ಮಲೈ ಮಹದೇಶ್ವರ ಬೆಟ್ಟ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮಲೈ ಮಹದೇಶ್ವರ ಬೆಟ್ಟ / ಮಲೈ ಮಹದೇಶ್ವರ ಬೆಟ್ಟ
ಮಲೈ ಮಹದೇಶ್ವರ ಬೆಟ್ಟ / ಮಲೈ ಮಹದೇಶ್ವರ ಬೆಟ್ಟ ನಗರದ ಪಕ್ಷಿನೋಟ
ಮಹದೇಶ್ವರ ಸ್ವಾಮಿ ದೇವಾಲಯವಿದೆ
India-locator-map-blank.svg
Red pog.svg
ಮಲೈ ಮಹದೇಶ್ವರ ಬೆಟ್ಟ / ಮಲೈ ಮಹದೇಶ್ವರ ಬೆಟ್ಟ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಚಾಮರಾಜನಗರ
ನಿರ್ದೇಶಾಂಕಗಳು 12° N 77° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ

 - /ಚದರ ಕಿ.ಮಿ.
ಅಂತರ್ಜಾಲ ತಾಣ: www.mmhills.com
ಶ್ರೀ ಮಲೆ ಮಹದೇಶ್ವರ - ಮುಖ ಪಶ್ಚಿಮ ದ್ವಾರ
ಶ್ರೀ ಮಲೆ ಮಹದೇಶ್ವರ ಬೆಟ್ಟ - ತಾಳಬೆಟ್ಟ.
ಶ್ರೀ ಮಲೆ ಮಹದೇಶ್ವರ - ಗರ್ಭಗುಡಿ
ಶ್ರೀ ಮಲೆ ಮಹದೇಶ್ವರ - ದಕ್ಷಿಣ ದ್ವಾರ

ಮಲೈ ಮಹದೇಶ್ವರ ಬೆಟ್ಟಗಳು ಚಾಮರಾಜನಗರ ಜಿಲ್ಲೆಯಲ್ಲಿ ಇರುವ ಬೆಟ್ಟಗಳು. ಇವು ಪೂರ್ವ ಘಟ್ಟಗಳಿಗೆ ಸೇರುತ್ತವೆ. ಕೊಳ್ಳೇಗಾಲಕ್ಕೆ ೮೦ ಕಿ ಮೀ ಹಾಗೂ ಮೈಸೂರಿನಿಂದ ೧೫೦ ಕಿ ಮೀ ಹಾಗೂ ಬೆಂಗಳೂರುನಿಂದ ೨೧೦ ಕಿ ಮೀ ದೂರ ದಲ್ಲಿರುವ ಬೆಟ್ಟ ಶ್ರೇಣಿಯೇ ಮಹದೇಶ್ವರ ಬೆಟ್ಟ.. ಈ ಬೆಟ್ಟಗಳಿಗೆ ಮಾದೇಶ್ವರ ಬೆಟ್ಟ, ಮಾದೇಶನ ಬೆಟ್ಟ, ಮಹದೇಶ್ವರ ಗಿರಿ, ಎಂ ಎಂ ಹಿಲ್ಸ್ ಎಂಬ ಇತರೆ ಹೆಸರುಗಳಿವೆ. ಈ ಬೆಟ್ಟ ಕೊಳ್ಳೇಗಾಲದ ಪೂರ್ವಕ್ಕಿರುವ ಪವಿತ್ರ ಯಾತ್ರಾಸ್ಥಳ.

ಇತಿವೃತ್ತ[ಬದಲಾಯಿಸಿ]

