ಹನೂರು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

.


ಇದು ಚಾಮರಾಜನಗರ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಮಹದೇಶ್ವರಬೆಟ್ಟವಿರುವ ತಾಲೂಕು, ಕರ್ನಾಟಕದಿಂದ ತಮಿಳುನಾಡನ್ನು ಬೇರ್ಪಡಿಸುವ,ಕೊಯಮತ್ತೂರು ಜಿಲ್ಲೆಗೆ ಈ ತಾಲೂಕಿನಿಂದ ಹಾದು ಹೋಗಬಹುದು.ಮಲೈ ಮಹದೇಶ್ವರ ಬೆಟ್ಟದಿಂದ ಸ್ವಲ್ಪ ದೂರದಲ್ಲಿ ಹೊಗೆಯನಕಲ್ಲು ಜಲಪಾತವಿದೆ. ಇದು ತಮಿಳುನಾಡಿಗೂ ಕರ್ನಾಟಕ ರಾಜ್ಯಕ್ಕೂ ವಿವಾದವಾಗಿರುವ ಸ್ಥಳ. ಹನೂರಿನ 'ಕ್ರಿಸ್ತರಾಜ ಶಾಲೆ'ತನ್ನ ಒಳ್ಳೆಯ ಶಿಕ್ಷಣ ಮತ್ತು ಫಲಿತಾಂಶದಿಂದ ಜಿಲ್ಲೆಯಲ್ಲೇ ಹೆಸರುವಾಸಿಯಾಗಿದೆ. ಈ ಶಾಲೆ ಕಲಿಕೆಯ ಜೊತೆ ಆಟ, ಓಟದಲ್ಲೂ ಒಳ್ಳೆಯ ಫಲಿತಾಂಶವನ್ನು ಕೊಟ್ಟಿದೆ. ವೀರಪ್ಪನ್ ನಿಂದ ಹತ್ಯಗೀಡಾದ ನಾಗಪ್ಪನವರು ಹನೂರಿನ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಬಂದವರು. ಹನೂರು ಸುತ್ತಮುತ್ತಲಿನ ಊರುಗಳಾದ ಬಂಡಳ್ಳಿ, ಲೊಕ್ಕನಹಳ್ಳಿ, ಅಜ್ಜೀಪುರ, ರಾಮಾಪುರ,ಗೋಪಿಶೆಟ್ಟಿಯೂರು,ಕೌದಳ್ಳಿ ಮುಂತಾದ ಊರುಗಳಿಗೆ ಪ್ರಮುಖ ವಾಣಿಜ್ಯ ಸ್ಥಳವಾಗಿದೆ. ಹನೂರು ಅಧಿಕೃತ ವಾಗಿ 2018 ರಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ

ಶ್ರೀ ಮಲೈಯ ಮಹದೇಶ್ವರ ಬೆಟ್ಟ[ಬದಲಾಯಿಸಿ]

ಮಲೈಮಹದೇಶ್ವರ ದೇವಾಲಯವು ಪುಣ್ಯ ಕೇತ್ರವಾಗಿದ್ದು ಇಲ್ಲಿ ಸಾಲೂರು ಮಠವು ಇದೆ. ಇಲ್ಲಿಂದ ಮುಂದುವರೆದು ನಾಗಮಲೈ ದೇವಾಲವು ಕೂಡ ಇಲ್ಲಿದ್ದು, ನಾಗರ ಹೆಡೆಯಂತೆ ಬಂಡೆಗಳಿರುವ ಕಾರಣ ಇದನ್ನು ನಾಗಮಲ್ಯೆ ಎಂದು ಕರೆಯುತ್ತಾರೆ ಹಾಗೂ ಮಹದೇವನು ಪ್ರಸ್ತುತ ಇಲ್ಲಿ ನೆಲೆಸಿರುವುದಾಗಿ ನಂಬಿಕೆಯಿದೆ. ಈ ದೇವಾಲಯಕ್ಕೆ ಎಲ್ಲೇಮಾಳ ಮಾರ್ಗವಾಗಿಯೂ ಮತ್ತು ರಾಮಾಪುರ ಮಾರ್ಗವಾಗಿಯೂ ಪ್ರಯಾಣ ಬೆಳೆಸಬಹುದಾಗಿದೆ.

Hanur
India-locator-map-blank.svg
Red pog.svg
Hanur
ರಾಜ್ಯ
 - ಜಿಲ್ಲೆ
Karnataka
 - Chamarajanagar
ನಿರ್ದೇಶಾಂಕಗಳು 12.083° N 77.283° E
ವಿಸ್ತಾರ
 - ಎತ್ತರ
2.12 km²
 - 727 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
10682
 - 5038.68/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 571 439
 - +08224
 - KA-10

ಮಿಣ್ಯ ಗುರುಸಿದ್ಧ ಕವಿಯು ಶ್ರೀ ಮಲೈಮಹದೇಶ್ವರ ಕುರಿತು ಮಹದೇಶ್ವರ ವಿಳಾಸ ಕಾವ್ಯವನ್ನು ಬರೆದಿದ್ದು ಇದು ಮಹದೇವರ ಪವಾಡವನ್ನು ಕುರಿತು ಮಾಹಿತಿಯನ್ನು ನೀಡುತ್ತದೆ. ಈ ಕೃತಿಯು ಮಹದೇಶ್ವರ ಬಗ್ಗೆ ಮಾಹಿತಿಯನ್ನು ನೀಡುವ ಪ್ರಾಚೀನವಾಗಿದ್ದಾಗಿದೆ. ಜಾನಪದ ಮಹಾಕಾವ್ಯಗಳಲ್ಲಿ ಈ ಪ್ರದೇಶವನ್ನು ಕತ್ತಲೆಯ ರಾಜ್ಯವೆಂದು ಬರ್ಣಿಸಿದ್ದು, ಮಹದೇವ ಆಗಮನದಿಂದಾಗಿ ಈ ಪ್ರದೇಶ ಸಂಸ್ಕೃತಿಯ ನಾಯಕನ ಪ್ರವೇಶವಾಯಿತು ಎಂದು ಹೇಳಲಾಗುತ್ತದೆ. ಈ ಭೂಮಿಯು ಕೆಲವು ೀ ಮೊದಲೇ ಜಾಗೃತ ಭೂಲಿಯಾಗಿದ್ದು, ಕೆಲವು ಮಾಂತ್ರಿಕರಿಂದ ಕಟ್ಟಲ್ಪಟ್ಟು ಕಲ್ತ್ಲೆ ರಾಜ್ಯವಾಗಿರಲು ಬಹುದು ನಂತರೆ ಮಹದೇವನ ಾಗಮನದಿಂದ ಮಾಂತ್ರಿಕ ಶಕ್ತಿಯ ಪೊರೆಯಿಳಿಸಿ ಸಂಸ್ಕೃತಿಯ ನಾಡಗಿ ಪರಿಣಮಿಸಿಹುದು ಎಂಬುದನ್ನು ಮಹದೇವನ ಪವಾಡದ ಲೀಲೆಗಳಿಂದ ತಿದು ಬರುತ್ತದೆ ಎಂಬುದನ್ನು ನಾವು ಅರಯಲೇ ಬೇಕಾಗಿದೆ

"https://kn.wikipedia.org/w/index.php?title=ಹನೂರು&oldid=830889" ಇಂದ ಪಡೆಯಲ್ಪಟ್ಟಿದೆ