಾಂಬಾರ ಪದಾರ್ಥವಾಗಿಯೂ ಉಪಯೋಗಿಸುತ್ತಾರೆ. ಫ್ಲೂವಿನಂತಹ ಜ್ವರಕ್ಕೆ ಇದನ್ನು ಔಷಧವಾಗಿ ಬಳಸುತ್ತಾರೆ. ದನಗಳಲ್ಲಿ ಹೊಟ್ಟೆ ಉಬ್ಬರ ಸಮಸ್ಯೆಯು ಕಂಡುಬಂದಾಗಲು ಇದರ ಬಳಕೆಯನ್ನು ಮಾಡಬಹುದಾಗಿದೆ. ಮಕ್ಕಳ ಬಿಕ್ಕಳುವಿಕೆಗೆ ಇದನ್ನು ಸಕ್ಕರೆಯೊಂದಿಗೆ ಉಪಯೋಗಿಸಬಹುದು. ಅಜೀರ್ಣ ಮತ್ತು ವಾಕರಿಕೆಗೂ ಔಷಧವಾಗಿ ಬಳಸುತ್ತಾರೆ. ಅನಾರೋಗ್ಯದ ಸಂದರ್ಭದಲ್ಲಿನ ಬಾಯಿಯ ವಾಸನೆಗೆ ಏಲಕ್ಕಿಯನ್ನು ಬಾಯಿಯಲ್ಲಿ ಇಟ್ಟುಕೊಳ್ಳಬಹುದು. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಏಲಕ್ಕಿಯನ್ನು ಬಳಸುತ್ತಾರೆ[೪].

ಉಲ್ಲೇಖ[ಬದಲಾಯಿಸಿ]

 1. Elettaria cardamomum - Köhler–s Medizinal-Pflanzen - Franz Eugen Köhler, Köhler's Medizinal-Pflanzen
 2. http://www.plantnames.unimelb.edu.au/Sorting/Elettaria.html
 3. http://www.henriettes-herb.com/eclectic/pereira/elettaria-majo.html
 4. https://sunwarrior.com/healthhub/15-health-benefits-of-cardamom

ಬಾಹ್ಯಸಂಪರ್ಕಗಳು[ಬದಲಾಯಿಸಿ]

 1. http://ayurvediccommunity.com
 2. https://npgsweb.ars-grin.gov/gringlobal/taxonomylist.aspx?category=species&type=genus&value=a%20genus&id=4169

Media related to Elettaria cardamomum at Wikimedia Commons

ಟೆಂಪ್ಲೇಟು:Wikispecies inline

University of Melbourne: Sorting Elettaria names Germplasm Resources Information Network: Elettaria

"https://kn.wikipedia.org/w/index.php?title=ಏಲಕ್ಕಿ&oldid=691060" ಇಂದ ಪಡೆಯಲ್ಪಟ್ಟಿದೆ