ಲಕ್ಷ್ಮಣ ತೀರ್ಥ ನದಿ
ಲಕ್ಷ್ಮಣ ತೀರ್ಥ ನದಿ | |
---|---|
ಸ್ಥಳ | ಕೊಡಗು ಜಿಲ್ಲೆ, ಕರ್ನಾಟಕ, ಭಾರತ |
ಒಟ್ಟು ಉದ್ದ | ೧೮೦ ಕಿಮೀ |
ಒಟ್ಟು ಪ್ರಪಾತಗಳು | ೨ |
ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಉಗಮಿಸುವ ಲಕ್ಷ್ಮಣ ತೀರ್ಥ ನದಿಯು ಭಾರತದ ನದಿಗಳಲ್ಲೊಂದು[೧]. ಇದು ಪೂರ್ವಾಭಿಮುಖವಾಗಿ ಹರಿದು ಮುಂದೆ ಕೃಷ್ಣರಾಜ ಸಾಗರದ ಸಮೀಪ ಕಾವೇರಿ ನದಿಯನ್ನು ಸೇರುತ್ತದೆ. ಕೊಡಗು ಜಿಲ್ಲೆಯ ಮುನಿಕಾಡು ಅರಣ್ಯದಲ್ಲಿ ಹುಟ್ಟುವ 'ಲಕ್ಷ್ಮಣ ತೀರ್ಥ' ನದಿಯು ಒಟ್ಟು ಉದ್ದ ೧೮೦ ಕಿ.ಮೀಗಳು.
ಇತಿಹಾಸ
[ಬದಲಾಯಿಸಿ]ರಾಮಾಯಣ ಕಾಲದಲ್ಲಿ ರಾಮನ ವನವಾಸದ ಸಂಧರ್ಭದಲ್ಲಿ ನೀರಿನ ಅವಶ್ಯಕತೆಯುಂಟಾದಾಗ ಲಕ್ಷ್ಮಣನು ಮುನಿಕಾಡಿನ ಬ್ರಹ್ಮಗಿರಿ ಎಂಬ ಬೆಟ್ಟಕ್ಕೆ ತನ್ನ ಬಾಣದಿಂದ ಹೊಡೆದಾಗ ಹುಟ್ಟಿಬರುವ ನದಿಯೆ ಲಕ್ಷ್ಮಣತೀರ್ಥ ನದಿಯೆಂಬ ಪ್ರತೀತಿಯಿದೆ.
ನದಿಪಾತ್ರ
[ಬದಲಾಯಿಸಿ]ಲಕ್ಷ್ಮಣತೀರ್ಥ ನದಿಯು ದಕ್ಷಿಣ ಕೊಡಗಿನಲ್ಲಿ ಹುಟ್ಟಿ ಕೊಡಗು ಜಿಲ್ಲೆಯ ವಿರಾಜಪೇಟೆ, ಮೈಸೂರು ಜಿಲ್ಲೆಯ ಹುಣಸೂರು ಮತ್ತು ಕೃಷ್ಣರಾಜನಗರ ತಾಲೂಕಿನಲ್ಲಿ ಹರಿದು ಕೃಷ್ಣರಾಜಸಾಗರ(ಕೆ.ಆರ್.ಎಸ್)ದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ[೨].
ಪ್ರಮುಖ ಸ್ಥಳಗಳು
[ಬದಲಾಯಿಸಿ]ಲಕ್ಷ್ಮಣತೀರ್ಥ ನದಿಯು ತನ್ನ ತಟದಲ್ಲಿ ಅನೇಕ ಸ್ಥಳಗಳನ್ನು ಹೊಂದಿದ್ದು ಅವುಗಳಲ್ಲಿ ಪ್ರಮುಖವಾದವುಗಳೆಂದರೆ :
- ಹುಣಸೂರು - ಪ್ರಮುಖ ನಗರ
- ಬ್ರಹ್ಮಗಿರಿ - ಹುಟ್ಟುವ ಸ್ಥಳ
- ನಾಗರಹೊಳೆ - ಪ್ರಮುಖ ಅರಣ್ಯ ಪ್ರದೇಶ
- ಇರುಪು - ಜಲಪಾತ[೩]
- ಶ್ರೀಮಂಗಲ - ಪ್ರಮುಖ ಊರು
- ತಿತಿಮತಿ - ಪ್ರಮುಖ ಊರು
- ಹನಗೋಡು - ಅಣೆಕಟ್ಟು
- ಕಟ್ಟೇಮಳವಾಡಿ - ಅಣೆಕಟ್ಟು
- ಹೊಸರಾಮನಹಳ್ಳಿ - ಪ್ರಮುಖ ಏತನೀರಾವರಿ ಯೋಜನೆ ಮತ್ತು ಧಾರ್ಮಿಕ ಕ್ಷೇತ್ರ
- ಶಿರಿಯೂರು - ಅಣೆಕಟ್ಟು
ಉಪನದಿಗಳು
[ಬದಲಾಯಿಸಿ]ಲಕ್ಷ್ಮಣತೀರ್ಥ ನದಿಗೆ ಸೇರುವ ಉಪನದಿಯ ಹೆಸರು ರಾಮತೀರ್ಥ. ಕೆಲವು ಹಳ್ಳ, ತೊರೆಗಳು ಕೂಡ ಈ ನದಿಗೆ ಸೇರುತ್ತವೆ.
ನೀರಾವರಿ ಯೋಜನೆಗಳು
[ಬದಲಾಯಿಸಿ]ಕರ್ನಾಟಕ ಸರ್ಕಾರವು ಲಕ್ಷ್ಮಣತೀರ್ಥ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನ ಹಮ್ಮಿಕೊಂಡಿದ್ದು ಇದಕ್ಕಾಗಿ ಹೊಸರಾಮನಹಳ್ಳಿ, ಮರದೂರು, ಶಿರಿಯೂರು ಮುಂತಾದ ಕಡೆಗಳಲ್ಲಿ ಏತನೀರಾವರಿ ಘಟಕಗಳನ್ನು ಸ್ತಾಪಿಸಿದೆ.
ಅಣೆಕಟ್ಟೆಗಳು
[ಬದಲಾಯಿಸಿ]ಲಕ್ಷ್ಮಣತೀರ್ಥ ನದಿಗೆ ಹನಗೋಡು, ಕಟ್ಟೇಮಳವಾಡಿ ಮತ್ತು ಶಿರಿಯೂರಿನಲ್ಲಿ ಅಣೆಕಟ್ಟುಗಳನ್ನು ಕಟ್ಟಾಲಾಗಿದ್ದು ಇವು ಸಾವಿರಾರು ಎಕರೆಗೆ ನೀರನ್ನ ಒದಗಿಸುತ್ತದೆ.
ಉಲ್ಲೇಖಗಳು
[ಬದಲಾಯಿಸಿ]