ದೇವರಾಯನ ದುರ್ಗ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ದೇವರಾಯನದುರ್ಗ
ದೇವರಾಯನದುರ್ಗ ನಗರದ ಪಕ್ಷಿನೋಟ
ದೇವರಾಯನದುರ್ಗ
India-locator-map-blank.svg
Red pog.svg
ದೇವರಾಯನದುರ್ಗ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ತುಮಕೂರು
ನಿರ್ದೇಶಾಂಕಗಳು 13.375° N 77.213° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ

 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೭೨ ೧೪೬
 - +೦೮೧೬
 - ಕೆಎ-೦೬

ದೇವರಾಯನದುರ್ಗ ತುಮಕೂರಿನಿಂದ ೧೬ ಕಿ.ಮೀ. ದೂರದಲ್ಲಿದೆ. ತುಮಕೂರಿನಿಂದ ೧೦ ಕಿ.ಮೀ. ದಾಟಿದರೆ , ದೇವರಾಯನದುರ್ಗ ಕಾಡು ಗೋಚರಿಸುತ್ತದೆ.ಈ ಜಾಗ ಒಂದು ದಿನದ ಪ್ರವಾಸಕ್ಕೆ ಯೊಗ್ಯವಾದ ಸ್ಥಳ.ಹತ್ತಿರದಲ್ಲೆ ದುರ್ಗದಹಳ್ಳಿ ಎಂಬ ಹಳ್ಳಿಯಲ್ಲಿ ೮ನೆ ಶತಮಾನದ ಶಂಕರಾಚಾರ್ಯರು ಕಟ್ಟಿರುವ ಸುಂದರವಾದ ದೇವಾಲಯವಿದೆ. ಹಾಗಯೆ ಸಮೀಪದಲ್ಲಿ "ನಾಯಕನ ಕೆರೆ" ಎಂಬ ಸುಂದರ ಮತ್ತು ಮನೋಹರವಾದ ಕೆರೆ ಇದೆ.

ಇಲ್ಲಿನ ಬೆಟ್ಟದ ಮೇಲೆ ಯೋಗ ನರಸಿಂಹ ಮತ್ತು ಭೋಗ ನರಸಿಂಹರ ದೇವಾಲಯಗಳಿವೆ,ಹಳೆಯ ಕೋಟೆ,ಸೂರ್ಯಾಸ್ತ ನೋಡಲು ಸುಂದರಾವಾದ ಜಾಗ ಕೂಡ ಇದೆ.ದೇವರಾಯನದುರ್ಗದ ಸಮೀಪವಿರುವ ನಾಮದ ಚಿಲುಮೆ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ.


ದೇವರಾಯನ ದುರ್ಗದ ಕಾಡಿನಲ್ಲಿ ಚಿರತೆ, ಕಾಡು ಹಂದಿ, ಮುಳ್ಳು ಹಂದಿ, ಜಿಂಕೆ ಮುಂತಾದ ಪ್ರಾಣಿಗಳು ಕಂಡು ಬರುತ್ತವೆ. ಆದರೆ ಇದು ಅಭಯಾರಣ್ಯವಲ್ಲದಿದ್ದರಿಂದ ಕಾಣಲು ಸಿಗುವುದು ಅಪರೂಪ. ಇತ್ತೀಚಿನ ವರದಿ ಪ್ರಕಾರ ದೇವರಾಯನದುರ್ಗದಲ್ಲಿ ಹುಲಿ ಕೂಡ ಪತ್ತೆಯಾಗಿದೆ.

ದುರ್ಗದ ಮೇಲೆ ಸರ್ಕಾರದ ಪ್ರವಾಸಿ ಬಂಗಲೆಗಳಿವೆ. ಜಿಲ್ಲೆಯ ಪೋಲಿಸ್ ನಿಸ್ತಂತು ಜಾಲದ ನಿಯಂತ್ರಣ ಕೇಂದ್ರವೂ ಸಹ ಇದೆ. ಬೆಟ್ಟದ ತುದಿಯಿಂದ ನಿಂತು ನೋಡಿದರೆ ಸುಮಾರು ೨೫ ಕಿ.ಮೀ. ದೂರದಲ್ಲಿರುವ ಶಿವಗಂಗೆ ಬೆಟ್ಟ ಕಾಣುತ್ತದೆ. ಸುತ್ತಲೂ ಹತ್ತಾರು ಕೆರೆಗಳು ನೀರಿನಿಂದ ತುಂಬಿರುವುದೂ ಸಹ ಗೋಚರಿಸುತ್ತದೆ.

