ಕಟಾವು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಟಾವು ಮಾಡುತ್ತಿರುವುದು

ಕಟಾವು ಮಾಡುವುದು ಎಂದರೆ ಹೊಲಗದ್ದೆಗಳಿಂದ ಕಳಿತ ಬೆಳೆಯನ್ನು ಸಂಗ್ರಹಿಸುವ ಪ್ರಕ್ರಿಯೆ.ಕೊಯ್ಲು ಎಂದರೆ ಸಾಮಾನ್ಯವಾಗಿ ಕುಡುಗೋಲು, ಕುಯಿಲುಗತ್ತಿ, ಅಥವಾ ಕಟಾವು ಯಂತ್ರವನ್ನು ಬಳಸಿ ಕಟಾವಿಗಾಗಿ ಧಾನ್ಯ ಅಥವಾ ದ್ವಿದಳ ಧಾನ್ಯಗಳನ್ನು ಕತ್ತರಿಸುವುದು. ಕನಿಷ್ಠತಮ ಯಾಂತ್ರಿಕೀಕರಣವಿರುವ ಹೆಚ್ಚು ಚಿಕ್ಕ ಹೊಲಗಳಲ್ಲಿ, ಕಟಾವು ಬೆಳೆಯುವ ಋತುವಿನ ಅತ್ಯಂತ ಶ್ರಮಿಕ ಪ್ರಧಾನ ಚಟುವಟಿಕೆಯಾಗಿರುತ್ತದೆ. ದೊಡ್ಡ ಯಾಂತ್ರೀಕರಿಸಿದ ಗದ್ದೆಗಳಲ್ಲಿ, ಕಟಾವು ಅತ್ಯಂತ ದುಬಾರಿ ಮತ್ತು ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳನ್ನು ಬಳಸುತ್ತದೆ, ಉದಾಹರಣೆಗೆ ಸಂಯುಕ್ತ ಕಟಾವು ಯಂತ್ರ. ಪ್ರಕ್ರಿಯಾ ಯಾಂತ್ರೀಕರಣವು ಬಿತ್ತನೆ ಮತ್ತು ಕಟಾವು ಪ್ರಕ್ರಿಯೆ ಎರಡರ ಕಾರ್ಯಕಾರಿತ್ವವನ್ನು ಹೆಚ್ಚಿಸಿದೆ. ಸೌಮ್ಯ ಹಿಡಿತವನ್ನು ಅನುಕರಿಸಲು ಸಾಗಣೆಪಟ್ಟಿಗಳು ಮತ್ತು ಸಾಮೂಹಿಕ ಸಾರಿಗೆಯನ್ನು ಬಳಸುವ ವಿಶೇಷೀಕೃತ ಕಟಾವು ಉಪಕರಣಗಳು ಪ್ರತಿಯೊಂದು ಸಸಿಯನ್ನು ಕೈಯಿಂದ ತೆಗೆಯುವ ಶಾರೀರಿಕ ಕ್ರಿಯೆ ಬದಲಾಗಿ ಬಳಸಲ್ಪಡುತ್ತವೆ.[೧] ಕಟಾವಿನ ಮುಕ್ತಾಯವು ಬೆಳೆಯುವ ಋತುವಿನ, ಅಥವಾ ಒಂದು ನಿರ್ದಿಷ್ಟ ಬೆಳೆಯ ಬೆಳೆಯುವ ಆವರ್ತದ ಅಂತ್ಯವನ್ನು ಗುರುತಿಸುತ್ತದೆ, ಮತ್ತು ಈ ಘಟನೆಯ ಸಾಮಾಜಿಕ ಮಹತ್ವವು ಇದನ್ನು ಕಾಲಿಕ ಆಚರಣೆಗಳ ಕೇಂದ್ರಬಿಂದುವನ್ನಾಗಿ ಮಾಡುತ್ತದೆ, ಉದಾಹರಣೆಗೆ ಅನೇಕ ಧರ್ಮಗಳಲ್ಲಿ ಕಂಡುಬರುವ ಸುಗ್ಗಿಹಬ್ಬಗಳು.

ಬೆಳೆ ವೈಫಲ್ಯ (ಕಟಾವು ವೈಫಲ್ಯ ಎಂದೂ ಕರೆಯಲ್ಪಡುತ್ತದೆ) ಎಂದರೆ ಅಪೇಕ್ಷೆಗೆ ಹೋಲಿಸಿದರೆ ಅನುಪಸ್ಥಿತ ಅಥವಾ ಬಹಳವಾಗಿ ಕಡಿಮೆಯಾದ ಬೆಳೆ ಇಳುವರಿ. ಇದರ ಕಾರಣಗಳೆಂದರೆ ಯಾವುದೋ ರೀತಿಯಲ್ಲಿ ಸಸ್ಯಗಳು ಬಾಧಿತವಾಗಿ ನಾಶವಾಗುವುದು, ಸಾಯುವುದು, ಹಾನಿಗೊಳ್ಳುವುದು. ಹೀಗಾಗಿ ಅವುಗಳಲ್ಲಿ ನಿರೀಕ್ಷಿತ ಆಧಿಕ್ಯದಲ್ಲಿ ತಿನ್ನಲರ್ಹ ಹಣ್ಣು, ಬೀಜಗಳು ಅಥವಾ ಎಲೆಗಳು ರೂಪಗೊಳ್ಳುವುದು ವಿಫಲವಾಗುತ್ತದೆ. ಬೆಳೆ ವೈಫಲ್ಯವು ಸಸ್ಯ ರೋಗದ ಆಸ್ಫೋಟನೆ, ಭಾರೀ ಮಳೆ, ಜ್ವಾಲಾಮುಖಿ ಸ್ಫೋಟಗಳು, ಬಿರುಗಾಳಿಗಳು, ಪ್ರವಾಹಗಳು, ಅಥವಾ ಬರದಂತಹ ದುರಂತ ರೂಪದ ಘಟನೆಗಳಿಂದ ಅಥವಾ ನಿಧಾನವಾದ ಮಣ್ಣಿನ ಸವೆತದ ಸಂಚಿತ ಪರಿಣಾಮಗಳು, ಬಹಳ ಹೆಚ್ಚಿನ ಮಣ್ಣಿನ ಲವಣತ್ವ, ಕ್ಷರಣ, ಸಾಮಾನ್ಯವಾಗಿ ಅತಿ ಭೂಜಲ ಬಳಕೆ (ನೀರಾವರಿಗಾಗಿ), ಅತಿ ರಸಗೊಬ್ಬರ ಬಳಕೆ, ಅಥವಾ ಅತಿಬಳಕೆಯ ಪರಿಣಾಮವಾಗಿ ಆಗುವ ಮರುಭೂಮಿಕರಣದಿಂದ ಉಂಟಾಗಬಹುದು.

ಉಲ್ಲೇಖಗಳು[ಬದಲಾಯಿಸಿ]

  1. "Belts For Seedling Harvesting - Belt Corporation of America". Belt Corporation of America (in ಅಮೆರಿಕನ್ ಇಂಗ್ಲಿಷ್). 2017-04-18. Archived from the original on 2017-08-24. Retrieved 2017-08-23.
"https://kn.wikipedia.org/w/index.php?title=ಕಟಾವು&oldid=1054011" ಇಂದ ಪಡೆಯಲ್ಪಟ್ಟಿದೆ