ವಿಷಯಕ್ಕೆ ಹೋಗು

ಇಮ್ಮಡಿ ಪುಲಿಕೇಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಮ್ಮಡಿ ಪುಲಿಕೇಶಿ, ಚಾಲುಕ್ಯ ವಂಶದ ಪ್ರಸಿದ್ಧ ದೊರೆ.(ಕ್ರಿ.ಶ ೬೧೦-೬೪೨) ಇವನ ಕಾಲದಲ್ಲಿ ಬಾದಾಮಿ ಚಾಲುಕ್ಯರ ಸಾಮ್ರಾಜ್ಯವು ದಖನ್ ಪ್ರಸ್ಥಭೂಮಿಯ ಹೆಚ್ಚಿನ ಪ್ರದೇಶವನ್ನು ಆವರಿಸಿತು. ಬಾದಾಮಿಯ ಚಾಳುಕ್ಯರೆಂದು ಪ್ರಸಿದ್ಧರಾದ ಈ ವಂಶಜರು ಸುಮಾರು ೨೦೦ ವರ್ಷಗಳ ಕಾಲ ತಮ್ಮ ರಾಜ್ಯಭಾರವನ್ನು ಸ್ಥಾಪಿಸಿದ್ದರು."ಇವರು ಮೂಲತಃ ಬನವಾಸಿಯಿಂದ ಬಂದ ಕನ್ನಡದ ಜನಾಂಗದವರು.ಮುಂದೆ ಜೈನ ಸಂಪ್ರದಾಯ ಪಾಲಿಸಿದರು. [] ಕ್ರಿ.ಶ.ಸು. ೫3೦ರಲ್ಲಿ ಜಯಸಿಂಹನಿಂದ ಪ್ರಾರಂಭವಾದ ಚಾಲುಕ್ಯ ಮನೆತನದ ಆಡಳಿತವು ಕ್ರಿ.ಶ. ೭೫೭ರಲ್ಲಿ ಎರಡನೆಯ ಕೀರ್ತಿವರ್ಮನ ಕಾಲದಲ್ಲಿ ಮುಕ್ತಾಯವಾಯಿತು. ಕ್ರಿ.ಶ. ೭೫೭ರ ರಾಷ್ಟ್ರಕೂಟ 'ದಂತಿದುರ್ಗ'ನು ಚಾಲುಕ್ಯ ಅರಸ 'ಇಮ್ಮಡಿ ಕೀರ್ತಿವರ್ಮ'ನನ್ನು ಯುದ್ಧದಲ್ಲಿ ಸೋಲಿಸಿ ಪ್ರಾಚೀನ ಕರ್ನಾಟಕದ ರಾಜಕೀಯ ವಲಯದಲ್ಲಿ ಚಾಲುಕ್ಯರು ವಿರಮಿಸುವಂತೆ ಮಾಡಿದನು. ಸಾರ್ವಭೌಮರಾಗಿ ಮೆರೆದ ಬಾದಾಮಿ ಚಾಲುಕ್ಯರು ಕರ್ನಾಟಕದಲ್ಲಿ ಸ್ವತಂತ್ರವಾದ ವಿಶಾಲ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದರು. ಕರ್ನಾಟಕದ ಭೌಗೋಳಿಕ ಗಡಿಗಳನ್ನು ವಿಸ್ತರಿಸಿದ ಕನ್ನಡ ಅರಸರಲ್ಲಿ ಇವರ ಪಾತ್ರ ಮಹತ್ವದ್ದು. ತಮ್ಮ ಆಡಳಿತಾವಧಿಯುದ್ದಕ್ಕೂ ಕಂಚಿ ಪಲ್ಲವರ ಜೊತೆಗೆ ಹಗೆತನ ಸಾಧಿಸಿದ ಬಾದಾಮಿ ಚಾಲುಕ್ಯರು, ಕನ್ನಡದ ಶ್ರೇಷ್ಠ ದೊರೆ 'ಇಮ್ಮಡಿ ಪುಲಕೇಶಿ'(ನೌಕಾಪಡೆಯ ಪಿತಾಮಹ)ಯನ್ನು ಕಳೆದುಕೊಂಡು ಹದಿಮೂರು ವರ್ಷಗಳ ಪರಕೀಯ ಆಡಳಿತದ ಬಿಸಿಯನ್ನು ಸಹಿಸಿದರು. ಆದರೆ ಸೋಲಿನ ಕಹಿ ಅನುಭವವನ್ನು ಇಮ್ಮಡಿ ವಿಕ್ರಮಾದಿತ್ಯನು ಪಲ್ಲವರನ್ನು ಸೋಲಿಸುವುದರ ಮೂಲಕ, ಬಾದಾಮಿ ಚಾಲುಕ್ಯ ಸಾಮ್ರಾಜ್ಯವನ್ನು ಮರುಕಟ್ಟಿದ ಕೀರ್ತಿಗೆ ಪಾತ್ರನಾದನು. ಕರ್ನಾಟಕ ಇತಿಹಾಸದಲ್ಲಿ ನಡೆದು ಹೋದ ಈ ಸೋಲು ಗೆಲುವುಗಳು ದೇಶದ ಸಾಂಸ್ಕೃತಿಕ ಕೊಡು ಕೊಳ್ಳುವಿಕೆಯ ಮೇಲೆ ಅಗಾಧವಾದ

