ಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಕರ್ನಾಟಕದ ಬಳ್ಳಾರಿ ಜಿಲ್ಲೆಹೂವಿನ ಹಡಗಲಿ ಅಲ್ಲಿರುವ ಒಂದು ಪ್ರಸಿದ್ದ ಸ್ತಳ. ತುಂಗಭದ್ರ ನದಿಯಿಂದ ೨ಕಿಮಿ, ಹೂವಿನ ಹಡಗಲಿ ಇಂದ ೪೦ಕಿಮಿ , ರಾಣೆಬೆನ್ನುರಿನಿಂದ ೩೪ಕಿಮಿ ದೂರದಲ್ಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಇದೇ ರೀತಿಯ ಹೇಳಿಕೆ ಇಲ್ಲಿಯ ಕಾರಣಿಕೋತ್ಸವದಲ್ಲಿ ಕೇಳಿಬಂದಿತ್ತು. ಸ್ವಾತಂತ್ರ್ಯಾನಂತರ ಈ ರೀತಿಯ ಹೇಳಿಕೆ ಕೇಳಿಬಂದಿರುವ ಹಿನ್ನಲೆಯಲ್ಲಿ ಭಕ್ತಾಧಿಗಳು ಇತಿಹಾಸವನ್ನು ಕೂಡ ಈ ಸಂದರ್ಭದಲ್ಲಿ ಮೆಲುಕು ಹಾಕುವಂತಾಗಿದೆ. ಅಷ್ಟೇ ಅಲ್ಲದೆ ಭಾರತ ಹುಣ್ಣಿಮೆಯ ಮೂರನೇ ದಿನ ಗೋರಪ್ಪಅಜ್ಜ ನಿ಼ಂದ ಕಾಣಿಕ ಮರುದಿನ ಗೋರಪ್ಪರಿಂದ ಪವಾಡಗಳು ನಡೆಯುತ್ತದೆ

ಗೊರವರ ಕುಣಿತ[ಬದಲಾಯಿಸಿ]

ಗೊರವರು ಮೈಲಾರಲಿಂಗನ ಪರಮ ಭಕ್ತರು. ಧಾರ್ಮಿಕ ಪರಂಪರೆಯನ್ನು ಪಡೆದಂತಹ ಈ ಕಲೆಯು ಉಪ್ಪಾರರು, ನಾಯಕರು ಹಾಗೂ ಹರಿಜನರಲ್ಲ್ಲಿ ಕಂಡುಬಂದರೂ ಹೆಚ್ಚು ಪ್ರಚಲಿತವಿರುವುದು ಕುರುಬ ಜನಾಂಗದವರಲ್ಲಿ. ಗೊರವರಲ್ಲಿ ಕೆಲವರು ತಮ್ಮನ್ನು ಮೈಲಾರಲಿಂಗನಿಗೆ ಅರ್ಪಿಸಿಕೊಳ್ಳುತ್ತಾರೆ. ಇದನ್ನು 'ಹೊರೆ ಹೊರುವುದು' ಅಥವಾ 'ದೇವರನ್ನು ಹೊರುವುದು' ಎಂದು ಕರೆಯುವರು. ಸಂತಾನ ವೃದ್ಧಿ, ಕಷ್ಟ ನಿವಾರಣೆಗೆ ಈ ಹರಕೆಯನ್ನು ಮಾಡಿಕೊಳ್ಳುತ್ತಾರೆ.ಮೈಲಾರ ಜಾತ್ರೆಯ ಸಮಯದಲ್ಲಿ ಕರಣಿಕಾ ಉತ್ಸವ ನಡೆಯುತ್ತದೆ.