ಬಾಬಾ ಬುಡನ್‌ಗಿರಿ
ಬಾಬಾ ಬುಡನ್‌ಗಿರಿ
ದತ್ತ ಪೀಠ | |
---|---|
taluk |
ದತ್ತಗಿರಿ / ಚಂದ್ರದ್ರೋಣ ಪರ್ವತ ಯು (ಅಥವಾ ಚಂದ್ರದ್ರೋಣ ಪರ್ವತ ಅಥವಾ ಚಂದ್ರದ್ರೋಣಗಿರಿ ) ಭಾರತದ ಪಶ್ಚಿಮ ಘಟ್ಟಗಳ ದತ್ತಗಿರಿ ಬೆಟ್ಟದ ಸಾಲು/ ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ಒಂದು ಬೆಟ್ಟ. ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಥಿತವಾದ ದತ್ತಗಿರಿ/ ಚಂದ್ರದ್ರೋಣ ಪರ್ವತ ಹಿಂದೂ ಯಾತ್ರೆಯರಿಗೆ ಪ್ರಸಿದ್ಧ ದೇವಸ್ಥಾನಕ್ಕಾಗಿ ಪರಿಚಿತವಾಗಿದೆ. ಮುಳ್ಳಯ್ಯನಗಿರಿ ಮತ್ತು ದತ್ತಗಿರಿ/ ಚಂದ್ರದ್ರೋಣ ಪರ್ವತ(ಎತ್ತರ ೧೮೯೫ ಮಿ.) ದತ್ತಗಿರಿ/ ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ಪರ್ವತ ಶಿಖರಗಳು. ಒಟ್ಟಾರೆಯಾಗಿ ಈ ಶಿಖರಗಳು ಅವರು ಸ್ವಾಭಾವಿಕವಾಗಿ ಅರ್ಧ ಚಂದ್ರನ ಆಕಾರವನ್ನು ಹೋಲುವ ಕಾರಣಕ್ಕಾಗಿ, ಇವನ್ನು 'ಚಂದ್ರದ್ರೋಣ ಪರ್ವತಶ್ರೇಣಿ' ಎಂದು ಕರೆಯಲಾಗುತ್ತದೆ. ಮುಳ್ಳಯ್ಯನ ಗಿರಿಯು ಚಂದ್ರದ್ರೋಣ ಪರ್ವತ ಅತ್ಯುನ್ನತ ಶಿಖರವಾಗಿದೆ. ೧೯೩೦ ಮೀಟರ್ (೬೩೧೭ ಅಡಿ) ಎತ್ತರ ಹೊಂದಿರುವ ಇದು ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಿನ ಅತ್ಯಂತ ಎತ್ತರದ ಶಿಖರವಾಗಿದೆ. ಮುಳ್ಳಯ್ಯನ ಗಿರಿ ಚಂದ್ರದ್ರೋಣ ಪರ್ವತ ಹಾದಿಯು ಪ್ರಸಿದ್ಧ ಚಾರಣ ಪಥವಾಗಿದೆ.
ಸ್ಥಳನಿರ್ದೇಶನ
[ಬದಲಾಯಿಸಿ]ಇದು ಚಿಕ್ಕಮಗಳೂರು ಪಟ್ಟಣದಿಂದ ಉತ್ತರಕ್ಕೆ ೨೫ ಕಿ.ಮೀ. ದೂರದಲ್ಲಿಯೂ ಬೆಂಗಳೂರಿನಿಂದ ಸುಮಾರು ೨೫೦ ಕಿ.ಮೀ.ಗೂ ಹೆಚ್ಚು ದೂರದಲ್ಲಿದೆ. ಮುಳ್ಳಯ್ಯನ ಗಿರಿಯು ಚಿಕ್ಕಮಗಳೂರಿನಿಂದ ಬಾಬಾಬುಡನ್ ಗಿರಿಗೆ ಹೋಗುವ ದಾರಿಯಲ್ಲಿ ಸುಮಾರು ೧೫ ಕಿ.ಮೀಗೆ ಸಿಕ್ಕುತ್ತದೆ.