ಪರಿಣಾವುವನ್ನು ಬೀರಿದವು. ಮುಖ್ಯವಾಗಿ ಕಲಾ ಸಾಂಸ್ಕೃತಿಕ ಆಯಾಮಗಳು ಬದಲಾವಣೆ ಹೊಂದಿ ಆಚರಣೆಯಲ್ಲಿ ಬಂದವು.

ಆರಂಭಿಕ ಬದುಕು, ಮತ್ತು ಪಟ್ಟಕ್ಕೆ ಏರಿದ್ದು

[ಬದಲಾಯಿಸಿ]

ತನ್ನ ಪಟ್ಟಾಭಿಷೇಕವಾದ ಮೇಲೆ ಹೆಸರು ಪುಲಿಕೇಶಿ ಎಂದು ಹೆಸರು ಬದಲಾಯಿಸಿಕೊಂಡ ಎರೆಯನು ಚಾಲುಕ್ಯ ರಾಜ ಮೊದಲನೆಯ ಕೀರ್ತಿವರ್ಮನ ಮಗನು. ಕೀರ್ತಿವರ್ಮನು ಕ್ರಿ.ಶ ೫೯೭ ರಲ್ಲಿ ರಲ್ಲಿ ನಿಧನನಾದಾಗ ಎರಯನು ಚಿಕ್ಕ ಬಾಲಕ. ಕೀರ್ತಿವರ್ಮನ ಸೋದರ ಮಂಗಳೇಶನು ಎರಯನು ವಯಸ್ಕನಾಗುವವರೆಗೆ ರಾಜಪ್ರತಿನಿಧಿಯಾಗಿ ರಾಜ್ಯದ ಆಡಳಿತವನ್ನು ವಹಿಸಿಕೊಂಡನು. ಮಂಗಳೇಶನು ಸಮರ್ಥ ಆಡಳಿತಗಾರನಾಗಿದ್ದು ರಾಜ್ಯವನ್ನು ವಿಸ್ತರಿಸುವದನ್ನು ಮುಂದುವರೆಸಿದನು. ಎರೆಯನು ವಯಸ್ಸಿಗೆ ಬಂದಾಗ, ಬಹುಶಃ ಅಧಿಕಾರದ ಆಸೆಯು ಮಂಗಳೇಶನು ಚಾಲುಕ್ಯ ಸಿಂಹಾಸನವನ್ನು ರಾಜಕುಮಾರ ಎರೆಯನಿಗೆ ನಿರಾಕರಿಸಿದನು , ಮತ್ತು ತನ್ನ ಮಗನನ್ನು ಉತ್ತರಾಧಿಕಾರಿಯನ್ನಾಗಿ ಮಾಡಿ ತನ್ನ ವಂಶದ ಆಳ್ವಿಕೆಯನ್ನು ಶಾಶ್ವತವಾಗಿಸುವ ಪ್ರಯತ್ನ ಮಾಡಿದನು. ಎರೆಯನು, ಬನಾ ಪ್ರದೇಶ(ಕೋಲಾರ) ದಲ್ಲಿ ಆಶ್ರಯ ಪಡೆದು ತನ್ನ ಸಹಚರರ ಸಹಾಯದಿಂದ ಸೈನ್ಯವನ್ನು ಸಂಘಟಿಸಿ ಚಿಕ್ಕಪ್ಪನ ಮೇಲೆ ಯುದ್ಧ ಘೋಷಿಸಿದನು. Peddavadagur ಶಾಸನದ ಪ್ರಕಾರ, ಮಂಗಳೇಶನು Elapattu Simbige ನಲ್ಲಿ ನಡೆದ ಯುದ್ಧದಲ್ಲಿ ಪರಾಭವಗೊಂಡು ಸತ್ತನು. ಎರೆಯನು "ಇಮ್ಮಡಿ ಪುಲಿಕೇಶಿ" ಎಂದು ಚಾಲುಕ್ಯ ಸಿಂಹಾಸನವನ್ನೇರಿದನು ಹಾಗೂ "ಚಾಲುಕ್ಯಪರಮೇಶ್ವರ" ಎಂಬ ಬಿರುದನ್ನು ಧರಿಸಿದನು, ಪುಲಿಕೇಶಿಯು ಹೀಗೆ ಬಾದಾಮಿ, ಪಾಪನಾಥ, ದುರ್ಗಾ ಮತ್ತು ಲಾಡಖಾನ ಮುಂತಾದ ಅನೇಕ ದೇವಾಲಯಗಳನ್ನು ನಿರ್ಮಿಸಿದನು. ರಾಜ್ಯಾಭಿಷೇಕದ ಬಳಿಕ, ಪುಲಿಕೇಶಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಯುದ್ಧದ ನಂತರ ಹೊಸ ಸಾಹಸದ ಕೆಲಸಗಳನ್ನು ಮಾಡುವ ಪ್ರಯತ್ನ, ಚಾಲುಕ್ಯರಿಗೆ ಐಹೊಳೆಯ ಶಿಲಾಶಾಸನದಲ್ಲಿ ಕೆತ್ತಿರುವ ೬೩೪ ಶಿಲೆಯ ಪ್ರಕಾರ, ಹೇಳುವಂತೆ, ವಿಶ್ವದಲ್ಲೆಲ್ಲಾ ಶತ್ರುಗಳ ಅಂಧಕಾರ ಹರಡಿತ್ತು. ಪುಲಿಕೇಶಿಯು ಅಪ್ಪಾಯಿಕ ಮತ್ತು ಗೋವಿಂದ ಮೊದಲಾದವರ ಚುನೌತಿಯನ್ನು ಎದುರಿಸಬೇಕಾಯಿತು. ಅವರಲ್ಲಿ ಪ್ರಾಮಾಣಿಕರು ಮಂಗಳೇಶರನ್ನು ಸೋಲಿಸಿದ್ದರು. ಭೀಮಾನದಿಯ ತಟದಲ್ಲಿ ಪುಲಿಕೇಶಿ ಎದುರಾಳಿಗಳ ಸೈನ್ಯವನ್ನು ತಡೆದನು, ಅಪ್ಪಾಯಿಕ ರಣಭೂಮಿಯಿಂದ ಪಲಾಯನಮಾಡಿದನು. ಗೋವಿಂದನನ್ನು ಸೆರೆಹಿಡಿಯಲಾಯಿತು. ತನ್ನ ವಿಜಯವನ್ನು ಘೋಷಿಸಿ ಆಚರಿಸಲು ಇಮ್ಮಡಿ ಪುಲಿಕೇಶಿಯು ಒಂದು ವಿಜಯಸ್ಥಂಭವನ್ನು ಕಟ್ಟಿಸಿದನು.