  • ಶ್ರೀ ಮಹದೇಶ್ವರ ಸ್ವಾಮಿಯ ಭಕ್ತಾದಿಗಳು ಲಿ೦ಗಯುತರ ಮನೆ ದೇವರು ಬೆಂಗಳೂರು ನಗರ, ಬೆಂಗಳೂರು ಗ್ರಾಮಂತರ, ರಾಮನಗರ, ತುಮಕೂರು, ಮಂಡ್ಯ, ಹಾಸನ ಮೈಸೂರುಮತ್ತು ಚಾಮರಾಜ ನಗರ ಜಿಲ್ಲೆಗಳಲ್ಲಿ ಇದ್ದರೆ, ಈ ವಿಶಾಲ ಬೆಟ್ಟದ ಮೇಲೆ ಮಹದೇಶ್ವರ ಸ್ವಾಮಿ ದೇವಾಲಯವಿದೆ. ಬೆಟ್ಟ ಹತ್ತಲು ಸರ್ಪನದಾರಿ, ಬಸವನದಾರಿ ಎಂಬ ಎರಡು ಮಾರ್ಗಗಳಿವೆ.
  • ಸ್ಥಳ ಪುರಾಣದ ಪ್ರಕಾರ ಈ ಬೆಟ್ಟಕ್ಕೆ ಸೇರಿದಂತೆ ಆನೆಮಲೆ, ಜೇನುಮಲೆ, ಕಾನುಮಲೆ, ಪಷ್ಷೆಮಲೆ, ಪವಳಮಲೆ, ಪೊನ್ನಾಚಿ ಮಲೆ, ಕೊಂಗುಮಲೆ ಎಂಬಾಗಿ ೭೭ ಮಲೆಗಳಿವೆ. ಈ ಪೈಕಿ ಮಹದೇಶ್ವರ ಬೆಟ್ಟದಲ್ಲಿ ಇರುವ ಶಿವ ದೇವಾಲಯವೇ ಪ್ರಧಾನವಾದ್ದು. ಕುರುಬ ಗೌಡರ(ಹಾಲಮತ ಗೌಡರು ) ಮನೆ ದೇವರು ಮತ್ತು ಕುಲದೈವ. ಗಿರಿಜನರ, ಸೋಲಿಗರ ಹಾಗೂ ಸುತ್ತಮುತ್ತಲ ಪ್ರದೇಶದ ಹಲವು ವಂಶಗಳ ಕುಲದೈವವಾಗಿ ಪೂಜಿಸಲ್ಪಡುವ ಮಹದೇಶ್ವರರು ೧೫ನೇ ಶತಮಾನದಲ್ಲಿ ಜೀವಿಸಿದ್ದರೆಂದು ಇತಿಹಾಸದಿಂದ ತಿಳಿದುಬರುತ್ತದೆ. *ಲೋಕಕಲ್ಯಾಣಾರ್ಥ ದೇಶ ಸಂಚಾರ ಮಾಡಿ, ಹಲವರ ಸಂಕಷ್ಟ ಪರಿಹರಿಸಿದ ಪವಾಡಪುರುಷ ಮಹದೇಶ್ವರರು ಹರದನಹಳ್ಳಿ ಮಠದ ಮೂರನೇ ಮಠಾಧೀಶರಾಗಿದ್ದರೆಂದೂ ತಿಳಿದುಬರುತ್ತದೆ. ಜುನ್ಜೆ ಗೌಡ ಈತ ಶ್ರೀಮಂತ ಕುರುಬ ಗೌಡ ಈ ದೇವಾಲಯವನ್ನು ಕಟ್ಟಿಸಿದವನು. ಸುಮಾರು ೬೦೦ ವರ್ಷಗಳ ಹಿಂದೆ ಇಲ್ಲಿಗೆ ಬಂದ ಅವರು, ಬೆಟ್ಟದಲ್ಲಿ ನೆಲೆಸಿ ದೀರ್ಘಕಾಲ ತಪವನ್ನಾಚರಿಸಿದರೆಂದೂ, ತಮ್ಮ ದಿವ್ಯ ಹಾಗೂ ತಪಃಶಕ್ತಿಯಿಂದ ಜನರ ಕಷ್ಟವನ್ನು ನಿವಾರಿಸುತ್ತಿದ್ದರೆಂದೂ ಹೇಳಲಾಗುತ್ತದೆ.
  • ಇಂದಿಗೂ ಇಲ್ಲಿ ಮಹದೇಶ್ವರರು ಲಿಂಗರೂಪದಲ್ಲಿ ನೆಲೆಸಿದ್ದಾರೆಂಬುದು ಜನರ ನಂಬಿಕೆ. ಬೆಟ್ಟಗಳಿಂದಲೇ ಸುತ್ತುವರಿದ ವಿಶಾಲ ಪ್ರದೇಶದಲ್ಲಿರುವ ದೇವಾಲಯ ೧೫೦ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹಬ್ಬಿದೆ. ಮಹದೇಶ್ವರರ ಬಗ್ಗೆ ನೂರಾರು ಜಾನಪದ ಪ್ರಸಂಗಗಳಿವೆ. ಹುಲಿಯ ಬೆನ್ನೇರಿ ಸವಾರಿ ಮಾಡುತ್ತಿದ್ದ ಮಹದೇಶ್ವರರು ಒಬ್ಬ ಮಹಿಮಾ ಪುರುಷ, ಪವಾಡ ಪುರುಷ ಎಂಬುದು ಕಾವ್ಯಗಳಲ್ಲಿ ವೇದ್ಯವಾಗಿದೆ. ದಕ್ಷಿಣ ಕರ್ನಾಟಕದ ಬೇವಿನ ಕೊಲ್ಲಿಯಲ್ಲಿ ಮಹದೇಶ್ವರರ ಜನ್ಮ ತಳೆದರೆಂಬ ಪ್ರತೀತಿ ಇದೆ.
  • ಇವರಲ್ಲಿ ಅಸಾಮಾನ್ಯವಾದ ಅಲೌಕಿಕ ಶಕ್ತಿಯಿತ್ತು. ತಮ್ಮ ಶಕ್ತಿಯಿಂದ ಅವರು ಸಮಾಜದ ಉದ್ಧಾರಕ್ಕೆ ಶ್ರಮಿಸಿದರು. ಈಗಲೂ ತಮ್ಮ ಶಕ್ತಿಯಿಂದ ಭಕ್ತರನ್ನು ಹರಸುತ್ತಿದ್ದಾರೆ ಎಂಬುದು ನಂಬಿಕೆ. ಹೈದರಾಲಿಯ ಕಾಲದ 1761ರ ಒಂದು ಶಾಸನದಲ್ಲಿ ಮಹದೇಶ್ವರರ ಬಗ್ಗೆ ವಿವರಗಳು ತಿಳಿದುಬರುತ್ತವೆ. ಈ ದೇವಸ್ಥಾನಕ್ಕೆ ‍ಫೆಬ್ರವರಿ ತಿಂಗಳ ಮಹಾಶಿವರಾತ್ರಿ ಅಮವಾಸ್ಯೆಯಂದು ವಿಶೇಷ ಪೂಜೆಯು ನಡೆಯುತ್ತದೆ.ಆ ದಿನದಂದು ಲಕ್ಷಾಂತರ ಭಕ್ತಾದಿಗಳು ಕಾಲ್ನಡಿಗೆಯಲ್ಲಿ ಆಗಮಿಸುತ್ತಾರೆ.ಮಂಡ್ಯ,ಚಾಮರಾಜನಗರ,ಮೈಸೂರು,ಬೆಂಗಳೂರು, ಇತ್ಯಾದಿ ಜಿಲ್ಲೆಗಳ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸುತ್ತಾರೆ.