ಹತ್ತಿರದ ಪ್ರೇಕ್ಷಣೀಯ ಸ್ಥಳಗಳು
[ಬದಲಾಯಿಸಿ]ಗುಹೆಗಳು- ಮೂರು ದೊಡ್ಡ ಗುಹೆಗಳು - ಇಲ್ಲಿ ಮೂವರು ಸಿದ್ಧರ ಪ್ರತಿಮೆಗಳು ಮತ್ತು ಗದ್ದಿಗೆಗಳು ಇದ್ದು ಅವರ ಗೌರವಾರ್ಥ ಪ್ರತಿವರ್ಷ ಜಾತ್ರೆಯು ನಡೆಯುತ್ತದೆ ಹೊಂದಿರುತ್ತವೆ ಪವಿತ್ರವಾಗಿರದ ಹೇಳಲಾಗುತ್ತದೆ. ಸುತ್ತಣ ಮನಮೋಹಕ ದೃಶ್ಯಾವಳಿಯಿಂದಾಗಿ ಇದು ಜನಪ್ರಿಯ ಯಾತ್ರಾಸ್ಥಳವಾಗಿದೆ. ಸೀತಾಳ- ಒಂದು ಮಠವನ್ನೂ ಮತ್ತು 'ಸೀತಾಳ-ಮಲ್ಲಿಕಾರ್ಜುನ' ಎಂಬ ಜೋಡಿ ದೇವಾಲಯಗಳನ್ನು ಹೊಂದಿದೆ. ಜಲಪಾತಗಳು- ಸ್ವಲ್ಪ ದೂರದಲ್ಲಿ ಗದಾತೀರ್ಥ, ನೆಲ್ಲಿಕಾಯಿ ತೀರ್ಥ ಮತ್ತು ಕಾಮನಾತೀರ್ಥಗಳಿವೆ. ಮಹಾಭಾರತದಲ್ಲಿನ ಭೀಮನು ಅಜ್ಞಾತವಾಸದ ಸಂದರ್ಭದಲ್ಲಿ ತನ್ನ ತಾಯಿಯ ನೀರಡಿಕೆಯನ್ನು ಹಿಂಗಿಸಲು ತನ್ನ ಗದೆಯಿಂದ ಗದಾತೀರ್ಥವನ್ನು ಮಾಡಿದನು ಎಂಬ ಪ್ರತೀತಿ ಇದೆ. ನೆಲ್ಲಿಕಾಯಿತೀರ್ಥವು ಮಾಣಿಕ್ಯಧಾರಾ ಜಲಪಾತದಿಂದ ಆಗಿದೆ. ಮಾಣಿಕ್ಯಧಾರಾ ಜಲಪಾತವು ಕೆಮ್ಮಣ್ಣುಗುಂಡಿಯ ಹತ್ತಿರ ಇದೆ. ಇದು ಚಿಕ್ಕಮಗಳೂರಿನಿಂದ ೪೦ ಕಿ.ಮೀ. ದೂರ. ೧೭ನೇ ಶತಮಾನದಲ್ಲಿ ಸೂಫಿ ಸಂತರಾದ ಬಾಬಾ ಬುಡನ್ ರವರು ಇಲ್ಲಿದ್ದರು. ಹನ್ನೆರಡು ವರ್ಷಕ್ಕೆ ಒಮ್ಮೆಯಂತೆ ಇಲ್ಲಿ ಅಪರೂಪವಾದ ಕುರಿಂಜಿ ಹೂಗಳು ಅರಳುತ್ತವೆ. ಇತ್ತೀಚೆಗೆ ಇದು ಸಂಭವಿಸಿದ್ದು ೨೦೦೬ ರಲ್ಲಿ.


- Pages with script errors
- Articles with short description
- Short description is different from Wikidata
- Pages using infobox settlement with infobox mapframe errors
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- Commons category link is on Wikidata
- ಬೆಟ್ಟ
- ಕರ್ನಾಟಕದ ಬೆಟ್ಟಗಳು
- ಪರ್ವತಗಳು
- ಪಶ್ಚಿಮ ಘಟ್ಟಗಳು
- ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳು