ಹೊಸರಾಮನಹಳ್ಳಿ

ಹೊಸರಾಮನಹಳ್ಳಿ | |
---|---|
ಗ್ರಾಮ | |
ನಿರ್ದೇಶಾಂಕ: 12°22′04″N 76°25′02″E / 12.367743°N 76.417261°ECoordinates: 12°22′04″N 76°25′02″E / 12.367743°N 76.417261°E | |
Country | ![]() |
State | ಕರ್ನಾಟಕ |
District | Mysore |
Elevation | ೭೭೦ m (೨,೫೩೦ ft) |
ಜನಸಂಖ್ಯೆ (೨೦೧೧) | |
• ಒಟ್ಟು | ೯೦೭೦ |
ಭಾಷೆಗಳು | |
• ಅಧಿಕೃತ | ಕನ್ನಡ |
ಸಮಯ ವಲಯ | ಯುಟಿಸಿ+5:30 (IST) |
PIN | ೫೭೧ ೧೦೩ |
Telephone code | ೦೮೨೨೨ |
ವಾಹನ ನೋಂದಣಿ | ಕೆಎ-೪೫ |
ಹೊಸರಾಮನಹಳ್ಳಿ ಒಂದು ಹಳ್ಳಿಯಾಗಿದ್ದು ಇದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿದೆ.
ಇತಿಹಾಸ[ಬದಲಾಯಿಸಿ]
ಮೈಸೂರು ತಾಲೂಕಿನ ಸಾಗರಕಟ್ಟೆ ಎಂಬ ಊರಿನ ಬಳಿ ರಾಮನಹಳ್ಳಿ ಎಂಬ ಊರಿತ್ತು ಕ್ರಿ.ಶ.೧೯೧೧ ರಲ್ಲಿ ಕೃಷ್ಣರಾಜಸಾಗರ(ಕೆ.ಆರ್.ಎಸ್) ಅಣೆಕಟ್ಟನ್ನು ಕಟ್ಟುವ ಸಂಧರ್ಭದಲ್ಲಿ ಮುಳುಗಡೆ ಭೀತಿಯಿಂದ ಈ ಗ್ರಾಮವನ್ನು ಈಗಿರುವ ಜಾಗಕ್ಕೆ ಸ್ಥಳಾಂತರಿಸಲಾಯಿತು, ಆಗ ಈ ಊರಿನ ಹೆಸರು ಹೊಸರಾಮನಹಳ್ಳಿ ಎಂದಾಯಿತು.
ಭೌಗೋಳಿಕ ವಿಳಾಸ[ಬದಲಾಯಿಸಿ]
ಹೊಸರಾಮನಹಳ್ಳಿಯು ಲಕ್ಷ್ಮಣತೀರ್ಥ ನದಿಯ ತೀರದಲ್ಲಿದ್ದು ಈ ಊರು ಮೈಸೂರು ಜಿಲ್ಲೆ, ಹುಣಸೂರು ತಾಲೂಕು, ಬಿಳಿಕೆರೆ ಹೋಬಳಿಯ ವ್ಯಾಪ್ತಿಯಲ್ಲಿದೆ.
ಬೆಳೆಗಳು[ಬದಲಾಯಿಸಿ]
ಇಲ್ಲಿನ ಮಣ್ಣು ಕೆಂಪು ಮಣ್ಣಾಗಿದ್ದು, ಭತ್ತ ಮುಖ್ಯ ಬೆಳೆಯಾಗಿದೆ ಮತ್ತು ಇಲ್ಲಿ ಬೆಳೆಯುವ ಇತರ ಪ್ರಮುಖ ಬೆಳೆಗಳೆಂದರೆ ತಂಬಾಕು, ರಾಗಿ, ತೆಂಗು, ಬಾಳೆ, ಜೋಳ ಮತ್ತು ಮೆಣಸಿನಕಾಯಿ.
ಜನಸಂಖ್ಯೆ[ಬದಲಾಯಿಸಿ]
ಹೊಸರಾಮನಹಳ್ಳಿಯ ಜನಸಂಖ್ಯೆ ಸುಮಾರು ೮೫೦೦ ಇದೆ ಮತ್ತು ಸಾಕ್ಷರತೆಯ ಪ್ರಮಾಣ ಶೇಕಡ ೪೫% ರಷ್ಟಿದೆ.
ಸ್ಥಳ ವಿಶೇಷ[ಬದಲಾಯಿಸಿ]
ಹೊಸರಾಮನಹಳ್ಳಿಯಲ್ಲಿ ವರ್ಷಕೊಮ್ಮೆ ನಡೆಯುವ ಈರಣೇಶ್ವರ ಜಾತ್ರೆಯಲ್ಲಿ ಹೊರ ಜಿಲ್ಲೆಗಳಿಂದಲು ಸಾವಿರಾರು ಭಕ್ತರು ಬರುತ್ತಾರೆ, ಇಲ್ಲಿರುವ ಶ್ರೀ ವಿರಾಂಜನೇಯ ಸ್ವಾಮಿ ದೇವಾಲಯವು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದ್ದು, ಇಲ್ಲಿನ ವಿರಾಂಜನೇಯ ಸ್ವಾಮಿ ವಿಗ್ರಹವನ್ನು ವ್ಯಾಸ ಮಹರ್ಷಿಗಳು ಸ್ತಾಪಿಸಿದರೆಂದು ನಂಬಿಕೆಯಿದೆ ಮತ್ತು ಇಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿಗೆ ಏತನೀರಾವರಿ ಘಟಕವೊಂದನ್ನು ನಿರ್ಮಿಸಲಾಗಿದ್ದು ಇದು ಬಿಳಿಕೆರೆ ಕೆರೆಗೆ ನೀರನ್ನು ಒದಗಿಸುವ ಮಹತ್ತರ ಯೋಜನೆಯಾಗಿದೆ.
ಸಾರಿಗೆ ಸಂಪರ್ಕ[ಬದಲಾಯಿಸಿ]
ಹೊಸರಾಮನಹಳ್ಳಿಯು ರಾ.ಹೆ.೫೭ ರಲ್ಲಿದ್ದು ಇಲ್ಲಿಗೆ ಮೈಸೂರು, ಕೃಷ್ಣರಾಜನಗರ ಮತ್ತು ಹುಣಸೂರಿನಿಂದ ರಾಜ್ಯ ಸಾರಿಗೆ ಬಸ್ಸುಗಳ ಸೌಲಭ್ಯವಿದೆ. ಹತ್ತಿರದ ವಿಮಾನ ನಿಲ್ದಾಣ ಮೈಸೂರು ಹತ್ತಿರದ ರೈಲು ನಿಲ್ದಾಣ ಕೃಷ್ಣರಾಜನಗರ