ಪುಲಿಕೇಶಿಯ ದಿಗ್ವಿಜ[]

[ಬದಲಾಯಿಸಿ]

ಇಮ್ಮಡಿ ಪುಲಿಕೇಶಿ ತನ್ನ ಸಮಕಾಲೀನ ಚಕ್ರವರ್ತಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತ ಅರಸು. ಮಹಮ್ಮದೀಯರ ಆಕ್ರಮಣದ ವರೆಗೂ ಸ್ಥಾಪಿತವಾದ ಹಲವು ಪ್ರಬುದ್ಧ ಹಿಂದೂ ಸಾಮ್ರಾಜ್ಯಗಳಲ್ಲಿ ಚಾಲುಕ್ಯ ವಂಶವು ಗಣನೀಯವಾದದ್ದು. ಅಪ್ಪಾಯಿಕ ಮತ್ತು ಗೋವಿಂದನನ್ನು ಮೊದಲ್ಗೊಂಡು ಹರ್ಷ ಚಕ್ರವರ್ತಿಯನ್ನು ಗೆಲ್ಲುವುದರ ವರೆಗೂ ಪುಲಿಕೇಶಿಯ ದಿಗ್ವಿಜಯ ಪರಿಕ್ರಮಿಸಿತ್ತು.

ದಕ್ಖನ್ ನ ಪೂರ್ವ

[ಬದಲಾಯಿಸಿ]

ಪುಲಿಕೇಶಿ ಕೋಸಲ ರಾಜ್ಯದ ರಾಜ 'ಪಾಂಡುವಂಶಿ'ಯನ್ನು ಸೋಲಿಸಿದನು. ಮುಂದೆ ಕಳಿಂಗದ ಪೂರ್ವಭಾಗದ ಗಂಗರನ್ನು ಸೋಲಿಸಿ, 'ಪಿಸ್ಥಾಪುರ'ವೆಂಬ ಕೋಟೆಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡನು. (ಪೀಠಪುರಂ, ಈಗಿನ 'ಪೈಥಾನ್' ಎಂಬ ಊರು) 'ವಿಶ್ನುಕುಂಡಿನಿ' ಯರನ್ನು ಪರಾಜಿತರಾಗಿಸಿದ್ದಲ್ಲದೆ, 'ವೆಂಗಿ ವಲಯದ ಕುನಲ', ಎಂಬ ಪ್ರದೇಶವನ್ನೂ ವಶಪಡಿಸಿಕೊಂಡನು. ಅಲ್ಲಿ ತನ್ನ ಸೋದರ 'ಕುಬ್ಜ ವಿಷ್ಣುವರ್ಧನ'ನನ್ನು (ಬಿಟ್ಟರಸ) ಪೂರ್ವಪ್ರದೇಶಗಳ ರಾಯಭಾರಿಯಾಗಿ ನೇಮಿಸಿದನು. ಕೊನೆಯಲ್ಲಿ ವಿಷ್ಣುವರ್ಧನನು ಪೂರ್ವದ ಚಾಲುಕ್ಯರ ಸ್ಥಾಪಿಸಿದನು.

ಪಶ್ಚಿಮ ದಿಕ್ಕಿನ ವಿಜಯ

[ಬದಲಾಯಿಸಿ]

ಬನವಾಸಿಯಲ್ಲಿ ಕದಂಬರನ್ನು ಸೋಲಿಸಿ ಅವರನ್ನು ತನ್ನ ಅಧೀನರನ್ನಾಗಿ ಮಾಡಿದನು.ತಲಕಾಡಿನ ಗಂಗರು, ದಕ್ಷಿಣ ಕನ್ನಡದ ಅಲುಪಸ್, ಕೊಂಕಣದಲ್ಲಿ ಮೌರ್ಯರನ್ನು ಸೋಲಿಸಿದನು. ಪುರಿಯ ಕೋಟೆ (ನೂತನ ಎಲಿಫೆಂಟಾ ದ್ವೀಪ) ನೌಕಾ ಸಮರದ ಬಳಿಕ ಅಧೀನವಾಯಿತು. ಇದರ ಬಳಿಕ 'ಲಾತಾಸ್' ರನ್ನು, ಮಾಳ್ವದ ಗುರ್ಜರ್ ಗುರ್ಜರನ್ನು ವಶಪಡಿಸಿಕೊಳ್ಳಲಾಯಿತು. ಇತಿಹಾಸಕಾರರಾದ 'ಆರ್.ಸಿ.ಮಜುಮ್ದಾರ್,' ಮತ್ತು 'ಡಾ.ಸಿರ್ಕಾರ್,' ಮೇಲಿನ ವಿಜಯವನ್ನು ಪುಷ್ಟೀಕರಿಸಿದ್ದಾರೆ. ಪುಲಿಕೇಶಿಗೆ ಗಂಗರ ಅರಸ, 'ದೂರ್ವಿನಿತ', ತನ್ನ ಒಬ್ಬ ಮಗಳನ್ನು ಮದುವೆಮಾಡಿಕೊಟ್ಟನು. ಈಕೆಯೇ ಮುಂದೆ 'ಒಂದನೆಯ ವಿಕ್ರಮಾದಿತ್ಯನ ತಾಯಿ'ಯಾಗಿ ಪ್ರಸಿದ್ಧಳಾದಳು.

