ವಿಷಯಕ್ಕೆ ಹೋಗು

ಬ್ರಹ್ಮಗಿರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬ್ರಹ್ಮಗಿರಿ ಬೆಟ್ಟ
ಬ್ರಹ್ಮಗಿರಿ ಬೆಟ್ಟ.
Highest point
ಎತ್ತರ[convert: invalid number]
ನಿರ್ದೇಶಾಂಕಗಳು11°57′N 75°57′E / 11.950°N 75.950°E / 11.950; 75.950
Naming
ಆಂಗ್ಲ ಭಾಷಾನುವಾದಬ್ರಹ್ಮಗಿರಿ
Language of nameಕನ್ನಡ
Geography
Parent rangeಸಹ್ಯಾದ್ರಿ ಪರ್ವತಶ್ರೇಣಿ
Climbing
ಸುಲಭವಾದ ಮಾರ್ಗHike
ಬ್ರಹ್ಮಗಿರಿ ಬೆಟ್ಟ

ಬ್ರಹ್ಮಗಿರಿ ಪಶ್ಚಿಮಘಟ್ಟ ಪರ್ವತಶ್ರೇಣಿಯಲ್ಲಿ ಇರುವ ಒಂದು ಬೆಟ್ಟ. ಸಮುದ್ರ ಮಟ್ಟದಿಂದ ೧೬೦೮ ಮೀಟರ್ ಎತ್ತರದಲ್ಲಿರುವ ಈ ಬೆಟ್ಟವು ಕೇರಳವಾಯ್ನಾಡ್ ಜಿಲ್ಲೆ ಮತ್ತು ಕರ್ನಾಟಕಕೊಡಗು ಜಿಲ್ಲೆಗಳ ಮಧ್ಯದಲ್ಲಿ ಇದೆ. ದಕ್ಷಿಣ ಭಾರತದ ಜೀವ ನದಿಯಾಗಿರುವ ಕಾವೇರಿ ನದಿಯ ಉಗಮ ಸ್ಥಾನ ಕರ್ನಾಟಕದ ಕೊಡಗು ಜಿಲ್ಲೆಯ ಬ್ರಹ್ಮಗಿರಿಯ ತಪ್ಪಲಲ್ಲಿ ತಲಕಾವೇರಿಯಲ್ಲಿದೆ. ಕಾವೇರಿ ನದಿಯ ಉಗಮಸ್ಥಾನ ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ದಿಯನ್ನು ಪಡೆದ ಸುಂದರ ಪ್ರಕೃತಿಯ ಮಡಿಲಿನಲ್ಲಿರುವ ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟದ ಮೇಲಿದೆ. ಸಮುದ್ರ ಮಟ್ಟದಿಂದ 5000 ಅಡಿ ಎತ್ತರದ ಮೇಲಿರುವ ತಲಕಾವೇರಿ ಕೊಡಗಿನ ಮುಖ್ಯ ಪಟ್ಟಣವಾದ ಮಡಿಕೇರಿಯಿಂದ 48 ಕಿ. ಮಿ. ದೂರದಲ್ಲಿದೆ. ತ್ರಿವೇಣಿ ಸಂಗಮವಿರುವ ಭಾಗಮಂಡಲ ಮಾರ್ಗವಾಗಿ ತಲಕಾವೇರಿಗೆ ತಲುಪಬಹುದು.