ನರಿ ಮಲೆ ಬೆಟ್ಟ
Jump to navigation
Jump to search
ನರಿ ಮಲೆ ಬೆಟ್ಟ ಕರ್ನಾಟಕ ರಾಜ್ಯದ ಕೊಡಗು ಜುಲ್ಲೆಯ ಬ್ರಹ್ಮಗಿರಿ ಬೆಟ್ಟಗಳ ಸಾಲಿನಲ್ಲಿ ಕರ್ನಾಟಕ ಹಾಗು ಕೇರಳ ರಾಜ್ಯಗಳ ಗಡಿ ಭಾಗಕ್ಕೆ ಹೊಂದಿಕೊಂಡಂತೆ ಬರುತ್ತದೆ. ಇರ್ಪು ಜಲಪಾತದಿಂದ ಬ್ರಹ್ಮಗಿರಿಗೆ ಹೋಗುವಾಗ ಸುಮಾರು ೪.೫ ಕಿ.ಮೀಗಳ ನಂತರ ಸಿಗುತ್ತದೆ. ಲಕ್ಷ್ಮಣ ತೀರ್ಥ ನದಿಯು ನರಿ ಮಲೆ ಬೆಟ್ಟದಲ್ಲಿ ಮೊದಲು ಒಂದು ಜಲಪಾತವನ್ನು ನಿರ್ಮಿಸಿದೆ. ನಂತರ ಇದು ಬೆಟ್ಟದ ಕೆಳಬಾಗದಲ್ಲಿ ಧುಮುಕಿ ಇರ್ಪು ಜಲಪಾತ ಎಂಬ ಹೆಸರು ಪಡೆದಿದೆ. ಕೊಡಗಿನ ಸ್ಥಳೀಯ ಭಾಷೆಯಲ್ಲಿ ನರಿ ಎಂದರೆ ಹುಲಿ. ಬಹಳ ಹಿಂದೆ ಈ ಪ್ರದೇಶದಲ್ಲಿ ಹುಲಿಗಳು ಹೆಚ್ಚಾಗಿ ಇದ್ದ ಕಾರಣದಿಂದ ನರಿ ಮಲೆ ಎಂಬ ಹೆಸರು ಬಂದಿದೆ. ನರಿ ಮಲೆ ಬೆಟ್ಟದಲ್ಲಿ ಅರಣ್ಯ ಇಲಾಖೆಯವರು ಕಳ್ಳ ಬೇಟೆ ತಡೆಯುವ ಸಲುವಾಗಿ ತಂಗಲು ಒಂದು ವಿಶ್ರಾಂತಿ ಗೃಹವನ್ನು ನಿರ್ಮಿಸಿದ್ದಾರೆ. ಬ್ರಹ್ಮಗಿರಿ ಬೆಟ್ಟಕ್ಕೆ ಇಲ್ಲಿಂದ ೫ ಕಿ.ಮೀ ದೂರವಿದೆ ಹಾಗು ಮುನಿಕಲ್ ಗುಹೆ (ಕೇರಳ ರಾಜ್ಯಕ್ಕೆ ಸೇರಿದ್ದು) ಸುಮಾರು ೩.೫ ಕಿ.ಮೀ ದೂರವಿದೆ.