ದಕ್ಷಿಣದಿಕ್ಕಿನಲ್ಲಿ ರಾಜ್ಯಗಳ ಸ್ಥಾಪನೆ

[ಬದಲಾಯಿಸಿ]

ದಕ್ಷಿಣ ದಿಕ್ಕಿನಲ್ಲಿ ತನ್ನ ಅಭಿಯಾನವನ್ನು ಮುಂದುವರೆಸಿ, ಪಲ್ಲವರ ರಾಜ,'ಒಂದನೆಯ ಮಹೇಂದ್ರವರ್ಮ'ನನ್ನು ಪಲ್ಲವರ ರಾಜಧಾನಿಗೆ ೨೫ ಕಿ.ಮೀ ದೂರದಲ್ಲಿದ್ದ 'ಪುಲ್ಲಲೂರ್' ನಲ್ಲಿ ನಡೆದ ಯುದ್ಧದಲ್ಲಿ ಬಗ್ಗುಬಡಿದು ಪರಾಜಿತನಾಗಿಸಿದನು. 'ಮಹೇಂದ್ರವರ್ಮ'ನು ತನ್ನ ರಾಜಧಾನಿಯನ್ನು ಉಳಿಸಲು ಪ್ರಯತ್ನ ಪಟ್ಟಾಗ್ಯೂ ಉತ್ತರದ ಪ್ರಾಂತ್ಯವನ್ನು ಪುಲಿಕೇಶಿಗೆ ಸಮರ್ಪಿಸಬೇಕಾಯಿತು. ಚಾಲುಕ್ಯ ರಾಜನಿಗೆ ಪಶ್ಚಿಮದ ಗಂಗ ವಂಶದ'ದುರ್ವಿನಿತ'ನ ಸಹಾಯ ಒದಗಿತು. ದಕ್ಷಿಣ ದಿಕ್ಕಿನಲ್ಲಿ 'ಪಾಂಡ್ಯನ್ ಜಯಂತವರಾಮನ್ ರಾಜ', ಹೀಗೆ ಚಾಲುಕ್ಯರ ಸೈನ್ಯ, ಪಲ್ಲವರ ರಾಜಧಾನಿ 'ಕಂಚೀಪುರ'ಕ್ಕೆ ಮುತ್ತಿಗೆ ಹಾಕಿದರೂ ರಾಜ್ಯವನ್ನು ಅಪಹರಿಸಲಾಗದೆ ವಾಪಸ್ ಹಿಂದಿರುಗಬೇಕಾಯಿತು.

ಹರ್ಷನ ಜೊತೆಯಲ್ಲಿ ಕದನ

[ಬದಲಾಯಿಸಿ]

