ವಿವೇಕಾನಂದ ಪ್ರೌಢಶಾಲೆ ಸೂಲಿಬೆಲೆ

ವಿಕಿಪೀಡಿಯ ಇಂದ
Jump to navigation Jump to searchಸೂಲಿಬೆಲೆಯ ವಿವೇಕಾನಂದ ಪ್ರೌಢಶಾಲೆಯು ಬೆಂಗಳೂರು ಗ್ರಾಮಾತರ ಜಿಲ್ಲೆಯಲ್ಲಿಯೆ ಅತ್ಯಂತ ಹಳೆಯದಾದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ. ಸೂಲಿಬೆಲೆಯಲ್ಲಿದ್ದ ಒಂದು ಹಾಳು ಛತ್ರವನ್ನು ತಕ್ಕಮಟ್ಟಿಗೆ ದುರಸ್ಥಿಗೊಳಿಸಿ ಅಲ್ಲಿ ಕೇವಲ ೧೬ ಮಕ್ಕಳು,೩ ಜನ ಶಿಕ್ಷಕರು ಹಾಗೂ ಒಬ್ಬರು ಮುಖ್ಯೋಪಾಧ್ಯಾಯರಿಂದ ೧೯೫೭ರಲ್ಲಿ ಆರಂಭಗೊಂಡಿತು. ಶ್ರೀ ಜಡಿಗೇನಹಳ್ಳಿ ವೆಂಕಟರಾಮಯ್ಯನವರು ಸಂಸ್ಥಾಪಕ ಮುಖ್ಯೋಪಾಧ್ಯಾಯರಾಗಿ ಈ ಸಂಸ್ಥೆಯು ಸರ್ವತೋಮುಖ ಅಭಿವೃದ್ಧಿ ಹೊಂದಲು ಶ್ರಮಿಸಿದರು. . ಶ್ರೀ ಸೂ.ರಂ ರಾಮಯ್ಯನವರು( ಅಂದಿನ ವಿಧಾನಸಭೆಯ ಸದಸ್ಯರು ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು) ಅಧ್ಯಕ್ಷರಾಗಿ, ದಿ.ಶಾನುಬೋಗ ಭಾಸ್ಕರಯ್ಯನವರು ಉಪಾಧ್ಯಕ್ಷರಾಗಿ, ಶ್ರೀ. ಶಾಮರಾಯರು ಕಾರ್ಯದರ್ಶಿಯಾಗಿ, ದಿ.ಪಿ. ಚನ್ನ ಕೃಷ್ಣಪ್ಪನವರು ಖಜಾಂಚಿಯಾಗಿ ಹೊಂದಿದ್ದ ''ವಿವೇಕಾನಂದ ವಿದ್ಯಾಭಿವೃದ್ಧಿ ಸಂಘ ಎಂಬ ಹೆಸರಿನ ಸಂಸ್ಥೆಯು ಈ ಶಾಲೆ ಯನ್ನು ಆರಂಭಿಸಿತು.