ಇರ್ಪು ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಇರ್ಪು ಜಲಪಾತ
From top of Irupu Falls.jpg
View from top of Irupu Falls
ಸ್ಥಳKodagu District, Karnataka, India
ನಿರ್ದೇಶಾಂಕಗಳ11°58′2.22″N 75°59′1.56″E / 11.9672833°N 75.9837667°E / 11.9672833; 75.9837667Coordinates: 11°58′2.22″N 75°59′1.56″E / 11.9672833°N 75.9837667°E / 11.9672833; 75.9837667
ಒಟ್ಟು ಉದ್ದ170 ft
ಒಟ್ಟು ಪ್ರಪಾತಗಳು2
ಸೇರುವ ನದಿLakshmana Tirtha River
Irupu falls Coorg district

ದಕ್ಷಿಣ ಭಾರತದ ಕಾಶ್ಮೀರ ಎಂದೇ ಪ್ರಖ್ಯಾತವಾಗಿರುವ ಕೊಡಗಿನ ಜಲಪಾತಗಳಲ್ಲಿ ಒಂದು.ಕೊಡಗಿನ ಹಲವಾರು ಜಲಪಾತಗಳ‍ಲ್ಲಿ ಒಂದಾಗಿರುವ ಈ ಜಲಪಾತ ತುಂಬಾ ರೋಮಾಂಚನಕಾರಿಯಾಗಿದೆ. ಮಡಿಕೇರಿಯಿಂದ ಸುಮಾರು ೫೦.ಕಿಮಿ ದೂರದಲ್ಲಿ ಇರುವ ಈ ಜಲಪಾತ,ನಾಗರಹೊಳೆ ಪ್ರಾಣಿ ರಕ್ಷಣಧಾಮದ ಕಾಡಿನಲ್ಲಿ ಸ್ಥಾಪಿತವಾಗಿದೆ.ಎಲ್ಲಾ ಕಾಲದಲ್ಲೂ ನೀರಿನಿಂದ ತುಂಬಿರುವ ಈ ಜಲಪಾತ ಮಳೆಗಾಲದಲ್ಲಿ ನೋಡಲು ತುಂಬಾ ಸುಂದರವಾಗಿರುತ್ತದೆ.ಈ ಜಲಪಾತವು ಪ್ರಸಿದ್ಧವಾದ ಪ್ರವಾಸಿತಾಣವಾಗಿದೆ.ಬ್ರಹ್ಮಗಿರಿ ಬೆಟ್ಟದಿಂದ ಉಗಮವಾಗುವ ಈ ಜಲಪಾತ ಲಕ್ಷಣತೀರ್ಥ ನದಿಗೆ ಸೇರ್ಪಡೆಯಾಗುತ್ತದೆ. ಪುರಾಣದಲ್ಲಿ ಬರುವ ಹಾಗೆ ರಾಮಾಯಣದ ಯುಗದಲ್ಲಿ ರಾಮನು ತನ್ನ ವನವಾಸದ ಕಾಲದಲ್ಲಿ ಈ ಕಾಡಿನಲ್ಲಿ ತಂಗಿದ್ದನು ಲಕ್ಷಣನು ರಾಮನಿಗೆ ನೀರು ತರಲು ಹೊರಟಾಗ ನೀರು ಎಲ್ಲೂ ಸಿಗದೆ ಬಾಣವನ್ನು ಕಾಡಿಗೆ ಬಿಟ್ಟನು.ಬಾಣ ಮುಟ್ಟಿದ ಜಾಗದಿಂದ ಜಲಪಾತವು ಸೃಷ್ಟಿಯಾಗುತ್ತದೆ.ಈ ಜಲಪಾತವೇ ಈಗಿನ ಇರ್ಪು ಜಲಪಾತ.ಜಲಪಾತವಿರುವ ಬೆಟ್ಟದ ಕೆಳಭಾಗದಲ್ಲಿ ರಾಮೇಶ್ವರ ದೇವಸ್ತಾನವಿದೆ.ಪುರಾಣದ ಪ್ರಕಾರ ಈ ದೇವಸ್ಥಾನದಲ್ಲಿರುವ ಶಿವಲಿಂಗವನ್ನು ಸ್ವಯಂ ಶ್ರೀರಾಮನೇ ಸ್ಥಾಪಿಸಿದನೆಂಬ ನಂಬಿಕೆ ಇದೆ.ಶಿವರಾತ್ರಿಯ ಸಮಯದಲ್ಲಿ ಈ ದೇವಸ್ಥಾನವು ಬಹಳಷ್ಟು ಭಕ್ತಾದಿಗಳನ್ನು ಆಕರ್ಶಿಸುತ್ತದೆ.

