ಹೊಸಕೋಟೆ

ವಿಕಿಪೀಡಿಯ ಇಂದ
Jump to navigation Jump to search
ಹೊಸಕೋಟೆ
India-locator-map-blank.svg
Red pog.svg
ಹೊಸಕೋಟೆ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬೆಂಗಳೂರು ಗ್ರಾಮಾಂತರ
ನಿರ್ದೇಶಾಂಕಗಳು 13.07° N 77.8° E
ವಿಸ್ತಾರ
 - ಎತ್ತರ
 km²
 - 875 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
36,333
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 562114
 - +91-80
 - 

ಹೊಸಕೋಟೆ -ಭಾರತರಾಜ್ಯ ಕರ್ನಾಟಕದಲ್ಲಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಟ್ಟಣಗಳಲ್ಲೊಂದು. ಅದಕ್ಕೆ ಈ ಹೆಸರು ಅಲ್ಲಿನ ಹೊಸದಾದ ಕೋಟೆಯ ಕಾರಣ ಬಂದಿದೆ. ಹಳೆಯ ಕೋಟೆಯಲ್ಲಿ ಅವಿಮುಕ್ತೇಶ್ವರ , ವರದರಾಜ ಮತ್ತು ವಿಠೋಬಾ ದೇವಸ್ಥಾನಗಳಿವೆ. ಅವಿಮುಕ್ತೇಶ್ವರವು ದ್ರಾವಿಡ ಶೈಲಿಯದಾಗಿದ್ದು ಅದನ್ನು ಸುಗತೂರಿನ ಪಾಳೇಗಾರ ತಮ್ಮೇಗೌಡನು ಕಟ್ಟಿಸಿದ್ದು ಎಂದು ಹೇಳುತ್ತಾರೆ. ಹೊಸಕೋಟೆಯಲ್ಲಿ ವೋಲ್ವೋ ವಾಹನ ತಯಾರಿಕಾಘಟಕವೂ ಇದೆ. ೧೯೪೬ರಲ್ಲಿ ಆರಂಭವಾದ ಹೊಸಕೋಟೆಯ ಮಾರ್ ಥೋಮಾ ಮಿಶನ್ ಸಂಸ್ಥೆಯು ಈ ಭಾಗದ ಅತ್ಯಂತ ಹಳೆಯ ಮಿಶನರಿ ಸಂಸ್ಥೆಗಳಲ್ಲೊಂದಾಗಿದೆ. ಈಗ ರೆವರೆಂಡ್ ಜೇಮ್ಸ್ ವೀರಮಾಲಾ ಅವರು ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಭೌಗೋಳಿಕ[ಬದಲಾಯಿಸಿ]

ಹೊಸಕೋಟೆಯು ೧೩.೦೭ ಉತ್ತರ ಅಕ್ಷಾಂಶ ಮತ್ತು ೭೭.೮ ಪೂರ್ವ ರೇಖಾಂಶ ( 13.07° N 77.8° E )ದಲ್ಲಿದೆ[೧]. ಅದರ ಸರಾಸರಿ ಎತ್ತರವು ಸಮುದ್ರಮಟ್ಟದಿಂದ ೮೭೫  ಮೀಟರ್ಗಳು ಅಥವಾ ೨೮೭೦  ಅಡಿಗಳು.

ಸಂಪರ್ಕ[ಬದಲಾಯಿಸಿ]

ಹೊಸಕೋಟೆಯು ಎನ್‌ಹೆಚ್ ೪ ರಲ್ಲಿ ಇದ್ದು ಬೆಂಗಳೂರು ನಗರದಿಂದ ಸುಮಾರು ೨೭ ಕಿ.ಮೀ. ದೂರದಲ್ಲಿದ್ದು , ಅಲ್ಲಿಗೆ ಬೆಂಗಳೂರಿನಿಂದ ಬಿ.ಎಂ.ಟಿ.ಸಿ ಮತ್ತು ಕ.ರಾ.ರ.ಸಾ.ಸಂ ಗಳ ಬಹಳಷ್ಟು ಬಸ್ಸುಗಳ ಸೌಲಭ್ಯ ಇದೆ. ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ ನಿಲ್ದಾಣಗಳು ಹತ್ತಿರದ ರೇಲ್ವೆ ನಿಲ್ದಾಣಗಳು.

ಜನಸಂಖ್ಯಾ ಮಾಹಿತಿ[ಬದಲಾಯಿಸಿ]

೨೦೦೧ರ ಭಾರತೀಯ ಜನಗಣತಿGRIndiaಯ ಪ್ರಕಾರ , ಹೊಸಕೋಟೆಯ ಜನಸಂಖ್ಯೆ ೩೬,೩೩೩ ಇತ್ತು . ಗಂಡಸರು ಜನಸಂಖ್ಯೆಯ ೫೨% ರಷ್ಟೂ ಹೆಂಗಸರು ೪೮% ರಷ್ಟೂ ಇದ್ದರು. ಹೊಸಕೋಟೆಯ ಸರಾಸರಿ ಸಾಕ್ಷರತೆ ೭೦% ಇದ್ದು ಇದು ದೇಶದ ಸರಾಸರಿಯಾದ ೫೯.೫% ಕ್ಕಿಂದ ಹೆಚ್ಚಾಗಿದೆ. ಗಂಡಸರ ಸಾಕ್ಷರತೆ ೭೪% ಮತ್ತು ಹೆಂಗಸರದು ೬೫%. ಹೊಸಕೋಟೆಯ ಜನಸಂಖ್ಯೆಯ ೧೨% ಭಾಗವು ೬ ವರ್ಷಕ್ಕಿಂತ ಕಡಿಮೆಯವರದು.

ಶಿಕ್ಷಣ ಸಂಸ್ಥೆಗಳು[ಬದಲಾಯಿಸಿ]

ಅನೇಕ ಖಾಸಗಿ ಮತ್ತು ಸರಕಾರೀ ಶಿಕ್ಷಣ ಸಂಸ್ಥೆಗಳು ಹೊಸಕೋಟೆಯಲ್ಲಿ ಇವೆ. ಇಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಸಂಸ್ಥೆ (CREST) ಮತ್ತು ಭಾರತೀಯ ಖಭೌತಶಾಸ್ತ್ರ ಸಂಸ್ಥೆಗಳೂ ಇವೆ.

  • ಚ್, Hoskote
 • Primary Schools (KG-7)
  • Government Primary School,Kolathur
  • Government Girls midle School
  • Bright School
  • Citizen
  • Fathima
  • Sri Vivekananda Vidya Kendra
  • Government Primary School
  • Om Shree Public school
  • Government Primary School Doddagattiganabbe
  • Government High School Doddagattiganabbe

ಪ್ರಮುಖ ವ್ಯಕ್ತಿಗಳು[ಬದಲಾಯಿಸಿ]

ಸಾಹಿತ್ಯ[ಬದಲಾಯಿಸಿ]

ಬ್ಯಾಂಕುಗಳು[ಬದಲಾಯಿಸಿ]


ಉಲ್ಲೇಖಗಳು[ಬದಲಾಯಿಸಿ]

 1. Falling Rain Genomics, Inc - Hoskote
"https://kn.wikipedia.org/w/index.php?title=ಹೊಸಕೋಟೆ&oldid=323300" ಇಂದ ಪಡೆಯಲ್ಪಟ್ಟಿದೆ