ಲಕ್ಷ್ಮಿ

ವಿಕಿಪೀಡಿಯ ಇಂದ
(ಲಕ್ಷ್ಮೀ ಇಂದ ಪುನರ್ನಿರ್ದೇಶಿತ)
Jump to navigation Jump to search
ಈ ಲೇಖನವು ಹಿಂದೂ ದೇವತೆ ಲಕ್ಷ್ಮಿಯ ಬಗ್ಗೆ.
ಚಿತ್ರನಟಿ ಲಕ್ಷ್ಮಿ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ.
ಲಕ್ಷ್ಮಿ
Ravi Varma-Lakshmi.jpg
ಲಕ್ಷ್ಮಿ ರಾಜಾ ರವಿ ವರ್ಮ ನ ವರ್ಣಚಿತ್ರ
ದೇವನಾಗರಿलक्ष्मी
ಸಂಸ್ಕೃತ ಲಿಪ್ಯಂತರಣlakṣmī
ಸಂಲಗ್ನತೆದೇವಿ (Tridevi)
ನೆಲೆವೈಕುಂಠ, ಕ್ಷೀರ ಸಾಗರ
ಮಂತ್ರOm Hrim Shri Lakshmi Bhyo Namaha
ಒಡನಾಡಿವಿಷ್ಣು
ವಾಹನಆನೆ, ನವಿಲು, ಗೂಬೆ

ಲಕ್ಷ್ಮಿ - ಹಿಂದೂ ಧರ್ಮದಲ್ಲಿನ ದೇವತೆಗಳಲ್ಲೊಬ್ಬರು. ವೈಕುಂಠದ ಅಧಿಪತಿ ಶ್ರೀವಿಷ್ಣುವಿನ(ನಾರಾಯಣ) ಪತ್ನಿ. ಹಣ, ಐಶ್ವರ್ಯ, ಸಿರಿ, ಸಂಪತ್ತುಗಳ ಅಧಿದೇವತೆಯೆಂದು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮಿಯನ್ನು ಮಹಾಲಕ್ಷ್ಮಿ ಎಂದೂ ಕರೆಯಲಾಗುತ್ತದೆ. ಪ್ರತಿವರ್ಷದ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಲಕ್ಷ್ಮಿಗೆ ವಿಶೇಷ ಪೂಜೆಗಳನ್ನು ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವ ಮೂಲಕ ಸಲ್ಲಿಸಲಾಗುತ್ತದೆ. ದೀಪಾವಳಿ ಹಬ್ಬದ ಸಮಯದಲ್ಲಿ ಹಾಗೂ ನವರಾತ್ರಿ ಹಬ್ಬದ ಸಮಯ ದಲ್ಲಿ ಕೂಡ ವಿಶೇಷ ಪೂಜೆಗಳನ್ನು ಲಕ್ಷ್ಮಿ ಪೂಜೆ ಎಂದು ಆಚರಿಸಲಾಗುತ್ತದೆ.

ಮಹಾಲಕ್ಷ್ಮಿಯ ವಿವಿಧ ಸ್ವರೂಪಗಳು[ಬದಲಾಯಿಸಿ]

ಲಕ್ಷ್ಮಿಯ ಜೊತೆಗೆ, ಮಹಾಲಕ್ಷ್ಮಿಯ ಜೊತೆಗೆ ಪ್ರಾರಂಭದಲ್ಲಿ "ಶ್ರೀ" ಅಕ್ಷರವನ್ನು ಸೇರಿಸಿ ಶ್ರೀ ಲಕ್ಷ್ಮಿ, ಶ್ರೀ ಮಹಾಲಕ್ಷ್ಮಿ ಎಂದೂ ಬಳಸಲಾಗುತ್ತದೆ. ಶ್ರೀ ಎಂಬುದು ಸಿರಿ ಪದದ ತತ್ಸಮ ರೂಪ. ಸಿರಿ ಅಂದರೆ, ಸಂಪತ್ತು, ಐಶ್ವರ್ಯದ ಅಧಿದೇವತೆ ಎಂದು ಸೂಚಿಸಲು ಇದನ್ನು ಸೇರಿಸಲಾಗುತ್ತದೆ. ಅಷ್ಟಲಕ್ಷ್ಮಿಯ ವಿವಿಧ ಸ್ವರೂಪಗಳು ಈ ರೀತಿಯಿವೆ.

