ಜಗಳೂರು
![]() | This article needs more links to other articles to help integrate it into the encyclopedia. (ಡಿಸೆಂಬರ್ ೨೦೧೫) |
ಜಗಳೂರು ಜಗಳೂರು | |
---|---|
city | |
ಜನಸಂಖ್ಯೆ (2001) | |
• ಒಟ್ಟು | ೧೪,೭೪೧ |
ಜಗಳೂರು ದಾವಣಗೆರೆ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದರ ಹತ್ತಿರ ೧೦ಕಿ ಮೀ ನಲ್ಲಿ ದೊಣೆಹಳ್ಳಿ ಇದೆ, ಇದು ಜಗಳೂರು ತಾಲೂಕಿಗೆ ಸೇರಿದ್ದು ಇಲ್ಲಿ ಚಿನ್ನಹಗರಿ ಎಂಬ ನದಿ ಹರಿಯುತ್ತದೆ. ಇದಕ್ಕೆ ಇಲ್ಲಿ ಚೆಕ್ ಡ್ಯಾಂ ಕಟ್ಟಿದ್ದಾರೆ. ಇಲ್ಲಿ ಐತಿಹಾಸಿಕ ಘಟನೆಯ ಕುರುಹು ಇದೆ.ದೊಣೆಹಳ್ಳಿ ಸುತ್ತ ೩ ಜಿಲ್ಲೆಗಳಿಗೆ ಕೂಡಿಸುವ ಒಂದು ಹೆದ್ದಾರಿ(೧೩) ಇದೆ(ಬಳ್ಳಾರಿ, ಚಿತ್ರದುಗ, ದಾವಣಗೆರೆ). ಜಗಳೂರಿಂದ ೧೦ ಕಿ.ಮೀ. ದೂರದಲ್ಲಿರುವ ಈ ಊರು ಒಟ್ಟಾಗಿ ಕೇಂದ್ರ ಬಿಂದುವಂತಿದೆ.
ದಾವಣಗೆರೆಯ ಸುಂದರ ಗಾಜಿನಮನೆ[ಬದಲಾಯಿಸಿ]
ದಾವಣಗೆರೆ, ಮಾರ್ಚ್ 13 : ಭಾರತದ ಅತ್ಯಂತ ದೊಡ್ಡ ಗಾಜಿನ ಅರಮನೆ ದಾವಣಗೆರೆಯಲ್ಲಿ ನಿರ್ಮಾಣವಾಗಿದೆ. ಸ್ವರ್ಗವನ್ನೇ ಧರೆಗಿಳಿಸುವ ಗಾಜಿನ ಅರಮನೆಯನ್ನು ಸುಮಾರು 30 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ದಾವಣಗೆರೆ ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕುಂದುವಾಡ ಕೆರೆ ಬಳಿ 108 ಮೀಟರ್ ಉದ್ದ, 68 ಮೀಟರ್ ಅಗಲ, 18 ಮೀಟರ್ ಎತ್ತರದಲ್ಲಿ ಗಾಜಿನ ಅರಮನೆ ನಿರ್ಮಾಣವಾಗಿದೆ. 2014-15 ನೇ ಸಾಲಿನಲ್ಲಿ ಶಾಮನೂರು ಶಿವಶಂಕರಪ್ಪ ಸಚಿವರಾಗಿದ್ದಾಗ 5 ಕೋಟಿ ವೆಚ್ಚದಲ್ಲಿ ಆರಂಭವಾದ ಕಾಮಗಾರಿ ಈಗ ಅಂದಾಜು 30 ಕೋಟಿ ರೂಪಾಯಿಗೆ ಬಂದು ತಲುಪಿದೆ.. ಇದನ್ನು ಸೇಂಟ್ ಗೊಬೇನ್ ಗ್ಲಾಸ್‌ಗಳನ್ನು ಬಳಕೆ ಮಾಡಿ ವಿನೂತನ ವಿನ್ಯಾಸದಲ್ಲಿ ಇದನ್ನು ನಿರ್ಮಿಸಲಾಗಿದೆ. ಒಳಗಡೆ ಗ್ರಾನೈಟ್ ನೆಲಹಾಸು ಹಾಕಲಾಗಿದೆ. ಈ ಗ್ಲಾಸ್‌ಗಳು ಸೂರ್ಯನ ಶಾಖವನ್ನು ನಿಯಂತ್ರಿಸುತ್ತಿದ್ದು, ಒಳಗೆ ತಂಪಾದ ಅನುಭವ ನೀಡುತ್ತಿದೆ. ಒಟ್ಟು 12 ಎಕರೆ ಪ್ರದೇಶದ ಪೈಕಿ ಮೂರು ಎಕರೆ ಜಾಗದಲ್ಲಿ ಗ್ಲಾಸ್ ಹೌಸ್ ನಿರ್ಮಾಣವಾಗಿದೆ..
