ವಿಷಯಕ್ಕೆ ಹೋಗು

ಲಕ್ಷ್ಮಣ ತೀರ್ಥ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಲಕ್ಷ್ಮಣ ತೀರ್ಥ ಇಂದ ಪುನರ್ನಿರ್ದೇಶಿತ)
ಲಕ್ಷ್ಮಣ ತೀರ್ಥ ನದಿ
ಇರುಪು ಜಲಪಾತ
ಸ್ಥಳಕೊಡಗು ಜಿಲ್ಲೆ, ಕರ್ನಾಟಕ, ಭಾರತ
ಒಟ್ಟು ಉದ್ದ೧೮೦ ಕಿಮೀ
ಒಟ್ಟು ಪ್ರಪಾತಗಳು
ಹೊಸರಾಮನಹಳ್ಳಿಯ ಬಳಿ ಲಕ್ಷ್ಮಣತೀರ್ಥ ನದಿಯು ತುಂಬಿ ಹರಿಯುತ್ತಿರುವುದು.

ಕರ್ನಾಟಕಕೊಡಗು ಜಿಲ್ಲೆಯಲ್ಲಿ ಉಗಮಿಸುವ ಲಕ್ಷ್ಮಣ ತೀರ್ಥ ನದಿಯು ಭಾರತದ ನದಿಗಳಲ್ಲೊಂದು[]. ಇದು ಪೂರ್ವಾಭಿಮುಖವಾಗಿ ಹರಿದು ಮುಂದೆ ಕೃಷ್ಣರಾಜ ಸಾಗರದ ಸಮೀಪ ಕಾವೇರಿ ನದಿಯನ್ನು ಸೇರುತ್ತದೆ. ಕೊಡಗು ಜಿಲ್ಲೆಯ ಮುನಿಕಾಡು ಅರಣ್ಯದಲ್ಲಿ ಹುಟ್ಟುವ 'ಲಕ್ಷ್ಮಣ ತೀರ್ಥ' ನದಿಯು ಒಟ್ಟು ಉದ್ದ ೧೮೦ ಕಿ.ಮೀಗಳು.

ಇತಿಹಾಸ

[ಬದಲಾಯಿಸಿ]

ರಾಮಾಯಣ ಕಾಲದಲ್ಲಿ ರಾಮನ ವನವಾಸದ ಸಂಧರ್ಭದಲ್ಲಿ ನೀರಿನ ಅವಶ್ಯಕತೆಯುಂಟಾದಾಗ ಲಕ್ಷ್ಮಣನು ಮುನಿಕಾಡಿನ ಬ್ರಹ್ಮಗಿರಿ ಎಂಬ ಬೆಟ್ಟಕ್ಕೆ ತನ್ನ ಬಾಣದಿಂದ ಹೊಡೆದಾಗ ಹುಟ್ಟಿಬರುವ ನದಿಯೆ ಲಕ್ಷ್ಮಣತೀರ್ಥ ನದಿಯೆಂಬ ಪ್ರತೀತಿಯಿದೆ.

ನದಿಪಾತ್ರ

[ಬದಲಾಯಿಸಿ]

ಲಕ್ಷ್ಮಣತೀರ್ಥ ನದಿಯು ದಕ್ಷಿಣ ಕೊಡಗಿನಲ್ಲಿ ಹುಟ್ಟಿ ಕೊಡಗು ಜಿಲ್ಲೆಯ ವಿರಾಜಪೇಟೆ, ಮೈಸೂರು ಜಿಲ್ಲೆಯ ಹುಣಸೂರು ಮತ್ತು ಕೃಷ್ಣರಾಜನಗರ ತಾಲೂಕಿನಲ್ಲಿ ಹರಿದು ಕೃಷ್ಣರಾಜಸಾಗರ(ಕೆ.ಆರ್.ಎಸ್)ದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ[].

ಪ್ರಮುಖ ಸ್ಥಳಗಳು

[ಬದಲಾಯಿಸಿ]

ಲಕ್ಷ್ಮಣತೀರ್ಥ ನದಿಯು ತನ್ನ ತಟದಲ್ಲಿ ಅನೇಕ ಸ್ಥಳಗಳನ್ನು ಹೊಂದಿದ್ದು ಅವುಗಳಲ್ಲಿ ಪ್ರಮುಖವಾದವುಗಳೆಂದರೆ :

  • ಹುಣಸೂರು - ಪ್ರಮುಖ ನಗರ
  • ಬ್ರಹ್ಮಗಿರಿ - ಹುಟ್ಟುವ ಸ್ಥಳ
  • ನಾಗರಹೊಳೆ - ಪ್ರಮುಖ ಅರಣ್ಯ ಪ್ರದೇಶ
  • ಇರುಪು - ಜಲಪಾತ[]
  • ಶ್ರೀಮಂಗಲ - ಪ್ರಮುಖ ಊರು
  • ತಿತಿಮತಿ - ಪ್ರಮುಖ ಊರು
  • ಹನಗೋಡು - ಅಣೆಕಟ್ಟು
  • ಕಟ್ಟೇಮಳವಾಡಿ - ಅಣೆಕಟ್ಟು
  • ಹೊಸರಾಮನಹಳ್ಳಿ - ಪ್ರಮುಖ ಏತನೀರಾವರಿ ಯೋಜನೆ ಮತ್ತು ಧಾರ್ಮಿಕ ಕ್ಷೇತ್ರ
  • ಶಿರಿಯೂರು - ಅಣೆಕಟ್ಟು

ಉಪನದಿಗಳು

[ಬದಲಾಯಿಸಿ]

ಲಕ್ಷ್ಮಣತೀರ್ಥ ನದಿಗೆ ಸೇರುವ ಉಪನದಿಯ ಹೆಸರು ರಾಮತೀರ್ಥ. ಕೆಲವು ಹಳ್ಳ, ತೊರೆಗಳು ಕೂಡ ಈ ನದಿಗೆ ಸೇರುತ್ತವೆ.

ನೀರಾವರಿ ಯೋಜನೆಗಳು

[ಬದಲಾಯಿಸಿ]

ಕರ್ನಾಟಕ ಸರ್ಕಾರವು ಲಕ್ಷ್ಮಣತೀರ್ಥ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನ ಹಮ್ಮಿಕೊಂಡಿದ್ದು ಇದಕ್ಕಾಗಿ ಹೊಸರಾಮನಹಳ್ಳಿ, ಮರದೂರು, ಶಿರಿಯೂರು ಮುಂತಾದ ಕಡೆಗಳಲ್ಲಿ ಏತನೀರಾವರಿ ಘಟಕಗಳನ್ನು ಸ್ತಾಪಿಸಿದೆ.

ಅಣೆಕಟ್ಟೆಗಳು

[ಬದಲಾಯಿಸಿ]

ಲಕ್ಷ್ಮಣತೀರ್ಥ ನದಿಗೆ ಹನಗೋಡು, ಕಟ್ಟೇಮಳವಾಡಿ ಮತ್ತು ಶಿರಿಯೂರಿನಲ್ಲಿ ಅಣೆಕಟ್ಟುಗಳನ್ನು ಕಟ್ಟಾಲಾಗಿದ್ದು ಇವು ಸಾವಿರಾರು ಎಕರೆಗೆ ನೀರನ್ನ ಒದಗಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]