ತಾಲವಾಡಿ ಬೆಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಾಲವಾಡಿ ಬೆಟ್ಟ ಕೂಟಗಲ್ ಗ್ರಾಮವು ಬೆಂಗಳೂರು ಮೈಸೂರು ರಸ್ತೆಯ ನಡುವೆ ಬೆಂಗಳೂರಿನಿಂದ ೪೯ ಕಿ.ಮೀ ದೂರದಲ್ಲಿ ರಾಮನಗರ ಪಟ್ಟಣ ಸಿಗುತ್ತದೆ. ಇಲ್ಲಿಂದ ಮಾಗಡಿ ಮಾರ್ಗವಾಗಿ ಚಲಿಸಿದರೆ ರಾಮನಗರ ತಾಲ್ಲೂಕಿನಿಂದ ೯ ಕಿ.ಮೀ ದೂರದಲ್ಲಿ ಕೂಟಗಲ್ ಗ್ರಾಮವು ಸಿಗುತ್ತದೆ. ತಾಲವಾಡಿ ಬೆಟ್ಟ ತೀರಾ ಕಡಿದಾಗಿದ್ದು ಶಿಥಿಲಾವಸ್ಥೆಯಲ್ಲಿರುವ ಕೋಟೆ ಆರಂಭದಲ್ಲಿಯೇ ಕಾಣಸಿಗುತ್ತದೆ. ಇನ್ನೇನು ಶಿಖರವನ್ನು ಮುಟ್ಟೇಬಿಟ್ಟೆವೆನ್ನುವಾಗ ಕಡಿದಾದ ಬೆಟ್ಟದ ನೆತ್ತಿಯ ಹೆಬ್ಬಂಡೆ ಸವಾಲು ಹಾಕುತ್ತದೆ. ಉಗುರುಗಳಿಂದ ಹಿಡಿದು ಮೇಲೇರಿದಾಗ ಕಲ್ಲು ಕಂಬಗಳಿಂದ ನಿರ್ಮಿತವಾದ ಅಪೂರ್ವ ಮಂಟಪ ವೊಂದಿದೆ. ಬಯಲಿನಲ್ಲಿ ಎರಡು ಅಂಕಣದ ಕಲ್ಲುಗೋಡೆ ಮತ್ತು ಕಲ್ಲು ಛಾವಣಿಯ ಮನೆ ವಿಶಿಷ್ಟವಾಗಿದೆ. ಐದೂವರೆ ಅಡಿ ಎತ್ತರ, ಎರಡೂವರೆ ಅಡಿ ಅಗಲದ ಬಾಗಿಲಿದೆ. ೧೨ ಅಡಿ ಉದ್ದ ಒಂದೂವರೆ ಅಡಿ ಅಗಲ, ಆರಂಗುಲ ದಪ್ಪದ ಆರು ಸಾಮಾನ್ಯ ಕಲ್ಲಿನ ಭೂಗೆಗಲ ಮೇಲೆ ಆರಡಿ ಉದ್ದ ಎರಡೂವರೆ ಅಡಿ ಅಗಲ ಅರ್ಧಅಡಿ ದಪ್ಪ ಕಲ್ಲು ಚಪ್ಪಡಿಗಳಿಂದ ನಿರ್ಮಿತವಾಗಿದೆ. ಕೆಂಪೇಗೌಡನ ಕುದುರೆ ಓಡಾಡಿದ ಪಾದದ ಗುರುತುಗಳು ಕೋಟೆ ಬೆಟ್ತದ ಮೇಲಿವೆ. ಶಿಖರದಲ್ಲಿ ಮಂಟಪ ಕಟ್ಟಿಸಿ ಅಂದು ದಾಳಿಗಳಿಂದ ರಕ್ಷಣೆ ಪಡೆಯುತ್ತಿದ್ದ ಕುರುಹುಗಳಿವೆ. ಕಲ್ಲು ಮಂಟಪದ ಎದುರು ಪೂರ್ವಕ್ಕೆ ಸೊಗಸಾದ ತಟಾಕವಿದೆ. [೧]