ವಿಷಯಕ್ಕೆ ಹೋಗು

ಬೆಳಗಾವಿ ಜಿಲ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಳಗಾವಿ ಅಥವಾ ಬೆಳಗಾಂ ಕರ್ನಾಟಕ ರಾಜ್ಯದ ಒಂದು ಜಿಲ್ಲೆ.[೧] [೨] ಬೆಳಗಾವಿ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ಈ ಜಿಲ್ಲೆಯಲ್ಲಿರುವ ಸುವರ್ಣ ವಿಧಾನಸೌಧವು ಕರ್ನಾಟಕದ ಎರಡನೇ ಶಾಸಕಾಂಗ ಸಭೆಯ ಮುಖ್ಯ ಕಚೇರಿಯಾಗಿದೆ. ಟೆಂಪ್ಲೇಟು:Infobox ಜಿಲ್ಲೆ

ಭೂಗೋಳ

[ಬದಲಾಯಿಸಿ]

ಜಿಲ್ಲೆಯು 13,415 km2 (5,180 sq mi) ವಿಸ್ತೀರ್ಣವನ್ನು ಹೊಂದಿದೆ ಮತ್ತು ಇದು ಕರ್ನಾಟಕದ ಅತಿದೊಡ್ಡ ಜಿಲ್ಲೆಯಾಗಿದೆ.

ಬೆಳಗಾವಿ ಜಿಲ್ಲೆಯ 1.5 ಲಕ್ಷ ಹೆಕ್ಟೇರ್‌ಗಳಷ್ಟು ಭೂಮಿಯನ್ನು ಕಬ್ಬು ಬೆಳೆಯಲು ಬಳಸಲಾಗುತ್ತಿದೆ, ಇದು ಕಳೆದ ದಶಕದಲ್ಲಿ ಕಬ್ಬು ಉತ್ಪಾದನೆಯಲ್ಲಿ ಮಂಡ್ಯ ಜಿಲ್ಲೆಯನ್ನು ಮಿರಿಸಿದೆ, ಈ ಜಿಲ್ಲೆಯನ್ನು ಕರ್ನಾಟಕದ ಸಕ್ಕರೆ ಬಟ್ಟಲು ಎಂದು ಕರೆಯಲ್ಪಡುತ್ತದೆ [೩]

ಆಡಳಿತ ವಿಭಾಗಗಳು

[ಬದಲಾಯಿಸಿ]

ಬೆಳಗಾವಿ ಜಿಲ್ಲೆಯ ಆಡಳಿತವನ್ನು 10 ತಾಲೂಕುಗಳಾಗಿ ವಿಂಗಡಿಸಲಾಗಿದೆ.

ಉಪವಿಭಾಗ ತಾಲೂಕುಗಳು
ಬೆಳಗಾವಿ ಬೆಳಗಾವಿ
ಹುಕ್ಕೇರಿ
ಖಾನಾಪುರ
ಚಿಕ್ಕೋಡಿ
ಚಿಕ್ಕೋಡಿ
ಅಥಣಿ
ರಾಯಭಾಗ
ಬೈಲಹೊಂಗಲ
ಬೈಲಹೊಂಗಲ
ಗೋಕಾಕ್
ಸವದತ್ತಿ
ರಾಮದುರ್ಗ

[೪]

ಜನಸಂಖ್ಯಾ

[ಬದಲಾಯಿಸಿ]
Historical population
YearPop.±% p.a.
1901೧೧,೩೧,೧೮೬—    
1911೧೦,೮೩,೮೦೪−0.43%
1921೧೦,೮೮,೭೬೩+0.05%
1931೧೨,೩೭,೨೨೩+1.29%
1941೧೪,೧೦,೦೫೪+1.32%
1951೧೬,೪೫,೬೨೦+1.56%
1961೧೯,೮೩,೪೯೮+1.88%
1971೨೪,೨೨,೯೯೪+2.02%
1981೨೯,೭೮,೯೧೩+2.09%
1991೩೫,೮೩,೬೦೬+1.87%
2001೪೨,೧೪,೫೦೫+1.63%
2011೪೭,೭೯,೬೬೧+1.27%
source:[೫]

2011 ರ ಭಾರತದ ಜನಗಣತಿಯ ಪ್ರಕಾರ, ಜಿಲ್ಲೆಯು 47,79,661 ಜನಸಂಖ್ಯೆಯನ್ನು ಹೊಂದಿದೆ,[೬] ಇದು ಬೆಂಗಳೂರಿನ ನಂತರ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕರ್ನಾಟಕದ ಜಿಲ್ಲೆಯಾಗಿದೆ. [೭] ಇದು ಸಿಂಗಾಪುರ ದೇಶದ ಸಮನಾದ [೮] ಮತ್ತು ಅಮೆರಿಕಾ ದೇಶದ ಅಲ್ಬಾಮ ರಾಜ್ಯಕ್ಕೆ ಸಮನಾದ ಜನಸಂಖೆಯಾಗಿದೆ.[೯] ಪ್ರಸ್ತುತ ಜಿಲ್ಲೆಯು ಭಾರತದ 640 ಜಿಲ್ಲೆಗಳಲ್ಲಿ ಜನಸಂಖ್ಯೆಯಲ್ಲಿ 25ನೆ ಸ್ಥಾನದಲ್ಲಿ ಇದೆ. 2001-2011 ರ ದಶಕದಲ್ಲಿ ಜಿಲ್ಲೆಯ ಜನಸಂಖ್ಯೆಯ ಬೆಳವಣಿಗೆಯು ಶೇಕಡಾ 13.38% ಆಗಿದೆ. ಜಿಲ್ಲೆಯ ಸಾಕ್ಷರತೆಯು ಶೇಕಡಾ 73.94%

