ಕೂರಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೂರಿಗೆಯು ಬೆಳೆಗಳಿಗೆ ಪ್ರತ್ಯೇಕ ಬೀಜಗಳನ್ನು ನಿಯಂತ್ರಿತ ಪ್ರಮಾಣಗಳಲ್ಲಿ ಅಳೆದು, ಅವುಗಳನ್ನು ಮಣ್ಣಿನ ನಿರ್ದಿಷ್ಟ ಸ್ಥಳದಲ್ಲಿ ಇರಿಸಿ, ಒಂದು ನಿರ್ದಿಷ್ಟ ಸರಾಸರಿ ಆಳದಲ್ಲಿ ಅವುಗಳನ್ನು ಮುಚ್ಚಿ, ಬಿತ್ತುವ ಉಪಕರಣ. ಇದು ಬೀಜವನ್ನು ಸಮವಾಗಿ ಇರಿಸಲಾಗುವುದನ್ನು ಖಚಿತಪಡಿಸುತ್ತದೆ. ಕೂರಿಗೆಯು ಬೀಜಗಳನ್ನು ಸಮಾನವಾದ ದೂರಗಳಲ್ಲಿ ಮತ್ತು ಸರಿಯಾದ ಆಳದಲ್ಲಿ ಬಿತ್ತಿ, ಬೀಜಗಳು ಮಣ್ಣಿನಿಂದ ಆವೃತವಾಗುವುದನ್ನು, ಪಕ್ಷಿಗಳಿಂದ ತಿನ್ನಲ್ಪಡುವುದರಿಂದ ರಕ್ಷಿತವಾಗುತ್ತವೆ ಮತ್ತು ಗಾಳಿಯಿಂದ ಹಾರಿಹೋಗಲ್ಪಡುವುದಿಲ್ಲ ಎಂದು ಖಚಿತಪಡಿಸುತ್ತದೆ. ಇದು ಸಸ್ಯಗಳು ಸಾಕಷ್ಟು ಬೆಳಕು, ಮಣ್ಣಿನಿಂದ ಪೋಷಕಾಂಶಗಳು ಮತ್ತು ನೀರನ್ನು ಪಡೆಯಲು ಅವಕಾಶ ನೀಡುತ್ತದೆ. ಕೂರಿಗೆಯನ್ನು ಪರಿಚಯಿಸುವುದಕ್ಕೆ ಮೊದಲು, ಬೀಜಗಳನ್ನು ಕೈಯಿಂದ ಬಿತ್ತುವುದು ಸಾಮಾನ್ಯ ಅಭ್ಯಾಸವಾಗಿತ್ತು. ಬೀಜಗಳು ಪೋಲಾಗುವುದರ ಜೊತೆಗೆ, ಬಿತ್ತನೆಯು ಸಾಮಾನ್ಯವಾಗಿ ನಿಖರವಾಗಿರುತ್ತಿರಲಿಲ್ಲ ಮತ್ತು ಬೀಜಗಳ ಕಳಪೆ ಹಂಚಿಕೆಗೆ ಕಾರಣವಾಗುತ್ತಿತ್ತು, ಪರಿಣಾಮವಾಗಿ ಉತ್ಪಾದಕತೆಯು ಕಡಿಮೆಯಾಗುತ್ತಿತ್ತು. ಕೂರಿಗೆಯ ಬಳಕೆಯು ಬೆಳೆ ಇಳುವರಿಯ ಪ್ರಮಾಣವನ್ನು (ಬಿತ್ತಿದ ಪ್ರತಿ ಬೀಜಕ್ಕೆ ಕೊಯ್ಲು ಮಾಡಿದ ಬೀಜಗಳು) ಒಂಭತ್ತು ಪಟ್ಟಿನಷ್ಟು ಸುಧಾರಿಸಬಲ್ಲದು.

"https://kn.wikipedia.org/w/index.php?title=ಕೂರಿಗೆ&oldid=890849" ಇಂದ ಪಡೆಯಲ್ಪಟ್ಟಿದೆ