ಹರಪನಹಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Harpanahalli
ಹರಪನಹಳ್ಳಿ
Harapanahalli
city
Country ಭಾರತ
StateKarnataka
DistrictVijayanagar
Elevation
೬೩೩ m (೨,೦೭೭ ft)
Population
 (2001)
 • Total೪೧,೮೮೯
Languages
 • OfficialKannada
ಸಮಯ ವಲಯಯುಟಿಸಿ+5:30 (IST)

ಹರಪನಹಳ್ಳಿ ಇದು ಬಳ್ಳಾರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ.

ಭೌಗೋಳಿಕ ಸ್ಥಾನಮಾನ[ಬದಲಾಯಿಸಿ]

ಹರಪನಹಳ್ಳಿಯು 14.8°N 75.98°E / 14.8; 75.98 ನಲ್ಲಿ ಬರುತ್ತದೆ. ಇದು ಸಮುದ್ರ ಮಟ್ಟಕ್ಕಿಂತ ಸುಮಾರು ೬೩೩ ಮೀ (೨೦೭೬ ಅಡಿ) ಎತ್ತರದಲ್ಲಿದೆ. ೨೦೦೧ರ ಜನಗಣತಿಯ ಪ್ರಕಾರ ಇಲ್ಲಿಯ ಜನಸಂಖ್ಯೆ ೪೧೮೮೯. (ಪು:೫೨% ಮ:೪೮%). ಇಲ್ಲಿಯ ಸಾಕ್ಷರತೆ ೫೫%.

ಹರಪನಹಳ್ಳಿ ತಾಲೂಕಿನಲ್ಲಿ ೨೮ ಗ್ರಾಮ ಪಂಚಾಯಿತಿಗಳು ಇವೆ. ದಾವಣಗೆರೆಯಿಂದ ೪೦ ಕಿ.ಮೀ ದೂರದಲ್ಲಿದೆ. ಈ ತಾಲೂಕು ಮೊದಲು ಬಳ್ಳಾರಿ ಜಿಲ್ಲೆಗೆ ಸೇರಿತ್ತು. ೧೯೯೭ ರಲ್ಲಿ ದಾವಣಗೆರೆಗೆ ಸೇರ್ಪಡೆಯಾಗಿದೆ. ನಂತರ ಮತ್ತೆ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಸೇರಿತು. . ಈಗ ಹೊಸ ಜಿಲ್ಲೆ ವಿಜಯನಗರ ಜಿಲ್ಲೆಗೆ ಸೇರಿಸಲಾಗಿದೆ. ಹರಿಹರದಿಂದ ಕೂಡ ೪೦ ಕಿ.ಮೀ ದೂರದಲ್ಲಿದೆ. ಹರಪನಹಳ್ಳಿಯು ಮೊದಲು ಕರ್ನಾಟಕ ವಿಶ್ವವಿದ್ಯಾಲಯ, ನಂತರ ಗುಲ್ಬರ್ಗಾ ವಿಶ್ವವಿದ್ಯಾಲಯ, ಆಮೇಲೆ ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಿತ್ತು. ಈಗ ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಟ್ಟಿದೆ. ಖ್ಯಾತ ಸಾಹಿತಿಗಳಾದ ಬೀಚಿ, ಕುಸುಮಾಕರ ದೇಸಾಯಿ, ಹರಪನಹಳ್ಳಿ ಭೀಮವ್ವ. ಕುಂ.ಬಾ.ಸದಾಶಿವಪ್ಪ. ಹಿರಿಯ ಸಾಹಿತಿಗಳು. ಬಳ್ಳಾರಿ ಜಿಲ್ಲೆಯ ಸಾಂಸ್ಕ್ರುತಿಕ ದರ್ಶನ, 'ಕುತೂಹಲದ ಕರ್ನಾಟಕ' ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.ಮತ್ತು ಹರಪನಹಳ್ಳಿಯ ಹೆಸರನ್ನು ನಾಡಿನಾದ್ಯಂತ ಬೆಳಗಿಸಿದ್ದಾರೆ. ಬಾಗಳಿ, ನೀಲಗುಂದ. ಉಚ್ಚಂಗಿದುರ್ಗ(ಉಚ್ಚೆಂಗೆಮ್ಮ ದೇವಿ). ಕೂಲಹಳ್ಳಿ ಕ್ಷೇತ್ರ ಬಾಗಳಿ ಕಲ್ಲೇಶ್ವರ ದೇವಸ್ಥಾನ ಇತಿಹಾಸ ಪ್ರಸಿದ್ದ ಕ್ಶೇತ್ರ ಗಳು. ಅರಸನಾಳು ಎ.ಬಿ.ಆರ್ ಕೊಟ್ರಗೌಡರು,ಹೆಚ್.ಎಂ. ವೀರಭದ್ರಯ್ಯನವರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.

ಉಲ್ಲೇಖಗಳು[ಬದಲಾಯಿಸಿ]