ಇಮ್ಮಡಿ ಪುಲಿಕೇಶಿ ನರ್ಮದಾ ನದಿಯ ಕಡೆಗೆ ತನ್ನ ರಾಜ್ಯವನ್ನು ನಡೆಸಿಕೊಂಡು ಹೋದನೋ, ಅಲ್ಲಿ 'ಕಾನೂಜಿನ ಹರ್ಷವರ್ಧನ'ನನ್ನು ಮುಖಾ-ಮುಖಿ ಸಂಧಿಸಿ ಹೋರಾಡಬೇಕಾಯಿತು. ಆತನಿಗೆ 'ಉತ್ತರ ಪಥೇಶ್ವರ'ನೆಂಬ ಬಿರುದು ಬಂದಿತ್ತು. (ಉತ್ತರದ ಒಡೆಯ) ನರ್ಮದಾ ನದಿಯ ತೀರದಲ್ಲಿ ಜರುಗಿದ ಬಹುದೊಡ್ಡ ಸಮರದಲ್ಲಿ ಹರ್ಷನು ತನ್ನ 'ಆನೆಯ ಸೈನ್ಯ'ದ ಬಹುಭಾಗವನ್ನು ಕಳೆದುಕೊಂಡು, ಕೊನೆಯಲ್ಲಿ ಸಂಧಿಮಾಡಿಕೊಳ್ಳಬೇಕಾಯಿತು. 'ಐಹೊಳೆ'ಯಲ್ಲಿ ಸಿಕ್ಕ 'ಶಿಲಾ ಶಾಸನ'ಗಳಲ್ಲಿ ದೊರೆತಿರುವ ಮಾಹಿತಿಯ ಪ್ರಕಾರ, ಹೇಗೆ 'ಮಹಾವೀರ ಹರ್ಷ'ನು ತನ್ನ ಸಂತೋಷವನ್ನು ಕಳೆದುಕೊಂಡನು ಎನ್ನುವುದನ್ನು ದಾಖಲಿಸಲಾಗಿದೆ. ಪುಲಿಕೇಶಿಯು ಹರ್ಷನ ಜೊತೆಗೆ ಸಂಧಿಯನ್ನು ಮಾಡಿಕೊಂಡನು. ಚಾಲುಕ್ಯ,ಹಾಗೂ ಹರ್ಷವರ್ಧನರ ಸಾಮ್ರಾಜ್ಯದ ನಡುವೆ 'ನರ್ಮದಾ ನದಿ', ಗಡಿಯಾಗಿ ಪರಿಗಣಿಸಲ್ಪಟ್ಟಿತ್ತು.

ಇಮ್ಮಡಿಪುಲಿಕೇಶಿ ಬಿರುದುಗಳು ದಕ್ಷಿಣಪಥೇಶ್ವರ ನೌಕಪಡೆಯ ಪಿತಾಮಹ ಪರಮೇಶ್ವರ

ಚಾಲುಕ್ಯರ ಕಾಲದ ನಾಣ್ಯಗಳು

[ಬದಲಾಯಿಸಿ]

ಚಾಲುಕ್ಯರ ಕಾಲದಲ್ಲಿ ಹಲವಾರು ಲೋಹದ ನಾಣ್ಯಗಳು ಚಲಾವಣೆಯಲಿದ್ದವು. ಈ ನಾಣ್ಯಗಳಲ್ಲಿ ವೃತ್ತಾಕಾರದ ದೊಡ್ಡ ನಾಣ್ಯಗಳ ಅಂಚಿನಲ್ಲಿ 'ರಂಧ್ರ'ಗಳಿವೆ. ನಾಣ್ಯದ ಮೇಲೆ ಹಲವು ಸಮಕಾಲೀನ ಚಿಹ್ನೆ ಮಧ್ಯಭಾಗದಲ್ಲಿ ವರಾಹರೂಪದ ಮುದ್ರೆವರಾಹ ಚಿಹ್ನೆ ಚಾಲುಕ್ಯ ಸಾಮ್ರಾಜ್ಯದ ಲಾಂಛನವಾಗಿತ್ತು. ದಕ್ಷಿಣ ಭಾರತದ ರಾಜರ ಆಳ್ವಿಕೆಯ ಬಗ್ಗೆ ಬರೆದ ಸಮಕಾಲೀನ ಸಾಹಿತ್ಯದಲ್ಲಿ ಸುವರ್ಣ ಮುದ್ರೆಗಳು ಬಗ್ಗೆ ದಾಖಲಾತಿಯಿದೆ. ಬಂಗಾರದ ವರಾಹಗಳೆಂಬ ಹೆಸರನ್ನು ಕಾಣಬಹುದು.