ಇಲ್ಲಿನ ನರಸಿಂಹ ದೇವರ ಜಾತ್ರೆಯು ಬಹಳ ಪ್ರಸಿದ್ದ. ಪ್ರತಿ ವರ್ಷವೂ ಇಲ್ಲಿ ನೆಡೆಯುವ ಜಾತ್ರೆಗೆ ಸಾವಿರಾರು ಜನರು ಸೇರುತ್ತಾರೆ. ಹತ್ತಿರದಲ್ಲಿರುವ ದುರ್ಗದ ಹಳ್ಳಿಯಲ್ಲಿರುವ ಶ್ರೀ ವಿದ್ಯಾಶಂಕರ ಸ್ವಾಮಿಯ ದೇವಾಲಯವೂ ಬಹಳ ಸುಂದರವಾಗಿದೆ. ಈ ದೇವಾಲಯವು ನೂರಾರು ವರ್ಷಗಳ ಇತಿಹಾಸವನ್ನು ಹೊಂದಿದೆ, ಇದು ದೇವರಾಯನ ದುರ್ಗಕ್ಕೆ ಹೋಗುವ ದಾರಿಯಲ್ಲಿರುವ ನಾಮದ ಚಿಲುಮೆಗೆ ಕೇವಲ ೩ ಕಿ.ಮೀ ದೂರದಲ್ಲಿದೆ.

ದೇವರಾಯನದುರ್ಗದಲ್ಲಿ ನೋಡಬೇಕಾದ ಸ್ಥಳಗಳು.[ಬದಲಾಯಿಸಿ]

ಈ ಬೆಟ್ಟದ ಮೂರು ವಿಭಿನ್ನ ಎತ್ತರಗಳಲ್ಲಿ ಭೋಗ ನರಸಿಂಹ, ಯೋಗ ನರಸಿಂಹ ಮತ್ತು ಲಕ್ಷ್ಮಿ ನರಸಿಂಹ ಎಂಬ ಮೂರು ದೇವಾಲಯಗಳಿವೆ. ಭೋಗ ನರಸಿಂಹ ದೇವಾಲಯವು ಬೆಟ್ಟದ ಬುಡದಲ್ಲಿದೆ. ಯೋಗನರಸಿಂಹ ದೇವಾಲಯವು ಬೆಟ್ಟದ ತುದಿಯಲ್ಲಿ ಇದೆ. ಲಕ್ಷ್ಮಿ ನರಸಿಂಹ ದೇವಾಲಯವು ಬೆಟ್ಟದ ಮೊದಲ ಭಾಗದಲ್ಲಿ ಕಂಡು ಬರುತ್ತದೆ.

ಇಲ್ಲಿನ ಮತ್ತೊಂದು ಆಕರ್ಷಣೆ ನಾಮದ ಚಿಲುಮೆ. ಸ್ಥಳೀಯ ದಂತಕತೆಗಳ ಪ್ರಕಾರ ಶ್ರೀ ರಾಮನು ತನ್ನ ಬಿಲ್ಲಿನಿಂದ ಬಿಟ್ಟ ಬಾಣದಿಂದ ಚಿಮ್ಮಿದ ಚಿಲುಮೆಯೆ ಇದಂತೆ. ಭಕ್ತಾಧಿಗಳ ಪ್ರಕಾರ ಚಿಲುಮೆಯ ಬಳಿಯಲ್ಲಿ ಶ್ರೀ ರಾಮನ ಹೆಜ್ಜೆಗುರುತು ಇದೆಯಂತೆ. ಇಲ್ಲಿನ ಕಾಡಿನಲ್ಲಿನ ನರ್ಸರಿಯಲ್ಲಿ ಅಪರೂಪದ ಅಯುರ್ವೇದಿಕ ಗಿಡ ಮೂಲಿಕೆಗಳನ್ನು ಬೆಳೆಯಲಾಗಿದೆ. ಇಲ್ಲಿ ಶ್ರೀ ನರಸಿಂಹ ಜಯಂತಿ ಮತ್ತು ರಥೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸುತ್ತಾರೆ.

ದೇವರಾಯನದುರ್ಗವು ಬೆಂಗಳೂರಿನಿಂದ 65 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಸಮೀಪದ ರೈಲು ನಿಲ್ದಾಣವು ತುಮಕೂರಿನಲ್ಲಿದೆ. ಈ ಸ್ಥಳಕ್ಕೆ ಬಸ್ಸುಗಳ ಸೌಕರ್ಯವು ಉತ್ತಮವಾಗಿದೆ.