ಬೆಳಗಾವಿ ಜಿಲ್ಲೆಯ ಧರ್ಮಗಳು (2011)[೧೦]
ಧರ್ಮ ಶೇಕಡಾ
ಹಿಂದೂ
  
84.49%
ಇಸ್ಲಾಂ
  
11.06%
ಜೈನ
  
3.73%
ಇತರೆ
  
0.72%

ಜಿಲ್ಲೆಯಲ್ಲಿ ಶೇಕಡಾ 84.49 ರಷ್ಟು ಹಿಂದೂಗಳು. ಶೇಕಡಾ 11.06ರಷ್ಟು ಮುಸಲ್ಮಾನರು, ಶೇಕಡಾ 3.73 ರಷ್ಟು ಜೈನರು , ಮತ್ತು ಶೇಕಡಾ 0.72 ರಷ್ಟು ಇತರೆ ಧರ್ಮದವರು ನೆಲೆಸಿದ್ದಾರೆ.[೧೦]

ಬೆಳಗಾವಿ ಜಿಲ್ಲೆಯ ಭಾಷೆ (2011)
ಭಾಷೆ ಶೇಕಡಾ
ಕನ್ನಡ
  
68.40%
ಮರಾಠಿ
  
18.71%
ಉರ್ದು
  
9.79%
ಇತರೆ
  
3.10%

ಜಿಲ್ಲೆಯಲ್ಲಿ ಶೇಕಡಾ 68.40 ರಷ್ಟು ಕನ್ನಡಿಗರು, ಶೇಕಡಾ 18.70 ರಷ್ಟು ಮರಾಠಿಗರು, ಶೇಕಡಾ 9.79 ರಷ್ಟು ಉರ್ದು ಭಾಷಿಕರು ಮತ್ತು ಶೇಕಡಾ 3.10 ರಷ್ಟು ಇತರೆ ಭಾಷೆ ಮಾತಾನಾಡುವವರು ಇದ್ದಾರೆ..[೧೧]

ನದಿಗಳು

[ಬದಲಾಯಿಸಿ]

ಬೆಳಗಾವಿ ಜಿಲ್ಲೆಯಲ್ಲಿ ಹರಿಯವ ನದಿಗಳು :

 • ಕೃಷ್ಣ
 • ಮಲಪ್ರಭಾ
 • ಘಟಪ್ರಭಾ
 • ವೇದಗಂಗಾ
 • ದೂಧಗಂಗಾ
 • ಮಹದಾಯಿ
 • ಪಂಡರಿ
 • ಹಿರಣ್ಯಕೇಶಿ

ಶಿಕ್ಷಣ

[ಬದಲಾಯಿಸಿ]

ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ ಮೂರು ವಿಶ್ವವಿದ್ಯಾಲಯಗಳು ಇದಾವೆ ಅವುಗಳೆಂದರೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ , ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ, ಕರ್ನಾಟಕ ಲಿಂಗಾಯತ ಶಿಕ್ಷಣ (ಕೆಎಲ್‌ಇ) ಸೊಸೈಟಿ ಮತ್ತು ಜಿಲ್ಲೆಯಲ್ಲಿ ಒಂಬತ್ತು ಇಂಜಿನಿಯರಿಂಗ್ ಕಾಲೇಜು, ಎರಡು ವೈದ್ಯಕಿಯ ಕಾಲೇಜು, ಹದಿನೈದು ಪಾಲಿಟೆಕ್ನಿಕ್ ಕಾಲೇಜು,ನೂರ ಎಂಬತ್ತು ಪದವಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಾ ಇದಾವೆ.[೧೨]

ಇವನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
 1. "Belgaum becomes Belagavi, as Centre clears name change plan". The Indian Express (in ಇಂಗ್ಲಿಷ್). 18 October 2014. Retrieved 30 August 2020.
 2. "Karnataka elections: Meet the five brothers from Belagavi who are contesting against each other". Hindustan Times (in ಇಂಗ್ಲಿಷ್). 4 May 2018. Retrieved 19 January 2020.
 3. "Belagavi - foundry hub of North Karnataka" (PDF). karnataka.gov.in. Archived from the original (PDF) on 13 December 2019. Retrieved 14 March 2021.
 4. https://belagavi.nic.in/%e0%b2%a4%e0%b2%be%e0%b2%b2%e0%b3%8d%e0%b2%b2%e0%b3%82%e0%b2%95%e0%b3%81-%e0%b2%95%e0%b2%9a%e0%b3%87%e0%b2%b0%e0%b2%bf/
 5. Decadal Variation In Population Since 1901
 6. "Census GIS India". Archived from the original on 11 January 2010. Retrieved 27 August 2009.
 7. "District Census 2011". Census2011.co.in. 2011. Retrieved 30 September 2011.
 8. US Directorate of Intelligence. "Country Comparison:Population". Archived from the original on 13 June 2007. Retrieved 1 October 2011. Singapore 4,740,737 July 2011 est.
 9. "2010 Resident Population Data". U. S. Census Bureau. Archived from the original on 19 October 2013. Retrieved 30 September 2011. Alabama 4,779,736
 10. ೧೦.೦ ೧೦.೧ "C-1 Population By Religious Community". Census of India. Retrieved 2 August 2021.
 11. "Table C-16 Population by Mother Tongue: Karnataka". Census of India. Registrar General and Census Commissioner of India. Retrieved 26 April 2022.
 12. "Belagavi District". www.investkarnataka.co.in. Archived from the original on 13 December 2019. Retrieved 13 December 2019.