ಇಮ್ಮಡಿ ಪುಲಿಕೇಶಿಯ ಸಂತತಿ

[ಬದಲಾಯಿಸಿ]

ಇತಿಹಾಸ ತಜ್ಞರ ಪ್ರಕಾರ, ಶಾಸನ ದಾಖಲಾತಿಗಳಲ್ಲಿ ಕಂಡು ಬಂದಂತೆ ಇಮ್ಮಡಿ ಪುಲಿಕೇಶಿಗೆ ೫ ಮಕ್ಕಳಿದ್ದರು.

  • ಚಂದ್ರಾದಿತ್ಯ,
  • ಆದಿತ್ಯವರ್ಮ,
  • ವಿಕ್ರಮಾದಿತ್ಯ,
  • ಜಯಸಿಂಹ,
  • ಅಂಬರ

ಈ ಐವರ ಬಗ್ಗೆ ಇನ್ನು ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ. ಹಾಗೆಯೇ, ಗಂಗವಂಶದ ಅರಸು 'ದುರ್ವಿನೀತ', ತನ್ನ ಒಬ್ಬಳು ಮಗಳನ್ನು ಪುಲಿಕೇಶಿಗೆ ಕೊಟ್ಟು ವಿವಾಹಮಾಡಿದನು ಎಂದು ಕೆಲ ಶಾಸನಗಳಲ್ಲಿ ದಾಖಲಾಗಿದೆ. ಆಕೆಯ ಮಗನೇ 'ಒಂದನೆಯ ವಿಕ್ರಮಾದಿತ್ಯ' ಎಂದು ಇತಿಹಾಸ ತಜ್ಞರ ಅಭಿಪ್ರಾಯ. ಪುಲಿಕೇಶಿಯ ಮರಣಾನಂತರ ಮಕ್ಕಳು ಅಧಿಕಾರಕ್ಕಾಗಿ ಪರಸ್ಪರ ಹೊಡೆದಾಡಿ ರಾಜ್ಯವನ್ನು ಚಿಕ್ಕ ಚಿಕ್ಕ ಪ್ರಾಂತ್ಯಗಳಾಗಿ ವಿಂಗಡಿಸಿ ಆಡಳಿತ ಪ್ರಾರಂಭಿಸಿದರು. ಆದರೆ ಪುಲಿಕೇಶಿಯ ಮೂರನೆಯ ಮಗ, ಒಂದನೆಯ ವಿಕ್ರಮಾದಿತ್ಯ, ಸೋದರರ ಮೇಲೆ ಯುದ್ಧಮಾಡಿ ಸೋಲಿಸಿದ ಮೇಲೆ ಅವರನ್ನು ಮನ್ನಿಸಿ, ಸೋದರರನ್ನನ್ನೆಲ್ಲಾ ಒಂದುಗೂಡಿಸಿ ಕ್ರಿ.ಶ. ೬೪೨ರಲ್ಲಿ ರಾಜನೆಂದು ಘೋಷಿಸಿಕೊಂಡು, ಸಾಮ್ರಾಜ್ಯವನ್ನು ಪುನರ್ಸ್ಥಾಪಿಸಿದನು. ಆತನು ೧೩ ವರ್ಷದ ಆಡಳಿತದ ನಡೆಸಿದ ಬಳಿಕ ಕೊನಯಲ್ಲಿ ಪಲ್ಲವರನ್ನು ಬಾದಾಮಿಯಿಂದ ಹೊಡೆದೋಡಿಸಿದನು. ಅಂತಿಮವಾಗಿ, ವಂಶದ ಎರಡನೆಯ ವಿಕ್ರಮಾದಿತ್ಯ ಸಂಪೂರ್ಣವಾಗಿ ಪುನರ್ನಿರ್ಮಾಣಮಾಡಿ, ೨ ನೆಯ ಪುಲಿಕೇಶಿಯ ಕಾಲದ ಸಾಮ್ರಾಜ್ಯಕ್ಕೆ ಹೋಲುವ ಮೇರು ಸ್ಥಿತಿಗೆ ತಲುಪಿಸಿದನು.

ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ರಾಜನೈತಿಕ ಚಿತ್ರಣ

[ಬದಲಾಯಿಸಿ]

ಒಂದು ಮೂಲದ ಪ್ರಕಾರ, ಪರ್ಶಿಯ ದೇಶದ ರಾಜ 'ಎರಡನೆಯ ಖುಸ್ರು' ಇಮ್ಮಡಿ ಪುಲಿಕೇಶಿಯ ಆಸ್ಥಾನಿಕರ ಬಳಿ ರಾಯಭಾರವನ್ನು ನೇಮಿಸಿದರು. ಇದಕ್ಕೆ ಪೂರಕವಾಗಿ ಅಜಂತದ ಗುಹಾಂತರ್ದೇವಾಲಯದಲ್ಲಿರುವ ಭಿತ್ತಿ ಚಿತ್ರಗಳಲ್ಲಿ ಪರ್ಶಿಯನ್ ರಾಯಭಾರಿಗೆ ಚಾಲುಕ್ಯರು ಆದರಿಸಿದ ಆತಿಥ್ಯದ ಬಗ್ಗೆ ರಚಿಸಿದ ವರ್ಣ ಚಿತ್ರಗಳಿವೆ. 'ಹ್ಯುಯೆನ್ ತ್ಸಾಂಗ್' ಎಂಬ ಚೀನಿದೇಶದ ಯಾತ್ರಿಕನೊಬ್ಬ ೭ ನೆಶತಮಾನದಲ್ಲಿ ಭಾರತವನ್ನು ಸಂದರ್ಶಿಸಿದ್ದನು. ತನ್ನ ದಾಖಲಾತಿಯಲ್ಲಿ ಪುಲುಕೇಶಿಯ ಆಡಳಿತದ ಬಗ್ಗೆ ಸಾಮ್ರಾಜ್ಯದ ಬಗ್ಗೆ ಆಟ ಮೆಚ್ಚುಗೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ. ಪುಲಿಕೇಶಿ, ದಕ್ಷಿಣ ಭಾರತದ ಬಂಗಾರದ ನಾಣ್ಯಗಳನ್ನು ಚಲಾವಣೆಯಲ್ಲಿ ತಂದ ಮೊಟ್ಟಮೊದಲ ಚಕ್ರವರ್ತಿಯೆಂದು ಹೆಗ್ಗಳಿಕೆಗಳಿಸಿದ್ದಾನೆ.

ಇಮ್ಮಡಿ ಪುಲಿಕೇಶಿಯ ಅಂತ್ಯ

[ಬದಲಾಯಿಸಿ]

ಚಾಲುಕ್ಯ ರಾಜ, ಇಮ್ಮಡಿ ಪುಲಿಕೇಶಿ, ಬಾದಾಮಿಯಲ್ಲಿ 'ಮಹಾಮಲ್ಲ ಪಲ್ಲವನ'ಜೊತೆ ಹೋರಾಡುತ್ತಾ ಒಂದು ಯುದ್ಧದಲ್ಲಿ ಮರಣಿಸಿರಬಹುದು. ಇಲ್ಲವೇ ಒಂದನೆಯ 'ನರಸಿಂಹವರ್ಮ'ನಿಂದ ಪರಾಜಯಗೊಂಡು ವಿಧಿವಶನಾಗಿರಬಹುದು. ೧೩ ವರ್ಷ ಕಾಲದ ಚಾಲುಕ್ಯ ಸಾಮ್ರಾಜ್ಯದ ಅಧಿಪತ್ಯ ಹೀಗೆ ಕೊನೆಗೊಂಡಿತ್ತು. ವಿಜಯದ ಬಳಿಕ ನರಸಿಂಹವರ್ಮನು ಧನಸಂಪತ್ತನ್ನೂ ಮತ್ತು ಬಾದಾಮಿ ಅರಸರ ಪ್ರೀತಿಯ ವಾತಾಪಿ ಗಣಪತಿಯ ಮೂರ್ತಿಯನ್ನು ಕೊಂಡೊಯ್ದು, ತನ್ನ ನಾಡಿನಲ್ಲಿ ಸ್ಥಾಪಿಸಿದನು. ಹೀಗೆ ಬಾದಾಮಿ ಪಲ್ಲವರ ಕೈವಶವಾಯಿತು.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "ಬಾದಾಮಿ ಚಾಲುಕ್ಯರು : ಸಂಪಾದಕರ ಮಾತು". Archived from the original on 2015-10-18. Retrieved 2014-11-29.