ಮಡಿಕೇರಿ ಇರ್ಪ್ಪು ಜಲಪಾತವು ಕೊಡಗಿನ ಒಂದು ಅಮೊಘವಾದ ಪ್ರವಾಸಿ ಸ್ಥಳವಾಗಿದೆ. ಈ ಜಲಪಾತವು ದಕ್ಶಿಣ ಕೊಡಗಿನ ಭ್ರಹ್ಮಗಿರಿ ಬೆಟ್ಟದ ಎಡ ಭಗದಿಂದ ಹರಿಯುತ್ತದೆ. ಲಕ್ಶ್ಮಣ ತೀರ್ಥ ಎಂಬ ಹೆಸರು ಇದೆ. ತ್ರೆಥಾಯುಗದಲ್ಲಿ ರಾಮ ಲಕ್ಶ್ಮನರು ಸೀತೆಯನ್ನು ಅರಸುತ ಈ ನದಿಯನ್ನು ದಾಟಿರುವ ಇತಿಹಾಸ ಇದೆ. ರಾಮನು ದಾಹಾದಿಂದ ಲಕ್ಶ್ಮಣನೈಗೆ ನೀರು ತರಲು ಹೇಳಿದಾಗ,ಲಕ್ಶ್ಮಣನು ಭ್ರಹ್ಮಗಿರಿ ಬೆಟ್ಟಕ್ಕೆ ಅಂಬು ಹೊಡೆದು ಬೆಟ್ಟದಿಂದ ನೀರನ್ನು ಚಿಮ್ಮಿಸಿದನು. ಇದರ ಪರಿಯಾಗಿ ಈ ನದಿಗೆ ಲಕ್ಶ್ಮಣ ತೀರ್ಥ ಎಂಬ ಹೆಸರು ಬಂದಿರುವ ಇತಿಹಾಸವಿದೆ. ಈ ನದಿ ಇರ್ಪ್ಪು ಜಲಪಾತ ಎಂಬ ಹೆಸರಿನಲ್ಲಿ ಹರಿಯುತದ್ದೆ. ಇದು ೬೦ಮೀಟರ್ ಎತ್ತರದಿಂದ ಹರಿಯುತ್ತದೆ. ಅಲ್ಲಿಂದ ಇದು ಹಸಿರು ತುಂಬಿದ ಬೆಟ್ಟಗಳ ನಡುವಿನಿಂದ ಹರಿಯುತ್ತದೆ.ಇದೊ೦ದು ಪುಣ್ಯ ಸ್ಥಳವಾಗಿದೆ. ಜನರು ಈ ನೀರನ್ನು ಪುಣ್ಯ ನೀರೆಂದು ನ೦ಬಿದ್ದಾರೆ,ಆದ್ದರಿ೦ದ ಹೆಚ್ಚಗಿ ಸಾವಿರಾರು ಜನರು ಶಿವರಾತ್ರಿಯ ದಿನದಂದು ಈ ಸ್ಥಳಕ್ಕೆ ಆಗಮಿಸುತ್ತಾರೆ. ಜಲಪಾತವು ಬಹಳ ಪ್ರವಾಸಿ ಸ್ಥಳಗಲಿಗೆ ಹತ್ತಿರವಾಗಿದೆ. ಗೋಣಿಕೊಪ್ಪದಿಂದ ೩೦ ಕಿ.ಮಿ,ಮಡಿಕೇರಿ ಇಂದ ೮೦ ಕಿ.ಮಿ ಮತ್ತು ನಗರ ಹೊಳೆಯಿಂದ ೨೫ ಕಿ.ಮಿ ದೂರದಲ್ಲಿದೆ. ಇದೊಂದು ಬಹು ಆಕರ್ಶಿಕವಾದ ಪ್ರವಾಸಿ ಸ್ಥಳವಾಗಿದೆ,ಮತ್ತು ಪಾವಿತ್ರವಾದ ಸ್ಥಳವಾಗಿದೆ.