ಮಧುಗಿರಿ ಬೆಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಧುಗಿರಿ

ಮಧುಗಿರಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ತುಮಕೂರು
ನಿರ್ದೇಶಾಂಕಗಳು 13.66° N 77.21° E
ವಿಸ್ತಾರ
 - ಎತ್ತರ
 km²
 - 787 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
26351
 - {{{population_density}}}/ಚದರ ಕಿ.ಮಿ.

ತುಮಕೂರು ಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ಸ್ಥಳ. ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ೧೦೭ ಕಿ.ಮೀ. ದೂರದಲ್ಲಿದೆ. ಇದು ಏಷ್ಯಾದ ಎರಡನೇ ಅತಿದೊಡ್ಡ ಏಕಶಿಲಾಬೆಟ್ಟವಾಗಿದೆ. ಇದು ಪಾವಗಡದಿಂದ ಬಳ್ಳಾರಿಯವರೆಗೆ ಹರಡಿರುವ ಪರ್ವತ ಶ್ರೇಣಿಯ ಭಾಗವಾಗಿದೆ. ಇಲ್ಲಿ ೧೭ನೇ ಶತಮಾನದಲ್ಲಿ ನಿರ್ಮಾಣವಾದ ಕೋಟೆ ಇದೆ. ಇದು ಸಮುದ್ರ ಮಟ್ಟದಿಂದ ೩೯೮೫ ಅಡಿ (೧೧೯೩ ಮೀಟರ್)ಗಳಷ್ಟು ಎತ್ತರವಿದೆ. ಇದು ಒಂದು ಚಾರಣದ ಸ್ಥಳವಾಗಿದೆ. ಸುತ್ತಲಿನ ಪ್ರದೇಶವು ಗಣಿಗಾರಿಕೆಯ ತಾಣವಾಗಿದೆ.

ಮಧುಗಿರಿ ಕೋಟೆಯನ್ನು ಕಟ್ಟಿಸಿದವರು ಸ್ಥಳೀಯ ಪಾಳೇಗಾರರಾಗಿದ್ದ ರಾಜಾ ಹಿರೇಗೌಡ. ೧೬೭೦ರ ಸುಮಾರಿಗೆ ಈ ಕೋಟೆಯನ್ನು ಮಟ್ಟಿನಿಂದ ನಿರ್ಮಿಸಲಾಗಿತ್ತು. ಅನಂತರ ಹೈದರಾಲಿ, ಟಿಪ್ಪುಸುಲ್ತಾನ್ ಹಾಗೂ ಮೈಸೂರರಸರ ಆಳ್ವಿಕೆಯಲ್ಲಿ ಕೋಟೆ ಪುನರುಜ್ಜೀವನಗೊಂಡಿತು. ಬೆಟ್ಟದ ತಳದಲ್ಲಿ ನಾಲ್ಕು ಗುಹೆಗಳಿವೆ. ಭೀಮನ ದೊಣೆ, ನವಿಲು ದೊಣೆ ಎಂಬ ಎರಡು ಕೆರೆಗಳೂ ಇವೆ. ಮಧುಗಿರಿ ಬೆಟ್ಟದ ತುತ್ತತುದಿಯಲ್ಲಿ ಹಿಂದೆ ಇತ್ತೆಂದು ಹೇಳಲಾಗುವ ಗೋಪಾಲಕೃಷ್ಣ ದೇವಾಲಯ ಈಗ ಪಾಳುಬಿದ್ದಿದೆ.

ಮಾರ್ಗ[ಬದಲಾಯಿಸಿ]

ಬೆಂಗಳೂರಿನಿಂದ ೧೦೭ ಕಿ.ಮಿ. ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಸಿಗುವ ಡಾಬಸ್ ಪೇಟೆಯಿಂದ ಕೊರಟಗೆರೆ ಮಾರ್ಗವಾಗಿ ಮಧುಗಿರಿ ತಲುಪಬಹುದು. ಕೊರಟಗೆರೆ ಮತ್ತು ಪಾವಗಡದ ನಡುವೆ ಇದೆ. ಅಥವಾ ತುಮಕೂರು ನಗರದಿಂದ ರಾಜ್ಯಹೆದ್ದಾರಿ ೩೩ ಮತ್ತು ರಾಜ್ಯಹೆದ್ದಾರಿ ೩ ರ ಮೂಲಕ (ಮಧುಗಿರಿ ರಸ್ತೆ , ಕೊರಟಗೆರೆ ಮಾರ್ಗ) ಮಧುಗಿರಿ ತಲುಪಬಹುದು. ಕೊರಟಗೆರೆಯಿಂದ ೧೮ ಕಿ.ಮಿ. ದೂರದಲ್ಲಿದೆ.ರಾ‍‍‌ ಹೆದ್ದಾರಿ ೪ರ ಸಿರಾದಿಂದ ಬಡವನಹಳ್ಳಿ ಮಾರ್ಗವಾಗಿ ೩೯ ಕಿ ಮೀ ದೂರದಲ್ಲಿದೆ

sadsacfhf dfcfj wdi3uri3r dvbcnsdb dmcgwy hwdgx

ಆಧಾರ/ಆಕರಗಳು[ಬದಲಾಯಿಸಿ]

೧೧ ಡಿಸೆಂಬರ್ ೨೦೧೨ ಪ್ರಜಾವಾಣಿ ಪತ್ರಿಕೆಯ 'ಕರ್ನಾಟಕ ದರ್ಶನ' ಪುರವಣಿಯ ಲೇಖನ - "ಮಧುಗಿರಿಯ ತುದಿ ಏರಿ"