ಗಾಜಿನ ಮನೆ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಟಿಕೆಟ್ ಫೀಕ್ಸ್ ಮಾಡಲು ತೋಟಗಾರಿಕೆ ಇಲಾಖೆ ಚಿಂತನೆ ನಡೆಸಿದೆ. ದೊಡ್ಡವರಿಗೆ 20 ರೂ. ಸಣ್ಣಮಕ್ಕಳಿಗೆ 5 ರೂ. ಫಿಕ್ಸ್ ಮಾಡುವ ಉದ್ದೇಶವಿದೆ. ಈ ಹಣದಿಂದ ಗಾಜಿನ ಮನೆ ನಿರ್ವಹಣೆ ಮಾಡುತ್ತೇವೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿ ವೇದಮೂರ್ತಿ. ಗಾಜಿನ ಮನೆ ಖಾಲಿ ಇರುವ ಆರು ಎಕರೆ ಜಾಗದಲ್ಲಿ 4 ಕೋಟಿ ವೆಚ್ಚದಲ್ಲಿ ಉದ್ಯಾನವನ ಸಿದ್ಧವಾಗುತ್ತಿದೆ. ಇಲ್ಲಿ ಸ್ಪೈನ್, ಫಿಲಿಫೈನ್ಸ್, ಥೈಲಾಂಡ್‌ನಿಂದ ತಂದ 300ರಿಂದ 400 ಗಿಡಗಳನ್ನು ನೆಡುವ ಯೋಜನೆಯಿದೆ. ಅವುಗಳ ಮಧ್ಯೆ ಸಂಗೀತ ಕಾರಂಜಿ ಮಾಡುವ ಯೋಜನೆಯನ್ನ ತೋಟಗಾರಿಕೆ ಇಲಾಖೆ ಹೊಂದಿದೆ.
ದಾವಣಗೆರೆಯಲ್ಲಿ ಹೊಸದಾಗಿ ನಿರ್ಮಿಸಿರೋ ಗಾಜಿನ ಮನೆಯಲ್ಲಿ ಚಿತ್ರೀಕರಣಗೊಂಡ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ 'ನೋಟಗಾರ' ಚಿತ್ರದ ಒಂದು ಹಾಡು ಮತ್ತು ಕೆಲ ದೃಶ್ಯಗಳು ಗಾಜಿನ ಮನೆಯಲ್ಲಿಚಿತ್ರೀಕರಣವಾಗಿದೆ. ಇದು ಬೆಂಗಳೂರಿನ ಲಾಲ್ ಬಾಗ್‌ನಲ್ಲಿರುವ ಗ್ಲಾಸ್ ಹೌಸ್‌ಗಿಂತ ದೊಡ್ಡದಾಗಿದೆ. ಅಲ್ಲದೆ ಇಡೀ ದೇಶದಲ್ಲೇ ಇದು ದೊಡ್ಡ ಅರಮನೆಯಾಗಿದೆ.
ದಾವಣಗೆರೆಯ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡುವಲ್ಲಿ ಗಾಜಿನ ಮನೆ ಗಮನ ಸೆಳೆಯುತ್ತಿದೆ. ರಾಜ್ಯದ ಬೇರೆಡೆ ಇಷ್ಟು ದೊಡ್ಡ ಗಾಜಿನ ಮನೆ ಎಲ್ಲಿಯೂ ನಿರ್ಮಾಣವಾಗಿಲ್ಲ. ಆದ್ದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಯುವಕರು, ಯುವತಿಯರು ಮೊಬೈಲ್ ಸೆಲ್ಪಿ ಸ್ಟೀಕ್, ಡಿಎಸ್‌ಎಲ್‌ಆರ್ ಕ್ಯಾಮೆರಾ ಇಟ್ಟುಕೊಂಡು ಸೆಲ್ಫಿ ತೆಗೆದುಕೊಂಡು ಸಂಭ್ರಮ ಪಡುತ್ತಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದ ದಾವಣಗೆರೆಗೆ ಈ ಗಾಜಿನ ಅರಮನೆ ಮತ್ತೊಂದು ಗರಿಯನ್ನು ತಂದುಕೊಡಲಿದೆ. ಈ ಸುಂದರವಾದ ಅರಮನೆ ದೇಶ-ವಿದೇಶದ ಪ್ರವಾಸಿಗರನ್ನು ದಾವಣಗೆರೆಯತ್ತ ಸೆಳೆಯುವ ಜೊತೆಗೆ ಜಿಲ್ಲೆಯ ಹಿರಿಮೆಯನ್ನೂ ಹೆಚ್ಚಿಸಲಿದೆ.
ಉಲ್ಲೇಖಗಳು[ಬದಲಾಯಿಸಿ]
(ನ್ಯಾಮತಿ)
- Pages with non-numeric formatnum arguments
- Articles with too few wikilinks from ಡಿಸೆಂಬರ್ ೨೦೧೫
- Articles with invalid date parameter in template
- All articles with too few wikilinks
- Articles covered by WikiProject Wikify from ಡಿಸೆಂಬರ್ ೨೦೧೫
- All articles covered by WikiProject Wikify
- Pages using infobox settlement with unknown parameters
- Pages using infobox settlement with missing country
- ದಾವಣಗೆರೆ ಜಿಲ್ಲೆಯ ತಾಲೂಕುಗಳು