ಬ್ರಹ್ಮಗಿರಿಯ ಬೆಟ್ಟದ ಬುಡದಲ್ಲಿರುವ ತಲಕಾವೇರಿಯಿಂದ ಕಾವೇರಿ ಹುಟ್ಟಿ ಗುಪ್ತಗಾಮಿನಿಯಾಗಿ ಹರಿದು ಬಂದು ಸುಜ್ಯೋತಿ, ಕನ್ನಿಕೆ ನದಿಗಳೊಡನೆ ಸೇರುವ ಸ್ಥಳವೇ ತ್ರಿವೇಣಿ ಸಂಗಮವಾಗಿದೆ ಪ್ರತಿವರ್ಷ ಅಕ್ಟೋಬರ್ ತಿಂಗಳ ಉತ್ತಾರಾರ್ಧ ಆರಂಭದ ದಿನ ಸೂರ್ಯ ತುಲಾ ರಾಶಿಯನ್ನು ಪ್ರವೇಸಿಸುವ ಸಂಕ್ರಮಣದ ನಿಶ್ಚಿತ ಗಳಿಗೆ ಕನ್ಯಾ ಲಗ್ನದಲ್ಲಿ ತಲಕಾವೇರಿಯ ಪವಿತ್ರ ತೀರ್ಥಕುಂಡಿಕೆಯಲ್ಲಿ ’ತೀರ್ಥ ಉದ್ಭವ’ ವಾಗುತ್ತದೆ.ಈ ಸಂದರ್ಭದಲ್ಲಿ ಗಂಗಾದಿ ಸಮಸ್ತ ತೀರ್ಥಗಳು ಕಾವೇರಿಯಲ್ಲಿ ಸಂಗಮಿಸುವುದೆಂದು ಪ್ರತೀತಿ. ಈ ಸಮಯದಲ್ಲಿ ತೀರ್ಥ ಸ್ನಾನ ಮಾಡಿದರೆ ಸಮಸ್ತ ಪಾಪಗಳು ಪರಿಹಾರವಾಗುವುದೆಂದು ಜನಕೋಟಿ ನಂಬಿಕೊಂಡು ಬಂದಿದೆ.ಸ್ಕಂದ ಪುರಾಣದಲ್ಲಿ ತಲಕಾವೇರಿ ಬಗ್ಗೆ ಕತೆಯೊಂದಿದೆ. ಕಾವೇರಿಯ ಉಗಮಸ್ಥಾನವೇ ತೀರ್ಥಕುಂಡಿಕೆ.2/2 ಅಡಿ ಅಗಲದ ಕುಂಡಿಕೆಯಲ್ಲಿ ಜಲದರ್ಶನ.ಪವಿತ್ರ ಕುಂಡಿಕೆಯ ಪಕ್ಕದಲ್ಲಿ ಮೆಟ್ಟಲುಗಳನ್ನು ಏರಿ ಮೇಲೆ ಹೋದರೆ ಗಣಪತಿ, ಅಗಸ್ತೇಶ್ವರ ದೇವಸ್ಥಾನ. ಅದರ ಪಕ್ಕದಲ್ಲಿಯೇ "ಬ್ರಹ್ಮಗಿರಿ" ಬೆಟ್ಟ ಏರಿ ಹೋಗಲು ಮೆಟ್ಟಲುಗಳಿವೆ. 300ಅಡಿ ಎತ್ತರದ ಬೆಟ್ಟ ಹತ್ತಿ ಮೇಲೆ ತಲುಪಿದರೆ, ತುದಿಯಲ್ಲಿ ಸುತ್ತಲೂ ಗಿರಿ ಕಾನನಗಳು ಬೆಟ್ಟಗಳ ಸಾಲು ಸಾಲು ಬೆಳ್ಳಿ ಮೋಡಗಳನ್ನು ಮುತ್ತಿಕ್ಕುವಂತೆ ಕಾಣುತ್ತದೆ. ವಾತಾವರಣ ಶುಭ್ರವಾಗಿದ್ದರೆ ನೂರಾರು ಕಿ. ಮಿ. ದೂರದಲ್ಲಿರುವ ಕೇರಳದ ಅರಬ್ಬಿ ಸಮುದ್ರವನ್ನು ಕಾಣಬಹುದು. ಬ್ರಹ್ಮಗಿರಿ ಬೆಟ್ಟದ ಮೇಲೆ ಪುರಾಣದಲ್ಲಿ ಉಲ್ಲೇಖವಿದ್ದಂತೆ, ಸಪ್ತ ಮಹರ್ಷಿಗಳು ಬ್ರಹ್ಮಗಿರಿ ಬೆಟ್ಟದ ತುದಿಯಲ್ಲಿ ಏಳು ಯಜ್ಞ ಕುಂಡಗಳನ್ನು ನಿರ್ಮಿಸಿ ಪಕ್ಕದಲ್ಲಿ ಸಣ್ಣ ಸಣ್ಣ ನೀರಿನ ಹೊಂಡಗಳನ್ನೂ ನಿರ್ಮಿಸಿಕೊಂಡು ಯಜ್ಞಗಳನ್ನು ಮಾಡುತಿದ್ದರು. ಆ ಸಣ್ಣ ನೀರಿನ ಹೊಂಡಗಳು ಇಂದಿಗೂ ಅಲ್ಲಿ ಇದೆ. ವರ್ಷ ಪೂರ್ತಿ ಅದರಲ್ಲಿ ನೀರು ಇರುತ್ತದೆ.

ತೀರ್ಥಕುಂಡಿಕೆ