# ಸ್ವರೂಪ ಭಾವಾರ್ಥ
ಆದಿಲಕ್ಷ್ಮಿ ಮೂಲ ದೇವತೆ
ಧಾನ್ಯಲಕ್ಷ್ಮಿ ಧಾನ್ಯಗಳ ಕರುಣಿಸೋ ದೇವತೆ
ಧೈರ್ಯಲಕ್ಷ್ಮಿ ಧೈರ್ಯವನ್ನು ಕೊಡುವ ದೇವತೆ
ಗಜಲಕ್ಷ್ಮಿ ಆನೆಯನ್ನು ಇಕ್ಕೆಲದಲ್ಲಿ ಹೊಂದಿದ ದೇವತೆ
ಸಂತಾನ ಲಕ್ಷ್ಮಿ ಸಂತಾನವನ್ನು ಕರುಣಿಸೋ ದೇವತೆ
ವಿಜಯಲಕ್ಷ್ಮಿ ವಿಜಯವನ್ನು ತಂದು ಕೊಡುವ ದೇವತೆ
ವಿದ್ಯಾಲಕ್ಷ್ಮಿ ವಿದ್ಯೆಗೆ ಧನ ಸಹಾಯ ಮಾಡುವ ದೇವತೆ
ಧನಲಕ್ಷ್ಮಿ ಹಣವನ್ನು ಮಡಿಲಲ್ಲಿ ಹೊಂದಿದ ದೇವತೆ

ಲಕ್ಷ್ಮಿಯ ಹೆಸರುಗಳು[ಬದಲಾಯಿಸಿ]

ಲಕ್ಷ್ಮಿಯನ್ನು ಕಮಲದ (ಪದ್ಮ) ಹೂವಿಗೆ ಬಹಳವಾಗಿ ಸಂಪರ್ಕ ಕಲ್ಪಿಸಲಾಗುತ್ತದೆ. ಆಕೆಯ ಹಲವಾರು ಹೆಸರುಗಳು ಆ ಹೂವಿಗೆ ಸಂಬಂಧಿಸಿದ್ದಾಗಿವೆ.

  • ಪದ್ಮಪ್ರಿಯ: ಪದ್ಮವನ್ನು ಇಷ್ಟ ಪಡುವವಳು
  • ಪದ್ಮ ಮಾಲಾಧಾರ ದೇವಿ: ಪದ್ಮದ ಹಾರವನ್ನು ಧರಿಸುವವಳು
  • ಪದ್ಮಮುಖಿ: ಕಮಲದಂತೆ ಸುಂದರವಾದ ಮುಖವುಳ್ಳವಳು
  • ಪದ್ಮಾಕ್ಷಿ: ಕಮಲದಂತೆ ಸುಂದರವಾದ ಕಣ್ಣುಗಳುಳ್ಳವಳು
  • ಪದ್ಮಹಸ್ತೆ: ಕಮಲವನ್ನು ಕೈಯಲ್ಲಿ ಹಿಡಿದವಳು
  • ಪದ್ಮಸುಂದರಿ: ಕಮಲದಷ್ಟೇ ಸುಂದರವಾಗಿರುವವಳು
  • ಭಾರ್ಗವಿ: ಋಷಿ ಭೃಗುವಿನ ಮಗಳ ಅವತಾರ


ಭಾರತದಲ್ಲಿನ ಪ್ರಮುಖ ಲಕ್ಷ್ಮಿ ದೇವಸ್ಥಾನಗಳು[ಬದಲಾಯಿಸಿ]
ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ HinduSwastika.svg
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ

ಇತರ ದೇವತೆಗಳು

ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ
"https://kn.wikipedia.org/w/index.php?title=ಲಕ್ಷ್ಮಿ&oldid=913492" ಇಂದ ಪಡೆಯಲ್ಪಟ್ಟಿದೆ